ಚಿತ್ರ: ದಿ****
ನಿರ್ದೇಶನ: ವಿನಯ್ ವಾಸುದೇವ್
ನಿರ್ಮಾಣ: ವಿಡಿಕೆ ಗ್ರೂಪ್ಸ್
ತಾರಾಗಣ: ವಿನಯ್, ದಿಶಾ, ನಾಗೇಂದ್ರ ಅರಸು, ಹರಿಣಿ ಮುಂತಾದವರು
ಕಾಡಿನೊಳಗೊಂದು ಕುತೂಹಲದ ಸಾಹಸಗಳು
ಮನುಷ್ಯ ಮತ್ತು ಕಾಡಿನ ನಂಟು ಬಹಳ ದೊಡ್ಡದು. ಅದನ್ನೆ ‘ದಿ’ ಚಿತ್ರದಲ್ಲಿ ತೋರಿಸಿದ್ದಾರೆ. ಫಾರೆಸ್ಟ್ ಆಫೀಸರ್ ನಾರಾಯಣ್‌ಗೆ ಕಾಡಿನಲ್ಲಿ ಮಗು ಸಿಗುತ್ತದೆ. ಇದನ್ನೆ ತನ್ನ ಮಗು ಅಂದುಕೊಂಡು ಬೆಳೆಸುತ್ತಾರೆ. ದೊಡ್ಡವನಾದ ದೀಪಕ್ ಅಪ್ಪನ ವಿರೋಧದ ನಡೆವೆಯೂ ಅನಾಥ ದಿವ್ಯಾಳನ್ನು ಮದುವೆಯಾಗುತ್ತಾನೆ. ಅವನು ವನ್ಯ ಪ್ರಾಣಿಗಳನ್ನು ಇಷ್ಟಪಡುವುದರಿಂದ ಹಾಗೂ ಪ್ರಕೃತಿಯ ಸೊಬಗನ್ನು ತುಂಬಿಕೊಳ್ಳುವ ಸಲುವಾಗಿ ಚಾರಣಕ್ಕೆ ತೆರೆಳಿದಾಗ ಇಬ್ಬರ ಡಾಲರ್ ಕಾಣೆಯಾಗುತ್ತದೆ.
ಅದನ್ನು ಹುಡುಕಲು ತಂಡವೊಂದು ಸಿದ್ದವಾಗುತ್ತದೆ. ಡಾಲರ್‌ದಲ್ಲಿ ಏನಿದೆ? ಕೊನೆಗೆ ಇವರಿಗೆ ಅದು ಸಿಗುತ್ತದಾ? ಅಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ? ಎನ್ನುವಂತಹ ಸನ್ನಿವೇಶಗಳನ್ನು ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ.
ವಿನಯ್ ವಾಸುದೇವೆ ನಿರ್ದೇಶನ ಮತ್ತು ನಾಯಕನಾಗಿ ಎರಡು ಜವಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹಿರಿಯ ನಟ ಮಂಡ್ಯ ರಮೇಶ್ ಪುತ್ರಿ ದಿಶಾರಮೇಶ್ ಚೆನ್ನಾಗಿ ನಟಿಸಿದ್ದಾರೆ. ಅಪ್ಪನಾಗಿ ಬಲರಾಜವಾಡಿ, ಅಮ್ಮನಾಗಿ ಹರಿಣಿ ಶ್ರೀಕಾಂತ್ ಉಳಿದಂತೆ ನಾಗೇಂದ್ರಅರಸು ಮುಂತಾದವರು ಬಣ್ಣ ಹಚ್ಚಿದ್ದಾರೆ. ಗ್ರಾಫಿಕ್ಸ್ ಅಲ್ಲಲ್ಲಿ ಕೆಲಸ ಮಾಡಿದೆ ಎನ್ನಬಹುದು. ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡರೆ ನಿಮಗೆ ಖಂಡಿತ ಮೋಸ ಮಾಡುವುದಿಲ್ಲ.
****