ಮನದ ಕಡಲು ಪ್ರೇಮದ ದೃಶ್ಯ ಕಾವ್ಯ
ಚಿತ್ರ: ಮನದ ಕಡಲು
ನಿರ್ದೇಶನ: ಯೋಗರಾಜ್ಭಟ್
ನಿರ್ಮಾಣ: ಇ.ಕೃಷ್ಣಪ್ಪ
ತಾರಾಗಣ: ಸುಮುಖ, ಅಂಜಲಿಅನೀಶ್, ರಾಶಿಕಾಶೆಟ್ಟಿ, ರಂಗಾಯಣರಘು, ದತ್ತಣ್ಣ ಮತ್ತಿತ್ತರರು
‘ಮುಂಗಾರು ಮಳೆ’ಯಲ್ಲಿ ಕಾಡುವ ಪ್ರೀತಿ ತೋರಿಸಿದ್ದ ನಿರ್ದೇಶಕ ಯೋಗರಾಜ್‌ಭಟ್ಟರು ಇದೀಗ ‘ಮನದ ಕಡಲು’ ತ್ರಿಕೋನ ಪ್ರೇಮಕಥೆಯಲ್ಲಿ, ವೈದ್ಯನೊಬ್ಬನ ಜೀವನದ ಮಜಲುಗಳನ್ನು ತೋರಿಸಿದ್ದಾರೆ. ಓದಿಗೆ ತಿಲಾಂಜಲಿ ಇಟ್ಟು ಬದುಕನ್ನು ಎಂಜಾಯ್ ಮಾಡುವ ಸುಮುಖ, ಕ್ರಿಕೆಟರ್ ರಾಶಿಕಾ ಬಳಿ ಲವ್ ಮಾಡಿಕೊಳ್ಳುತ್ತಾನೆ. ಅವಳು ಐದು ತಿಂಗಳು ಸಮಯ ಬೇಕು ಎನ್ನುತ್ತಾಳೆ. ನಂತರ ಅದೇ ಜಾಗಕ್ಕೆ ಬಂದಾಗ ಆಕೆ ಕಾಣಿಯಾಗಿರುತ್ತಾಳೆ. ಗೆಳತಿ ಅಂಜಲಿ ಜತೆ ಬೇರೆ ದೂರಿನಲ್ಲಿದ್ದಾಳೆಂದು ತಿಳಿದು ಅಲ್ಲಿಗೆ ಹೊರಡುತ್ತಾನೆ. ಒಂದು ಹಂತದಲ್ಲಿ ರಾಶಿಕಾ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುತ್ತದೆ. ಸುಮುಖ ತಂದುಕೊಟ್ಟ ಔಷದಯುಕ್ತ ಗಿಡದಿಂದ ಗುಣಮುಖಳಾಗುತ್ತಾಳೆ. ಇನ್ನೊಂದು ಕಡೆ ಅಂಜಲಿ ಪ್ರೀತಿಸ ತೊಡಗುತ್ತಾಳೆ. ಕೊನೆಗೆ ಯಾರ ಮಡಿಲಿಗೆ ಬೀಳುತ್ತಾನೆ ಎಂಬುದನ್ನು ನವಿರಾಗಿ ತೋರಿಸಲಾಗಿದೆ.
ನಾಯಕನಾಗಿ ಸುಮುಖ ಎರಡನೇ ಅವಕಾಶದಲ್ಲಿ ಗುರುತಿಸಿಕೊಂಡಿದ್ದಾರೆ. ನಾಯಕಿಯರಾದ ಅಂಜಲಿಅನೀಶ್, ರಾಶಿಕಾಶೆಟ್ಟಿ ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಆದಿವಾಸಿಗಳ ತಂಡದ ಯಜಮಾನನಾಗಿ ಟಕಾರಿ ಹೆಸರಿನಲ್ಲಿ ರಂಗಾಯಣರಘು, ದತ್ತಣ್ಣಾ ಡೈಲಾಗ್ ಹೈಲೈಟ್ ಆಗಿದೆ. ಉಳಿದಂತೆ ಶಿವಧ್ವಜ್, ನೇತ್ರಾ ಮುಂತಾದವರು ಅಭಿನಯಿಸಿದ್ದಾರೆ. ಜಯಂತ್‌ಕಾಯ್ಕಣಿ ಸಾಹಿತ್ಯದ ಗೀತೆಗಳಿಗೆ ಹರಿಕೃಷ್ಣ ಸಂಗೀತ ಪ್ಲಸ್ ಪಾಯಿಂಟ್, ಅಲ್ಲದೆ ಸಂತೋಷ್ ರೈ ಪಾತಾಜೆ ಕ್ಯಾಮಾರ ಕೆಲಸ ಇದಕ್ಕೆ ಪೂರಕವಾಗಿದೆ. ಸಾವಿಗಿಂತ ಜೀವನ ಸುಂದರ ಎಂಬುದನ್ನು ಅರ್ಥ ಮಾಡಿಸಿದ್ದಾರೆ.
****