ಸಸ್ಪೆನ್ಸ್ ಥ್ರಿಲ್ಲರ್ ಕಥನ ಬ್ಯಾಡ್
ಚಿತ್ರ: ಬ್ಯಾಡ್
ನಿರ್ದೇಶನ: ಪಿ.ಸಿ.ಶೇಖರ್
ನಿರ್ಮಾಣ: ವೆಂಕಟೇಶ್ಗೌಡ
ತಾರಾಗಣ: ನಕುಲ್ಗೌಡ, ಮಾನ್ವಿತಾಕಾಮರ್, ಅಪೂರ್ವಭಾರದ್ವಾಜ್, ಕಡ್ಡಿಪುಡಿ ಚಂದ್ರು, ಸಾಯಿಕೃಷ್ಣ ಮುಂತಾದವರು
ಆತ ಒಬ್ಬ ರೈತ. ಪಾರ್ಟ್ ಟೈಮ್ ಮೆಕ್ಯಾನಿಕ್ ಅಲ್ಲದೆ ಫುಲ್ ಟೈಮ್ ರೌಡಿ. ಈ ಹಾದಿಗೆ ಹೋಗಲು ಕಾರಣವಿದೆ. ಪ್ರೀತಿಸಿದವಳನ್ನು ಕಳೆದುಕೊಂಡ ಬಳಿಕ ಅದಕ್ಕೆ ಕಾರಣರಾದವರನ್ನು ಸದೆಬಡಿಯಲು ಯೋಜನೆ ಹಾಕಿಕೊಳ್ಳುತ್ತಾನೆ. ಹೀಗೆ ಗನ್ ಮತ್ತು ಬುದ್ದಿವಂತಿಕೆಯಿಂದ ಎಲ್ಲರನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ‘ಬ್ಯಾಡ್’ ಸಿನಿಮಾದ ಸಾರಾಂಶ.
ಒಬ್ಬ ಹಣಬಾಕ, ಮತ್ತೋಬ್ಬನಿಗೆ ಅನೈತಿಕ ಸಂಬಂಧದ ಆಸೆ, ಇನ್ನೊಬ್ಬರಿಗೆ ಪವರ್ ಬೇಕೆಂಬ ಹಪಿ, ಇಬ್ಬರು ಹುಡುಗಿಯರ ಪೈಕಿ ಒಬ್ಬಳು ಗೋಮುಖ ವ್ಯಾಘ್ರ, ಇನ್ನೊಬ್ಬಳು ಗೋಸುಂಬೆಯನ್ನು ಮೀರಿಸುವಂತ ಗುಣದವಳು. ಇವರೆಲ್ಲರನ್ನು ಮೀರಿಸಿ ಮೈಂಡ್ ಗೇಮ್ ಆಡಿಸುವ ರಾವಣನು ಇರುತ್ತಾನೆ. ಕೊನೆಗೆ ತನ್ನ ಗುರಿ ತಲುಪಲು ಬೇರೆಯವರ ಮೇಲೆ ಕೂರುವ ಮಧ್ಯೆ ಒಬ್ಬ ಪ್ರೇಮಿಯ ಕಥೆ-ವ್ಯಥೆ, ಪ್ರತಿಕಾರದ ಅಂಶಗಳು ಸೇರಿಕೊಂಡಿದೆ.
ನಿರ್ದೇಶಕ ಪಿ.ಸಿ.ಶೇಖರ್ ಪ್ರತಿ ದೃಶ್ಯಗಳನ್ನು ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಿರುವುದರಿಂದ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ. ನಾಯಕ ನಕುಲ್‌ಗೌಡ ಹಿಂದಿನ ಸಿನಿಮಾಗಿಂತ ಸುಧಾರಿಸಿದ್ದಾರೆ. ಹಳ್ಳಿ ಹುಡುಗಿಯಾಗಿ ಮಾನ್ವಿತಾಹರೀಶ್, ಮಾದಕ ವ್ಯಸನಿಯಾಗಿ ಅಪೂರ್ವಭಾರದ್ವಾಜ್ ಮೂರು ಪಾತ್ರಗಳು ಆಕರ್ಷಣೆಯಾಗಿದೆ. ಅರ್ಜುನ್‌ಜನ್ಯಾ ಸಂಗೀತದಲ್ಲಿ ಒಂದು ಹಾಡು ಕೇಳಬಲ್. ಗ್ರಿಪ್ಪಿಂಗ್ ಆಕ್ಷನ್ ಪ್ರಿಯರಿಗೆ ಸಿನಿಮಾವು ಹೇಳಿ ಮಾಡಿಸಿದಂತಿದೆ. ಬೇರೆಯವರಿಗೂ ಪೈಸಾ ವಸೂಲ್ ಚಿತ್ರ ಎನ್ನಬಹುದು.
****