ಮನುಷ್ಯ ಸಂಬಂಧಗಳ ಮೌಲ್ಯಗಳನ್ನು ಸಾರುವ ಚಿತ್ರ
ಚಿತ್ರ: ನಿಂಬಿಯಾ ಬನಾದ ಮ್ಯಾಗ
ನಿರ್ದೇಶನ: ಅಶೋಕ್ಕಡಬ
ನಿರ್ಮಾಪಕ: ವಿ.ಮಾದೇಶ್
ತಾರಾಂಗಣ : ಸುನಾದ್ ರಾಜ್, ಸಂಗೀತ ಅನಿಲ್, ಸಂದೀಪ್ ಮಲಾನಿ, ಷಣ್ಮುಖ ಗೋವಿಂದ ರಾಜ್, ತನುಶ್ರೀ, ತೃಷಾ, ಮೂಗ್ ಸುರೇಶ್
‘ನಿಂಬಿಯಾ ಬನಾದ ಮ್ಯಾಗ’ ಚಿತ್ರವು ಎರಡು ಫ್ಯಾಮಿಲಿ ಡ್ರಾಮ ಕಥೆಯನ್ನು ಹೊಂದಿದೆ. ಮಲೆನಾಡ ಭಾಗದ ಬೆಂಗಾಡಿ ಎಂಬ ಊರಿನ ಬೈಲ್ ದೊಡ್ಡ ಮನೆಯಲ್ಲಿ ನಾಲ್ಕು ವರ್ಷದ ಮಗು ಅಚ್ಚು ಕಾಣೆಯಾಗುತ್ತದೆ. ತಾಯಿ ಇಂದಲ್ಲ ನಾಳೆ ಮಗು ಹಿಂದಿರುಗುತ್ತದೆ ಎಂಬ ನಂಬಿಕೆಯಲ್ಲೇ ಇರುತ್ತಾಳೆ. ಕಾಲ ಕಳೆದಂತೆ ಮನೆಯಲ್ಲಿ ಸಂತೋಷದ ವಾತಾವರಣ. ಅದಕ್ಕೆ ಕಾರಣ ಕಳೆದು ಹೋದ ಅಚ್ಚಣ್ಣ ಬಂದಿದ್ದಾನೆ.
ಅಷ್ಟಕ್ಕೂ ಆತ ಸಾಕಷ್ಟು ಗ್ಯಾಪ್ ನಂತರ ಬರುವ ಉದ್ದೇಶವೇನು? ಮುಂದೆ ಏನಾಗುತ್ತದೆ ಎಂಬುದನ್ನು ಭಾಗ-೧ರಲ್ಲಿ ನವಿರಾಗಿ ತೋರಿಸಲಾಗಿದೆ. ಭಾಗ-೨ ಬರಲಿದೆ ಎಂಬುದನ್ನು ಕ್ಲೈಮಾಕ್ಸ್‌ದಲ್ಲಿ ಹೇಳುವುದರೊಂದಿಗೆ ಕುತೂಹಲ ಕಾಯ್ದಿರಿಸಿದ್ದಾರೆ.
ಡಾ.ರಾಜ್‌ಕುಮಾರ್ ಮೊಮ್ಮಗ ಷಣ್ಮುಗ ನಾಯಕನಾಗಿ ಪ್ರವೇಶ ಮಾಡಿದ್ದಾರೆ. ತನುಶ್ರೀ ನಾಯಕಿ. ಇಬ್ಬರೂ ಛಾಲೆಂಜ್‌ಗೆ ಬಿದ್ದವರಂತೆ ಚೆನ್ನಾಗಿ ನಟಿಸಿದ್ದಾರೆ. ‘ಮೇಘಮಾಲೆ’ದಲ್ಲಿ ನಾಯಕನಾಗಿ ಅಭಿನಯಿಸಿದ್ದ ಸುನಾದ್‌ರಾಜ್ ೨೫ ವರ್ಷ ತರುವಾಯ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಸಂದೀಪ್ ಮಲಾನಿಯವರ ಲವಲವಿಕೆ ಪಾತ್ರ ಜನರಿಗೆ ಅಂತ್ಯಂತ ಸುಂದರವಾಗಿ ಮೆಚ್ಚುಗಿಗೆ ಪಾತ್ರವಾಗಿದೆ.
ಆರೋನ್ ಕಾರ್ತಿಕ್ ಸಂಗೀತದಲ್ಲಿ ನಾಲ್ಕು ಹಾಡುಗಳು ಕೇಳಬಲ್. ಪಳನಿ.ಡಿ.ಸೇನಾಪತಿ ಹಿನ್ನಲೆ ಶಬ್ದ ಕೆಲಸ ಮಾಡಿದೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಇದಕ್ಕೆ ಪೂರಕವಾಗಿದೆ. ಒಟ್ಟಾರೆ ಕಾಸಿಗೆ ಮೋಸ ಮಾಡದೆ ನೋಡುಗರನ್ನು ಮನರಂಜಿಸುವಲ್ಲಿ ಚಿತ್ರವು ಸಪಲವಾಗಿದೆ.
****