ಚಿತ್ರ: ಟಿಕಿಲಾ****
ನಿರ್ದೇಶಕ: ಪ್ರವೀಣ್ನಾಯಕ್
ನಿರ್ಮಾಪಕ: ಮರಡಹಳ್ಳಿ ನಾಗಚಂದ್ರ
ತಾರಾಗಣ: ಧರ್ಮಕೀರ್ತಿರಾಜ್,ನಿಖಿತಾಸ್ವಾಮಿ,ಸುಷ್ಮಿತಾ,ಸುಮನ್ಶರ್ಮ,
ನಾಗೇಂದ್ರಅರಸ್ ಮುಂತಾದವರು
ಕಿಕ್ಕು ಅಂತ ಹೋದರೆ ಲಕ್ಕು ದಕ್ಕೋದಿಲ್ಲ
ಗಂಡ ಹೆಂಡತಿ ಮಧ್ಯೆ ಎಲ್ಲವು ಚೆನ್ನಾಗಿದ್ದರೆ, ಅದನ್ನು ಸುಂದರ ಸಂಸಾರ ಎನ್ನುತ್ತಾರೆ. ಕೆಲವೊಮ್ಮೆ ಇಬ್ಬರ ನಡುವೆ ಭಿನ್ನಾಭಿಪ್ರ್ರಾಯ ಬಂದಾಗ ಬದುಕು ದಿಕ್ಕು ತಪ್ಪಿದಂತೆ ಆಗುತ್ತದೆ. ಇದನ್ನೆ ‘ಟಕಿಲಾ’ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಶ್ರೀಮಂತ ಉದ್ಯಮಿಯೊಬ್ಬ ತನ್ನ ಸಾಮ್ರಾಜ್ಯವನ್ನು ಯಾರೇ ಮುಟ್ಟಲು, ಅಥವಾ ತನಗೆ ಮೋಸ ಮಾಡಲು ಬಂದವರನ್ನು ಸುಮ್ಮನೆ ಬಿಡುವುದಿಲ್ಲ. ಇತ್ತ ಪಕ್ಕದ ಮನೆ ಕಾಮುಕನೊಬ್ಬ ಆತನ ಪತ್ನಿಗೆ ನಶೆಯ ಹೆಸರಿನಲ್ಲಿ ದೈಹಿಕ ಸುಖ ನೀಡಿ ಆಸ್ತಿಯ ವ್ಯಾಮೋಹಕ್ಕಾಗಿ ಗಂಡನನ್ನೇ ಮರ್ಡರ್ ಮಾಡಿಸೋ ಪ್ಲಾನ್ ಮಾಡುತ್ತಾನೆ. ಅಷ್ಟಕ್ಕೂ ಆಕೆಯ ಸಂಸಾರದಲ್ಲಿ ಬಿರುಕು ಮೂಡಲು ಕಾರಣವೇನು? ನೆಮ್ಮದಿ ಪಡೆಯಲು ಯಾವ ಮಾರ್ಗ ಹಿಡಿಯುತ್ತಾಳೆ. ಇವೆಲ್ಲಕ್ಕೂ ಚಿತ್ರಮಂದಿರಕ್ಕೆ ಬಂದರೆ ಉತ್ತರ ಸಿಗುತ್ತದೆ.
ಗ್ಯಾಪ್ ನಂತರ ಪ್ರವೀಣ್‌ನಾಯಕ್ ಒಳ್ಳೆಯ ಕಥೆಯನ್ನು ಆಯ್ದುಕೊಂಡು ಅದಕ್ಕೆ ನ್ಯಾಯ ಒದಗಿಸುವಲ್ಲಿ ಸಪಲರಾಗಿದ್ದಾರೆ. ಚಾಕಲೋಟ್ ಬಾಯ್ ಅಂತ ಕರೆಸಿಕೊಂಡಿದ್ದ ನಾಯಕ ಧರ್ಮಕೀರ್ತಿರಾಜ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿ ನಿಖಿತಾಸ್ವಾಮಿ ಅಭಿನಯಕ್ಕಿಂತ ನೋಡುಗರಿಗೆ ಹೆಚ್ಚು ಕಣ್ಣಿಗೆ ತಂಪು ಕೊಟ್ಟಿದ್ದಾರೆ. ಉಳಿದಂತೆ ನಾಗೇಂದ್ರಅರಸ್, ಸುಮನ್, ಕೋಟೆಪ್ರಭಾಕರ್, ಸುಷ್ಮಿತಾ ಮುಂತಾದವರು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತದಲ್ಲಿ ಎರಡು ಹಾಡುಗಳು, ಅದರಲ್ಲೂ ಶರಣ್ ಕಂಠದಾನದ ಟೈಟಲ್ ಸಾಂಗ್ ಈಗಿನ ಟ್ರೆಂಡ್‌ಗೆ ತಕ್ಕಂತೆ ಇದೆ.
****