Tayavva.Reviews

Friday, May 30, 2025

33

ಚಿತ್ರ: ತಾಯವ್ವ

ನಿರ್ಮಾಣ: ಗೀತಪ್ರಿಯ

ನಿರ್ದೇಶನ: ಸಾತ್ವಿಕ್ ಪವನ್ಕುಮಾರ್

ಸಂಗೀತ: ಅನಂತ್ಆರ್ಯನ್

ತಾರಾಗಣ: ಗೀತಪ್ರಿಯ ಮುಂತಾದವರು

 

ತಾಯವ್ವ ಹೆಣ್ಣಿನ ಕಥೆ ವ್ಯಥೆ

     ಆದಿ ಕಾಲದಿಂದಲೂ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತು ಎಂದರೆ ಏನೋ ಕಳೆದುಕೊಂಡವರಂತೆ ತಕದಿಮ ಎನ್ನುತ್ತಾರೆ. ಅದರಂತೆ ‘ತಾಯವ್ವ’ ಚಿತ್ರದಲ್ಲಿ ಅಂತಹುದೇ ಅಂಶಗಳು ಇರಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆಗೆ ಬಳಸಿಕೊಂಡಿದ್ದಾರೆ ಎನ್ನಬಹುದು. ವಿದ್ಯಾವಂತ ತಂದೆ ತಾಯಿ ಇದ್ದರೂ, ಗಂಡನ ತಾಯಿ ಹಳೇ ಸಂಪ್ರದಾಯದವಳು. ಗಂಡು ಎಂದರೆ ವಂಶ ಬೆಳಸುವವಳು. ಹೆಣ್ಣು ಯಾವತ್ತಿದ್ದರೂ ಪರರ ಸ್ವತ್ತು. ಅಂತ ಮೊಮ್ಮಗಳನ್ನು ಹೀಯಾಳಿಸುತ್ತಿರುತ್ತಾಳೆ. ಒಮ್ಮೆ ಆಕೆ ಮೂರ್ಛೆ ಹೋದಾಗ ಅಜ್ಜಿಯ ಮನ ಪರಿವರ್ತನೆಯಾಗುತ್ತದೆ.

      ಮತ್ತೋಂದು ಕಡೆ ಸೂಲಗಿತ್ತಿ ತಾಯವ್ವ. ಆಕೆ ನೂರಾರು ಜನರಿಗೆ ಹೆರಿಗೆ ಮಾಡಿಸಿ ಖ್ಯಾತಳಾದವಳು. ಆಕೆ ಎಂದರೆ ಊರಲ್ಲಿ ಗೌರವ. ತನ್ನ ಕುಟುಂಬದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆಹಿಡಿಯುತ್ತಾಳೆ. ಮುಂದೆ ಎರಡನೇ ಮಗು ಹೆಣ್ಣಾಗ ಬಹುದೆಂದು ಭ್ರೂಣ ಹತ್ಯೆಗೆ ಮುಂದಾಗುತ್ತಾಳೆ. ಹೀಗೆ ನಡೆದ ಎರಡು ಪ್ರಕರಣಗಳಲ್ಲಿ ಹೆಣ್ಣು ಎಂದರೆ ತಾತ್ಸಾರ ಮಾಡುವ ಹಿರಿಯರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಲಾಗಿದೆ.

        ನಾಯಕಿ ಮತ್ತು ನಿರ್ಮಾಪಕಿ ಗೀತಪ್ರಿಯ ಅನುಭವಿ ನಟಿಯಂತೆ ತೆರೆ ಮೇಲೆ ಗಮನ ಸೆಳೆಯುತ್ತಾರೆ. ಸಾತ್ವಿಕ್‌ಪವನ್‌ಕುಮಾರ್ ಕ್ಯಾಮಾರ ಮತ್ತು ನಿರ್ದೇಶನದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.      

****

 

 

Copyright@2018 Chitralahari | All Rights Reserved. Photo Journalist K.S. Mokshendra,