ಪಾರ್ಟಿ ಸಲುವಾಗಿ ಪ್ರಚಾರ ಮಾಡಲಿಲ್ಲ – ಮೇಘನಾ ಪಟೇಲ್
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ಕಮಲದಲ್ಲಿ ಮಾನ ಮುಚ್ಚಿಕೊಂಡು ಭಾರತದಾದ್ಯಂತ ಪಡ್ಡೆ ಹುಡುಗರನ್ನು ರೊಚ್ಚಿಗೆಬ್ಬಿಸಿದ ಮೇಘನಾಪಟೇಲ್ ಕನ್ನಡ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರನ್ವಯ ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಅವರು ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು. ಬಿಜೆಪಿ ಪಾರ್ಟಿಗೆ ಪ್ರಚಾರ ಮಾಡಲಿಲ್ಲ. ಗುಜರಾತ್‌ನಲ್ಲಿ ಹುಟ್ಟಿ ಬೆಳೆದ ಕಾರಣ ನರೇಂದ್ರಮೋದಿ ಬಗ್ಗೆ ಗೊತ್ತಿದೆ. ಅವರು ಉತ್ತಮ ನಾಯಕರಾಗಿರುವುದರಿಂದ ಗೆಲುವು ಸಾದಿಸಲಿ ಅಂತ ಹೀಗೆ ಮಾಡಿದೆ. ಇಲ್ಲಿಯವರೆವಿಗೂ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ಪಾರ್ಟಿಯಲ್ಲಿ ನನ್ನ ಬಗ್ಗೆ ಗೊತ್ತಿದ್ದು ಉತ್ತಮ ಕೆಲಸ ನಿರ್ವಹಿಸು ಅಂತ ಹೇಳಿದ್ದಾರೆ. ಈಗಾಗಲೆ ಸಮಾಜ ಕೆಲಸದಲ್ಲಿ ತಲ್ಲೀನನಾಗಿದ್ದು ಅಲ್ಲದೆ ಮಾಡಲಿಂಗ್, ನಟನೆಯಲ್ಲಿ ಬ್ಯುಸಿಯಾಗಿದ್ದಾನೆ. ಭಾರತದಲ್ಲಿ ಅತ್ಯಾಚಾರ ನಡೆಯುತ್ತಿರುವುದು ವಿಷಾದನೀಯ. ಅರಬ್ ದೇಶದಲ್ಲಿ ಕೊಡುವಂತ ಶಿಕ್ಷಯನ್ನು ಇಲ್ಲಿ ಜಾರಿಗೆ ತಂದರೆ ಹತೋಟಿಗೆ ಬರುತ್ತದೆ ಎಂಬುದು ಅವರ ಅಭಿಪ್ರಾಯ. ಹೆಣ್ಣು ಮಕ್ಕಳು ಆತ್ಮರಕ್ಷಣೆಗೆ ಯಾವುದಾದರೂ ಸಾಹಸ ವಿದ್ಯೆಯನ್ನು ಕಲಿಯುವುದು ಒಳಿತು. ನಾನು ಕರಾಟೆ ಕಲಿತಿರುವೆ. ನನ್ನ ಹಣೆಬರದಲ್ಲಿ ವಿವಾದ ನಟಿ ಇರುವುದನ್ನು ಸಂತಸದಿಂದ ಸ್ವೀಕರಿಸುವೆ ಎಂದು ನಗು ಚೆಲ್ಲುತ್ತಾರೆ.
ಚಿತ್ರದಲ್ಲಿ ನಾನು ನಾಯಕಿ. ಕುಡಿತದ ಚಟ ಇರುವ ಗಂಡನನ್ನು ಸರಿದಾರಿಗೆ ತರುವ ಪಾತ್ರ. ಬಾಲಿವುಡ್‌ನಲ್ಲಿ ಎರಡು ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ನಾನು ವೃತ್ತಿಪರ ನಟಿಯಾಗಿರುವುದರಿಂದ ಯಾವುದೆ ಪಾತ್ರಕ್ಕೆ ಸಿದ್ದಳಾಗಿರಬೇಕು. ಮತ್ತೇರಿಸುವ ಪಾತ್ರದ ಬಗ್ಗೆ ಏನು ಗೊತ್ತಿಲ್ಲ. ನಿರ್ದೇಶಕರು ಹೇಳಿದಂತೆ ನಟಿಸುವ ಜವಬ್ದಾರಿಯಾಗಿದೆ ಎನ್ನುತ್ತಾರೆ ಮೇಘನಾಪಟೇಲ್.