Shree Vishnu Dashavatara

Wednesday, October 17, 2018

741

ಕಿರುತೆರೆಯಲ್ಲಿ ಪ್ರಥಮ ಬಾರಿ ಶ್ರೀ ವಿಷ್ಣುದಶಾವತಾರ

ಇಲ್ಲಿಯವರೆಗೂ ಹಲವಾರು ಭಕ್ತಿ, ಪೌರಾಣಿಕ, ಐತಿಹಾಸಿಕ ಧಾರವಾಹಿಗಳು ಪ್ರಸಾರವಾಗಿದೆ. ಆದರೆ   ಶ್ರೀಮನ್ನಾರಾಯಣನ ಚರಿತೆ ಕುರಿತಾದ ಕತೆಯು ಇಲ್ಲಿರವರೆಗೂ ಬಂದಿಲ್ಲ. ಅಂತಹ ಸಾಹಸಕ್ಕೆ ಜೀ ವಾಹಿನಿಯು ಕೈ ಹಾಕಿದೆ.  ‘ಶ್ರೀ ವಿಷ್ಣು ದಶಾವತಾರ’ ಶೀರ್ಷಿಕೆಯ  ಕತೆಯಲ್ಲಿ  ಶ್ರೀ ಮಹಾ ವಿಷ್ಣುವು ಲೋಕ ಕಲ್ಯಾಣಕ್ಕಾಗಿ, ಜಗತ್ ರಕ್ಷಣೆಗಾಗಿ ಅವತಾರ ತಾಳುತ್ತಾರೆ. ಅದರಲ್ಲಿ ಮತ್ಸಾವ್ಯತಾರ, ಕೂರ್ಮಾವತಾರ, ವರಾಹಾವತಾರ ಹೀಗೆ ಅವತರಿಸುತ್ತಾ ಜಗತ್ ಕಲ್ಯಾಣ ಮಾಡಿರುವ ಶ್ರೀಹರಿಯ ಮಹತ್ವದ ಪುರಾಣಗಳನ್ನು ಕಾವ್ಯಾತ್ಮಕವಾಗಿ ನಿರೂಪಿಸುವ ಪ್ರಯತ್ನ ಮಾಡಿಲಾಗಿದೆ. ಇದಕ್ಕಿಂತಲೂ ಮಿಗಿಲಾಗಿ ವಿಷ್ಣು ಮತ್ತು ಲಕ್ಷೀಯರ ಪ್ರೇಮಕತೆಯಲ್ಲಿ, ಜಗತ್ ಪಾಲಕ ಶ್ರೀಹರಿಯು ಲಕ್ಷೀದೇವಿಯನ್ನು ವರಿಸಿದ್ದು ಹೇಗೆ, ಇವರ ಅಮರ ಕಥೆಯ ಹಿಂದಿನ ಚರಿತ್ರೆ ಏನು, ಎಲ್ಲವನ್ನು ಕಂತುಗಳ  ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಒಂದೊಂದು ಅವತಾರಗಳು ಕನಿಷ್ಟ ೩೦ ಕಂತುಗಳು ಬರಲಿದೆ.  ಇಲ್ಲಿಯವರೆಗೂ ೫೦ ಕಂತುಗಳಷ್ಟು ಚಿತ್ರೀಕರಣ ನಡೆಸಿ, ೩೫೦ ಕಂತುಗಳಿಗೆ ಯೋಜನೆ ಹಾಕಿಕೊಂಡಿದೆ.

ಶ್ರೀ ವಿಷ್ಣು ಆಗಿ ಅಮಿತ್‌ಕಶ್ಯಪ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಮೊದಲ ಅನುಭವವಾಗಿದ್ದು, ಟೆಕ್ಕಿ ಕೆಲಸಕ್ಕೆ ರಾಜೀನಾಮೆ ನೀಡಿ ನಟನೆ ಕಡೆಗೆ ವಾಲಿದ್ದಾರೆ. ಹಳ್ಳಿಸೊಗಡು ಚಿತ್ರದಲ್ಲಿ ಅಕ್ಷರ ಹೆಸರಿನಲ್ಲಿ ಗುರುತಿಸಿಕೊಂಡು, ಈಗ ನಿಶಾ ನಾಮಕರಣದೊಂದಿಗೆ ಲಕ್ಷೀದೇವಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.  ಸಂತೋಷ್‌ಬಾದಲ್ ನಿರ್ದೇಶನ, ನಂದಿಶ್‌ಸುರೇಶ್‌ಪಿಂಗಲ್ ಹಿನ್ನಲೆ ಸಂಗೀತ, ವಿಷ್ಣುಪಾಂಡೆ ಸಂಕಲನ ಮತ್ತು ಮುಂಬೈ ಮೂಲದ ಕ್ರಿಯೆಟೀವ್  ಐ ಸಂಸ್ಥೆಯು  ಗ್ರಾಫಿಕ್ಸ್ ಜವಬ್ದಾರಿಯನ್ನು  ಹೊತ್ತುಕೊಂಡಿದೆ.   ಕನ್ನಡ ಮತ್ತು ತಮಿಳು ಭಾಷೆಯಲ್ಲಿ  ಪ್ರಸಾರವಾಗುತ್ತಿರುವ ಕಾರಣ ಬಾಂಬೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿ ಎರಡು ಬಾರಿ ಚಿತ್ರೀಕರಣ ನಡೆಸಲಾಗಿದೆ. ಅಕ್ಟೋಬರ್  ೧೫, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೮ ಗಂಟಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂಬ ವಿವರ ಕೊಡುತ್ತಾರೆ ವಾಹಿನಿ ಮುಖ್ಯಸ್ಥ ರಾಘವೇಂದ್ರಹುಣಸೂರು.

Copyright@2018 Chitralahari | All Rights Reserved. Photo Journalist K.S. Mokshendra,