Weekend with Ramesh Seassion-4.Press Meet.

Monday, April 15, 2019

749

ವೀಕೆಂಡ್ದಲ್ಲಿ  ಮೊದಲ ಅತಿಥಿ  ಡಾ.ವೀರೇಂದ್ರಹೆಗ್ಗಡೆ

          ಜೀ ವಾಹಿನಿಯಲ್ಲಿ ಪ್ರಸಾರಗೊಂಡ ಸಾಧಕರನ್ನು ತೋರಿಸುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವು  ಮೂರು ಸೀಸನ್‌ಗಳು ಯಶಸ್ವಿಯಾಗಿ, ವೀಕ್ಷಕರ ಮನಸೂರೆಗೊಂಡಿತ್ತು.  ಈಗ ಸೀಸನ್-೪ ಶುರುಮಾಡಲು ವಾಹಿನಿ ಸಿದ್ದತೆಗಳನ್ನು ಮಾಡಿಕೊಂಡಿದೆ.  ಹಿಂದಿನ ಸೀಸನ್‌ಗಳಲ್ಲಿ  ಸಾಧಕರ ಬಾಲ್ಯ, ಕಷ್ಟ-ಸುಖ, ಸಂತಸದ ಕ್ಷಣಗಳು ಹೀಗೆ ಅವರು ಸವೆಸಿದ  ಪೂರ್ಣ ಹಾದಿಯನ್ನು ಒಂದು ಗಂಟೆಯೊಳಗೆ  ಎಲ್ಲವನ್ನು ತೆರೆದಿಡುವಲ್ಲಿ ಸಪಲರಾಗಿದ್ದರು.  ಚಿತ್ರರಂಗ  ಸೇರಿದಂತೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಕೆಂಪುಕುರ್ಚಿದಲ್ಲಿ  ಕೂರಿಸಿ ಅವರ ಅನುಭವಗಳನ್ನು  ಹೇಳಿಕೊಂಡಿದ್ದರು.  ಸೀಸನ್-೪  ವಿಶೇಷ ಎನ್ನುವಂತೆ  ಪ್ರೋಮೋ ತಯಾರಿಸಲು ತಂಡವು ಮಡಕೇರಿಯ ಮಂದಾಲಪಟ್ಟಿಯ ತುತ್ತ ತುದಿಯ ಮೇಲೆ ಸೆಟ್‌ನ್ನು ನಿರ್ಮಿಸಿ  ಚಿತ್ರೀಕರಣ ನಡೆಸಿರುವುದು  ಛಾಲೆಂಜಿಂಗ್ ಆಗಿದೆ.

ಕಳೆದ ಮೂರು ಸೀಸನ್‌ಗಳಲ್ಲಿ  ಧರ್ಮಾಧಿಕಾರಿ ಡಾ.ವೀರೇಂದ್ರಹಗ್ಗಡೆ ಅವರನ್ನು ಕರೆತರಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ತಂಡವು ಛಲ ಬಿಡದೆ, ಧೃತಿಗೆಡದೆ ಕೊನೆಗೂ ಅವರನ್ನು  ಸೆಟ್‌ಗೆ ಕರೆಸುವ   ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅದರಿಂದಲೇ ಮೊದಲ ಕಂತು  ಇವರಿಂದಲೇ ಶುರುವಾಗಲಿದೆ.  ಹಿಂದಿನ ಮೂರು ಸೀಸನ್‌ಗಳಲ್ಲಿ ೬೫ ಸಾಧಕರು ಭಾಗವಹಿಸಿದ್ದು,  ನಾಲ್ಕನೇ  ಸೀಸನ್ ಮುಗಿದ ಬಳಿಕ ಅವರೆಲ್ಲರನ್ನು ಕರೆಸಿ ಮತ್ತೋಂದು ಅದ್ಬುತ ಕಾರ್ಯಕ್ರಮ ಮಾಡಿ ನಾಲ್ಕು ಸೀಸನ್‌ನ ಸಿಡಿ ಹಾಗೂ ವೀಕೆಂಡ್ ವಿಥ್ ರಮೇಶ್ ಪುಸ್ತಕವನ್ನು ಬಿಡುಗಡೆ ಮಾಡಲು ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರಹುಣಸೂರು ಯೋಜನೆ ಹಾಕಿಕೊಂಡಿದ್ದಾರೆ.  ಏಪ್ರಿಲ್ ೨೦ರಿಂದ   ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ  ಕಾಯ್ರಕ್ರಮವು  ಬಿತ್ತರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,