ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕಸ್ತೂರಿ ನಿವಾಸ”
ಸೆಪ್ಟೆಂಬರ್ ೯ರಿಂದ ಸೋಮವಾರದಿಂದ ಶನಿವಾರ ಸಂಜೆ ೬.೩೦ಕ್ಕೆ
“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ” ಎಂದು ಶ್ರೀ ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ, ಹಳೆ ತತ್ವಗಳಿಗೆ ಹೊಸ ಯುಕ್ತಿ ಸೇರಬೇಕು ಹಾಗೆ ಹೊಸದಾಗಿ ಚಿಗುರು ಬರುವುದು ಹಳೆ ಬೇರಿನಿಂದಲೇ ಎನ್ನುವುದು ಎ೧ರಿಗೂ ಮನನವಾಗಬೇಕು. ಪ್ರಾಚೀನಕತೆಗೆ ಧಕ್ಕೆ ಬಾರದಂತೆ ಆಧುನಿಕತಗೆ ಪರಿವರ್ತಿಸುವ ವಿಷಯವನ್ನು ಇಟ್ಟುಕೊಂಡು ಜನಜೀವನಕ್ಕೆ ಉಪಯುಕ್ತವಾಗುವಂತಹ ಒಂದು ವಿನೂತನ ವಿಚಾರದ ಕುರಿತು “ಕಸ್ತೂರಿ ನಿವಾಸ” ಎಂಬ ಹೊಸ ಧಾರಾವಾಹಿಯನ್ನು ಉದಯ ಟಿವಿ ಇದೇ ಸೆಪ್ಟೆಂಬರ್ ೯ ರಿಂದ ಸೊಮವಾರದಿಂದ ಶನಿವಾರದವರೆಗೆ ಸಂಜೆ ೬.೩೦ಕ್ಕೆ ಪ್ರಾರಂ೧ಸುತ್ತಿದೆ.
ಈಗಾಗಲೇ ನಂದಿನಿ, ಕಾವೇರಿ, ನಾಯಕಿ, ಕ್ಷಮಾ, ನಾನು ನನ್ನ ಕನಸು ಎಂಬ ವಿ೧ನ್ನ ಕಥೆಗಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿ ಈಗ ಮತ್ತೊಂದು ವಿನೂತನ ಕಥೆಯ ‘’ಕಸ್ತೂರಿ ನಿವಾಸ’’ ಎಂಬ ಧಾರಾವಾಹಿಯನ್ನು ಪ್ರಾರಂ೧ಸುತ್ತಿದೆ. ಮನೆತನ , ಸಂಪ್ರಾದಾಯ , ಸಂಸ್ಕೃತಿ ಅಂತ ನಂಬಿರೋ ಪಾರ್ವತಿ ಒಂದ್ಕಡೆ ಆದ್ರೆ , ಕಟ್ಟು ಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕು ಅನ್ನೋ ಮೃದುಲಾ ಇನ್ನೋಂದ್ಕಡೆ. ಈ ಬೇರೆ ಬೇರೆ ಆಲೋಚನೆಗಳಿರೋ ಈ ಇಬ್ಬರನ್ನ ವಿಧಿ ಒಂದೆ ದಾರಿಯಲ್ಲಿ ನೆಡೆಯೋ ಹಾಗೆ ಮಾಡಿದರೆ ಹೇಗಿರುತ್ತದೆ ಎಂಬುದೆ ಈ ಧಾರಾವಾಹಿಯ ಕಥಾ ಹಂದರ.
ಹಿಂದಿನ ಕಾ೧ದ ಆಲೋಚನೆಗಲಿಗೆ ಆಧುನಿಕತೆಯನ್ನು ಅಳವಡಿಸಿಕೊಂಡು ನಡೆಯುವದರಲ್ಲಿ ತಪ್ಪೇನಿದೆ ಎಂಬ ವಾದ ಧಾರಾವಾಹಿಯ ನಾಯಕಿ ಮೃದಲಾಳವಾದವಾದರೆ, ಹೆಣ್ಣು ಅಡುಗೆ ಮಾಡಬೇಕು
, ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವಹಾಗೆ ಉಡುಗೆ ತೊದುಗೆಗ೧ನ್ನ ಧರಿಸ ಬೆಕು ಎಂಬುದು ಪಾರ್ವತಿಯವಾದ. ಇವರುಗಳ ಮದ್ಧ್ಯೆ ತನ್ನ ಅಮ್ಮನ ಮಾತನ್ನು ಮೀರೋಕಾಗ್ದೆ, ಫ್ಯಾಶನ್ ಡಿಸೈನರ್ ಆಗೋ ಕನಸು ಕಾಣ್ತಿರೋ ನಾಯಕ ತನ್ನ ಮನಸ್ಸಿನ ಮಾತನ್ನು ಧಿಕ್ಕರಿಸೊಕೆ ಆಗ್ದೆ ಒದ್ದಾಡ್ತಿರೋ ಕಥೆ “ಕಸ್ತೂರಿ ನಿವಾಸ” ಧಾರಾವಾಹಿಯನ್ನು ಅದ್ಭುತವಾಗಿ ನಿರ್ದೇಶಿಸುತ್ತಿದ್ದಾರೆ ಮುಸ್ಸಂಜೆ ಮಹೆಶ್.
ನಾಯಕಿ ಮೃದಲಾ ಪಾತ್ರವನ್ನು ನಟಿ ವರ್ಷಾ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟಿ ಆಶಾ ರಾಣಿ ಪಾರ್ವತಿಯ ಪಾತ್ರವನ್ನು ನೀರ್ವಹಿಸುತ್ತಿದ್ದಾರೆ. ನಾಯಕ ನಟನಾಗಿ ದೀಲಿಪ್ ಶೆಟ್ಟಿ ಅ೧ನಯಿಸುತ್ತಿದ್ದಾರೆ. ಹಾಗೆ ರಾಜಗೋಪಾಲ ಜೋಶಿ , ರುತು , ಶಿ೧ಶ್ರೀ , ಸಿತಾರಾ ಹೀಗೆ ಹಲವಾರು ಪ್ರತಿಭಾವಂತ ಕಲಾವಿದರ ತಂಡು ಈ ಧಾರಾವಾಹಿಯಲ್ಲಿದೆ.
ದೇವಿ ಸ್ಟುಡಿಯೋಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯ ಜನಪ್ರಿಯ ನಟಿ ಜಯಶ್ರೀ ಈ ಧಾರಾವಾಹಿಯನ್ನ ಉದಯ ಟಿವಿಯ ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಮಾಣಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ವಿನೂತನ ಪ್ರಯತ್ನದ “ಕಸ್ತೂರಿ ನಿವಾಸ” ಉದಯ ಟಿವಿಯಲ್ಲಿ ಇದೇ ಸೆಪ್ಟಂಬರ್ ೦೯ ರಿಂದ ಸಂಜೆ ೬.೩೦ಕ್ಕೆ ಪ್ರಸಾರವಾಗಲಿದೆ.