ಸಂಬಂದಗಳನ್ನು ಬೆಸೆಯುವ ಮನಸಾರೆ
ಅಪ್ಪನ ಪ್ರೀತಿಗೆ ಹವಣಿಸೋ ಹಿರಿಮಗಳು, ಪ್ರೀತಿಯಕಣಜ ಹೊತ್ತು ನಿಂತಿರೋ ಕಿರಿಮಗಳು, ಮಲತಾಯಿಆಗಿದ್ದರೂ ಸ್ವಂತ ಮಗಳಂತೆ ನೋಡಿಕೊಳ್ಳುವ ಚಿಕ್ಕಮ್ಮ, ಅಕ್ಕ-ತಂಗಿಯರಒಡನಾಟದಕತೆಯೇ ‘ಮನಸಾರೆ’.ಸಾಕಷ್ಟು ಮೆಘಾ ಧಾರವಾಹಿಗಳನ್ನು ನಿರ್ದೇಶನ ಮಾಡಿರುವರವಿಕಿಶೋರ್ ಭಾವನೆಗಳ ಪಯಣದ ಸನ್ನಿವೇಶಗಳಿಗೆ ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಪ್ರಸಕ್ತಕರ್ನಾಟಕ ಚಲನಚಿತ್ರಅಕಾಡೆಮಿಅಧ್ಯಕ್ಷ ಸುನಿಲ್‌ಪುರಾಣಿಕ್‌ತಂದೆ ಪಾತ್ರ, ಹಿರಿಮಗಳಾಗಿ ಜೈ ಹನುಮಾನ್‌ಧಾರವಾಹಿಯಲ್ಲಿ ಮಿಂಚಿದ್ದ ಪ್ರಿಯಾಂಕಚಿಂಚೋಳಿ ನಾಯಕಿ.ಲವರ್ ಬಾಯ್ ಆಗಿ ಸಾಗರ್ ನಾಯಕ.ಅಮ್ಮನಾಗಿ ಯಮುನಾಶ್ರೀನಿಧಿ, ನಂತರ ಬರುವತಾಯಿಯಾಗಿ ಸ್ವಾತಿ. ಹಿರಿರಂಗಭೂಮಿಕಲಾವಿದೆಜಯಲಕ್ಷೀ, ಉಳಿದಂತೆರಮೇಶ್‌ಪಂಡಿತ್, ಸುನೇತ್ರಪಂಡಿತ್, ವಿಜಯ್‌ಕೌಂಡಿಣ್ಯ ಮುಂತಾದವರು ನಟಿಸುತ್ತಿದ್ದಾರೆ.
ಶೀರ್ಷಿಕೆ ಗೀತೆಗೆಗಿರಿಧರ್‌ದಿವಾನ್ ಸಂಗೀತವಿದೆ.ಗುರುರಾಜ್‌ಕುಲಕರ್ಣೀಧ್ರುವ್ ಮೀಡಿಯಾಕ್ರಾಫ್ಟ್ ಮೂಲಕ ನಿರ್ಮಾಣ ಮಾಡುತ್ತಿರುವ ಕಂತುಗಳು ಉದಯ ವಾಹಿನಿಯಲ್ಲಿ ಫೆಬ್ರವರಿ ೨೪ರಿಂದ ಸೋಮವಾರದಿಂದ ಶನಿವಾರದ ವರೆಗೆರಾತ್ರಿ ೯ಕ್ಕೆ ಪ್ರಸಾರವಾಗಲಿದೆ.