*ಮೇ 23 ರಿಂದ ಸ್ಟಾರ್ ಸುವರ್ಣದಲ್ಲಿ "ಅರ್ಧಾಂಗಿ".*
*ಸಂಜೆ 7 ಗಂಟೆಗೆ ನೋಡಲು ಸಿದ್ದರಾಗಿ.*
ಧಾರಾವಾಹಿ ಪ್ರಿಯರಿಗೆ ಸಿಹಿಸುದ್ದಿ. ವಿನೂತನ ಧಾರಾವಾಹಿಗಳನ್ನು ಹಾಗೂ ವಿಭಿನ್ನ ಶೋಗಳನ್ನು ನೋಡುಗರಿಗೆ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೇ 23 ರಿಂದ ಆರಂಭವಾಗಲಿದೆ. ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಈ ಧಾರಾವಾಹಿಯ ರಾಯಭಾರಿಯಾಗಿದ್ದಾರೆ.
ನನ್ನ ಸ್ನೇಹಿತೆ ಉಷಾ ಅವರು ಈ ಧಾರಾವಾಹಿಯ ಕುರಿತು ಹೇಳಿದರು. ನಂತರ ಕಥೆ ಕೇಳಿದೆ. ಇಷ್ಟವಾಯಿತು. ರಾಯಭಾರಿಯಾಗಲು ಒಪ್ಪಿಕೊಂಡೆ. ಒಳ್ಳೆಯ ಕೌಟುಂಬಿಕ ಧಾರಾವಾಹಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟಿ ಪ್ರಿಯಾಂಕ ಉಪೇಂದ್ರ.
ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಅದಿತಿ, ಮಲತಾಯಿ ಆಶ್ರಯದಲ್ಲಿ ಬೆಳೆಯುತ್ತಾಳೆ. ಮಲತಾಯಿ ಮಕ್ಕಳನ್ನು ಸ್ವಂತ ತಂಗಿ-ತಮ್ಮ ಎಂದು ನೋಡಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಆಕೆ ಒಂದು ತ್ಯಾಗಕ್ಕೆ ಸಿದ್ದಾವಾಗಬೇಕಾಗುತ್ತದೆ. ಇಪ್ಪತ್ತೆಂಟು ವರ್ಷವಾಗಿದ್ದರೂ, ಎಂಟು ವರ್ಷದ ಮಗುವಿನಷ್ಟೇ ಬುದ್ದಿಯಿರುವ ದಿಗಂತ್ ಎಂಬ ಹುಡುಗನನ್ನು ಮದುವೆಯಾಗಬೇಕಾಗುತ್ತದೆ. ನಂತರ ಏನಾಗುತ್ತದೆ? ಎಂಬುದೆ ಧಾರಾವಾಹಿಯ ಕಥೆ ಎಂದು ನಿರ್ದೇಶಕ ಎಂ ಕುಮಾರ್ ತಿಳಿಸಿದರು.
ನನಗೆ ಈ ಪಾತ್ರ ಹೇಳಿದ ತಕ್ಷಣ " ಸ್ವಾತಮುತ್ತು" ಚಿತ್ರ ನೆನಪಾಯಿತು. ಈ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ನಾನು ವಿಶೇಷ ಮಕ್ಕಳಿರುವ "ಅರುಣ ಚೇತನ" ಶಾಲೆಯಲ್ಲಿ ಅವರೊಂದಿಗೆ ಎರಡು ದಿನ ಕಳೆದಿದ್ದೇನೆ ಎಂದು ದಿಗಂತ್ ಪಾತ್ರಧಾರಿ ಪೃಥ್ವಿ ಶೆಟ್ಟಿ ತಿಳಿಸಿದರು.
ಕೆಳ ಮಧ್ಯಮದ ಹುಡುಗಿ ಪಾತ್ರ ನನ್ನದು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅಂಜದೇ ನಡೆಯುವ ಹುಡುಗಿ. ತುಂಬಾ ಪ್ರಬುದ್ಧ ಹುಡುಗಿಯ ಪಾತ್ರ ನನ್ನದು ಎಂದರು ಅದಿತಿ ಪಾತ್ರಧಾರಿ ಅಂಜನ ದೇಶಪಾಂಡೆ.
ನನಗೆ ಸ್ಟಾರ್ ಸುವರ್ಣದ ಸ್ನೇಹಿತರೊಬ್ಬರು ಈ ಕಥೆ ಕಳುಹಿಸಿದ್ದರು. ರಾತ್ರಿ ಹನ್ನೊಂದರಿಂದ ಬೆಳಗ್ಗಿನ ಜಾವ ನಾಲ್ಕು ಗಂಟೆವರೆಗೂ ಕಥೆ ಓದಿದೆ. ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಶ್ರೀನಾಥ್ ರಘುರಾಮ್.
"ಅರುಣ ಚೇತನ" ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥೆ ಗಾಯಿತ್ರಿ ಪಂಜು ಅವರು ವಿಶೇಷ ಮಕ್ಕಳ ದೈನಂದಿನ ದಿನಚರಿ ಬಗ್ಗೆ ಮಾಹಿತಿ ನೀಡಿದರು.
ಸ್ಟಾರ್ ಸುವರ್ಣ ವಾಹಿನಿಯ ಬ್ಯುಸಿನೆಸ್ ಹೆಡ್ ಸುಷ್ಮ ಎಲ್ಲರನ್ನು ಸ್ವಾಗತಿಸಿದರು.