ಮೂರು ಚಿಹ್ನೆಯ ಚಿತ್ರ ಉಪೇಂದ್ರ ಓಂ, ಸ್ವಸ್ತಿಕ್ ಚಿತ್ರಗಳನ್ನು ಚಿಹ್ನೆಯ ಮೂಲಕ ಶೀರ್ಷಿಕೆಯಾಗಿ ಬಳಸಿಕೊಂಡಿದ್ದರು. ಇದರಲ್ಲಿ ಒಂದು ಹೆಸರು ಮಾಡಿದರೆ, ಮತ್ತೋಂದು ಸಾಧಾರಣ ಅನಿಸಿಕೊಂಡಿತ್ತು. ಈಗ ಹಿರಿಯ ನಿರ್ದೇಶಕ ಪುಟಾಣೆ ರಾಮರಾವ್ ಇನ್ನೋಂದು ಹೆಜ್ಜೆ ಮುಂದಕ್ಕೆ ಹೋಗಿ ‘ಓಂ ಶ್ರೀ ಸ್ವಸ್ತಿಕ್’ ಹೆಸರುಗಳನ್ನು ಚಿಹ್ಮೆಗಳೊಂದಿಗೆ ಹೆಸರಿನಲ್ಲಿ ಗುರುತಿಸಿಕೊಂಡು ನಿರ್ಮಾಣ ಮಾಡಿದ್ದಾರೆ. ತ್ರಿಸಂಗಮ ಹಂಗಾಮವೆಂದು ಉಪಶೀರ್ಷಿಕೆಯಾಗಿ ಹೇಳಿಕೊಂಡಿದೆ. ಹೊಸಕೋಟೆ, ರಾಮೋಹಳ್ಳಿ ಕಡೆಗಳಲ್ಲಿ ಶೇಕಡ ೭೫ರಷ್ಟು ಚಿತ್ರೀಕರಣ ಮುಗಿಸಿ, ಎರಡು ಹಾಡುಗಳು, ಸಾಹಸ ಮತ್ತು ಮಾತಿನ ಭಾಗದ ಕೆಲಸವನ್ನು ಉಳಿಸಿಕೊಂಡಿದೆ. ಅಡಿಬರಹದಲ್ಲಿ ....
ಹೊಸಬರ ಕೃಥ ಇದಂ ಕೃತ್ಯಂ ಎಂದು ಹಿರಿಯರು ಹೇಳುತ್ತಾರೆ. ಈಗ ಹೊಸಬರ ತಂಡವೊಂದು ಸೇರಿಕೊಂಡು ‘ಕೃಥ’ ಎನ್ನುವ ಚಿತ್ರವನ್ನು ಸದ್ದಿಲ್ಲದೆ ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಎರಡು ಹಂತದಂತೆ ಚಿತ್ರೀಕರಣ ಮುಗಿಸಿದ್ದಾರೆ. ಮೊದಲು ‘ಡು ಇಟ್’ ಹೆಸರು ಇಡಲು ಚಿಂತನೆ ನಡೆಸಿದ್ದರು. ಅದು ಸರಿಬರುವುದಿಲ್ಲವೆಂದು ಕೊನೆಗೆ ಮೇಲಿನಂತೆ ಸಂಸ್ಕ್ರತ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕತೆಯಲ್ಲಿ ನಾಲ್ಕು ವರ್ಷ ಮಗುವಿನೊಂದಿಗೆ ಶಕ್ತಿಶಾಲಿ ತಾಯಿ ಗಂಡನಿಲ್ಲದ ಸಂದರ್ಭದಲ್ಲಿ ಎದುರಾದ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಮೂಲಕ ೧೧೦ ನಿಮಿಷದಲ್ಲಿ ತೋರಿಸಲಾಗಿದೆ. ‘ಧನಂ ....
ಪ್ರೀತಿ ಮತ್ತು ಭಯದ ಸಂವೇದನೆಗಳು ಪ್ರೀತಿ ಇದ್ದಾಗ ಚಿಕ್ಕದೊಂದು ಭಯ ಇರುತ್ತದೆ. ಆ ಭಯವು ನಮಗೆ ಜವಬ್ದಾರಿ ಕೊಡುತ್ತದೆ. ಅಂತಹ ಜವಬ್ದಾರಿಯು ಚೆನ್ನಾಗಿರುತ್ತದೆ. ಹುಟ್ಟು-ಸಾವು, ನೋವು-ನಲಿವು. ಕಾಣಿಸುವುದರ ಬಗ್ಗೆ ಯಾರು ಚಿಂತೆ ಮಾಡೋಲ್ಲ. ಅದೇ ಕಾಣದೇ ಇರುವುದರ ಕುರಿತಂತೆ ಭ್ರಮೆ-ಹೆದರಿಕೆ ಆವರಿಸುತ್ತದೆ. ಇರೋದು ಯಾಕಿಂಗೆ, ಇಲ್ಲದೆ ಇರೋದು ಯಾಕಿಲ್ಲ. ಬದುಕಿನಲ್ಲಿ ವಿಚಿತ್ರ ಅಂದರೆ ಇವೆಲ್ಲವೂ ಸಂಘಟಿತವಾಗಿ ಬರುತ್ತದೆ. ಇಂತಹ ಅಂಶಗಳು ‘ಅಳಿದು ಉಳಿದವರು’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅನಂತ್ ವರ್ಸಸ್ ನುಸ್ರತ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ಸುಧೀರ್‌ಶ್ಯಾನ್‌ಭೋಗ್ ‘ಬದುಕು ಜಟಾಕ ಬಂಡಿ’ ರಿಯಾಲಿಟಿ ....
ಪ್ರತಿಭೆ ಸಾಬೀತು ಪಡಿಸಲು ಚಿತ್ರ ನಿರ್ಮಾಣ ಹಿಂದಿನ ದಂಡು ಪಾಳ್ಯ ನಿರ್ಮಾಣ ಮಾಡಿದ್ದ ವೆಂಕಟ್ ಅವರಿಗೆ ನಿರ್ದೇಶಕರಿಂದ ದ್ರೋಹ,ಮೋಸ ಆಗಿತ್ತು. ಇವರಿಗೇನು ಗೊತ್ತಿಲ್ಲವೆಂದು ಆ ಸಮಯದಲ್ಲಿ ಆಟ ಆಡಿಸಿದ್ದಾರೆ. ನಾನೇನು ಕಮ್ಮಿ ಇಲ್ಲ. ನನ್ನಲ್ಲೂ ಪ್ರತಿಭೆ ಎಂದು ತೋರಿಸುವ ಸಲುವಾಗಿ ‘ದಂಡು ಪಾಳ್ಯಂ-೪’ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಬಂಡವಾಳ ಹಾಕಿದ್ದೇನೆಂದು ಸಂತೋಷಕೂಟದಲ್ಲಿ ಅನ್ನದಾತರು ಅಂತರಾಳದ ನೋವನ್ನು ಮಾದ್ಯಮದ ಎದುರು ಹೇಳಿಕೊಂಡರು. ಇನ್ನು ಖುಷಿಯ ವಿಚಾರ ಅಂದರೆ, ಎಸಿಪಿ ಯಾಗಿ ಕಾಣಿಸಿಕೊಂಡಿದ್ದರಿಂದ ಒಂದರೆಡು ಚಿತ್ರಗಳಲ್ಲಿ ಅಭಿನಯಿಸಲು ಕರೆ ಬಂದಿದೆ. ಸ್ಟಾರ್ ನಟರ ಕಾಲ್‌ಶೀಟ್ ಸಿಕ್ಕಿದೆ. ಇದರ ನಂತರ ....
ನವೆಂಬರ್ ೨೪ರಂದು ಆಕ್ಷನ್ ಪ್ರಿನ್ಸ್ ಮದುವೆ ಸ್ಟಾರ್ ನಟ ಧ್ರುವಸರ್ಜಾ ಅವರ ಮದುವೆಯು ಪ್ರೇರಣಶಂಕರ್ ಅವರೊಂದಿಗೆ ನಡೆಯಲಿದೆ. ಹನ್ನೆರಡು ಇಂಚು ಉದ್ದ, ಮೂರೂವರೆ ಇಂಚು ಎತ್ತರದ ಆಹ್ವಾನಪತ್ರಿಕೆಯಲ್ಲಿ ಸರ್ಜಾ ಕುಟುಂಬವು ಆಹ್ವಾನಿಸುತ್ತಿದೆ ಎನ್ನುವ ಎರಡು ಬಾಟಲ್‌ಗಳ ಪೈಕಿ ಒಂದರಲ್ಲಿ ಅಕ್ಕಿ, ಚಾಕಲೇಟ್, ಹರಿಶಿನ-ಕುಂಕುಮ, ಎರಡನೆಯದಲ್ಲಿ ಕೇಸರಿ ಬಣ್ಣ ಇರುವ ಸಣ್ಣದಾದ ಪ್ಯಾಕೆಟ್. ಮತ್ತೋಂದು ಕಡೆ ಹರಿಶಿನಕೊಂಬು, ಹಸಿರುಬಣ್ಣದ ಗಾಜಿನ ಬಳೆ, ಮರದಲ್ಲಿ ಮಾಡಲಾದ ಚಿಕ್ಕದಾದ ಪೆಂಡೆಂಟ್. ಒಂದು ಪುಟ ಪೂರ್ತಿ ಹಳೇಬೀಡು ಗೋಪುರಗಳ ಮಧ್ಯೆ ವಧು-ವರ ನಿಂತಿರುವ ಭಾವಚಿತ್ರ. ಆಹ್ವಾನ ಪತ್ರಿಕೆಯಲ್ಲಿ ಸಂಪೂರ್ಣ ಮದುವೆ ವಿವರ, ....
ಈ ವಾರ ತೆರೆಗೆ ‘ಕನ್ನಡ್ ಗೊತ್ತಿಲ್ಲ‘ ರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ ಅವರು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆರ್ ಜೆ ಮಯೂರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕನ್ನಡ್ ಗೊತ್ತಿಲ್ಲ‘ ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಈ ....
ಕಾಡು ನಾಡಿನ ಮಿಶ್ರಣ ಮೂಕಹಕ್ಕಿ ನಿರ್ದೇಶನ ಮಾಡಿರುವ ನೀನಾಸಂ ಮಂಜು ಈಗ ಕಾಡು, ನಾಡು ನಡುವಿನ ಕತೆಯನ್ನು ಆರಿಸಿಕೊಂಡು ‘ಕನ್ನೇರಿ’ ಅಡಿಬರಹದಲ್ಲಿ ಕಾಡಿನ ವಸಂತಗಳು ಎಂದು ಹೇಳಿಕೊಂಡಿರುವ ನೈಜ ಘಟನೆಯ ಚಿತ್ರವನ್ನು ಮುಗಿಸಿದ್ದಾರೆ. ಕಾಡಿನ ಮಕ್ಕಳಿಗೆ, ವನವೇ ವಾಸತಾಣ. ಅಲ್ಲೇ ನೆಲೆ ಕಂಡುಕೊಂಡಿರುವ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿಯನ್ನು ಬೆಳೆಸಿಕೊಂಡವರು. ಆದರೆ ದಿನಕಳೆದಂತೆ ಅವರನ್ನೇ ಹೊರ ಹಾಕುವ ಷಡ್ಯಂತರ ನಡೆಯುತ್ತಿದೆ. ಕಾಡಿನ ಜೊತೆ ನಾಡಿನ ಕಥೆಯೂ ಬರಲಿದೆ. ಉದ್ಯೋಗ ಬಯಸಿ ನಾಡಿಗೆ ಬರುವ ಮುಗ್ದ ಜನರಿಗೆ ಇಲ್ಲಿನ ಪರಿಸರ, ರೀತಿ, ನೀತಿ ಎಲ್ಲವು ಹೊಸತಾಗಿರುತ್ತದೆ. ಮುಂದೆ ಪಟ್ಟಣ್ಣ ಇವರ ಮಧ್ಯೆ ....
ಕಾಳಿದಾಸ ಕನ್ನಡ ಮೇಷ್ಟ್ರು ಬಿಡುಗಡೆ ಮೋಕ್ಷ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರವು ಕನ್ನಡ ದಿನದಂದು ಬರಬೇಕಾಗಿತ್ತು. ಆದರೆ ಅದೇ ದಿನದಂದು ದೊಡ್ಡ ಚಿತ್ರ ಬಂದ ಕಾರಣ ಮುಂದೂಡಲಾಗಿತ್ತು. ಸಾಹಿತಿ, ನಿರ್ದೇಶಕ ಕವಿರಾಜ್ ಎರಡನೇ ಪ್ರಯತ್ನ. ಪ್ರಮೋಷನ್ ಗೀತೆಗೆ ಹತ್ತೋಂಬತ್ತು ನಾಯಕಿಯರು ಸಂಭಾವನೆರಹಿತ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಕಾರುಣ್ಯರಾಮ್, ರೂಪಿಕಾ, ಮಾನ್ವಿತಾಹರೀಶ್, ಅದಿತಿಪ್ರಭುದೇವ.ಅದಿತಿರಾವ್,ಸಂಯುಕ್ತಹೂರನಾಡು,ಸೋನುಗೌಡ ಮುಂತಾದವರು ಇರುವುದು ವಿಶೇಷ. ಶೀರ್ಷಿಕೆ ಹೇಳುವಂತೆ ಜಗ್ಗೇಶ್ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ....
ಜನರ ಎದುರು ಮನರೂಪ ೧೯೮೧ ರಿಂದ ೨೦೦೦ರ ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು ‘ಮನರೂಪ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿರುವುದು ನಿರ್ದೇಶಕ, ನಿರ್ಮಾಪಕ ಕಿರಣ್‌ಹೆಗಡೆ. ಇವರು ಸಹ ಇದೇ ಇಸವಿಯಲ್ಲಿ ಜನ್ಮತಾಳಿದ್ದಾರಂತೆ. ಇದರ ಅನುಭವದಲ್ಲಿ ಹಾರರ್ ಅಲ್ಲದ, ಸೈಕಲಾಜಿಕಲ್ ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವುದು ವಿಶೇಷ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ ಕಡೆಗಳಲ್ಲಿ ನಲವತ್ತ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಐದು ಸಮಾನ ಮನಸ್ಕರ ಯುವ ತಂಡವೊಂದು ಕಾಲ್ಪನಿಕ ಸ್ಥಳ ಪಶ್ಚಿಮ ಘಟ್ಟದ ಕರಡಿಗುಹೆ ಹೋಗಲು ಚಾರಣ ....
ನ್ಯೂರಾನ್ ವಿನೂತನ ಪ್ರಚಾರ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರ ೨೯ರಂದು ಬಿಡುಗಡೆಯಾಗುತ್ತಿರುವುದರಿಂದ ಜನರಿಗೆ ತಲುಪಲು ವಿಭಿನ್ನ ರೀತಿಯ ಪ್ರಚಾರವನ್ನು ಮಾಡಲಾಗುತ್ತಿದೆ. ಐದು ಲಕ್ಷ ಕಾಫಿ ಕಪ್‌ಗಳನ್ನು ಎಲ್ಲಾ ಕಡೆಗಳಲ್ಲಿ ವಿತರಿಸಲಾಗಿದೆ. ಹೆಸರಿಗೆ ತಕ್ಕಂತೆ ಅದರ ಅರ್ಥ ತಿಳಿಸಲು ಅದರಂತೆ ವಸ್ತ್ರಾಭರಣ ತೊಟ್ಟುಕೊಂಡ ನಾಲ್ವರು ಮುಖ್ಯ ರಸ್ತೆಗಳು, ಚಿತ್ರಮಂದಿರದ ಮುಂದೆ ಹಾಗೂ ಜನಸಂದಣಿ ಇರುವ ಕಡೆ ಓಡಾಡುತ್ತಿದ್ದಾರೆ. ಕತೆ, ಚಿತ್ರಕತೆ ಬರೆದು ಪ್ರಥಮಬಾರಿ ನಿರ್ದೇಶನ ಮಾಡಿರುವುದು ವಿಕಾಸ್‌ಪುಷ್ಪಗಿರಿ. ....
ವಿದೇಶದಲ್ಲಿ ಮುಂದಿನ ನಿಲ್ದಾಣ ಪ್ರೀಮಿಯರ್ ಷೋ ೧೯೮೪ರ ನಂತರ ಹುಟ್ಟಿದ ಜನರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಪಾರ್ಥ ಎನ್ನುವ ಇಂಜಿನಿಯರ್ ಇಂದಿನ ಯುವಜನಾಂಗದ ಪ್ರತಿನಿಧಿಯಾಗಿ ಬರುತ್ತಾರೆ. ಸದರಿ ಪಾತ್ರದಲ್ಲಿ ನಾಯಕ ಪ್ರವೀಣ್‌ತೇಜ್ ೨೬,೨೮,೩೦ ಮತ್ತು ೩೨ ವಯಸ್ಸಿನ ನಾಲ್ಕು ಶೇಡ್‌ಗಳಲ್ಲಿ ವರ್ತಮಾನ, ಭೂತ,ಭವಿಷ್ಯತ್ ಕಾಲದಲ್ಲಿ ಇರುವಂತೆ ನಟಿಸಿದ್ದಾರೆ. ವೃತ್ತಿಯಲ್ಲಿ ಕುಂಚ ಕಲಾವಿದೆ. ತನಗೆ ಹೊಂದಿಕೊಳ್ಳುವಂತ ಗುಣ ಇರುವ ಹುಡುಗ ಸಿಕ್ಕರೆ ಮದುವೆಯಾಗುವ ಬಯಕೆ ಹೊಂದಿರುವ ಮೀರಾಳಾಗಿ ....
ಎರಡು ಗಂಭೀರ ವಿಷಯಗಳ ಕಥನ ಮಾನವ ಕಳ್ಳ ಸಾಗಾಣಿಕೆ ಮತ್ತು ಲಾಕ್‌ಡ್ ಇನ್ ಸಿಂಡ್ರೋಮ್ ಎನ್ನುವ ನರರೋಗ ಸಮಸ್ಯೆ ಕುರಿತಾದ ಕತೆಯು ‘ಗಿಫ್ಟ್ ಬಾಕ್ಸ್’ ಚಿತ್ರದಲ್ಲಿ ತೋರಿಸಲಾಗಿದೆ. ಸವಾಲು, ಹೋರಾಟ ಮತ್ತು ಬೆಳವಣಿಗೆಗಳು ಜೀವನದಲ್ಲಿ ಬರುವ ಕಷ್ಟಗಳು. ಇವು ಒಂದಕ್ಕೊಂದು ನಂಟು ಹೊಂದಿರುವ ಘಟನೆಗಳು, ಭಯಾನಕ ಅನುಭವಗಳು, ಸಂಬಂದಗಳ ನಡುವೆ ಸಂಬಂದವಿಲ್ಲದ ಸಂವಹನ, ಮಾನವ ಜೀವನದ ಅನಾವರಣವನ್ನು ಹೇಳ ಹೊರಟಿದೆ. ಸನ್ನಿವೇಶಗಳು ನೈಜವಾಗಿರಲೆಂದು ಮಾನವ ಕಳ್ಳ ಸಾಗಾಣಿಕೆ ಮಾಡಿದ್ದಕ್ಕೆ ಶಿಕ್ಷೆ ಅನುಭವಿಸಿ ಹೊರಬಂದವನಿಂದ ಮಾಹಿತಿ ಪಡೆದುಕೊಂಡು ಅದರಂತೆ ದೃಶ್ಯಗಳನ್ನು ರೂಪಿಸಲಾಗಿದೆ. ಪಲ್ಲಟ ಚಿತ್ರಕ್ಕೆ ೨೦೧೬ರ ರಾಜ್ಯ ಪ್ರಶಸ್ತಿ ಪಡೆದ ....
ಕಬ್ಜ ಮಹೂರ್ತಕ್ಕೆ ಚಾಲನೆ ಉಪೇಂದ್ರ, ಆರ್.ಚಂದ್ರು ಕಾಂಬಿನೇಶನ್‌ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಏಳು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವುದು ಸುದ್ದಿಯಾಗಿತ್ತು. ಕತೆಯು ೮೦ರ ದಶಕದ ಭೂಗತಲೋಕವನ್ನು ಹೇಳಲಿದೆ. ಹಾಗಂತ ಒಂದೇ ರಾಜ್ಯದ ಕತೆಯಾಗಿರದೆ ಎಲ್ಲಾ ಕಡೆ ಅನ್ವಯವಾಗುವಂತೆ ಚಿತ್ರಕತೆ ರೂಪಿಸಲಾಗಿದೆ. ಹೊಸ ರೀತಿಯ ಭೂಗತಲೋಕದ ನೋಟವೆಂದು ಇಂಗ್ಲೀಷ್ ಅಡಿಬರಹವಿದೆ. ಮೊದಲು ಒಂದು ಏಳೆಯನ್ನು ಶಿವರಾಜ್‌ಕುಮಾರ್‌ಗೆ ಹೇಳಿದಾಗ ಇದೊಂದು ಇಂಡಿಯನ್ ಸಿನಿಮಾವಾಗುತ್ತದೆಂದು ಪ್ರಶಂಸೆ ವ್ಯಕ್ತಿಪಡಿಸಿದರು. ನಂತರ ಉಪೇಂದ್ರ ಕೇಳಿ ಇವತ್ತಿನ ....
ಬಡ್ಡಿ ಪಾವತಿಸುವವರ ಕಥೆ-ವ್ಯಥೆ ಪ್ರಚಲಿತ ಸಮಾಜದಲ್ಲಿ ಮದ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾರೆ. ಮುಂದೆ ಅಸಲಿನೊಂದಿಗೆ ಬಡ್ಡಿ ಪಾವತಿಸಲು ಏಣಗುತ್ತಾರೆ. ಆಗ ಅವರು ಏನು ಮಾಡುತ್ತಾರೆ. ಇಂತಹ ಘಟನೆಗಳು ಘಟಿಸುತ್ತಾ ಬದುಕಿನೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಇವೆಲ್ಲಾ ಅಂಶಗಳನ್ನು ದಾಖಲಿಸುವ ಜೊತೆಗೆ ಮುದ್ದಾದ ಪ್ರೀತಿ ಕತೆಯು ‘ಬಡ್ಡಿ ಮಗನ್ ಲೈಫು’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ನೋಡುಗನಿಗೆ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ಪೂರಕವಾಗಿ ಅಕ್ಕಪಕ್ಕದವರ ಕತೆಯ ಅನುಭವಗಳೆಂದು ಇಂಗ್ಲೀಷ್ ಅಡಬರಹದೊಂದಿಗೆ ಹೇಳಿಕೊಂಡಿದ್ದಾರೆ. ....
ಕಿರಿಯರ ಟೀಸರ್‌ಗೆ ಹಿರಿಯರ ಚಾಲನೆ ಸೆಸ್ಪನ್ಸ್, ಥ್ರಿಲ್ಲರ್ ಕುರಿತ ದೊಡ್ಡ ತಾರಗಣವಿರುವ ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಹಿರಿಯ ನಿರ್ದೇಶಕರುಗಳು ಅನಾವರಣಗೊಳಿಸಿದರು. ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ. ಪ್ರತಿ ಪಾತ್ರವು ಒಬ್ಬರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತದೆ ಎನ್ನುವದರೊಂದಿಗೆ ಕತೆಯು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಪಾತ್ರಗಳು ಇದರೊಂದಿಗೆ ಜೋಡಿಸಿಕೊಂಡು ಹೋಗುತ್ತದೆ. ಒಂದು ಸಾಮಾನ್ಯ ಸಂಗತಿಯನ್ನು ನಿರ್ಲಕ್ಷ ಮಾಡಿದರೆ ಸಮಾಜಕ್ಕೆ ನಷ್ಟ ಉಂಟಾಗುತ್ತದೆ. ಅಕಸ್ಮಾತ್ ಜವಬ್ದಾರಿಯಾಗಿ ನಡೆದುಕೊಂಡರೆ ಜನರಿಗೆ ಯಾವ ರೀತಿ ಸಹಾಯವಾಗುತ್ತದೆ. ಸರಿಯಾದ ಸಮಯದಲ್ಲಿ ....
ಪ್ರೇಯಸಿಯುನ್ನು ನೋಡಲು ಹೊರಟ ಮನುರಂಜನ್ ರವಿಚಂದ್ರನ್ ರವಿಚಂದ್ರನ್ ಪುತ್ರ ಮನೋರಂಜನ್‌ರವಿಚಂದ್ರನ್ ತನ್ನ ಪ್ರೇಯಸಿಯನ್ನು ನೋಡಲು ಹೋಗುತ್ತಿದ್ದಾರೆ. ಇದನ್ನು ಓದಿದ ಮೇಲೆ ಗೊಂದಲ ಆಗುವುದು ಬೇಡ. ಅವರು ‘ಮುಗಿಲ ಪೇಟೆ’ ಎನ್ನುವ ಹೊಸ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ ನಾಯಕಿಯನ್ನು ಅರಸಿಕೊಂಡು ಹೋಗುವ ಪ್ರೇಮಿಯಾಗಿ, ವಿಶಿಷ್ಟವಾದ ಹೇರ್‌ಸ್ಟೈಲ್ ಹಾಗೂ ಬಾಡಿ ಲ್ಯಾಂಗ್ವೇಜ್ ಸಲುವಾಗಿ ತಯಾರಿ ನಡೆಸುತ್ತಿದ್ದಾರೆ. ದ್ವಿಚಕ್ರ ವಾಹನದ ಮರುಪಾವತಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರೇಕಪ್ ಆಗಿ ಎರಡು ವರ್ಷಗಳ ತರುವಾಯ ಪ್ರೇಯಸಿ ಸ್ಥಳ ಮುಗಿಲಪೇಟೆಗೆ ....
ಗಾಂಧೀಜಿ ಆದರ್ಶ ಪಾಲಿಸುವ ಗೋಪಾಲ ಮಹಾತ್ಮ ಗಾಂಧೀಜಿ ಸರ್ವಕಾಲಕ್ಕೂ ಅವರ ಆದರ್ಶ ಹಾಗೂ ತತ್ವಗಳನ್ನ ಅಂದರೆ ಪರಿಸರ, ಶಿಕ್ಷಣ, ಸ್ವಚ್ಚತೆ, ಗ್ರಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಯ, ಬ್ರಷ್ಟಾಚಾರ ನಿರ್ಮೂಲನೆ ಈ ಆಶಯಗಳನ್ನು ಚಿಕ್ಕವರಾಗಿದ್ದಾಗ ಅನುಷ್ಟಾನ ಮಾಡಿದರೆ ಮಕ್ಕಳು ದೇಶದ ಆಸ್ತಿಯಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಆಶಯಗಳನ್ನು ಹೊತ್ತ ಚಿತ್ರವೇ ‘ಗೋಪಾಲಗಾಂಧಿ’ ಕತೆಯಾಗಿದೆ. ಮತ್ತು ಬಾಪೂಜಿ ಇಂದಿಗೂ ಎಷ್ಟು ಪ್ರಸ್ತುತವೆಂದು ಹೇಳಲಾಗಿದೆ. ಎರಡು ಪಾತ್ರಗಳು ಪ್ರಮುಖವಾಗಿ ಕಾಣಸಿಗುತ್ತವೆ. ಸ್ವಾತಂತ್ರ ಹೋರಾಟಗಾರರು, ನಿವೃತ್ತ ಮುಖ್ಯ ಶಿಕ್ಷಕರು, ಸಾಹಿತಿಗಳು ಆದ ರಾಮಣ್ಣ ಮೇಷ್ಟು ಗಾಂಧೀಜಿ ಪ್ರತಿನಿಧಿಯಾಗಿ ಕಂಡರೆ, ದಲಿತ ....
ಗಡಿನಾಡು ಗೀತಮಾಧುರಿ ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆ ಉದ್ಬವವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡರೂ ಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದು ಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಡಿಟಿಎಸ್ ಹಂತದಲ್ಲಿ ಬ್ಯುಸಿ ಇದೆ. ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಕಥಾನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು ಗಡಿನಾಡ ಸೇನೆಯನ್ನು ಕಟ್ಟುತ್ತಾನೆ. ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದ ದುಷ್ಟರು ಗಲಾಟೆ ಮಾಡುತ್ತಾ ನೈಚ್ಯತನದಿಂದ ....
ಹೆಸರಾಂತ ವೃತ್ತ ಚಿತ್ರದ ಶೀರ್ಷಿಕೆ ಸಿಲಿಕಾನ್ ಸಿಟಿಯಲ್ಲಿ ‘ಶಿವಾನಂದ ವೃತ್ತ’ ತಿಳಿಯದವರೂ ಯಾರು ಇಲ್ಲ. ಶೇಷಾದ್ರಿಪುರಂ ಸಮೀಪದಲ್ಲಿ ಗತಕಾಲದಿಂದ ಶಿವಾನಂದ ಪ್ರಾವಿಷನ್ ಸ್ಟೋರ್ ಇರುವ ಕಾರಣ ಅಂದಿನಿಂದಲೂ ಅಲ್ಲಿರುವ ವೃತ್ತಕ್ಕೆ ಈ ಹೆಸರನ್ನು ಇಡಲಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಶೀರ್ಷಿಕೆಯೊಂದಿಗೆ ಚಿತ್ರವೊಂದು ಸೆಟ್ಟೇರಿದೆ. ಆರು ಮಧ್ಯ ವಯಸ್ಸಿನ ಜವಬ್ದಾರಿ ಗಂಡಸರು ಬೇಜವಬ್ದಾರಿ, ಮಂಥರಗಳಂತೆ ನಡೆದುಕೊಂಡರೆ ಪರಿಣಾಮ ಏನಾಗುತ್ತದೆ. ಇವರನ್ನು ನಂಬಿಕೊಂಡಿರುವ ಕುಟುಂಬದ ಗತಿ. ಹೆಂಡತಿ ಮಲಗಿರುವಾಗ ಮನೆಗೆ ಬರುತ್ತಾರೆ. ಆಕೆ ಏಳುವ ಮುನ್ನ ಹೊರಗೆ ಹೋಗಿರುತ್ತಾರೆ. ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು ಶಿವಾನಂದ ....
ಹೆಸರಾಂತ ವೃತ್ತ ಚಿತ್ರದ ಶೀರ್ಷಿಕೆ ಸಿಲಿಕಾನ್ ಸಿಟಿಯಲ್ಲಿ ‘ಶಿವಾನಂದ ವೃತ್ತ’ ತಿಳಿಯದವರೂ ಯಾರು ಇಲ್ಲ. ಶೇಷಾದ್ರಿಪುರಂ ಸಮೀಪದಲ್ಲಿ ಗತಕಾಲದಿಂದ ಶಿವಾನಂದ ಪ್ರಾವಿಷನ್ ಸ್ಟೋರ್ ಇರುವ ಕಾರಣ ಅಂದಿನಿಂದಲೂ ಅಲ್ಲಿರುವ ವೃತ್ತಕ್ಕೆ ಈ ಹೆಸರನ್ನು ಇಡಲಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಶೀರ್ಷಿಕೆಯೊಂದಿಗೆ ಚಿತ್ರವೊಂದು ಸೆಟ್ಟೇರಿದೆ. ಆರು ಮಧ್ಯ ವಯಸ್ಸಿನ ಜವಬ್ದಾರಿ ಗಂಡಸರು ಬೇಜವಬ್ದಾರಿ, ಮಂಥರಗಳಂತೆ ನಡೆದುಕೊಂಡರೆ ಪರಿಣಾಮ ಏನಾಗುತ್ತದೆ. ಇವರನ್ನು ನಂಬಿಕೊಂಡಿರುವ ಕುಟುಂಬದ ಗತಿ. ಹೆಂಡತಿ ಮಲಗಿರುವಾಗ ಮನೆಗೆ ಬರುತ್ತಾರೆ. ಆಕೆ ಏಳುವ ಮುನ್ನ ಹೊರಗೆ ಹೋಗಿರುತ್ತಾರೆ. ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು ಶಿವಾನಂದ ....