Manku Bhai Foxy Rani.News

Thursday, January 05, 2023

  *ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಟ್ರೇಲರ್ ರಿಲೀಸ್- ಜನವರಿ 13ಕ್ಕೆ ಸಿನಿಮಾ ಬಿಡುಗಡೆ*     ಗಗನ್. ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜನವರಿ13ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯ ಭೂಮಿಕೆಯ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದಿರುವ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.        ನಿರ್ದೇಶಕ ಗಗನ್. ಎಂ ಮಾತನಾಡಿ ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ....

247

Read More...

Baana Dariyalli.Film News

Wednesday, January 04, 2023

  *"ಬಾನ ದಾರಿಯಲ್ಲಿ" ಬಂತು ಇಂಪಾದ ಹಾಡು..*    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ  "ಬಾನದಾರಿಯಲ್ಲಿ" ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನಿನ್ನನ್ನು ನೋಡಿದ ನಂತರ" ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು "ಬಾನ ದಾರಿಯಲ್ಲಿ" ಬಗ್ಗೆ ಮಾತನಾಡಿದರು.   ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ....

241

Read More...

Kai Jarida Preethi.News

Wednesday, January 04, 2023

ಹೀಗೊಂದು ಕೈ ಜಾರಿದ ಪ್ರೀತಿ

        ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಿರುವ ‘ಕೈ ಜಾರಿದ ಪ್ರೀತಿ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.  ಕಥೆ, ಚಿತ್ರಕಥೆ,ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಚೈತ್ರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಎರಡನೇ ಬಾರಿ ಪುಷ್ಪಭದ್ರಾವತಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ನಾವೆಲ್ಲಾ ಭಾರತೀಯರು’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇವರ ಮಗಳು ಮಂಜುಶ್ರೀಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತಂಗಿ ಮಧುಶೆಟ್ಟಿ.ಕೆ.ಆರ್ ಸಹ ನಾಯಕಿಯಾಗಿದ್ದಾರೆ. 

360

Read More...

Orchestra Mysuru.News

Wednesday, January 04, 2023

  *ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ ಡಾಲಿ ಗೆಳೆಯರ ಬಳಗದ "ಆರ್ಕೇಸ್ಟ್ರಾ ಮೈಸೂರು"*    *ಸಂಕ್ರಾಂತಿ ಸಮಯಕ್ಕೆ ಬರುತ್ತಿದೆ ಕನ್ನಡದ ಸಿನಿಮಾ*   ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ "ಆರ್ಕೇಸ್ಟ್ರಾ" ಗಳದೇ ಕಾರುಬಾರು. ಇಂತಹ "ಆರ್ಕೇಸ್ಟ್ರಾ" ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ.  "ಆರ್ಕೇಸ್ಟ್ರಾ" ಕಥೆ ಆಧರಿಸಿರುವ "ಆರ್ಕೇಸ್ಟ್ರಾ ಮೈಸೂರು" ಎಂಬ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ‌. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿಸಿದೆ.   ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ....

279

Read More...

Choo Mantar.First Look

Monday, January 02, 2023

ಛೂ ಮಂತರ್ ಅಂತಾರೆ ಶರಣ್         ಜನರನ್ನು ನಗಿಸುತ್ತಿರುವ ಶರಣ್ ಈಗ ಹಾರರ್ ಚಿತ್ರ ‘ಛೂ ಮಂತರ್’ದಲ್ಲಿ ನಟಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭವು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ನಾನು ಚಿಕ್ಕ ವಯಸ್ಸಿನಿಂದಲೂ ಹಾರರ್ ಚಿತ್ರಗಳ ಅಭಿಮಾನಿ. ಇಂತಹ ಸಿನಿಮಾಗಳನ್ನು ಸಾಕಷ್ಟು ನೋಡಿದ್ದೇನೆ. ನವನೀತ್ ಚೆನ್ನಾಗಿ ಕಥೆಯನ್ನು ಮಾಡಿಕೊಂಡಿದ್ದಾರೆ. ಮಿತ್ರ ತರುಣ್‌ಸುಧೀರ್ ಸಾರಾಂಶ ಕೇಳಿ ಖುಷಿಪಟ್ಟಿದ್ದಾರೆ. ಚಿಕ್ಕಣ್ಣ ಜೊತೆಗಿನ ಕಾಂಬಿನೇಷನ್ ಇದರಲ್ಲಿ ಮುಂದುವರೆದಿದೆ. ಅನೂಪ್‌ಕಟ್ಟಿಕಾರನ್ ಛಾಯಾಗ್ರಹಣ ಹೈಲೈಟ್ ಆಗಿದೆ ಎಂದರು.        ಸರ್ ಅವರೊಂದಿಗೆ ಕೆಲಸ ....

240

Read More...

Padavi Poorva.Success Meet

Monday, January 02, 2023

ಪ್ರೇಕ್ಷಕರು ಮೆಚ್ಚಿಕೊಂಡ ಪದವಿಪೂರ್ವ        ವರ್ಷದ ಕೊನೆವಾರದಲ್ಲಿ ತೆರೆಕಂಡ ‘ಪದವಿಪೂರ್ವ’ ಚಿತ್ರವು ನೋಡುಗರಿಂದ ಮೆಚ್ಚುಗೆಗೆ ವ್ಯಕ್ತವಾಗಿದೆ. ಪಕ್ಕಾ ಯೂತ್‌ಫುಲ್ ಕಥೆ ಹೊಂದಿದ್ದು, ಕಾಲೇಜು ಹಿನ್ನಲೆಯಲ್ಲಿ ನಡೆಯುವ ಕಥೆಯು ಮನರಂಜನೆಯಿಂದ ಕೂಡಿರುವುದರಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿಶಾಮನೂರು ಭವಿಷ್ಯದ ನಾಯಕನಾಗುತ್ತಾರೆ. ಈಗಾಗಲೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಯೋಗರಾಜಭಟ್ ಹಾಗೂ ರವಿಶಾಮನೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರೋತ್ಸಾಹದಿಂದ ಚಿತ್ರತಂಡವು ಖುಷಿಯಾಗಿದ್ದು ಮಾದ್ಯಮದ ಮುಂದೆ ಬಂದು ಸಂತಸವನ್ನು ....

259

Read More...

Kaanada Shakti.Film News

Monday, January 02, 2023

ಕಾಣದಶಕ್ತಿಯಲ್ಲಿ ಲತಾಹಂಸಲೇಖಾ ಹಾಡು

      ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಾಣದ ಶಕ್ತಿ’ ಸಿನಿಮಾದ ಚಿತ್ರೀಕರಣವು ಬೆಂಗಳೂರು, ಹಾವೇರಿ, ಚಿಕ್ಕಮಗಳೂರು ಕಡೆಗಳಲ್ಲಿ ಮುಗಿದಿದೆ. ಮೊನ್ನೆಯಷ್ಟೇ ಕೆ.ಎಂ.ಇಂದ್ರ ಸಾಹಿತ್ಯ ಮತ್ತು ಸಂಗೀತದ ‘ಅಮ್ಮಾನೇ ನೀನಾದೆ, ಅಮ್ಮ ನೀ ನನಗಾದೆ, ಅಕ್ಕ ಅನ್ನೋ ಅಕ್ಕರೆಯವಳೇ’ ಹಾಡಿನ ಧ್ವನಿಮುದ್ರಣವು ನಾದಬ್ರಹ್ಮ ಹಂಸಲೇಖಾ ಸ್ಟುಡಿಯೋದಲ್ಲಿ ನಡೆಯಿತು. ಅಕ್ಕನ ಸೆಂಟಿಮೆಂಟ್ ಕುರಿತಾದ ಗೀತೆಗೆ ಲತಾಹಂಸಲೇಖಾ ಧ್ವನಿಯಾದರು. ಶೃತಿ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಶೃತಿ.ಎಂ. ಮತ್ತು ಎಸ್.ಆರ್.ಸತೀಶ್‌ಬಾಬು ಇವರೊಂದಿಗೆ ಗೆಳೆಯರು ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

229

Read More...

Doddahatti Boregowda.News

Wednesday, December 28, 2022

  *"ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.*    *ಪ್ರಶಸ್ತಿ ವಿಜೇತ, ಗ್ರಾಮೀಣ ಸೊಗಡಿನ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ.*   ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲುತ್ತಿದೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ "ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ.   ನಾನು ಈ ಹಿಂದೆ "ತರ್ಲೆ ವಿಲೇಜ್",  "ಪರಸಂಗ" ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ ....

219

Read More...

Cocktail.Film News

Tuesday, December 27, 2022

ಕಾಕ್ಟೈಲ್ ಟ್ರೇಲರ್ ಬಿಡುಗಡೆ

       ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ.ಶಿವಪ್ಪ ನಿರ್ಮಾಣದ ವಿನೂತನ ಅವಿಷ್ಕಾರದ ‘ಕಾಕ್ಟೈಲ್’ ಸಿನಿಮಾದ ಟ್ರೇಲರ್‌ನ್ನು ಅಶ್ವಿನಿಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಎ೨ ಮ್ಯೂಸಿಕ್ ಸಂಸ್ಥೆಯಿಂದ ಹಾಡುಗಳು ಹೊರಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

       ಶ್ರೀರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ನಾಯಕ, ಚರಿಷ್ಮಾ ನಾಯಕಿ. ಇವರೊಂದಿಗೆ ಶೋಭರಾಜ್, ರಮೇಶ್‌ಪಂಡಿತ್, ಮಹಾಂತೇಶ್ ಹಿರೇಮಠ್, ಶಿವಮಣಿ, ಚಂದ್ರಕಲಾಮೋಹನ್, ಕರಿಸುಬ್ಬು, ಮುಂತಾದವರ ತಾರಗಣವಿದೆ.

233

Read More...

Savirupayige Svarga.News

Tuesday, December 27, 2022

ಕಿರುಚಿತ್ರ ಸಾವಿರುಪಾಯಿಗೆ ಸ್ವರ್ಗ

       ಟಿಕ್ ಟಾಕ್ ಮೂಲಕ ಹೆಸರು ಮಾಡಿರುವ ಅಲ್ಲುರಘು ಹೊಸ ಅನುಭವ ಎನ್ನುವಂತೆ ‘ಸಾವಿರುಪಾಯಿಗೆ ಸ್ವರ್ಗ’ ಎಂಬ ಕಿರುಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರು ಮಾತನಾಡಿ ಇದು ನನ್ನ ಮೊದಲ ಚಿತ್ರ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಜನರು ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಇದನ್ನು ಮಾಡಲು ಸಾಧ್ಯವಾಯಿತು. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಒಂದು ಪ್ರಯತ್ನ ಮಾಡಿದ್ದೇನೆ. ಏನೇ ತಪ್ಪಿದ್ದರೂ ತಿಳಿಸಿ ಎಂದು ಕೋರಿದರು.

      ಗೆಳೆಯನಿಗೆ ಪ್ರಾರಂಭದಲ್ಲಿ ಸಿನಿಮಾ ಮಾಡಬೇಕು ಅಂತ ಆಸೆ ಇತ್ತು. 

209

Read More...

Shri Balaji Photo Studio

Tuesday, December 27, 2022

 

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಟ್ರೇಲರ್ ಬಿಡುಗಡೆ

      ಆಕರ್ಷಕ ಶೀರ್ಷಿಕೆ ಹೊಂದಿರುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ಟ್ರೇಲರ್ ಮೊನ್ನೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಗೊಂಡಿತು. ‘ಗಂಧದಗುಡಿ’ ನಿರ್ದೇಶಕ ಅಮೋಘವರ್ಷ ಮತ್ತು ಶಿಶಿರ್ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.  

211

Read More...

Vaishampayana Theera

Tuesday, December 27, 2022

ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಬೆಸೆಯುವ ವೈಶಂಪಾಯನ ತೀರ       ಹಿರಿಯ ರಂಗಕರ್ಮಿ ರಮೇಶ್ ಬೇಗಾರಿ ಮೊದಲಬಾರಿ ನಿರ್ದೇಶನ ಮಾಡಿರುವ ‘ವೈಶಂಪಾಯನ ತೀರ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತು. ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕಥೆ ಆಧರಿಸಿದ್ದು, ಯಕ್ಷಗಾನವನ್ನು ಹಿನ್ನಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ತೋರಿಸಲಾಗಿದೆ. ಮುಖ್ಯ ಅತಿಥಿಯಾಗಿದ್ದ ಗಿರೀಶ್‌ಕಾಸರವಳ್ಳಿ ಮಾತನಾಡಿ ನಿರ್ದೇಶಕರು ಮೂರು ದಶಕಗಳಿಂದ ಕಲಾಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ....

215

Read More...

Suthradaari.Dash Song.News

Tuesday, December 27, 2022

ಸೂತ್ರಧಾರಿಯಲ್ಲಿ ಚಂದನ್‌ಶೆಟ್ಟಿ-ಸಂಜನಾಆನಂದ್ ಹಾಡು       ಮೈ ಮೂವೀ ಬಜಾರ್ ಖ್ಯಾತಿಯ ನಟ, ನಿರ್ದೇಶಕ ನವರಸನ್ ನಿರ್ಮಾಣದ ‘ಸೂತ್ರಧಾರಿ’ ಸಿನಿಮಾದ ಚಿತ್ರೀಕರಣವು ಶೇಕಡ ೯೦ರಷ್ಟು ಮುಗಿದಿದೆ. ಈಗ ಹೊಸ ವರ್ಷದ ಸಂಭ್ರಮಾಚರಣೆಗೆಂದು ಡ್ಯಾಶ್ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಚಿತ್ರದ ಮೊದಲ ಹಾಡಿನ ಶೂಟಿಂಗ್ ನೃತ್ಯ ಸಂಯೋಜಕ ಭಜರಂಗಿ ಮೋಹನ್ ಸಾರಥ್ಯದಲ್ಲಿ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆರೆಹಿಡಿಯಲಾಗಿದೆ. ತನ್ನ ಹಾಡುಗಳ ಮೂಲಕ ಹುಡುಗ, ಹುಡುಗಿಯರ ಮನಗೆದ್ದಿರುವ ಚಂದನ್‌ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಾಗಾಗಿ ಹೀರೋ ಇಂಟ್ರಡಕ್ಷನ್ ಸಾಂಗ್ ....

226

Read More...

Mr Bachelor.Film News

Tuesday, January 03, 2023

  *ಜನವರಿ 6ಕ್ಕೆ "MR ಬ್ಯಾಚುಲರ್" ಆಗಮನ.*   ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ "Mr ಬ್ಯಾಚುಲರ್" ಚಿತ್ರ ಜನವರಿ 6 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು.   ನಾನು ಮೊದಲೇ ಹೇಳಿದ ಹಾಗೆ ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ. ಏಕೆಂದರೆ ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ "ಲವ್ ಮಾಕ್ಟೇಲ್" ಚಿತ್ರ ಮಾಡಿದ್ದು. ಇನ್ನು ಚಿತ್ರದ ಬಗ್ಗೆ ‌ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಕಥೆ ಹೇಳಲು ಬಂದಾಗಲೆ ಕಥೆ ಕೇಳಿ ಸಾಕಷ್ಟು ಎಂಜಾಯ್ ಮಾಡಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ....

256

Read More...

Spooky College.News

Wednesday, December 28, 2022

ಸ್ಪೂಕಿ ಕಾಲೇಜ್ ಟ್ರೇಲರ್ ಬಿಡುಗಡೆ         ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ‘ಸ್ಪೂಕಿ ಕಾಲೇಜ್’ ಬಿಡುಗಡೆಪೂರ್ವ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಯೋಗರಾಜಭಟ್, ರಮೇಶ್‌ಅರವಿಂದ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಅನುಭವ ಪಡೆದುಕೊಂಡಿರುವ ಭರತ್ ರಚನೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ನಿರ್ದೇಶಕರು ಸಿನಿಮಾವು ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಧಾರವಾಡದ ನೂರು ವರ್ಷಗಳಿಗೂ ಹಳೆಯದಾದ ಕಡಿ ಕಾಲೇಜಿನಲ್ಲಿ ಹಾಗೂ ಕ್ಲೈಮಾಕ್ಸ್ ಭಾಗವನ್ನು ದಾಂಡೇಲಿಯ ಕಾಡಿನಲ್ಲಿ ಶೂಟ್ ಮಾಡಲಾಗಿದೆ. ಸ್ಪೂಕಿ ಎಂದರೆ ಭಯ. ಕಾಲೇಜಿನಲ್ಲಿ ಘಟನೆಗಳು ನಡೆಯುವುದರಿಂದ ....

277

Read More...

Made in Bengaluru.News

Monday, December 26, 2022

  *ಡಿಸೆಂಬರ್ 30 ರಂದು ತೆರೆಗೆ ಬರಲಿದೆ "ಮೇಡ್ ಇನ್ ಬೆಂಗಳೂರು".*   ಕೋಟ್ಯಾಂತರ ಜನರಿಗೆ ಆಶ್ರಯ ನೀಡಿರುವ ಬೆಂಗಳೂರಿನ ಕುರಿತಾದ ಚಿತ್ರ " ಮೇಡ್ ಇನ್ ಬೆಂಗಳೂರು "  ಇದೇ ಡಿಸೆಂಬರ್ 30 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯುವ ಉದ್ಯಮಿ ಸುಹಾಸ್ ಗೋಪಿನಾಥ್ ಸೇರಿದಂತೆ  ಅನ್ನು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು‌.   ನಾವು ಮೂರು ಜನ ಸ್ನೇಹಿತರು ಸೇರಿ ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಕಂಪನಿ ಆರಂಭಿಸಿದ್ದೆವು. ನಿರ್ದೇಶಕ ಪ್ರದೀಪ್ ಶಾಸ್ತ್ರಿ ಸ್ಟಾರ್ಟ್ ಅಪ್ ಹಾಗೂ ಬೆಂಗಳೂರಿನ ಮೇಲಿರುವ ಎಮೋಷನ್ ಕುರಿತಾದ ಈ ಚಿತ್ರದ ಕಥೆ ಹೇಳಿದರು. ನನಗೆ ನಾವು ಕಂಪನಿ ಆರಂಭಿಸಿದ ದಿನಗಳು ....

218

Read More...

Padavi Poorva.News

Wednesday, December 21, 2022

ಪದವಿಪೂರ್ವಗೆ ಶುಭ ಹಾರೈಸಿದ ಅಭಿಷೇಕ್‌ಅಂಬರೀಷ್                                                  ‘ಪದವಿ ಪೂರ್ವ’ ಚಿತ್ರವು ಡಿಸೆಂಬರ್ ೩೦ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಸುದೀಪ್, ಧ್ರುವಸರ್ಜಾ, ಜಗ್ಗೇಶ್ ಸಿನಿಮಾದ ಕುರಿತಂತೆ ಮಾತನಾಡಿ ಶುಭ ಹಾರೈಸಿದ್ದಾರೆ. ಕೊನೆ ಸರದಿ ಎನ್ನುವಂತೆ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್‌ಅಂಬರೀಷ್ ಟ್ರೇಲರ್‌ನ್ನು ಬಿಡುಗಡೆ ಮಾಡಿ ತಂಡದ ಕೆಲಸವನ್ನು ಕೊಂಡಾಡಿದರು.         ಉದ್ಯಮಿ ರವಿಶಾಮನೂರು ಹಾಗೂ ಯೋಗರಾಜಭಟ್ ಜಂಟಿಯಾಗಿ ನಿರ್ಮಿಸಿದ್ದಾರೆ. ನಿರ್ಮಾಪಕರ ....

254

Read More...

Doddahatti Boregowda.News

Wednesday, December 21, 2022

  *ಸದ್ಯದಲ್ಲೇ ಬರಲಿದೆ "ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್.*    *ವಿಭಿನ್ನ ಕಥೆಯ ಈ ಚಿತ್ರಕ್ಕೆ *2021* *ರಲ್ಲಿ ಬಂದಿದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗರಿ*** .     "ತರ್ಲೆವಿಲೇಜ್", "ಪರಸಂಗ", ಚಿತ್ರಗಳ ನಿರ್ದೇಶಕ ಕೆ ಎಂ ರಘು ನಿರ್ದೇಶಿಸಿರುವ " ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.    ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ "ದೊಡ್ಡಹಟ್ಟಿ ಬೋರೇಗೌಡ" ಚಿತ್ರ  2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಪ್ರಥಮ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ....

285

Read More...

Suthradaari.Film News

Wednesday, December 21, 2022

  *"ಸೂತ್ರಧಾರಿ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ಕೈ ಜೊಡಿಸಿದ ಸಲಗ ಖ್ಯಾತಿಯ ಸಂಜನಾ ಆನಂದ್.* ಕನ್ನಡದ ರ್ಯಾಪರ್ ಅಂತ ಅಂದ್ರೆ ಎಲ್ಲರಿಗೂ ಗೊತ್ತಾಗೋದು *ಚಂದನ್ ಶೆಟ್ಟಿ* ಅವರ ಹಾಡುಗಳನ್ನ ಕೇಳದ ಜನರಿಲ್ಲಾ, ಪಡ್ಡೆ ಹುಡುಗರ ಮತ್ತು ಹುಡುಗಿಯರ ಮನಗೆದ್ದ *ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಹಾಗೂ *ಮೈ ಮೂವಿ ಬಜಾರ್ ಖ್ಯಾತಿ ನವರಸನ್ ಅವರ ನಿರ್ಮಾಣದ ಚಿತ್ರ *"ಸೂತ್ರಧಾರಿ"*. ಈಗಾಗಲೆ 90% ಸಿನೆಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೆರಿದೆ, ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ನಾಯಕನಾಗಿ ....

204

Read More...

Thugs Of Ramaghada.News

Sunday, December 18, 2022

ಥಗ್ಸ್ ಆಫ್ ರಾಮಘಡ ಟ್ರೇಲರ್ ಮೆಚ್ಚಿದ ಡಾಲಿ ಧನಂಜಯ್        ‘ಥಗ್ಸ್ ಆಫ್ ರಾಮಘಡ’ ಚಿತ್ರವು ಫಸ್ಟ್‌ಲುಕ್ ಹಾಡಿನ ಮೂಲಕ ಗಮನ ಸೆಳೆದಿದ್ದು, ಈಗ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮೊನ್ನೆ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧನಂಜಯ್ ಮಾತನಾಡಿ ಇಡೀ ತಂಡದ ಕೆಲಸ ನೋಡಿ ಖುಷಿ ಆಯ್ತು. ನಿರ್ದೇಶಕರು ತುಂಬಾ ಒಳ್ಳೆ ತಂಡವನ್ನು ಕಟ್ಟಿಕೊಂಡು, ಉತ್ತಮ ಕಲಾವಿದರನ್ನು ಇಟ್ಟುಕೊಂಡು ನೈಜ ಘಟನೆ ಆಧರಿಸಿದ ಚಿತ್ರ ಮಾಡಿದ್ದಾರೆ. ಪ್ರಚಾರವನ್ನು ಕೂಡ ಕ್ರಿಯೇಟೀವ್ ಆಗಿ ಮಾಡುತ್ತಿದ್ದಾರೆ. ವರ್ಷದ ಮೊದಲ ಚಿತ್ರ ಹಿಟ್ ಆಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ....

209

Read More...
Copyright@2018 Chitralahari | All Rights Reserved. Photo Journalist K.S. Mokshendra,