ಅರ್ಧ ಶತಕದತ್ತ ಮುನ್ನುಗುತ್ತಿದೆ "ಲಂಕೆ".. ಚಿತ್ರತಂಡದಲ್ಲಿ ಸಂಭ್ರಮದ ನಗೆ. ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿ, ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗೋಷ್ಠಿ ಏರ್ಪಡಿಸಿತ್ತು. ನನ್ನ ಚಿತ್ರ ಬಿಡುಗಡೆಯ ಸಮಯದಲ್ಲಿ ಕೆಲವರು ಇದು ಒಂದುವಾರದ ಸಿನಿಮಾ ಎಂದಿದ್ದರು. ಅವರಿಗೆ ಉತ್ತರವಾಗಿ "ಲಂಕೆ" ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಐವತ್ತರ ಸಂಭ್ರಮವೂ ಹತ್ತಿರದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ಬಂದಿದೆ. ಲಾಭ ಬರುವ ನಿರೀಕ್ಷೆ ಇದೆ. ತೆಲುಗಿನ ಖ್ಯಾತನಾಮರೊಬ್ಬರು "ಲಂಕೆ"ಯ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ. ಆ ....
ಆಕಾಶವಾಣಿ ನಿಲಯಇದುಚಿತ್ರದ ಹೆಸರು ಜನರನ್ನುಚಿತ್ರಮಂದಿರಕ್ಕೆ ಸೆಳೆಯಲು ವಿನೂತನ ಶೀರ್ಷಿಕೆಗನ್ನು ಇಡುವುದು ಸದ್ಯ ವಾಡಿಕೆಯಾಗಿದೆ. ಅದರಂತೆ ಹಾರರ್‌ಕತೆ ಹೊಂದಿರುವ ‘ಇದುಆಕಾಶವಾಣಿ ಬೆಂಗಳೂರು ನಿಲಯ’ ಎಂಬ ಚಿತ್ರವೊಂದುತೆರೆಗೆ ಬರಲು ಸನ್ನಿಹಿತವಾಗಿದೆ. ಈ ಹಿಂದೆ ‘ನಾವೇ ಭಾಗ್ಯವಂತರು’ ನಿರ್ದೇಶನ ಮಾಡಿರುವ ಎಂ.ಹರಿಕೃಷ್ಣಅವರಿಗೆಎರಡನೇ ಅವಕಾಶ. ಋಷಿ ಸಂಸ್ಕ್ರತಿ ವಿದ್ಯಾಕೇಂದ್ರದ ಶಿಕ್ಷಕರಾದಗುರೂಜಿ ಶಿವಾನಂದಪ್ಪ ಬಳ್ಳಾರಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅನಾಥ ಹುಡುಗಿಯೊಬ್ಬಳು ಹಳ್ಳಿಯಲ್ಲಿ ತನಗಾದಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಟ್ಟಣಕ್ಕೆ ಬಂದುಯಾವರೀತಿರೆಗ್ರೇಟ್ ಆಗ್ರಾಳೆ. ಒಬ್ಬ ....
*ರಂಗಭೂಮಿ ಧುರೀಣ ಎಸ್.ಎಲ್.ಎನ್ .ಸ್ವಾಮಿ ನೇತೃತ್ವದಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ ನಿರ್ಮಾಣವಾದ ಕಿರುಚಿತ್ರ " ನಮೋ ಗಾಂಧಿ* ". ಭಾರತ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಗಾಂಧೀಜಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಕಿರುಚಿತ್ರ "ನಮೋ ಗಾಂಧಿ". ಸುಮಾರು ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ, ನಾಟಕ ಕ್ಷೇತ್ರದಲ್ಲೇ ಸುಮಾರು ಹದಿನೈದು ವಿಶ್ವದಾಖಲೆ ನಿರ್ಮಿಸಿರುವ, ಎದೆ ತುಂಬಿ ಹಾಡುವೆನು, ಆದರ್ಶ ದಂಪತಿಗಳು, ಕುಹು ಕುಹು, ಅಕ್ಷರ ಮಾಲೆ ಮುಂತಾದ ಕಾರ್ಯಕ್ರಮಗಳ ನಿರ್ಮಾಪಕರಾದ ಎಸ್ ಎಲ್ ಎನ್ ಸ್ವಾಮಿ ಅವರು ....
*"ಫಿಸಿಕ್ಸ್ ಟೀಚರ್"* ಆಗಿ ಬರುತ್ತಿದ್ದಾರೆ *ಸುಮುಖ* . ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ. ಈ ಹಿಂದೆ ಅವರ ತಾಯಿ ನಂದಿತ ಯಾದವ್ ನಿರ್ದೇಶನದ "ರಾಜಸ್ಥಾನ್ ಡೈರೀಸ್" ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಸುಮುಖ ಅವರಿಗಿದೆ. ಈಗ ಸುಮುಖ "ಫಿಸಿಕ್ಸ್ ಟೀಚರ್" ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ನಾಯಕನಾಗೂ ಅವರೆ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಮೊದಲಿಗೆ ಚಿತ್ರದಲ್ಲಿ ನಟಿಸುತ್ತಿರುವ ಮಂಡ್ಯ ....
*ಡಿಸೆಂಬರ್ ನಲ್ಲಿ ಸ್ಯಾಂಡಲ್ ವುಡ್ "ಬಿ ಸಿ ಎಲ್" ಸೀಸನ್ 2.*
ಕಮರ್ ಫಿಲಂ ಫ್ಯಾಕ್ಟರಿ ಮೂಲಕ ಕಮರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ "ಬಿ ಸಿ ಎಲ್" ಸೀಸನ್ 2 ಆರಂಭವಾಗಲಿದೆ. ಈ ಕುರಿತು ಇತ್ತೀಚೆಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಜಯನಗರ ವಿಧಾನಸಭಾ ಸದಸ್ಯೆ ಸೌಮ್ಯ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆ.ಬಿ.ಬಾಬು, ನರ್ಗಿಸ್ ಬಾಬು ಎಂದೇ ಖ್ಯಾತರಾಗಿದ್ದಾರೆ. ಅವರ ಪುತ್ರ ಕಮರ್ ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈ ಟೂರ್ನಿ ಕುರಿತು ಕಮರ್ ಮೊದಲು ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ಬಿಡುಗಡೆ
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್‌ನ್ನು ಲೋಕಾರ್ಪಣೆ ಮಾಡಿದ್ದರು. ನಂತರ ತಂಡವು ಬೇರೆ ಹೆಸರನ್ನು ಇಡುವುದಾಗಿ ಹೇಳಿಕೊಂಡಿತ್ತು. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ. ಈಗ ಗಾಂಧಿಜಯಂತಿ ದಿನದಂದು ರಕ್ಷಿತ್‌ಶೆಟ್ಟಿ ಕನ್ನಡದ ಟ್ರೈಲರ್‌ನ್ನು ಬಿಡುಗಡೆ ಮಾಡಲಿದ್ದಾರೆ.
ಬಿಡುಗಡೆ ಸನಿಹದಲ್ಲಿ ನಿನ್ನ ಸನಿಹಕೆ
‘ನಿನ್ನ ಸನಿಹಕೆ’ ಚಿತ್ರವುಇದೇಎಂಟರಂದುತೆರೆಕಾಣುತ್ತಿದೆ.ಆ ಉದ್ದೇಶದಿಂದಲೇಇತ್ತೀಚೆಗಷ್ಟೇನಿರ್ಮಾಪಕರುಸುದ್ದಿಗೋಷ್ಟಿ ಕರೆದಿದ್ದರು.ನಾಯಕ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವ ಸೂರಜ್‌ಗೌಡ ಮಾತನಾಡಿ, ಬೇರೆರೀತಿ ನೋಡಬೇಕು,ಅಂದುಕೊಂಡಂತೆಅದೇತರಹಮೂಡಿಬಂದಿದೆ.ಈಗಿನ ಕಾಲದಲ್ಲಿ ಪ್ರೀತಿಯನ್ನು ಹೇಗೆ ಕಾಣ್ತಾರೆ.ಸಹಮತ ಬಾಳ್ವೆಯನ್ನು ಸರ್ಕಾರವು ಅಂಗೀಕರಿಸಿದ್ದರೂ, ಸಮಾಜವುಒಪ್ಪಿಕೊಂಡಿಲ್ಲ. ಆ ವಿಚಾರವಾಗಿಕಾಮಿಕ್‌ರೀತಿಯಲ್ಲಿ ಹೇಳಲಾಗಿದೆ.ನಮ್ಮ ಸಿನಿಮಾಗೆಓಟಿಟಿದಿಂದ ಬೇಡಿಕೆ ಬಂದರೂ ನಿರ್ಮಾಪಕರೂಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂದು
ಅಕ್ಟೋಬರ್‌ಒಂದರಂದುಕಾಗೆಮೊಟ್ಟೆ ನವರಸನಾಯಕಜಗ್ಗೇಶ್‌ಅವರು ಪುತ್ರನಚಿತ್ರ ‘ಕಾಗೆ ಮೊಟ್ಟೆ’ಗೆ ಶುಭ ಹಾರೈಸಲು ಸ್ವಪತ್ನಿ ಸಮೇತ ಆಗಮಿಸಿದ್ದರು.ನಂತರ ಮಾತನಾಡುತ್ತಾಕರೋನಾ ಬರುವುದಕ್ಕೂ ಮುನ್ನವೇ ಸಿನಿಮಾ ನೋಡಿದ್ದೇನೆ. ಎರಡು ದಿನ ಆದರೂ ನನ್ನ ಮೈಂಡ್‌ನಿಂದ ದೃಶ್ಯಗಳು ಹೋಗಿರಲಿಲ್ಲ. ನಿಜಕ್ಕೂಇಂಥಚಿತ್ರತೆಗೆಯುವುದು ನನ್ನಿಂದ ಸಾಧ್ಯವಿಲ್ಲ. ನಿರ್ದೇಶನ, ನಿರ್ಮಾಪಕ ಹಾಗೂ ವಿತರಕನಾಗಿಅನುಭವ ಹೊಂದಿದ್ದೇನೆ. ಕತೆಯಲ್ಲಿಕುತೂಹಲಕಾರಿ ಅಂಶಗಳು ತುಂಬಿಕೊಂಡಿದೆ.ಚಿತ್ರರಂಗದಲ್ಲಿಯಶಸ್ಸು ಸುಲಭವಲ್ಲ. ತಾಳ್ಮೆ ಬಹಳ ಮುಖ್ಯ ನನಗೆ ಈಗಲೇ ಯಶಸ್ಸು ಸಿಗಬೇಕು. ಮುಂದಿನ ಗಳಿಗೆಗೆ ದಕ್ಕಬೇಕುಎನ್ನುವುದುತಪ್ಪು.೮೦ರಲ್ಲಿ ನಾನು ಚಿತ್ರರಂಗಕ್ಕೆ ....
*"ದಿಲ್ ಪಸಂದ್" ಗೆ ಚಾಲನೆ ನೀಡಿದ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್.* ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ. ನಿಶ್ವಿಕ ನಾಯ್ಡು - ಮೇಘ ಶೆಟ್ಟಿ ನಾಯಕಿಯರು. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು. ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು. ಚಿತ್ರಕ್ಕೆ "ದಿಲ್ ಪಸಂದ್" ಎಂದು ಹೆಸರಿಡಲಾಗಿದೆ. ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರಾಗಿ ನಿಶ್ವಿಕನಾಯ್ಡು ಹಾಗೂ ಮೇಘ ಶೆಟ್ಟಿ ಅಭಿನಯಿಸುತ್ತಿದ್ದಾರೆ. ....
*ಅಕ್ಟೋಬರ್ 1ರಂದು ಬಿಡುಗಡೆಯಾಗಲಿದೆ ಪಿ.ಶೇಷಾದ್ರಿ ನಿರ್ದೇಶನದ "ಮೋಹನದಾಸ".* ಮಹಾತ್ಮ ಗಾಂಧಿ ಅವರ ಬಾಲ್ಯದ ಬಗ್ಗೆ ತಿಳಿಸುವ ಈ ಚಿತ್ರ ಗಾಂಧಿ ಜಯಂತಿ ವೇಳೆ ತೆರೆಗೆ. ಕನ್ನಡಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ಪಿ.ಶೇಷಾದ್ರಿ. ಇದೇ ಅಕ್ಟೋಬರ್ 1 ರಂದು ಶೇಷಾದ್ರಿ ಅವರು ನಿರ್ದೇಶಿಸಿರುವ "ಮೋಹನದಾಸ" ಚಿತ್ರ ತೆರೆಗೆ ಬರಲಿದೆ. ಈ ವಿಷಯವನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಬ ಈ ವರೆಗೂ ಗಾಂಧೀಜಿಯವರ ಕುರಿತು ಸಾಕಷ್ಟು ಸಾಕ್ಷ್ಯಚಿತ್ರ ಹಾಗೂ ಪುಸ್ತಕಗಳು ಬಂದಿವೆಯಾದರೂ, ಚಲನಚಿತ್ರಗಳು ಬಂದಿರುವುದು ಕಡಿಮೆ. ಬಾಲ್ಯದ ಕುರಿತಾದ ಚಿತ್ರ ಬಂದಿಲ್ಲ. ರಿಚರ್ಡ್ ಆಟನ್ ....
ನೀರೆಯರಿಗೆಆತ್ಮವಿಶ್ವಾಸತುಂಬುವಫ್ಯಾಶನ್ ಷೋ ಫ್ಯಾಶನ್ ಷೋ ಅಂದರೆಅಲ್ಲಿಅಂದ,ಚಂದ,ಶೇಪ್, ವಯಸ್ಸು ಮುಂತಾದವುಇರುವವರನ್ನುರ‍್ಯಾಂಪ್ ವಾಕ್‌ದಲ್ಲಿ ಭಾಗವಹಿಸಲು ಅರ್ಹತೆಕೊಡುವುದು ಸಾಮಾನ್ಯವಾಗಿದೆ. ಆದರೆಜ್ಯೋತ್ಸಾವೆಂಕಟೇಶ್ ಮತ್ತು ಸಬರೇಷ್‌ಬಾಲಕೃಷ್ಣನಾಯ್ಡು ಸಾರಥ್ಯದಜಾಸ್ ಸ್ಟುಡಿಯೋದವರುಇದೆಲ್ಲಾವನ್ನು ಪರಿಗಣಿಸದೆ, ‘ಮಿಸ್‌ಅಂಡ್ ಮಿಸಸ್‌ಕರ್ನಾಟಕ ೨೦೨೧’ ಅಡಿಷನ್‌ಸ್ಪರ್ಧೆಯಲ್ಲಿ ಪಾಲ್ಗೋಳಲು ಅವಕಾಶ ಮಾಡಿಕೊಟ್ಟಿದ್ದರು.ಇದಕ್ಕೆಯಾವುದೇರೀತಿಯ ನೊಂದಣಿ ಶುಲ್ಕವಿರುವುದಿಲ್ಲ. ಪ್ರಸಕ್ತ ಪಿಡುಗು ಬಂದಿರುವಸಂದರ್ಭದಲ್ಲಿ ಇವರುಗಳಿಗೆ ಬದುಕಿನಲ್ಲಿಆತ್ಮವಿಶ್ವಾಸ, ಪ್ರೋತ್ಸಾಹ ಹಾಗೆಯೇಯಾವರೀತಿ ....
ಸೇನಾಪುರಕ್ಕೆ ಗಾಯಕಿ ಅನನ್ಯ ಭಟ್ ಹಿರೋಯಿನ್ | ಟೀಸರ್ ರಿಲೀಸ್ ಅಕ್ರಮ ಗಣಿ ಧಣಿಗಳ ಸತ್ಯ ಘಟನೆಗಳು ಒಂದು ಕಾಲಘಟ್ಟದಲ್ಲಿ ಅಕ್ರಮ ಗಣಿ ದಂಧೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಬಿಸಿಲು ನಾಡಿನ ಒಡಲಲ್ಲಿ ನಡೆದಿದ್ದ, ದಂಧೆಯ ಕಬಂಧ ಬಾಹುಗಳು ಕರಾವಳಿಯ ಕಿನಾರೆಗಳವರೆಗೂ ಮೈಚಾಚಿಕೊಂಡಿತ್ತು. ಇಂತಹ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು ’ಸೇನಾಪುರ’ ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಕುಂದಾಪುರದ ನವ ಪ್ರತಿಭೆ ಗುರುಸಾವನ್. ಇವರು ಹೇಳುವಂತೆ ಮೊದಲು ವೆಬ್‌ಸೀರೀಸ್‌ಗೆ ಅಂತಲೇ ಮಾಡಲು ಚಿಂತನೆ ನಡೆಸಲಾಗಿತ್ತು. ಮುಂದೆ ಅದು ಚಿತ್ರವಾಗಿ ರೂಪಾಂತರಗೊಂಡಿತು. ಸಮಾಜ ಮತ್ತು ಪ್ರಕೃತಿ ಎಲ್ಲರಿಗೂ ....
ಮೊದಲ ಹಂತ ಮುಗಿಸಿದ ಸುಕನ್ಯದ್ವೀಪ ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರವಿರಬಹುದು ಎಂದುಕೊಳ್ಳುತ್ತಾರೆ. ಆದರೆ ಅಂಥಾ ಯಾವುದೇ ಸಸ್ಪೆನ್ಸ್ , ಥ್ರಿಲ್ಲರ್ ಇರದೆ ಪಕ್ಕಾ ಫ್ಯಾಮಿಲಿ ಲವ್ ಎಂಟರ್‌ಟೈನರ್ ಕಥಾಹಂದರಕ್ಕೆ ಹಾಸ್ಯದ ಟಚ್ ಕೊಟ್ಟು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಎಂ.ಡಿ. ಅಫ್ಜಲ್ ಮಾಡಿದ್ದಾರೆ. ಸೂಪರ್ ಸ್ಟಾರ್ ಪತ್ರಿಕೆಯ ಸಂಪಾದಕರೂ ಆದ ಇವರು ಈಗಾಗಲೇ ಮೊಬೈಲ್ ರಾಜ ಎನ್ನುವ ಚಿತ್ರ ನಿರ್ದೇಶಿಸಿದ್ದು, ಅದಿನ್ನೂ ಬಿಡುಗಡೆಯಾಗಿಲ್ಲ, ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಹಂತಕ್ಕೆ ಅಣಿಯಾಗಿದ್ದು, ಅದಕ್ಕೂ ಮುನ್ನ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರೀಕರಣದ ....
ಈವಾರ ತೆರೆಗೆ ಜನುಮದ ಜಾತ್ರೆ ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್ . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯೋ ಪ್ರೇಮಕಥೆಯಾಗಿದ್ದರೂ, ಚಿತ್ರಕಥೆಯಲ್ಲಿ ಒಂದಷ್ಟು ಹೊಸ ವಿಷಯಗಳನ್ನು ತೆಗೆದುಕೊಳ್ಳಲಾಗಿದೆ. ಪ್ರೇಮಿಗಳಿಬ್ಬರು ....
ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!
ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಯಾವತ್ತಿಗೂ ಒಂದು ವಿಶೇಷ ಪ್ರೀತಿ ಜಾರಿಯಲ್ಲಿರುತ್ತೆ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾಗೆ ಕಥೆಗೆ ತಕ್ಕುದಾಗಿ ‘ಬಯಲುಸೀಮೆ’ ಎಂಬ ಶೀರ್ಷಿಕೆಯಿದಲಾಗಿದೆ. ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರೋ ಈ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಮೂಡಿ ಬಂದಿದೆ ಎಂಬ ಆತ್ಮವಿಶ್ವಾಶ ಚಿತ್ರತಂಡದಲ್ಲಿದೆ.
ಚಡ್ಡಿ ದೋಸ್ತ್ ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲಾ ಕಡೆಯಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ. ಆಸ್ಕರ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಲೋಕೇಂದ್ರಸೂರ್ಯ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ....
ಕುಶಲಕರ್ಮಿಗಳ ಉತ್ತೇನಕ್ಕಾಗಿ ವಿಶೇಷ ಸ್ಟುಡಿಯೋ ಉದ್ಘಾಟನೆ! ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್ ಲಾಂಚ್. ಫ್ಯಾಶನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್. ಈ ಸಂಸ್ಥೆಯೀಗ ಮತ್ತೊಂದು ಸಾಹಸದ ಮೈಲಿಗಲ್ಲು ಸ್ಥಾಪಿಸುವಲ್ಲಿ ಮೊದಲ ಹೆಜ್ಜೆಯಿರಿಸಿದೆ. ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಚೆಂದದ ಯಾನವೊಂದಕ್ಕೆ ಇದೀಗ ಚಾಲನೆ ಸಿಕ್ಕಿದೆ. ದೇಸೀ ಸೊಗಡಿನ ಕಾಸ್ಟ್ಯೂಮ್‌ಗಳ ಮೂಲಕ, ಕುಶಲಕರ್ಮಿಗಳಿಂದಲೇ ತಯಾರಾದ ವಿಶೇಷ ಬಟ್ಟೆಗಳ ಮೂಲಕವೇ ವಿಶಿಷ್ಟವಾದೊಂದು ಫ್ಯಾಶನ್ ಶೋ ನೆರವೇರಿದೆ. ಈ ಮೂಲಕ ಕುಶಲಕರ್ಮಿಗಳ ವಿನ್ಯಾಸಗಳನ್ನು ....
ಪ್ರೇಕ್ಷಕರ ಮನದೊಂದಿಗೆ ಗಳಿಕೆಯಲ್ಲೂ ಗೆಲ್ಲುತ್ತಿದೆ "ಲಂಕೆ". ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಗಣಪತಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಮ್ಮ "ಲಂಕೆ" ಯಶಸ್ಸು ಕಾಣುತ್ತಿರುವುದಕ್ಕೆ ಪ್ರಮುಖ ಕಾರಣರಾದ ಮಾಧ್ಯಮ ಹಾಗೂ ಸಿನಿ ರಸಿಕರಿಗೆ ಅನಂತ ಧನ್ಯವಾದ ತಿಳಿಸುತ್ತೇನೆ . ಚಿತ್ರ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಮುಂದುವರೆಯುತ್ತಿದೆ. ಹಣ ಗಳಿಕೆಯೂ ಉತ್ತಮವಾಗಿದೆ. ಇದು ನನ್ನ ಮಾತಲ್ಲ ....
ಅಕ್ಷಿ ಹಾಡುಗಳ ಸಮಯ ನೇತ್ರದಾನಕುರಿತಂತೆ ‘ಅಕ್ಷಿ’ ಸಿನಿಮಾವುಅತ್ಯುತ್ತಮಚಿತ್ರವೆಂದು ೬೭ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.ಪ್ರಚಾರದಎರಡನೇ ಹಂತವಾಗಿಚಿತ್ರದಆಡಿಯೋ ಬಿಡುಗಡೆ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ಸ್ಪರ್ಶಾರೇಖಾ ಮತ್ತು ವಿಜಯ್‌ಸೂರ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಕತೆ,ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಮನೋಜ್‌ಕುಮಾರ್ ನುಡಿಗಳ ಪರಿ ಹೀಗಿತ್ತು. ೨೦೧೯ರಲ್ಲಿ ಶುರು ಮಾಡಿ, ೫೫ ದಿನಗಳ ಕಾಲ ಚಿಕ್ಕಮಗಳೂರಿನ ಸಣ್ಣ ಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು.ಡಾ.ರಾಜ್‌ಕುಮಾರ್‌ತೀರಿಕೊಂಡಾಗ, ಕಣ್ಣನ್ನುದಾನ ಮಾಡಿದ ಬಗ್ಗೆ ....
ನೋಡಿದವರ ಕಣ್ಣಂಚಲ್ಲಿ ನೀರು ತರಿಸಿದ "ಆರಾಧ್ಯ".
ಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರಕ್ಕೆ ಯತಿರಾಜ್ ಸಾರಥ್ಯ..
ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಯತಿರಾಜ್, ಕಳೆದವರ್ಷ ಕೊರೋನ ಬಂದ ಮೇಲೆ ಸುಮಾರು ಹದಿನೇಳು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ." ಆರಾಧ್ಯ " ಹದಿನೆಂಟನೇ ಕಿರುಚಿತ್ರ.
ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಭಿನಯ ಕೂಡ ಮಾಡಿದ್ದಾರೆ.
ಅಪ್ಪ -ಮಗಳ ಸೆಂಟಿಮೆಂಟ್ ಸನ್ನಿವೇಶಗಳು ಈ ಕಿರುಚಿತ್ರದ ಹೈಲೆಟ್.