ಅಗಸ್ಟ್ ೧೫ ರಂದು ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ " ಚಿತ್ರದ ಶೀರ್ಷಿಕೆ ಹಾಗೂ ಸ್ಕ್ರಿಪ್ಟ್ ಪೂಜೆ ಜಯನಗರದ ಅಭಯ ಗಣಪತಿ ಹಾಗೂ ನಿಮಿಷಾಂಬ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು, ಚಿತ್ರದ ಪೂಜಾ ಸಂದರ್ಭದಲ್ಲಿ ಚಲನ ಚಿತ್ರ ಪ್ರಚಾರ ಕರ್ತ ಸುಧೀಂದ್ರ ವೆಂಕಟೇಶ್ ರವರು ಹಾಜರಿದ್ದರು. " ನಗುವಿನ ಹೂವುಗಳ ಮೇಲೆ" ಹೆಸರು ಹೇಳಿದಂತೆ ಇದು ಒಂದು ಪ್ರೇಮಕಥಾ ಹಂದರ ವಾಗಿದ್ದು ವೆಂಕಟ್ ಭಾರದ್ವಾಜ್ ರವರ 10ನೇ ಚಿತ್ರವಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಶ್ರೀ ಕೆಕೆ ರಾಧಾ ಮೋಹನ್ ನಿರ್ಮಾಣ ಮಾಡುತ್ತಿದ್ದಾರೆ. ರಾಧಾ ಮೋಹನ್ ಅವರು ತೆಲುಗು ಚಿತ್ರರಂಗದಲ್ಲಿ ಸುಮಾರು ಹತ್ತು ದೊಡ್ಡ ಚಿತ್ರಗಳನ್ನು ....
“ಕರಿಯ ಐ ಲವ್ ಯೂ”ಶೂಟಿಂಗ್ ಸ್ಟಾರ್ಟ್
ಶ್ರೀ ಮಂಜು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ“ಕರಿಯ ಐ ಲವ್ ಯೂ” ಚಿತ್ರದಚಿತ್ರೀಕರಣವುಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.
ಜಲ್ಲಿಕಟ್ಟು“ಂ”ಸರ್ಟಿಫಿಕೇಟ್ ಶ್ರೀ ಬೀರೇಶ್ವರ ಫಿಲಂ ಮೇಕರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ನಿರ್ಮಿಸಿರುವ “ಜಲ್ಲಿಕಟ್ಟು” ಚಿತ್ರವನ್ನು ಸೆನ್ಸಾರ್ನವರು ವೀಕ್ಷಿಸಿ “ಎ” ಸರ್ಟಿಫಿಕೇಟ್ ನೀಡಿದ್ದಾರೆ. ಎಲ್ಲಾ ವರ್ಗದ ಜನಗಳನ್ನು ರಂಜಿಸಲಿರುವ ಈ ಚಿತ್ರವು ದೀಪಾವಳಿ ಕೊಡುಗೆಯಾಗಿ ....
ಕಾಶ್ಮೀರದಲ್ಲಿ ಓ ಮೈ ಲವ್ ಚಿತ್ರದ. ಟೈಟಲ್ ಸಾಂಗ್ ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಓ ಮೈ ಲವ್ ಚಿತ್ರದ ಟೈಟಲ್ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಅಕ್ಟೋಬರ್ ತಿಂಗಳಲ್ಲಿ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗುವುದು ಎಂದು ನಿರ್ದೇಶಕ ಸ್ಮೈಲ್ ಶ್ರೀನು ತಿಳಿಸಿದ್ದಾರೆ. ಅಲ್ಲದೆ ಇದೇ ೩೦ರಿಂದ ಹನುಮಗಿರಿ ಬೆಟ್ಟ, ರಾಮನಗರ, ಚನ್ನಪಟ್ಟಣ, ನಾಗರಬಾವಿ, ಹೆಚ್.ಎಂ.ಟಿ.ಗ್ರೌಂಡ್, ಯೂನಿವರ್ಸಿಟಿ ರಸ್ತೆಯಲ್ಲಿ ಫೈಟ್, ಚೇಸಿಂಗ್ ಸೀನ್ ಗಳ ಚಿತ್ರೀಕರಣ ನಡೆಯಲಿದೆ.. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ....
ಹಿನ್ನೆಲೆ ಸಂಗೀತದಲ್ಲಿ ಮಾರಿಗೋಲ್ಡ್ ! ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ, ತೀರ್ಥಳ್ಳಿ ಹುಡುಗ ದಿಗಂತ್ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ’ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ....
ಸೆ.೨ನೇ ವಾರ ಜಗ್ಗೇಶ್ ಪುತ್ರನ ಕಾಗೆಮೊಟ್ಟೆ ನವರಸನಾಯಕ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ ಕಾಗೆಮೊಟ್ಟೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ, ಅದೇರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಇನ್ನೂ ಮೊಟ್ಟೆಯಂತಿರುವ ಇವರು ಬೆಳೆದಮೇಲೆ ಯಾವರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ಗೆ ಸಿದ್ದವಾಗಿರುವ ....
ಶುಗರ್ ಲೆಸ್ ಚಿತ್ರದಲ್ಲಿ ಶರಣ್ ಧ್ವನಿ ಆ.೧೬ಕ್ಕೆ ಟೈಟಲ್ ಸಾಂಗ್ ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಶುಗರ್ ಲೆಸ್. ಬಿಡುಗಡೆಗೆ ಸಿದ್ದವಾಗಿರಯವ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ. ತನ್ನ ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಹಾಸ್ಯನಟ ಶರಣ್ ಅವರು ಹಿನ್ನೆಲೆ ಧ್ವನಿ ನೀಡುವ ಮೂಲಕ ಸಿನಿಮಾದ ಕಂಟೆಂಟ್ ಹಾಗೂ ಪ್ರಮುಖ ಪಾತ್ರಗಳನ್ನು ....
ಹೊಂಬಾಳೆ ಫಿಲ್ಮ್ಸ್ ನಿಂದ ಎಲ್ಲರಿಗೂ ಶುಭಾಶಯಗಳು.
ಸಿನಿಮಾರಂಗದಲ್ಲಿನ ನಮ್ಮ ಪಯಣ ನಿಮ್ಮ ಮತ್ತು ಪ್ರೇಕ್ಷಕರ ಪ್ರೀತಿಯಿಂದ ಖುಷಿಯಾಗಿ ಸಾಗುತ್ತಿದೆ.
ನಮ್ಮ ೧೧ ನೇ ಸಿನಿಮಾ "ಕಾಂತಾರ" ಮುಹೂರ್ತ ಇಂದು ಮಧ್ಯಾಹ್ನ ೨.೨೧ ರ ಶುಭಗಳಿಗೆಯಲ್ಲಿ ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸುತ್ತಿದ್ದು, ಅವರೇ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಿಷಬ್ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅಚ್ಯುತಕುಮಾರ್, ಕಿಶೋರ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪತ್ರಿಕಾಗೋಷ್ಠಿಯ ಪೂರ್ವವಿವರ ಎಲಿಫೆಂಟ್ ಪಾತ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಸೀತಾರಾಮ್ ಬಿನೋಯ್ ಕೇಸ್ ನಂಬರ್ ೧೮. ಚಿತ್ರಕ್ಕೆ ದೇವಿ ಪ್ರಸಾದ್ ಶೆಟ್ಟಿ, ಸಾತ್ವಿಕ್ ಹೆಬ್ಬಾರ್ ಹಾಗು ಎಂ ಆರ್ ಪಿ ಬಂಡವಾಳ ಹೂಡಿದ್ದು ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಇದು ವಿಜಯರಾಘವೇಂದ್ರ ಅವರ 50ನೇ ಚಿತ್ರ. ಕಳೆದ ವರ್ಷದ ಆಗಸ್ಟ್ನಲ್ಲಿ ಲಾಕ್ ಡೌನ್ ತೆರವಾದ ಕೂಡಲೇ ಕೇವಲ ಇಪ್ಪತ್ತು ದಿನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ಕೋಣಂದೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ರಾಜ್ಯದಲ್ಲಿ ....
"ಓಲ್ಡ್ ಮಾಂಕ್" ಟ್ರೇಲರ್ ಬಿಡುಗಡೆ ಮಾಡಿದ ಪವರ್ ಸ್ಟಾರ್. ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ "ಓಲ್ಡ್ ಮಾಂಕ್" ಚಿತ್ರದ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ್ದ, ಪುನೀತ್ ರಾಜ್ಕುಮಾರ್, ಶ್ರೀನಿ ಬಹಳ ದಿನಗಳಿಂದ ನನಗೆ ಪರಿಚಯ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಚಿತ್ರದ ಕಥೆ ಆರಂಭವಾಗುವುದು ವೈಕುಂಠದಲ್ಲಿ. ಮಹಾವಿಷ್ಣು ಹಾಗೂ ನಾರದರ ಸಂಭಾಷಣೆ ಮೂಲಕ. ಓಲ್ಡ್ ಮಾಂಕ್ ಅಂದರೆ ಹಿರಿಯ ಸನ್ಯಾಸಿ ಎಂದು ಶೀರ್ಷಿಕೆ ....
"ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ. ಬಿಡುಗಡೆಗೂ ಪೂರ್ವದಲ್ಲೇ ಚಿತ್ರದ ಮಡಿಲಿಗೆ ಅನೇಕ ಪ್ರಶಸ್ತಿಗಳು. ಶ್ರೀ ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ "ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ವಾರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆಯೂ ದೊರಕಿದೆ. ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ನಾನು ಹೈದರಾಬಾದ್ ಮೂಲದವನು. ಇದು ನನ್ನ ಮೊದಲ ಚಿತ್ರ. ಚಿತ್ರ ಮುಗಿಯುವಷ್ಟರಲ್ಲಿ ಕನ್ನಡ ಕಲಿತ್ತಿದ್ದೀನಿ. ವಿಭಿನ್ನ ಕಥೆಯಿಟ್ಟುಕೊಂಡು ಸಿನಿಮಾ ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ....
ಕ್ಯಾಬ್ಚಾಲಕರಕಥೆ-ವ್ಯಥೆ ಹಳದಿ ಬೋರ್ಡ್ಇರುವ ಕಾರುಗಳಿಗೆ ಟ್ಯಾಕ್ಸಿಎನ್ನುತ್ತಾರೆ. ಇದನ್ನು ಚಲಾಯಿಸುವ ಚಾಲಕರ ಬದುಕು ಬವಣೆ ಇವುಗಳ ಕುರಿತಾದ ‘ಯಲ್ಲೋ ಬೋರ್ಡ್’ ರೋಮ್ಯಾಂಟಿಕ್ಥ್ರಿಲ್ಲರ್ ಹಾಗೂ ಸುಂದರ ಪ್ರೀತಿಕತೆಇರುವಚಿತ್ರವೊಂದುಜನರಿಗೆತೋರಿಸಲು ಸಜ್ಜಾಗುತ್ತಿದೆ. ಕರ್ನಾಟಕದ ನಾನಾ ಭಾಗಗಳು, ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರುವಕ್ಯಾಬ್,ಉಬರ್,ಓಲೋ ಡ್ರೈವರ್ಗಳಿಗೂ ಮನುಷ್ಯತ್ವಇರುತ್ತದೆಎಂಬುದನ್ನು ಹೇಳಿದ್ದಾರೆ. ಜವಬ್ದಾರಿಯುತಚಾಲಕನೊಬ್ಬತನ್ನ ಪ್ರೇಮಿಯ ವ್ಯಾಸಾಂಗಕ್ಕೆ ಸಹಾಯ ಮಾಡುತ್ತಿರುತ್ತಾನೆ. ಇದರ ಮಧ್ಯೆ ಕೊಲೆ ನಡೆಯುತ್ತದೆ. ಅದರಆರೋಪವನ್ನು ಚಾಲಕನ ಮೇಲೆ ಹೊರಿಸಲಾಗುತ್ತದೆ.ಆ ....
ಯಜಮಾನರು ನನಗಿಂತ ಮುಂಚೆ ಹೋದರು–ಡಾ.ಭಾರತಿವಿಷ್ಣುವರ್ಧನ್ ಯಜಮಾನರ ಮಡಿಲಲ್ಲಿ ಮಲಗಿ ನಾನು ಹೊರಟು ಹೋಗಬೇಕು ಎಂದುಯಾವಾಗಲೂ ಹೇಳುತ್ತಿದ್ದೆ.ಆದರೆಅವರು ಬುದ್ದಿವಂತರು.ನನ್ನ ತೋಳಲ್ಲಿ ಮಲಗಿಕೊಂಡುಎದ್ದು ಹೋದರುಎಂದುಡಾ.ಭಾರತಿವಿಷ್ಣುವರ್ಧನ್ ಹೇಳುತ್ತಾ ಹೋದರು. ಅಳಿಯ,ನಟ ಅನಿರುದ್ದ ನಿರ್ದೇಶನ ಮತ್ತು ನಿರ್ಮಾಣದ ‘ಬಾಳೆ ಬಂಗಾರ’ ಸಾಕ್ಷಚಿತ್ರ ಪ್ರದರ್ಶನ ನಂತರ ಮಾದ್ಯಮದಎದುರು ಅಂತರಾಳದ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ನಾನು, ವಿಷ್ಣುವರ್ಧನ್ ಸ್ಟಾರ್ಗಳು ಆಗಿದ್ದವರು.ಆದರೆಒಂದುಕಾಲದಲ್ಲಿಗಂಜಿಕುಡಿದುಆರು ತಿಂಗಳು ಬದುಕಿದ್ದೇವೆ. ಯಜಮಾನರಿಗೆ ಅವಕಾಶಗಳು ಇಲ್ಲದ ....
ಸ್ಟಾರ್ ಪಟ್ಟ ಸಿಕ್ಕಿದ್ದೇ ಥಿಯೇಟರ್ನಿಂದ–ರವಿಚಂದ್ರನ್ ನಾವೆಲ್ಲಾ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಿ ಬೆಳೆದವರು.ನಮ್ಮನ್ನು ಸ್ಟಾರ್ ಮಾಡಿದ್ದೇ ಚಿತ್ರಮಂದಿರಗಳು. ಹಾಗಾಗಿ ಮೊದಲು ಪ್ರಾಧಾನ್ಯತೆಕೊಡುವುದುಥಿಯೇಟರ್ಗೆಎಂದುರವಿಚಂದ್ರನ್ ಹೇಳಿದರು. ‘ದೃಶ್ಯ-೨’ ಸಿನಿಮಾದ ಕೊನೆ ದಿನದಚಿತ್ರೀಕರಣವು ಕಾಮಾಕ್ಷಿಪಾಳ್ಯದಲ್ಲಿರುವ ವಿಕ್ಟರ್ಟಾಕೀಸ್ದಲ್ಲಿ ನಡೆಯುತ್ತಿತ್ತು. ಸ್ಥಳಕ್ಕೆ ಪತ್ರಕರ್ತರು ಭೇಟಿ ನೀಡಿದಾಗಎಲ್ಲರೂ ಅನುಭವಗಳನ್ನು ಹಂಚಿಕೊಂಡರು.‘ದೃಶ್ಯ’ ಮೂಲಕ ಮತ್ತೆಕನ್ನಡಚಿತ್ರರಂಗಕ್ಕೆ ಬಂದೆ.ಮೂಲ ಮಲೆಯಾಳಿ ಆದರೂಕನ್ನಡದಲ್ಲಿ ಸಿಕ್ಕಷ್ಟು ಪ್ರೀತಿ ....
"ಲಂಕೆ" ಹಾಡು ಬಿಡುಗಡೆ ಮಾಡಿ ಶುಭ ಕೋರಿದ ಡಾಲಿ ಧನಂಜಯ. ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರದ ಹಾಡುಗಳನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದರು. ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ & ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಹಾಡುಗಳು ನೋಡಿದೆ.ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ ಎಂದ ಡಾಲಿ ಧನಂಜಯ, ಸರ್ಕಾರ ಆದಷ್ಟು ಬೇಗ ೧೦೦% ಅವಕಾಶ ನೀಡಲಿ. ಕೊರೋನ ಕಡಿಮೆಯಾಗಿ ಚಿತ್ರಮಂದಿರ ತುಂಬಿ ತುಳುಕುವ ದಿನಗಳು ಬೇಗ ಬರಲಿ ಎಂದು ಆಶಿಸಿದರು. ನಾಯಕ ಯೋಗಿ ಕೂಡ, ಆಡಿಯೋ ರಿಲೀಸ್ ಮಾಡಿಕೊಟ್ಟ ಗೆಳೆಯ ಡಾಲಿ ಅವರಿಗೆ ಧನ್ಯವಾದ ತಿಳಿಸಿ, ನಾನು ....
ಬಿಗ್ ಬಾಸ್ ಖ್ಯಾತಿ ರಾಜೀವ್ ಅಭಿನಯದ "ಉಸಿರೇ ಉಸಿರೇ" ಚಿತ್ರ ಆರಂಭ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಕಿಚ್ಚ ಸುದೀಪ. ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಿ ಜನಮಸೂರೆಗಂಡಿದ್ದ ರಾಜೀವ್"ಉಸಿರೇ ಉಸಿರೇ" ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಬಾದ್ ಶಾ ಕಿಚ್ಚ ಸುದೀಪ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ. ಅವನಲ್ಲಿ ಈಗಲೂ ಏನೋ ಒಂಥರ ಮುಗ್ಧತೆ ಇದೆ. ಯಾವುದನ್ನು ಬೇಗ ನಂಬಿ ಬಿಡುತ್ತಾನೆ. ಪುಣ್ಯ. ಅವನ ಪಕ್ಕದಲ್ಲಿರುವ ಹೆಂಡತಿ ಜಾಣೆ. ಆ ಹುಡುಗಿ ಇವನಿಗೆ ....
"ಮೇಡ್ ಇನ್ ಬೆಂಗಳೂರು" ಚಿತ್ರದಲ್ಲಿ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ. ನಾಯಕನಾಗಿ ಮಧುಸೂದನ್ ಗೋವಿಂದ್ ಅಭಿನಯ. ಬೆಂಗಳೂರಿನ ಭವ್ಯ ಚರಿತ್ರೆ ಸಾರಲಿದೆ ಸಿನಿಮಾ. ಇಲ್ಲಿ ಹುಟ್ಟಿಬೆಳೆದವರಷ್ಟೇ ಅಲ್ಲದೇ ಬೇರೆ ಊರಿನವರಿಗೂ ಆಶ್ರಯ ನೀಡಿ ತಾಯಿಸ್ಥಾನದಲ್ಲಿದೆ ಬೆಂಗಳೂರು. ಈ ಬೆಂಗಳೂರಿನ ಕುರಿತಂತೆ ಚಿತ್ರವೊಂದು ನಿರ್ಮಾಣವಾಗಿದೆ. ಚಿತ್ರೀಕರಣ ಪೂರ್ಣವಾಗಿ , ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಅನಂತನಾಗ್, ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಮೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಮಧುಸೂದನ್ ಗೋವಿಂದ್ ಅಭಿನಯಿಸಿದ್ದಾರೆ. ಪುನೀತ್ ಮಾಂಜ, ....
ಶ್ರೀ ಕಾಳಿಕಾಂಬ ಸನ್ನಿದಿಯಲ್ಲಿನನಗೂ ಲವ್ವಾಗಿದೆ ಡಾ.ರಾಜ್ಕುಮಾರ್ ಸಂಸ್ಥೆಯಲ್ಲಿಅನುಭವಪಡೆದುಕೊಂಡಿರುವವಿಜಯ್ರಾಜಶೇಖರ್‘ನನಗೂ ಲವ್ವಾಗಿದೆ’ ಐದನೇಸಿನಿಮಾಕ್ಕೆಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಕೇಳಿದೊಡನೆ ಇದೊಂದು ಲವ್ ಸ್ಟೋರಿಇರಬಹುದೆಂಬ ಭಾವನೆ ಬರುತ್ತದೆ.ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮಕತೆಇರಲಿದೆ.ಆದರೆಅದಕ್ಕಿಂತಲೂಮೀರಿದಕುತೂಹಲಕಾರಿಸನ್ನಿವೇಶಗಳನ್ನು ನೋಡಬಹುದೆಂದುಕತೆ ಬರೆದು ನಿರ್ಮಾಣ ಮಾಡುತ್ತಿರುವ ಕೆ.ನೀಲಕಂಠನ್ಖಳನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ನಿರ್ಮಾಪಕರು ಕಾಳಿ ಅಮ್ಮನ ಭಕ್ತರಾಗಿರುವುದರಿಂದ ಶ್ರೀ ಕಾಳಿ ಅಮ್ಮನ್ ....
ಡಾ.ರಾಜ್ಕುಮಾರ್ಅಕಾಡೆಮಿಯ ಲರ್ನಿಂಗ್ಆಪ್ ಲೋಕಾರ್ಪಣೆ ‘ಡಾ.ರಾಜ್ಕುಮಾರ್ ಸಿವಿಲ್ ಸರ್ವಿಸ್ಅಕಾಡಮಿ’ಯಲ್ಲಿ ಹಲವು ವಿದ್ಯಾರ್ಥಿಗಳು ತರಭೇತಿ ಪಡೆದುಕೊಂಡುಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಇದೇಅಕಾಡೆಮಿದಿಂದ ಲರ್ನಿಂಗ್ಆಪ್ವೊಂದು ಬಿಡುಗಡೆಯಾಗಿದೆ.ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಫಾರ್ಮಲ್ ಶಿಕ್ಷಣ ಮುಖ್ಯವಾಗಿರುವುದಿಲ್ಲ. ಅದಕ್ಕಿಂತಲೂಜ್ಘಾನ ಮುಖ್ಯ.ಪುನೀತ್ರಾಜ್ಕುಮಾರ್ಉನ್ನತ ವ್ಯಾಸಾಂಗ ಮಾಡಿಲ್ಲದಿದ್ದರೂ, ....
ಜಗ್ಗೇಶ್ ರಂಗಗೀತೆಗಳು ಸಿನಿಮಾ ಆಗಲು ಪ್ರೇರಣೆ ಕಳೆದೆ ಒಂದೂವರೆ ವರ್ಷದಿಂದಯಾವುದೇಅದ್ದೂರಿಸೆಟ್ಗೆ ಭೇಟಿ ನೀಡದ ಮಾದ್ಯಮದವರಿಗೆ ‘ರಂಗನಾಯಕ’ ಸಿನಿಮಾದ ಹಾಡಿನಚಿತ್ರೀಕರಣಕ್ಕೆ ಪತ್ರಕರ್ತರನ್ನುಆಹ್ವಾನಿಸಲಾಗಿತ್ತು.ಕಂಪೆಗೌಡಇಂಟರ್ ನ್ಯಾಷನಲ್ ವಿಮಾನ ನಿಲ್ದಾಣರಸ್ತೆಯಲ್ಲಿರುವ ಪ್ರಜ್ವಲ್ ಸ್ಟುಡಿಯೋದಲ್ಲಿ ಕಣ್ಣುಗಳಿಗೆ ತಂಪುಕೊಡುವ ಸೆಟ್ ಹಾಕಲಾಗಿದೆ. ‘ಎನ್ನ ಮನದರಸೀ..’ಎಂಬ ಕೀಟಲೆ ಹಾಡಿನ ಶೂಟಿಂಗ್ ನಡೆಯುತ್ತಿತ್ತು.ಬಿಡುವು ಮಾಡಿಕೊಂಡುತಂಡವು ಮಾತಿಗೆ ಕುಳಿತುಕೊಂಡಿತು.ಮೊದಲು ನಿರ್ದೇಶಕಗುರುಪ್ರಸಾದ್ ಮಾತನಾಡಿಧಾರವಾಡದಕುಲಕರ್ಣಿ ಸೆಟ್ ಹಾಕಿದ್ದಾರೆ.ಸಿಂಹಾಸನವು ಇದೆ.ವಂದಿ ಮಾಗದರುಕೂರುವ ಆಸನಗಳು ....