ಆರಂಭವಾಯಿತು ಕರುನಾಡ ಚಕ್ರವರ್ತಿ *ಶಿವರಾಜಕುಮಾರ್* ಅಭಿನಯದ 124 ನೇ ಚಿತ್ರ. *"ನೀ ಸಿಗೋವರೆಗೂ"* ಸುಂದರ ಶೀರ್ಷಿಕೆಯ ಈ ಚಿತ್ರಕ್ಕೆ ಚಾಲನೆ ನೀಡಿದ ಬಾದ್ ಶಾ *ಕಿಚ್ಚ ಸುದೀಪ* . ಕರುನಾಡ ಚಕ್ರವರ್ತಿ *ಶಿವರಾಜಕುಮಾರ್* ಅಭಿನಯದ ೧೨೪ ನೇ ಚಿತ್ರದ ಮುಹೂರ್ತ ಸಮಾರಂಭ ನಗರದ ಶೆರಟನ್ ಹೋಟೆಲ್ ನಲ್ಲಿ ನೆರವೇರಿತು. ಈ ಚಿತ್ರಕ್ಕೆ *"ನೀ ಸಿಗೋವರೆಗೂ"* ಎಂದು ಹೆಸರಿಡಲಾಗಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಬಾದ್ ಶಾ *ಕಿಚ್ಚ ಸುದೀಪ* ಆರಂಭ ಫಲಕ ತೋರಿದರು. ಶ್ರೀಮತಿ *ಗೀತಾ ಶಿವರಾಜಕುಮಾರ್* ಕ್ಯಾಮೆರಾ ಚಾಲನೆ ಮಾಡಿದರು. *ರಾಮ್ ಧುಲಿಪುಡಿ* ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪಕ್ಕ ಎಮೋಷನಲ್ ಲವ್ ಸ್ಟೋರಿ ಅಂತ ಹೇಳಬಹುದು ಎಂದ ....
ಕಾಶ್ಮೀರದಲ್ಲಿ *"ನಿನದೇ ನೆನಪು".* ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ *ವಾಸುಕಿ ವೈಭವ್* ಹಾಡಿರುವ ಈ ಆಲ್ಬಂ ಸಾಂಗ್. ಜನಪ್ರಿಯ ಗೀತರಚನೆಕಾರ *ಗೌಸ್ ಫಿರ್* ಬರೆದಿರುವ *" ಹೃದಯಕ್ಕೆ ಹೃದಯವೇ ಕಡು ವೈರಿ"* ಎಂದು ಆರಂಭವಾಗುವ *"ನಿನದೇ ನೆನಪು"* ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ *ಸ್ವತಂತ್ರ ದಿನಾಚರಣೆಯ* ದಿನ ಬಿಡುಗಡೆಯಾಗಿದೆ. ಈ ಆಲ್ಬಂ ಕನ್ನಡದ ಬಹು ಅದ್ದೂರಿ ನಿರ್ಮಾಣ ಎಂದೇ ಹೇಳಬಹುದು, ಯಾಕೆಂದರೆ ಇದರ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್ ನಲ್ಲಿ ನಡೆದಿದೆ ಎಂದರೆ ಈ ಆಲ್ಬಂ ಹಾಡಿನ ನಿರ್ಮಾಣದ ವೈಭವವನ್ನು ಹೇಳಬಹುದು. *ಸರವಣ್* ಮತ್ತು *ಪ್ರತಿಮಾ* ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ....
ಅದ್ದೂರಿಯಾಗಿ ಸೆಟ್ಟೇರಿದ ಧ್ರುವ ಸರ್ಜಾ-ಎ.ಪಿ. ಅರ್ಜುನ್ ಕಾಂಬಿನೇಷನ್‌ನ ’ಮಾರ್ಟಿನ್’ 'ಅಂಬಾರಿ’ ನಂತರ ಎ.ಪಿ. ಅರ್ಜುನ್ ನಿರ್ದೇಸಿದ ಸಿನಿಮಾ ’ಅದ್ಧೂರಿ’. ಅದರಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜಾ. ಆ ಕಾಲಕ್ಕೆ ’ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಆ ಜೋಡಿ ಒಂದಾಗಿದೆ. ’ಮಾರ್ಟಿನ್’ ಹೆಸರಿನ ಹೊಸ ಸಿನಿಮಾ ಶುರುಮಾಡಿರುವ ಅರ್ಜುನ್ ಮತ್ತು ಧ್ರುವ, ಅದರ ಮುಹೂರ್ತವನ್ನು ಭಾನುವಾರ ಮಾಡಿದ್ದಾರೆ. ’ಕ್ರೇಜಿ ಸ್ಟಾರ್’ ರವಿಚಂದ್ರನ್ ಮುಖ್ಯಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಹಾರೈಸಿದ್ದಾರೆ. ಈ ಹಿಂದೆ ಧ್ರುವ ಮತ್ತು ನಂದಕಿಶೋರ್ ಒಂದಾಗಿ ’ದುಬಾರಿ’ ಅನ್ನೋ ಸಿನಿಮಾವನ್ನು ಘೋಷಣೆ ....
ಅಂಜನ್‌ಟ್ರೈಲರ್ ಲೋಕಾರ್ಪಣೆ ಹೊಸಬರ ‘ಅಂಜನ್’ ಚಿತ್ರದಎರಡು ಟ್ರೈಲರ್‌ಗಳಅನಾವರಣಕಾರ್ಯಕ್ರಮವು ಡಾ.ಸಿ.ಅಶ್ವಥ್ ಕಲಾಮಂದಿರದಲ್ಲಿಅದ್ದೂರಿಯಾಗಿ ನಡೆಯಿತು. ವಿಧಾನ ಪರಿಷತ್ ಸದಸ್ಯಅಶ್ವಥ್‌ನಾರಾಯಣ್‌ಮೊದಲನೇ ಟ್ರೈಲರ್‌ಗೆಚಾಲನೆ ನೀಡಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದರೆಚಿತ್ರ ನೋಡಬೇಕು ಅನಿಸುತ್ತದೆ.ಚಿತ್ರವುಎಲ್ಲರ ಮನಸ್ಸನ್ನುಗೆಲ್ಲಲಿ ಎಂದು ಶುಭಹಾರೈಸಿದರು. ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯುತೆಗೆದುಕೊಂಡು ಹೋಗುತ್ತದೆ.ಅಂಗವಿಕಲ, ಅಣ್ಣತಂಗಿ ಬಾಂದವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ.ಮನೆಯಲ್ಲಿತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ....
ನಿರಂಜನ್ ನಟನೆಯ ’ನಮ್ಮ ಹುಡುಗರು’ ಟೀಸರ್ ರಿಲೀಸ್ ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೀರೋ ಆಗಿ ನಟಿಸಿರುವ ’ನಮ್ಮ ಹುಡುಗರು’ ಚಿತ್ರದ ಟೀಸರ್ ಶನಿವಾರ (ಆ.14) ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ರಿಲೀಸ್ ಆಗಿದೆ. ವಿಶೇಷವೆಂದರೆ, ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಟೀಸರ್ ರಿಲೀಸ್ ಮಾಡಿದ್ದಾರೆ ಮತ್ತು ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಂತರ ಮಾತನಾಡಿದ ಉಪೇಂದ್ರ, ’ಟೀಸರ್ ಅದ್ಭುತವಾಗಿದೆ. ಇದರಲ್ಲಿ ವಿಷ್ಣು ದಾದಾ ಅವರ ಕಟೌಟ್‌ನಿಂದ ನಿರಂಜನ್ ಮೇಲೆ ಹೂವಿನ ಹಾರ ಬೀಳುವಂತೆ ಇಂಟ್ರಡಕ್ಷನ್ ಸೀನ್ ಮಾಡಲಾಗಿದೆ. ಅದು ಬಹಳ ಇಷ್ಟ ಆಯ್ತು ನನಗೆ. ನಿರಂಜನ್ ಮೊದಲು ....
ಕ್ರಿಷ್ಣರಾಜ-೪ ಐನೂರು ಕೋಟಿ ಬಜೆಟ್ ಸಿನಿಮಾ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜದಂಥ ಸಿನಿಮಾಗಳಿಂದ ಕನ್ನಡ ಸಿನಿಮಾರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಂಥ ಬಿಗ್ ಪ್ರಾಜೆಕ್ಟ್ ಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ ಸ್ವಾಮೀಜಿ. ೧೯೯೫ರಿಂದ ಕನ್ನಡ ಚಿತ್ರರಂಗದಲ್ಲಿ ....
ವರಮಹಾಲಕ್ಷ್ಮೀ ಹಬ್ಬಕ್ಕೆ "ಶಾರ್ದೂಲ". ಕೊರೋನ ಹಾವಾಳಿಯಿಂದ ತತ್ತರಿಸಿದ ಕನ್ನಡ ಚಿತ್ರರಂಗ ಶ್ರಾವಣ ಆರಂಭದ ವೇಳೆಗೆ ಸ್ವಲ್ಪ ಚುರುಕುಗೊಂಡಿದೆ. ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ ಕಾಣಲಿದೆ. ಆ ಪೈಕಿ ಹಾರಾರ್ ಸಸ್ಪೆನ್ಸ್ ಕಥೆ ಆಧಾರಿತ "ಶಾರ್ದೂಲ" ಚಿತ್ರವೂ ಒಂದು. ಈ ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯವೂ ಸೂಪರ್... ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಉತ್ತಮ ಮನೋರಂಜನೆ ನೀಡಲು ಇದೇ ಇಪ್ಪತ್ತರಂದು "ಶಾರ್ದೂಲ" ಆಗಮಿಸುತ್ತಿದೆ. ನೀವೆಲ್ಲಾ ನೋಡಿ ಹರಸಿ ಎಂದರು ನಾಯಕ ....
ಆರಂಭವಾಗಿದೆ "ಮರೆಯದೆ ಕ್ಷಮಿಸು" ಚಿತ್ರದ ಹಾಡುಗಳ ಮೆರವಣಿಗೆ.. ಆಡಿಯೋ ರಿಲೀಸ್ ಮಾಡಿ ಶುಭಕೋರಿದ ನಟ ಶ್ರೀನಗರ ಕಿಟ್ಟಿ. ಕೆಂಡಸಂಪಿಗೆ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ರಚಿಸಿದ್ದ, "ಮರೆಯದೆ ಕ್ಷಮಿಸು" ಹಾಡು ಜನಪ್ರಿಯ ವಾಗಿದೆ. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದ್ದು, ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ರಿಲೀಸ್ ಮಾಡಿದರು. ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್, ವೆಂಕಟೇಶ್ ಮುಂತಾದ ಗಣ್ಯರು ಈ ....
೫ಡಿ ಕುಂಬಳಕಾಯಿ
ನಟ,ನಿರ್ದೇಶಕ ಮತ್ತು ನಿರ್ಮಾಪಕಎಸ್.ನಾರಾಯಣ್‌ನಿಗದಿತಅವಧಿಯಲ್ಲಿಚಿತ್ರ ಮುಗಿಸುವ ವಾಡಿಕೆಯನ್ನುಅನುಸರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ವಿನೂತನಕಥನ ಹೊಂದಿರುವ‘೫ಡಿ’ ಚಿತ್ರಕ್ಕೆಚಿತ್ರಕತೆ,ಸಾಹಿತ್ಯ ಒದಗಿಸಿ ಆಕ್ಷನ್‌ಕಟ್ ಹೇಳಿದ್ದಾರೆ. ಪೋಸ್ಟರ್ ಲಾಂಚ್, ಫಸ್ಟ್ ಲುಕ್‌ಅನಾವರಣ ಮುಖಾಂತರ ಮಾದ್ಯಮದವರನ್ನು ಭೇಟಿ ಮಾಡಿಚಿತ್ರದಕುರಿತಂತೆಒಂದಷ್ಟು ಮಾಹಿತಿ ಹಂಚಿಕೊಂಡಿದ್ದರು.ಈಗ ಅಂದುಕೊಂಡಂತೆಚಿತ್ರೀಕರಣ ಮುಗಿಸಿರುವುದರಿಂದ ಖುಷಿಯನ್ನು ಹೇಳಿಕೊಳ್ಳಲು ತಂಡದೊಂದಿಗೆ ಮತ್ತೆ ಮಾದ್ಯಮದ ಮುಂದೆ ಹಾಜರಾಗಿದ್ದರು.
ಆಗಸ್ಟ್ 12 ರಂದು ನಮ್ಮ ಫ್ಲಿಕ್ಸ್ ನಲ್ಲಿ "ಹಾರುವ ಹಂಸಗಳು". ಪದ್ಮಶ್ರೀ ಪುರಸ್ಕೃತ ಡಾ||ದೊಡ್ಡರಂಗೇಗೌಡ ಪ್ರಥಮ ನಿರ್ದೇಶನದ ಚಿತ್ರ. ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ||ದೊಡ್ಡರಂಗೇಗೌಡ ಅವರ ಪ್ರಥಮ ನಿರ್ದೇಶನದ "ಹಾರುವ ಹಂಸಗಳು" ಚಿತ್ರ ನಮ್ಮ ಫ್ಲಿಕ್ಸ್ ಮೂಲಕ ಆಗಸ್ಟ್ ೧೨ ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು. ಅದಕ್ಕೂ ಮುನ್ನ ಒಂದು ಹಾಡು ಹಾಗೂ ಟ್ರೇಲರ್ ಪ್ರದರ್ಶಿಸಲಾಯಿತು. ನಾನು ಒಂದು ದಿನ ಬೆಳಗ್ಗೆ ವಾಯುವಿಹಾರಕ್ಕೆ ಹೊರಟಾಗ ಚಿಕ್ಕಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದದ್ದನ್ನು ನೋಡಿ ಏನಿದು? ಚಿಕ್ಕ ಮಕ್ಕಳು ಸಹ ....
ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯರಿಂದ "ಗ್ರೂಫಿ" ಹಾಡುಗಳ ಲೋಕಾರ್ಪಣೆ. ಚಿತ್ರದ ಹಾಡುಗಳನ್ನು ಅರ್ಜುನ್ ಜನ್ಯ ಅವರಿಗೆ ಅರ್ಪಿಸಿದ ತಂಡ. ವಿಜೇತ್ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ, ನಾಲ್ಕು ಹಾಡುಗಳಿರುವ "ಗ್ರೂಫಿ" ಚಿತ್ರದ ಹಾಡುಗಳನ್ನು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಬಿಡುಗಡೆ ಮಾಡಿದರು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಹಾಡುಗಳ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅರ್ಜುನ್ ಜನ್ಯ ಆಗಮಿಸಿದ್ದರು. ಈ ಚಿತ್ರದ ಹಾಡುಗಳು ಕೇಳಲು ಹಾಗೂ ನೋಡಲು ಮಧುರವಾಗಿದೆ. "ಗ್ರೂಫಿ" ಅಂದರೆ ನನಗನಿಸಿದು ಹೆಮ್ಮೆ ಅಂತ. ಚಿತ್ರದ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಅವರು ನನಗೆ ಬಹಳ ....
ಶ್ರೀ ಜಗನ್ನಾಥದಾಸರಜೀವನಚರಿತ್ರೆ
ಹರಿಕಥಾಮೃತಸಾರವೆಂಬ ಮೇರುಕೃತಿಯನ್ನು ಬರೆದಿರುವ ‘ಶ್ರೀ ಜಗನ್ನಾಥದಾಸರು’ ಕುರಿತಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ. ಮಧುಸೂದನ್ ಹವಲ್ದಾರ್ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರುಹಾಡುಗಳನ್ನು ಲೋಕಾರ್ಪಣೆ ಮಾಡಿಮಾತನಾಡುತ್ತಾ, ಮನುಷ್ಯ ಹಾಗೂ ದೇವರ ನಡುವಿನ ಕೊಂಡಿಅಂದರೆಅದು ಭಕ್ತಿ.
ಕೊರೋನಾ ನಂತರ ಬಿಡುಗಡೆಯಾಗ್ತಿರೋ ಮೊದಲಚಿತ್ರ ಕಲಿವೀರ ಈ ಹಿಂದೆ ಕನ್ನಡ ದೇಶದೊಳ್ ಎಂಬ ಚಿತ್ರ ಮಾಡಿದ್ದ ಅವಿರಾಮ್ ಕನ್ನಡಿಗ ಈಗ ಕಲಿವೀರ ಎಂಬ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ. ಸಾಹಸಿ ಯುವಕನೋರ್ವನ ಹೋರಾಟದ ಕಥನ ಹೊಂದಿದ ಆ ಚಿತ್ರದ ಹೆಸರು ಕಲಿವೀರ. ಕೊರೋನಾ ಎರಡನೇ ಲಾಕ್‌ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕ ಏಕಲವ್ಯ. ಆಟೋಡ್ರೈವರ್ ಆಗಿದ್ದ ಏಕಲವ್ಯ ಅವರನ್ನು ಹೀರೋ ಮಾಡಿದ್ದು, ....
"ಜೀವ್ನಾನೇ ನಾಟ್ಕ ಸಾಮಿ" ಅಂತಾರೆ "ಕನ್ನಡತಿ" ಖ್ಯಾತಿಯ ಕಿರಣ್ ರಾಜ್. ಗಾಯನದ ಜೊತೆಗೆ ನಟನೆಗೂ ಸೈ ಎಂದ "ಸರಿಗಮಪ" ಖ್ಯಾತಿಯ ಶ್ರೀಹರ್ಷ. ಮಹಾಭಾರತದ ಉಪಕಥೆಯನ್ನ ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ "ಜೀವ್ನಾನೇ ನಾಟ್ಕ ಸಾಮಿ". ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ "ಕನ್ನಡತಿ" ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹಾಗೂ "ಸರಿಗಮಪ" ಮೂಲಕ ಮನೆಮಾತಾಗಿದ್ದ, ಶ್ರೀಹರ್ಷ ಅಭಿನಯಿಸಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.. ಮಹಾಭಾರತದ ಉಪಕಥೆಯನ್ನು ಆಧರಿಸಿ ಹಾಗೂ ರಿಯಾಲಿಟಿ ....
ಆಸ್ಪತ್ರೆಯಲ್ಲಿ ಉಗ್ರಾವತಾರ ಚಿತ್ರೀಕರಣ ರಕ್ತದ ಕಲೆಗಳಿಂದ ಗಾಯಗೊಂಡಿರುವ ವಿದ್ಯಾರ್ಥಿಯೊಬ್ಬಳನ್ನು ಸ್ಟ್ರೆಚರ್‌ದಲ್ಲಿ ಐಸಿಯುಗೆ ಕರೆದುಕೊಂಡು ಬರಲಾಗುತ್ತದೆ. ಆಕೆಯು ನನ್ನನ್ನು ಕಾಪಾಡಿ, ಕಾಪಾಡಿ ಎಂದು ಅರಚುತ್ತಾ ಪ್ರಾಣ ಬಿಡುತ್ತಾಳೆ. ವೈದ್ಯರು ಬೇಸರದಿಂದ ಅವಳನ್ನು ನೋಡುತ್ತಿರುವಾಗ ಇನ್ಸ್‌ಪೆಕ್ಟರ್ ಆಗಮನವಾಗುತ್ತದೆ. ಇವಳದು ರೇಪ್ & ಮರ್ಡರ್ ಕೇಸೆಂದು ಡಾಕ್ಟರ್ ಹೇಳುತ್ತಾರೆ. ಬೇಗನೆ ವರದಿ ಕೊಡಿರೆಂದು ಅಧಿಕಾರಿಯು ಹೇಳಿ ಹೊರಡುವಷ್ಟರಲ್ಲಿ, ಮೇಡಂ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ತಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ನಾನು ಆದಷ್ಟು ಪ್ರಯತ್ನ ಪಡುತ್ತೇನೆಂದು ಹೇಳಿದಾಗ ಕಟ್ ಎನ್ನುವ ಶಬ್ದ ಬಂದು ಅಂದಿನ ಚಿತ್ರೀಕರಣ ಪ್ಯಾಕ್‌ಅಪ್ ....
"ಮ್ಯಾನ್ ಆಫ್ ದಿ ಮ್ಯಾಚ್" ಗೆ ಹಾಡಿ ಕುಣಿದ ವಾಸುಕಿ ವೈಭವ್
ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ನಿರ್ಮಾಣ ಸಂಸ್ಥೆಯ ಬ್ಯಾನರಿನ ಅಡಿಯಲ್ಲಿ ಹಾಗೂ ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ "ಮ್ಯಾನ್ ಆಫ್ ದಿ ಮ್ಯಾಚ್" ಚಲನಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ.
ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ "ಚಿ.ತು.ಸಂಘ".
ಶರಣ್-ಚಿಕ್ಕಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಜನಪ್ರಿಯ ಚಿತ್ರ
"ಅಧ್ಯಕ್ಷ".
ಈ ಚಿತ್ರದಲ್ಲಿ ತಮ್ಮ ಅವರಿಬ್ಬರೂ ಸೇರಿ ಕಟ್ಟಿದ್ದೇ " ಚಿ.ತು.ಸಂಘ".
ಈಗ "ಚಿ.ತು.ಸಂಘ" ದ ಹೆಸರಿನ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.
ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಜನರ ಬೆಂಬಲ ಸಿಕ್ಕಿದ್ದು ಹೆಚ್ಚು. ಅದರಲ್ಲೂ ಇತ್ತೀಚಿಗೆ ಹೊಸ ತಂಡ ಕಟ್ಟಿಕೊಂಡು ವಿಭಿನ್ನ ಕಥಾಹಂದರದ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಇಂತಹ ಒಂದು ಉತ್ಸಾಹಿ ತಂಡದಿಂದ ವಿಭಿನ್ನ ಕಥೆಯ "TT # 50" ಚಿತ್ರ ಸಿದ್ದವಾಗಿ, ಇದೇ ಅಗಸ್ಟ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೃಷ್ಣ. ಎಲ್ ರಂಗಭೂಮಿಯೊಂದಿಗೆ ಒಡನಾಟ ಹೊಂದಿರುವವರು. ಹಿರಿತೆರೆಯಲ್ಲಿ ಮೊದಲ ಬಾರಿಗೆ ತಾವೇ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಇವರದೆ.