*ಹಾಡಿನಲ್ಲೇ ಮೋಡಿ ಮಾಡಿದ "ಲಾಫಿಂಗ್ ಬುದ್ಧ"* ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ "ಎಂಥಾ ಚಂದಾನೇ" ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿಷ್ಣು ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನನ್ನ ಅಭಿನಯದ "ಹೀರೋ" ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ಹತ್ತಿರವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ....
ಭಾರತೀಯ ಚಿತ್ರರಂಗಕ್ಕೆ ಕಾಂತಾರ ಸ್ಪೂರ್ತಿ
ಪ್ಯಾನ್ ಇಂಡಿಯಾ ‘ತಂಗಲಾನ್’ ಚಿತ್ರವು ಆಗಸ್ಟ್ ೧೫ರಂದು ತೆರೆ ಕಾಣುತ್ತಿದೆ. ಅದರನ್ವಯ ಪ್ರಚಾರದ ಸಲುವಾಗಿ ನಾಯಕ ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗಾದರೂ ಸಿನಿಮಾವನ್ನು ತೆಗೆದುಕೊಂಡು ಹೋಗಬಹುದು ಅಂತ ತೋರಿಸಿಕೊಟ್ಟಿದ್ದು ಕಾಂತಾರ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಥೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿದ್ದು ನಮಗೆ ಸ್ಪೂರ್ತಿಯಾಯಿತು. ಶೂಟಿಂಗ್ ಸಮಯದಲ್ಲಿ ಕಾಂತಾರ ಬಿಡುಗಡೆಯಾಗಿತ್ತು.
ಭೀಮನಿಗೆ ಶಿವಣ್ಣ ಶುಭಹಾರೈಕೆ ದುನಿಯಾವಿಜಯ್ ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ‘ಭೀಮ’ ಚಿತ್ರವು ಆಗಸ್ಟ್ ೯ಕ್ಕೆ ತೆರೆಕಾಣಲು ಸಿದ್ದತೆಗಳು ನಡೆಯುತ್ತಿದೆ. ಕೃಷ್ಣಸಾರ್ಥಕ್ ಮತ್ತು ಜಗದೀಶ್‌ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ನನ್ನ ಮತ್ತು ವಿಜಯ್ ಪರಿಚಯ ಸುಮಾರು ೨೦ ವರ್ಷಗಳದ್ದು. ಅವರು ಹೀರೋ ಆಗುವುದಕ್ಕೆ ಮೊದಲೇ ನಾನು ನಟಿಸಿದ ‘ರಾಕ್ಷಸ’, ‘ಜೋಗಿ’ ಸಿನಿಮಾಗಳಲ್ಲಿ ನನ್ನೊಂದಿಗೆ ತೆರೆ ಹಂಚಿಕೊಂಡಿದ್ದರು. ಅಪ್ಪಾಜಿ ತೀರಿಕೊಂಡಿದ್ದರಿಂದ ‘ದುನಿಯಾ’ ಮುಹೂರ್ತಕ್ಕೆ ಬರಲಾಗಲಿಲ್ಲ. ಚಿತ್ರ ....
*ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು ಬಹು ನಿರೀಕ್ಷಿತ "ಗೌರಿ" ಚಿತ್ರದ ಟ್ರೇಲರ್* . *ಸಮರ್ಜಿತ್ ಲಂಕೇಶ್ ಅಭಿನಯದ ಈ ಚಿತ್ರ ಆಗಸ್ಟ್ 15 ರಂದು ತೆರೆಗೆ* . ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ‘ಗೌರಿ’ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ "ಗೌರಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ಹಿರಿಯ ವಕೀಲರಾದ ಶ್ಯಾಮ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ....
ಮುರುಗ ಸನ್ ಆಫ್ ಕಾನೂನುಗೆ ಪ್ರೇಮ ಸಾಥ್
‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಹೆಸರು ಗಳಿಸಿದ್ದ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ‘ಕೊಡೆಮುರುಗ’ ಹಿಟ್ ಆಗಿತ್ತು. ಇದರಿಂದ ಪ್ರೇರಿತಗೊಂಡ ಮುನಿಕೃಷ್ಣ ಅವರು ಎ.ಎಸ್.ಎ.ಪ್ರೊಡಕ್ಷನ್ ಬ್ಯಾನರ್ ಸಂಸ್ಥೆ ಶುರು ಮಾಡಿ ‘ಮುರುಗ ಸನ್ ಆಫ್ ಕಾನೂನು’ ಚಿತ್ರಕ್ಕೆ ನಾಯಕನ ಜತೆಗೆ ಬಂಡವಾಳ ಹೂಡಿದ್ದಾರೆ. ಪ್ರಚಾರದ ಸಲುವಾಗಿ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ನಟಿ ಪ್ರೇಮಾ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ವಿಜಯ್ ಪ್ರವೀಣ್ ಆಕ್ಷನ್ ಕಟ್ ಹೇಳಿದ್ದಾರೆ. ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಟೈಟಲ್ ಲಾಂಚ್ ಮಾಡುವ ಮೂಲಕ ಚಾಲನೆ ನೀಡಿದ್ದರಂತೆ.
*ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದ "ಕೃಷ್ಣಂ ಪ್ರಣಯ ಸಖಿ"* . *ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆ* . ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ಕೃಷ್ಣಂ ಪ್ರಣಯ ಸಖಿ" ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಸಂಗೀತ ನೀಡಿರುವ ಏಳು ಹಾಡುಗಳಿದೆ. ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿದೆ. ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ "ಕೃಷ್ಣಂ ಪ್ರಣಯ ಸಖಿ" ಪ್ರೇಕ್ಷಕರ ಮನ ....
ಜಂಬೂ ಸರ್ಕಸ್ ಟೀಸರ್ ಬಿಡುಗಡೆ ಸ್ನೇಹ ಪ್ರೀತಿಯ ಸುತ್ತ ಕಾಮಿಡಿ ಕಥಾನಕ.. ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂಡಿ.ಶ್ರೀಧರ್ ಅವರು ’ಜಂಬೂಸರ್ಕಸ್’ ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಬುಲ್ ಬುಲ್, ಕೃಷ್ಣ, ಚೆಲ್ಲಾಟ, ಪೊರ್ಕಿ, ಒಡೆಯ ಸೇರಿದಂತೆ ಸ್ಟಾರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ ಶ್ರೀಧರ್ ಅವರು ಒಡೆಯ ನಂತರ ಗ್ಯಾಪ್ ತಗೊಂಡು ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಸಿ.ಸುರೇಶ್ ಅವರು ....
*ಟೀಸರ್ ನಲ್ಲೇ ಮೋಡಿಮಾಡಿದ "ಕಪಟಿ"* *ಟೀಸರ್ ಬಿಡುಗಡೆ ಮಾಡಿ ಶುಭಕೋರಿದ ಡಾರ್ಲಿಂಗ್ ಕೃಷ್ಣ** . ಡಿ.ಪಿಕ್ಚರ್ಸ್ ಲಾಂಛನದಲ್ಲಿ ದಯಾಳ್ ಪದ್ಮನಾಭನ್ ನಿರ್ಮಿಸಿರುವ, ರವಿಕಿರಣ್ ಹಾಗೂ ಚೇತನ್ S.P ಅವರ ಜಂಟಿ ನಿರ್ದೇಶನದ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ "ಕಪಟಿ" ಚಿತ್ರದ ಟೀಸರ್ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ನಟ ಡಾರ್ಲಿಂಗ್ ಕೃಷ್ಣ ಟೀಸರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನ್ನೆರಡನೇ ಚಿತ್ರ. ....
ಮುಂಬೈದಲ್ಲಿ ಮಾರ್ಟಿನ್ ೧೩ ಭಾಷೆಗಳ ಟ್ರೈಲರ್ ಬಹುದಿನಗಳಿಂದ ‘ಮಾರ್ಟಿನ್’ ಚಿತ್ರವು ಎಂದು ಬಿಡುಗಡೆಯಾಗುತ್ತದೆ ಎಂದು ಸಿನಿಪ್ರೇಮಿಗಳು ಬಕಪಕ್ಷಿಯಂತೆ ಕಾಯುತ್ತಿದ್ದು, ಅದಕ್ಕೆ ಉತ್ತರ ಸಿಕ್ಕಿದೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ತಂಡವು ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕ ಧ್ರುವಸರ್ಜಾ ಹೇಳುವಂತೆ ‘ಮಾರ್ಟಿನ್’ ಪ್ರತಿಯೊಂದು ದೇಶಕ್ಕೂ ತಲುಪಿಸಬೇಕೆಂದು ಆಗಸ್ಟ್ ೫ರಂದು ಬಾಂಬೆದಲ್ಲಿ ಅಂತರರಾಷ್ಟ್ರೀಯ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಪಂಚದ ೨೧ ದೇಶಗಳ ಮಾಧ್ಯಮ ಮಿತ್ರರು ಆಗಮಿಸಲಿರುವರು. ಭಾರತದ ಮೊದಲ ಇಂಟರ್ ನ್ಯಾಷನಲ್ ಪ್ರೆಸ್‌ಮೀಟ್ ಎಂಬುದು ಹೆಮ್ಮೆಯ ....
*ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು "ಕೋಟಿ ಕೋಟಿ ರೊಕ್ಕ ಗಳಿಸಿ" ಹಾಡು* . *ಹೂಡಿ ಚಿನ್ನಿ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ ಮಂಜುಕವಿ ಬರೆದಿರವ ಈ ಗೀತೆ* . ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯರಾಗಿರುವ ಹಾಗೂ ಭಾರತೀಯರ ಸೇವಾ ಸಮಿತಿ ಸ್ಥಾಪಕರೂ ಆಗಿರುವ ಹೆಚ್ ಎಂ ರಾಮಚಂದ್ರ (ಹೂಡಿ ಚಿನ್ನಿ) ಅವರು ಈಗ ಗಾಯಕರಾಗಿದ್ದಾರೆ. ಮಂಜುಕವಿ ಅವರು ಬರೆದು ಸಂಗೀತ ನೀಡಿರುವ ಸಾಮಾಜಿಕ ಸಂದೇಶ ಸಾರುವ "ಕೋಟಿ ಕೋಟಿ ರೊಕ್ಕ ಗಳಿಸಿ" ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಶ್ರೀಮಹದೇವ ಸ್ವಾಮಿಜಿ, ....
*"ಜೀನಿಯಸ್ ಮುತ್ತ" ನಿಗೆ ಸಾಥ್ ನೀಡಿದ "ಚಿನ್ನಾರಿ ಮುತ್ತ"* . *ನಾಗಿಣಿ ಭರಣ ನಿರ್ದೇಶನದ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ* . ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ "ಜೀನಿಯಸ್ ಮುತ್ತ" ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ "ಜೀನಿಯಸ್ ಮುತ್ತ" ನಾಗಿ ಮಾಸ್ಟರ್ ಶ್ರೇಯಸ್ಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ "ಚಿನ್ನಾರಿಮುತ್ತ"ನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ....
ಆಗಸ್ಟ್ ೯ರಂದು ಭೀಮನ ಆಟ ಶುರು ದುನಿಯಾವಿಜಯ್ ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ‘ಭೀಮ’ ಚಿತ್ರವು ಆಗಸ್ಟ್ ೯ಕ್ಕೆ ತೆರೆಕಾಣಲು ಸಿದ್ದತೆಗಳು ನಡೆಯುತ್ತಿದೆ. ಸದು ಸ್ಟಾರ್ ಸಿನಿಮಾಗಳು ಇಲ್ಲದೆ ಸೊರಗಿ ಹೋಗಿರುವ ಚಿತ್ರರಂಗಕ್ಕೆ ಭೀಮ ಟಾನಿಕ್‌ನಂತೆ ಬರುತ್ತಿದೆ. ಅಲ್ಲದೆ ನಿರ್ಮಾಪಕರು ಮುಚ್ಚಿ ಹೋಗಿರುವ ೧೮ ಟಾಕೀಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರಂತೆ. ಒಟ್ಟಾರೆ ರಾಜ್ಯಾದ್ಯಂತ ೪೦೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜನರಿಗೆ ತೋರಿಸಲು ಸಜ್ಜಾಗುತ್ತಿದೆ. ಕೃಷ್ಣಸಾರ್ಥಕ್ ಮತ್ತು ಜಗದೀಶ್‌ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಇದು ....
ವ್ಯವಸಾಯದ ಸಮಸ್ಯೆ ಸಾರುವ ಕಬಂಧ ಕುಂಜಾರ ಫಿಲಂಸ್ ಲಾಂಛನದಲ್ಲಿ ಸಿದ್ದಗೊಂಡಿರುವ ‘ಕಬಂಧ’ ಚಿತ್ರದ ಗೆಳೆತನ ಕುರಿತಾದ ಲಿರಿಕಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕೆ.ಕಲ್ಯಾಣ್ ಸಾಹಿತ್ಯ, ಸಾನಿತೇಜ್ ಸಂಗೀತದಲ್ಲಿ ವಾಸುಕಿವೈಭವ್ ಧ್ವನಿಯಾಗಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸತ್ಯನಾಥ್ ಮಾತನಾಡಿ ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದನ್ನೆ ಬಳಸಿಕೊಂಡು ಒಂದಷ್ಟು ಹಾರರ್ ರೂಪಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅದರಲ್ಲೂ ವ್ಯವಸಾಯದ ಸಮಸ್ಯೆ ನಮಗೆ ಗೊತ್ತಿಲ್ಲದೆ ತುಂಬಾ ವರ್ಷದಿಂದ ಕಾಡ್ತಾ ಇದೆ. ಅದು ....
ಗುಂಮ್ಟಿ ಇದು ಚಿತ್ರದ ಹೆಸರು ಕಳೆದ ವರ್ಷ ‘ಡೊಳ್ಳು’ ಕಲೆಯ ಕುರಿತಾದ ಚಿತ್ರವೊಂದು ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಮಂಗಳೂರು, ಕಾರವಾರ, ಉಡುಪಿ ಕಡೆಗಳಲ್ಲಿ ‘ಗುಂಮ್ಟಿ’ ಸಮುದಾಯ ಮತ್ತು ವಾದ್ಯವೊಂದು ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಆ ಸಲುವಾಗಿಯೇ ಅಲ್ಲಿನ ಭಾಗದವರೇ ಸೇರಿಕೊಂಡು ಇದೇ ಹೆಸರಿನಲ್ಲಿ ಚಿತ್ರವೊಂದನ್ನು ಸಿದ್ದಪಡಿಸಿದ್ದಾರೆ. ‘ಇದು ಸಂಸ್ಕ್ರತಿಯ ಸದ್ದು’ ಎಂಬ ಅಡಿಬರಹವಿದೆ. ‘ಕತ್ತಲ ಕೋಣೆ’ ‘ಇನಾಂದಾರ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸಂದೀಪ್‌ಶೆಟ್ಟಿ ಅಜ್ರಿ ಆಕ್ಷನ್ ಕಟ್ ಹೇಳುವ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರ ಶ್ರಮಕ್ಕೆ ಬಿಲ್ಡರ್ ವಿಕಾಸ್.ಎಸ್.ಶೆಟ್ಟಿ ....
ಮಾಡೆಲಿಂಗ್ ಕ್ಷೇತ್ರದಿಂದ ಬಂದು ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ ಹೀರೋ ಆಗಿ ಅಭಿನಯಿಸಿ ಸತ್ವ ಪರೀಕ್ಷೆಗೆ ನಿಂತಿರುವ ರೋಹಿತ್ ನಟನೆಯ ’ರಕ್ತಾಕ್ಷ’ ಇದೇ ವಾರ ಬಿಡುಗಡೆ ಕಾಣುತ್ತಿದೆ. ನಟನೆ, ಡ್ಯಾನ್ಸ್ ಮತ್ತು ಸಾಹಸದ ತರಬೇತಿ ಜೊತೆಗೆ ಉತ್ತಮ ದೇಹ ವಿನ್ಯಾಸದ ಅತ್ಯುತ್ತಮ ಕಲ್ಪನೆ ಹೊಂದಿರುವ ರೋಹಿತ್ ನೋಡಲು ಥೇಟ್ ಸಲ್ಮಾನ್ ಖಾನ್. ಇದೀಗ ಅವರು ಮಾಡಿ ಮುಗಿಸಿರುವ ರಕ್ತಾಕ್ಷ ಹೊಸ ನೆಲೆಯಲ್ಲಿರುವ ಆಧುನಿಕ ಸಂವೇದನೆಯ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಅಭಿಮಾನಿಗಳಿಗೆ ರೋಚಕತೆ ಮುಟ್ಟಿಸುತ್ತದೆ ಎಂಬುದು ರೋಹಿತ್ ನಂಬಿಕೆ. ಹಾಗಾಗಿ ಪ್ರಚಾರದ ಭರಟೆಯ ಜೊತೆಗೆ ಚಿತ್ರದ ಆಶಯಗಳನ್ನು ಹೋದ ಕಡೆಯಲ್ಲಿ ಹೇಳಲಾಗುತ್ತಿದೆ ಮತ್ತು ಜನರು ಅದರಲ್ಲೂ ....
ಮಾರಮ್ಮ ದೇವಿ ಸಮ್ಮುಖದಲ್ಲಿ ಸಿಂಹರೂಪಿಣಿ ಟೀಸರ್ ಬಿಡುಗಡೆ ಗುರು ಪೂರ್ಣಿಮೆ ದಿನದಂದು ‘ಸಿಂಹರೂಪಿಣಿ’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಸಮಾರಂಭವು ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು ವಿಶೇಷವಾಗಿತ್ತು. ಕಿನ್ನಾಳ್‌ರಾಜ್ ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್‌ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ....
*ಭಾರ್ಗವ್ ಕೃಷ್ಣ ಅಭಿನಯದ "ಓಂ ಶಿವಂ" ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ* . *ಆಲ್ವಿನ್ ನಿರ್ದೇಶನದ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ* . ಕನ್ನಡದಲ್ಲಿ ಹೊಸ ನಾಯಕನಟರ ಆಗಮನವಾಗುತ್ತಿರುತ್ತದೆ. ನೂತನ ನಾಯಕನಟರ ಪಟ್ಟಿಗೆ ಈಗ ಭಾರ್ಗವ್ ಕೃಷ್ಣ ಕೂಡ ಸೇರಿದ್ದಾರೆ. ಪ್ರಸ್ತುತ ಭಾರ್ಗವ್ ಕೃಷ್ಣ ಅಭಿನಯದ ಚೊಚ್ಚಲ ಚಿತ್ರ "ಓಂ ಶಿವಂ" ನ ಲಿರಿಕಲ್ ಸಾಂಗ್ ಇತ್ತೀಚಿಗೆ ಬಿಡುಗಡೆಯಾಯಿತು. ಭಾರ್ಗವ್ ಕೃಷ್ಣ ಅವರ ಅಜ್ಜಿ, ತಾತಾ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. ಭಾರ್ಗವ್ ಕೃಷ್ಣ ಅವರ ತಂದೆ ಕೃಷ್ಣ ಕೆ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಾಡು ಬಿಡುಗಡೆಯ ನಂತರ ....
ಕಂಠೀರವ ಸ್ಟುಡಿಯೋದಲ್ಲಿ ಸಂಜು ವೆಡ್ಸ್ ಗೀತಾ ಪ್ರೀ ಕ್ಲೈಮ್ಯಾಕ್ಸ್ ನಿರ್ದೇಶಕ ನಾಗಶೇಖರ್ ಸಾರಥ್ಯದ "ಸಂಜು ವೆಡ್ಸ್ ಗೀತಾ-2" ಪ್ರಾರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಾಗಶೇಖರ್ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ರಚಿತಾರಾಮ್ ಎಂಟ್ರಿಯಾಗಿದ್ದಾರೆ. ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಅಲ್ಲಿ ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ ನಲ್ಲಿದ್ದರು. ಜರ್ಮನ್ ಸೈನಿಕರ ವಿರುದ್ದ ಸೆಣೆಸಾಟ ನಡೆಸಿ ಅವರ ....
‘ಪ್ರಕರಣ ತನಿಖಾ ಹಂತದಲ್ಲಿದೆ’ ಮೋಷನ್ ಪೋಸ್ಟರ್ ಬಿಡುಗಡೆ ರಿಲೀಸ್ ಆಯ್ತು ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಮೋಷನ್ ಪೋಸ್ಟರ್ ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಅಂತವರ ಸಾಲಿಗೆ ಈಗ ‘ಪಕರಣ ತನಿಖಾ ಹಂತದಲ್ಲಿದೆ’ ಚಿತ್ರ ಸೇರಿಕೊಳ್ಳಲಿದೆ. ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್ ಸಂಸ್ಥೆಯಡಿ ಚಿಂತನ್ ಕಂಬಣ್ಣ ನಿರ್ಮಿಸಿದರೆ, ಸುಂದರ‍್ ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ....
*ಆರ್ ಚಂದ್ರು ಅವರಿಂದ ಅನಾವರಣವಾಯಿತು ಹಾರಾರ್ ಜಾನರ್ ನ "ಹಗ್ಗ" ಚಿತ್ರದ ಟೀಸರ್* . . *ಸುಂದರ ಸಮಾರಂಭದಲ್ಲಿ ನಿರ್ಮಾಪಕರಾದ ಕೆ.ಮಂಜು, ದಯಾಳ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ* ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ "ಹಗ್ಗ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು, ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು "ಹಗ್ಗ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ....