Back Bencherz.News

Thursday, December 07, 2023

  *ಪರಿಶುದ್ಧ ಮನೋರಂಜನೆಯ ರಸದೌತಣ ಬಡಿಸಲು ಬರುತ್ತಿದ್ದಾರೆ "ಬ್ಯಾಕ್ ಬೆಂಚರ್ಸ್"*    *ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್*   ನೋಡುಗರಿಗೆ ಪರಿಶುದ್ಧ ಮನೋರಂಜನೆಯ ರಸದೌತಣ ಉಣಬಡಿಸಲು ಹೊಸತಂಡವೊಂದು ಸಿದ್ದವಾಗಿದೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ " ಬ್ಯಾಕ್ ಬೆಂಚರ್ಸ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.  ಇತ್ತೀಚೆಗೆ ಈ ಚಿತ್ರದ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಕುಲ್ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆನ್ ....

205

Read More...

Brahmarakshasa.News

Thursday, November 30, 2023

  ಬ್ರಹ್ಮರಾಕ್ಷಸ  ಟೀಸರ್ ಬಿಡುಗಡೆ     ಸ್ಯಾಂಡಲ್ ವುಡ್ ಈಗೀಗ  ಹೊಸಬರ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಹೊಸಬರ ಚಿತ್ರಗಳಲ್ಲಿ ಹೊಸತನದ ತಾಂತ್ರಿಕತೆಯ ಸ್ಪರ್ಶವಿರುತ್ತದೆ. ಅಂತಹ ಸಿನಿಮಾಗಳ ಸಾಲಿಗೆ ಸೇರಲಿರುವ ಮೊತ್ತೊಂದು ಚಿತ್ರವೇ ಬ್ರಹ್ಮರಾಕ್ಷಸ. ಒಬ್ಬ ಲೈಟ್‌ಮ್ಯಾನ್ ಆಗಿ ಫಿಲಂ ಇಂಡಸ್ಟ್ರಿಗೆ ಬಂದು ಹಲವಾರು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್.ವಿ. ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ ಬ್ರಹ್ಮರಾಕ್ಷಸ. ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ. ಶ್ರೀನಿವಾಸ್   ನಿರ್ಮಿಸಿರುವ ಈ ಚಿತ್ರದಲ್ಲಿ ಅಂಕುಶ್ ಏಕಲವ್ಯ, ಪಲ್ಲವಿಗೌಡ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಮತೊಂದು ವಿಶಿಷ್ಠ ಪಾತ್ರದಲ್ಲಿ ವೈಜನಾಥ್ ಬಿರಾದಾರ್ ....

165

Read More...

Kaaneyaagiddaale.News

Tuesday, November 28, 2023

  *"ಕಾಣೆಯಾಗಿದ್ದಾಳೆ" ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ.*   ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ  "ಕಾಣೆಯಾಗಿದ್ದಾಳೆ" ಹುಡುಕಿಕೊಟ್ಟವರಿಗೆ ಬಹುಮಾನ ಚತ್ರ ತೆರೆಗೆ ಬರಲು ಸಿದ್ದವಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಚಿತ್ರದ ಹಾಡೊಂದನ್ನು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಮೇಯರ್ ಯೋಗೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು‌.    ಇದೊಂದು ನೈಜ ಹಾಗೂ ಕಾಲ್ಪನಿಕ ಕಥಾ ಆಧಾರಿತ ಚಿತ್ರ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ....

153

Read More...

Mandyahaida.News

Monday, December 11, 2023

  ಮಂಡ್ಯಹೈದ ಟೀಸರ್ ಟೈಟಲ್ ಸಾಂಗ್ ಲಾಂಚ್   ಇಂಟ್ರಡಕ್ಷನ್ ಹಾಡಲ್ಲಿ ಅಭಯ್ ಹುಕ್ ಸ್ಟೆಪ್ಸ್          ಕನ್ನಡ ಚಿತ್ರರಂಗದಲ್ಲಿ ಮಂಡ್ಯ ಹೆಸರಿಗೆ ದೊಡ್ಡ ಮೌಲ್ಯವಿದೆ. ರೆಬೆಲ್ ಸ್ಟಾರ್‌ ಅಂಬರೀಶ್  ತವರುಜಿಲ್ಲೆ ಅಲ್ಲದೆ ಆ ಭಾಗದ ಕಥೆ ಹೇಳುವ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಈಗ ಮತ್ತೊಬ್ಬ ಮಂಡ್ಯಹೈದ ತನ್ನ ಪ್ರೀತಿಗಾಗಿ ಹೇಗೆಲ್ಲ ಹೋರಾಡಿದ ಎಂಬುದನ್ನು ನಿರ್ದೇಶಕ‌ ವಿ.ಶ್ರೀಕಾಂತ್ ಅವರು ಹೇಳಹೊರಟಿದ್ದಾರೆ. ಮಂಡ್ಯಹೈದ ಚಿತ್ರದ ಟೈಟಲ್ ಸಾಂಗ್ ಕಾವೇರಮ್ಮನ ಮಡಿಲಲ್ ಹಾಡಿ ಬೆಳೆದವ್ನೆ ಎಂಬ ಸಾಹಿತ್ಯವಿರುವ ನಾಯಕನ ಇಂಟ್ರಡಕ್ಷನ್ ಹಾಡು ಸೋಮವಾರ ಬಿಡುಗಡೆಯಾಗಿದೆ, ಅಲ್ಲದೆ ಚಿತ್ರದ ಟೀಸರ್  ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು,   ಈ ....

197

Read More...

Maayanagari.News

Monday, December 11, 2023

  *ಈ ವಾರ ಮಾಯಾನಗರಿ ಬಿಡುಗಡೆ*   *ಚಿತ್ರಮಂದಿರಗಳಲ್ಲಿ "ಮಾಯಾನಗರಿ" ದರ್ಶನ*   *ರಾಜ್ಯಾದ್ಯಂತ ಈ ವಾರ ಮಾಯಾನಗರಿ ಬಿಡುಗಡೆ*     ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಗಮನ ಸೆಳೆದಿರುವ ಮಾಯಾನಗರಿ ಸಿನಿಮಾ ಈ ವಾರ (ಡಿ. 15 ರಂದು) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ಆರಾಧ್ಯ ನಿರ್ದೇಶನದ, ಅನೀಶ್ ತೇಜೇಶ್ವರ್ ನಟನೆಯ ಈ ಸಿನಿಮಾ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ.   ಶೂಟಿಂಗ್ ವೇಳೆ ಸಾಕಷ್ಟು ಪರಿಶ್ರಮ ಹಾಕಿರುವ ಚಿತ್ರತಂಡ, ಹಲವಾರು ರಿಸ್ಕಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಶಂಕರ್ ಆರಾಧ್ಯ, "ಈ ....

202

Read More...

O Nanna Chethana.News

Sunday, December 10, 2023

ಓ ನನ್ನ ಚೇತನ ಟ್ರೈಲರ್ ರಿಲೀಸ್ ಮಾಡಿದ  ಕ್ರೇಜಿಸ್ಟಾರ್ ವಿ. ರವಿಚಂದ್ರನ್ ತಮ್ಮ ಅಪೂರ್ವ ನಾಯಕಿ ಅಪೂರ್ವ  ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ರವಿಚಂದ್ರನ್ ಮಕ್ಕಳ ಚಿತ್ರದ ಟ್ರೈಲರ್ ನ ಮಗುವಿನಂತೆ  ರಿಲೀಸ್ ಮಾಡಿಕೊಟ್ಟ ರವಿಮಾಮ ಓ ನನ್ನ ಚೇತನ ಟ್ರೈಲರ್ ಲಾಂಚ್ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನ ನೆನೆದ ರವಿಚಂದ್ರನ್  ಓ ನನ್ನ ಚೇತನ ಸಿನಿಮಾ ಇದೇ ತಿಂಗಳ 15ನೇ ತಾರೀಖು ಅಂದ್ರೆ ಇದೇ ಶುಕ್ರವಾರ ರಾಜ್ಯದಾದ್ಯಂತ ರಿಲೀಸ್  ಆಗ್ತಿದೆ. ----------- ಮೊಬೈಲ್ ನೋಡೋ ಮಕ್ಕಳು... ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ...  ದೊಡ್ಡ ತಾರಾಬಳಗವಿಲ್ಲ... ಆದ್ರೆ ದೊಡ್ಡ ತಂತ್ರಜ್ಞರೇ ಕೈ ....

224

Read More...

Joram.Film News

Wednesday, December 06, 2023

  ಬೆಂಗಳೂರಿನಲ್ಲಿ ಜೋರಾಮ್ ತಂಡ         ತನ್ನ ಅಭಿನಯದ ಮೂಲಕ ಗಮನ ಸೆಳೆದಿರುವ ಬಾಲಿವುಡ್ ನಟ ಪದ್ಮಶ್ರೀ ಮನೋಜ್ಬಾಜ್ಪೇ ಹೊಸ ಚಿತ್ರ ’ಜೋರಾಮ್’ ಬಿಡುಗಡೆಗೆ ಸಿದ್ದವಾಗಿದೆ. ಕೊನೆ ಹಂತದ ಪ್ರಚಾರದ ಸಲುವಾಗಿ ತಂಡವು ಬೆಂಗಳೂರಿಗೆ ಭೇಟಿ ನೀಡಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನಾಯಕ ಮತ್ತು ನಿರ್ದೇಶಕರು ಉತ್ತರವಾದರು.        ತಡವಾಗಿ ಬಂದುದಕ್ಕೆ ಕ್ಷಮೆಯಾಚಿಸಿದ ಮನೋಜ್ಬಾಯ್ ಪೇ ಬೆಂಗಳೂರು ಸ್ಪಲ್ಪ ಗೊತ್ತಿದೆ. ನನ್ನ ಪೂರ್ವಜರು ಕರ್ನಾಟಕದವರು. ಕನ್ನಡ ಚಿತ್ರರಂಗ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅದರಲ್ಲೂ ’ಗರುಡ ಗಮನ ವೃಷಭ ವಾಹನ’ ’ಕಾಂತಾರ’ ಚಿತ್ರಗಳು ನೋಡಿದ್ದೇನೆ. ಅದು ನನ್ನನ್ನು ತುಂಬ ಕಾಡಿದೆ. ಇಂತಹ ಚಿತ್ರಗಳು ನನಗೆ ಧೈರ್ಯ, ....

179

Read More...

Color Hanuma.News

Tuesday, December 05, 2023

  ಕಲರ್ಗಿಂತ ಕಪ್ಪು ಬಿಳುಪು ಯುಗ ಚೆನ್ನಾಗಿತ್ತು - ಡಾ.ಹಂಸಲೇಖ        ನಾದಬ್ರಹ್ಮ ಡಾ.ಹಂಸಲೇಖ ಗರಡಿಯಲ್ಲಿ ಪಳಗಿರುವ ಸಾಕಷ್ಟು ವಿದ್ಯಾರ್ಥಿಗಳು ಚಿತ್ರರಂಗದಲ್ಲಿ ಗಾಯಕ, ನಿರ್ದೇಶಕ, ಸಂಗೀತ ಸಂಯೋಜಕ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಬೆಂಗಳೂರಿನ ಯಶ್ಜಿತ್ಗೌಡ ’ಕಲರ್ ಹನುಮ’ ಎನ್ನುವ ಕಿರುಚಿತ್ರಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರ ಶ್ರಮಕ್ಕೆ ಜಗದೀಶ.ಎಂ.ದೇವನಹಳ್ಳಿ ಬಂಡವಾಳ ಹೂಡಿರುವುದು ಹೊಸ ಅನುಭವ.         ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಚಿತ್ರ ವೀಕ್ಷಿಸಿದ ಹಂಸಲೇಖ, ಶಿಷ್ಯನ ಹಾಗೂ ಪ್ರಸಕ್ತ ಚಿತ್ರರಂಗದ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಎಕೆ 47 ನಂತಹ ಹಿಂಸೆಯ ವಿಚಿತ್ರವಾದ ಆಯುಧಗಳನ್ನು ....

168

Read More...

Hi Nanna.Film News

Tuesday, December 05, 2023

  *ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್…‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ*   ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಹಾಯ್ ನಾನ್ನ ಸಿನಿಮಾ ಇದೇ ಡಿಸೆಂಬರ್ 7ರಂದು ಪಂಚ ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಈ ಹಿನ್ನೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸುತ್ತಿರುವ ನಾನಿ ಇಂದು ಬೆಂಗಳೂರಿನಲ್ಲಿ ತಮ್ಮ ಚಿತ್ರದ ಪ್ರಮೋಷನ್ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಗೂ ಮುನ್ನ ಅವರು, ನಾಗವಾರದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ಭೇಟೆ ಕೊಟ್ಟು ಒಂದಷ್ಟು ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದು ಕೆಲ ಕಾಲ ಸಮಯ ಕಳೆದಿದ್ದಾರೆ.   ಶಿವಣ್ಣನ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ನಾನಿ ಸಿನಿಮಾ ಬಗ್ಗೆ ....

162

Read More...

Ladies Bar.Film News

Monday, December 04, 2023

  *ಮನಮೋಹಕವಾಗಿದೆ "ಲೇಡಿಸ್ ಬಾರ್" ಚಿತ್ರದ ಟೀಸರ್ ಹಾಗೂ ಹಾಡುಗಳು* .   ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್ ನಿರ್ದೇಶಿಸಿರುವ "ಲೇಡಿಸ್ ಬಾರ್" ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ, ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು "ಲೇಡಿಸ್ ಬಾರ್" ಕುರಿತು ಮಾಹಿತಿ ನೀಡಿದರು.   "ಲೇಡಿಸ್ ಬಾರ್" ಶೀರ್ಷಿಕೆ ಕೇಳಿದ ....

200

Read More...

Athi I Love You.Film News

Tuesday, December 05, 2023

  *ಅಥಿ ಐ ಲವ್ ಯು* ಸಿನಿಮಾ ನೋಡಿ ಜೋಡಿಗಳಿಗೆ ಗೋವಾಗೆ ಹೋಗುವ ವಿಶೇಷ ಆಫರ್!     ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಲೋಕೇಂದ್ರ ಸೂರ್ಯ ಮತ್ತು ಓಂ ಪ್ರಕಾಶ್ ಪುತ್ರಿ ಶ್ರಾವ್ಯರಾವ್ ಜೋಡಿಯಾಗಿ ನಟಿಸಿರುವ ವಿಭಿನ್ನ ಕಥಾವಸ್ತು ಹೊಂದಿರುವ ಅತಿ ಐ ಲವ್ ಯು. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಪ್ರೇಕ್ಷಕರನ್ನು ಥಿಯೇಟರಿಗೆ ಕರೆತರಲು ಅತಿ ಚಿತ್ರತಂಡ ವಿಭಿನ್ನ ರೀತಿಯ ಯೋಜನೆ ರೂಪಿಸಿದೆ. ಟಿಕೆಟ್ ಜೊತೆ ಕೂಪನ್ ಒಂದನ್ನು ನೀಡುತ್ತಿದ್ದು, ಲಕ್ಕಿ ಡ್ರಾ ನಲ್ಲಿ ಆಯ್ಕೆಯಾದ ಏಳು ಜೋಡಿಗಳನ್ನು ವಿಮಾನದಲ್ಲಿ ಗೋವಾ ....

246

Read More...

Rosy.Film Poster.News

Saturday, December 02, 2023

  *"ರೋಜಿ" ಚಿತ್ರದಲ್ಲಿ ಶ್ರೀನಗರ ಕಿಟ್ಟಿ** .    *"ಹುಡುಗರು" ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿ ಯೋಗಿ - ಶ್ರೀನಗರ ಕಿಟ್ಟಿ* .   ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ "ರೋಜಿ" ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. "ಲಿಯೋ" ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ  ಶ್ರೀನಗರ ಕಿಟ್ಟಿ "ರೋಜಿ" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ....

249

Read More...

Naanu Manthu Gunda 2.News

Wednesday, November 29, 2023

  ನಾನು ಮತ್ತು ಗುಂಡ ೨ ಟೈಟಲ್  ಟೀಸರ್ ದ್ರುವಸರ್ಜಾ ಬಿಡುಗಡೆ       ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ’ನಾನು ಮತ್ತು ಗುಂಡ’ ಚಿತ್ರವು ಎರಡು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು.   ಈಗ ಅದರ  ಮುಂದುವರೆದ ಭಾಗವಾಗಿ "ನಾನು ಮತ್ತು ಗುಂಡ -2" ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ. ಮೊದಲ ಭಾಗದಲ್ಲಿ ಮರಣ ಹೊಂದಿದ್ದ  ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ.  ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ....

198

Read More...

Marichi.Film News

Thursday, November 23, 2023

ಮರೀಚಿ ಟ್ರೇಲರ್ ಬಿಡುಗಡೆ         ‘ಮರೀಚಿ’  ಚಿತ್ರದ ಪ್ರಚಾರದ ಎರಡನೇ ಹಂತವಾಗಿ ಟ್ರೇಸಲರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ಕಥೆ, ನಿರ್ದೇಶನ ಹಾಗೂ ಬಂಡವಾಳ ಹೂಡಿರುವ ಸಿದ್ದಾರ್ವ್ ಹೇಳುವಂತೆ ಇದೊಂದು ಸೆಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳ ಝಲಕ್ ಕೊಡುತ್ತದೆ. ೧೫೦ ಟೈಟಲ್‌ಗಳು ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇರುವ ಶೀರ್ಷಿಕೆ ಆಯ್ಕೆ ಮಾಡಬೇಕಿತ್ತು. ಕೊನೆಗೆ ‘ಮರೀಚಿ’ ಅಂತಿಮವಾಯಿತು. ಬ್ರಹ್ಮನ ಮಗನಿಗೆ ಇದೇ ಹೆಸರಿನಿಂದ ಕರೆಯುತ್ತಾರೆ. ಈತ ದೇವದಾಸ್, ಅಸುರರ ಗಾಡ್‌ಫಾದರ್. ಇದರಲ್ಲಿ ಒಳ್ಳೆಯದು, ಕೆಟ್ಟದಕ್ಕೆ ಗಾಡ್ ಫಾದರ್ ತೆಗೆದುಕೊಳ್ಳಲಾಗಿದೆ. ಕಿರುಚಿತ್ರಗಳನ್ನು ಮಾಡಿ, ಇದರ ಅನುಭವದಿಂದ ....

224

Read More...

Journey.Film Launch.News

Thursday, November 23, 2023

  *ಶುರುವಾಯ್ತು ಹೊಸಬರ ‘ಜರ್ನಿ’..ನಿರೂಪಕನಿಂದ ನಿರ್ದೇಶನದತ್ತ ಅಗ್ನಿ..* ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್ ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾ ಅಗ್ನಿ..   ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಜರ್ನಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.   ನಿರ್ದೇಶಕ ಅಗ್ನಿ ಮಾತನಾಡಿ, 5 ಜನ ಸ್ನೇಹಿತರ ....

222

Read More...

Nadhi Awards.News

Sunday, November 19, 2023

  *ನಂದಿ ಫಿಲ್ಮಂ ಅವಾರ್ಡ್-2023ರ ಕರ್ಟನ್ ರೈಸ್ ಗೆ ಕಿಚ್ಚ ಸುದೀಪ್ ಚಾಲನೆ....ಡಿಸೆಂಬರ್ 6ಕ್ಕೆ ಶುರುವಾಗಲಿದೆ ಪ್ರಶಸ್ತಿ ಸಮಾರಂಭ*     ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆ ನಡೆದಿದೆ. ನಂದಿ ಚಲನಚಿತ್ರ ಪ್ರಶಸ್ತಿ-2023ರ ಕರ್ಟನ್ ರೈಸ್ ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಹೊಸ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದರು.     ಕಿಚ್ಚ ಸುದೀಪ್ ಮಾತನಾಡಿ, ‌ಸಂಸ್ಥಾಪಕರಿಗೆ ಒಳ್ಳೆದಾಗಲಿ. ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗುವುದು ಬಿಟ್ಟು 2003-2004 ಕೊನೆ.‌ಆ ಬಳಿಕ ಅವಾರ್ಡ್ಸ್  ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಅದಕ್ಕೆ  ಬೇರೆ ಇತಿಹಾಸವಿದೆ. ‌ಆದರೆ ಇಲ್ಲಿ ಆ ....

238

Read More...

Sugar Factory.News

Saturday, November 18, 2023

  *"ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಂದ ಬಿಡುಗಡೆಯಾಯಿತು "ಶುಗರ್ ಫ್ಯಾಕ್ಟರಿ" ಟ್ರೇಲರ್..*    *"ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಈ ಚಿತ್ರ ನವೆಂಬರ್ 24 ರಂದು ತೆರೆಗೆ*   ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ  ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ  "ಶುಗರ್ ಫ್ಯಾಕ್ಟರಿ" ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ‌. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಭರ್ಜರಿ ಯಶಸ್ವಿಯಾಗಲೆಂದು ಹಾರೈಸಿದರು. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ....

214

Read More...

Maayanagari.News

Saturday, November 18, 2023

  *ಬಿಡುಗಡೆಯಾಯ್ತು ಮಾಯಾನಗರಿಯ ಲಚ್ಚಿ ಹಾಡು*   ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಾಯಾನಗರಿ ಚಿತ್ರದ ಲಚ್ಚಿ ಲಚ್ಚಿ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರೀಲ್ಸ್ ನಲ್ಲೇ ಫೇಮಸ್ ಆಗಿ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ  5 ವರ್ಷದ ಮಗು  ನಿಶಿತಾ ಕೈಲಿ ಲಚ್ಚಿ ಹಾಡನ್ನು ಬಿಡುಗಡೆಗೊಳಿಸಲಾಯಿತು. ಅನೀಶ್ ತೇಜೇಶ್ವರ್, ತೇಜು ಹಾಗೂ ಶ್ರಾವ್ಯರಾವ್ ಪ್ರಮುಖ  ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ  ಶಂಕರ್ ಆರಾಧ್ಯ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನಿಟ್ಟುಕೊಂಡು ಶಂಕರ್ ಆರಾಧ್ಯ ಈ ಚಿತ್ರವನ್ನು ನಿರೂಪಿಸಿದ್ದಾರೆ. ಮಾಯಾನಗರಿ ಇದೀಗ ಬಿಡುಗಡೆಗೆ ....

237

Read More...

Firstnight with Deva.News

Saturday, November 18, 2023

  *ಪ್ರಥಮ್ ಅಭಿನಯದ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರಕ್ಕೆ ಚಾಲನೆ* .   "ಬಿಗ್ ಬಾಸ್" ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ, ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಹಿರಿಯನಟ ಶ್ರೀನಿವಾಸಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.   "ಫಸ್ಟ್ ನೈಟ್ ವಿತ್ ದೆವ್ವ" ಹಾರಾರ್ ವಿತ್ ಕಾಮಿಡಿ ಜಾನರ್ ನ ಚಿತ್ರ ಎಂದು ಮಾತನಾಡಿದ ನಾಯಕ ಪ್ರಥಮ್, ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನಾನು ಈ ಚಿತ್ರಕ್ಕೆ ಕಥೆ ಬರೆಯಲು "ವಿಕ್ರಮ್ ....

266

Read More...

Vikramarka.Film News

Saturday, November 18, 2023

 

ಗಾಯಿತ್ರಿ ದೇವಿ ಸನ್ನಿದಿಯಲ್ಲಿ ವಿಕ್ರಮಾರ್ಕ ಮುಹೂರ್ತ

        ’ಟೆಡ್ಡಿಬೇರ್’ ’ಸುಡುಕು’ ಮತ್ತು ’ವಿಧುರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಲೋಕೇಶ್.ಬಿ ಈಗ ’ವಿಕ್ರಮಾರ್ಕ’ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ವೇತ ಶ್ರೀ ಪ್ರೊಡಕ್ಷನ್ಸ್ ಅಡಿಯಲ್ಲಿ ಬಾಂಬೆ ಮೂಲದ ಉದ್ಯಮಿ ಉಮೇಶ್‌ಕುಮಾರ್ ಬಂಡವಾಳ ಹೂಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

216

Read More...
Copyright@2018 Chitralahari | All Rights Reserved. Photo Journalist K.S. Mokshendra,