‘ *ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಗೆ ಅಭಿಮಾನಿಗಳು ಫಿದಾ* .". *ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 24ರಂದು ತೆರೆಗೆ* . ರಾಜ್ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲೈಟರ್ ಬುದ್ಧ ....
ಫಾರಂಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ ಮೂರು ತಿಂಗಳ ಹಿಂದೆ ಅದ್ದೂರಿಯಾಗಿ ಮುಹೂರ್ತ ಆಚರಿಕೊಂಡಿದ್ದ ’ನಾಗಶೇಖರ್ ಅವರ ನಿರ್ದೇಶನದ ಸಂಜು ವೆಡ್ಸ್ ಗೀತಾ ೨’ ಚಿತ್ರದ ಚಿತ್ರೀಕರಣ ಇದೀಗ ಕನಕಪುರ ರಸ್ತೆಯ ಫಾರಂ ಹೌಸ್ ನಲ್ಲಿ ನಡೆಯುತ್ತಿದೆ. ಅಲ್ಲಿ ತಮ್ಮ ೧೦ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿಯುತ್ತಿದ್ದರು. ಚಿತ್ರೀಕರಣ ವೀಕ್ಷಣೆಗೆಂದು ಮಾದ್ಯಮ ಮಿತ್ರರನ್ನು ಶೂಟಿಂಗ್ ಲೊಕೇಶನ್ ಗೆ ಆಹ್ವಾನಿಸಿದ್ದ ನಿರ್ದೇಶಕ ನಾಗಶೇಖರ್, ಶೂಟಿಂಗ್ ಆರಂಭಿಸುವುದು ತಡವಾಗಿದ್ದಕ್ಕೆ ಕಾರಣ ನಮ್ಮ ಚಿತ್ರದ ....
*ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ "ಎಲೆಕ್ಟ್ರಾನಿಕ್ ಸಿಟಿ" ನವೆಂಬರ್ 24 ರಂದು ತೆರೆಗೆ* . ಬೆಂಗಳೂರಿಗೆ ಐಟಿ ಸಿಟಿ ಎಂದು ಹೆಸರು ಬರಲು "ಎಲೆಕ್ಟ್ರಾನಿಕ್ ಸಿಟಿ" ಪ್ರಮುಖ ಕಾರಣ. ಅಷ್ಟು ಐಟಿ ಕಂಪನಿಗಳು ಅಲ್ಲಿದೆ. ಅಂತಹ ಪ್ರತಿಷ್ಠಿತ ಬಡಾವಣೆಯ ಹೆಸರೆ ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಕೆ.ಪಿ.ಸಿ.ಸಿ ಜನರಲ್ ಸೆಕ್ರೆಟರಿ ಶಿವಣ್ಣ, ಶಿಕ್ಷಣ ತಜ್ಞ ವುಡೆ ಪಿ ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಲಿಂಗದೇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆರ್ ಚಿಕ್ಕಣ್ಣ ನಿರ್ಮಿಸಿ , ನಿರ್ದೇಶಿಸಿರುವ "ಎಲೆಕ್ಟ್ರಾನಿಕ್ ಸಿಟಿ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಾನು ....
*ಮನುಷ್ಯನ ದೈನಂದಿನ ಬದುಕಿನ ಬವಣೆಗಳ ಸುತ್ತಲ್ಲಿನ ಕಥೆ ಆಧರಿಸಿದೆ "ಮುದುಡಿದ ಎಲೆಗಳು"* . ರಿಯೊ ಪ್ರೊಡಕ್ಷನ್ ಲಾಂಛನದಲ್ಲಿ ರಂಜನಿ ಅವರು ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ ನಿರ್ದೇಶಿಸುತ್ತಿರುವ " ಮುದುಡಿದ ಎಲೆಗಳು" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿತು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರತಂಡದವರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು. ಚಿತ್ರದ ಕುರಿತು ಮೊದಲು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ....
*ಯೋಗಿ ಅಭಿನಯದ "ರೋಜಿ"* *ಚಿತ್ರದಲ್ಲಿ ಸ್ಯಾಂಡಿ ಮಾಸ್ಟರ್* . *"ಲಿಯೊ" ಖ್ಯಾತಿಯ ನಟ ಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ* . ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ. ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ "ರೋಜಿ" ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ ವಿಜಯ್ ಅಭಿನಯದ "ಲಿಯೊ" ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಈ ವಿಷಯ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಸ್ಯಾಂಡಿ ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ....
*ಹದಿಹರೆಯದವರ ತುಂಟಾಟದ ಕಥಾಹಂದರ ಹೊಂದಿರುವ "ಸ್ಕೂಲ್ ಡೇಸ್" ನವೆಂಬರ್ 24 ರಂದು ತೆರೆಗೆ* . ಉಮೇಶ್ ಎಸ್ ಹಿರೇಮಠ ನಿರ್ಮಾಣದಲ್ಲಿ ಸಂಜಯ್ ಹೆಚ್ ನಿರ್ದೇಶಿಸಿರುವ "ಸ್ಕೂಲ್ ಡೇಸ್" ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಮಾಜಿ ಶಾಸಕ ನೆ ಲ ನರೇಂದ್ರಬಾಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. "ಸ್ಕೂಲ್ ಡೇಸ್" ಹೆಸರೆ ಹೇಳುವಂತೆ ಶಾಲೆಯ ದಿನಗಳ ಕುರಿತಾದ ಚಿತ್ರ. ಅದರಲ್ಲೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸುತ್ತಲ್ಲಿನ ಕಥೆ. ಈ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬಂದಿದೆ. ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆದಿದೆ. ಚಿತ್ರ ನೋಡಿದಾಗ ನಮ್ಮ "ಸ್ಕೂಲ್ ಡೇಸ್" ನೆನಪಾಗುವುದು ....
ಸತ್ಯ ಘಟನೆಯ ಕೈವ ‘ಬೆಲ್ ಬಾಟಂ’ ನಿರ್ದೇಶಕ ಜಯತೀರ್ಥ ಸದ್ದಿಲ್ಲದೆ ‘ಕೈವ’ ಸಿನಿಮಾ ಮುಗಿಸಿದ್ದಾರೆ. ಅವರು ಹೇಳುವಂತೆ ೧೯೮೩ರಲ್ಲಿ ಬೆಂಗಳೂರಿನ ತಿಗಳರ ಪೇಟೆಯಲ್ಲಿ ನಡೆದ ಘಟನೆಯಾಗಿರುತ್ತದೆ. ಎಂಟು ವರ್ಷದ ಹಿಂದೆ ಪೋಸ್ಟ್ ಮಾರ್ಟಂ ರೂಮ್‌ಗೆ ಹೋಗಿದ್ದೆ. ಅಲ್ಲಿನ ಸಿಬ್ಬಂದಿಗಳನ್ನು ಮಾತನಾಡಿಸುವಾಗ, ನಲವತ್ತು ವರ್ಷಗಳ ಹಿಂದೆ ತಿಗಳರಪೇಟೆಯಲ್ಲಿ ನಡೆದ ಘಟನೆಯ ಸಣ್ಣ ಸುಳಿವು ಸಿಕ್ಕಿತು. ಅದರ ಜಾಡು ಹಿಡಿದು ಹೋದಾಗ, ಕರಗದಲ್ಲಿ ಶುರುವಾದ ಪ್ರೀತಿ, ಬಳಿಕ ನಡೆದ ಹತ್ಯೆ ಇದೆಲ್ಲದರ ಮಾಹಿತಿ ದೊರೆಯಿತು. ಅದನ್ನು ಇನ್ನಷ್ಟು ಕೆದಕಿದಾಗ ರೋಚಕತೆ ಸುದ್ದಿಗಳು ತಿಳಿಯುತ್ತಾ ಹೋಯಿತು. ಅದನ್ನೆ ಚಿತ್ರಕಥೆಯಾಗಿ ಮಾರ್ಪಡಿಸಿ, ಸಿನಿಮಾ ಸ್ಪರ್ಶ ....
*ದೀಪಾವಳಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಯಿತು "ಬ್ಯಾಡ್ ಮ್ಯಾನರ್ಸ್" ಚಿತ್ರದ ಟ್ರೇಲರ್* . *ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸಿರುವ ಈ ಚಿತ್ರ ನವೆಂಬರ್ 24 ರಂದು ತೆರೆಗೆ* . ಕೆ.ಎಂ.ಸುಧೀರ್ ನಿರ್ಮಾಣದ, "ದುನಿಯಾ" ಸೂರಿ ನಿರ್ದೇಶನದ ಹಾಗೂ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸಿರುವ "ಬ್ಯಾಡ್ ಮ್ಯಾನರ್ಸ್" ಚಿತ್ರದ ಟ್ರೇಲರ್ ದೀಪಾವಳಿ ಹಬ್ಬದ ಶುಭದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಗಿದೆ. ಸುಮಲತ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಅವಿವಾ ಅಭಿಷೇಕ್, ವಿನೋದ್ ಪ್ರಭಾಕರ್, ವಿಕ್ರಮ್ ರವಿಚಂದ್ರನ್, ಧನ್ವೀರ್ ಮುಂತಾದವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ....
*ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ "ಕುಚುಕು" ಚಿತ್ರದ ಟ್ರೇಲರ್ ಹಾಗೂ ಹಾಡುಗಳು* ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ "ಕುಚುಕು" ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ - ವಿತರಕ ಎಂ ಎನ್ ಕುಮಾರ್, ನಿರ್ಮಾಪಕ ಎಂ ಡಿ ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಟ್ರೇಲರ್ ಹಾಗೂ ....
ಹೊಸ ಸತ್ಯಂ
ಎಂಬತ್ತರ ದಶಕದಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ‘ಸತ್ಯಂ’ ಚಿತ್ರವೊಂದು ತೆರೆಕಂಡಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಂಡಿದೆ. ಅಶೋಕ್‌ಕಡಬ ನಿರ್ದೇಶನ ಮಾಡಿದ್ದು, ಶ್ರೀ ಮಾತಾ ಕ್ರಿಯೇಶನ್ಸ್ ಅಡಿಯಲ್ಲಿ ಮಾಂತೇಶ್.ವಿ.ಕೆ ಬಂಡವಾಳ ಹೂಡಿರುವುದು ಹೊಸ ಅನುಭವ. ಅಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
*ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದಂದು ಬಿಡುಗಡೆಯಾಯಿತು "ಭೈರಾದೇವಿ" ಚಿತ್ರದ ಟೀಸರ್ ಹಾಗೂ "ಅಜಾಗ್ರತ" ಚಿತ್ರದ ಪೋಸ್ಟರ್* . ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರು ನಾಯಕಿಯಾಗಿ ನಟಿಸಿರುವ "ಭೈರಾದೇವಿ" ಚಿತ್ರದ ಟೀಸರ್ ಹಾಗೂ "ಅಜಾಗ್ರತ" ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು. ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಈ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇಂದು ನನ್ನ ಹುಟ್ಟುಹಬ್ಬ. ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ತಮಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ....
*ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯದಲ್ಲಿ ನಿರ್ಮಾಣವಾಗಿದೆ "ಸಿಲ ನೋಡಿಗಳಿಲ್" ತಮಿಳು ಚಿತ್ರ* . " *ಮುಂದಿನ ನಿಲ್ದಾಣ" ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಈ ಚಿತ್ರ ನವೆಂಬರ್ 24 ರಂದು ಬಿಡುಗಡೆ* . "ಸಜನಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, "ಗಾಳಿಪಟ" ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಶರ್ಮಿಳಾ ಮಾಂಡ್ರೆ ಈಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ ಮಾಂಡ್ರೆ ಹೊತ್ತಿಕೊಂಡಿದ್ದಾರೆ. ಈ ಹಿಂದೆ "ಮುಂದಿನ ನಿಲ್ದಾಣ" ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ಈ ಚಿತ್ರವನ್ನು ....
*ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ "ಕುಚುಕು" ಚಿತ್ರದ ಟ್ರೇಲರ್ ಹಾಗೂ ಹಾಡುಗಳು* ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ "ಕುಚುಕು" ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ - ವಿತರಕ ಎಂ ಎನ್ ಕುಮಾರ್, ನಿರ್ಮಾಪಕ ಎಂ ಡಿ ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಟ್ರೇಲರ್ ಹಾಗೂ ....
*ತೆರೆಗೆ ಬರಲು ರೆಡಿ ಎಸ್ತರ್ ನರೋನ್ಹಾ ಹೊಸ ಕನಸು.. ನ.17ಕ್ಕೆ ‘ದಿ ವೆಕೆಂಟ್ ಹೌಸ್’ ರಿಲೀಸ್* ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ’ನಾವಿಕ’, ’ಅತಿರಥ’, ’ನುಗ್ಗೇಕಾಯಿ’, ’ಲೋಕಲ್ ಟ್ರೈನ್’, ’ಲಂಕೆ’ ಇನಾಮ್ದಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬ್ಯೂಟಿ ’ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಕನಸ್ಸಿಗೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ SRV ಥಿಯೇಟರ್ ....
ಆನಂದ್ ನಾ ಕೋಳಿಕೆ ರಂಗ ನವೆಂಬರ್ 10ಕ್ಕೆ ಬಿಡುಗಡೆ.. ಎಸ್.ಟಿ.ಸೋಮಶೇಖರ್ ನಿರ್ಮಿಸಿ ಗೊರವಾಲೆ ಮಹೇಶ್ ನಿರ್ದೇಶನ ಮಾಡಿರುವ ಗ್ರಾಮೀಣ ಭಾಗದ ಸೊಗಡಿನ ಕಥೆ ಹೇಳುವ ’ನಾ ಕೋಳಿಕೆ ರಂಗ ಇದೇ 10 ರಂದು ಬಿಡುಗಡೆ ಕಾಣುತ್ತಿದೆ. ಮಾಸ್ಟರ್ ಆನಂದ್ ಖ್ಯಾತಿಯ ಆನಂದ್ ಹಾಗೂ ರಾಜೇಶ್ವರಿ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಾಮಿಡಿ ಕಿಲಾಡಿ ಕಲಾವಿದರು ನಟಿಸಿರುವುದು ವಿಶೇಷ. ಸೋಮವಾರ ನಡೆದ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡು ವಿವರಗಳನ್ನು ನೀಡಿತು. ಇದು ಕೊರೊನಾ ಸಂಕಷ್ಟಗಳನ್ನು ಎದುರಿಸಿ ನಿಂತಿರುವ ಚಿತ್ರ. ಹಾಗಾಗಿ ಬಿಡುಗಡೆ ಕಾಣುವುದು ತಡವಾಗಿದೆ. ಆದರೂ ಚಿತ್ರ ....
ರಾಣೆಬೆನ್ನೂರಿನಲ್ಲಿ ಗರಡಿ ಸದ್ದು ನವೆಂಬರ್ ೧೦ರಂದು ‘ಗರಡಿ’ ಚಿತ್ರವು ಬಿಡುಗಡೆಯಾಗುತ್ತಿದೆ. ಪ್ರಚಾರದ ಕೊನೆ ಹಂತವಾಗಿ ರಾಣೆಬೆನ್ನೂರಿನಲ್ಲಿ ಅದ್ದೂರಿ ಟ್ರೇಲರ್ ಅನಾವರಣ ಕಾರ್ಯಕ್ರಮ ನಡೆಯಿತು. ದರ್ಶನ್ ಹಾಜರಿದ್ದುದು ಕಳೆ ತಂದುಕೊಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗರಾಜಭಟ್ ಇಲ್ಲಿಯವರೆಗೂ ಮಾಡಿದ ಸಿನಿಮಾಗಳಿಗಿಂತ ಇದು ವಿಭಿನ್ನವಾಗಿದೆ. ರಾಣೆಬೆನ್ನೂರಿನಲ್ಲಿ ಹಲವಾರು ಕುಸ್ತಿಪಟುಗಳು ಇದ್ದಾರೆ. ಈ ಚಿತ್ರ ಅವರಿಗೆ ಉತ್ಸಾಹ ತುಂಬುತ್ತದೆ. ಯುವ ಕಲಾವಿದರು ಜೀವನದಲ್ಲಿ ತಾಳ್ಮೆ ಇಟ್ಟುಕೊಳ್ಳಬೇಕು. ಎಲ್ಲರಿಗೂ ಟೈಮ್ ಬಂದೇ ಬರುತ್ತದೆ. ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಲು. ಸಿಂಗಾರಿ ಚಿತ್ರದಿಂದ ....
*ಕನ್ನಡ ರಾಜ್ಯೋತ್ಸವದಂದು ಆರಂಭವಾಯಿತು ಪ್ರಜ್ವಲ್ ದೇವರಾಜ್ ಅಭಿನಯದ "ಚೀತಾ" ಚಿತ್ರ* . *ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶನದತ್ತ* . ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಚೀತಾ" ಚಿತ್ರದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್ ಎಂ ಟಿ ಶಾಲೆ ಆಟದ ಮೈದಾನದಲ್ಲಿ ನೆರವೇರಿತು. ಪ್ರಜ್ವಲ್ ದೇವರಾಜ್ ಕನ್ನಡ ಭಾವುಟ ಹಾರಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಮುಹೂರ್ತ ಸಮಾರಂಭದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ....
ಉಸಿರೇ ಉಸಿರೇಗೆ ಕಿಚ್ಚ ಸಾಥ್
‘ಉಸಿರೇ ಉಸಿರೇ’ ಸಿನಿಮಾದ ಟ್ರೇಲರ್ ಓರಾಯನ್ ಮಾಲ್ ಲೇಕ್‌ಪಕ್ಕ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಗೆಳಯನಿಗೆ ಒಳ್ಳೆಯದಾಗಲೆಂದು ಶುರುವಿನಿಂದಲೂ ಪ್ರೋತ್ಸಾಹ ಕೊಡುತ್ತಿರುವ ಸುದೀಪ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತರ ಮಾತನಾಡಿದ ಅವರು ರಾಜೀವ್ ಸಿನಿಮಾ ಗೆಲ್ಲಬೇಕು. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ನಟಿಸಿದ್ದು, ನಾನು ಕೂಡ ಅಭಿನಯಿಸಿದ್ದೇನೆ. ತಂಡವು ಸಾಕಷ್ಟು ಶ್ರಮಪಟ್ಟು ಉತ್ತಮವಾದ ಸಿನಿಮಾ ಮಾಡಿದ್ದಾರೆ. ಸದ್ಯದಲ್ಲೆ ಬಿಡುಗಡೆಯಾಗಲಿದ್ದು, ನೀವೆಲ್ಲರು ಹರಸಬೇಕೆಂದು ಕೋರಿದರು.
ಚಿತ್ರೀಕರಣೋತ್ತರ ಕೆಲಸದಲ್ಲಿ ಆರಮ್ ಅರವಿಂದ್ ಸ್ವಾಮಿ ‘ನಮ್ ಗಣಿ ಬಿ.ಕಾಂ ಪಾಸ್’ ಮತ್ತು ‘ಗಜಾನನ ಅಂಡ್ ಗ್ಯಾಂಗ್’ ನಿರ್ದೇಶನ ಮಾಡಿರುವ ಅಭಿಷೇಕ್‌ಶೆಟ್ಟಿ ಅವರ ಮೂರನೇ ಚಿತ್ರ ‘ಆರಾಮ್ ಅರವಿಂದ್‌ಸ್ವಾಮಿ’ ಕಥೆಯು ರೋಮ್ಯಾಂಟಿಕ್ ಕಾಮಿಡಿ ವಿಷಯವನ್ನು ಒಳಗೊಂಡಿದೆ. ನಾಯಕ ಅನೀಶ್‌ತೇಜಶ್ವರ್‌ಗೆ ಮಿಲನಾನಾಗರಾಜ್ ಮತ್ತು ಹೃತಿಕಾಶ್ರೀನಿವಾಸ್ ನಾಯಕಿಯರು. ನಿರ್ದೇಶಕರು ಕಥೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಎಲ್ಲರೂ ಬಂದು ಆರಾಮಾಗಿದ್ದೀಯಾ ಅಂತ ಕೇಳುತ್ತಾರೆ. ಯಾರಿಗೂ ನಮ್ಮ್ ಕಷ್ಟ ಹೇಳೋದಕ್ಕೆ ಸಾಧ್ಯವಾಗುವುದಿಲ್ಲ. ಹೇಳಿದರೆ ಸಹಾಯ ಮಾಡ್ತೀಯಾ ....
ಭೈರ್ಯ ಕೆಎ-೦೭ ಮೋಷನ್ ಪೋಸ್ಟರ್ ಬಿಡುಗಡೆ ಅನಾಥನಾಗಿ ಬೇರೆಯವರ ಆಶ್ರಯದಲ್ಲಿ ಬೆಳೆದ ಗೌರಿಬಿದನೂರಿನ ರೋಷನ್.ಎಂ.ರಾವ್ ಭರತನಾಟ್ಯ ಪ್ರವೀಣ, ಮುಂಬೈನಲ್ಲಿ ನಟನೆ ತರಭೇತಿ ಪಡೆದುಕೊಂಡು ಬಂದಿದ್ದಾರೆ. ಮುಂದೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿ, ಸ್ಕ್ರಿಪ್ಟ್ ಬರೆದುಕೊಂಡು ಹಲವು ಚಿತ್ರಗಳಿಗೆ ಸೆಟ್ ಕೆಲಸ ನಿರ್ವಹಿಸಿ, ಮಧ್ಯೆ ‘ತಲ್ವಾರ್’ ಕಿರುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲಾ ಅನುಭವದಿಂದ ‘ಭೈರ್ಯ ಕೆಎ-೦೭’ ಚಿತ್ರಕ್ಕೆ ಕಥೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿರುವ ಕನ್ನಡ ಪ್ರೇಮಿ ಬಾಗಲಕೋಟೆಯ ಷರೀಫ ಬೇಗಂ ನಡಾಫ್, ಎನ್‌ಜಿಓ ಸಂಘ ....