*ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..* ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೊಲೀಸ್ ಖದರ್ ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ. ಮರೀಚಿ ಎಂದರೆ ಬ್ರಹ್ಮನ ಮಗ. ದೇವದಾಸ್ ಹಾಗೂ ಅಸುರರ ಗಾಡ್ ....
*ಟೀಸರ್ ನಲ್ಲೇ ಕುತೂಹಲ ಮೂಡಿಸಿದ "ಅಲೆಕ್ಸಾ" .* *ಪವನ್ ತೇಜ್ - ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ.* ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ "ಅಲೆಕ್ಸಾ" ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಕೇಶನ್ ....
*ಪ್ರಾಮಿಸಿಂಗ್ ಆಗಿದೆ ‘ಸೇನಾಪುರ’ ಟ್ರೇಲರ್..ನವೆಂಬರ್ ನಲ್ಲಿ ಸಿನಿಮಾ ರಿಲೀಸ್* ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಡೆದ ನೈಜಘಟನೆ ಆಧಾರಿತ ಚಿತ್ರ ಸೇನಾಪುರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್, ನಟಿ ಪ್ರಿಯಾ ಹಾಸನ್ ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ಲಾಂಚ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್ ಮಾತನಾಡಿ, ಚಿತ್ರತಂಡ ಬಂದು ಕೇಳಿದಾಗ ಸೇನಾಪುರ ಏನೋ ವಿಶೇಷವಾಗಿದೆ. ಬಳಿಕ ಎಲ್ಲಾ ವಿವರಗಳು ಗೊತ್ತಾಯಿತು. ಟ್ರೇಲರ್ ಲಾಂಚ್ ಆಗಿದೆ. ಇಡೀ ತಂಡದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು. ನಿರ್ದೇಶಕ ಗುರು ಸಾವನ್ ಮಾತನಾಡಿ, ಸೇನಾಪುರ ....
*ನೂತನ ವಾಗಿ ಅನಾವರಣಗೊಂಡ ವಿನೋದ್ ಪ್ರಭಾಕರ್ ಅಭಿನಯದ "ಫೈಟರ್ " ಚಿತ್ರದ ಬಿಡುಗಡೆ ದಿನಾಂಕ* *ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು,ಅನೇಕ ಚಳುವಳಿ ಹೋರಾಟಗಾರರಿಂದ "ಫೈಟರ್" ಚಿತ್ರದ ಬಿಡುಗಡೆ ದಿನಾಂಕ ಘೋಷಣೆ* . ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಫೈಟರ್" ಚಿತ್ರದ ಬಿಡುಗಡೆ ದಿನಾಂಕ ನೂತನವಾಗಿ ಅನಾವರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ....
*ಸದ್ದು ಮಾಡ್ತಿವೆ ಎಸ್ತರ್ ನರೋನ್ಹಾ ನಿರ್ದೇಶನದ ಚೊಚ್ಚಲ ಸಿನಿಮಾ ‘ದಿ ವೆಕೆಂಟ್ ಹೌಸ್’ ಹಾಡು* ಬಹುಭಾಷಾ ನಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗಾಗಲೇ ‘ದಿ ವೆಕೆಂಟ್ ಹೌಸ್’ ಸಿನಿಮಾದ ಫಸ್ಟ್ ಲುಕ್ ಭಾರಿ ಸದ್ದು ಮಾಡಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದ ‘ದಿ ವೇಕೆಂಟ್ ಹೌಸ್’ ಬಗ್ಗೆ ನರೋನಾ ಮಾಹಿತಿ ಹಂಚಿಕೊಂಡಿದ್ದಾರೆ. ಎಸ್ತರ್ ನರೋನ್ಹಾ ....
*ಟ್ರೈಲರ್ನಲ್ಲಿ ಮನ್ಮಥನ ಲೀಲಾವಿನೋದ* ಅಂದು ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ಮಿ.ಅಂಡ್ ಮಿಸಸ್ ಮನ್ಮಥ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅದರಲ್ಲಿ ಸುಬ್ರಮಣಿ ಅವರು ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ. ಸುಬ್ರಮಣಿ ಅವರೇ ನಿರ್ದೇಶನ ಮಾಡಿರುವ "ಮಿಸ್ಟರ್ ಅಂಡ್ ಮಿಸ್ ಮನ್ಮಥ" ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಇರುವ ಚಿತ್ರವಾಗಿದ್ದು, ಮೂರು ದಶಕಗಳಿಂದ ಸೀರಿಯಲ್, ಸಿನಿಮಾ, ನಾಟಕ ಅಂತ ಅಭಿನಯದಲ್ಲಿ ತೊಡಗಿಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ ಅವರು ಈ ಚಿತ್ರದ ....
*ಗೆಲುವಿನ ಹಾದಿಯಲ್ಲಿ"13"* ಪ್ರೇಕ್ಷಕರ ಪಾಸಿಟಿವ್ ರೆಸ್ಪಾನ್ಸ್, *ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು* ಹಣ ಮನುಷ್ಯನ ಜೀವನದಲ್ಲಿ ಏನೆಲ್ಲ ಆಟ ಆಡಿಸುತ್ತೆ ಎಂದು ಹೇಳುವ ಚಿತ್ರ "13" ಕಳೆದ ಶುಕ್ರವಾರ ತೆರೆಕಂಡಿದ್ದು ವೀಕ್ಷಕರ ಹಾಗೂ ಮಾದ್ಯಮಗಳ ಪ್ರಶಂಸೆಗೆ ಪಾತ್ರವಾಗಿದೆ. ಸಿನಿಮಾ ಇಷ್ಟಪಟ್ಟು ನೋಡುತ್ತಿರುವ ವೀಕ್ಷಕರಿಗೆ ಕೃತಜ್ಞತೆ ಅರ್ಪಿಸಲೆಂದೇ ಚಿತ್ರತಂಡ ಪತ್ರಿಕಾಗೋಷ್ಟಿ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರಾದ ಮಂಜುನಾಥ್ ಗೌಡ, ಕೇಶವಮೂರ್ತಿ, ಮಂಜುನಾಥ ಹೆಚ್.ಎಸ್. ಹಾಜರಿದ್ದು ಚಿತ್ರದ ಗೆಲುವಿನ ಸಂಭ್ರಮ ಹಂಚಿಕೊಂಡರು. ಆರಂಭದಲ್ಲಿ ರಾಗಣ್ಣ ....
*ಬಿಡುಗಡೆ ಆಯ್ತು ಸ್ಯಾಂಡಲ್ವುಡ್ ಸಲಗನ Psych ಸಾಂಗ್,ಮೇಕಿಂಗ್ ಅಂತೂ ಅದ್ಭುತ*
ಸ್ಯಾಂಡಲ್ ವುಡ್ ಸಲಗ,ದುನಿಯಾ ವಿಜಯ್ ರವರ ನಿರ್ದೇಶನದ ಎರಡನೆಯ ಬಹು ನಿರೀಕ್ಷಿತ ಭೀಮ ಚಿತ್ರದ *ಸೈಕ್ ಸಾಂಗ್* ಇವತ್ತು ಬಿಡುಗಡೆಯಾಗಿದ್ದು, ಈ ಹಾಡನ್ನು ರಾಹುಲ್ ಡಿಟ್ಟೋ ಮತ್ತು ಎಂ ಸಿ ಬಿಜ್ಜು ಹಾಡಿದ್ದು ವಿಶೇಷವಾಗಿದೆ..
ಸ್ವತಃ ರಾಹುಲ್ ಡಿಟ್ಟೋ,ಎಂ ಸಿ ಬಿಜ್ಜು ಮತ್ತು ನಾಗಾರ್ಜುನ ಶರ್ಮಾ ಈ ಮೂವರು ಸೇರಿ ಬರೆದಿರುವ ಸಾಹಿತ್ಯಕ್ಕೆ ಸಂಗೀತ ಮಾಂತ್ರಿಕ ಚಾರಣರಾಜ್ ಮ್ಯೂಸಿಕ್ ನೀಡಿ,ಭೀಮನ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರೆ ತಪ್ಪಿಲ್ಲ..
*ಮಂಜುನಾಥ್ ಹೂಡಲ್,
ಸಾರಥ್ಯದಲ್ಲಿ ಬಂದಿದೆ ಟ್ಯೂನ್ 123 ಆಡಿಯೋ ಕಂಪನಿ*
ಕಲಬುರ್ಗಿ ಮೂಲದ ಮಂಜುನಾಥ್ ಹೂಡಲ್ ರವರ ಕನಸಿನ ಪ್ರಾಜೆಕ್ಟ್ ಗೆ ಇಂದು ದೊಡ್ಡ ಮಟ್ಟದಲ್ಲಿ ಚಾಲನೆ ಸಿಕ್ಕಿದ್ದು,ತಾವು ಅಂದುಕೊಂಡ ಹಾಗೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದಂತಹ ಸಂಗೀತಮಯ ಕೊಡುಗೆಯನ್ನು ಕೊಡುವುದರ ಮೂಲಕ,
ಸಾರ್ಥಕ ಭಾವವನ್ನು ಕಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಟ್ಯೂನ್ 123 ಅನ್ನೋ ಮ್ಯೂಸಿಕ್ ಬ್ಯಾಂಕ್ ಕಾಲಿಟ್ಟಿದೆ,ವಿಶಿಷ್ಟ ಹಾಗೂ ವಿನೂತನ ಶೈಲಿಯಲ್ಲಿ ಬಂದಿರುವಂತಹ ಈ ಮ್ಯೂಸಿಕ್ ಬ್ಯಾಂಕ್ ನಿಂದ ರೆಡಿಮೇಡ್ ಇರುವಂತಹ ಟ್ಯೂನ್ಸ್,ಸಾಂಗ್ಸ್ ಹಾಗೂ ಬಿಜಿಎಂ ಗಳನ್ನು ಎಲ್ಲರೂ ಖರೀದಿಸಬಹುದಾಗಿದೆ,
*ಚಂದನ್ ಶೆಟ್ಟಿ ಹುಟ್ಟುಹಬ್ಬದಂದು ಆರಂಭವಾಯಿತು "ನಾದ ಯೋಗಿ" ಯೂಟ್ಯೂಬ್ ಚಾನಲ್* . *ಗಂ ಗಣಪತಿ ಹಾಡಿನ ಮೂಲಕ ನೂತನ ಚಾನಲ್ ಪ್ರಾರಂಭ* ಸಂಗೀತ ನಿರ್ದೇಶಕ, ಗಾಯಕ ಹಾಗೂ ಈಗ ನಾಯಕನಾಗೂ ಚಂದನ್ ಶೆಟ್ಟಿ ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಚಾಲನೆ ನೀಡಿದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಕುರಿತಾದ "ಗಂ ಗಣಪತಿ" ಹಾಡಿನೊಂದಿಗೆ ಚಾನಲ್ ಆರಂಭವಾಗಿದೆ. ಈ ಕುರಿತು ಚಂದನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ....
*"ಕರ್ನಾಟಕದ ಅಳಿಯ" ನ ಹಾಡು ನೋಡಿ ಥ್ರಿಲ್ ಆದ "ಮುದ್ದಿನ ಅಳಿಯ"* *"ತುಳಸಿದಳ" ಬಳಿಕ ಮೂವತ್ತೈದು ವರ್ಷಗಳ ನಂತರ ಕನ್ನಡದಲ್ಲಿ ಮತ್ತೊಮ್ಮೆ ವಾಮಾಚಾರದ ಕುರಿತಾದ ಸಿನಿಮಾ* " ಮುದ್ದಿನ ಅಳಿಯ" ಚಿತ್ರದ ನಾಯಕ ಶಶಿಕುಮಾರ್ ಅವರು ಬಿಗ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ "ಕರ್ನಾಟಕದ ಅಳಿಯ" ಚಿತ್ರದ "ಮನಸಿಗೆ ಹಿಡಿಸಿದನು ಇವನು" ಹಾಡನ್ನು ಬಿಡುಗಡೆ ಮಾಡಿದರು. ಕೆ.ರಾಮನಾರಾಯಣ್ ಈ ಹಾಡನ್ನು ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ಅದಿತಿ ಸಾಗರ್ ಹಾಡಿದ್ದಾರೆ. ನಮ್ಮಲ್ಲಿ "ಮುದ್ದಿನ ಅಳಿಯ", " ಗಡಿಬಿಡಿ ಅಳಿಯ" ಹೀಗೆ ಸಾಕಷ್ಟು ಜನ ಅಳಿಯಂದರಿದ್ದೀವಿ. ಈಗ ಪ್ರಥಮ್ "ಕರ್ನಾಟಕದ ಅಳಿಯ" ....
*"ಅರಸಯ್ಯನ ಪ್ರೇಮಪ್ರಸಂಗ"ದಲ್ಲಿ ಬಂತು "ಅಯ್ಯಯ್ಯೋ ರಾಮ" ಹಾಡು* . "ಫ್ರೆಂಚ್ ಬಿರಿಯಾನಿ" , "ಗುರು ಶಿಷ್ಯರು" ಚಿತ್ರದ ಮೂಲಕ ಜನಪ್ರಿಯರಾಗಿರುವ ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿರುವ "ಅರಸಯ್ಯನ ಪ್ರೇಮಪ್ರಸಂಗ" ಚಿತ್ರಕ್ಕಾಗಿ ಕೃಷ್ಣ ರಿತ್ತಿ ಬರೆದಿರುವ "ಅಯ್ಯಯ್ಯೋ ರಾಮ" ಚಿತ್ರದ ಹಾಡು ಬಿಡುಗಡೆಯಾಗಿದೆ. ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ. ಶಂಕರ್ ಭಾರತಿಪುರ ಹಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡು A2. Music ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ....
ದ್ವಂದ್ವ ಹಾಡು ಮತ್ತು ಟ್ರೇಲರ್ ಬಿಡುಗಡೆ
ಹೊಸಬರ ‘ದ್ವಂದ್ವ’ ಚಿತ್ರದಲ್ಲಿ ತಿಲಕ್ ನಾಯಕನಾಗಿ ನಟಿಸಿದ್ದಾರೆ. ಬೆಂಗಳೂರಿನ ಎಲ್.ಭರತ್ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾಮನ್ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಹನೂರು ತಾಲ್ಲೂಕಿನ ಪ್ರದೀಪ್ಕೌದಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಇವರೊಂದಿಗೆ ಹೆಚ್.ಆರ್.ವಿಶ್ವನಾಥ್, ರಾಮುಕೊಣ್ಣಾರ್ ಹಾಗೂ ಮಣಿಕಡಕೊಳ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಹಾಗೂ ಎರಡು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.
*"ಯಂಗ್ ಮ್ಯಾನ್" ಚಿತ್ರದಲ್ಲಿ ದೇಶಪ್ರೇಮದ ಕಥೆ* . *ಕನ್ನಡದಲ್ಲಿ ನಿರ್ಮಾಣವಾಯಿತು ಮತ್ತೊಂದು ಸಿಂಗಲ್ ಟೇಕ್ ಚಿತ್ರ* . ಕನ್ನಡ ಚಿತ್ರರಂಗದಲ್ಲಿ ಹೊಸಪ್ರಯತ್ನಗಳು ನಡೆಯುತ್ತಿರುತ್ತದೆ. ಹೊಸತಂಡದಿಂದ 2 ಗಂಟೆ 38 ನಿಮಿಷಗಳ ಅವಧಿಯ "ಯಂಗ್ ಮ್ಯಾನ್" ಎಂಬ ಚಿತ್ರ ನಿರ್ಮಾಣವಾಗಿದೆ. ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವುದು ಈ ಚಿತ್ರದ ವಿಶೇಷ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಾನು ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ ಈ ಚಿತ್ರವನ್ನು ಸಿಂಗಲ್ ....
ದಿಗ್ವಿಜಯ ಟ್ರೈಲರ್ ಆಡಿಯೋ ಬಿಡುಗಡೆ ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ನಿರ್ದೇಶಕ ದುರ್ಗಾ ಪಿ.ಎಸ್. ಅವರು ತಮ್ಮ ನಿರ್ದೇಶನದ ದಿಗ್ವಿಜಯ ಚಿತ್ರದ ಮೂಲಕ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರಿನಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದುರ್ಗಾ ಪಿ.ಎಸ್. ಕಳೆದ 18 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. 65ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಮಾಡಿದ್ದು, ಸೀಯು, ಕರ್ತ ನಂತರ ಇದು ನನ್ನ ನಿರ್ದೇಶನದ 5 ನೇ ಚಿತ್ರ. ಇತ್ತೀಚೆಗೆ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪರಿಹಾರದ ಹಣಕ್ಕಾಗಿ ಸೂಸೈಡ್ ....
*"ಫೈಟರ್" ಚಿತ್ರದ "ಐ ವಾನ ಫಾಲೋ ಯು" ಹಾಡು ಬಿಡುಗಡೆ* . *ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ* . ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ "ಫೈಟರ್" ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ಐ ವಾನ ಫಾಲೋ ಯು" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಗುರುರಂಜನ್ ಶೆಟ್ಟಿ(ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ , ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ....
*ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ಕಾಟೇರ" ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯ* . *ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ* . ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ "ಕಾಟೇರ" ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ನಮ್ಮ ಸಂಸ್ಥೆಯ ನಿರ್ಮಾಣದ "ಕಾಟೇರ" ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ....
*"ರವಿಕೆ ಪ್ರಸಂಗ" ಚಿತ್ರದ ಟೈಟಲ್ ಸಾಂಗ್ ಬಿಡುಗಡೆ* . ಹೆಣ್ಣುಮಕ್ಕಳು ನಿತ್ಯ ಧರಿಸುವ ಸೀರೆ, ಓಲೆ, ಬಳೆ, ಗೆಜ್ಜೆ ಮುಂತಾದವುಗಳ ಬಗ್ಗೆ ಹಾಡು ಬಂದಿದೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು ಬಂದಿಲ್ಲ. ರವಿಕೆಯ ಬಗೆಗಿನ ಹಾಡು ರವಿಕೆ ಕುರಿತಾಗಿಯೇ ನಿರ್ಮಾಣವಾಗಿರುವ "ರವಿಕೆ ಪ್ರಸಂಗ" ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಕಿರಣ್ ಕಾವೇರಪ್ಪ ಅವರು ಬರೆದಿರುವ "ರವಿ, ರವಿ, ರವಿಕೆ ಪ್ರಸಂಗ" ಎಂಬ ಟೈಟಲ್ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಈ ಹಾಡಿಗೆ ವಿನಯ್ ಶರ್ಮ ಸಂಗೀತ ನೀಡಿದ್ದು, ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಅವರು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ....
ವರಾಹಚಕ್ರಂ ಶೀರ್ಷಿಕೆ ಅನಾವರಣ, ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ ನೂತನ ಚಿತ್ರಕ್ಕೆ ಚಾಲನೆ ದಶಕದ ಹಿಂದೆ ಮನಸುಗಳ ಮಾತು ಮಧುರ, ಯುಗಪುರುಷ, ಗೌರೀಪುತ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್ ಮಟ್ಟಿ ಅವರು ಬಹಳ ವರ್ಷಗಳ ನಂತರ, ಆಧುನಿಕ ಪಂಚ ಪಾಂಡವರನ್ನಿಟ್ಟುಕೊಂಡು, ವಿಭಿನ್ನ ಕಥಾನಕದೊಂದಿಗೆ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ. ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜಿಸಿದ್ದರು. ಹಿರಿಯನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ಹೆಸರು ’ವರಾಹಚಕ್ರಂ’. ಈ ಚಿತ್ರವನ್ನು ಮನ್ವಂತರಿ ಮೂವಿಮೇಕರ್ಸ್ ಅಡಿಯಲ್ಲಿ ಒಂದಷ್ಟು ಸ್ನೇಹಿತರೆಲ್ಲ ಸೇರಿ ಈ ....
ಗಂಡ ಹೆಂಡತಿ ಸಂಬಂಧ ಪರಿಶುದ್ಧವಾದುದು ವಿಭಿನ್ನ ಕಥಾಹಂದರ ಹೊಂದಿರುವ ’ಪರಿಶುದ್ಧಂ’ ಚಿತ್ರಕ್ಕೆ ಆರೋನ್ ಕಾರ್ತಿಕ್ವೆಂಕಟೇಶ್ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿದ್ದೇನೆ. ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು. ಗಂಡಹೆಂಡತಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶ ಆಗಬಾರದೆಂದು ಸಂದೇಶದಲ್ಲಿ ಹೇಳಲಾಗಿದೆ. ಇದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ನಟಿ ಕಲ್ಪನಾರಂತೆ ಸ್ಪರ್ಶಾರೇಖಾ ತೂಕದ ಪಾತ್ರವನ್ನು ನಿರ್ವಹಿಸಿದ್ದಾರೆ. ಅತಿಥಿಯಾಗಿ ಎಂ.ಡಿ.ಕೌಶಿಕ್ ಕೊನೆ ದೃಶ್ಯದಲ್ಲಿ ಬರಲಿದ್ದು, ಭಾಗ-2ರಲ್ಲಿ ಇವರಿಂದಲೇ ಸಿನಿಮಾವು ಶುರುವಾಗುತ್ತದೆ. ಬೆಂಗಳೂರು, ....