*ಟೈಗರ್ ನಾಗೇಶ್ವರ್ ಸಿನಿಮಾದ ಮೊದಲ ಹಾಡು ರಿಲೀಸ್..ನೂಪುರ್ ಸನೋನ್ ಜೊತೆ ಹೆಜ್ಜೆ ಹಾಕಿದ ಮಾಸ್ ಮಹಾರಾಜ ರವಿತೇಜ*
ತೆಲುಗಿನ ಮಾಸ್ ಮಹಾರಾಜ ರವಿತೇಜ ನಟನೆಯ ಬಹುನಿರೀಕ್ಷಿತ ಟೈಗರ್ ನಾಗೇಶ್ವರ್ ರಾವ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏಕ್ ದಮ್ ಏಕ್ ದಮ್ ಎಂಬ ಸಿಂಗಿಂಗ್ ಮಸ್ತಿ 5 ಭಾಷೆಯಲ್ಲಿ ಅನಾವರಣಗೊಂಡಿದ್ದು, ಕನ್ನಡದಲ್ಲಿ ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಹಾಡಿಗೆ ಧ್ವನಿಯಾಗಿದ್ದಾರೆ. ರವಿತೇಜ ಮತ್ತು ನೂಪುರ್ ಸನೋನ್ ಏಕ್ ದಮ್ ಏಕ್ ದಮ್ ಪೆಪ್ಪಿಯೆಸ್ಟ್ ಸಾಂಗ್ ಗೆ ಹೆಜ್ಜೆ ಹಾಕಿದ್ದು, ಜಿವಿ ಪ್ರಕಾಶ್ ಟ್ಯೂನ್ ಹಾಕಿದ್ದಾರೆ.
*ವಿಕ್ಕಿ ವರುಣ್ - ಧನ್ಯಾ ರಾಮಕುಮಾರ್ ಅಭಿನಯದ "ಕಾಲಾಪತ್ಥರ್" ಚಿತ್ರದಲ್ಲಿ ಹಾಡುಗಳ ದಿಬ್ಬಣ್ಣ* . " *ಸೌಂಡ್ಸ್ ಆಫ್ ಕಾಲಾಪತ್ಥರ್" ಹೆಸರಿನಲ್ಲಿ ಚಿತ್ರದ ಅಷ್ಟು ಹಾಡುಗಳನ್ನು ಪರಿಚಯಿಸಿದ ಚಿತ್ರತಂಡ* . ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗೂ ನಟಿಸಿರುವ "ಕಾಲಾಪತ್ಥರ್" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಯಿತು. ಸಮಾರಂಭದ ....
ಸೂರ್ಯನ ಹೋರಾಟಕ್ಕೆ ಟೀಸರ್ ಬಲ ಈಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಮ್ಮ ನಿರ್ದೇಶಕರುಗಳು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ಥರದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಎನ್ನುವ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಬಿ.ಸುರೇಶ್ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೇಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ....
*"ಬಾನ ದಾರಿಯಲಿ" ಚಿತ್ರದ ಟ್ರೇಲರ್ ಗೆ ಪ್ರಶಂಸೆಯ ಮಹಾಪೂರ* .. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ "ಬಾನ ದಾರಿಯಲಿ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು. ಇದು ನಾನು ಈವರೆಗೂ ಮಾಡಿರದ ಪಾತ್ರ ಎಂದು ಮಾತು ಆರಂಭಿಸಿದ ನಾಯಕ ಗಣೇಶ್, "ಬಾನ ದಾರಿಯಲಿ" ಪ್ರೀತಿಯ ಬಗೆಗಿನ ಚಿತ್ರ. ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದ ಈ ....
*ವಿಭಿನ್ನ ಕಥಾಹಂದರ ಹೊಂದಿರುವ "ಟೇಲ್ಸ್ ಆಫ್ ಮಹಾನಗರ" ಸೆಪ್ಟೆಂಬರ್ 15 ರಂದು ತೆರೆಗೆ* . ಹೆಸರಾಂತ ನಿರ್ದೇಶಕ "ಗೆಜ್ಜೆನಾದ" ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ನಟಿಸಿರುವ "ಟೇಲ್ಸ್ ಆಫ್ ಮಹಾನಗರ" ಚಿತ್ರ ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ನನ್ನ ಮಗ ಅಥರ್ವ್ ಹಾಗೂ ನಿರ್ದೇಶಕ ಕಿರಣ್ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಆನಂತರ ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್ ಈ ಚಿತ್ರದ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಮಾಮ ಫೀಸ್ಟ್ ಅವರು ನಮ್ಮೊಟ್ಟಿಗಿದ್ದಾರೆ. ....
*ಸೆ.15ಕ್ಕೆ ಭಾವೈಕ್ಯತೆಯ ಸುತ್ತ "13"ರ ಚಿತ್ತ....* ಹಿರಿಯ ಕಲಾವಿದರಾದ ರಾಘವೇದ್ರ ರಾಜ್‌ಕುಮಾರ್, ಶೃತಿ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭಾವೈಕ್ಯತೆಯ ಸಂದೇಶ ಸಾರುವ, ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ "13". ಇದೇ ತಿಂಗಳ 15ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿ ರಾಘಣ್ಣ ಅವರು ಮೋಹನ್ ಕುಮಾರ್ ಎಂಬ ಹಿಂದೂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಬಿಡುಗಡೆಯ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ....
ಕಾಲ್ಗೆಜ್ಜೆ ನಿರ್ದೇಶಕರ ಮಡಕೇರಿ
‘ಕಾಲ್ಗೆಜ್ಜೆ’ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಎ.ಬಂಗಾರು ನಿರ್ದೇಶನದ ಎರಡನೇ ಚಿತ್ರ ‘ಮಡಕೇರಿ’ ಸಿನಿಮಾದ ಶೀರ್ಷಿಕೆ ಅನಾವರಣ ಕಾಯಾಕ್ರಮ ಇತ್ತೀಚೆಗೆ ಶ್ರೀ ಶ್ರೀ ಶ್ರೀ ಷ.ಬ್ರ.ರೇವಣ ಸಿದ್ದೇಶ್ವರ ಶಿವಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಮಂಜು ಕರಗುವ ಮುನ್ನ’ ಎಂಬ ಅಡಿಬರಹವಿದೆ. ನಿರ್ದೇಶಕರ ಗುರು ಎಸ್.ಮಹೇಂದರ್ ಟೈಟಲ್ ಲಾಂಚ್ ಮಾಡುವ ಮೂಲಕ ವಾತಾವರಣಕ್ಕೆ ಕಳೆ ತಂದರು.
*"ಕ್ರೇಜಿ ಕೀರ್ತಿ" ಚಿತ್ರದ ಟ್ರೇಲರ್ ಬಿಡುಗಡೆ* : *ಯುವಕರಿಗೊಂದು ಸ್ಪೆಷಲ್ ಸಿನಿಮಾ* ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ’ಕ್ರೇಜಿ ಕೀರ್ತಿ’ ಎಂಬ ಸಿನಿಮಾ ಕೂಡ ಸೇರಿದೆ. ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕುವ ಉತ್ಸುಕದಲ್ಲಿದೆ. ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ ಈ ಚಿತ್ರಕ್ಕೆ ಬಾಲಾಜಿ ಮಾಧವ ಶೆಟ್ಟಿ ನಿರ್ದೇಶಕರು. ಚಿತ್ರದ ನಿರ್ಮಾಪಕರು ಕೂಡ ಅವರೆ. ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದಿದೆ. ಇನ್ನು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ಮಾಧ್ಯಮ ಮುಂದೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿತು. ನಿರ್ದೇಶಕ, ....
ಹುಲಿನಾಯಕ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಕಿಚ್ಚಸುದೀಪ್ ಪತ್ರಕರ್ತ, ನಟ ಚಕ್ರವರ್ತಿಚಂದ್ರಚೂಡ್ ನಿರ್ದೇಶನ ಮಾಡುತ್ತಿರುವ ‘ಹುಲಿನಾಯಕ’ ಚಿತ್ರದ ಮೋಷನ್ ಪೋಸ್ಟರ್‌ನ್ನು ಕಿಚ್ಚಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮಯೂರ ಪಿಕ್ಚರ‍್ಸ್ ಲಾಂಛನದಲ್ಲಿ ಮಂಜುನಾಥ್.ಡಿ ನಿರ್ಮಾಣ ಮಾಡುತ್ತಿದ್ದಾರೆ. ಮಿಲಂದ್‌ಗೋವಿಂದ್ ನಾಯಕನಾಗಿ ಮೂರನೇ ಅವಕಾಶ. ಸ್ವಾತಂತ್ರಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷಣ ಕುರಿತಾದ ಕಥೆಯಾಗಿದೆ. ಸಮಾರಂಭದಲ್ಲಿ ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ವಸಿಷ್ಟಸಿಂಹ, ಪೂಜಾಗಾಂಧಿ, ಸಂಜನಾಗಲ್ರಾಣಿ ಶಾಸಕ ರಾಜುಗೌಡನಾಯಕ, ವೀರಕಪುತ್ರ ಶ್ರೀನಿವಾಸ್ ....
ಲಂಕೇಶ್ ಮೊಮ್ಮಗನ ಚಿತ್ರಕ್ಕೆ ಮುಹೂರ್ತ ಲಂಕೇಶ್ ಪುತ್ರ ಇಂದ್ರಜಿತ್‌ಲಂಕೇಶ್ ನಟ, ನಿರ್ದೇಶಕನಾಗಿ ಹೆಸರು ಮಾಡಿದವರು. ಈಗ ಇವರ ಹಿರಿಯ ಮಗ ಸಮರ್ಜಿತ್‌ಲಂಕೇಶ್ ನಾಯಕನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆ ನಡೆದ ಮುಹೂರ್ತ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದರು. ಲಾಫಿಂಗ್ ಬುದ್ದ ಫಿಲಂಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ನಂತರ ಮಾತನಾಡಿದ ಇಂದ್ರಜಿತ್‌ಲಂಕೇಶ್ ಇದೊಂದು ನೈಜ ಘಟನೆಯಿಂದ ಪ್ರೇರಣೆ ಪಡೆದುಕೊಂಡು ಕಥೆಯನ್ನು ಸಿದ್ದಪಡಿಸಲಾಗಿದೆ. ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಬಯಸುವ ....
ಹೊರಬಂತು ಲವ್ ಟೀಸರ್
ಹಾಡುಗಳ ಮೂಲಕವೇ ಗಮನ ಸೆಳೆಯುತ್ತಿರುವ ‘ಲವ್’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವು ಮೊನ್ನೆಯಷ್ಟೇ ನಡೆಯಿತು. ಈ ಹಿಂದೆ ಹಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಹೇಶ.ಸಿ.ಅಮ್ಮಳ್ಳಿದೊಡ್ಡಿ ಈಗ ಪ್ರೀತಿಯ ಕಥೆಯನ್ನು ಹೇಳಲಿಕ್ಕೆ ಹೊರಟಿದ್ದಾರೆ. ಶ್ರೀ ಕಾಲ ಭೈರವೇಶ್ವರ ಮೂವೀ ಮೇಕರ‍್ಸ್‌ನಲ್ಲಿ ದಿವಾಕರ್ ನಿರ್ಮಾಣ ಮಾಡುತ್ತಿರುವುದು ನೂತನ ಅನುಭವ.
ನೈಜ ಘಟನೆ ಕಥೆಯಲ್ಲಿ ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ನಡುವೆ ಲವ್ ಆದಾಗ ಮನೆ ಕಡೆಯಿಂದ, ಇಡೀ ಸಮಾಜದವರು ಎದುರು ನಿಂತಾಗ ಏನಾಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
ಪರ್ಯಾಯ ಮಾರ್ಗಗಳ ಸುತ್ತ
‘ಪರ್ಯಾಯ’ ಚಿತ್ರದ ನಿರ್ದೇಶಕ ರಮಾನಂದ್‌ಮಿತ್ರ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೋಗುತ್ತಾರೆ. ಅದು ಸರಿಯಾಗಿರದಿದ್ದರೆ ಏನಾಗುತ್ತೆ? ಮೂವರು ಅಂಗವಿಕಲರು ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದು ಏನೆಲ್ಲಾ ಹರಸಾಹಸ ಮಾಡುತ್ತಾರೆ. ಅವರ ಜೀವನ ಮುಂದೆ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ? ಎಂಬದನ್ನು ಹಾರರ್, ಕಾಮಿಡಿ ಅಂಶಗಳನ್ನು ಬೆರೆಸಿ ಮನರಂಜನಾತ್ಮಕವಾಗಿ ಹೇಳಲಾಗಿದೆ ಎಂಬುದಾಗಿ ಮಾಹಿತಿ ನೀಡಿದರು.
ಭಾವಪೂರ್ಣ ಟ್ರೇಲರ್ ಲೋಕಾರ್ಪಣೆ ರಾಷ್ಟ್ರ ಪ್ರಶಸ್ತಿ ವಿಜೇತ ಚೇತನ್‌ಮುಂಡಾಡಿ ಈಗ ಕಮರ್ಷಿಯಲ್ ಚಿತ್ರವನ್ನು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಅದಕ್ಕೆ ‘ಭಾವಪೂರ್ಣ’ ವೆಂದು ಹೆಸರನ್ನು ಇಡಲಾಗಿದೆ. ‘ಬೆಸವ ತುರ್ತು ಸ್ವಲ್ಪ ಹಚ್ಚೇ ಇದೆ’ ಅಂತ ಅಡಿಬರಹದಲ್ಲಿ ಹೇಳಲಾಗಿ, ಜನನ ಮತ್ತು ಮರಣ ದಿನಾಂಕವನ್ನು ಪೋಸ್ಟರ್‌ದಲ್ಲಿ ತೋರಿಸಲಾಗಿದೆ. ಪ್ರಶಾಂತ್ ಆಂಜನಪ್ಪ ನಿರ್ಮಾಪಕರಾಗಿ ಹೊಸ ಅನುಭವ. ೯೦ರ ಕಾಲಘಟ್ಟದಲ್ಲಿ ನಡೆಯುವ ಇದರ ಕಥೆಯಲ್ಲಿ ಭಾವನೆಗಳೇ ಪಾತ್ರಗಳಾಗಿರುತ್ತವೆ. ಪುಟ್ಟ ಗ್ರಾಮವೊಂದರ ೫೦ ವರ್ಷದ ವ್ಯಕ್ತಿಯು ತನ್ನಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಪಡುವ ಪರಿಪಾಟಲುಗಳೇ ಮುಖ್ಯ ....
ಪಿ ಲಂಕೇಶ್ ಮೊಮ್ಮಗ ಸಮರ್ಜಿತ್ ಸಿನಿಮಾರಂಗಕ್ಕೆ ಎಂಟ್ರಿ: ಮಗನ ಚಿತ್ರಕ್ಕೆ ಇಂದ್ರಜಿತ್ ಆಕ್ಷನ್ ಕಟ್ ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ಅದ್ದೂರಿ ಮುಹೂರ್ತ: ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ಹೀರೋ ಎಂಟ್ರಿ ಹೀರೋ ಆದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್: ಗೌರಿ ಸಿನಿಮಾ ಮೂಲಕ ಅದ್ದೂರಿ ಎಂಟ್ರಿ ಸ್ಯಾಂಡಲ್ ವುಡ್‌ಗೆ ಹೊಸ ಹೀರೋನ ಪದಾರ್ಪಣೆ ಆಗಿದೆ. ಖ್ಯಾತ ಬರಹಗಾರ ಪಿ ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾರಂಗಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾಗೆ ಗೌರಿ ಎಂದು ಟೈಟಲ್ ಇಡಲಾಗಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ....
ಬರಲಿದೆ ಸ್ಯಾಂಡಲ್ವುಡ್ ನಲ್ಲಿ ಇನ್ನೊಂದು ದಂತಕಥೆ ...
ದಂತಕಥೆಯು, ಜಾನಪದ ಸಾಹಿತ್ಯದ ಪ್ರಕಾರವಾಗಿದ್ದು.. ಇತಿಹಾಸದಲ್ಲಿ ನಡೆದ ಘಟನೆಯನ್ನು , ನಂಬಲಸಾಧ್ಯವಾದ ವಿಷಯಗಳನ್ನೊಳಗೊಂಡಿರುತ್ತದೆ.
ಕಾಂತಾರದ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ದಂತಕಥೆ ಜನ್ಮತಾಳುತ್ತಿದೆ.
*ಸಾದ್ವಿನಿ ಕೊಪ್ಪ ಸಂಗೀತದಲ್ಲಿ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ "ಜಲಪಾತ"ದಿಂದ ಹರಿದು ಬಂತು ಸುಂದರ ಪರಿಸರ ಗೀತೆ* . ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ ನಿರ್ದೇಶನದ " ಜಲಪಾತ" ಚಿತ್ರಕ್ಕಾಗಿ ರಮೇಶ್ ಬೇಗಾರ್ ಅವರೆ ಬರೆದಿರುವ "ಎದೆಯ ದನಿಯ ಹಾಡು ಕೇಳು" ಎಂಬ ಪರಿಸರದ ಕುರಿತಾದ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ....
*ಅರ್ಜುನ್ ಯೋಗಿ-ಸಾರಿಕಾ ರಾವ್ ನಟನೆಯ ‘ಅನಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್* ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ಅನಾವರಣ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ, ಸಾರಿಕಾ ರಾವ್ ಹಾಡಿನಲ್ಲಿ ಮಿಂಚಿದ್ದಾರೆ. ನಿರ್ದೇಶಕ ಹರೀಶ್ ಕುಮಾರ್ ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ....
’ನಗುವಿನ ಹೂಗಳ ಮೇಲೆ’ ಸಿನಿಮಾದ ಪ್ರೇಮಗೀತೆ ರಿಲೀಸ್..ಗೊತ್ತಿಲ್ಲ ಯಾರಿಗೂ ಎಂದ ಅಭಿದಾಸ್-ಶರಣ್ಯ ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್, ನಗುವಿನ ಸುಂದರಿ ಶರಣ್ಯಾ ಶೆಟ್ಟಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿರುವ "ನಗುವಿನ ಹೂಗಳ ಮೇಲೆ" ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. SRV ಥಿಯೇಟರ್ ನಲ್ಲಿ ಗೊತ್ತಿಲ್ಲ ಯಾರಿಗೂ ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು. ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ನಗುವಿನ ಹೂಗಳ ಮೇಲೆ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ತೂಕವಾದ ಹೆಸರು. Dr ರಾಜ್ ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ....
*"ಕಾಲಾಯ ನಮಃ" ಚಿತ್ರದಲ್ಲಿ ಸಹೋದರರ ಜುಗಲ್ ಬಂದಿ* .. *ಬಹಳ ದಿನಗಳ ನಂತರ ಒಂದೇ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ - ಕೋಮಲ್ ಕುಮಾರ್* . ಅನಸೂಯ ಕೋಮಲ್ ಕುಮಾರ್ ನಿರ್ಮಾಣದ ಮತಿವಣನ್ ನಿರ್ದೇಶನದ "ಕಾಲಾಯ ನಮಃ" ಚಿತ್ರದಲ್ಲಿ ಬಹಳ ದಿನಗಳ ನಂತರ ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅಭಿನಯಿಸುತ್ತಿದ್ದಾರೆ. ಇವರಿಬ್ಬರು ಭಾಗವಹಿಸಿರುವ ಹಾಡೊಂದರ ಚಿತ್ರೀಕರಣ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಚಿತ್ರರಂಗದ ಸದಸ್ಯರು ಮಾಹಿತಿ ನೀಡಿದ್ದಾರೆ. ನಾನು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್, ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಅವತ್ತಿನಿಂದ ಹೇಳುತ್ತಿದ್ದೇನೆ. ಕೋಮಲ್ ....
‘ಫ್ರೀಡಮ್’ ಅಲ್ಬಮ್ ಸಾಂಗ್ ಬಿಡುಗಡೆ 'ಥಗ್ಸ್ ಆಫ್ 1980' ಟೈಟಲ್ ಲಾಂಚ್ ಗಾಯಕಿ ಈಶಾನಿಗೆ ಶಿವಣ್ಣ, ದರ್ಶನ್ ಮೆಚ್ಚುಗೆ ಸಾಕಷ್ಟು ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಕನ್ನಡ ಭಾಷೆಯ ಘಮಲನ್ನು ಪಸರಿಸುತ್ತಿದ್ದಾರೆ. ಅಂಥವರಲ್ಲಿ ಗಾಯಕಿ ಈಶಾನಿ ಕೂಡ ಒಬ್ಬರು. ಮೂಲತಃ ಮೈಸೂರಿನವರಾದ ಈಶಾನಿ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಚಿಕ್ಕವರಿದ್ದಾಗಿನಿಂದಲೇ ತಾಯಿಯ ಕೊಡುಗೆ ಎನ್ನುವಂತೆ ಗಾಯನದ ಬಗ್ಗೆ ಒಲವು ಬೆಳೆಸಿಕೊಂಡು ಬಂದಿದ್ದ ಇವರು ಈಗಾಗಲೇ 17 ಇಂಗ್ಲೀಷ್ ಅಲ್ಬಮ್ ಸಾಂಗ್ ಹಾಡಿದ್ದಾರೆ. ಕನ್ನಡದಲ್ಲೂ ಮೂರು ಆಲ್ಬಂ ಗೀತೆಗಳನ್ನು ಹಾಡಿ ಅದರಲ್ಲಿ ಹೆಜ್ಜೆ ಹಾಕಿದ್ದಾರೆ. ಆ ಪೈಕಿ ಇತ್ತೀಚೆಗಷ್ಟೇ ಕನ್ನಡದ ಮೂರನೇ ಆಲ್ಬಂ ಗೀತೆಯಾದ ....