'ಸಂಜು ವೆಡ್ಸ್ ಗೀತಾ -2' ಗ್ರ್ಯಾಂಡ್ ಲಾಂಚ್ ೧೨ ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-೨ ಮೂಡಿಬರುತ್ತಿದೆ. ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಛೇಂಜ್ ರಮ್ಯಾ ಬದಲು ಇಲ್ಲಿ ರಕ್ಷಿತಾ ರಾಮ್ ನಾಯಕಿಯಾಗಿದ್ದಾರೆ. ಅದಕ್ಕೆ ನಾಗಶೇಖರ್ ಕಾರಣವನ್ನೂ ನೀಡಿದರು. ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-೨ ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ....
'ಸಂಜು ವೆಡ್ಸ್ ಗೀತಾ -2' ಗ್ರ್ಯಾಂಡ್ ಲಾಂಚ್ ೧೨ ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-೨ ಮೂಡಿಬರುತ್ತಿದೆ. ನಾಗಶೇಖರ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಛೇಂಜ್ ರಮ್ಯಾ ಬದಲು ಇಲ್ಲಿ ರಕ್ಷಿತಾ ರಾಮ್ ನಾಯಕಿಯಾಗಿದ್ದಾರೆ. ಅದಕ್ಕೆ ನಾಗಶೇಖರ್ ಕಾರಣವನ್ನೂ ನೀಡಿದರು. ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-೨ ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ....
*ಮರ್ಡರ್ ಮಿಸ್ಟರಿ ‘ಆಪಲ್ ಕಟ್’ ಚಿತ್ರದಲ್ಲಿದೆ ಮಾನವಶಾಸ್ತ್ರದ ಕಥಾವಸ್ತು* . *ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿಯ ಆಗಮನ* ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ ಸಿಂಧು ಗೌಡ ಸೇರ್ಪಡೆಯಾಗಿದ್ದಾರೆ. ಸಿಂಧು ಗೌಡ "ಆಪಲ್ ಕಟ್" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಂಧು ಗೌಡ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ. ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ‘ನಾನು ಕಳೆದ 10ವರ್ಷದಲ್ಲಿ ಹಲವು ಜನಪ್ರಿಯ ....
ಚಿತ್ರರಂಗದಲ್ಲಿ ಅನಂತನಾಗ್‌ಗೆ ಐದು ದಶಕದ ಸಂಭ್ರಮ ತಮ್ಮದೆ ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಹಿರಿಯ ನಟ ಅನಂತನಾಗ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ‘ಸುವರ್ಣ ಅನಂತ ಸಂಭ್ರಮ’ ಕಾರ್ಯಕ್ರಮ ಆಯೋಜಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಮೇಶ್‌ಅರವಿಂದ್, ಅನಂತನಾಗ್ ಜತೆ ಸಂವಾದ ನಡೆಸಿದರು. ಸತತ ಐವತ್ತು ವರ್ಷದ ಪಯಣವನ್ನು ಮೆಲುಕು ಹಾಕಿದ ಅವರು ಬಾಲ್ಯದ ದಿನಗಳು, ಆಧ್ಯಾತ್ಮಿಕ ವಾತಾವರಣ, ಸಂಗೀತ, ತಬಲಾ ಕಲಿತಿದ್ದು, ನಂತರ ಮುಂಬೈಗೆ ಹೋಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾ ಮಧ್ಯೆ ರಂಗಭೂಮಿ ಹೋಗಿ ....
*ಸಸ್ಪೆನ್ಸ್ ಥ್ರಿಲ್ಲರ್ ನ ‘ಪರಿಮಳ ಡಿಸೋಜಾ’ ಟ್ರೇಲರ್ ಬಿಡುಗಡೆ* ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ‘ಪರಿಮಳ ಡಿಸೋಜಾ’. ಯುವ ಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ‘ವಿಲೇಜ್ ರೋಡ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ನಿರ್ಮಾಪಕ ಎಂ.ಎನ್ ಸುರೇಶ್ ಹಾಗೂ ನಟಿ ಭವ್ಯ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ನಡೆದ ....
ಇಂಜಿನಿಯರ್ ಹುಡುಗನ ಕಥೆ ವ್ಯಥೆ ಚಂದನವನಕ್ಕೆ ಪ್ರತಿಭಾವಂತರು, ವಿದ್ಯಾವಂತರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ. ಅದೇ ಸಾಲಿಗೆ ಭದ್ರಾವತಿ ಮೂಲದ ಧನುಷ್ ಸದ್ಯ ಎಂಎನ್‌ಸಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಮಾಡ್‌ಲಿಂಗ್‌ದಲ್ಲಿ ಗುರುತಿಸಿಕೊಂಡು, ಹಿರಿಯ ನಟಿ ರೇಖಾದಾಸ್ ಗರಡಿಯಲ್ಲಿ ಅಭಿನಯದ ತರಭೇತಿಯನ್ನು ಪಡೆದುಕೊಂಡಿದ್ದಾರೆ. ಇವೆಲ್ಲಾದರ ಪರಿಣಾಮ ‘ರಾಯಲ್ ಮೆಕ್’ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಾಯಕನಾಗಿ ಪರಿಚಯಗೊಂಡಿದ್ದಾರೆ. ಒಂದಷ್ಟು ಸ್ನೇಹಿತರು ಗೆಳೆಯನ ಸಲುವಾಗಿ ಶಬರಿ ಫಿಲಿಂಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ....
*ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಪ್ರಚಾರಕ್ಕೆ ಸಿಕ್ತು ’ವೇಗಾ’....ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ಲಾಂಚ್* ಇಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ. ಈ ದಿನದ ಅಂಗವಾಗಿ ವೇಗಾ ಹೆಲ್ಮೆಟ್ ಕಂಪನಿ ವಿಶೇಷವಾದ ಹೆಲ್ಮೆಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದೆ. ವೇಗಾ ಕಂಪನಿಗೆ ಇಂತಹದೊಂದು ಐಡಿಯಾ ಬರಲು ಕಾರಣ ಎಡಗೈ ಬಳಸುವವರನ್ನೇ ಕಥಾಹಂದರವಾಗಿ ಹೊಂದಿರುವ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ. ಈ ಚಿತ್ರದ ಪ್ರೇರಣೆಯಿಂದ ವೇಗಾ 1308 ಸೌತ್ ಪಾವ್ ಎಂಬ ವಿಶೇಷ ಹೆಲ್ಮೆಟ್ ಲಾಂಚ್ ಮಾಡಿದೆ. ಇದು ಎಗಡೈ ಬಹಳಕೆದಾರರಿಗೆ ಬಹಳಷ್ಟು ಸುಲಭವಾಗಿದೆ. ಈ ಹೆಲ್ಮೆಟ್ ISI ಮತ್ತು DOT ಸರ್ಟಿಫೈಡ್ ಹೊಂದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ....
*ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷೇತ್ರಪತಿ"* *ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ 18 ರಂದು ತೆರೆಗೆ* . ಖ್ಯಾತ ನಟ ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್ ಈಗಾಗಲೇ ಜನಮನಸೂರೆಗೊಳ್ಳುತ್ತಿದ್ದು, ಚಿತ್ರ ಆಗಸ್ಟ್ 18 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ನವೀನ್ ಶಂಕರ್, "ಗುಲ್ಟು" ಚಿತ್ರದ ನಂತರ ನಿರ್ದೇಶಕ ಶ್ರೀಕಾಂತ್ ಕಟಗಿ, ಈ ಚಿತ್ರದ ಕಥೆ ಹೇಳಿದರು. ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ಪರಿಸರದ ಚಿತ್ರ ಮಾಡುವ ಆಸೆಯಿತ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ. ಆದರೆ ಹಣ ಹೂಡಲು ....
*ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಆರಂಭವಾಯಿತು ಅನಿರುದ್ಧ್ ಅಭಿನಯದ "chef ಚಿದಂಬರ" ಚಿತ್ರ* . *ಚಿತ್ರದ ಮೊದಲ ಸನ್ನಿವೇಶಕ್ಕೆ ಭಾರತಿ ವಿಷ್ಣುವರ್ಧನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಚಾಲನೆ* . ನಟ ಅನಿರುದ್ಧ್ ನಾಯಕರಾಗಿ ನಟಿಸುತ್ತಿರುವ, ಎಂ.ಆನಂದರಾಜ್ ನಿರ್ದೇಶನದ "ಶೆಫ್ ಚಿದಂಬರ" ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಆನಂದರಾಜ್, ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಅನಿರುದ್ಧ್ ....
*ಸಮಂತಾ-ವಿಜಯ್ ಖುಷಿ ಸಿನಿಮಾದ ಟ್ರೇಲರ್ ರಿಲೀಸ್....ಪ್ರೀತಿ, ಪ್ರೇಮ, ಸಂಸಾರ ಜಗಳವೇ ಹೈಲೆಟ್* ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ’ಖುಷಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ. ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ....
*ಸಿನಿಮಾ ನಿರ್ಮಾಣಕ್ಕಿಳಿದ ನನ್ಬನ್ ಗ್ರೂಪ್....ನನ್ಬನ್ ಎಂಟರ್ಟೈನ್ಮೆಂಟ್ ಶುರು* *ಮನರಂಜನಾ ಕ್ಷೇತ್ರದತ್ತ ನನ್ಬನ್ ಗ್ರೂಪ್...ನನ್ಬನ್ ಎಂಟರ್ಟೈನ್ಮೆಂಟ್ ಶುರು* ಉದ್ಯಮ ವಲಯದಲ್ಲಿ ಭಾರೀ ಹೆಸರು ಮಾಡಿರುವ ನನ್ಬನ್ ಗ್ರೂಪ್ ಮನರಂಜನಾ ಲೋಕಕ್ಕೆ ಹೊಸ ಹೆಜ್ಜೆ ಇಟ್ಟಿದೆ. ನನ್ಬನ್ ಗ್ರೂಪ್ ವತಿಯಿಂದ ನನ್ಬನ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭವಾಗಿದೆ. ಆಗಸ್ಟ್ 3ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ನನ್ಬನ್ ಎಂಟರ್ಟೈನ್ಮೆಂಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನನ್ಬನ್ ಗ್ರೂಪ್ ಮುಖ್ಯಸ್ಥ ನರೈನ್ ರಾಮಸ್ವಾಮಿ, ನನ್ಬನ್ ಗ್ರೂಪ್ ಸಹ ಸಂಸ್ಥಾಪಕ ಮಣಿವಣ್ಣನ್, ನನ್ಬನ್ ಗ್ರೂಪ್ ಸಂಸ್ಥಾಪಕ ಗೋಪಾಲ ಕೃಷ್ಣನ್ ಸೇರಿದಂತೆ ಹಲವರು ....
*ತುಂಗಾ ಹಾಸ್ಟೆಲ್ ಬಾಯ್ಸ್ ಹವಾ…ಮೂರನೇ ವಾರವೂ ಹಾಸ್ಟೆಲ್ ಹುಡುಗರು ಬೇಕಿದ್ದಾರೆ ಸಿನಿಮಾ ಹೌಸ್ ಫುಲ್ ಪ್ರದರ್ಶನ..ಫ್ರೀ ಟಿಕೆಟ್ ಬಂಪರ್ ಆಫರ್..ಹೊಸಬರಿಗೆ ಅನುಶ್ರೀ ಸಾಥ್* ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಕಂ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಕಳೆದ ಭಾನವಾರ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಅಭಿಮಾನಿಯಾಗಿ ಈ ಸಿನಿಮಾದ ....
*ತುಂಗಾ ಹಾಸ್ಟೆಲ್ ಬಾಯ್ಸ್ ಹವಾ…ಮೂರನೇ ವಾರವೂ ಹಾಸ್ಟೆಲ್ ಹುಡುಗರು ಬೇಕಿದ್ದಾರೆ ಸಿನಿಮಾ ಹೌಸ್ ಫುಲ್ ಪ್ರದರ್ಶನ..ಫ್ರೀ ಟಿಕೆಟ್ ಬಂಪರ್ ಆಫರ್..ಹೊಸಬರಿಗೆ ಅನುಶ್ರೀ ಸಾಥ್* ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಕಂ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಕಳೆದ ಭಾನವಾರ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಅಭಿಮಾನಿಯಾಗಿ ಈ ಸಿನಿಮಾದ ....
*’ವಾಮನ’ ಸಿನಿಮಾಗೆ ಯಂಗ್ ರೆಬಲ್ ಸ್ಟಾರ್ ಸಾಥ್..ಧ್ವನೀರ್-ರೀಷ್ಮಾ ಜೋಡಿಯ ಮುದ್ದು ರಾಕ್ಷಸಿ ಹಾಡು ರಿಲೀಸ್ ಮಾಡಿದ ಅಭಿಷೇಕ್ ಅಂಬರೀಶ್* ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆಷ್ಟೇ ರಿಲೀಸ್ ಆಗಿದ್ದ ವಾ..ವಾ..ವಾ..ವಾಮನ ಮಾಸ್ ನಂಬರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ವಾಮನ ಅಂಗಳದಿಂದ ಮುದ್ದು ರಾಕ್ಷಸಿ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಕಂಠ ಕುಣಿಸಿದ್ದಾರೆ. ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ....
ಡ್ಯೂಡ್ ಮೂವಿ ಮುಹೂರ್ತ
ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಿವೈಂಡ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ತಾವೇ ನಟಿಸಿದ್ದರು.
ನಂತರ ರಾಮಾಚಾರಿ 2.0 ಎಂಬ ಸಿನಿಮಾದ ಮುಖಾಂತರ ಖ್ಯಾತಿ ಪಡೆದಿದ್ದರು.
ಇದೀಗ ಡ್ಯೂಡ್ ಎನ್ನುವ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ.
ಇದರ ಫಸ್ಟ್ ಲುಕ್ ರಿಲೀಸ್ ಆಗಿದ್ದು.
ವಿಲನ್ಗಳ ಮಧ್ಯದಿಂದ ತೇಜ್ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಡ್ತಿರೋ ಪೋಸ್ಟರ್ ರಿಲೀಸ್ ಆಗಿದೆ.
ಇಂದು ಈ ಸಿನಿಮಾದ ಮುಹೂರ್ತ ಲಾಂಚ್ ಆಗಿದೆ ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದು ಇನ್ನಷ್ಟು ವಿಶೇಷ.
ಪರ್ಯಾಯ ’ಟೀಸರ್’ ಲಿರಿಕಲ್ ಸಾಂಗ್ ಬಿಡುಗಡೆ ಒಂದು ಸಣ್ಣ ಘಟನೆಯನ್ನಿಟ್ಟುಕೊಂಡು ಮೂವರು ಅಂಗವಿಕಲರ ಸುತ್ತ ನಡೆಯುವ ಕಥಾಹಂದರವನ್ನು ಹೆಣೆದಿರುವ ನಿರ್ದೇಶಕ ರಮಾನಂದ ಮಿತ್ರ ಅವರು ಪರ್ಯಾಯ ಹೆಸರಿನ ಚಲನಚಿತ್ರವನ್ನು ನಿರೂಪಿಸಿದ್ದಾರೆ. ಈ ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಬೆಳಗಾವಿ ಮೂಲದ ಸ್ನೇಹಿತರೆಲ್ಲ ಸೇರಿ ಮಾಡಿರುವ ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗೂ ಶ್ರೀಮತಿ ಇಂದುಮತಿ ರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ರಾಜ್ ಕುಮಾರ್ ಅವರು ಅಂಧನ ಪಾತ್ರದಲ್ಲೂ ಸಹ ....
*ಆಗಸ್ಟ್ 25 ರಿಂದ ರಾಜ್ಯಾದ್ಯಂತ ಮಾರಿ ಹಬ್ಬ* .. *ಟ್ರೇಲರ್ ನಲ್ಲೇ ಮೋಡಿ ಮಾಡಿದ "ಟೋಬಿ"* .. " ಒಂದು ಮೊಟ್ಟೆಯ ಕಥೆ"ಯ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, ಆಭಿನಯದ ಬಹು ನಿರೀಕ್ಷಿತ, ಅಪಾರ ವೆಚ್ಚದ ಅದ್ದೂರಿ ಸಿನಿಮಾ "ಟೋಬಿ". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರ ಮನ ಗೆದ್ದಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಗೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೆಚ್ಚಿನ ಗೆಳೆಯನಿಗೆ ಹಾಗೂ ತಂಡಕ್ಕೆ ಶುಭ ಕೋರಿದರು. ನನಗೆ ರಾಜ್ ಬಿ ....
*ಮನಸೂರೆಗೊಳ್ಳುತ್ತಿದೆ "ಮ್ಯಾಟ್ನಿ" ಹಾಡು* . " *ಅಯೋಗ್ಯ* " *ಚಿತ್ರದ ನಂತರ ನೀನಾಸಂ ಸತೀಶ್ - ರಚಿತಾರಾಮ್ ಜೋಡಿಯ ಮತ್ತೊಂದು ಸೂಪರ್ ಹಿಟ್ ಸಾಂಗ್* .. ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಅಭಿನಯಿಸಿದ್ದ ಅಯೋಗ್ಯ ಚಿತ್ರದ "ಏನಮ್ಮಿ ಏನಮ್ಮಿ" ಹಾಡು ಸಖತ್ ಹಿಟ್ ಆಗಿತ್ತು. ಈಗಲೂ ಆ ಹಾಡು ಜನಪ್ರಿಯ. ಈಗ ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ "ಮ್ಯಾಟ್ನಿ" ಚಿತ್ರದಿಂದ "ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ " ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ....
*ಸಿನಿರಸಿಕರ ಮನಗೆದ್ದ "ಕೌಸಲ್ಯ ಸುಪ್ರಜಾ ರಾಮ"* . ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ಜೋಡಿಯ " ಕೌಸಲ್ಯ ಸುಪ್ರಜಾ ರಾಮ" ಚಿತ್ರ ಕಳೆದವಾರ ಬಿಡುಗಡೆಯಾಗಿ, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ನನಗೆ ಶಶಾಂಕ್, "ಕೌರವ" ಚಿತ್ರದ ಕಾಲದಿಂದಲೂ ಪರಿಚಯ. ಈ ಚಿತ್ರದ ಕಥೆ ಅವರು ಹೇಳಿದ ತಕ್ಷಣ ನನಗೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಈಗ ಚಿತ್ರ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ. ಮುಂದಿನವಾರ ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ. ಜೀ ವಾಹಿನಿಗೆ ....
ಹಾರರ್ ಚಿತ್ರದಲ್ಲಿ ಶಿವನ ಗೀತೆ ‘ತಾಯ್ತ’ ಚಿತ್ರದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದು ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿರುವುದು ತಂಡಕ್ಕೆ ಸಂತಸ ತಂದಿದೆ. ಪ್ರಚಾರದ ಎರಡನೇ ಹಂತವಾಗಿ ರಾಮ್‌ನಾರಾಯಣ್ ಬರೆದಿರುವ ‘ಶಿವನೇ ಕಾಪಾಡು’ ಹಾಡು ಬಿಡುಗಡೆ ಪ್ರದರ್ಶನ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ವೇದಿಕೆಯಲ್ಲಿ ಮೌಲನಾ ಆರಿಕ್ ಪಾಷಾ, ಮೋಕ್ಷಗುಂಡಂ ಗುರೂಜಿ, ಫಾದರ್ ಜಾನ್ ಆಂಥೋಣಿ ಸೇರಿದಂತೆ ಮೂವರು ಧರ್ಮಗುರುಗಳು ಮತ್ತು ನಟ ಸಾಧುಕೋಕಿಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶನ ಮಾಡಿರುವ ಲಯಕೋಕಿಲಾ ಹೇಳುವಂತೆ ತುಂಬಾ ಹೆದರಿಕೊಂಡಾಗ ತಾಯ್ತ ಕಟ್ಟಿಸಿಕೊ ಎಂದು ಹೇಳುತ್ತಾರೆ. ....