*ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ರಿಲೀಸ್...ಈ ಹುಡುಗಿ ಎಷ್ಟು ಚೆಂದ ಎಂದಿದ್ಯಾರು?* ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ಈ ಹುಡುಗಿ ಎಷ್ಟು ಚೆಂದ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿ ಆರ್ ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ....
ಅಸಾಮಾನ್ಯ ಕಥೆ ಕೌಸಲ್ಯಾ ಸುಪ್ರಜಾ ರಾಮ ಎಲ್ಲರ ಮನೆಯ ಕಥೆ ಅಂತ ಹೇಳಿಕೊಂಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೇಲರ್‌ನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶಶಾಂಕ್ ನಿರ್ದೇಶನ ಮಾಡುವ ಜತೆಗೆ ಶಶಾಂಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದು, ನಟ ಬಿ.ಸಿ.ಪಾಟೀಲ್ ಒಡೆತನದ ಕೌರವ ಪ್ರೊಡಕ್ಷನ್ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಡಾರ್ಲಿಂಗ್ ಕೃಷ್ಣ ನಾಯಕ. ಬೃಂದಾಆಚಾರ್ಯ ನಾಯಕಿ. ಮೊನ್ನೆ ಅನಾವರಣಗೊಂಡ ತುಣುಕುಗಳಲ್ಲಿ ಕೊನೆಯಲ್ಲಿ ಮಿಲನಾನಾಗರಾಜು ಎಂಟ್ರಿಕೊಟ್ಟಿದ್ದು ಅವರ ಪಾತ್ರದ ವಿವರವನ್ನು ತಂಡವು ಹೇಳಿಕೊಳ್ಳದೆ ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಿರೆಂದು ....
*ಟ್ರೇಲರ್ ನಲ್ಲೇ ವಿಶ್ವಾಸ ಮೂಡಿಸಿದೆ "ಆಚಾರ್ & ಕೋ"* . *ಪಿ.ಆರ್.ಕೆ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಜುಲೈ 28 ರಂದು ತೆರೆಗೆ* ಹೊಸಬರ ಹೊಸಪ್ರಯತ್ನಕ್ಕೆ ಪ್ರತಿಷ್ಠಿತ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಸ್ತುತ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ " "ಆಚಾರ್ & ಕೋ" ಚಿತ್ರವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಟ್ರೇಲರ್ ಸಾಕಷ್ಟು ವಿಶ್ವಾಸ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್ ಬಿಡುಗಡೆ ನಂತರ ....
*ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್* ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಹೊಸಬರ ಆರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಸಸ್ಪೆನ್ಸ್, ಪಯಣ, ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ ’ಆರ’. ಈ ಚಿತ್ರವನ್ನು ಅಶ್ವಿನ್ ವಿಜಯಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ, ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ’ಆರ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಾಯಕ ರೋಹಿತ್ ಬರೆದಿದ್ದು. ಆನಂದ್ ನೀನಾಸಂ ಸತ್ಯ ರಾಜ್ ....
ಅಂಬುಜಾ ಟ್ರೇಲರ್ ಬಿಡುಗಡೆ
ನೈಜ ಘಟನೆ ಆಧಾರಿತ ‘ಅಂಬುಜ’ ಚಿತ್ರದ ಟೀಸರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು. ಕಥೆ,ಸಾಹಿತ್ಯ ಬರೆದು ನಿರ್ಮಾಣ ಮಾಡಿರುವುದು ಕಾಶಿನಾಥ್.ಡಿ.ಮಡಿವಾಳರ್. ನಿರ್ದೇಶಕ ಶ್ರೀನಿಹನುಮಂತರಾಜು ಅವರಿಗೆ ಎರಡನೇ ಅವಕಾಶ. ಕ್ರೈಂ ರಿಪೋರ್ಟರ್ ಆಗಿ ಶುಭಪೂಂಜಾ, ಲಂಬಾಣಿಯಾಗಿ ರಜನಿ ೨೫ ಕೆಜಿ ತೂಕದ ಡ್ರೆಸ್‌ನ್ನು ಧರಿಸಿರುವುದು ವಿಶೇಷ.
ಪಿ.ಹೆಚ್.ವಿಶ್ವನಾಥ್ ನಿರ್ದೇಶನದ ಆಡೇ ನಮ್ ಗಾಡು
ಶ್ರೀಗಂಧ, ಪಂಚಮವೇದ, ಅರಗಿಣಿ, ಅರುಣೋದಯ, ಅಂಡಮಾನ್, ರಂಗೋಲಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪಿ.ಹೆಚ್.ವಿಶ್ವ್‌ನಾಥ್ ‘sಸುಳಿ’ ನಂತರ ಏಳು ವರ್ಷಗಳ ಬಳಿಕ ‘ಆಡೇ ನಮ್ ಗಾಡು’ ಎನ್ನುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಿ.ಬಿ.ಆರ್. ಫಿಲಂಸ್ ಹಾಗೂ ಎವರೆಸ್ಟ್ ಇಂಡಿಯಾ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಪ್ರೊ.ಬಿ.ಬಸವರಾಜು ಹಾಗೂ ರೇಣುಕಾಬಸವರಾಜು ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಮೂಡ ನಂಬಿಕೆ ಸುತ್ತ ಸಾಗುವ ಕಥೆ ಇರಲಿದೆ. ನಮ್ಮಲ್ಲಿ ಹಂದಿಯನ್ನು ವರಾಹ ಎಂದು ಪೂಜಿಸುತ್ತೇವೆ.
ಡಾನ್ ಕುಮಾರ ಅಂಡರ್‌ವರ್ಲ್ಡ್ ರಿಯಲ್ ಕಥನ
ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿದೆ. ಆ ಸಾಲಿಗೆ ’ಡಾನ್ ಕುಮಾರ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿದೆ. ಎನ್.ನಾಗೇಶ್‌ಕುಮಾರ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ಮಧುರಕಾವ್ಯ ಟ್ರೈಲರ್ ದೇವರಾಜ್ ಬಿಡುಗಡೆ ಒಂದೊಳ್ಳೆ ಪ್ರಯತ್ನ ಮಾಡಿದಾಗ ಒಳ್ಳೆಯ ಮನಸುಗಳೂ ಕೈಜೋಡಿಸುತ್ತವೆ. ಆಯುರ್ವೇದ ಚಿಕಿತ್ಸೆಯ ಅಳಿವು ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದೇ ಚಲನಚಿತ್ರ ನಿರ್ದೇಶನ ಮಾಡಿರುವ ಮಧುಸೂದನ್ ಅವರಿಗೆ ಹಿರಿಯನಟ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಸಹಕಾರ ನೀಡಿದ್ದಾರೆ. ಆಯುರ್ವೇದದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲೆಂದೇ, ಸ್ವತಃ ಆಯುರ್ವೇದ ವೈದ್ಯರಾದ ಮಧುಸೂದನ್ ಅವರು ಮಧುರಕಾವ್ಯ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ, ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಅಭಿನಯಿಸಿದ್ದಾರೆ, ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ನಂತರ ಮಾತನಾಡಿದ ದೇವರಾಜ್, ಎಲ್ಲೂ ಸುಳಿವನ್ನು ....
*ಕಮರ್ಷಿಯಲ್ - ಲವ್ ಕಥಾಹಂದರ ಹೊಂದಿರುವ "ಸಂತೋಷ ಸಂಗೀತ" ಸದ್ಯದಲ್ಲೇ ತೆರೆಗೆ* . ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ನಟಿಸಿರುವ ಚಿತ್ರ "ಸಂತೋಷ ಸಂಗೀತ". ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ನಾನು ಮೂಲತಃ ಎಂ.ಸಿ.ಎ ಪದವಿಧರ. ಮಹಾ ಸಿನಿಮಾ ಪ್ರೇಮಿ. ವಾರಕ್ಕೊಂದು ಸಿನಿಮಾ ನೋಡುವವನು. ಚೆನ್ನಾಗಿರುವ ಸಿನಿಮಾ ನೋಡಿದರೆ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಆಸೆ ಪಡುತ್ತಿದ್ದವನು. ಆ ಆಸೆ ಈಗ ಈಡೇರಿದೆ. ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದೆ. ಅದನ್ನು ಈಗ ಸಿನಿಮಾ ರೂಪದಲ್ಲಿ ತಂದಿದ್ದೀನಿ. ನಾನೇ ನಿರ್ಮಾಣ ಹಾಗೂ ನಿರ್ದೇಶನ ....
*ಜುಲೈ 21ಕ್ಕೆ ತೆರೆಗೆ ಬರ್ತಿದೆ ಹೊಸಬರ ’ನಿಮ್ಮೆಲ್ಲರ ಆರ್ಶೀರ್ವಾದ’..ಯುವ ಸಿನಿಮೋತ್ಸಾಹಿಗಳ ಮೇಲೆ ಇರಲಿ ನಿಮ್ಮ ಆಶೀರ್ವಾದ* ಕನ್ನಡದಲ್ಲೀಗ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ನಿಮ್ಮೆಲ್ಲರ ಆಶೀರ್ವಾದ. ವರುಣ್ ಸಿನಿ ಕ್ರಿಯೇಷನ್ ಮೊದಲ ಪ್ರಯತ್ನದ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ನಿಮ್ಮೆಲ್ಲರ ಆಶೀರ್ವಾದ ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಇದು ಇವರ ಮೊದಲ ಕನಸು..ಈ ಬಗ್ಗೆ ಚಿತ್ರತಂಡ ಮಾಧ್ಯಮದವರೊಟ್ಟಿಗೆ ಒಂದಷ್ಟು ವಿಷಯವನ್ನು ....
*ಭಾರಿ ಸದ್ದು ಮಾಡುತ್ತಿದೆ "ರಾನಿ" ಟೀಸರ್* . *ಕಿರಣ್ ರಾಜ್ ಹುಟ್ಟುಹಬ್ಬಕ್ಕೆ "ರಾನಿ" ತಂಡದ ಭರ್ಜರಿ ಗಿಫ್ಟ್* ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ ಈಗ ಹಿರಿತೆರೆಯಲ್ಲೂ ಬೇಡಿಕೆ ನಟ. ಪ್ರಸ್ತುತ ....
*ಸದ್ಯದಲ್ಲೇ ತೆರೆಗೆ ಬರಲಿದೆ ರಾಮ್ ದೀಪ್ ನಿರ್ದೇಶನದ "ಡೈಮಂಡ್ ಕ್ರಾಸ್* "... *ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಮೂಲಕ ಈ ಚಿತ್ರ ತೆರೆಗೆ* . ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ, ರಾಮ್ ದೀಪ್ ನಿರ್ದೇಶನದ " ಡೈಮಂಡ್ ಕ್ರಾಸ್" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಹೊಸಪೇಟೆ ಉದ್ಯಮಿ ಮನೀಶ್ ಹಾಗೂ ಖ್ಯಾತ ನಟ ಮಿತ್ರ ಹಾಗೂ ಅವರ ಸ್ನೇಹಿತರ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಚಿತ್ರದ ಕೆಲವು ತುಣುಕುಗಳನ್ನು ಬಿಡುಗಡೆ ಮಾಡಲಾಯಿತು. ಜೇಡ್ರಳಿ ಕೃಷ್ಣಪ್ಪ ಹಾಗೂ ಜೈಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡದ ....
ಪ್ರಜ್ವಲ್ದೇವರಾಜ್ ಹುಟ್ಟುಹಬ್ಬಕ್ಕೆ ಗಣ ಟೀಸರ್
ಮೊನ್ನೆ ಪ್ರಜ್ವಲ್‌ದೇವರಾಜ್ ಹುಟ್ಟಹಬ್ಬದ ಪ್ರಯುಕ್ತ ‘ಗಣ’ ಚಿತ್ರದ ಟೀಸರ್‌ನ್ನು ಚಂದ್ರಲೇಖಾದೇವರಾಜ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೇವರಾಜ್, ರಾಗಿಣಿಪ್ರಜ್ವಲ್, ಪ್ರಣಾಮ್‌ದೇವರಾಜ್ ಹಾಜರಿದ್ದರು. ಐಟಿ ಉದ್ಯೋಗಿಯಾಗಿರುವ ಪಾರ್ಥು ನಿರ್ಮಾಣ ಮಾಡಿರುವುದು ಹೊಸ ಅನುಭವ. ಹರಿಪ್ರಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ.
ನಮೋ ಭೂತಾತ್ಮ-೨ ಟೀಸರ್ ಬಿಡುಗಡೆ
‘ನಮೋ ಭೂತಾತ್ಮ’ ಚಿತ್ರವು ೯ ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿತ್ತು. ಈಗ ‘ನಮೋ ಭೂತಾತ್ಮ-೨’ ಸೀಕ್ವೆಲ್ ಸದ್ದಿಲ್ಲದೆ ಸಿದ್ದಗೊಂಡಿದೆ. ಜಾನರ್ ಅದೇ ಆಗಿದ್ದರೂ ಕಥೆ ಮತ್ತು ಪಾತ್ರಗಳು ಬೇರೆಯದೆ ಆಗಿರುತ್ತದೆ. ನೃತ್ಯ ಸಂಯೋಜಕ ಮುರಳಿ ಎರಡನೇ ಭಾಗಕ್ಕೂ ಅಕ್ಷನ್ ಕಟ್ ಹೇಳಿದ್ದಾರೆ. ಎಂ.ಎಸ್.ಗೋಲ್ಡನ್ ಪಿಕ್ಚರ‍್ಸ್ ಮೂಲಕ ನಿರ್ದೇಶಕರ ಅಕ್ಕನ ಮಗ ಸಂತೋಷ್‌ಶೇಖರ್ ಹಾಗೂ ಮುರಳಿ ಜಂಟಿಯಾಗಿ ನಿರ್ಮಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟೀಸರ್‌ನ್ನು ಧ್ರುವಸರ್ಜಾ ಬಿಡುಗಡೆ ಮಾಡಿದರು.
ರಾಜ್.ಬಿ.ಶೆಟ್ಟಿಯ ಟೋಬಿ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮುಖಾಂತರ ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ರಾಜ್.ಬಿ.ಶೆಟ್ಟಿ ಇಂದು ಸ್ಟಾರ್ ಆಗಿದ್ದಾರೆ. ಅವರ ಹೊಸ ಚಿತ್ರಗಳು ಎಂದರೆ ಕುತೂಹಲ ಹುಟ್ಟಿಸುತ್ತದೆ. ಅಂತಹುದೆ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಲುಲು ಮಾಲ್‌ದಲ್ಲಿ ನಡೆಯಿತು. ಏಟು ಬಿದ್ದು ರಕ್ತಸಿಕ್ತವಾದ ಮುಖ, ಮೂಗಿಗೆ ಬಳೆಯಷ್ಟು ದೊಡ್ಡದಾದ ಮೂಗುತಿ, ಸಿಟ್ಟುಭರಿತ ಲುಕ್ ಕ್ರೋಧವನ್ನು ಎತ್ತಿ ತೋರಿಸುತ್ತಿದೆ. ಈಗಾಗಲೇ ದೊಡ್ಡ ಮೂಗುತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಮಾರಿ ಮಾರಿ ಮಾರಿಗೆ ದಾರಿ’ ಎಂಬ ....
*ಬೆಂಗಳೂರಿನಲ್ಲಿ ‘ಸ್ಪೈ’ ಅದ್ಧೂರಿ ಪ್ರಮೋಷನ್..ಇದೇ 29ಕ್ಕೆ ನಿಖಿಲ್ ಸಿದ್ಧಾರ್ಥ್ ಸಿನಿಮಾ ರಿಲೀಸ್* ಕಾರ್ತಿಕೇಯ, ಕಾರ್ತಿಕೇಯ-2 ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಸ್ಪೈ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 29ಕ್ಕೆ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಮುಂಬೈನಲ್ಲಿ ಪ್ರಮೋಷನ್ ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದಿಳಿದ ಚಿತ್ರತಂಡವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ,ಹರೀಶ್ ಸ್ವಾಗತಿಸಿ ಶುಭಕೋರಿದರು. ಬಳಿಕ ಚಿತ್ರತಂಡ ಮಾಧ್ಯಮದವರೊಂದಿಗೆ ತಮ್ಮ ಬಹುನಿರೀಕ್ಷಿತ ಸ್ಪೈ ಬಗ್ಗೆ ಸಾಕಷ್ಟು ವಿಷಯವನ್ನು ಹಂಚಿಕೊಂಡರು. ನಟ ನಿಖಿಲ್ ....
*ಕುತೂಹಲ ಮೂಡಿಸಿದೆ "ಮಾಂಕ್ ದಿ ಯಂಗ್" ಚಿತ್ರದ ಟೀಸರ್* ಕನ್ನಡ ಚಿತ್ರರಂಗದಲ್ಲೀಗ ಹೊಸಬರ ಹೊಸಪ್ರಯತ್ನಕ್ಕೆ ನೋಡುಗರ ಬೆಂಬಲ ಸಿಗುತ್ತಿದೆ. "ಮಾಂಕ್ ದಿ ಯಂಗ್" ಚಿತ್ರ ಕೂಡ ಹೊಸಕಥೆಯೊಂದಿಗೆ ಕನ್ನಡ ಸೇರಿದಂತೆ ಆರುಭಾಷೆಗಳಲ್ಲಿ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ನಟ ಪ್ರಥಮ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದಲ್ಲಿ ನಟಿಸಿರುವ ಪ್ರಣಯಮೂರ್ತಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. "ಮಾಂಕ್ ದಿ ಯಂಗ್" ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಂದು ಚಿತ್ರದ ಟೀಸರ್ ಬಿಡುಗಡೆ ....
ಮಹಾಗುರು ಮೂಕಿ ಸಿನಿಮಾ
೮೦ರ ದಶಕದಲ್ಲಿ ‘ಪುಷ್ಪಕ ವಿಮಾನ’ ಮೂಕಿ ಚಿತ್ರದಲ್ಲಿ ಕಮಲಹಾಸನ್, ಅಮಲಾ ನಟಿಸಿದ್ದು ಸೂಪರ್ ಹಿಟ್ ಆಗಿತ್ತು. ಬರೋಬ್ಬರಿ ೩೬ ವರ್ಷಗಳ ನಂತರ ‘ಮಹಾಗುರು’ಂಬ ಇಂತಹುದೇ ಚಿತ್ರವೊಂದು ಸೆಟ್ಟೇರಿದೆ. ಕಸ್ತೂರಿ ಜಗನ್ನಾಥ್ ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದರೆ, ಕೇರಳ ಮೂಲದ ಎಡಕ್ಕಾವಿಲ್ ಫಿರೋಸ್,ಜಸ್ಸಿನಾ, ಅಶೋಕ್‌ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ಮಧುರಕಾವ್ಯ ಆಡಿಯೋ ಬಿಡುಗಡೆ ಆಯುರ್ವೇದ ಚಿಕಿತ್ಸಾ ಪದ್ದತಿಗೆ ಅದರದೇ ಆದ ಮಹತ್ವವಿದೆ. ಇತ್ತೀಚಿನ ಕಾಲಮಾನದಲ್ಲಿ ಬಂದಿರುವ ಅಲೋಪತಿಗೆ ಈಗ ಹೆಚ್ಚು ಜನ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಆಯುರ್ವೇದದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲೆಂದೇ, ಸ್ವತಃ ಆಯುರ್ವೇದ ವೈದ್ಯರಾದ ಮಧುಸೂದನ್ ಅವರು ಮಧುರಕಾವ್ಯ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ, ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಅಭಿನಯಿಸಿದ್ದಾರೆ, ಈ ಚಿತ್ರದ ನಾಲ್ಕು ಹಾಡುಗಳ ಪ್ರದರ್ಶನ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯ ೪ ಹಾಡುಗಳು ಚಿತ್ರದಲ್ಲಿದ್ದು, ಹಿರಿಯ ಸಂಗೀತ ನಿರ್ದೇಶಕ ....
ಚಿತ್ರರಂಗಕ್ಕೆ ಸುದೀಪ್ ಸಂಬಂಧಿ ಚಂದನವನಕ್ಕೆ ಸುದೀಪ್ ಕುಟುಂಬದಿಂದ ಮತ್ತೋಂದು ಹೊಸ ಪ್ರತಿಭೆ ಸೇರ್ಪಡೆಯಾಗಿದೆ. ಅಕ್ಕನ ಮಗ ಸಂಚಿತ್‌ಸಂಜೀವ್ ‘ಜಿಮ್ಮಿ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಪಂಚತಾರ ಹೋಟೆಲ್‌ದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಕಿಚ್ಚ ಜ್ಯೂನಿಯರ್ ಎಂದೇ ಪರಿಚಯಿಸಿಕೊಂಡಿರುವ ಯುವನಟನನ್ನು ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್ ವೇದಿಕೆಗೆ ಕರೆತರುವ ಮೂಲಕ ಅಧಿಕೃತವಾಗಿ ಸಿನಿಮಾರಂಗಕ್ಕೆ ಬರಮಾಡಿಕೊಳ್ಳಲಾಯಿತು. ಇನ್ನು ಸಂಚಿತ್‌ಸಂಜೀವ್ ಅವರು ಮೊದಲ ಪ್ರಯತ್ನದಲ್ಲೇ ನಿರ್ದೇಶನ ಅಲ್ಲದೆ ನಟನೆಯ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ....