ಅಗ್ರಸೇನಾ ಈವಾರ ತೆರೆಗೆ
ಮುರುಗೇಶ್ ಕಣ್ಣಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅಗ್ರಸೇನಾ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಶ್ರೀಮತಿ ಮಮತಾ ಜಯರಾಮರೆಡ್ಡಿ ಹಾಗೂ ಜಯರಾಮರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಹಳ್ಳಿ ಹಾಗೂ ನಗರದಲ್ಲಿ ಡಬಲ್ ಟ್ರ್ಯಾಕ್ ನಲ್ಲಿ ಸಾಗುವ ಕಥಾಹಂದರ ಈ ಚಿತ್ರದಲ್ಲಿದ್ದು, ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ಟ್ರಾಕ್‌ನಲ್ಲಿ ಸಾಗುತ್ತದೆ.
*ಸದ್ಯದಲ್ಲೇ ತೆರೆಗೆ ಬರಲಿದೆ "90 ಬಿಡಿ ಮನೀಗ್ ನಡಿ"* . *ಹಿರಿಯ ನಟ ಬಿರಾದರ್ ಅಭಿನಯದ 500ನೇ ಚಿತ್ರವಿದು* . ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಅಭಿನಯದ 500ನೇ ಚಿತ್ರ "90 ಬಿಡಿ ಮನೀಗ್ ನಡಿ". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಮೊದಲು ನಮ್ಮ ಚಿತ್ರದ ಟೈಟಲ್ "90 ಹೊಡಿ ಮನೀಗ್ ನಡಿ" ಎಂದು ಇಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಟೈಟಲ್ ಗೆ ಒಪ್ಪಲಿಲ್ಲ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನು "90 ಬಿಡಿ ಮನೀಗ್ ನಡಿ" ಎಂದು ಬದಲಿಸಲಾಯಿತು. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನ ಗೆದ್ದಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ....
ಗಿನ್ನಿಸ್ ದಾಖಲೆ ಮಾಡುವತ್ತ "ದೇವರ ಆಟ ಬಲವರಾರು " ಕನ್ನಡದಲ್ಲಿ ಮತ್ತೊಂದು ಹೊಸ ಪ್ರಯತ್ನ . ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ "ದೇವರ ಆಟ ಬಲವರಾರು" ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ "ಫಿರಂಗಿ ಪುರ" ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ನಾನು ಈ ಹಿಂದೆ "ಫಿರಂಗಿ ಪುರ" ....
ಮರ್ಡರ್ ಮಿಸ್ಟ್ರಿ ಕಥನ ’ಇತ್ಯಾದಿ’ ಚಿತ್ರವು ಸೆನ್ಸಾರ್‌ಗೆ ಹೋಗಲು ಅಣಿಯಾಗುತ್ತಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಚರಣ್‌ದೇವ್ ಕ್ರಿಯೇಶನ್ಸ್-ಅದ್ವೈತ ಫಿಲಿಂಸ್-ನೀಲಕಂಠ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ವಿಜೇತ, ನಟ,ನಿರ್ದೇಶಕ ಪ್ರಥಮ್ ಮಾತನಾಡಿ, ತುಣುಕುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಡಿ.ಯೋಗರಾಜ್ ಅವರಿಗೆ ಯೋಗ ಹುಡುಕಿಕೊಂಡು ಬರಲಿ. ನಿನ್ನೆಯಷ್ಟೇ ವಿಕಟಕವಿ ಯೋಗರಾಜಭಟ್ ಅವರ ಚಿತ್ರದ ....
. *ಜೂನ್ 23 ರಂದು ಬರುತ್ತಿದ್ದಾನೆ "ರೋಡ್ ಕಿಂಗ್"* *ಇದು ಸ್ಕೈಪ್ ನಲ್ಲಿ ನಿರ್ದೇಶನವಾದ ಮೊದಲ ಚಿತ್ರ* ಕೊರೋನ ನಂತರ ಇಂಟರ್ ನೆಟ್ ಬಳಕೆ ಬಹಳ ಹೆಚ್ಚಾಗಿದೆ. ಈಗ ಹೆಚ್ಚಾಗಿ ಎಲ್ಲಾ ಆನಲೈನ್ ನಲ್ಲೇ ನಡೆಯುತ್ತಿದೆ. ಆದರೆ ಕೊರೋನ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ " ರೋಡ್ ಕಿಂಗ್" ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಈ ಚಿತ್ರ ಇದೇ 23 ರಂದು ಬಿಡುಗಡೆಯಾಗುತ್ತಿದೆ. ಹಾಲಿವುಡ್ ನ ರಾಂಡಿ ಕೆಂಟ್ ಅವರ ಬಳಿ ಈ ಚಿತ್ರವನ್ನು ನಿರ್ದೇಶನ ಮಾಡಿಸಬೇಕೆಂದುಕೊಂಡು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ವೀಸಾ ಸಮಸ್ಯೆಯಿಂದ ....
*ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ "ಮಾರಕಾಸ್ತ್ರ" ಚಿತ್ರದ ಟೀಸರ್ ಬಿಡುಗಡೆ* . ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ "ಮಾರಕಾಸ್ತ್ರ" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಮಾಲಾಶ್ರೀ ಅವರೆ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನನಗೆ ಧನಕುಮಾರ್ ಮಾಸ್ಟರ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ ಅವರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೆ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ....
*ಪಸಂದಾಗಿದೆ "ಗರಡಿ" ಚಿತ್ರದ ಮೊದಲ ಹಾಡು* . *"ಹೊಡಿರೆಲೆ ಹಲಗಿ" ಎಂದ ಯೋಗರಾಜ್ ಭಟ್* . ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ "ಗರಡಿ" ಚಿತ್ರದ ಮೊದಲ ಹಾಡು "ಹೊಡಿರೆಲೆ ಹಲಗಿ" ಲಿರಿಕಲ್ ವಿಡಿಯೋ ಇತ್ತೀಚಿಗೆ ಬಿಡುಗಡೆಯಾಯಿತು. ವಿ.ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ "ಗರಡಿ" ಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. "ಗರಡಿ" ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ ..ಹೀಗೆ.. ಈ "ಗರಡಿ" ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ....
ಜೂ. 30ಕ್ಕೆ ‘ನಾನು ಕುಸುಮ’ ತೆರೆಗೆ ಕೃಷ್ಣೇಗೌಡ ನಿರ್ಮಾಣ, ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ತಯಾರಾಗಿರುವ, ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ‘ನಾನು ಕುಸುಮ’ ಸಿನಿಮಾ, ಇದೇ ಜೂನ್ 30ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರ ಮುಂದೆ ಬರುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ಹುಡುಗಿಯೊಬ್ಬಳು ಅಲ್ಲಿ ಏನೇನು ಶೋಷಣೆಗಳನ್ನು ಅನುಭವಿಸುತ್ತಾಳೆ ಎನ್ನುವುದರ ಸುತ್ತ ‘ನಾನು ಕುಸುಮ’ ಸಿನಿಮಾದ ಕಥಾಹಂದರ ಸಾಗುತ್ತದೆ. ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕಾವ್ಯಾ ಶ್ರೀಧರ್, ಕೃಷ್ಣೇಗೌಡ, ಸೌಮ್ಯ ಭಾಗವತ್, ಪ್ರತಿಭ ಸಂಶಿಮಠ್, ವಿಜಯ್ ಮೊದಲಾದವರು ....
*ಹೊರಬಂತು ‘ನಸಾಬ್’ ಶೀರ್ಷಿಕೆ* *ಜೀವನಾಧಾರಿತ ಕೃತಿಗೆ ಸಿನಿಮಾ ರೂಪ* ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ನಸಾಬ್’ ಸಿನಿಮಾದ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆಯಾಯಿತು. ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಂಡಜ್ಜಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಜಂಬುನಾಥ ಸ್ವಾಮಿ ಎಸ್. ಮಳಿಮಠ, ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್, ಬೆಂಗಳೂರು ನಗರ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಸೇರಿದಂತೆ ....
*"ಬಿಸಿಲು ಕುದುರೆ" ಗೆ ಐವತ್ತನೇ ದಿನದ ಸಂಭ್ರಮ* . ಕನ್ನಡದ ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಹೃದಯ ಶಿವ ನಿರ್ದೇಶನದ "ಬಿಸಿಲು ಕುದುರೆ" ಚಿತ್ರ ಕಳೆದ ಏಪ್ರಿಲ್ 21ರಂದು ಬಿಡುಗಡೆಯಾಗಿತ್ತು. ಚಿತ್ರ ಈಗ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಈ ಚಿತ್ರವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರ ಒಂದೇ ಚಿತ್ರಮಂದಿರದಲ್ಲಿ ಐವತ್ತು ದಿನ ಪೂರೈಸಿಲ್ಲ. ರಾಜ್ಯದ ವಿವಿಧ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಂಡು ಈಗ ಐವತ್ತನೇ ದಿನ ಪೂರೈಸಿದೆ. ಸದ್ಯದಲ್ಲೇ "ಬಿಸಿಲು ಕುದುರೆ" ....
*ಮತ್ತೆ ಶುರು ಡಾ.ರಾಜ್ ಕಪ್..ದುಬೈನಲ್ಲಿ ನಡೆಯಲಿದೆ ರಾಜ್ ಕಪ್ ಸೀಸನ್-6 ಹರಾಜು ಪ್ರಕ್ರಿಯೆ..ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗಿ* ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೀಗ ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ....
ಪ್ರೇಕ್ಷಕರೇ ಗೆಲ್ಲಿಸಿದ ದರ್ಬಾರ್ ನಮ್ಮದು ಹಳ್ಳಿಗಳ ದೇಶ, ಇಲ್ಲಿ ಮಾನವನ ಸಂಬಂಧಗಳಿಗೆ ಬೆಲೆಯಿದೆ. ಪ್ರಮುಖವಾಗಿ ದೇಶದ ರಾಜಕೀಯ ಭವಿಷ್ಯ ನಿರ್ಧಾರವಾಗುವುದೇ ಈ ಹಳ್ಳಿಗಳಿಂದ. ಹಾಗೆ ನೋಡಿದರೆ ಪ್ರತಿಯೊಬ್ಬರಿಗೂ ಹಳ್ಳಿಗಳೇ ಮೂಲ. ಅವರು ಎಷ್ಟೇ ದೊಡ್ಡ ಮನುಷ್ಯರಾಗಿ ಬೆಳೆದಿದ್ರೂ, ಅವರ ಯಾವುದಾದರೂ ಒಂದು ಬೇರು ಹಳ್ಳಿಯಲ್ಲಿರುತ್ತದೆ, ಅಂಥಾ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ನಿರ್ಮಾಣವಾದ ಚಿತ್ರ ದರ್ಬಾರ್ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ನಾಡಿನಾದ್ಯಂತ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಮುನ್ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಚುನಾವಣಾ ರಾಜಕಾರಣವನ್ನು ಪ್ರಮುಖವಾಗಿಟ್ಟುಕೊಂಡು ....
ಲವ್ ಲಿಗೆ ತಾರೆಗಳು ಸಾಥ್ ‘ಲವ್ ಲಿ’ ಚಿತ್ರದ ಶೀರ್ಷಿಕೆ ಗೀತೆಯನ್ನು ರವಿಚಂದ್ರನ್, ಉಪೇಂದ್ರ, ಲವ್ಲಿಸ್ಟಾರ್ ಪ್ರೇಮ್, ಪ್ರಿಯಾಂಕ ಉಪೇಂದ್ರ ಮತ್ತು ಹರಿಪ್ರಿಯಾ ಬಿಡುಗಡೆ ಮಾಡಿದರು. ರವಿಚಂದ್ರನ್ ಮಾತನಾಡಿ ಲವ್ವಲ್ಲಿ ಇದ್ರೆ, ಎಲ್ಲಾ ಲವ್ ಲಿ ಆಗಿರುತ್ತೆ. ಹೊಸಬರಲ್ಲಿ ಒಂದು ಹೊಸ ಉತ್ಸಾಹ ಇದೆ ಎಂದರು. ಉಪೇಂದ್ರ ಹೇಳುವಂತೆ ಹಾಡು ಆಸಕ್ತಿ ಹುಟ್ಟಿಸುತ್ತೆ. ಅಲ್ಲದೆ ಚಿತ್ರ ನೋಡಬೇಕು ಅನಿಸುತ್ತೆ ಎನ್ನುತ್ತಾರೆ. ನಾನಿಷ್ಟ ಪಡುವಂಥ ಲವ್ಲಿ ಮನಸುಗಳೇ ಸೇರಿ ಇದನ್ನು ಮಾಡಿದ್ದಾರೆ. ಡ್ಯಾನ್ಸ್ ಕಲಿಸುವ ಹುಡುಗ ಕೇಶವ್ ನಿರ್ದೇಶನ ಮಾಡುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ. ಒಳ್ಳೆಯ ಕ್ವಾಲಿಟಿ ಇರುವಂಥ ಚಿತ್ರ. ರವಿಸರ್, ....
ಅಗ್ರಸೇನಾ ಟ್ರೈಲರ್ ಡಾಲಿ ಧನಂಜಯ್ ಬಿಡುಗಡೆ ಇದೇ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿರುವ, ಶ್ರೀಮತಿ ಮಮತಾ ಜಯರಾಮರೆಡ್ಡಿ ಅವರ ನಿರ್ಮಾಣದ, ಮುರುಗೇಶ್ ಕಣ್ಣಪ್ಪ ಅವರ ನಿರ್ದೇಶನದ ’ಅಗ್ರಸೇನಾ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ಟ್ರೈಲರ್ ರಿಲೀಸ್ ಮಾಡಿ ಮಾತನಾಡುತ್ತ,ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಿರ್ದೇಶಕರು ನಮ್ಮ ಅರಸೀಕೆರೆಯವರು, ಒಂದು ಹೊಸ ತಂಡಕ್ಕೆ ಮಾರಲ್ ಸಪೋರ್ಟ್ ಮಾಡಲು ಬಂದಿದ್ದೇನೆ ಎಂದರು. ಅಮರ್ ವಿರಾಜ್ ಹಾಗೂ ರಚನಾ ದಶರಥ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಗಸ್ತ್ಯ ಬೆಳಗೆರೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ಹಿರಿಯನಟ ....
*ಸಖತಾಗಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ ಎಣ್ಣೆ ಹಾಡು* . "ಫಸ್ಟ್ rank ರಾಜು" ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ "ರಾಜು ಜೇಮ್ಸ್ ಬಾಂಡ್" ಚಿತ್ರಕ್ಕಾಗಿ ದೀಪಕ್ ಮಧುವನಹಳ್ಳಿ ಬರೆದಿರುವ "ಬೇಕಿತ್ತಾ ಬೇಕಿತ್ತಾ, ಈ ಲವು ಬೇಕಿತ್ತಾ" ಎಂಬ ಹಾಡಿನ ಲಿರಿಕಲ್ ವಿಡಿಯೋ A2 music ಮೂಲಕ ಬಿಡುಗಡೆಯಾಗಿದೆ. ಅಂತೋನಿ ದಾಸ್ ಹಾಡಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿ ವೆಂಕಟೇಶ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. "ರಾಜು ಜೇಮ್ಸ್ ಬಾಂಡ್" ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಆಗಸ್ಟ್ ನಲ್ಲಿ ತೆರೆಗೆ ತರುವ ಪ್ರಯತ್ನ ....
*ಮಾಸಾಂತ್ಯಕ್ಕೆ ಬರಲಿದೆ ಕ್ರೈಮ್ ಥ್ರಿಲ್ಲರ್ "ಹತ್ಯ"* . ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಾಧರ್ (ಗಂಗು) ತಮ್ಮ ಸ್ನೇಹಿತರಾದ ರಾಮಲಿಂಗಂ ಹಾಗೂ ಶ್ಯಾಮ್ ಅವರ ಜೊತೆ ಸೇರಿ ನಿರ್ಮಿಸಿರುವ " ಹತ್ಯ" ಚಿತ್ರದ ಟೀಸರ್ ಹಾಗೂ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಉದ್ಯಮಿ ನಾಗಿ ರೆಡ್ಡಿ ಟೀಸರ್ ಬಿಡುಗಡೆ ಮಾಡಿದರು. ನಾನು ನಿರ್ಮಾಣ ನಿರ್ವಾಹಕನಾಗಿ ಎಲ್ಲರಿಗೂ ಚಿರಪರಿಚಿತ. ರಮೇಶ್ ಅರವಿಂದ್ ಅಭಿನಯದ "ತುಂತುರು", " ನೀರು" ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ ಹಾಗೂ ಚಿತ್ರಕಥೆ ಸಹ ಬರೆದಿದ್ದೇನೆ. "ಹತ್ಯ" ಸಿನಿಮಾವನ್ನು ನನ್ನ ಮಗ ವರುಣ್ ಹೆಸರಿನಲ್ಲಿ ನಾನೇ ....
ತೆರೆಗೆ ಸಿದ್ದ ದರ್ಬಾರ್
ಹಿರಿಯ ಸಾಹಿತಿ, ಸಂಗೀತ ಸಂಯೋಜಕ ಮತ್ತು ನಟ ವಿ.ಮನೋಹರ್ ದೀರ್ಘ ಕಾಲದ ಗ್ಯಾಪ್ ನಂತರ ‘ದರ್ಬಾರ್’ ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತೀಶ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಸುಮಾರು ೨೩ ವರ್ಷಗಳ ನಂತರ ಸಾಹಿತಿ, ನಟ ವಿ.ಮನೋಹರ್ ನಿರ್ದೇಶನ ಮಾಡಿದ್ದಾರೆ. ರಾಜಕೀಯ ವಿಡಂಬನೆ ಸಾರುವ ಗೀತೆಯನ್ನು ಉಪೇಂದ್ರ ಹಾಡಿರುವುದು ವಿಶೇಷ.
ಮಾಡಲಿಂಗ್ ಹುಡುಗ ಈಗ ನಾಯಕ
ಮಾಡಲಿಂಗ್‌ದಲ್ಲಿ ಮಿಂಚಿರುವ ಹಲವು ಪ್ರತಿಭೆಗಳು ಕ್ರಮೇಣವಾಗಿ ಚಿತ್ರರಂಗಕ್ಕೆ ಬರುವುದು ವಾಡಿಕೆಯಾಗಿದೆ. ಆ ಸಾಲಿಗೆ ರೋಹಿತ್ ‘ರಕ್ತಾಕ್ಷ’ ಚಿತ್ರವನ್ನು ಸಾಯಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣ ಮಾಡುವ ಜತೆಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಶೀರ್ಷಿಕೆ ಗೀತೆಗೆ ಧ್ವನಿಯಾಗಿರುವ ನಟ ವಸಿಷ್ಠಸಿಂಹ, ಸಾಹಿತ್ಯ ಸುಜಿತ್‌ವೆಂಕಟರಾಮಯ್ಯ, ಧೀರೇಂದರ್‌ದಾಸ್ ದೊಸ್ಮೋಡ ಸಂಗೀತದ ಹಾಡಿನ ಬಿಡುಗಡೆ ಕಾರ್ಯಕ್ರಮ ಮೊನ್ನೆ ನಡೆಯಿತು.
ಜನರ ಎದುರು ಪಿಂಕಿ ಎಲ್ಲಿ? ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ ಆಧಾರಿತ ‘ಪಿಂಕಿ ಎಲ್ಲಿ?’ ಚಿತ್ರವು ಮಗುವೊಂದು ಕಾಣೆಯಾಗಿದ್ದರೂ, ಕಥೆಯು ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಮಗುವಿನ ಭವಿಷ್ಯಕ್ಕಾಗಿ ತಂದೆ-ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ ಎಂಬುದು ಒಂದೆಳೆ ಸಾರಾಂಶವಾಗಿದೆ. ಇದನ್ನು ಮೆಚ್ಚಿಕೊಂಡ ಕೃಷ್ಣೆಗೌಡ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪೃಥ್ವಿಕೋಣನೂರು ಸುಮಾರು ಮೂರು ವರ್ಷಗಳ ಹಿಂದೆ ಕಥೆ ಬರೆದಿದ್ದು, ಈಗ ಚಿತ್ರರೂಪದಲ್ಲಿ ....
ಅರಳಿದ ಹೂಗಳು ಟೀಸರ್ ಬಿಡುಗಡೆ ಮಹಾಶರಣ ಹರಳಯ್ಯ, ಜ್ಘಾನಜ್ಯೋತಿ ಸಿದ್ದಗಂಗಾ, ಹಾಸನಾಂಬ ಮಹಿಳೆ, ನಮ್ಮವರು, ಮತ್ತೆ ಬಂದ ವೀರಪ್ಪನ್ ಇನ್ನು ಮುಂತಾದ ಭಕ್ತಿಪ್ರದಾನ, ಐತಿಹಾಸಿಕ ಹಾಗೂ ಸಾಮಾಜಿಕ ಚಿತ್ರಗಳನ್ನು ನಿರ್ದೇಶಿಸಿರುವ ಬಿ.ಎ.ಪುರುಷೋತ್ತಮ್(ಓಂಕಾರ್) ಸಾಹಿತ್ಯ, ಚಿತ್ರಕಥೆ,ನಿರ್ದೇಶನದ ೨೫ನೇ ಮಹಿಳಾ ಪ್ರಧಾನ ಸಿನಿಮಾ ‘ಅರಳಿದ ಹೂಗಳು’ ಸಿದ್ದಗೊಂಡಿದೆ. ಸೋನು ಫಿಲಿಂಸ್ ಮೂಲಕ ಮಂಜುನಾಥನಾಯಕ್ ತಾವೇ ಬರೆದ ಕಾದಂಬರಿಯನ್ನು ನಿರ್ಮಾಣ ಮಾಡಿರುವ ಜತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಹ ನಿರ್ಮಾಪಕರಾಗಿ ಸುಮೀತ್‌ಕುಮಾರ್ ಇದ್ದಾರೆ. ರಾಜ್‌ಭಾಸ್ಕರ್ ಸಂಗೀತದಲ್ಲಿ ಮೋಹನ್, ಸಚಿನ್, ರಶ್ಮಿ, ವಿಶ್ವ ....