ಸಂಬಂಧಗಳ ಜತೆಗೆ ಭಾವನೆಗಳ ಹೂರಣ
ಮಂಜುಕಾರ್ತಿಕ್ ರಚಿಸಿ ನಿರ್ದೇಶನ ಮಾಡಿರುವ ‘ಮಲೋಡಿ ಡ್ರಾಮ’ ಚಿತ್ರದ ಕಥೆಯು ಪಯಣದಲ್ಲಿ ಸಾಗುವ ಸುಮಧುರ ಬಾಂಧವ್ಯದಲ್ಲಿ ಸಾಗುತ್ತದೆ. ಪ್ರೀತಿ ಭಾವನೆಗಳ ಜತೆಗೆ ಸಂಬಂಧಗಳು ಹೇಗಿರಬೇಕು. ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ ಎನ್ನುವಂತ ವಿಷಯವನ್ನು ಹೇಳ ಹೊರಟಿದೆ. ‘ನಿನ್ನ ಕಥೆ ನನ್ನ ಜೊತೆ’ ಎಂಬ ಅಡಿಬರಹವಿದೆ. ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡರೆಡ್ಡಿ ಬಂಡವಾಳ ಹೂಡಿದ್ದಾರೆ.
ಹಳ್ಳಿ ಮತ್ತು ನಗರದ ಪ್ರೇಮ ಕಥನ
‘ಅಗ್ರಸೇನಾ’ ಚಿತ್ರವು ಎರಡು ಆಯಾಮಗಳಲ್ಲಿ ಸಾಗಲಿದ್ದು, ತಂದೆ-ಮಗನ ಬಾಂಧವ್ಯದ ಸಾರ, ಹಳ್ಳಿ ಹಾಗೂ ಪಟ್ಟಣದಲ್ಲಿ ನಡೆಯುವ ಪ್ರೇಮ ಕಥೆ, ರಾಜಕೀಯ ಸುತ್ತ ನಡೆಯುವ ಅಂಶಗಳನ್ನು ಹೇಳ ಹೊರಟಿದೆ. ಮುರುಗೇಶ್ನಿರಾಣಿ ನಿರ್ದೇಶನದಲ್ಲಿ, ಮಮತಾಜಯರಾಮರೆಡ್ಡಿ ಬಂಡವಾಳ ಹೂಡಿದ್ದಾರೆ.
ವಾಮಾಚಾರ ಕುರಿತಾದ ಗದಾಯುದ್ದ ಉತ್ತರ ಕರ್ನಾಟಕದ ನಿತಿನ್ಶಿರಗುರ್ಕರ್ ನಿರ್ಮಾಣ ಮಾಡಿರುವ ‘ಗದಾಯುದ್ದ’ ಚಿತ್ರವು ವಾಮಾಚಾರಿ ಕುರಿತಾಗಿದೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮಾನವರ ಜೀವ ತೆಗೆಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ನಾಯಕನ ರೂಪದಲ್ಲಿ ಮರುಜನ್ಮ ತೆಳೆದ ಭೀಮ ಗದಾಯುದ್ದದ ಮೂಲಕ ಹೇಗೆ ಇಂಥವರನ್ನು ಸದೆಬಡಿಯುತ್ತಾನೆ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನು ಇಟ್ಟುಕೊಂದು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ....
ನೈಜ ಘಟನೆಯ ಮಿ. ಆಂಡ್ ಮಿಸಸ್ ರಾಜಾಹುಲಿ ‘ರಾಜಾಹುಲಿ’ ‘ಹೆಬ್ಬುಲಿ’ ಚಿತ್ರಗಳ ನಂತರ ಇದೀಗ ‘ಮಿ ಆಂಡ್ ಮಿಸಸ್ ರಾಜಾಹುಲಿ’ ಸೇರ್ಪಡೆಯಾಗಿದೆ. ‘ರಾಜಾಹುಲಿ’ ಸಿನಿಮಾದಲ್ಲಿ ಸಹನಿರ್ದೇಶಕನಾಗಿದ್ದ ಹೊನ್ನರಾಜ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕರು ಕಳೆದ ನವೆಂಬರ್ದಲ್ಲಿ ಹೊಸ ಸಿನಿಮಾ ಆರಂಭಿಸಬೇಕಿತ್ತು. ಅದೇ ಸಮಯದಲ್ಲಿ ಪರಿಚಿತರೊಬ್ಬರು ಮಂಡ್ಯದಲ್ಲಿ ನಡೆದ ಸತ್ಯ ಘಟನೆಯ ಬಗ್ಗೆ ಹೇಳಿದರು. ಅದೇ ತುಂಬ ಆಸಕ್ತಿಕರವಾಗಿದ್ದರಿಂದ ಫೆಬ್ರವರಿಯಲ್ಲಿ ಶುರು ಮಾಡಲಾಯಿತು. ಇದೇ ಟೈಟಲ್ ಕೊಟ್ಟಿದ್ದಕ್ಕೆ ಮಂಜು ....
ಮೀಟರ್ ಹಾಕಿ ಪ್ಲೀಸ್ ವೆಬ್ ಸೀರೀಸ್ ಕನ್ನಡದಲ್ಲಿ ವೈಬ್ ಸೀರೀಸ್ ಹಾವಳಿ ಜೋರಾಗುತ್ತಿದೆ. ನಟ,ನಿರೂಪಕ ವಿನಾಯಕಜೋಷಿ ಪರಿಕಲ್ಪನೆಯ ‘ಮೀಟರ್ ಹಾಕಿ ಪ್ಲೀಸ್’ ಹೊಸ ವೆಬ್ ಸೀರೀಸ್ಗೆ ನಿರ್ದೇಶನ, ನಿರೂಪಣೆ ಜತೆಗೆ ನಿರ್ಮಾಣ ಮಾಡಿದ್ದಾರೆ. ಮೊನ್ನೆ ಟ್ರೇಲರ್ ಹಾಗೂ ಮೊದಲ ಸಂಚಿಕೆಯ ಪ್ರದರ್ಶನ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಮುಂದೆ ನಾಯಕನಾದೆ. ೮೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕೆಲವು ವರ್ಷಗಳ ಹಿಂದೆ ‘ಜೋಶ್ ಲೆ’ ಎಂಬ ವೆಬ್ ಸೀರೀಸ್ ನಿರ್ಮಿಸಿದ್ದೆ. ಈಗ ‘ಮೀಟರ್ ಹಾಕಿ’ ಸಿದ್ದಪಡಿಸಿದ್ದೇನೆ. ಆಟೋ ಚಾಲಕರ ಜೀವನ ....
ದರೋಡೆ ಹಿಂದಿನ ರೋಚಕ ಕಥನ ‘ಮದಗಜ’ ಸಿನಿಮಾಕ್ಕೆ ಸಹಾಯಕ ನಿರ್ದೇಶನ ಮಾಡಿರುವ ಮೋಹನ್.ಎನ್.ಮುನಿನಾರಾಯಣಪ್ಪ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪೆಂಟ್ರಿಕ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಪೂಜಾ.ಟಿ.ವೈ ನಿರ್ಮಾಣ ಮಾಡಿರುವುದು ಹೊಸ ಅನುಭವ. ಪ್ರಚಾರದ ಸಲುವಾಗಿ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೊಂದು ಸತ್ಯ ಘಟನೆಯಾಗಿದೆ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಶಾಖಾ ವ್ಯವಸ್ಥಾಪಕರಿಂದ ೧೩ ಕೋಟಿ ಹಣ ೧೦೦ ಜನಕ್ಕೆ ಮಿಸ್ ಆಗಿ ಡಿಪಾಸಿಟ್ ಆಗುತ್ತದೆ. ಅದು ಹೇಗೆ? ಏನು ಅನ್ನೋದರ ಸುತ್ತ ಸಿನಿಮಾವು ಸಾಗುತ್ತದೆ. ಒಂದು ಪಾತ್ರದ ಸುತ್ತ ಹೋಗದೆ, ಹೈಪರ್ ಲಿಂಕ್ ....
ಸ್ಟಾರ್ ಹೆಸರಿನಲ್ಲೊಂದು ಸಿನಿಮಾ ಚಿತ್ರರಂಗಕ್ಕೆ ತಾವು ಸ್ಟಾರ್ ಕಲಾವಿದ ಆಗಬೇಕೆಂದು ಹಲವು ಹೊಸ ಪ್ರತಿಭೆಗಳು ಬರುತ್ತಾರೆ. ಈಗ ಹೊಸಬರ ತಂಡವೊಂದು ‘ಸ್ಟಾರ್’ ಹೆಸರಿನಲ್ಲಿ ಚಿತ್ರವೊಂದನ್ನು ಸಿದ್ದಪಡಿಸುತ್ತಿದ್ದಾರೆ. ಶರತ್ ನಟಿಸುತ್ತಿರುವುದರ ಜತೆಗೆ ಲಯನ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ದಂಪತಿಗಳಾದ ಅನು-ವಿಜಯಸೂರ್ಯ ನಿರ್ದೇಶನವಿದೆ. ಸಿನಿಮಾದ ಕುರಿತಂತೆ ಮಾತನಾಡಿರುವ ಶರತ್ ನಾನು ಇದುವರೆಗೂ ಪೋಷಕ ಕಲಾವಿದ, ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದೆ. ಮೊದಲ ಬಾರಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದೇನೆ. ಇದೊಂದು ನೈಜ ಕಥೆಯನ್ನು ಹೊಂದಿದ್ದು, ಶೇಕಡ ೧೦೦ರಷ್ಟು ಮನರಂಜನೆ ಸಿಗುತ್ತದೆ. ....
ಯದಾ ಯದಾಹಿ ಹೀ ಟ್ರೇಲರ್ ಲೋಕಾರ್ಪಣೆ ಸೆಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ‘ಯದಾ ಯದಾ ಹೀ’ ಚಿತ್ರದ ಟ್ರೇಲರ್ ಅನಾವರಣ ಸಮಾರಂಭವು ಇತ್ತೀಚೆಗೆ ನಡೆಯಿತು. ಮಹಾಭಾರತದಲ್ಲಿ ಬರುವ ಶ್ಲೋಕವೊಂದನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಈಗಾಗಲೇ ಟೈಟಲ್ ಸಾಂಗ್ನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. ನಾಗಾರ್ಜುನಶರ್ಮ ಸಾಹಿತ್ಯಕ್ಕೆ ವಸಿಷ್ಠಸಿಂಹ ಮತ್ತು ಹರಿಪ್ರಿಯಾ ಕಂಠದಾನ ಮಾಡಿರುವುದು ವಿಶೇಷ. ಟಾಲಿವುಡ್ನ ಅಶೋಕ್ತೇಜ ನಿರ್ದೇಶನವಿದೆ. ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದರಬಾದ್ ಮೂಲದ ರಾಜೇಶ್ಅಗರ್ವಾಲ್ ನಿರ್ಮಾಣ ಮಾಡಿದ್ದಾರೆ. ತೆಲುಗಿನ ‘ಎವರು’ ರಿಮೇಕ್ ....
ಭ್ರಮೆಯ ಸುತ್ತ ನಡೆಯುವ ಸ್ತಬ್ಧ ಭ್ರಮೆ ಮತ್ತು ರಿಯಾಲಿಟಿ ನಡುವೆ ನಡೆಯುವ ಹಾರರ್ ಹಿನ್ನಲೆ ಹೊಂದಿರುವ ‘ಸ್ತಬ್ಧ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ನಡೆಯಿತು. ಸಚಿವ ರಾಮಲಿಂಗರೆಡ್ಡಿ ಪುತ್ರ ಶ್ರೀರಾಜ್ರಾಮಲಿಂಗರೆಡ್ಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಾಯಿ ಸಾಗರ ಫಿಲಂ ಫ್ಯಾಕ್ಟರಿ ಮೂಲಕ ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಿಸಿದ್ದು, ಲಾಲಿರಾಘವ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿ ಹರ್ಷಿಕಾಪೂರ್ಣಚ್ಚಾ ಮಾತನಾಡಿ ಇಂದುಮತಿಯಾಗಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದರಲ್ಲಿ ಮುದ್ದು ಹುಡುಗಿಯಾಗಿದ್ದರೆ, ಮತ್ತೋಂದರಲ್ಲಿ ಹಾರರ್ ಟಚ್ ಇರುತ್ತದೆ. ಸಿನಿಮಾ ....
ಸ್ವಾತಂತ್ರಪೂರ್ವ ಕಥನ ಪುಟ್ಟ ಭಯ ಸಾಯಿ ಚಿತ್ರಂ ಪ್ರೊಡಕ್ಸನ್ಸ್ ಲಾಂಛನದಲ್ಲಿ ಜನಾರ್ಧನ ನಾಯಕ್ ನಿರ್ಮಿಸಿರುವ “ಪುಟ್ಟ ಭಯ” ಮಕ್ಕಳ ಚಿತ್ರವು ಸ್ವಾತಂತ್ರ ಪೂರ್ವ ಕಥೆಯನ್ನು ಹೊಂದಿದೆ. ರಚನೆ,ಚಿತ್ರಕಥೆ,ಸಂಭಾಷಣೆ,ಸಂಗೀತ,ಸಾಹಿತ್ಯ ಮತ್ತು ನಿರ್ದೇಶನವನ್ನು ನವ್ಯ.ಜಿ.ನಾಯಕ್ ನಿರ್ವಹಿಸಿದ್ದಾರೆ. ಕಥೆಯಲ್ಲಿ ಚಿಕ್ಕ ವಯಸ್ಸಿಗೆ ಮದುವೆಯಾದ ದಂಪತಿಗೆ ಹೆಣ್ಣು ಮಗುವೊಂದು ಜನನವಾಗುತ್ತದೆ. ಮುಂದೆ ಒಂದು ಹಂತದಲ್ಲಿ ಮಗುವಿಗೆ ಭಯ ಮೂಡುತ್ತದೆ. ಅದು ಯಾರಿಂದ ಬರುತ್ತದೆ? ಇದಕ್ಕೆ ಕಾರಣ ಏನು? ಹೇಗೆ ಆವರಿಸುತ್ತದೆ? ಯಾವುದರ ಬಗ್ಗೆ ಭಯ ಹುಟ್ಟುತ್ತೆ? ತಾಯಿ ಮಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬಂಥ ವಿಷಯಗಳು ಸನ್ನಿವೇಶದ ಮೂಲಕ ....
*ಕುನಾಲ್ ಗಾಂಜಾವಾಲ ಹಾಡಿರುವ "ರಿಚ್ಚಿ" ಚಿತ್ರದ ಹಾಡು ಬಿಡುಗಡೆ* . ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ "ರಿಚ್ಚಿ" ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿರುವ "ಕಳೆದು ಹೋಗಿರುವೆ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಕುನಾಲ್ ಗಾಂಜಾವಾಲ ಸ್ವತಃ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಸಾಮಾನ್ಯವಾಗಿ ನಾನು ನನ್ನ ಹಾಡುಗಳ ಬಿಡುಗಡೆ ಸಮಯದಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ, ಇಲ್ಲಿ ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಗೂ"ರಿಚ್ಚಿ" ಅವರಿಗಾಗಿ ಬಂದಿದ್ದೇನೆ. ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದೇನೆ. ಒಂದು ಮೆಲೋಡಿ, ಮತ್ತೊಂದು ಪ್ಯಾಥೋ ....
*'ಮತ್ತೆ ಮದುವೆ’ ಬಗ್ಗೆ ಏನಂದ್ರೂ ಪವಿತ್ರಾ ಲೋಕೇಶ್-ನರೇಶ್...?* ಟಾಲಿವುಡ್ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪವಿತ್ರಾ ಹಾಗೂ ನರೇಶ್ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಜೋಡಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು. ಇದು ನಿಮ್ಮ ಜೀವನದ ರಿಯಲ್ ಲೈಫ್ ಸ್ಟೋರಿನಾ? ಟೀಸರ್ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ....
ಶ್ರೀಮಂತ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಭಿನ್ನ ಶೈಲಿಯ ಪ್ರಚಾರದಿಂದಲೇ ಸುದ್ದಿಯಾಗಿರುವ ಹಾಸನ್ ರಮೇಶ್ ನಿರ್ದೇಶನದ ಚಿತ್ರ ಶ್ರೀಮಂತ. ಬಾಲಿವುಡ್ ನಟ ಸೋನು ಸೂದ್ ಚಿತ್ರದಲ್ಲಿ ನಟಿಸಿರುವುದು ಈವರೆಗೆ ಬಿಗ್ ಸಪೋರ್ಟ್ ಆಗಿತ್ತು, ಇದೀಗ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸನ್ನು ಚಿತ್ರತಂಡ ಹೊರಹಾಕಿದೆ. ಅದೇನೆಂದರೆ ಕನ್ನಡ ಚಿತ್ರರಂಗದ ಬಾದ್ಶಾ ಕಿಚ್ಚ ಸುದೀಪ್ ಅವರು ಶ್ರೀಮಂತನ ಜೊತೆಯಾಗಿರುವುದು, ಹೌದು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಇದ್ದಾರೆ. ಇಡೀ ಚಿತ್ರದಲ್ಲಿ ಅವರ ಪಾತ್ರ ಇರುತ್ತದೆ. ಅದು ಹೇಗೆಂದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಚಿತ್ರದ ನಿರ್ದೇಶಕ ಹಾಸನ ರಮೇಶ್ ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ....
*ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು "ಸೈರನ್" ಟ್ರೇಲರ್* . *ಮೇ 26ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆ* ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ "ಸೈರನ್" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಮೇ 26ರಂದು ಕೆ.ಆರ್ ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ....
*ಆರ್ಯವರ್ಧನ್ ನಿರ್ದೇಶನದ "ತುಂಟರು" ಚಿತ್ರಕ್ಕೆ ಚಾಲನೆ* .
*ಚಿತ್ರದ ಎಲ್ಲಾ ಪಾತ್ರಗಳಲ್ಲೂ ಮಕ್ಕಳೆ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷ* .
ಅನುರಾಗ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಆರ್ಯವರ್ಧನ್ ನಿರ್ದೇಶನದ "ತುಂಟರು" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕೆಂಗೇರಿಯ ನವದುರ್ಗಿ ಶ್ರೀ ಗಂಗಮ್ಮ ಹಾಗೂ ಶ್ರೀ ಸೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಹಿಳಾಪ್ರಧಾನ ರೀತು ಚಿತ್ರಕ್ಕೆ ಚಾಲನೆ ಕನ್ನಡದಲ್ಲಿ ಕವಿತಾ ಲಂಕೇಶ್, ರೂಪಾ ಅಯ್ಯರ್, ಸುಮನಾ ಕಿತ್ತೂರು ಸೇರಿದಂತೆ ಹಲವಾರು ಮಹಿಳಾ ನಿರ್ದೇಶಕಿಯರಿದ್ದಾರೆ. ಆ ಸಾಲಿಗೆ ಸೇರಿರುವ ಗೌರಿಶ್ರೀ ಈಗಾಗಲೇ ೨ ಚಿತ್ರಗಳನ್ನು ನಿರ್ದೇಶಿಸಿದ್ದು, ಮೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ನಿರ್ದೇಶಕಿ, ನಿರ್ಮಾಪಕಿಯೂ ಆದ ಗೌರಿಶ್ರೀ ಕನ್ನಡದಲ್ಲಿ ಸಹ ಕಲಾವಿದೆಯಾಗಿ ಸುಮಾರು ನೂರರಿಂದ ೧೫೦ ಮಹಿಳಾಪ್ರದಾನ ಕಥಾಹಂದರ ಹೊಂದಿರುವ ರೀತು ಹೆಸರಿನ ಆ ಚಿತ್ರದ ಮುಹೂರ್ತ ಸಮಾರಂಭ ಆಡುಗೋಡಿಯ ಪಟಾಲಮ್ಮ ದೇವಸ್ಥಾನದಲ್ಲಿ ನೆರವೇರಿತು. ಪ್ರೇಮಂ ಪೂಜ್ಯಂ, ಜೂಲಿಯೆಟ್-೨ ಖ್ಯಾತಿಯ ಬೃಂದಾ ಆಚಾರ್ಯ ಚಿತ್ರದ ನಾಯಕಿಯಾಗಿದ್ದು, ಮಡೇನೂರು ಮನು, ಪ್ರಫುಲ್ ಸುರೇಂದ್ರ ಹಾಗೂ ಆರ್ಯನ್ ....
*ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ 75. ಬಣ್ಣದ ಬದುಕಿಗೆ 50** .
*ಈ ಸಂದರ್ಭದಲ್ಲಿ ಮೇ 15 , 16 ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ನಾಟಕ ಪ್ರದರ್ಶನ* .
ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಶ್ರೀನಿವಾಸಮೂರ್ತಿ ಅವರಿಗೆ ಈಗ 75 ವರ್ಷ. ಅವರ ಬಣ್ಣದ ಬದುಕಿಗೆ 50 ವರ್ಷ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ಇದೇ ಮೇ 15 ಹಾಗೂ 16 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ತರಕಾರಿ ಚೆನ್ನಿ" ಹಾಗೂ "ಸದಾರಮೆ ಕಳ್ಳ" ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು.
ಕನ್ನಡ ಚಿತ್ರರಂಗದ ಪ್ರಚಾರಕರ್ತ(ಪಿ ಆರ್ ಓ) ಸುಧೀಂದ್ರ ವೆಂಕಟೇಶ್ ಅವರ ಪುತ್ರಿ ಚಿ.ಸೌ. ಚಂದನ ವಿವಾಹ ಚಿ.ರಾ.ಪ್ರಸನ್ನ ಭಾಸ್ಕರ್ ಅವರೊಂದಿಗೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಧ್ರುವ ಸರ್ಜಾ, ಅಜೇಯ್ ರಾವ್ , ವಿನೋದ್ ಪ್ರಭಾಕರ್, ಹಂಸಲೇಖ ದಂಪತಿ, ಸುಧಾರಾಣಿ, ರಾಗಿಣಿ ದ್ವಿವೇದಿ, ಚಾಂದಿನಿ, ಅಮೂಲ್ಯ, ಸೋನು ಗೌಡ , ಪ್ರಗತಿ ರಿಷಭ್ ಶೆಟ್ಟಿ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಧರ್ಮ, ತಬಲ ನಾಣಿ, ಶ್ರೀನಾಥ್, ಕೀರ್ತಿ ರಾಜ್, ಧರ್ಮ ಕೀರ್ತಿರಾಜ್, ಸಿಹಿಕಹಿ ಚಂದ್ರು, ಬಿ.ಸುರೇಶ್, ಗುರುದತ್, ರವಿಚೇತನ್ ನಿರ್ಮಾಪಕರಾದ ಸಾ.ರಾ.ಗೋವಿಂದು,
*ಆದಿತ್ಯ ಬರ್ತ್ ಡೇ ಗೆ ಬಿಡುಗಡೆಯಾಯಿತು ‘ಟೆರರ್’ ಚಿತ್ರದ ಟೀಸರ್* . *ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ ನಿರ್ದೇಶಕ - ನಿರ್ಮಾಪಕ ಆರ್ ಚಂದ್ರು* . ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ. ನಿರ್ದೇಶಕ - ನಿರ್ಮಾಪಕ ಆರ್. ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು. "ಟೆರರ್” ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್ ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಆರ್ ಚಂದ್ರು ಹಾರೈಸಿದರು. ....
ಹೊಸಬರನ್ನು ಬೆಳೆಸುವುದು ನಮ್ಮಲ್ಲರ ಕರ್ತವ್ಯವಾಗಿದೆ – ಧ್ರುವಸರ್ಜಾ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರಸಾಮ್ರಾಟ್’ ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್ಕುಮಾರ್(ಪಚ್ಚಿ) ಸಿನಿಮಾಕ್ಕೆ ಕಥೆ ....