*ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಕಿಲಾಡಿಗಳು ಹೇಳಲಿದ್ದಾರೆ* *- ಡಿ. 18ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ* *- ಕಿಲಾಡಿಗಳು ಚಿತ್ರದ ಟ್ರೇಲರ್ ರಿಲೀಸ್* *- ಚಿತ್ರದಲ್ಲಿನ ಮೂರು ಹಾಡುಗಳು ಪೊಲೀಸರಿಗೆ ಅರ್ಪಣೆ* ಆನಂದ್ ಸಿನಿಮಾಸ್ ಅರ್ಪಿಸುವ ಪೂರ್ವಿಕಾಮೃತ ಕ್ರಿಯೇಷನ್ಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗಿರುವ ಕಿಲಾಡಿಗಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿ. 18ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು. ಆ ನಿಮಿತ್ತ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಇತ್ತೀಚೆಗಷ್ಟೇ ನಗರದ ಓರಾಯನ್ ಮಾಲ್ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಮಾತ್ಮ ಸ್ಡುಡಿಯೋಸ್ ನಲ್ಲಿ ಟ್ರೇಲರ್ ....
ತೆರೆ ಮೇಲೆ ಶ್ರೀ ಅಲ್ಲಮಪ್ರಭು ದಿವ್ಯ ಚರಿತ್ರೆ ಹಿರಿಯ ನಿರ್ದೇಶಕ ನಾಗಭರಣ ಸಾರಥ್ಯದಲ್ಲಿ ‘ಅಲ್ಲಮ’ ಚಿತ್ರವೊಂದು ತೆರೆಕಂಡಿತ್ತು. ಈಗ ಬೇರೊಂದು ತಂಡದಿಂದ ‘ಶ್ರೀ ಅಲ್ಲಮಪ್ರಭು’ ಸಿನಿಮಾ ಸೆಟ್ಟೇರಿದೆ. ದಿವ್ಯ ಸ್ವಾಮೀಜಿಗಳು ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ಬಿದರಿ ಉಪಸ್ಥಿತಿಯಲ್ಲಿ ಮಹೂರ್ತ ಸಮಾರಂಭವು ಸರಳವಾಗಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕ್ರತ ಡಿ.ಕೆ.ಶಿವರಾಜ್ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಾಧವಾನಂದ ಕತೆ,ಚಿತ್ರಕತೆ ಹಾಗೂ ಪಾಲುದಾರರು. ಶ್ರೀ ಶ್ರೀ ಮಹಾವೀರಪ್ರಭು ಅವರು ಅಮರಜ್ಯೋತಿ ಪಿಕ್ಚರ್ಸ್ ಮುಖಾಂತರ ನಿರ್ಮಾಣ ....
*ಅಂಬಾ ಭವಾನಿ ಸನ್ನಿಧಿಯಲ್ಲಿ ಮುಹೂರ್ತ ಮುಗಿಸಿದ ಫಾರ್ ರಿಜಿಸ್ಟ್ರೇಷನ್ ಚಿತ್ರ* *ನವೀನ್ ದ್ವಾರಕಾನಾಥ್ ನಿರ್ದೇಶನ; ನವೀನ್ ರಾವ್ ನಿರ್ಮಾಣ* *ಕ್ಲಾಪ್ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರಸ್ವಾಮಿ* ಬಾಲ್ಯದ ಸ್ನೇಹಿತರೇ ಒಂದಾಗಿ ಇದೀಗ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಈಗಾಗಲೇ ನೋದಂಣಿಯನ್ನೂ ಮಾಡಿಸಿದ್ದಾರೆ. ಅಂದರೆ ಚಿತ್ರದ ಹೆಸರೇ ಫಾರ್ ರಿಜಿಸ್ಟ್ರೇಷನ್ ಎಂದು ಹೆಸರಿಟ್ಟಿದ್ದಾರೆ. ಶುಭ ಶುಕ್ರವಾರದಂದು ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡಿದೆ. ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ....
ಯಲ್ಲೋ ಗ್ಯಾಂಗ್ಸ್ ಭಟ್ಟರ ಶುಭಹಾರೈಕೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಯಲ್ಲೋ ಗ್ಯಾಂಗ್ಸ್’ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಶುಭ ಹಾರೈಸಲು ಯೋಗರಾಜಭಟ್ ಆಗಮಿಸಿದ್ದರು. ಟ್ರೈಲರ್ ಬಿಡುಗಡೆ ಮಾಡಿದ ಭಟ್ಟರು ನಂತರ ಮಾತನಾಡಿ ಇದೇ ರೀತಿ ಜನಸಂದಣಿ ಚಿತ್ರಮಂದಿರಕ್ಕೆ ಬಂದಲ್ಲಿ ನಿರ್ಮಾಪಕರು ಉಳಿಯುತ್ತಾರೆ. ‘ಮುಗುಳುನಗೆ’ಯಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ನಿರ್ದೇಶಕರ ಶ್ರಮ, ನಿಯತ್ತು ನೋಡಿದಾಗ ಇವರು ಮುಂದೆ ನಿರ್ದೇಶಕರಾಗಿ ಬರುತ್ತಾರೆಂದು ಮನಸ್ಸು ಹೇಳಿತ್ತು. ಅದು ನಿಜವಾಗಿದೆ. ಚಿತ್ರವನ್ನು ಗುದ್ದಾಡಿ, ಬಡಿದಾಡಿ ಮಾಡಿದ್ದರೂ ಅಂತಿಮವಾಗಿ ಫಲಿತಾಂಶ ಪರದೆ ಮೇಲೆ ಬಂದಾಗ ಎಲ್ಲವು ಮರೆತು ....
*ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಂಡ ಆರ್ಎಚ್ 100* ಶೀರ್ಷಿಕೆ ಮೂಲಕವೇ ಗಮನಸೆಳೆದಿದ್ದ ಆರ್ಎಚ್ 100 ಸಿನಿಮಾ ಇದೀಗ ಟ್ರೇಲರ್ ಬಿಡುಗಡೆ ಮಾಡಿಕೊಂಡ ಸಂಭ್ರಮದಲ್ಲಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ ‘ಆರ್ಎಚ್ 100’ ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು. ಆ್ಯಕ್ಟ್ 1978 ಚಿತ್ರದ ನಿರ್ಮಾಪಕ ದೇವರಾಜ್ ಆರ್, ನಿರ್ದೇಶಕ ಹರಿ ಸಂತು ನಟ ಚೇತನ್ ರಾಜ್ ಅತಿಥಿಗಳಾಗಿ ಆಗಮಿಸಿ, ಟ್ರೇಲರ್ ಲಾಂಚ್ ಮಾಡಿದರು. ಬಹುತೇಕ ಹೊಸಬರೇ ....
ಈ ವಾರ ತೆರೆಗೆ *ಪುರಸೋತ್ ರಾಮ*
*ಮಾನಸದೇವಿ* ಪ್ರೊಡಕ್ಷನ್ಸ್ ಲಾಂಛನದಲ್ಲಿ *ಮಾನಸ* ಅವರು ನಿರ್ಮಿಸಿರುವ *ಪುರಸೋತ್ ರಾಮ* ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
*ಪ್ರಭುದೇವ್* ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳನ್ನು *ಪ್ರಭುದೇವ* ಹಾಗೂ *ಧ್ರುವ* ಬರೆದಿದ್ದಾರೆ. *ಸುದ್ದೋರಾಯ್* ಸಂಗೀತ ನೀಡಿದ್ದಾರೆ.
ಶಕೀಲಾ ಮಾದಕಟಿಯೊಬ್ಬಳ ಜೀವನಗಾಥೆ ದಕ್ಷಿಣ ಭಾರತ ಸಿನಿಮಾ ನಟಿಯೊಬ್ಬರ ಬಯೋಪಿಕ್ ಇರೋ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲೆನ್ನಬಹುದು. ಅಂಥಾ ಹಿರಿಮೆಗೆ ಕಾರಣವಾಗಿರೋ ಚಿತ್ರ ಶಕೀಲಾ. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿದೆ. ಚಿತ್ರದ ಫಸ್ಟ್ಲುಕ್ ಹಾಗೂ ಟ್ರೈಲರ್ ಬಿಡುಗಡೆ ಬೆಂಗಳೂರಿನ ಸ್ಟಾರ್ ಹೋಟೆಲ್ವೊಂದರಲ್ಲಿ ನೆರವೇರಿತು. ಹಿಂದಿ ಭಾಷೆಯಲ್ಲಿ ಶುರುವಾಗಿದ್ದ ಈ ಚಿತ್ರ ಈಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸಾಗುತ್ತಿದೆ. ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೇ ಅಭಿನಯಿಸುವ ಮೂಲಕ ಗುರ್ತಿಸಿಕೊಂಡ ಮಲಯಾಳಂನ ....
ತೆರೆಗೆ ಸಿದ್ದ ನಾನೊಂಥರ ‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಕತೆಯಲ್ಲಿ ಅಪ್ಪನನ್ನು ಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕು ಎಂದುಕೊಂಡರೆ ಬಾರ್ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆ ದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣ ಕಥಾನಾಯಕನಲ್ಲಿ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಪ್ರಿಯತಮೆ ಸಿಗದೆ ಇದ್ದಾಗ ದೇವದಾಸ ಆಗುತ್ತಾನೆ. ಆದರೆ ಇದರಲ್ಲಿ ಕುಡುಕ ಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗ ಇದ್ದಕ್ಕಿದ ಹಾಗೆ ಎಣ್ಣೆ ....
*ಸೂಪರ್ಸ್ಟಾರ್ಗೆ ಅದ್ಧೂರಿ ಮುಹೂರ್ತ; ಸೋಮವಾರದಿಂದ ಶೂಟಿಂಗ್ ಶುರು* *- ಡೈಲಾಗ್ ಮೂಲಕವೇ ಚಪ್ಪಾಳೆ ಗಿಟ್ಟಿಸಿಕೊಂಡ ನಿರಂಜನ್* *- ಅಣ್ಣನ ಮಗನ ಬೆನ್ನು ತಟ್ಟಿದ ರಿಯಲ್ ಸ್ಟಾರ್ ಉಪೇಂದ್ರ* 'ಲೇ ಮಚಾ.. ತೆಳ್ಳಗೆ ಬೆಳ್ಳಗೆ ಇದಾನೆ ಅಂತ ಲಿಟಲ್ ಸ್ಟಾರ್ ಅಂದ್ಕೊಂಡ್ಬಿಟ್ಟೇನೋ ಮಗನೇ.. ರಿಯಲ್ ಸ್ಟಾರ್ ಗರಡಿಯಲ್ಲಿ ಪಳಗಿರೋ ಸೂಪರ್ಸ್ಟಾರ್ ಕಣೋ.. ಕರೆದ ತಕ್ಷಣ ಬರೋಕೆ ಡಾನ್ಸರ್ಸ್ ಏನು ನಿನ್ನ ಕಟ್ಕೋಂಡಿರೋಳಾ ಏನು ಇಟ್ಕೋಂಡಿರೋಳಾ ಮಗನೇ..’ ಹೀಗೆ ಖಡಕ್ ಡೈಲಾಗ್ ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ನಿರಂಜನ್ ಸುಧೀಂದ್ರ. ಹೌದು, ಪೋಸ್ಟರ್ ಮೂಲಕ ಸದ್ದು ಮಾಡಿದ್ದ ಸೂಪರ್ಸ್ಟಾರ್ ಚಿತ್ರದ ಅದ್ಧೂರಿ ಮುಹೂರ್ತ ಶುಕ್ರವಾರ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ....
“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರ ಎರೆಡು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆ. ಖ್ಯಾತ ನಿರ್ಮಾಪಕ ಎಸ್. ವಿ. ಶಿವಕುಮಾರ್ ಅವರು ತಮ್ಮ ಸಂಗಮ ಫಿಲ್ಂಸ್ ಲಾಂಛನದಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರವು ಎರೆಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ. 2021ರ ಜನವರಿ 16 ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲಿದೆ. ಜನವರಿಯಲ್ಲೇ ರೋಂನಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನ ಚಿತ್ರೋತ್ಸವದಲ್ಲಿಯೂ ಈ ಚಿತ್ರ ....
*ನಿಮಿಷಾಂಭಾ ದೇಗುಲದಲ್ಲಿ ಆ ಒಂದು ಕನಸು ಚಿತ್ರದ ಮುಹೂರ್ತ* *-ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ; ವಿಷ್ಣು ನಾಚನೇಕರ್ ನಿರ್ದೇಶನ* ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಆ ಒಂದು ಕನಸು ಚಿತ್ರದ ಮುಹೂರ್ತ ಗುರುವಾರ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜಕುಮಾರ್ ಆಗಮಿಸಿ ಕ್ಲಾಪ್ ಮಾಡಿದರೆ, ನಿವೃತ್ತ ಶಾಲಾ ಶಿಕ್ಷಕರಾದ ಬಾಲಕೃಷ್ಣ ಎಚ್. ಎಂ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಳಿಕ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದ ತಂಡ, ಸಿನಿಮಾದ ಕಥೆ, ಪಾತ್ರವರ್ಗ ಮತ್ತು ಚಿತ್ರೀಕರಣದ ಒಂದಷ್ಟು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿತು. ....
ಇಬ್ಬರಲ್ಲಿ ಜಾಕ್ಪಾಟ್ ಯಾರಿಗೆ ಒಲಿಯುತ್ತೆ? ಎಟಿಎಂ ಚಿತ್ರತಂಡದಿಂದ ‘ಜಾಕ್ಪಾಟ್’ ಸಿನಿಮಾವೊಂದು ಸಿದ್ದಗೊಂಡಿದೆ. ಅಮರ್ ರಚಿಸಿ ನಿರ್ದೇಶನ ಮಾಡಿದ್ದಾರೆ. ಪೋಲೀಸ್ ಮತ್ತು ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕತೆಯಾಗಿದೆ. ವಿಶ್ರಾಂತಿಗೆಂದು ಸಕಲೇಶಪುರಕ್ಕೆ ಹೋಗುವ ಹುಡುಗನಿಗೆ ಅತ್ಯಂತ ಬೆಲೆಬಾಳುವ ಮಾದಕ ವಸ್ತು ಸಿಗುತ್ತದೆ. ಅದನ್ನು ಬೆಂಗಳೂರಿನಗೆ ತಂದು ವ್ಯಾಪಾರ ಮಾಡಲು ಯತ್ನಿಸುತ್ತನೆ. ವಿಷಯವು ಪೋಲೀಸರಿಗೆ ತಿಳಿದು, ಕೇಸ್ ಹಿನ್ನಲೆ ಪತ್ತೆ ಮಾಡಲು ತನಿಖಾಧಿಕಾರಿಯನ್ನು ನೇಮಿಸುತ್ತಾರೆ. ಇಬ್ಬರ ನಡುವೆ ಬರುವ ಸನ್ನಿವೇಶಗಲ್ಲಿ ಯಾರಿಗೆ ಶೀರ್ಷಿಕೆ ಹೊಡೆಯುತ್ತೇ ....
ಗಾದೆ ಮಾತು ಚಿತ್ರದ ಶೀರ್ಷಿಕೆ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹಿರಿಯರು ಹೇಳಿದ್ದಾರೆ. ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಗಾದೆಯು ಈಗ ಸಿನಿಮಾ ಶೀರ್ಷಿಕೆಯಾಗಿದ್ದು ಬಿಡುಗಡೆಗೆ ಸಿದ್ದವಾಗಿದೆ. ಅತೃಪ್ತಿ ಜೀವನ. ಉದ್ಯೋಗ ಎಲ್ಲರಿಗೂ ಇರುತ್ತದೆ. ಕೆಲಸ ಅಂತ ಸಿಕ್ಕಮೇಲೆ ನೆಮ್ಮದಿ ಸಿಗುತ್ತದೆ. ಆಗ ಶೇಕಡ ನೂರರಷ್ಟು ಕನಸುಗಳು ಈಡೇರುತ್ತದೆ. ಕತೆಯಲ್ಲಿ ನಾಲ್ಕು ಜನ ಯುವಕರು ಏನು ಮಾಡದೆ ಉಡಾಫೆಯಾಗಿರುತ್ತಾರೆ. ಇವರ ಸುತ್ತಲಿನ ಜನರು ಇವರುಗಳನ್ನು ಹೇಗೆ ತೀರ್ಮಾನಿಸಿರುತ್ತಾರೆ. ಒಂದು ಹಂತದಲ್ಲಿ ಹುಡುಗರು ಅರ್ಥಪೂರ್ಣ ತೀರ್ಪು ಕೊಟ್ಟಾಗ ಕಾಲ, ಸಮಾಜವು ಇವರೇನೋ ಮಾಡಿದ್ದಾರೆಂದು ಗೌರವದಿಂದ ಕಾಣುತ್ತಾರೆ. ....
ಪೈರೆಸಿ ತಡೆಗೆ ಪುನೀತ್ರಾಜ್ಕುಮಾರ್ ಚಾಲನೆ ಹೊಸ ತಂತ್ರಜ್ಘಾನದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯೋದು ಒಂದು ವಾರ ಮಾತ್ರವೆಂದು ಪುನೀತ್ರಾಜ್ಕುಮಾರ್ ಅಭಿಪ್ರಾಯ ಪಟ್ಟರು. ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್ರೆಡ್ಡಿ ತಂಡದವರು ಸೇರಿಕೊಂಡು ಪೈರೆಸಿ ತಡೆಗಟ್ಟುವ ನೂತನ ತಂತ್ರಜ್ಘಾನ ‘ಫೆಂಡೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪೈರೆಸಿ ಎನ್ನುವುದು ವಿಡಿಯೋ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರೆಸಿ ಆಗುತ್ತದೆ. ....
ಜಗ್ಗೇಶ್ ನಾಲ್ಕು ದಶಕದ ಸಿನಿಪಯಣದ ನೆನಪುಗಳು ನವೆಂಬರ್ ೧೭,೧೯೮೦ ನವರಸ ನಾಯಕ ಜಗ್ಗೇಶ್ ‘ಕಪ್ಪು ಕೊಳ’ ಚಿತ್ರದ ಮೂಲಕ ಬಣ್ಣ ಹಚ್ಚಿದ ದಿನ. ಇಂದಿಗೆ ಸಿನಿಮಾರಂಗದಲ್ಲಿ ನಲವತ್ತು ಹೆಜ್ಜೆಗಳನ್ನು ಇಡುತ್ತಾ ರಾಜಕೀಯ, ಚಿತ್ರರಂಗ, ರಿಯಾಲಿಟಿ ಶೋದಲ್ಲಿ ಬ್ಯುಸಿ ಇದ್ದಾರೆ. ಈ ಶುಭ ಸಂದರ್ಭದಲ್ಲಿ ಮಾದ್ಯಮದವರನ್ನು ಆಹ್ವಾನಿಸಿ ಖುಷಿ, ದುಖ:, ಅವಮಾನ, ಸನ್ಮಾನ ಎಲ್ಲವನ್ನು ಹೇಳುತ್ತಾ ಹೋದರು. ನನ್ನ ಬದುಕಿನಲ್ಲಿ ಎರಡು ಪಾತ್ರಗಳು ಮಹತ್ವದ ತಿರುವು ಕೊಟ್ಟಿತು. ನನ್ನ ನಾಯಕ ಮಾಡಿಸಿದ್ದು ಅಂಬರೀಷ್, ರಾಜಕೀಯಕ್ಕೆ ಬರಲು ಪ್ರೇರಣೆ ಮಾಡಿದ್ದು ಡಿ.ಕೆ.ಶಿವಕುಮಾರ್. ನಾಲ್ಕು ದಶಕಗಳ ಕಾಲ ಸಿನಿಬದುಕಿನಲ್ಲಿ ಇದ್ದೇನೆ. ಅದಕ್ಕೆ ....
*ಸಂಸ್ಕೃತದ ಪದ ಶೀರ್ಷಿಕೆಯಾಯ್ತು; ಮುಹೂರ್ತ ಮುಗಿಸಿಕೊಂಡ ಅಗ್ನಿಪ್ರವ ಸಿನಿಮಾ* *-ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಕ್ಯಾಮರಾಕ್ಕೆ ಚಾಲನೆ* *-ಡಾ. ರಾಜ್ ಪುತ್ರಿ ಲಕ್ಷ್ಮೀ ಗೋವಿಂದ್ ರಾಜ್ ಕ್ಲಾಪ್* ಸಂಸ್ಕ್ರತ ಭಾಷೆಯ ಶೀರ್ಷಿಕೆ ಎಲ್ಲ ಭಾಷೆಯಲ್ಲೂ ಸಲ್ಲುತ್ತದೆ ಎಂಬುದು ಬಹುತೇಕ ನಿರ್ದೇಶಕರ ಅಭಿಪ್ರಾಯ. ಇದೀಗ ಅಂಥದ್ದೇ ಸಂಸ್ಕ್ರತದ ಶೀರ್ಷಿಕೆಯನ್ನಿಟ್ಟುಕೊಂಡು ಅಗ್ನಿಪ್ರವ ಸಿನಿಮಾ ಇತ್ತಿಚೆಗಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ. ಸುರೇಶ್ ಆರ್ಯ ಅಗ್ನಿಪ್ರವ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರಿಗಿದು ಕನ್ನಡದ ಮೊದಲ ....
ಚಿತ್ರಮಂದಿರದಲ್ಲಿ ಮುಖವಾಡ ಇಲ್ಲದವನು ೮೪ ಹೊಬರ ‘ಮುಖವಾಡ ಇಲ್ಲದವನು ೮೪’ ಚಿತ್ರವು ಸದ್ದು ಮಾಡುತ್ತಿದೆ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖಿ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವ ಯಾವ ರೀತಿ ಮುಖವಾಡ ಹಾಕುತ್ತಾನೆ ಎಂಬುದು ಸೆಸ್ಪೆನ್ಸ್ ಚಿತ್ರದ ಕಥಾಹಂದರವಾಗಿದೆ. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ಮುಖ್ಯ ಪಾತ್ರದಲ್ಲಿ ಶಿವಕುಮಾರ್(ಕಡೂರ್) ಕಾಣಿಸಿಕೊಂಡಿದ್ದಾರೆ. ಮಧುಆರ್ಯ-ವಿನಯ್ಗೌಡ-ಗಿರೀಶ್ ಛಾಯಾಗ್ರಹಣ, ಎರಡು ಹಾಡುಗಳಿಗೆ ಸಂಗೀತ ದುರ್ಗಪ್ರಸಾದ್, ಹಿನ್ನಲೆ ಶಬ್ದ ಮಹಾರಾಜ್ ....
*ಚಂದನವನಕ್ಕೆ ಮತ್ತೊಬ್ಬ ರಾಮಾಚಾರಿ ಬಂದ; ಈತ ಬಲು ಬುದ್ಧಿವಂತ!* *-ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತ* *-ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮಾರ್ಗರೇಟ್ ಆಗಿ ನಟನೆ* ಸ್ಯಾಂಡಲ್ವುಡ್ಗೂ ರಾಮಾಚಾರಿಗೂ ಬಿಡದ ನಂಟು. ಆ ರಾಮಾಚಾರಿ ನಂಟು ಇದೀಗ ಮತ್ತೆ ಮುಂದುವರಿಯುತ್ತಿದೆ. ಅವೆಲ್ಲವುಗಳ ಅಪ್ಡೇಟ್ ವರ್ಷನ್ ಅವತಾರದಲ್ಲಿ ಹೊಸ ರಾಮಾಚಾರಿ ಎಂಟ್ರಿಯಾಗುತ್ತಿದ್ದಾನೆ. ಅದೇ ರಾಮಾಚಾರಿ 2.0! ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತವನ್ನು ನೆರವೇರಿಸಿಕೊಂಡ ಈ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್ ಪ್ರಾರಂಭಿಸಿಲಿದೆ. ನಿರ್ದೇಶಕರಾದ ಶಶಾಂಕ್, ಮಹೇಶ್, ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ....
ಈ ವಾರ ತೆರೆಗೆ ಆಕ್ಟ್ 1978
ಕೊರೋನ ಹಾವಳಿಯ ನಂತರ ಯಾವುದೇ ಹೊಸ ಚಿತ್ರಗಳು ತೆರೆಕಂಡಿರಲಿಲ್ಲ. ಎಂಟು ತಿಂಗಳ ನಂತರ ಇದೇ ನವೆಂಬರ್ 20 ರಂದು ಆಕ್ಟ್ 1978 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ಅರ್ ದೇವರಾಜ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಮಂಸೋರೆ ಕಥೆ ಬರೆದು, ನಿರ್ದೇಶಿಸಿದ್ದಾರೆ.
ಶಿವಪ್ಪ @ ೧೨೩ ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಲ್ಲ. ಶಿವರಾಜ್ಕುಮಾರ್ ಅವರ ೧೨೩ನೇ ಚಿತ್ರದ ಹೆಸರು ‘ಶಿವಪ್ಪ’. ಅಡಿಬರಹದಲ್ಲಿ ‘ಕಾಯೋ ತಂದೆ’ ಎಂದು ಹೇಳಿಕೊಂಡಿದೆ. ಕೊರೊನಾ ನಂತರ ಬಣ್ಣ ಹಚ್ಚುತ್ತಿರುವ ಮೊದಲ ಸಿನಿಮಾದ ಮಹೂರ್ತವು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾಜದಲ್ಲಿ ಪ್ರತಿದಿನ ನೂರಾರು ತಪ್ಪುಗಳಾಗುತ್ತಾ ಇರುತ್ತೆ. ಆದರೆ ಅದನ್ನು ಮಟ್ಟಹಾಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ನಾಯಕ ನೋಡೋಕೆ ತುಂಬಾ ಮುಗ್ದ. ವ್ಯವಸ್ಥೆ ಸರಿ ಇಲ್ಲ ಎಂದಾಗ ಆತ ಮೂರನೇ ಕಣ್ಣು ಬಿಡಬೇಕಾಗುತ್ತದೆ. ಆತನ ಪ್ರಕಾರ ತಪ್ಪು ಮಾಡೋಕೆ ಹೋಗೋದೇ ದೊಡ್ಡ ತಪ್ಪು. ಪ್ರತಿ ಪಾತ್ರಕ್ಕೂ ಅದರದೇ ಆದ ತೂಕವಿದೆ. ಕಾಮಿಡಿ, ....