ಆಗಸ್ಟ್15 ಕ್ಕೆ ಬರಲಿದೆ ಡಿಯರ್ ಸತ್ಯ ಟೀಸರ್... ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ’ಡಿಯರ್ ಸತ್ಯ’. ಕನ್ನಡದ ಮೊಟ್ಟಮೊದಲ ಓಟಿಟಿ ಒರಿಜಿನಲ್ ಚಿತ್ರ ಭಿನ್ನ. ಈ ಸಿನಿಮಾದ ಅಭೂತಪೂರ್ವ ಗೆಲುವಿನ ನಂತರ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆಕ್ಷನ್ ರಿವೇಂಜ್, ಥ್ರಿಲ್ಲರ್ ಚಿತ್ರ ’ಡಿಯರ್ ಸತ್ಯ’. ಸದಾ ಗಿಜಿಗುಡುವ, ಗದ್ದಲದ ಊರು ಬೆಂಗಳೂರು. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ....
ರಮೇಶ್ ಅರವಿಂದ್ ರವರು ಅಭಿನಯಿಸಿರುವ ಶಿವಾಜಿ ಸುರತ್ಕಲ್ ಚಿತ್ರ ಇದೆ ವರ್ಷ ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅಧ್ಭುತವಾದ ಪ್ರತಿಕ್ರಿಯೆ ಬಂದಿತ್ತು . ರಾಜ್ಯವಿಡೀ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಷೋಸ್ ಕಂಡಿತ್ತು. ಬಿಡುಗಡೆಯಾಗಿ ಮೂರು ವಾರದ ವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು ಲಾಕ್ಡೌನ್ ಇಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು. ಈ ಚಿತ್ರಕ್ಕೆ ರಾಹುಲ್ ದ್ರಾವಿಡ್ ರವರು ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಮಾಧ್ಯಮಗದಿಂದ ಒಳ್ಳೆ ವಿಮರ್ಶೆ ಪಡೆದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಂದ ಕೂಡ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಗೂಗಲ್ ನಲ್ಲಿ 96% , ಐ.ಎಂ.ಡಿ.ಬಿ ಯಲ್ಲಿ 8.3 ರೇಟಿಂಗ್ಸ್ ಈ ....
ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ ’ತ್ರಿವಿಕ್ರಮ’ನಿಗೆ ಸಿಕ್ತು ಚಿನ್ನದಂತಾ ಬೆಲೆ..! ವಿಕ್ರಂ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಸರ.. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ.. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್.. ....
ಮಲಯಾಳಂನಲ್ಲಿ ಮಿನುಗುತ್ತಿರುವ ಬೆಂಗಳೂರಿನ ರಚೆಲ್! ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹಲವಾರು ಮಲಯಾಳಿ ಹೆಣ್ಣುಮಕ್ಕಳು ಕೇರಳಕ್ಕೆ ಹೋಗಿ, ಅಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ರಚೆಲ್ ಡೇವಿಡ್ ಕೂಡಾ ಬೆಂಗಳೂರಿನ ನಂಟು ಹೊಂದಿದ್ದಾರೆ. ತೀರಾ ಇತ್ತೀಚೆಗೆ ರಚೆಲ್ ಮಲಯಾಳಂನ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಎರಡು ಚಿತ್ರಗಳು ಅದಾಗಲೇ ತೆರೆಗೆ ಬಂದಿವೆ. ಈ ಸಿನಿಮಾಗಳನ್ನು ನೋಡಿದ ಜನ ಮತ್ತು ವಿಮರ್ಶಕರು ರಚೆಲ್ ಅಭಿನಯವನ್ನು ಅಪಾರವಾಗಿ ಮೆಚ್ಚಿದ್ದಾರೆ. ಈ ಕಾರಣದಿಂದ ಮಲಯಾಳಂ ಜೊತೆಗೆ ನೆರೆಯ ಭಾಷೆಗಳಿಂದಲೂ ಈಕೆಗೆ ಅವಕಾಶಗಳು ಅರಸಿ ಬರುತ್ತಿವೆ. ಮಲಯಾಳಂ ಸೂಪರ್ ಸ್ಟಾರ್ ....
ಚಿತ್ರೀಕರಣ ಪೂರ್ಣಗೊಳಿಸಿದ ನೈಟ್ಮೇರ್
ಸೌನವಿ ಕ್ರಿಯೇμನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನೈಟ್ಮೇರ್ ("ನೀನು ಮಾಯೆಯೊಳಗೊ ಮಾಯೆ ನಿನ್ನೊಳಗೋ ")ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರಕ್ಕೆ ನವೀನ್ ನಾಯಕ ಮತ್ತು ಕಿತ್ತಾನೆ ಗೋಪಿ ಜಂಟಿಯಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಜನವರಿಯಿಂದ ಬೆಂಗಳೂರು ಸುತ್ತಮುತ್ತಲೂ ನಡೆದಿದ್ದು ಇತ್ತೀಚೆಗೆ ಶೂಟಿಂಗ್ ಮುಗಿದಿದೆ. ಎಂ.ಟೆಕ್ ಪದವಿಧರ ಕೆ.ಆರ್.ಸೌಜನ್ಯ ಚಿತ್ರ ನಿರ್ಮಿಸಿದ್ದು ನವೀನ್ ನಾಯಕ ಚಿತ್ರಕ್ಕೆ ನಾಯಕ.
"ಮಿತ್ರರಕ್ಷಕ " ಒಟಿಟಿ ಬಿಡುಗಡೆ
ಮಾದೇಶ್ ಎಂಟರ್ ಪ್ರೆಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಮಿತ್ರರಕ್ಷಕ" ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೇ ೧೫ ರಂದು ಮೈ ಎಟಿಎಂ ಮೊಬೈಲ್ ಆಪ್ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ
ವರಮಹಾಲಕ್ಷ್ಮೀ ಹಬ್ಬದಂದು ’ಕಾಲಚಕ್ರ’ ದ ಅದ್ದೂರಿ ಹಾಡು ಬಿಡುಗಡೆ.
ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ ’ಕಾಲಚಕ್ರ’ ಚಿತ್ರದ ’ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ. ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಸಂಗೀತ ನೀಡಿದ್ದಾರೆ.
ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು
ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರರಂಗದ ಶ್ರಮಿಕ ವರ್ಗದವರಿಗೆ ಐಎಫ್ಎಂಎ ಚಂದನವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ, ನಿರ್ದೇಶಕ, ಕಲಾವಿದರು, ಕಾರ್ಮಿಕ ಒಕ್ಕೂಟ ಇವೆಲ್ಲವೂ ಚಲನಚಿತ್ರಕ್ಕೆ ಸಂಬಂದಿಸಿದಂತೆ ಹಲವು ವಿಭಾಗಗಳಲ್ಲಿ ಅದರದೇ ಆದ ಸಂಘಸಂಸ್ಥೆಗಳು ಸ್ಥಾಪಿತಗೊಂಡು, ತಮ್ಮ ಸದಸ್ಯರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿವೆ. ಪ್ರಸಕ್ತ ಚಲನಚಿತ್ರದ ಹಲವು ವಿಭಾಗಗಳಿಗೆ ಅನುಕೂಲ ಮಾಡಿಕೊಡುವಂತ ‘ಇಂಡಿಯನ್ ಫಿಲಿಂ ಮೇಕರ್ಸ್ ಅಸೋಸಿಯೇಶನ್’ (ಐಎಫ್ಎಂಎ) ಸಂಸ್ಥೆಯು ಹುಟ್ಟಿಕೊಂಡಿದೆ. ಇದು ಈಗಾಗಲೇ ಶ್ರೀನಗರ, ತೆಲಂಗಾಣ ಕಡೆಗಳಲ್ಲಿ ಶಾಖೆಯನ್ನು ತೆರೆದು, ಈಗ ಕರ್ನಾಟಕದಲ್ಲಿ ಕಛೇರಿಯು ....
ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ ಚಡ್ಡಿದೋಸ್ತ್’ಗಳು ಸೆವೆನ್ ರಾಜ್ ನಿರ್ಮಾಣದಲ್ಲಿ ಆಸ್ಕರ್ ಕೃμ ಮೊದಲ ಬಾರಿಗೆ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ "ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ ಬಿಟ್ಟ" ಚಿತ್ರವು ಸುಮಾರು ಮುಕ್ಕಾಲು ಭಾಗದμ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಲಾಕ್ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ ಈ ಚಿತ್ರವು ಈಗ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದು ನಿಂತಿದೆ. ಖ್ಯಾತ ಕಾದಂಬರಿಕಾರ ಕೌಂಡಿನ್ಯ ರವರ "ಮೈ ಡಿಯರ್ ಫ್ರೆಂಡ್" ಕಾದಂಬರಿಗೆ ಚಿತ್ರಕತೆ ಹಾಗೂ ಸಂಭಾμಣೆ ಬರೆದು ಚಿತ್ರದಲ್ಲಿ ಒಂದು ವಿಶೇμ ಪಾತ್ರವನ್ನು ನಿಭಾಯಿಸಿದ್ದಾರೆ ನಟ ಲೋಕೇಂದ್ರ ಸೂರ್ಯ. ಮಲಯಾಳಿ ನಟಿ ....
ಹಿನ್ನೆಲೆ ಸಂಗೀತದಲ್ಲಿ ನಡುಗಲ್ಲು
ಪೂರ್ವಿಕಾಮೃತ ಕ್ರಿಯೇμನ್ ಲಾಂಛನದಲ್ಲಿ ಹರಿಹರನ್ ಬಿ ಪಿ ನಿರ್ಮಾಣದ ಚಿತ್ರ ನಡುಗಲ್ಲು. ನಾಗರ ಹಾವು ಚಿತ್ರ ಎಂದರೆ ನೆನಪಾಗುವುದು, ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿ ಶಿμ , ಗುರು, ಶಿμರ ಹೆಜ್ಜೆ ಹೆಜ್ಜೆಗು ಸವಾಲುಗಳ ಪ್ರತೀಕಾರ ನೆನಪಾಗುತ್ತದೆ. ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದ, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಅವರ ಮತ್ತೊಂದು ಚಿತ್ರ "ನಡುಗಲ್ಲು".
ಕಿಚ್ಚ ಸುದೀಪ ಫ್ಯಾಂಟಂಗಾಗಿ ಸೃಷ್ಟಿಯಾಗಿದೆ ಬೃಹತ್ ಕಾಡು!
ಹೈದರಾಬಾದಿನಲ್ಲಿ ಶೂಟಿಂಗ್ ಶುರು...
ಖ್ಯಾತ ನಿರ್ಮಾಪಕ ಜಾಕ್ ಮಂಜು ನಿರ್ಮಾಣದಲ್ಲಿ, ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ, ಕಿಚ್ಚ ಸುದೀಪ ನಟನೆಯ ಚಿತ್ರ ಫ್ಯಾಂಟಂ. ಕೊರೋನಾ ಕಂಟಕದ ನಡುವೆಯೂ ಯಾವುದೇ ಅಡೆ ತಡೆ ಇಲ್ಲದೆ ಎರಡನೇ ಹಂತದ ಚಿತ್ರೀಕರಣಕ್ಕೆ ಫ್ಯಾಂಟಂ ಟೀಂ ಅಣಿಯಾಗುತ್ತಿದೆ. ಹಾಗೆ ನೋಡಿದರೆ, ಕೋವಿಡ್-೧೯ ನಿಂದ ಎದುರಾದ ಸಂಕμದ ನಡುವೆಯೂ, ಚಿತ್ರೀಕರಣಕ್ಕೆ ಅವಕಾಶ ದೊರೆತ ನಂತರ ಫಸ್ಟ್ ಶೂಟಿಂಗ್ ಆರಂಭಿಸಿದ ಭಾರತೀಯ ಸಿನಿಮಾ ಫ್ಯಾಂಟಂ.
ತ್ರಿಭಾμ ಚಿತ್ರಕ್ಕೆ ರಜನಿ ನಾಯಕಿ
ಎಚ್.ಕೆ.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಹೆಸರು ಪ್ರೊಡಕ್ಷನ್ ನಂಬರ್ ೧. ಮೂಲತಃ ಶಿವಮೊಗ್ಗದವರಾದ ಗಣೇಶ್ ಅವರು ಮೊದಲಿಂದಲೂ ಚಿತ್ರನಿರ್ಮಾಣದ ಬಗ್ಗೆ ತುಂಬಾ ಆಸಕ್ತಿ ಇಟ್ಟುಕೊಂಡಿದ್ದರು.
ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ತಮ್ಮ ಮಗಳಾದ ರಜನಿ ಅವರನ್ನು ಚಿತ್ರದಲ್ಲಿ ನಾಯಕಿಯನ್ನಾಗಿ ಪರಿಚಯಿಸುತ್ತಿದ್ದಾರೆ.
ಹೃದಯವಂತ ನಿರ್ಮಾಪಕ ಅಮಿತ್ ಪೂಜಾರಿ .
ಕೊರೋನ ಹಾವಾಳಿಯಿಂದ ಕನ್ನಡ ಚಿತ್ರರಂಗಕ್ಕೆ ಆಗಿರುವ ನಷ್ಟ ಹಾಗೂ ಚಿತ್ರರಂಗವನ್ನೆ ನಂಬಿಕೊಂಡಿರುವ ಸಾಕಷ್ಟು ಜನರ ಕಷ್ಟ ಹೇಳತೀರಲಾಗದು.
ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ನೋವಿಗೆ ಸ್ಪಂದಿಸುವ ಮನೋಭಾವವುಳ್ಳ ಕೆಲವೆ ವ್ಯಕ್ತಿಗಳಲ್ಲಿ ನಿರ್ಮಾಪಕ ಅಮಿತ್ ಪೂಜಾರಿ ಕೂಡ ಒಬ್ಬರು.
ಕಳೆದವರ್ಷ ರವಿತೇಜ ನಿರ್ದೇಶನದಲ್ಲಿ ಮೂಡಿಬಂದಿದ್ದ ಸಾಗುತಾದೂರದೂರ ಎಂಬ ಯಶಸ್ವ ಚಿತ್ರವನ್ನು ಖುಷಿ ಕನಸು ಕ್ರಿಯೇಷನ್ಸ್ ಲಾಂಛನದಲ್ಲಿ ಅಮಿತ್ ಪೂಜಾರಿ ನಿರ್ಮಿಸಿದ್ದರು.
ಮಯೂರ ರಾಘವೇಂದ್ರ ನಿರ್ದೇಶನದ ಚಿತ್ರ, ಕನ್ನಡ್ ಗೊತ್ತಿಲ್ಲ ಇತ್ತೀಚೆಗಷ್ಟೇ Amazon Prime Video ನಲ್ಲಿ ಬಿಡುಗಡೆ ಆಗಿದ್ದು 20 ಮಿಲಿಯನ್ ಗು ಹೆಚ್ಚು ನಿಮಿಷಗಳು ವೀಕ್ಷಣೆಯಾಗಿದೆ.
ಇದರ ಯಶಸ್ಸಿನ ನಂತರ, ಸಂಜಯ್ ಲಲ್ವಾನಿ ಪ್ರೊಡ್ಯೂಕ್ಷನ್ಸ್ ರವರು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಹಕ್ಕನ್ನು ಖರೀದಿಸಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹುಟ್ಟುಹಬ್ಬದಂದು ನೂತನ ಚಿತ್ರದ ಪೋಸ್ಟರ್ ಬಿಡುಗಡೆ. ಜುಲೈ 12 ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರು ನಟಿಸಲಿರುವ ನೂತನ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಶಿವರಾಜಕುಮಾರ್ ಅವರೆ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ನೂತನ ಚಿತ್ರವನ್ನು (ಪ್ರೊಡಕ್ಷನ್ ನಂ ೧) ತೆಲುಗಿನ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನರಳ ಶ್ರೀನಿವಾಸ ರೆಡ್ಡಿ ಬಾಲಶ್ರೀರಾಮ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಕುಡಿಪುಡಿ ವಿಜಯಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಎಮೋಷನಲ್ ಹಾಗೂ ಮಿಲಟರಿ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಮ್ ದುಲಿಪುಡಿ ....
ಕೊರೋನ ಚ್ಯಾರಿಟಿಗೆ 400km ಓಡುತ್ತಿರುವ ಸುಮನ್ ನಗರ್ ಕರ್ ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ....
ಇದು ಆಕಾಶವಾಣಿ ಬೆಂಗಳೂರು ನಿಲಯ ಚಿತ್ರದ ಹಾಡುಗಳ ಧ್ವನಿಮುದ್ರಣ
ಕಮಲಾನಂದ ಚಿತ್ರಾಲಯ ಸಂಸ್ಥೆಯಲ್ಲಿ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸುತ್ತಿರುವ ಇದು ಆಕಾಶವಾಣಿ ಬೆಂಗಳೂರು ನಿಲಯ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಚಿತ್ರೀಕರಣಕ್ಕೆ ಅನುಮತಿ ದೊರೆತ ನಂತರ ಚಿತ್ರೀಕರಣ ನಡೆಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ವಿಷಯ: ಹಿರಿಯ ಚಲನಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಅವರ ಪ್ರಸಿದ್ಧ ಚಲನಚಿತ್ರ ಕೃತಿ “ಶುಭಂ” ಧ್ವನಿರೂಪದ ಅಳವಡಿಕೆಯನ್ನು ‘ಚಿತ್ತಾರ’ ಯೂಟ್ಯೂಬ ನಿರ್ಮಿಸಿ ಪ್ರಸಾರ ಮಾಡುವ ಕುರಿತಂತೆ. ಕನ್ನಡ ಚಲನಚಿತ್ರ ರಸಿಕರ ಮನಗೆದ್ದ ಪತ್ರಿಕೆ ‘ಚಿತ್ತಾರ’ಕ್ಕೆ ಈಗ ಹನ್ನೊಂದು ವರ್ಷದ ಪ್ರಾಯ. ಈ ಅವಧಿಯಲ್ಲಿ ಹಲವಾರು ಏಳುಬೀಳುಗಳ ಮಧ್ಯೆ ‘ಚಿತ್ತಾರ’ ಪತ್ರಿಕೆಯು ಕನ್ನಡ ಚಿತ್ರರಂಗದ ಇತಿಹಾಸ. ಪ್ರಸ್ತುತ ವಿದ್ಯಾಮಾಗಳು ಸೇರಿದಂತೆ ವರದಿ, ವಿವರಣೆಗಳೊಂದಿಗೆ ಚಿತ್ರಾಕರ್ಷಕ ಛಾಯಾಚಿತ್ರಗಳ ಸಮೇತ ತಿಂಗಳಿಗೊಮ್ಮೆ ಪ್ರಕಟಿಸಿ ‘ಚಿತ್ತಾರ’ ಪತ್ರಿಕೆಯನ್ನು ಓದುಗರಿಗೆ ಸಮರ್ಪಿಸಿಕೊಂಡು ಬರುತ್ತಿದೆ. ಪತ್ರಿಕೆಯ ಅಭಿರುಚಿಯನ್ನು ....
'ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರೀಕರಣ ಪೂರ್ಣ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ’ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಲಾಕ್ ಡೌನ್ ತೆರವಿನ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳ ಚಿತ್ರೀಕರಣ ಪೂರ್ಣ ಮಾಡಲು ಅನುಮತಿ ನೀಡಿತು. ನಂತರ ಸರ್ಕಾರದ ಆದೇಶ ಪಾಲಿಸಿ ಬೆಂಗಳೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಪೂರ್ಣ ಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ವರ್ಧನ್, ಅನುಷ, ಬಲ ರಾಜವಾಡಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರ ಚಟುವಟಿಕೆ ....
ಪ್ರಚಂಡ ಪುಟಾಣಿಗಳಿಗೆ
ಕಾಳಿ ಮಠದ ಶ್ರೀ ಗಾನ ಬಜಾನ
ಇತ್ತೀಚೆಗಷ್ಟೇ ಮುಹೂರ್ತ ಕಂಡಿದ್ದ ರಾಜೀವ್ ಕೃಷ್ಣ ನಿರ್ದೇಶನದ "ಪ್ರಚಂಡ ಪುಟಾಣಿಗಳು" ಚಿತ್ರದ
ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
ನಿರ್ದೇಶಕರೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ "ಪ್ರಚಂಡ ಪುಟಾಣಿಗಳು"
ಚಿತ್ರವನ್ನು ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ವಿ ಸುನಿತ ಹಾಗು ಎನ್ ರಘ ರವರ ಸಹಕಾರದಲ್ಲಿ ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ ರಾಜಾಜಿನಗರದ ವಿನುಮನಸು ಸ್ಟುಡಿಯೋದಲ್ಲಿ ಹಾಡುಗಳ ಧ್ವನಿ ಮುದ್ರಣ ಕಾರ್ಯ
ನೆರವೇರಿತು.