ನನ್ನ ನೆಚ್ಚಿನ ಮಾಧ್ಯಮ ಮಿತ್ರರಿಗೆ ವೆಂಕಟ್ ಭರದ್ವಾಜ್ ಮಾಡುವ ನಮಸ್ಕಾರಗಳು ನನ್ನ ಚಿತ್ರ ದ ಪೇಂಟರ್ ಹೋದ ವಾರ ಶ್ರೇಯಸ್ ಎಂಟರ್ಟೈನ್ಮೆಂಟ್ ಎಂಬ ATT ಪ್ಲಾಟ್ ಫಾರ್ಮಿನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಬರೀ ಭಾರತ ದೇಶ ಅಲ್ಲದೆ ಅಮೆರಿಕಾ, ಆಫ್ರಿಕಾ ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಹಳ ಹೆಸರು ಮತ್ತು ಸದ್ದು ಮಾಡಿದೆ. ಪಂಜಾಬಿ, ಮರಾಠಿ, ತಮಿಳು ಮತ್ತು ಹಿಂದಿ ಮಾತಾಡುವವರು ಕೂಡ ಈ ಚಿತ್ರವನ್ನು ನೋಡಿ ಸವಿದಿದ್ದಾರೆ. ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ನಾನು ನಿಮಗೆ ಒಂದು ಸಿಹಿಸುದ್ದಿಯನ್ನು ಹೇಳಲು ಖುಷಿಪಡುತ್ತೇನೆ, ಶ್ರೇಯಸ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ನನಗೆ ಎರಡು ಚಿತ್ರಗಳನ್ನು ನಿರ್ದೇಶನ ಮಾಡಲು ....
ಫ್ಯಾಂಟಮ್ ಚಿತ್ರದಲ್ಲಿ ಕಿರುತೆರೆ ನೀರೆ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದಲ್ಲಿ ಹೊಸ ಹೊಸ ಸುದ್ದಿಗಳು ಬರುತ್ತಲೆ ಇದೆ. ಈಗ ಬಂದ ಮಾಹಿತಿಯಂತೆ ಕಿರುತೆರೆಯ ಪ್ರತಿಭಾವಂತ ನಟಿ ನೀತಾಅಶೋಕ್ ಸೇರ್ಪಡೆಯಾಗಿದ್ದಾರೆ. ‘ಯಶೋಧೆ’ ‘ನಾ ನಿನ್ನ ಬಿಡಲಾರೆ’ ಮತ್ತು ‘ನೀಲಾಂಬರಿ’ ಧಾರವಾಹಿಗಳನ್ನು ವೀಕ್ಷಿಸಿದವರಿಗೆ ಇವರ ಪರಿಚಯವಾಗಿರುತ್ತದೆ. ಅಪರ್ಣಾಬಲ್ಲಾಳ್ ಆಲಿಯಾಸ್ ಪನ್ನಾ ಹೆಸರಿನ ಪಾತ್ರ. ಬಾಂಬೆಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಹಿಂದಿ ಮಿಶ್ರಿತ ಕನ್ನಡ ಮಾತನಾಡುವುದು ಅಭ್ಯಾಸ. ಅಡ್ವೆಂಚರ್ ನೇಚರ್ ಇರುವ ಹುಡುಗಿಯಾಗಿ ಎಲ್ಲಾ ತಿಳಿದುಕೊಳ್ಳಬೆಕು ಎನ್ನುವ ಕುತೂಹಲ ತೋರಿಸುವ ಗುಣವುಳ್ಳವಳು. ....
ಲೈಫ್ ಈಸ್ ಬ್ಯೂಟಿಫುಲ್ ಅಂತಾರೆ ಪೃಥ್ವಿಅಂಬರ್ ದಿಯಾ ಚಿತ್ರದ ಮೂಲಕ ನಾಯಕನಟನಾಗಿ ಗುರುತಿಸಿಕೊಂಡಿರುವ ಪೃಥ್ವಿಅಂಬರ್ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸೋಮವಾರದಂದು ಡಾಲಿಧನಂಜಯ್ ಶೀರ್ಷಿಕೆಯನ್ನು ಅನಾವರಣ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಹೆಸರಿಗೆ ತಕ್ಕಂತೆ ಚಿತ್ರವು ಚೆನ್ನಾಗಿ ಮೂಡಿಬರಲೆಂದು ಶುಭಹಾರೈಸಿದ್ದಾರೆ. ಅರುಣ್‌ಕುಮಾರ್.ಎಂ ಮತ್ತು ಸಬುಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಲಿದ್ದಾರೆ. ಇವರಿಬ್ಬರಿಗೂ ಎರಡು ದಶಕಗಳ ಕಾಲ ಜಾಹಿರಾತು ಕ್ಷೇತ್ರದಲ್ಲಿ ಮುದ್ರಾ ಕಮ್ಮುನಿಕೇಶನ್ಸ್, ಪಬ್ಲಿಸಿಸ್, ಹೆಡ್ಜ್ ಇಕ್ವಿಟೀಸ್, ವಿರ್ಲ್ಪೂಲ್, ಪಂಕಜಕಸ್ತೂರಿ, ....
ಮಾರ್ಗ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್ ಕ್ಲಾಪ್ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ‘ಮಾರ್ಗ’ ಚಿತ್ರದ ಮಹೂರ್ತ ಸಮಾರಂಭವು ಬನಶಂಕರಿಯ ಬನಗಿರಿ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಪುನೀತ್‌ರಾಜ್‌ಕುಮರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಮೋಹನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಮಾರ್ಗ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಹಲವಾರು ತೊಂದರೆ, ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯ ....
ನಿರಂಜನ್ ಈಗ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಈಗ ಅವರ ಕುಟುಂಬದಿಂದ ಚಂದನವನಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ ’ಸೂಪರ್ ಸ್ಟಾರ್’ ಚಿತ್ರದ ಮೂಲಕ. ಇತ್ತೀಚಿಗೆ ಚಿತ್ರದ ಕ್ಯಾರೆಕ್ಟರ್ ಟೀಸರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ನಂತರ ಮಾತನಾಡಿದ ಶ್ರೀಮುರಳಿ ಎಲ್ಲಾ ನಟರಿಗೂ ಈ ಅವಕಾಶ ಸಿಗುವುದಿಲ್ಲ. ಸ್ಟಾರ್ ಆದ ನಂತರ ....
ಗಜಾನನ ಗ್ಯಾಂಗ್‌ದಲ್ಲಿ ಅದಿತಿಪ್ರಭುದೇವ ಇಲ್ಲಿಯವರೆಗೂ ಎಲ್ಲಾ ಸಿನಿಮಾಗಳಲ್ಲಿ ಕಲರ್‌ಫುಲ್ ಕಾಲೇಜ್ ಸ್ಟೋರಿಯನ್ನು ತೋರಿಸಲಾಗಿತ್ತು. ಮೊಟ್ಟ ಮೊದಲು ಎನ್ನುವಂತೆ ಮಧ್ಯಮ ವರ್ಗದ ಕಾಲೇಜು ಪ್ರೀತಿ ಕಥನವನ್ನು ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ೨೦೧೪ ರಿಂದ ೨೧ರ ವರೆಗೆ ನಡೆಯುವ ಗಾಥೆ ಇರುವುದು ವಿಶೇಷ. ಚಿತ್ರವು ೨೦೨೧ರಿಂದ ಶುರುವಾಗಿ ಫ್ಲ್ಯಾಶ್‌ಬ್ಯಾಕ್‌ದಲ್ಲಿ ೨೦೧೪ರ ವರೆವಿಗೂ ಸಾಗುತ್ತದೆ. ಜೊತೆಗೆ ಗೆಳೆತನ ಹಾಗೂ ಇತರೆ ಅರ್ಥಪೂರ್ಣ ಅಂಶಗಳು ಸನ್ನಿವೇಶಗಳಲ್ಲಿ ಬರುತ್ತವೆ. ‘ಇರುವುದೆಲ್ಲವ ಬಿಟ್ಟು’ ದಲ್ಲಿ ನಟಿಸಿದ್ದ ಶ್ರೀಮಹದೇವ ನಾಯಕ. ಇವರಿಗೆ ....
ಪ್ರಚಂಡ ಪುಟಾಣಿಗಳ ಜೊತೆಯಾದರು ನಟ ಶಶಿಕುಮಾರ್! ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ಶ್ರೀಮತಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಚಿತ್ರದ ಚಿತ್ರೀಕರಣ ಮುಕ್ತಾಯಗೊ೦ಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ. ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ್ ಅವರು ʻʻಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ... ಸಂಹಾರವೇ ಎನ್ನುತ್ತಾ ಖಳನಟರಾದ ಬಲರಾಮ್ ಪಂಚಾಲ್.. ಕೋಲಾರ್ ಬಾಲು ,ನಿಡುವಳ್ಳಿ ರೇವಣ್ಣ,ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡಿಯುವ ಸಾಹಸ ದೃಷ್ಯಗಳ ಮುಕ್ತಾಯದೊಂದಿಗೆ ..ಚಿತ್ರಕ್ಕೆ ಕುಂಬಳ ಕಾಯಿ ....
ಮೆಡಿಸನ್ ರಿಸರರ್ಚ್ ಸುತ್ತಲಿನ ಡಿಸೆಂಬರ್ 24 ಮೊದಲ ಹಂತದ ಚಿತ್ರೀಕರಣ ಮುಕ್ತಾಯ ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ಡಿಸೆಂಬರ್ 24. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಎರಡನೇ ಹಂತದ ಶೂಟಿಂಗ್ನ್ನು ಯಲ್ಲಾಪುರ ಹಾಗೂ ದಾಂಡೇಲಿಯಲ್ಲಿ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಸಂಗೀತ ನೀಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್ ಹಾಗೂ ಗೀತಾ ಆನಂದ್ ಪಾಟೀಲï ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟರಾಗಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ ಕಾಡುಮೆಣಸ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ ಅಭಿನಯಿಸುತ್ತಿದ್ದಾರೆ ....
ಉದಯ್ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರವನ್ನು ವಿಕ್ಷೀಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿ, ಚಿತ್ರವನ್ನು ತಮಿಳಿನ "ಅಸುರನ್" ಚಿತ್ರಕ್ಕೆ ಹೋಲಿಸಿರುವುದು ಚಿತ್ರತಂಡ ಮತ್ತು ನಿರ್ದೇಶಕರ ಶ್ರಮಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಾಗಿದೆ. ಕೊರೊನದಿಂದಾಗಿ ಸಾರ್ವಜನಿಕ ಪ್ರದರ್ಶನಕ್ಕೆ ವಿಳಂಬವಾಗಿದ್ದು ಇದೇ ತಿಂಗಳು "ಮೆಳೇಕೋಟೆ ಟೂರಿಂಗ್ ಟಾಕೀಸ್" ಹಾಗು "ಮೈತ್ರಿ ಪ್ರೊಡಕ್ಷನ್" ಸಹಯೋಗದಿಂದ ಇದೆ ತಿಂಗಳು ಆಗಸ್ಟ್ 15 ತಾರೀಖು ಡಿ ಬೀಟ್ಸ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿ,ಹಾಗೂ ಚಿತ್ರಮಂದಿರಗಳು ಚಿತ್ರಪ್ರದರ್ಶನ ಪ್ರಾರಂಭಿಸಿದ ನಂತರ ರಾಜ್ಯದ ಎಲ್ಲಾ ಚಿತ್ರಮಂದಿರದಲ್ಲಿ ಮಹಿಷಾಸುರ ಬಿಡುಗೊಂಡು ಬೆಳ್ಳಿ ಪರದೆ ಮೇಲೆ ....
ದ್ವಿಭಾಷೆಯಲ್ಲಿ `ಕಾರ್ಗಲ್ ನೈಟ್ಸ್’ ಕನ್ನಡದ ಮೊಟ್ಟ ಮೊದಲ ಒಟಿಟಿ ವೆಬ್ ಸೀರಿಸ್ ಎಲ್ಲಾ ಚಿತ್ರರಂಗದಲ್ಲೂ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋದು ಒಟಿಟಿ ರಿಲೀಸ್. ಚಿತ್ರಮಂದಿರಗಳು ಲಾಕ್‌ಡೌನ್‌ನಿಂದಾಗಿ ಬಾಗಿಲು ಹಾಕಿರುವುದರಿಂದ ಸಿನಿಮಾಸಕ್ತರಿಗೆ ಹಾಗೂ ಚಿತ್ರರಂಗಕ್ಕೆ ಒಟಿಟಿ ಪ್ಲಾಟ್‌ಫಾರ್ಮ್‌ವೊಂದೇ ಈಗ ದ್ವಾರ ಬಾಗಿಲು. ಇನ್ನು ಈ ವೇದಿಕೆಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಥಿಯೇಟರ್‌ನತ್ತ ಮುಖ ಮಾಡದೇ ನೇರವಾಗಿ ಬಿಡುಗಡೆಯಾಗಿವೆ. ಆದರೆ, ವೆಬ್ ಸೀರಿಸ್ ವಿಷಯದಲ್ಲಿ ಈ ಮಾತು ಕನ್ನಡ ಭಾಷೆಯ ಮಟ್ಟಿಗೆ ಕೊಂಚ ದೂರವಿತ್ತು. ಅದೂ ಈಗ ತಣ್ಣಗೆ ಬೇರೂರಲು ಶುರು ಮಾಡುತ್ತಿದೆ. ಹೌದು. ನಿರ್ದೇಶಕ ದೇವರಾಜ್ ಪೂಜಾರಿ ....
ಹಿನ್ನಲೆ ಕೆಲಸ ಮುಗಿಸಿದ ಟೆಡಿಬೇರ್ ಮತ್ತು ಅದೊಂದೂರಲಿ ಚಿತ್ರಗಳು ಕೊರೊನಾ ಸಂಕಷ್ಟದಲ್ಲಿ ಸಮಯ ವ್ಯರ್ಥ ಮಾಡದೆ ಎರಡು ಚಿತ್ರಗಳ ಹಿನ್ನಲೆ ಕೆಲಸ ಮುಗಿದಿದೆ. ಇವರೆಡೂ ಸಿನಿಮಾಗಳಿಗೆ ಭಾರ್ಗವ ನಾಯಕನಾಗಿ ಮೂರು ಮತ್ತು ನಾಲ್ಕನೇ ಅವಕಾಶ. ಲೋಕೇಶ್ವರರಾವ್ ನಿರ್ದೇಶನ, ಶ್ರೀಹರಿ-ಸತೀಶ್‌ರಾಜೇಂದ್ರನ್ ಛಾಯಾಗ್ರಹಣ, ಭಾರ್ಗವ ಸಂಕಲನ, ಸುವರ್ಣ ನಿರ್ಮಾಪಕಿ, ಕಾರ್ತಿಕ್‌ವೆಂಕಟೇಶ್ ಸಂಗೀತ ಮತ್ತು ಸಹ ನಿರ್ಮಾಪಕರಾಗಿದ್ದಾರೆ. ಒಳಾಂಗಣ ಚಿತ್ರೀಕರಣ ಘಟಕ, ಕ್ಯಾಮಾರ ಸಿಬ್ಬಂದಿ ಎಲ್ಲವು ಇರ ಸ್ಟುಡಿಯೋದೆ ಆಗಿರುತ್ತದೆ. ನಾಯಕಿ, ಸಹ ಕಲಾವಿದರ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಥ್ರಿಲ್ಲರ್ ಕತೆ ....
ಡಿಯರ್ ಸತ್ಯ ಟೀಸರ್ ಬಿಡುಗಡೆ ಮಾಡಿದರು ಶಿವರಾಜ್ ಕುಮಾರ್ * * * ಭಿನ್ನ ಸಿನಿಮಾ ತಂಡದ ಮತ್ತೊಂದು ಪ್ರಯತ್ನ * * * ರಗಡ್ ಲುಕ್ ನಲ್ಲಿ ಆರ್ಯನ್ ಸಂತೋಷ್ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ’ಡಿಯರ್ ಸತ್ಯ’. ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿರುವ ಈ ಚಿತ್ರದ ಟೀಸರ್ ಆಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಯಾಗಿದೆ. ಡಿಯರ್ ಸತ್ಯ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ಡಾ. ಶಿವರಾಜ್ ಕುಮಾರ್ ʻಟೀಸರ್ ಅದ್ಭುತವಾಗಿ ಬಂದಿದೆ. ಸಂತೋಷ್ ಈ ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣುತ್ತಿದ್ದಾರೆ. ಹೊಸಬರು ಚಿತ್ರರಂಗದಲ್ಲಿ ಗೆಲ್ಲಬೇಕು. ಈಡೀ ಚಿತ್ರತಂಡಕ್ಕೆ ....
ಮಂಜನಿಗೆ ಕಮಲಿ ಅಂದರೆ ಪ್ರಾಣ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಬವ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ‘ಇಂಗ್ಲೀಷ್ ಮಂಜ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದಾರೆ. ‘ಕೋಲಾರ’ ಚಿತ್ರ ನಿರ್ದೇಶನ ಮಾಡಿದ್ದ ಆರ್ಯ.ಎಂ.ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೌಡಿಸಂ ಹಿನ್ನಲೆ ಇರುವ ಕತೆಯಲ್ಲಿ ನವಿರಾದ ಪ್ರೀತಿ ಇರಲಿದೆ. ಆತ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣ ನಾಗುತ್ತಿರುವುದರಿಂದ ಶೀರ್ಷಿಕೆಯಲ್ಲಿ ಕರೆಯುತ್ತಿರುತ್ತಾರೆ. ಮಚ್ಚು, ಲಾಂಗ್ ಇದ್ದರೂ ಅದನ್ನು ವಿಭಿನ್ನವಾಗಿ ತೋರಿಸುವುದು ವಿಶೇಷ. ಕೋಲಾರದ ಕಠಾರಿಪಾಳ್ಯದಲ್ಲಿ ನಡೆಯುವ ಸನ್ನಿವೇಶಗಳು ಬೆಂಗಳೂರಿಗೂ ವಿಸ್ತಾರಗೊಳ್ಳಲಿದೆ. ....
ತ್ರಯಂಬಕೇಶ್ವರ ಸನ್ನಿಧಿಯಲ್ಲಿ ’ಮೃಗ’ ಚಿತ್ರ ಆರಂಭ.
ಶ್ರಾವಣ ಮಾಸದ ಕೊನೆಯ ಶುಕ್ರವಾರದ ಶುಭದಿನದಂದು ’ಮೃಗ’ ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ದೊರೆ ಭಗವಾನ್ ಆರಂಭ ಫಲಕ ತೋರಿದರು. ನಟ ಧರ್ಮ ಕ್ಯಾಮೆರಾ ಚಾಲನೆ ಮಾಡಿದರು.
ನಾನೊಬ್ನೆ ಒಳ್ಳೆವ್ನು ಖ್ಯಾತಿಯ ವಿಜಯ್ ಮಹೇಶ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಿಖಿತಸ್ವಾಮಿ ಈ ಚಿತ್ರದ ನಾಯಕಿ .
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಬೆಂಗಳೂರು ಹಾಗು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಮಹೇಂದ್ರ ಮನೂತ್ ನಿರ್ಮಾಣದಲ್ಲಿ ’ನಮಗಾಗಿ ಜೀವ ಕೊಟ್ಟವರು’ ಕೊರೋನ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಬಿಡುಗಡೆ. .... ಬೆಂಗಳೂರು ನಗರದ ಮಟ್ಟಿಗೆ ಸಾಮಾಜಿಕ ಮತ್ತುಸಿನಿಮಾ ರಂಗ ಎರಡರಲ್ಲೂ ಜನಪ್ರಿಯವಾದ ಹಸರು ಮಹೇಂದ್ರ ಮನೂತ್. ಹಾಗೆ ನೋಡಿದರೆ ಅವರು ಮಾರುತಿ ಮೆಡಿಕಲ್ಸ್ ಮನೂತ್ ಅಂತಲೇ ಹೆಚ್ಚು ಚಿರಪರಿಚಿತ. ಅವರೀಗ ಕೊರೋನಾ ಕುರಿತ ವಿಡಿಯೋ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಕೊರೋನಾ ಎಲ್ಲರೂ ಜೀವ ಭಯದಲ್ಲಿ ಶೂಟಿಂಗ್- ಗಿಟಿಂಗ್ ಅಂತ ಸಿನಿಮಾ ಸಂಬಂಧಿತ ಚಟುವಟಿಕೆಗಳಿಂದಲೇ ದೂರವಾಗಿರುವ ಸಂದರ್ಭದಲ್ಲಿ ಜನರಲ್ಲಿ ಕೊರೋನಾ ಭಯ ದೂರ ಮಾಡಲು ನಮಗಾಗಿ ಜೀವ ಕೊಟ್ಟವರು ಹೆಸರಲ್ಲೊಂದು ವಿಡಿಯೋ ಸಾಂಗ್ ನಿರ್ಮಿಸಿ, ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದ್ದಾರೆ. ....
ಪವನ್‌ವೆಂಕಟೇಶ್ ನಿರ್ದೇಶನದ ರಾಮ ಜನ್ಮಭೂಮಿ ಚಂದನವನದ ಹೆಸರಾಂತ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಯನ್ನು ಸ್ಥಾಪಿಸಿ ಬೆಳೆಸಿದ ಡಿ.ವಿ.ಸುಧೀಂದ್ರ ನಂತರ ಸುಧೀಂದ್ರವೆಂಕಟೇಶ್ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಪುತ್ರ ಪವನ್‌ವೆಂಕಟೇಶ್ ಈ ಹಿಂದೆ ‘ಸುಧೀಂದ್ರ ಸಿನಿಪಯಣ’, ‘ಕರೋನ-ಕರಾಳ ರೋಗನಾಶ’ ಕಿರುಚಿತ್ರಗಳನ್ನು ನಿರ್ದೇಶಿಸಿ ತಾನೊಬ್ಬ ಉತ್ತಮ ತಂತ್ರಜ್ಘನೆಂದು ನಿರೂಪಿಸಿಕೊಂಡಿದ್ದರು. ಇದೆಲ್ಲಾದರಿಂದ ಪ್ರೇರಿತರಾಗಿ ಈಗ ಅಯೋಧ್ಯೆ ಕುರಿತಾದ ‘ಶ್ರೀ ರಾಮಜನ್ಮ ಭೂಮಿ’ ಸಾಕ್ಷ್ಯ ಚಿತ್ರವನ್ನು ಸಿದ್ದಪಡಿಸಿದ್ದಾರೆ. ವಿಡಿಯೋದಲ್ಲಿ ....
ಸತ್ಯ ಘಟನೆಗಳ ಆಧಾರಿತ ಹೇ ರಾಮ್ ಚಿತ್ರಕ್ಕೆ ಚಾಲನೆ ಪೋಲೀಸ್ ಇಲಾಖೆಯಲ್ಲಿ ಅಪರಾಧಗಳನ್ನು ತನಿಖೆ ಮಾಡಿರುವ ಸಾಕಷ್ಟು ಘಟನೆಗಳು ಸಿನಿಮಾದಲ್ಲಿ ಮೂಡಿಬಂದಿದೆ. ಆ ಸಾಲಿಗೆ ‘ಹೇ ರಾಮ್’ ಚಿತ್ರವು ಸೇರ್ಪಡೆಯಾಗುತ್ತದೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಡಾಲಿ ಧನಂಜಯ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಆರಂಭಫಲಕ ತೋರಿ ಶುಭ ಕೋರಿದರು. ಡಯಲ್ ೧ ಕ್ರಿಯೇಟಿವ್ ಸ್ಟುಡಿಯೋ ಮಾಲೀಕರಾದ ಪ್ರವೀಣ್ ಬೇಲೂರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಕಾವೇರಿ ತೀರದ ಚರಿತ್ರೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಇವರಿಗೆ ....
ಸಾಂಸ್ಕ್ರತಿಕಕಾರ್ಯಕ್ರಮ ನಡೆಸಲುಅನುಮತಿಗಾಗಿ ಸರ್ಕಾರಕ್ಕೆ ಮನವಿ ಕೊರೊನಾ ಮಹಾಮಾರಿಯಿಂದ ವಿಶ್ವಕ್ಕೆತೊಂದರೆಯಾದಂತೆ, ಲಘು ಸಂಗೀತ ಮತ್ತು ಸಾಂಸ್ಕ್ರತಿಕ ಕಲಾವಿದರುಗಳು ಕಷ್ಟ ಅನುಭವಿಸುತ್ತಿದ್ದಾರೆಂದು ಸಂಘದ ಪದಾಧಿಕಾರಿಗುರುರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಅವರು ಮಾತನಾಡುತ್ತಾ ನಮ್ಮಂಥ ಲಘು ಸಂಗೀತ ಕಲಾವಿದರುಗಳಿಗೆ ಸಾಂಸ್ಕ್ರತಿಕಕಾರ್ಯಕ್ರಮ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹಬ್ಬ, ಮದುವೆ, ಕನ್ನಡರಾಜ್ಯೋತ್ಸವ ಮುಂತಾದ ಕಡೆಗಳಲ್ಲಿ ಕೆಲಸ ಸಿಗುತ್ತದೆ.ಆದರೆ ಈ ಬಾರಿಯಾವುದೇಚೌತಿ, ಸಮಾರಂಭಗಳನ್ನು ಮಾಡಬಾರದಾಗಿ ಸರ್ಕಾರವುಆದೇಶ ಹೊರಡಿಸಿರುವುದರಿಂದ ಇದನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿರುವ ....
ದಿ ಪೈಂಟರ್ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ
ಉಗ್ರಂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್
ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿ ತಯಾರಾದ ಥ್ರಿಲ್ಲರ್ ಚಿತ್ರ ದಿ ಪೈಂಟರ್ ಗೆ ರೋರಿಂಗ್ ಸ್ಟಾರ್
ಶ್ರೀ ಮುರಳಿ ಸಾತ್ ನೀಡುತ್ತಿದ್ದಾರೆ . ಇದೆ ತಿಂಗಳು ೧೪ ಆಗಸ್ಟ್ ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ALL ಟೈಮ್ ಥಿಯೇಟರ್) ಮೂಲಕ ದಿ ಪೈಂಟರ್ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಅದರ ಟ್ರೈಲರ್ ಅನ್ನು ಶ್ರೀಮುರಳಿ ಅವರು ಅವರ ಸೋಶಿಯಲ್ ಮೀಡಿಯಾ ಚಾನೆಲ್ ಮೂಲಕ ದಿ ಪೈಂಟರ್ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ .
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ’ತ್ರಿಕೋನ’ ಚಿತ್ರದ ಮೋಷನ್ ಪೋಸ್ಟರ್
ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ ’ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.
ವರಮಹಾಲಕ್ಷ್ಮೀ ಹಬ್ಬದಂದು ಈ ಚಿತ್ರದ ಮೋಷನ್ ಪೋಸ್ಟರ್ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು.
ಚಲ್ ಚಲ್ ಚುಲಾ.. ಮೊದಲ ಬಾರಿಗೆ ಈ ವಿಚಿತ್ರವಾದ ಒಂದು ಪದವನ್ನು ಕೇಳಲಾಯಿತು. ಅದು ಬೇರೆಲ್ಲೂ ಅಲ್ಲ, ತ್ರಿಕೋನ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ.