ಚಿತ್ರದುರ್ಗದ ಒನಕೆ ಓಬವ್ವ ಗಾನಲಹರಿ ಕಲ್ಲಿನ ಕೋಟೆ ಅಂದರೆ ಚಿತ್ರದುರ್ಗ, ಒನಕೆ ಓಬವ್ವ ಕಣ್ಣ ಮುಂದೆ ಬರುತ್ತದೆ. ಭಕ್ತಿ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿರುವ ಬಿ.ಎ.ಪುರುಷೋತ್ತಮ್ ಈ ಬಾರಿ ಐತಿಹಾಸಿಕ ಕಥನ ಹೊಂದಿರುವ ‘ಚಿತ್ರದುರ್ಗದ ಒನಕೆ ಓಬವ್ವ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಒಂದು ಗೀತೆಗೆ ಸಾಹಿತ್ಯ ರಚಿಸಿದಾರೆ. ಓಬವ್ವನ ಬಾಲ್ಯ, ಯೌವ್ವನ, ಗಂಡ, ಆಕೆಯ ವ್ಯಕ್ತಿತ್ವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕೋಟೆ ಕಾಯುವವನ ಹೆಂಡತಿ, ಛಲವಾದಿ ಹೆಣ್ಣು ಮಗಳಾಗಿ ಎದುರಾಳಿ ಸೈನಿಕರನ್ನು ಒನಕೆಯಿಂದ ಹೇಗೆ ಕೊಂದಳು. ವೀರಮಗಳು ಅವತ್ತಿನ ವಿಜಯಕ್ಕೆ ಕಾರಣರಾಗಿದ್ದರು. ....
ಸುವರ್ಣ ಸುಂದರಿ ಒಂದು ಬೊಂಬೆ ಹೊಸಬರ ‘ಸುವರ್ಣ ಸುಂದರಿ’ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುವ ಕಾರಣ ಯಾರು ಶೀರ್ಷಿಕೆ ಎಂಬುದನ್ನು ತಂಡವು ಗೌಪ್ಯತೆಯನ್ನು ಕಾಪಾಡಿಕೊಂಡಿತು. ಬಿಡುಗಡೆಗೆ ಹತ್ತಿರವಾಗಿದ್ದರಿಂದ ಒಂದಷ್ಟು ಮಾಹಿತಿಯು ಲಭ್ಯವಾಗಿದೆ. ಸುಂದರ ಬೊಂಬೆಯು ಸುವರ್ಣ ಸುಂದರಿಯಾಗಿದ್ದು, ಇದರ ಮೂಲಕ ಕತೆಯು ತೆರೆದುಕೊಳ್ಳುತ್ತದೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೮ರ ವರೆಗಿನ ನಾಲ್ಕು ತಲೆಮಾರು ಮತ್ತು ಕಾಲಘಟ್ಟದ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇವಿರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆ ....
ಜೂನ್ ಹದಿನಾಲ್ಕರಂದು ಹ್ಯಾಂಗ್ ಓವರ್ ಪ್ರೀತಿಕಿತಾಬು ನಿರ್ದೇಶನ ಮಾಡಿದ್ದ ವಿಠಲ್ಭಟ್ ಎರಡನೆ ಬಾರಿ ಕತೆ ಬರೆದು ಆಕ್ಷನ್ ಕಟ್ ಹೇಳಿರುವ ‘ಹ್ಯಾಂಗ್ ಓವರ್’ ಚಿತ್ರವು ಜೂನ್ ಹದಿನಾಲ್ಕರಂದು ತೆರೆಗೆ ಬರಲಿದೆ. ಪ್ರಸಕ್ತ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಸ್ವಾತಂತ್ರವನ್ನು ದುರುಪಯೋಗಪಡಿಸಿಕೊಳ್ಳದೇ ಯೌವ್ವನವನ್ನು ಜವಬ್ದಾರಿಯುತವಾಗಿ ಅನುಭವಿಸಿ ಎಂದು ಯುವ ಜನಾಂಗಕ್ಕೆ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂವರು ಹುಡುಗರು ಮತ್ತು ಹುಡುಗಿಯರು ಕಾಕ್ಟೇಲ್ ಪಾರ್ಟಿಗೆ ದೂರದ ಫಾರ್ಮ್ ಹೌಸ್ಗೆ ತೆರೆಳುತ್ತಾರೆ. ಎಲ್ಲರೂ ಎಂಜಾಯ್ ....
ತೆರೆಗೆ ಸಿದ್ದ ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ ಇತ್ತೀಚೆಗೆ ಚಂದನವನದ ಅಭಿಮಾನದ ಮೇಲೆ ಬೇರೆ ಭಾಷೆಯವರು ಕನ್ನಡ ಚಿತ್ರಗಳಿಗೆ ಹಣ ಹೂಡುತ್ತಿದ್ದಾರೆ. ಅದರಂತೆ ಟಾಲಿವುಡ್ ಸಿನಿಪಂಡಿತರು ಲವ್, ಸೈಕಲಾಜಿಕಲ್ ಥ್ರಿಲ್ಲರ್ ಇರುವ ‘’ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ’ ನಿರ್ಮಾಣ ಮಾಡಿರುವ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದೆ. ಆಹ್ಲಾದಕರ ಉತ್ತಮ ಸಂಗೀತಮಯ ಪ್ರೇಮಕತೆಯೊಂದಿರುವ ಕತೆಯಲ್ಲಿ ಯಾವುದಾದರೊಂದು ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ತಿರುವುಗಳು ಪಡೆದುಕೊಳ್ಳುತ್ತವೆ. ಅದರಿಂದ ಬದುಕಿ ಹೇಗೆ ....
ಐ ಲವ್ ಯು ಅಂದರು ಸುದೀಪ್ ೨೦೧೯ರ ಅದ್ದೂರಿ ಚಿತ್ರ ‘ಐ ಲವ್ ಯು’ ಕನ್ನಡ, ತೆಲುಗು ಭಾಷೆಗಳಲ್ಲಿ ಸಿದ್ದಗೊಂಡಿದೆ. ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್ ಆಗಿದ್ದು, ಜನರು ಇದರ ಬಗ್ಗೆ ಕಾಳಜಿ ವಹಿಸಿದ್ದಾರೆ. ಪ್ರಚಾರದ ಕೊನೆ ಹಂತವಾಗಿ ಎರಡನೆ ಟ್ರೈಲರ್ನ್ನು ಸುದೀಪ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡುತ್ತಾ ತುಣುಕುಗಳು ತುಂಬಾ ಶ್ರೀಮಂತವಾಗಿದೆ. ಮಧ್ಯದಲ್ಲೊಂದು ಸೋನುಗೌಡ ಪಾತ್ರವು ಎಂಟ್ರಿಯಾಗಿ ಕುತೂಹಲ ಮೂಡಿಸಿದೆ. ಉಪೇಂದ್ರ ಕುಟುಂಬ ನಂತರ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಯಾರೇ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡುತ್ತಾ ಖುಷಿ ....
ರೌಡಿಸಂ ಹಿನ್ನಲೆಯ ಪಂಟ್ರು ಸಮಾಜದಲ್ಲಿ ಹುಟ್ಟುತ್ತಾ ಯಾರು ರೌಡಿಗಳು ಆಗುವುದಿಲ್ಲ. ಗೊತ್ತಿದ್ದೋ, ಗೊತ್ತಿಲ್ಲದಯೋ ಸಣ್ಣ ತಪ್ಪು ಮಾಡಿ ಶಿಕ್ಷೆ ಅನುಭವಿಸಿ ಹೊರಬಂದಾಗ, ಜನರು ಅವರ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರಲು ಪ್ರಯತ್ನ ಮಾಡದೆ ಅವರನ್ನು ರೌಡಿಗಳಂತೆ ಬಿಂಬಿಸುತ್ತಾರೆ. ಇದರಿಂದ ಅವರುಗಳು ತಮ್ಮ ಛಾಪನ್ನು ಉಳಿಸಿಕೊಳ್ಳುವುದಕ್ಕಾದರೂ ಇದರಲ್ಲೆ ಮುಂದು ವರೆಯುತ್ತಾರೆ. ಇದಕ್ಕೆ ವಿದ್ಯಾಭ್ಯಾಸ ಬೇಕಾಗಿಲ್ಲ. ಇಂತಹದೆ ಅಂಶಗಳನ್ನು ಹೆಕ್ಕಿಕೊಂಡು ‘ಪಂಟ್ರು’ ಟ್ಯಾಗ್ಲೈನ್ದಲ್ಲಿ ನಮ್ಗೆ ನಾವೇ ಎಂದು ಹೇಳಿಕೊಂಡಿದ್ದಾರೆ. ಮೂವರು ಅಮಾಯಕ ಹುಡುಗರನ್ನು ಇಲ್ಲಿನವರು ಹೇಗೆ ....
ಶ್ರೀದೇವಿಯ ಹಾಡುಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ ಸಂದೀಪ್ ಮಲಾನಿ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಶ್ರೀದೇವಿ ಲೈವ್ಸ್ ಫಾರೆವರ್ …’ ಹೌದು, ನಟ-ನಿರ್ದೇಶಕ ಸಂದೀಪ್ ಮಲಾನಿಯವರು ದಿ. ನಟಿ ಶ್ರೀದೇವಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರೀಗ ಶ್ರೀದೇವಿಯವರ ಕುರಿತಂತೆ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಹೌದು, ಸಂದೀಪ್ ....
ಅರ್ಧ ಶತಕ ಮತ್ತು ಶತಕದ ನಡುವಿನ ಸಂಭ್ರಮ ೫೦,೧೦೦ ಮತ್ತು ೧೨೫ ದಿನ ಪ್ರದರ್ಶನ ಕಂಡರೆ ಕಾರ್ಯಕ್ರಮ ಏರ್ಪಡಿಸುವುದು ಚಂದನವನದಲ್ಲಿ ನಡೆದು ಬಂದ ಸಂಪ್ರದಾಯವಾಗಿದೆ. ಸೋಜಿಗ ಎನ್ನುವಂತೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸತತ ೬೩ ದಿನಗಳ ಕಾಲ ಚಿತ್ರಮಂದಿರದಲ್ಲಿ ಇರುವುದರಿಂದ ನಿರ್ಮಾಪಕರು ಸಣ್ಣದೊಂದು ಸಮಾರಂಭ ನಡೆಸಿ ಫಲಕಗಳನ್ನು ಗಣ್ಯರ ಮೂಲಕ ಕಲಾವಿದರು, ತಂತ್ರಜ್ಘರಿಗೆ ವಿತರಿಸಿದರು. ಸತ್ಯ ಘಟನೆಯ ಸೂಕ್ಷ ವಿಷಯಗಳ ಚಿತ್ರಕ್ಕೆ ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಮಾಡಿರುವುದು ಇತರರಿಗೆ ನಾಂದಿಯಾಗಿದೆ. ಒಳ್ಳೆಯ ಅಂಶಗಳು ಇದ್ದರೆ ಅದೇ ಹೀರೋ ....
ಖನನ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ ಎರಡು ವರ್ಷದಿಂದ ಸುದ್ದಿಯಾಗಿದ್ದ ಕುತೂಹಲ ಕೆರಳಿಸಿದ್ದ ‘ಖನನ’ ಚಿತ್ರ ಕೊನೆಗೂ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಅಂದು ಕೊಂಡಿದ್ದೆಲ್ಲಾ ಆದರೆ ಜೀವನ ಹೇಗಾಗುತ್ತೇ. ಹನಿ ಐ ಯಾಮ್ ಹೋಮ್ ಎಂದು ಎರಡು ಬಾರಿ ಹೇಳವುದು. ಹೀಗೆ ಟ್ರೈಲರ್ದಲ್ಲಿ ಬರುವ ಪವರ್ಫುಲ್ ಡೈಲಾಗ್ಗಳಲ್ಲಿ ಇದು ಒಂದಾಗಿದೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ರಾಧಾ ಪ್ರಕಾರ ಸಿನಿಮಾದಲ್ಲಿ ಪಾಪ ಮಾಡುವವನಿಗೆ ಆಯಾಗಿ, ಖುಷಿಯಾಗಿರುತ್ತದೆ. ಅದು ಶಾಪವಾಗಿ ಪರಿಣಿಮಿಸಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ. ....
ಮುನಿರತ್ನ ಕುರುಕ್ಷೇತ್ರ ಆಗಸ್ಟ್ ೯ಕ್ಕೆ ಫಿಕ್ಸ್ ಚಂದನವನದ ಅದ್ದೂರಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಎಂದು ಬಿಡುಗಡೆಯಾಗುತ್ತದೆ ಎಂಬುದರ ಪ್ರಶ್ನೆಗೆ ನಿರ್ಮಾಪಕ ಮುನಿರತ್ನ ಸದ್ಯದಲ್ಲೆ ತಿಳಿಸುವುದಾಗಿ ಜಾರಿಕೊಳ್ಳುತ್ತಿದ್ದರು. ಶನಿವಾರ ಖುದ್ದು ಮಾದ್ಯಮದವರನ್ನು ಭೇಟಿ ಮಾಡಿ ಸಾಕಷ್ಟು ವಿಷಯಗಳು ಮತ್ತು ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ವಿಳಂಬವಾಗಿರುವುದಕ್ಕೆ ೩ಡಿ ಕಾರಣವಾಗಿದೆ. ಸಾಮಾಜಿಕ ಸಿನಿಮಾವನ್ನು ೩ಡಿ ಮಾಡುವುದು ಸುಲಭ. ಆದರೆ ಪೌರಾಣಿಕ ಚಿತ್ರಕ್ಕೆ ಇದನ್ನು ಮಾಡಲು ಶ್ರಮ, ಸಮಯ ಜಾಸ್ತಿ ತೆಗೆದುಕೊಂಡಿದೆ. ದರ್ಶನ್ ಮುಖ್ಯ ಪಾತ್ರದಲ್ಲಿ ....
ಅನಂತ್ನಾಗ್ ಸಲುವಾಗಿ ಸಿದ್ದಗೊಂಡ ಸಿನಿಮಾ ನಿರ್ದೇಶಕ ಶ್ರೀಂಗೇರಿಸುರೇಶ್ ೨-೩ ಕತೆಗಳನ್ನು ನಿರ್ಮಾಪಕರಿಗೆ ಹೇಳಿದ್ದಾರೆ. ಅವರು ಒಂದನ್ನು ಆಯ್ಕೆ ಮಾಡಿ ಅನಂತ್ನಾಗ್ ಒಪ್ಪಿಕೊಂಡರೆ ಮಾತ್ರ ನಿರ್ಮಾಣ ಮಾಡುವುದಾಗಿ ಷರತ್ತು ಹಾಕಿದ್ದಾರೆ. ಕೊನೆಗೆ ಸಾಹಸ ಮಾಡಿ ಚಿತ್ರಕತೆ,ಸಂಭಾಷಣೆ ಬರೆದು, ಹಿರಿಯ ಕಲಾವಿದರನ್ನು ಒಪ್ಪಿಸಿ ಸಿದ್ದಗೊಂಡಿರುವ ಚಿತ್ರವೇ ‘ವೀಕೆಂಡ್’. ಸದರಿ ಮಾಹಿತಿಯನ್ನು ನಿರ್ದೇಶಕರು ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಬಿಚ್ಚಿಟ್ಟರು. ಚಿತ್ರದ ಕುರಿತು ಹೇಳುವುದಾದರೆ ಇಂಜಿನಿಯರ್ಗಳನ್ನು ಚಿಕ್ಕದಾಗಿ ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ....
ಭಿಕ್ಷುಕನ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ದರಿದ್ದ ರಜನಿಕಾಂತ್ ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಕಾಲ್ಶೀಟ್ ನೀಡಿದರೆ ನಿರ್ಮಾಪಕ,ನಿರ್ದೇಶಕನ ಭವಿಷ್ಯ ಸೂಪರ್ ಎಂದು ಸಿನಿಪಂಡಿತರು ಹೇಳುತ್ತಾರೆ. ಅಂತಹುದರಲ್ಲಿ ಸ್ವತ: ತಾವೇ ನಟಿಸಲು ಸಿದ್ದ, ಅದು ಭಿಕ್ಷುಕನ ಪಾತ್ರವಾದರೂ ಸರಿ ಅಂತ ಕೋರಿಕೊಂಡಿರುವ ಸುದ್ದಿ ‘ಅಮರ್’ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡವು ವಿಷಯವನ್ನು ಬಹಿರಂಗಪಡಿಸಿದೆ. ಅಂಬರೀಷ್ಗೆ ಖಾಸಾ ದೋಸ್ತ್ಗಳಾಗಿ ಶತ್ರಘ್ನಾಸಿನ್ನಾ, ಮೋಹನ್ ಬಾಬು ಮತ್ತು ರಜನಿಕಾಂತ್ ಕೊನೆವರೆಗೂ ಇದ್ದರು. ಪುತ್ರ ಅಭಿಷೇಕ್ಅಂಬರೀಷ್ ....
ಭಾರತದ ಪ್ರಥಮ ಸಂಪೂರ್ಣ ಪ್ಯಾರನಾರ್ಮಲ್ ಚಿತ್ರ ಸಿನಿಮಾಗಳಲ್ಲಿ ಕಣ್ಣಿಗೆ ಕಾಣಿಸುವಂತದ್ದನ್ನು ಹಾರರ್ ಎನ್ನುತ್ತಾರೆ. ಅದೇ ಪ್ರೇಕ್ಷಕನಿಗೆ ಕಾಣಿಸದೆ ಸ್ಪರ್ಶಿಸಿದಂತ ಅನುಭವ ನೀಡುವುದನ್ನು ಪ್ಯಾರನಾರ್ಮಲ್ ಅಂತ ಕರೆಯುತ್ತಾರೆ. ಕೆಲವು ಸಿನಿಮಾದಲ್ಲಿ ಎರಡು ಸೇರಿಕೊಂಡಿದ್ದು ಸುದ್ದಿಯಾಗಿತ್ತು. ಈಗ ‘ಕಮರೊಟ್ಟು ಚೆಕ್ಪೋಸ್ಟ್’ ಚಿತ್ರವು ಸಂಪೂರ್ಣ ಪ್ಯಾರನಾರ್ಮಲ್ನಿಂದ ಕೂಡಿದ ಕತೆಯಾಗಿದೆ. ಒಂದೇ ಬಾರಿ ಭೂತ, ವರ್ತಮಾನದಲ್ಲಿ ನಡೆಯುವ ಸನ್ನಿವೇಶಗಳು, ಸೈಕಲಾಜಿಕಲ್ ಆಗಿ ಊಹೆ ಮಾಡುವಂತಹ ನೋಡುಗರ ಮನಸ್ಥಿತಿಯನ್ನು ಅರಿತುಕೊಂಡು ಕತೆಯು ....
ಚಿತ್ರಬ್ರಹ್ನರನ್ನು ನೆನಪಿಸುವ ಕಾರ್ಯಕ್ರಮ ಸದಭಿರುಚಿಯ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ ಅವರನ್ನು ಸಿನಿಪಂಡಿತರು ಗೌರವದಿಂದ ಚಿತ್ರಬ್ರಹ್ಮರೆಂದು ಕರೆಯುತ್ತಿದ್ದರು. ಅವರ ಚಿತ್ರಗಳು, ಹಾಡುಗಳು ಸಾರ್ವಕಾಲಕ್ಕೂ ಪ್ರಸಿದ್ದಿಯಾಗಿದೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕಾಣಿಕೆ ಬಹುದೊಡ್ಡದು. ಕಾದಂಬರಿ ಆಧಾರಿತ ಕತೆಗಳನ್ನು ಆಯ್ದುಕೊಂಡು, ಅದರಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗಿ ಇರುತ್ತಿದ್ದವು. ಇಂತಹ ಮಹಾನ್ ತಂತ್ರಜ್ಘರನ್ನು ನೆನಪಿಸುವ ‘ಮೂಕ ಹಕ್ಕಿಯು ಹಾಡುತಿದೆ’ ಪರಿಕಲ್ಪನೆಯೊಂದಿಗೆ ಎಸ್.ಆರ್.ಪುಟ್ಟಣ್ಣಕಣಗಾಲ್ ಸಂಗೀತೋತ್ಸವ ಕಾರ್ಯಕ್ರಮವು ವೆಂಕಟೇಶ್ ಮತ್ತು ....
ಪಾರ್ವತಮ್ಮನ ಮಗಳ ಹಾಡುಗಳು ಚಿತ್ರದ ಹಾಡುಗಳು ಜನರಿಗೆ ಮೊದಲ ಆಹ್ವಾನಪತ್ರಿಕೆ ಎನ್ನುವಂತೆ ಕ್ರೈಮ್, ಥ್ರಿಲ್ಲರ್ ಕತೆ ಹೊಂದಿರುವ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ಎರಡು ಗೀತೆಗಳ ಪೈಕಿ ಒಂದು ಹಾಡಿಗೆ ಸಾಹಿತ್ಯ ರಚಿಸಿರುವ ಡಾಲಿಧನಂಜಯ್ ಟ್ರೈಲರ್ ಬಿಡುಗಡೆ ಮಾಡಿ, ನಾನು ಸಾಹಿತಿ ಅಲ್ಲ. ನಟನೆಯಲ್ಲಿ ಬಿಡುವು ಇದ್ದಾಗ ಹಾಗೇ ಸುಮ್ಮನೆ ಮನಸ್ಸಿನಲ್ಲಿರುವ ಪದಗಳನ್ನು ಪೇಪರಿನಲ್ಲಿ ಬರದುಕೊಳ್ಳುತ್ತಿದ್ದೆ ಎಂದು ಹೇಳಿದರು. ಶೀರ್ಷಿಕೆ ಪಾರ್ವತಮ್ಮ ಇದ್ದರೂ ಇದು ಹರಿಪ್ರಿಯಾ ಸಿನಿಮಾವೆಂದು ಅಮ್ಮನಾಗಿ ....
ಟಾಲಿವುಡ್ನವರ ಕನ್ನಡ ಪ್ರೇಮ ಕನ್ನಡ ಭಾಷೆಯಲ್ಲಿ ಚಿತ್ರವು ಗೆದ್ದಿತು ಅಂದರೆ ಎಲ್ಲಾ ಕಡೆಗಳಲ್ಲಿ ಸಪಲರಾಗಬಹುದೆಂದು ಲಗಾಯ್ತಿನಲ್ಲಿ ನಿರ್ದೇಶಕರುಗಳಾದ ಬಾಲುಮಹೇಂದ್ರ, ಮಣಿರತ್ನಂ ಹೇಳುತ್ತಿದ್ದರಂತೆ. ಅದು ಈಗಲೂ ನಡೆಯುತ್ತಿದೆ. ಅದಕ್ಕಾಗಿ ಬೇರೆ ಭಾಷೆಯ ಚಿತ್ರರಂಗದವರು ಪರೀಕ್ಷೆ ಮಾಡಲು ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವುದುಂಟು. ಆ ಸಾಲಿಗೆ ಆಂದ್ರದವರಿಂದ ‘ರೇಸ್’ ಎನ್ನುವ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದಗೊಂಡಿದೆ. ಬದುಕು, ಪ್ರೀತಿ, ಹಣ ಮತ್ತು ಅಪರಾಧ ಇವುಗಳು ಹಲವರ ಜೀವನದಲ್ಲಿ ರೇಸ್ನಂತೆ ಬಂದು ಹೋಗುತ್ತದೆ. ಕತೆಯು ಕೂಡ ....
ಮೂಕ ವಿಸ್ಮಿತದಲ್ಲಿ ಶ್ರೀರಾಮನ ಗೀತೆ ಅನರ್ಘ್ಯ ಟಿ.ಪಿ.ಕೈಲಾಸಂ ವಿರಚಿತ ಸುಪ್ರಸಿದ್ದ ‘ಟೊಳ್ಳು-ಗಟ್ಟಿ’ ನಾಟಕವು ‘ಮೂಕ ವಿಸ್ಮಿತ’ ಚಿತ್ರರೂಪದಲ್ಲಿ ತೆರೆ ಕಾಣಲು ಸಿದ್ದವಾಗಿದೆ. ಚಿತ್ರಕತೆ,ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಜೊತೆಗೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುದತ್ ಶ್ರೀಕಾಂತ್ ಬರೆದಿರುವ ನಾಲ್ಕು ಹಾಡುಗಳ ಪೈಕಿ, ಶ್ರೀರಾಮನ ಮೇಲಿರುವ ಗೀತೆಯು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದಂತೆ. ಗತಕಾಲದಲ್ಲಿ ಮೇಲು-ಕೀಳು ಎಂಬ ಭೇದಬಾವ ಈಗಲೂ ಅದು ಮುಂದುವರೆದಿದೆ. ಪ್ರಚಲಿತ ಯುವಕರ ಸಾಧನೆಗೆ ದಾರಿದೀಪ ಆಗುವ ಸನ್ನಿವೇಶಗಳು, ಮೂರು ....
ಕಿರು ಚಿತ್ರ ದಿ ವಾರಿಯರ್ಸ್ ಪ್ರಚಲಿತ ತಾಂತ್ರಿಕ ಬದುಕಿನಲ್ಲಿ ಜನರು ಇತರರ ಕಷ್ಟಕ್ಕೆ ಸ್ಪಂದಿಸದೇ ಸ್ವಾರ್ಥದಿಂದ ಬದುಕುತ್ತಿದ್ದಾರೆ. ಏನೇ ಕಹಿ ಘಟನೆ ನಡೆದರೂ ಅದರ ಬಗ್ಗೆ ಚರ್ಚೆ ನಡೆಸಿ, ನಂತರ ತಮ್ಮದೆ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಇಂತಹುದೆ ಅಂಶವನ್ನು ಒಳಗೊಂಡ ಹದಿನೈದು ನಿಮಿಷದ ‘ದಿ ವಾರಿಯರ್ಸ್’ ಎನ್ನುವ ಕಿರುಚಿತ್ರವೊಂದು ಸಿದ್ದಗೊಂಡಿದೆ. ಕಳೆದ ತಿಂಗಳು ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಒಂದು ಏಳಯನ್ನು ತೆಗೆದುಕೊಳ್ಳಲಾಗಿದೆ. ಕಟ್ಟಡದಲ್ಲಿ ಸಿಲುಕಿ ಪಾರಾಗಿ ಬಂದವರನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಶುದ್ದಿ ಮತ್ತು ಭಿನ್ನ ಚಿತ್ರಗಳನ್ನು ....
ಬಿಡುಗಡೆಯ ಹಾದಿಯಲ್ಲಿ ರತ್ನಮಂಜರಿ ಅನಿವಾಸಿ ಕನ್ನಡಿಗರು ಸೇರಿಕೊಂಡು ನಿರ್ಮಾಣ ಮಾಡಿರುವ ‘ರತ್ನಮಂಜರಿ’ ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿರುವುದರಿಂದ ಸಿನಿಮಾ ನೋಡಲು ಜನರು ಕಾತುರರಾಗಿದ್ದಾರೆ. ಅಮೇರಿಕಾದಲ್ಲ್ಲಿ ನಡೆದ ಸತ್ಯಘಟನೆ ಆಧಾರಿತ ಕತೆಯಾಗಿದೆ. ಜೊತೆಗೆ ಕೊಡವ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಪ್ರಾರಂಭ ಮತ್ತು ಅಂತ್ಯ ಕೊಡಗು ಸ್ಥಳದಲ್ಲಿ ಇರಲಿದೆ. ಡಾ.ರಾಜ್ಕುಮಾರ್. ಅಂಬರೀಷ್, ಅನಂತ್ನಾಗ್ ಚಾಲನೆ ಮಾಡಿರುವ ಜೀಪ್ವೊಂದು ಪಾತ್ರವಹಿಸಿದೆ. ಮೂವರು ನಾಯಕಿಯರು ಇರಲಿದ್ದು ಇದರಲ್ಲಿ ಯಾರು ಶೀರ್ಷಿಕೆಯಾಗಿದ್ದಾರೆಂದು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ. ....
ಮಗಳಿಗೆ ಆಘಾತ ತರಿಸಿದ ಅಮ್ಮ ಭಾನುವಾರ ‘ವಿಶ್ವ ತಾಯಂದಿರ ದಿನ’. ಅದಕ್ಕೂ ಮುನ್ನದಿನ ‘ಸಾಗುತ ದೂರ ದೂರ’ ಚಿತ್ರದಲ್ಲಿ ರಚನಾಸ್ಮಿತ್ ಸಾಹಿತ್ಯ, ಗಾಯನದ ಅಮ್ಮನ ಕುರಿತಾದ ಹಾಡನ್ನು ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದ್ದರು. ಗೀತೆಯನ್ನು ಅನಾವರಣಗೊಳಿಸಲು ಆಗಮಿಸಿದ್ದ ಅನುಪ್ರಭಾಕರ್ಗೆ ಅಚ್ಚರಿ ಕಾದಿತ್ತು. ನಿರೂಪಕಿ ಶುರು ಮಾಡುತ್ತಾ, ಮೇಡಂ ಅವರ ಕಟ್ಟಾ ಅಭಿಮಾನಿ ದೂರದ ಊರಿನಿಂದ ಬಂದಿರುವುದಾಗಿ, ಅವರಿಗೆ ನಿಮ್ಮ ಜೊತೆ ಸೆಲ್ಪಿ ತೆಗೆದುಕೊಳ್ಳುವ ಅದಮ್ಯ ಬಯಕೆ ಇದೆ ಎಂದು ಕೋರಿಕೊಂಡರು. ಇದಕ್ಕೆ ಸಮ್ಮತಿಸಿ ಯಾರಿರಬಹುದೆಂದು ಸೋಜಿಗದಿಂದ ಸಭಾಂಗಣದತ್ತ ಕಣ್ಣು ....