ನಿಘಂಟುದಲ್ಲಿ ಇಲ್ಲದ ಪದ ಸಿನಿಮಾದ ಶೀರ್ಷಿಕೆ
ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡವು ಏನಾದರೂ ವಿನೂತನ ಕಸರತ್ತು, ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಸಪಲರಾಗುವುದು ಬೆರಳಣಿಕೆಯಷ್ಟು ಮಾತ್ರ. ಆದರೆ ಪ್ರಯತ್ನ ಮಾತ್ರ ನಿಲ್ಲದೆ ಮುಂದುವರೆಯುತ್ತಲೆ ಇದೆ. ಈ ಸಾಲಿಗೆ ‘ಆಸಿಂಕೋಜಿಲ್ಲ’ ಚಿತ್ರವು ಸೇರ್ಪಡೆಯಾಗಿದೆ. ನಿರ್ದೇಶಕರು ಕಲಾವಿದರಿಗೆ ಟೈಟಲ್, ಕತೆ ಹೇಳದೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶೀರ್ಷಿಕೆ, ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲವನ್ನು ಮಾದ್ಯಮದ ವರಾತದ ಮೇರೆಗೆ ಮಾಹಿತಿ ಹರಿಬಿಟ್ಟರು.
ಸಾವಿನ ಮನೆಯಲ್ಲಿ ಹಾಸ್ಯ
ಭೂತಯ್ಯನ ಮೊಮ್ಮಗ ಅಯ್ಯು ಚಿತ್ರವು ಸಾವಿನ ಮನೆಯಲ್ಲಿ ನಡೆಯುವ ಹಾಸ್ಯವನ್ನು ತೋರಿಸಿದ್ದರು. ಅದೇರೀತಿ ಎಂಬಂತೆ ‘ಒಂಬತ್ತನೇ ಅದ್ಬುತ’ ಸಿನಿಮಾದಲ್ಲಿ ಇದೇ ರೀತಿಯ ಕತೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ವಯಸ್ಸಾದ ಮನುಷ್ಯ ಸತ್ತರೆ, ಶವದ ಮುಂದರೆ ಕಣ್ಣೀರು ಹಾಕುವವರು ಕಡಿಮೆ ಇರುತ್ತಾರೆ. ಅದನ್ನು ವೈನೋಧಿಕ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಹಗರಿಬೊಮ್ಮನಹಳ್ಳಿಯ ಸಂತೋಷ್ಕುಮಾರ್ಬೆಟಗೇರಿ ರಚನೆ, ನಿರ್ದೇಶನ,ನಾಯಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಗರ ಶೀರ್ಷಿಕೆ ಗೀತೆ ಬಿಡುಗಡೆ ಹೆಸರಿನಿಂದಲೇ ಸದ್ದು ಮಾಡುತ್ತಿರುವ ‘ಗರ’ ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಮಾತನಾಡಿ, ಆರ್.ಕೆ.ನಾರಾಯಣ್ ವಿರಚಿತ ಆಸ್ಟ್ರಾಲಜರ್ ಡೇ ಪುಸ್ತಕವನ್ನು ಓದಿ, ಅದರಲ್ಲಿ ಸ್ಪೂರ್ತಿಗೊಂಡು ಸಿನಿಮಾಕ್ಕೆ ಕತೆ ಬರೆಯಲಾಗಿದೆ. ಅದರಲ್ಲಿರುವ ಪ್ರಶ್ನೆ, ಉತ್ತರ ಹುಡುಕಿಕೊಂಡು ಹೋದಾಗ ಸಿಕ್ಕಿದ್ದೇ ಗರ. ಅದಕ್ಕಾಗಿ ‘ಅಂಕೆ ಇಲ್ಲದ ಪ್ರೇಮಕ್ಕೆ ಅಂಕಗಳ ಆಟ’ವೆಂದು ಉಪಶೀರ್ಷಿಕೆಯಲ್ಲಿ ಹೇಳಲಾಗಿದೆ. ಟೈಟಲ್ ಗೀತೆಯು ಚಿತ್ರದ ಕುರಿತಾದ ಒಂದು ಏಳೆ ಸಾರಾಂಶವನ್ನು ಹೇಳುತ್ತದೆ. ಹೊಸ ಕಲಾವಿದರ ಜೊತೆ ಹಳಬರ ....
ವಿಭಿನ್ನ ಶೀರ್ಷಿಕೆ ಕೃಷ್ಣ ಗಾರ್ಮೆಂಟ್ಸ್ ಚಿತ್ರ-ವಿಚಿತ್ರ ಶೀರ್ಷಿಕೆಗಳನ್ನಿಟ್ಟುಕೊಂಡು ಸೆಟ್ಟೇರುತ್ತಿರುವ ಸಿನಿಮಾಗಳಿಗೇನು ಕೊರತೆಯಿಲ್ಲ. ಸಿನಿಮಾದ ಶೀರ್ಷಿಕೆ ವಿಭಿನ್ನವಾಗಿದ್ದರೆ ಬೇಗನೆ ಜನರ ಗಮನ ಸೆಳೆಯಬಹುದು ಎಂಬ ಸದುದ್ದೇಶದಿಂದ ಹಲವು ಚಿತ್ರಗಳು ಆಕರ್ಷಕ ಹೆಸರುಗಳನ್ನು ಇಡಲು ಹಾತೊರೆಯುತ್ತಾರೆ. ಈಗ ಇದೇ ರೀತಿ ತಂಡವೂಂದು ಟೈಟಲ್ ಮೂಲಕ ಗಮನ ಸೆಳಯುವ ಪ್ರಯತ್ನ ಮಾಡಲಾಗಿ ಒಂದು ಹಂತದಲ್ಲಿ ಸಪಲರಾಗಿದ್ದಾರೆ. ಅದು ‘ಕೃಷ್ಣ ಗಾರ್ಮೆಟ್ಸ್’. ಹೆಸರು ಕೇಳಿದರೆ ಗಾರ್ಮೆಂಟ್ಸ್ ಕತೆ ಇರಬಹುದೆಂದು ಭಾವಿಸಿದರೆ ನಿಮ್ಮ ಊಹೆ ಸ್ವಲ್ಪ ಮಟ್ಟಿ ಸರಿ ಅನಿಸುತ್ತದೆ. ರಚನೆ, ಚಿತ್ರಕತೆ, ಸಾಹಿತ್ಯ, ....
ಗುರುಗಳು, ಶಿಷ್ಯರ ಸಮ್ಮುಖದಲ್ಲಿ ಹಾಡುಗಳ ಅನಾವರಣ ನಾಗತ್ತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ನಾಯಕ, ನಾಯಕಿ. ಹಂಸಲೇಖಾ ಒಡೆತನದ ದೇಸಿ ಕಾಲೇಜಿನ ಹುಡುಗರು ಸಂಗೀತ ನಿರ್ದೇಶಕರು, ಸಾಹಿತಿಗಳು. ಇವರಿಬ್ಬರ ಜುಗಲ್ಬಂದಿಯಿಂದ ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯ ‘ರತ್ನಮಂಜರಿ’ ಚಿತ್ರವು ಸಿದ್ದಗೊಂಡಿದೆ. ಪ್ರಚಾರದ ಕೊನೆ ಹಂತವಾಗಿ ಸಿನಿಮಾದ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು. ಸರದಿಯಂತೆ ಎಲ್ಲರಿಗೂ ಮೈಕ್ ಲಭ್ಯವಾಯಿತು. ಕಿಚ್ಚ ಸಿನಿಮಾದ ಸಂದರ್ಭದಲ್ಲಿ ಹಂಸಲೇಖಾರವರು ಬ್ಯುಸಿ ಇದ್ದರು. ಅವರಿಗೆ ಹದಿನೈದು ನಿಮಿಷ ಸಮಯ ....
ಸಿನಿಮಾ ಜೂಜು, ಗೆದ್ದರೆ ಸಂತೋಷ, ಬಿದ್ದರೆ ಬೇಸರ - ಮೇಷ್ಟ್ರು ಹಿರಿಯ ನಿರ್ದೇಶಕ,ನಿರ್ಮಾಪಕ ನಾಗತ್ತಿಹಳ್ಳಿಚಂದ್ರಶೇಖರ್ ಅವರನ್ನು ಚಂದನವನದಲ್ಲಿ ಗೌರವದಿಂದ ಮೇಷ್ಟ್ರು ಎಂದು ಕರೆಯುತ್ತಾರೆ. ಶಿಷ್ಯ ನಿರ್ದೇಶನ ಮಾಡಿರುವ ‘ಕಾರ್ಮೋಡ ಸರಿದು’ ಚಿತ್ರತಂಡಕ್ಕೆ ಶುಭಹಾರೈಸಲು ಆಗಮಿಸಿದ್ದರು. ಅವರು ಮಾತನಾಡುತ್ತಾ ಟೆಂಟ್ ಸಿನಿಮಾ ಶುರುಮಾಡಿ ಹತ್ತು ವರ್ಷ ಕಳೆದಿದೆ. ನಮ್ಮ ಶಾಲೆಯಿಂದ ಸಾಕಷ್ಟು ವಿದ್ಯಾರ್ಥಿಗಳು ನಿರ್ದೇಶಕ, ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಒಂದು ಕಡೆ ಆತಂಕ, ಭಯ ಕಾಡುತ್ತಿದೆ. ಅದಕ್ಕೆ ಸಿನಿಮಾ ಎಂಬ ....
ಸತ್ಯ ಕತೆಯ ಮಾಯಾ ಕನ್ನಡಿ ನಿಜ ಜೀವನದ ಘಟನೆಗಳ ಚಿತ್ರಗಳನ್ನು ಜನರು ಇಷ್ಟ ಪಡುತ್ತಾರೆಂದು ಯಾವ ಪುಣ್ಯಾತ್ಮ ಹೇಳಿದರೋ ಅವರಿಗೊಂದು ಧೀರ್ಘದಂಡ ನಮಸ್ಕಾರಗಳು. ಅಂತಹ ಸಿನಿಮಾಗಳ ಸರಪಣಿಗೆ ಹೊಸ ಕೊಂಡಿ ‘ಮಾಯಾ ಕನ್ನಡಿ’ ಸೇರಿಕೊಳ್ಳುತ್ತದೆ. ವಿದೇಶದಲ್ಲಿ ಬ್ಲೂವೆಲ್ ಆಟವೆಂಬುದು ಅಂದು ಪ್ರಸಿದ್ದಿಯಾಗಿದ್ದು, ಭಾರತದಲ್ಲೂ ಕೆಲವು ಕಾಲ ಚಾಲ್ತಿಯಲ್ಲಿ ಇತ್ತು. ಇದರಿಂದ ಪ್ರೇರಿತರಾಗಿ ಸಾಕಷ್ಟು ಜನರು ಆತ್ಮಹತ್ಯಗೆ ಶರಣಾಗಿದ್ದರು. ಸದ್ಯ ಎಲ್ಲಾ ಕಡೆ ಸದರಿ ಆಟವನ್ನು ನಿಷೇಧಿಸಲಾಗಿದೆ. ಇಂತಹುದೆ ಘಟನೆಗಳು ಮತ್ತು ಕಾಲೇಜ್ ಅಂಗಳದಲ್ಲಿ ನಡೆಯುವ ಕಪೋಲಕಲ್ಪತ ಕತೆಯನ್ನು ಹೆಕ್ಕಿಕೊಂಡು ....
ಮೇ ೩ರಂದು ‘ಗರ’ ಚಿತ್ರ ತೆರೆಗೆ ೨೫ಫ಼್ರೇಂ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಗರ‘ ಚಿತ್ರ ಮೇ ೩ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ....
ಪಡ್ಡೆ ಹುಲಿ ಶುಕ್ರವಾರದಿಂದ ಗರ್ಜನೆ ಮಾಡಲಿದೆ ಅದ್ದೂರಿ ಚಿತ್ರ ‘ಪಡ್ಡೆ ಹುಲಿ’ ಆರನೇ ಹಾಗೂ ಕೊನೆ ಬಾರಿ ಚಿತ್ರತಂಡವು ಮಾಹಿತಿಗಳನ್ನು ಹಂಚಿಕೊಂಡಿತು. ನಿರ್ದೇಶಕ ಗುರುದೇಶಪಾಂಡೆ ಮೈಕ್ ತೆಗೆದುಕೊಂಡು ರವಿ ಸರ್ ಅನಿಸಿದ್ದನ್ನು ನೇರವಾಗಿ ಸೆಟ್ನಲ್ಲಿ ಹೇಳುತ್ತಿದ್ದರು. ಅವರ ಜೊತೆ ಕೆಲಸ ಮಾಡಬೇಕಂಬ ದೂಡ್ಡ ಕನಸು ಇದರ ಮೂಲಕ ಈಡೇರಿದೆ. ಹತ್ತು ಹಾಡುಗಳನ್ನು ಹಾಕಿಕೊಳ್ಳಲು ಅವರೇ ಪ್ರೇರಣೆಯಾಗಿದ್ದಾರೆ. ಅಪ್ಪ ಮಗನ ಭಾವನೆಗಳ ದೃಶ್ಯಗಳು ಚೆನ್ನಾಗಿ ಬಂದಿದೆ. ಇವತ್ತಿನ ತಲಮಾರಿಗೆ ಒಳ್ಳೆಯ ಸಂದೇಶವನ್ನು ಹೇಳಲಾಗಿದೆ. ಚಿತ್ರಕ್ಕೆ ಮರುಗು ತರಲು ಪುನೀತ್ರಾಜ್ಕುಮಾರ್, ....
ಮಹಾಕಾವ್ಯ ನೋಡಲು ಐದು ಕಾರಣಗಳು ಐತಿಹಾಸಿಕ, ಪೌರಾಣಿಕ, ಚಾರತ್ರಿಕ ಚಿತ್ರವೆಂದು ಸುದ್ದಿಯಾಗಿರುವ ‘ಮಹಾಕಾವ್ಯ’ ನೋಡಲು ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಐದು ಕಾರಣಗಳನ್ನು ನೀಡುತ್ತಾರೆ. ಹತ್ತನೇ ಶತಮಾನದ ಸಾಹಿತ್ಯವಿದೆ. ವೈಭವದ ಸೆಟ್ಗಳು, ಶ್ರೀಮಂತ ಉಡುಗೆ ತೊಡುಗೆಗಳು ಕಣ್ಣಿಗೆ ಕಂಪು, ಹಿಂಪು, ತಂಪು ಕೊಡುತ್ತದೆ. ಹಳಗನ್ನಡದ ೩೯ ಕಾವ್ಯಗಳನ್ನು ಬಳಸಲಾಗಿದೆ. ರಾಜವೈಭವವನ್ನು ಮರುಕಳಿಸುತ್ತದೆ. ೫೮ ಗ್ರಂಥಗಳನ್ನು ಓದಿ ಅದರಲ್ಲಿ ಪಂಪನ ಶಾಂತಿನಾಥಪುರಾಣ, ರನ್ನನ ಗದಾಯುದ್ದ ಮತ್ತು ಪೊನ್ನನ ಶಕ್ತಿ ಪುರಾಣದ ಭಾಗಗಳನ್ನು ....
ತಾರಾಮಣಿಯರ ಫ್ಯಾಷನ್ ಕ್ಯಾಲೆಂಡರ್ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ನ್ನು ಭಾರತೀಯರಿಗೆ ತಲುಪಿಸುವ ಪ್ರಯುಕ್ತ ೧೯೯೭ ರಲ್ಲಿ ‘ಫ್ಯಾಷನ್ ಟಿವಿ’ಯು ಅತ್ಯತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೇರೆ ಯಾವ ಜಾಲತಾಣಗಳಲ್ಲೂ ಸಿಗದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಟವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಮಾಡ್ರನ್ ಜಗತ್ತಿನ ಅತ್ಯದ್ಬುತ ಚಿತ್ರಗಳು, ಪ್ರತ್ಯೇಕ ಮಾಹಿತಿಗಳೊಂದಿಗೆ ವಿಶ್ವಮಟ್ಟದ ಬ್ರಾಂಡ್ಗಳನ್ನು ತನ್ನತ್ತ ಸೆಳಯುತ್ತಿರುವ ವಾಹಿನಿ ಇದಾಗಿದೆ. ಸದರಿ ವಾಹಿನಿಯಿಂದ ಪ್ರತಿ ವರ್ಷ ತಾರೆಯರು, ಮಾಡೆಲ್ಗಳ ಕ್ಯಾಲೆಂಡರ್ಗಳು ಬರುತ್ತಿದೆ. ....
ಕವಚಗೆ ತಲೆದೂಗಿನ ಪ್ರೇಕ್ಷಕ ಮಹಾಪ್ರಭುಗಳು ಹದಿನಾಲ್ಕು ವರ್ಷದ ನಂತರ ಶಿವರಾಜ್ಕುಮಾರ್ ಅಭಿನಯಿಸಿರುವ ರಿಮೇಕ್ ಚಿತ್ರ ‘ಕವಚ’ಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತೋಷಕೂಟದಲ್ಲಿ ಮಾತನಾಡಿದ ವಸಿಷ್ಟಸಿಂಹ ಪ್ರೇಕ್ಷಕರು ಮೆಚ್ಚಿಕೊಂಡರೆ ಚಿತ್ರಕ್ಕೆ ನಿಜವಾದ ಬೆಲೆ ಸಿಗುತ್ತದೆ. ಗೋಧಿ ಬಣ್ಣದಲ್ಲಿ ಖಳನಾಗಿ ಅಭಿನಯಿಸಿದ್ದು, ಅದರ ಛಾಯೆ ಇಲ್ಲಿಯೂ ಮುಂದುವರೆದಿದೆ. ಖಳನಟ ಸತ್ತಾಗ ಕಣ್ಣೀರು ಹಾಕಿದ್ದು ಮೊದಲು ಎನ್ನಬಹುದು. ಕುಟುಂಬಸಮೇತ ಹೋಗುತ್ತಿದ್ದಾರೆ. ಸಾರ್ವತ್ರಿಕ ಕತೆಯಾಗಿದ್ದರಿಂದ ಎಲ್ಲರಿಗೂ ಇಷ್ಟವಾಗಿದೆ. ಒಳ್ಳೆ ಉದ್ದೇಶ, ಸ್ವಾವಲಂಬಿ ಬದುಕನ್ನು ....
ಬ್ರಹ್ಮಚಾರಿ ನೀನಾಸಂ ಸತೀಶ್
ಅಯೋಗ್ಯನಾಗಿ ಜನರ ಮನಸ್ಸಿನಲ್ಲಿ ತಳವೂರಿದ್ದ ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಮಗುವಿನ ತಂದೆಯಾಗಿ ಹೀಗೇಕೆ ಎಂದು ಪ್ರಶ್ಮೆ ಕೇಳುವ ಮೊದಲೇ ಉತ್ತರ ಹೇಳಲಾಗುತ್ತಿದೆ. ಅವರು ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಉಪ ಶೀರ್ಷಿಕೆಯಲ್ಲಿ ನೂರು ಪರ್ಸೆಂಟ್ ವರ್ಜಿನ್ ಅಂತ ಹೇಳಿಕೊಂಡಿದ್ದಾರೆ. ಲೈಬ್ರೆರಿಯನ್ ಪಾತ್ರದಲ್ಲಿ ಅದಿತಿಪ್ರಭುದೇವ ನಾಯಕಿ. ಕತೆಯಲ್ಲಿ ನಾಯಕನ ಪಾತ್ರಧಾರಿ ಬ್ರಹ್ಮಚಾರಿಯಾದಾಗ ಆತನ ಬದುಕಿನಲ್ಲಿ ಹಲವು ರೀತಿಯ ಪಯಣಗಳು ಬರುತ್ತವೆ.
ಅಶ್ವಿನಿಗೌಡ ಕನಸು ನನಸಾಯ್ತು ನಟಿ ಅಶ್ವಿನಿಗೌಡ ‘ವಾರಸುದಾರ’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು, ಒಂದಷ್ಟು ಚಿತ್ರಗಳಲ್ಲಿ ನಾಯಕನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಸಂಧರ್ಭದಲ್ಲಿ ತನ್ನಂತೆ ಹೊಸ ಕಲಾವಿದರು, ತಂತ್ರಜ್ಘರು ಅವಕಾಶಕ್ಕಾಗಿ ಅಲೆದಾಡುತ್ತಿದ್ದನ್ನು ಕಂಡು ಇಂತಹವರಿಗೆ ಏನಾದರೂ ಮಾಡಬೇಕೆಂಬ ತುಡಿತ ಹದಿನೈದು ವರ್ಷದಿಂದಲೇ ಮನಸ್ಸಿನಲ್ಲಿ ಕಾಡುತ್ತಿತ್ತು. ಈ ಮಧ್ಯೆ ಮದುವೆ, ಮಕ್ಕಳು ಅಂತ ಸಮಯ ತೆಗೆದುಕೊಂಡು ಮುಂದೆ ಅಕ್ಕ, ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಕನ್ನಡ ರಕ್ಷಣಾ ವೇದಿಕೆಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಸದ್ಯ ರಾಜ್ಯ ಮಹಿಳಾ ಘಟಕದ ....
ಬೆಲ್ ಬಾಟಂ ೫೦ ನಾಟ್ಔಟ್ ರೆಟ್ರೋ ಶೈಲಿಯ ‘ಬೆಲ್ ಬಾಟಂ’ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್ ಹೇಳಲು ನಿರ್ಮಾಪಕರು ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು. ಎಲ್ಲರ ಸಂತಸದ ಮಾತುಗಳು ನಿಮಗಾಗಿ ಸಾದರಪಡಿಸಲಾಗುತ್ತಿದೆ. ಜಯತೀರ್ಥ, ನಿರ್ದೇಶಕ: ಎಲ್ಲರ ಶಕ್ತಿಯಿಂದ ಬೆಲ್ಬಾಟಂ ಎಂಬ ಸುಂದರ ಕಲಾಕೃತಿ ಸಿದ್ದಗೊಂಡಿತು. ಇದನ್ನು ಜನರಿಗೆ ಮಾದ್ಯಮದವರು ಆಹ್ವಾನಪತ್ರ್ರಿಕೆ ಎನ್ನುವಂತೆ ಮೂಲೆ ಮೂಲೆಗಳಲ್ಲಿ ಸುದ್ದಿಯನ್ನು ತಲುಪಿಸಿದರು. ಇಲ್ಲಿಯತನಕ ಸುಖಕರ ಪಯಣದಲ್ಲಿ ....
ಕವಲುದಾರಿಯು ಪ್ರಸಕ್ತ ರಾಜಕೀಯಕ್ಕೆ ಸಮಂಜಸವಾಗಿದೆ ದೇಶಕ್ಕೆ ಹೊಸ ನಾಯಕನನ್ನು ಆರಿಸಲು ಚುನಾವಣೆ ನಡೆಯಲಿದೆ. ವಿನೂತನ ಕತೆ ಹೊಂದಿರುವ ‘ಕವಲುದಾರಿ’ ಚಿತ್ರದಲ್ಲಿ ಬರುವ ಸನ್ನಿವೇಶಗಳು ಪ್ರಸ್ತುತ ರಾಜಕೀಯ ಚುನಾವಣೆಗೆ ಸಮಂಜಸವಾಗಲಿದೆ ಎಂಬುದಾಗಿ ರಚನೆ, ನಿರ್ದೇಶನ ಮಾಡಿರುವ ಹೇಮಂತ್ರಾವ್ ಹೇಳಿಕೊಂಡಿದ್ದಾರೆ. ಮರ್ಡರ್ ಮಿಸ್ಟರಿ ಹಿನ್ನಲೆಯಲ್ಲಿ ಸಾಗುವ ಕತೆಯ ಜೊತೆಗೆ ಸಮಾಜದಲ್ಲಿ ಪೋಲೀಸ್ ಅಧಿಕಾರಿಗಳಿಗೆ ಯಾವ ಸ್ಥಾನ ಇದೆ. ಸಮಾಜವು ಇವರನ್ನು ಹೇಗೆ ನೋಡುತ್ತದೆ. ಇಂತಹ ಕ್ಲಾಸಿಕ್ ಅಂಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಪ್ರಚಾರದ ಸಲುವಾಗಿ ವಿಭಿನ್ನ ....
ಚಿತ್ರಮಂದಿರದಲ್ಲಿ ವಿರುಪಾ ಪ್ರತ್ಯಕ್ಷ ವಿನೂತನ ‘ವಿರುಪಾ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಒಬ್ಬನು ಕುರುಡ, ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ ಇರುತ್ತಾಳೆ. ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ ವಾತವರಣ, ಒತ್ತಡಗಳು ಸರಿಹೊಂದದೆ ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಹುಟ್ಟಿದ ....
ತ್ರಯಂಬಕಂದಲ್ಲಿ ಅಚ್ಚರಿಗಳ ಗುಚ್ಚ ಶಿವನ ಮೂರನೇ ಕಣ್ಣು ಅಂತ ಉಪ ಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ‘ತ್ರಯಂಬಕಂ’ ಚಿತ್ರವು ಬಿಡುಗಡೆ ಸನಿಹದಲ್ಲಿರುವ ಕಾರಣ ಕೊನೆಬಾರಿ ತಂಡವು ಮಾದ್ಯಮದ ಎದುರು ಹಾಜರಿದ್ದು ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕಿ ಅನುಪಮಗೌಡ ಹೇಳುವಂತೆ ರಾಘಣ್ಣನ ಮಗಳಾಗಿ ಕಾಣಸಿಕೊಂಡಿದ್ದೇನೆ. ಜಾಸ್ತಿ ಸಂಭಾಷಣೆ ಇರುವುದರಿಂದ ನಟಿಸಲು ಕಷ್ಟವಾಯಿತು. ಅಪ್ಪ-ಮಗಳ ಬಾಂದವ್ಯ, ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದೆ ಎಂದರು. ದೇವರು ಇದ್ದಾನೆ. ಆದರೆ ದೇವರ ಸಿನಿಮಾ ಆಗಿರುವುದಿಲ್ಲವೆಂದು ಶಿವಮಣಿ ಬಣ್ಣನೆ ಮಾಡಿದ್ದರು. ಶೇಕಡ ಎಂಬತ್ತರಷ್ಟು ಸಿತಾರ್ ....
ಯುಗಾದಿ ಹಬ್ಬದಂದು ಶ್ರೀಮಂತ ಹಾಡು ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತನಾಗಿರುವುದು ರೈತ. ಸಮಾಜದ ಚಕ್ರವರ್ತಿಗಳು, ಸರ್ಕಾರಗಳು, ಬಂಡವಾಳಶಾಹಿಗಳು ಎಲ್ಲರು ಇವರ ಮೇಲೆ ಅವಲಂಬಿತರಾಗಿದ್ದಾರೆ. ಅದರಿಂದಲೇ ಇವರನ್ನು ‘ಶ್ರೀಮಂತ’ ಅಂತ ಕರೆಯುತ್ತಾರೆ. ಈಗ ಇದೇ ಹೆಸರಿನ ಮೇಲಿನ ಸಿನಿಮಾವೊಂದು ಹಾಸನ, ಕೊಳ್ಳೇಗಾಲ, ಮಂಡ್ಯಾ ಕಡೆಗಳಲ್ಲಿ ಶೇಕಡ ೮೦ರಷ್ಟು ಚಿತ್ರೀಕರಣವನ್ನು ಮುಗಿಸಿ, ಕ್ಲೈಮಾಕ್ಸ್, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಸದ್ಯದಲ್ಲೆ ಮುಗಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಅನ್ನದಾತನು ಶೀರ್ಷಿಕೆಯಂತೆ ಆದರೆ ಜಗತ್ತೇ ಶ್ರೀಮಂತದಿಂದ ಇರಬಹುದು ....
ಒಂದು ದಶಕ ಪೂರೈಸಿದ ತುಪ್ಪದ ರಾಣಿ ಮಾರ್ಚ್ ೨೦, ೨೦೦೯ರಂದು ಚಂದನವನಕ್ಕೆ ‘ವೀರ ಮದಕರಿ’ ಚಿತ್ರದ ಮೂಲಕ ರಾಗಿಣಿ ಎನ್ನುವ ಸುಂದರ ಹುಡುಗಿಯೊಬ್ಬಳ ಪ್ರವೇಶವಾಯಿತು. ನೋಡು ನೋಡುತ್ತಿದ್ದಂತೆ ಅವರು ಸಿನಿ ಪಯಣದಲ್ಲಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಮುಗಿಸಿದ್ದಾರೆ. ನಟಿಸಿದ್ದು ೨೦+. ಇದರಲ್ಲಿ ಮಲೆಯಾಳಂ-೩, ತಮಿಳು-೨ ಮತ್ತು ತೆಲುಗು-೧ ಖಾತೆಯಲ್ಲಿ ಸೇರಿಕೊಂಡಿದೆ. ಇವುಗಳಲ್ಲಿ ಹಿಟ್, ಫ್ಲಾಪ್ ಆಗಿದ್ದು ಉಂಟು. ಹಾಗಂತ ಇದರ ಬಗ್ಗೆ ಚಿಂತನೆ ಮಾಡದೆ ಒಳ್ಳೆಯದನ್ನು ಆರಿಸಿತ್ತಾ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂಬರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ....