ಗಾದೆ ಮಾತು ಚಿತ್ರದ ಶೀರ್ಷಿಕೆ ಚಿತ್ರದ ಶೀರ್ಷಿಕೆಗಳಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೆಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಇದು ಮುಂದುವರೆಯುತ್ತಲೆ ಇದೆ. ಇದಕ್ಕೆ ಸಾಕ್ಷಿಯಾಗಿ ಗಾದೆ ಮಾತು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಹಾಸ್ಯ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಬೆಲ್‌ಬಾಟಂದಲ್ಲಿ ನಟಿಸಿದ್ದ ಸುಜಯ್‌ಶಾಸ್ತ್ರೀ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಒಬ್ಬ ವ್ಯಕ್ತಿ ತಾನು ಮಾಡಿಲ್ಲದ ತಪ್ಪಿಗೆ ಹೇಗೆ ಸಿಕ್ಕಿಹಾಕಿಕೊಳ್ತಾನೆ. ಒಂದು ಘಟನೆಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತದೆ. ಅದು ಯಾರಿಂದ, ಯಾತಕ್ಕೆ, ಎಲ್ಲಿ, ಹೇಗೆ. ಸಾಮಾನ್ಯ ....
ಖಾಕಿ ಖಾದಿ ಕಾವಿ ಲವ್ ಯು ಅಂದರು ವರ್ಷದ ಮೊದಲ ಹಿಟ್ ಚಿತ್ರ ‘ಐ ಲವ್ ಯು’ ೫೦ನೇ ದಿನದ ಸಮಾರಂಭಕ್ಕೆ ಐಡಿಜಿಪಿ ಭಾಸ್ಕರರಾವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು ಜ್ಯೋತಿಷ ಆನಂದ್‌ಗುರೂಜಿ ಆಗಮಿಸಿ ಕಲಾವಿದರು, ತಂತ್ರಜ್ಘರು ಮತ್ತು ಮಾದ್ಯಮದವರಿಗೆ ಫಲಕಗಳನ್ನು ವಿತರಣೆ ಮಾಡಿದರು. ಉಪೇಂದ್ರ ಮಾತನಾಡಿ ಜನಗಳು ಲವ್ ಯು ಅಂತ ಸಿನಿಮಾವನ್ನು ಇಲ್ಲಿಯವರೆಗೂ ತೆಗೆದುಕೊಂಡು ಹೋಗಿದ್ದಾರೆ. ಆಗಿನ ಕಾಲದಲ್ಲಿ ಹೆಚ್ಚೆಂದರೆ ೩೦ ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ ೩೦೦ ಕೇಂದ್ರಗಳಲ್ಲಿ ತೆರೆಗೆ ಬರುತ್ತಿರುವುದರಿಂದ ಎರಡು ವಾರ ಪ್ರದರ್ಶನ ಕಂಡರೆ ಗಳಿಕೆ ....
ಸ್ವಾತಂತ್ರ ದಿನಾಚರಣೆಗೆ ರಾಂಧವ ಮೂರು ಕಾಲಘಟ್ಟದಲ್ಲಿ ಕತೆ ಹೇಳುವ ‘ರಾಂಧವ’ ಚಿತ್ರಕ್ಕೆ ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿದ್ದಾರೆ. ಮೊದಲನೆ ಶೇಡ್‌ದಲ್ಲಿ ರಾಬರ್ಟ್ ಹೆಸರಿನಲ್ಲಿ ಮಿತಭಾಷಿಯಾಗಿ ಪಕ್ಷಿತಜ್ಘ. ಎರಡನೆಯದರಲ್ಲಿ ಎಲ್ಲರೊಂದಿಗೆ ಬಾಂದವ್ಯ ಬೆಳಸಿಕೊಂಡಿರುವ ರಾಂಧವದ ಯುವರಾಜ. ಕೊನೆಯದರಲ್ಲಿ ಸಾಮಾನ್ಯ ಮನುಷ್ಯನಾಗಿ ಲವರ್‌ಬಾಯ್. ನಾಯಕಿಯರಾಗಿ ಅಪೂರ್ವಶ್ರೀನಿವಾಸನ್ ಮತ್ತು ರಾಶಿ ನಟನೆ ಇದೆ. ಭಾಗ-೨ರಲ್ಲಿ ಮೂರನೆ ನಾಯಕಿಯ ಹೆಸರನ್ನು ಹೇಳುತ್ತಾರಂತೆ. ಯಾರ ಬಳಿ ಕೆಲಸ ಮಾಡದೆ, ಸುಮಾರು ೨೮೦ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿ, ಅಲ್ಲಿರುವ ....
ಕನ್ನಡ ವ್ಯಾಕರಣ ಪಂಡಿತ ರೌಡಿಸಂ ಚಿತ್ರಗಳು ಸಾಕಷ್ಟು ಬಂದಿವೆ. ಬದಲಾವಣೆ ಎನ್ನುವಂತೆ ಹಾಸ್ಯ ರೌಡಿ ಕುರಿತ ‘ಸವರ್ಣ ದೀರ್ಘ ಸಂಧಿ’ ಚಿತ್ರವೊಂದು ಸದ್ದಿಲ್ಲದೆ ಆನೇಕಲ್. ಜಗಣಿ, ದೇವರಾಯದುರ್ಗದ ಇನ್ನೂರು ವರ್ಷದ ಮನೆಯಲ್ಲಿ ಚಿತ್ರೀಕರಣ ನಡೆಸಿ ಸುದ್ದಿ ಮಾಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ತುಳು ಚಿತ್ರ ಚಾಲಿಪೋಲಿಲು ನಿರ್ದೇಶನ ಮಾಡಿರುವ ವೀರೇಂದ್ರಶೆಟ್ಟಿ ಚಿತ್ರಕ್ಕೆ ರಚನೆ,ಸಾಹಿತ್ಯ, ಪಾಲದಾರ ಮತ್ತು ಆಕ್ಷನ್ ಕಟ್ ಹೇಳಿದ್ದಾರೆ. ಅವರು ಮಾತನಾಡಿ ಹಲವು ನಾಯಕ ನಟರನ್ನು ಸಂಪರ್ಕಿಸಲಾಗಿ, ಸೂಕ್ತ ಸ್ಪಂದನೆ ಸಿಗಲಿಲ್ಲ. ಅನಿವಾರ್ಯವಾಗಿ ನಾಯಕನಾಗಬೇಕಾಯಿತು. ಅವಿದ್ಯಾವಂತ, ರೌಡಿ ತಂಡದ ಮುಖ್ಯಸ್ಥ. ಆದರೆ ಕನ್ನಡ ....
ಮಹಿರಾಗೆ ಮೆಚ್ಚುಗೆಯ ಮಾತುಗಳು ‘ಮಹಿರಾ’ ಚಿತ್ರದ ಬಹುತೇಕ ಕಲಾವಿದರು, ನಿರ್ದೇಶಕ, ನಿರ್ಮಾಪಕ, ಸಾಹಸ, ಸಂಕಲನ, ಸಾಹಿತ್ಯ ಇವರೆಲ್ಲರಿಗೂ ಹೊಸ ಅನುಭವ. ಇಂಗ್ಲೀಷ್ ಸಿನಿಮಾವನ್ನು ಕನ್ನಡದಲ್ಲಿ ನೋಡಲಾಗಿದೆ ಎಂಬ ಪ್ರಶಂಸೆಗಳು ಬಂದಿದೆ. ನಿರ್ದೇಶನ ಮಾಡಿರುವ ಮಹೇಶ್‌ಗೌಡ ಹೇಳುವಂತೆ ತಂಡವು ಶ್ರಮದಿಂದ ಕೆಲಸ ಮಾಡಿದ್ದು ಪರದೆ ಮೇಲೆ ನೋಡಿದಾಗ ಖುಷಿಕೊಟ್ಟಿದೆ. ಅದೇ ರೀತಿ ಪ್ರೇಕ್ಷಕರು ಇದನ್ನೆ ಹೇಳುತ್ತಿದ್ದಾರೆ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಎಷ್ಟು ಸಿನಿಮಾ ಮಾಡಿದ್ದಾರೆಂದು ಕೇಳುತ್ತಾರೆ. ಶನಿವಾರ ಶೇಕಡ ೭೦ರಷ್ಟು ಗಳಿಕೆ ಕಂಡರೆ, ಭಾನುವಾರ ಮಾಲ್‌ಗಳಲ್ಲಿ ಏಳು ಪ್ರದರ್ಶನಗಳು ಹೌಸ್‌ಫುಲ್ ಆಗಿದೆ. ....
ಹಿರಿಯ ತಂತ್ರಜ್ಘರ ಎಂ ಆರ್ ಪಿ ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವ ನಾಣ್ಣುಡಿ ಚಿತ್ರರಂಗದಲ್ಲಿ ಅನ್ವಯವಾಗುತ್ತಿದೆ. ಸ್ಯಾಂಡಲ್‌ವುಡ್‌ನ ವಿವಿಧ ವಿಭಾಗಗಳಲ್ಲಿ ತಮ್ಮದೆ ಛಾಪನ್ನು ಉಳಿಸಿಕೊಂಡಿರುವ ಹಿರಿಯರುಗಳಾದ ನಿರ್ದೇಶಕ ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಎ.ವಿ.ಕೃಷ್ಣಕುಮಾರ್(ಕೆಕೆ), ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ.ಕೆ.ಆರ್ ಇವರುಗಳು ದುಡಿದ ಹಣದಲ್ಲಿ ‘ಎಂ.ಆರ್.ಪಿ’ ಹಾಸ್ಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ ನನ್ ಮಗಳೇ ಹೀರೋಯಿನ್‌ಗೆ ಪಾಲುದಾರರಾಗಿದ್ದ ಎನ್.ಜಿ.ಮೋಹನ್‌ಕುಮಾರ್ ಕೈ ಜೋಡಿಸಿದ್ದಾರೆ. ಶೀರ್ಷಿಕೆ ಕೇಳಿದರೆ ವೈನ್ ಸ್ಟೋರ್ ಕತೆ ಅಂತ ....
ಇನ್ಮುಂದೆ ದುಡ್ಡು ಮಾಡುವುದೇ ಕಾಯಕ – ಕ್ರೇಜಿಸ್ಟಾರ್ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ಬಯಲಾಟದ ಭೀಮಣ್ಣ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಲು ಚಾಮುಂಡೇಶ್ವರಿ ಸ್ಟುಡಿಯೋಗೆ ರವಿಚಂದ್ರನ್ ಆಗಮಿಸಿದ್ದರು. ಸಾಧಾರಣವಾಗಿ ಕ್ರೇಜಿಸ್ಟಾರ್ ಮಿತಭಾಷಿಯಾಗಿರುತ್ತಾರೆ. ಆದರೆ ನಿರ್ದೇಶಕರ ಮೇಲಿನ ಗೌರವಕ್ಕೆ ಹೆಚ್ಚು ಮಾತನಾಡುತ್ತಾ ಹೋದರು. ಇಲ್ಲಿ ನಿಂತಾಗ ರಣಧೀರ ನೆನಪಿಗೆ ಬರುತ್ತದೆ. ಇದೇ ಜಾಗದಲ್ಲಿ ಕ್ಲೈಮಾಕ್ಸ್‌ನ್ನು ಚಿತ್ರ್ರೀಕರಿಸಲಾಗಿತ್ತು. ಜಾಗ ಹಳೆಯದಾದರೂ, ವಾತವರಣ ಹೊಸತು ಆಗಿದೆ. ....
ಮುವತ್ತೈದು ಹಾಸ್ಯ ಕಲಾವಿದರ ಚಿತ್ರ ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಫಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ. ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಫಿಲ್ಟರ್ ಕಾಫಿ ಶೀರ್ಷಿಕೆ ಇಡಲು ಚಿಂತನೆ ನಡೆಸಲಾಗಿತ್ತು. ಆಂಗ್ಲ ಹೆಸರು ಇರುವ ಕಾರಣ ....
ಧೂಮ್‌ಗೆ ಪುನೀತ್‌ರಾಜ್‌ಕುಮಾರ್ ಚಾಲನೆ ವಿಶೇಷ ರೀತಿಯ ಬೈಕ್‌ಗಳನ್ನು ಓಡಿಸುವಾಗ ಸುರಕ್ಷತೆಗಾಗಿ ಹೆಲ್ಮಟ್ ಧರಿಸಿಕೊಳ್ಳುವುದು ಒಳ್ಳೆಯದು ಅಂತ ಪುನೀತ್‌ರಾಜ್‌ಕುಮಾರ್ ‘ಧೂಮ್ ಅಗೇನ್’ ಚಿತ್ರದ ಫಸ್ಟ್‌ಲುಕ್ ಮತ್ತು ಟೀಸರ್ ಅನಾವರಣ ಮಾಡುತ್ತಾ ನೂತನ ಕಲಾವಿದರಿಗೆ ಕಿವಿಮಾತು ಹೇಳಿದರು. ಇದಕ್ಕೂ ಮುನ್ನ ನಾಲ್ಕು ಯುವಕಲಾವಿದರು ಬೈಕ್‌ನಲ್ಲಿ ವೇದಿಕೆಗೆ ಆಗಮಿಸಿದ್ದನ್ನು ಕಂಡು ಈ ರೀತಿ ಹೇಳಲು ಕಾರಣವಾಗಿತ್ತು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲವೆಂದು ನಿರ್ದೇಶಕ ....
ಗಣಿ ನಾಡಿನ ಯುವಕರ ಸಿನಿಮಾ ಗಣಿ-ಧಣಿ ಎಂದರೆ ಥಟ್ಟನೆ ನೆನಪಿಗೆ ಬರುವುದು ಬಳ್ಳಾರಿ. ಈ ಭಾಗದಲ್ಲಿ ಹೆಚ್ಚು ತೆಲುಗು ಚಿತ್ರಗಳು ಪ್ರಾಬಲ್ಯ ಹೊಂದಿದೆ. ಇದರಿಂದ ಅಲ್ಲಿನ ಇಂಜಿನಿಯರಿಂಗ್ ಕನ್ನಡಿಗರಿಗೆ ಬೇಸರ ತಂದು ನಮ್ಮ ಭಾಷೆಯಲ್ಲಿ ಸಿನಿಮಾ ಮಾಡಲು ನಿರ್ಣಯ ತೆಗೆದುಕೊಂಡಿದ್ದೆ ‘ಬಾರೊ ಬಾರೊ ಗೆಳಯ’ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಸಂಗೀತ ನಿರ್ದೇಶಕ ಹೊರತುಪಡಿಸಿ ಉಳಿದವರೆಲ್ಲರೂ ಇದೇ ಭಾಗದವರು ಎಂಬುದು ವಿಶೇಷ. ಹೆಣ್ಣಿನ ಕೂಗನ್ನು ಶೀರ್ಷಿಕೆಗೆ ಹೋಲಿಸಿದ್ದಾರೆ. ದುರಂತ ಪ್ರೇಮ ಕತೆಯಲ್ಲಿ ಕುತೂಹಲದ ಅಂಶಗಳು ಇರಲಿದೆ. ಯುವ ಪ್ರೇಮಿಗಳು ಸಂತೋಷ ಹಂಚಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ. ಸ್ಥಳ ....
ದಂಪತಿಗಳು ಇಷ್ಟ ಪಡುವ ಚಿತ್ರ -ಶರಣ್ ನಮ್ಮ ಸಿನಿಮಾ ಈ ರೀತಿ ಇರುತ್ತದೆಂದು ಮೊದಲು ತೋರಿಸುವುದು ಟೀಸರ್. ಅದರಂತೆ. ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದ ತುಣುಕುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರದರ್ಶನಗೊಂಡಿತು. ನಂತರ ಮಾತನಾಡಿದ ನಾಯಕ ಶರಣ್ ಈ ವೇದಿಕೆ ಭಾವನಾತ್ಮಕವಾಗಿ ಮನಸ್ಸಿಗೆ ತಟ್ಟಿದೆ. ಇದೇ ಜಾಗದಲ್ಲಿ ಮೊದಲ ಚಿತ್ರದ ಡಬ್ಬಿಂಗ್, ಅಯೋಗ್ಯ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಚಿತ್ರಗಳು ಹಿಟ್ ಆಗಿತ್ತು. ಆ ಸಾಲಿಗೆ ಇದು ಸೇರಲಿದೆ ಎನ್ನುವ ಆಶಾಭಾವನೆ ಇದೆ. ಒಂದು ನಿಮಿಷದ ದೃಶ್ಯಗಳ ಹಿಂದೆ ಹತ್ತು ತಿಂಗಳ ಶ್ರಮ, ನೂರಾರು ಜನರು ಬೆವರು ಸುರಿಸಿದ್ದಾರೆ. ....
ಹೆಮ್ಮೆಯ ಸ್ಟಾರ್ ಕನ್ನಡಿಗ ಬಣ್ಣದ ಲೋಕಕ್ಕೆ ಸಾಕಷ್ಟು ಮಂದಿ ಬರುತ್ತಾರೆ. ಕೆಲವರಿಗೆ ಅದೃಷ್ಟ ಖುಲಾಯಿಸುತ್ತದೆ. ಮತ್ತೋಬ್ಬರು ಸೈಕಲ್ ಹೊಡೆಯುತ್ತಾ ಇರುತ್ತಾರೆ. ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ ಎಂದು ಹೇಳಿಕೊಂಡರುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ. ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ....
ವೇದಿಕೆ ಒಂದು ಕಾರ್ಯಕ್ರಮ ಮೂರು ‘ಏ ಸೋನಾ’ ಮ್ಯೂಸಿಕ್ ಆಲ್ಬಂದಲ್ಲಿ ರಘುಪಡುಕೋಟೆ ಕಾಣಿಸಿಕೊಂಡಿದ್ದ ವಿಡಿಯೋ ಗೀತೆ ಅನಾವರಣ ಸಮಯದಲ್ಲಿ ‘ಯಾರ್ ಮಗ’ ಚಿತ್ರದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಈಗ ಸದರಿ ಚಿತ್ರದ ಮೊದಲ ಹಂತದ ಪ್ರಚಾರಕ್ಕಾಗಿ ಟ್ರೈಲರ್, ನಾಯಕನ ಹುಟ್ಟುಹಬ್ಬ ಮತ್ತು ೨೦ ಕಲಾವಿದರ ಅಡಿಷನ್ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಸುರೇಶ್‌ರಾಜ್ ಮತ್ತು ನಟ ಗಣೇಶ್‌ರಾವ್ ಸಾರಥ್ಯದಲ್ಲಿ ಆಯ್ಕೆಗೊಂಡಿದ್ದವರು ಹಾಜರಿದ್ದರು. ನಿರ್ದೇಶಕರು ಮಾತನಾಡಿ ೯೦ರ ದಶಕದ ಕತೆಯಲ್ಲಿ ತಾಯಿ-ಮಗನ ಬಾಂದವ್ಯ ಹಾಗೂ ಭೂಗತಲೋಕದ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ....
ಪೈರಸಿಯಿಂದ ಸಿಂಗನಿಗೆ ಬೇಸರ ಕಮರ್ಷಿಯಲ್ ಆಕ್ಷನ್ ಚಿತ್ರ ‘ಸಿಂಗ’ ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಒಂದು ಕಡೆಯಾದರೆ, ಎರಡೇ ದಿನದಲ್ಲಿ ಸಿನಿಮಾವು ಪೈರಸಿಯಾಗಿರುವುದು ನೋವಿನ ಸಂಗತಿಯಾಗಿದೆ ಎಂದು ನಿರ್ಮಾಪಕ ಉದಯ್.ಕೆ.ಮೆಹ್ತಾ ಸಂತೋಷಕೂಟದಲ್ಲಿ ಮಾತನಾಡುತ್ತಾ ಸುದ್ದಿಯನ್ನು ಖಚಿತ ಪಡಿಸಿದರು.. ಅವರು ಹೇಳುವಂತೆ ೨೩೬ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿ.ಸಿ ಸೆಂಟರ್‌ಗಳಲ್ಲಿ ಗಳಿಕೆ ಚೆನ್ನಾಗಿ ಬರುತ್ತಿದೆ. ಪೈರಸಿ ಎನ್ನುವ ಪೆಡಂಭೂತದಿಂದ ಹೆಚ್ಚು ಪ್ರಚಾರ ಸಿಕ್ಕಿದ್ದರೂ ಆದಾಯ ಕಡಿಮೆಯಾಗಿದೆ. ಸೈಬರ್ ಕ್ರೈಮ್‌ಗೆ ದೂರು ನೀಡಿದಾಗ, ಅಲ್ಲಿನ ....
ಕುತೂಹಲದ ಮರ್ಡರ್-೨ ಕೊಲೆ ಎಂದ ಮೇಲೆ ಅದು ಮರ್ಡರ್ ಎನ್ನುವುದು ತಿಳಿದಿದೆ. ಈಗ ಅಂತಹುದೆ ಹಸರಿನಲ್ಲಿ ‘ಮರ್ಡರ್-೨’ ಎನ್ನುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಭಾಗ-೧ ಸಿನಿಮಾಕ್ಕೆ ಕತೆ,ನಿರ್ದೇಶನ,ನಿರ್ಮಾಣ ಮಾಡಿರುವ ಮಂಡ್ಯಾನಾಗರಾಜು ಭಾಗ-೨ಕ್ಕೂ ಇದೇ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಹಾಗೆ ಇವರದು ನಿರ್ದೇಶಕ, ನಿರ್ಮಾಪಕನಾಗಿ ಹದಿನಾಲ್ಕನೇ ಚಿತ್ರವಾಗಿರುವುದು ವಿಶೇಷ. ಸಂಪೂರ್ಣ ಮನರಂಜನೆ ಇರುವ ಕಾರಣ ಯಾವುದೇ ರೀತಿಯ ಹಾಡುಗಳು ಇರುವುದಿಲ್ಲ. ಗ್ರಾಮೀಣ ಭಾಗದ ಕತೆಯಲ್ಲಿ ಹುಡುಗಿ ಮನೆಯವರನ್ನು ಎದುರು ಹಾಕಿಕೊಂಡು ಅಕೆಯನ್ನು ಕರೆದುಕೊಂಡು ಹೋದಾಗ ದೂರದ ಸ್ಥಳದಲ್ಲಿ ಘಟನೆ ....
ಮಹಿರಾ ನೋಡಲು ಕಾರಣಗಳು ಆಕ್ಷನ್, ಥ್ರಿಲ್ಲರ್‌ನಿಂದ ಕೂಡಿರುವ ‘ಮಹಿರಾ’ ಸಿನಿಮಾ ನೋಡಲು ನಿರ್ದೇಶಕ ಮಹೇಶ್‌ಗೌಡ ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಕತೆ,ಚಿತ್ರಕತೆ. ಲಂಡನ್ ಕನ್ನಡಿಗರು ಸೇರಿಕೊಂಡು ಹಣ ಹೂಡಿದ್ದಾರೆ. ಅನುಭವ ಇರುವ ತಂತ್ರಜ್ಘರು ಕೆಲಸ ಮಾಡಿರುವುದು. ಹೊಸ ರೀತಿಯ ಸಾಹಸ ಇರಲಿದೆ. ಮಧ್ಯ ವಯಸ್ಸಿನ ತಾಯಿ ಡ್ಯೂಪ್‌ಬಳಸದೆ ಫೈಟ್ ಮಾಡಿದ್ದಾರೆ. ಇದುವರೆಗೂ ನೋಡಿರದ ಅಮ್ಮ-ಮಗಳ ಬಾಂದವ್ಯ ತೋರಿಸಲಾಗಿದೆ. ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಕತೆ ಕುರಿತು ಹೇಳುವುದಾದರೆ ಶೀರ್ಷಿಕಯು ಸಂಸ್ಕ್ರತ ....
ಪ್ರಾರಂಭ ರಾಕ್ ಮುಕ್ತಾಯ ಶಾಕ್ ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್. ಇದನ್ನು ಕನ್ನಡದಲ್ಲಿ ಮೇಲಿನಂತೆ ಹೇಳುತ್ತಾರೆ. ‘ಜರ್ಕ್’ ಚಿತ್ರದ ಅಡಿಬರಹದಲ್ಲಿ ಇದನ್ನೆ ಹೇಳಲಾಗಿದೆ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕವಾಗಿ ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿಗೆ ಹೊಸ ಅನುಭವ. ಇವರಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಬಿಡುವಿನ ಸಮಯದಲ್ಲಿ ೨೫೦೦ ಕವಿತೆಗಳನ್ನು ಬರೆದಿದ್ದಾರೆ. ಮುಂದೆ ಗುರುಗಳು ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ....
ಹಾರರ್ ಕಾಮಿಡಿ ಸಮ್ಮಿಲನ ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ‘ಮನೆ ಮಾರಾಟಕ್ಕಿದೆ’ ಅಡಿ ಬರಹದಲ್ಲಿ ದೆವ್ವಗಳೇ ಎಚ್ಚರಿಕೆ ಎಂದು ಹೇಳಿಕೊಂಡಿರುವ ಚಿತ್ರದಲ್ಲಿ ಇವರೆಡು ಒಂದರ ನಂತರ ಸನ್ನಿವೇಶಗಳಲ್ಲಿ ಮೂಡಿಬಂದಿದೆ. ಶಶಿರ, ಶ್ರೀಕಂಠ, ಶ್ರಾವಣಿ ಸುಬ್ರಮಣಿ, ಪಟಾಕಿ ಚಿತ್ರಗಳ ನಿರ್ದೇಶಕ ಮಂಜುಸ್ವರಾಜ್ ಈ ಬಾರಿ ಎರಡು ಆಂಶಗಳನ್ನು ಸೇರಿಸಿಕೊಂಡು ಕತೆ ಹಣೆಯಲು ತೆಲುಗು ಚಿತ್ರ ಸ್ಪೂರ್ತಿ ಎನ್ನುತ್ತಾ ವಿವರ ನೀಡಲಿಲ್ಲ. ಬಾರ್‌ನಲ್ಲಿ ಕ್ಯಾಶಿಯರ್ ಆಗಿರುವ ಚಿಕ್ಕಣ್ಣ, ಎಣ್ಣೆ ಪ್ರಿಯಾ ಸಾಧುಕೋಕಿಲ, ....
ಗಾಂಧೀಜಿ ಬಾಲ್ಯ ನೆನಪಿಸುವ ಚಿತ್ರ ಮಹಾತ್ಮಗಾಂಧಿ ಬಾಲ್ಯ ಕುರಿತಾದ ‘ಮೋಹನದಾಸ’ ಚಿತ್ರದ ಕೊನೆ ಹಂತದ ಚಿತ್ರೀಕರಣವು ಬೆಂಗಳೂರಿನ ಚಾಮರಾಜಪೇಟೆಯ ೧೧೫ ವರ್ಷದ ಹಳೆಯ ಮನೆಯಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ವಿವಿರಗಳನ್ನು ತಿಳಿಸುವ ಸಲುವಾಗಿ ಮಾದ್ಯಮದವರನ್ನು ಕರೆಸಿಕೊಳ್ಳಲಾಗಿತ್ತು. ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ಬಾಲಕ ಗಾಂಧೀಜಿ ತಂದೆಗೆ ತಪ್ಪನ್ನು ಒಪ್ಪಿಕೊಂಡು ಪತ್ರ ನೀಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ತಾತ್ಕಾಲಿಕವಾಗಿ ಬ್ರೇಕ್ ನೀಡಿದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಈ ನಿಟ್ಟಿನಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಹೇಳಿಕೊಂಡ ಮಾತುಗಳು ಇಲ್ಲಿವೆ. ....
ಯಾನ ಗೆಲುವಿನ ಪಯಣ ವಿಜಯಲಕ್ಷೀಸಿಂಗ್ ನಿರ್ದೇಶನ, ಜೈಜಗದೀಶ್ ನಿರ್ಮಾಣ, ಇವರ ಮೂವರು ಪುತ್ರಿಯರು ನಟಿಸಿರುವ ‘ಯಾನ’ ಚಿತ್ರವು ಶುಕ್ರವಾರದಂದು ಬಿಡುಗಡೆಗೊಂಡಿದೆ. ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಬರುತ್ತಿದೆ ಎಂದು ನಿರ್ದೇಶಕರು ಸಂತೋಷಕೂಟದಲ್ಲಿ ಮಾತನಾಡುತ್ತಿದ್ದರು. ಅವರ ಪ್ರಕಾರ ಮೊದಲ ದಿನ ಶೇಕಡ ೪೦, ಎರಡನೆ ದಿನಕ್ಕೆ ೬೦, ಭಾನುವಾರದಂದು ೭೦ರಷ್ಟು ಗಳಿಕೆ ಬಂದಿದೆ. ಜನರು ಚಿತ್ರ ವೀಕ್ಷಿಸಿ ಬೇರೆಯವರನ್ನು ಚಿತ್ರಮಂದಿರಕ್ಕೆ ಕಳುಹಿಸುತ್ತಿದ್ದಾರೆ. ಯುವಜನಾಂಗದ ಕತೆಯಾಗಿರುವುದರಿಂದ ಹುಡುಗರು,ಹುಡುಗಿಯರು ಬರುತ್ತಾರೆಂದು ತಿಳಿಯಲಾಗಿತ್ತು. ವಿಸ್ಮಯ ಎನ್ನುವಂತೆ ವಯಸ್ಸಾದವರು ಮೊಮ್ಮಕ್ಕಳೊಂದಿಗೆ ಚಿತ್ರ ....