ಪ್ರಜ್ವಲ್ ಹುಟ್ಟುಹಬ್ಬಕ್ಕೆ ೨ನೇ ಟೀಸರ್ ಬಿಡುಗಡೆ ಪ್ರಜ್ವಲ್ದೇವರಾಜ್ ಅಭಿನಯಿಸುತ್ತಿರುವ ‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದ ಮೊದಲ ಟೀಸರ್ ಕಳೆದ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಕೊನೆ ಹಂತದ ಚಿತ್ರೀಕರಣ ಬಾಕಿ ಇರಲಿದ್ದು, ಈ ಬಾರಿ ಅವರ ಹುಟ್ಟಹಬ್ಬ ಮುನ್ನ ದಿನದಂದು ಎರಡನೇ ಟೀಸರ್ ತಾಜ್ ವಿವಾಂಟಾದಲ್ಲಿ ಅನಾವರಣಗೊಂಡಿತು. ಪ್ರಜ್ವಲ್ ಮಾತನಾಡಿ ಹನ್ನೆರಡು ವರ್ಷದ ಅನುಭವ, ೩೦ನೇ ಚಿತ್ರದಲ್ಲಿ ನಟಿಸಲಾಗುತ್ತಿದೆ. ಕ್ಯಾಮಾರಾ ಮುಂದೆ ನಿಲ್ಲಲು ಭಯ ಆಗುವುದಿಲ್ಲ. ಆದರೆ ವೇದಿಕೆ ಮುಂದೆ ಮೈಕ್ ಹಿಡಿದಾಗ ಏನು ಹೇಳುವುದೆಂದು ತಿಳಿಯುವುದಿಲ್ಲ. ಇದೇ ಹೆಸರಿನ ....
ತಿರುಡನ್ ಪೋಲೀಸ್ ಇಲ್ಲಿ ಕಿಲಾಡಿ ಪೋಲೀಸ್ ೨೦೧೫ರ ತಮಿಳು ಚಿತ್ರ ಸ್ಯಾಂಡಲ್ವುಡ್ದಲ್ಲಿ ‘ಕಿಲಾಡಿ ಪೋಲೀಸ್’ ಹೆಸರಿನಲ್ಲಿ ಶೂಟಿಂಗ್ ಮುಗಿಸಿ ಚಿತ್ರಿಕರಣೋತ್ತರ ಕೆಲಸದಲ್ಲಿ ಬ್ಯುಸಿ ಇದೆ. ಶ್ರೀ ಸತ್ಯ ನಾರಾಯಣ ಸಿನಿಮಾಕ್ಕೆ ಒಂದೇ ಸಲ ಹದಿನಾರು ಪಾತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದ ಹರೀಶ್ರಾಜ್ ಕಾಲಿವುಡ್, ಮಾಲಿವುಡ್ನ ದೊಡ್ಡ ಚಿತ್ರಗಳಲ್ಲಿ ಬ್ಯುಸಿ ಇದ್ದರು. ಆದರೂ ಭಾಷೆಯ ಅಭಿಮಾನದಿಂದ ವರ್ಷಗಳ ನಂತರ ಇವರು ನಾಯಕ,ಎರಡು ಗೀತೆಗೆ ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಪೋಲೀಸ್ ಕ್ವಾರ್ಟಸ್ದಲ್ಲಿ ನಡೆಯುವ ಕತೆಯಲ್ಲಿ ತಂದೆ ಮಗನ ಬಾಂದವ್ಯ ....
ಬುದ್ದಿಮಾಂದ್ಯರು ದೇವರ ಮಕ್ಕಳು ಪ್ರಯೋಗಾತ್ಮಕ ಚಿತ್ರ ‘ಜ್ಘಾನಂ’ ಚಿತ್ರವು ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....
ಫ್ಯಾಂಟಸಿ ಚಿತ್ರ ಕಾಣದಂತೆ ಮಾಯವಾದನು ಬಾಹುಬಲಿ ನಿರ್ದೇಶಕ ರಾಜಮೌಳಿ ಅಭಿಮಾನಿಯಾಗಿರುವ ರಾಜ್ ಪತ್ತಿಪಾಟಿ ಅವರದೇ ರೀತಿಯ ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ನಾಲ್ಕು ವರ್ಷಗಳ ಹಿಂದೆ ಶುರು ವಾಗಿದ್ದ ಚಿತ್ರವು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ರಮ್ಮಿ ಪ್ರಾರಂಭದಲ್ಲೆ ರೂಕ್ಷನೊಬ್ಬನಿಂದ ಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂ ಆತ್ಮ ಅಲ್ಲಿಯೇ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಆತ್ಮಕ್ಕೆ ಪವರ್ ಇರುತ್ತದೆ. ಇದರಲ್ಲಿ ಆ ರೀತಿ ಇರದೆ ತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತು ....
ಯೋಜನಾ ವರದಿ ಸಿದ್ದಪಡಿಸಿ ಚಿತ್ರ ಮಾಡಿ - ನೂತನಅಧ್ಯಕ್ಷರು
ಇತ್ತೀಚೆಗೆ ಹೊಸ ಚಿತ್ರಗಳು ಹೆಚ್ಚು ಬರುತ್ತಿದ್ದರೂಯಶಸ್ಸುಎನ್ನುವುದು ಬಹಳ ಕಡಿಮೆಇದೆಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಡಿ.ಆರ್.ಜೈರಾಜ್ ಮೊದಲ ಕಾರ್ಯಕ್ರಮ ‘ಖನನ’ ಚಿತ್ರದ ೫೦ನೇ ದಿನದ ಸಮಾರಂಭಕ್ಕೆ ಆಗಮಿಸಿದ್ದರು. ಅವರು ಮಾತನಾಡಿಜನರುಆಯ್ಕೆ ಮಾಡಿಚಿತ್ರಮಂದಿರಕ್ಕೆ ಬರುತ್ತಾರೆ.ಸಿಂಗಲ್ ಪರದೆಗಳ ಟಾಕೀಸ್ಗಳು ನಶಿಸಿ ಹೋಗುತ್ತಿದೆ. ಹೊಸದಾಗಿ ಬರುವ ನಿರ್ಮಾಪಕರು,ನಿರ್ದೇಶಕರುಯೋಜನಾ ವರದಿ ಸಿದ್ದಪಡಿಸಿಕೊಂಡು ಬರುವುದಿಲ್ಲ. ಇದರಿಂದ ಸಿನಿಮಾಗಳು ಹೆಚ್ಚು ದಿನ ನಿಲ್ಲದೆ ಬಂಡವಾಳ ಲುಕ್ಸಾನುಆಗುತ್ತಿದೆ. ನುರಿತತಂತ್ರಜ್ಘರು,
ಬುದ್ದಿವಂತರಿಗೆ ಪ್ರವೇಶದಡ್ಡರಿಗೆ ನೋ ಎಂಟ್ರಿ ಚಿತ್ರವನ್ನು ಹೇಗಾದರೂಜನರಿಗೆತಲುಪಿಸಬೇಕೆಂದುಚಿತ್ರತಂಡವುಏನಾದರೂ ಗಿಮಿಕ್ಗಳನ್ನು ಮಾಡುತ್ತಾರೆ.ಇದುಎಷ್ಟರಮಟ್ಟಿಗೆ ಸಪಲವಾಗುತ್ತದೆಂದುಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ.ಆ ಸಾಲಿಗೆ ‘ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರವೊಂದು ಸೇರ್ಪಡೆಯಾಗುತ್ತದೆ. ಸಾಹಿತಿ, ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಮನೋಜ್ಶ್ರೀಹರಿ ಚೊಚ್ಚಲ ಬಾರಿಕತೆ,ಚಿತ್ರಕತೆ, ಗೀತರಚನೆ, ಸಂಗೀತ, ಛಾಯಾಗ್ರಹಣ ಮತ್ತು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪೋಸ್ಟರ್ದಲ್ಲಿ ಈ ಸಿನಿಮಾ ಬುದ್ದಿವಂತರಿಗೆಅರ್ಪಣೆಎಂದು ಹೇಳಲಾಗಿದ್ದು, ಇದರ ಬಗ್ಗೆ ಮಾದ್ಯಮದಿಂದ ಪ್ರಶ್ನೆತೂರಿಬಂತು.ಇದಕ್ಕೆ ಉತ್ತರಿಸಿದ ....
ಲಾಕ್ಆಯ್ತು ಬೀಗ ಬಂತು ಕಳೆದ ವರ್ಷ ಲಾಕ್ಎನ್ನುವಚಿತ್ರವೊಂದುತೆರೆಕಂಡಿತ್ತು. ಈಗ ‘ಬೀಗ’ ಎನ್ನುವ ಸಿನಿಮಾದಚಿತ್ರೀಕರಣವುಕಾಡು ಮಲ್ಲೇಶ್ವರದೇವಸ್ಥಾನದಆವರಣದಲ್ಲಿ ಕುಂಬಳಕಾಯಿ ಒಡೆಯುವುದರೊಂದಿಗೆ ಯಶಸ್ವಿಯಾಗಿ ಶೂಟಿಂಗ್ನ್ನುಪೂರೈಸಿದೆ.ಸೈಂಟಫಿಕ್, ಥ್ರಿಲ್ಲರ್, ಪ್ರೀತಿಕತೆ ಹೊಂದಿದೆ.ರಂಗಎನ್ನುವ ಮುಖ್ಯ ಪಾತ್ರಧಾರಿಯು ಬೀಗವನ್ನುತೆಗೆದಾಗಒಂದಷ್ಟು ರಹಸ್ಯಗಳು,ಜೊತೆಗೆಒಂದುಅತ್ಯಾಚಾರಘಟನೆಯು ತೆರೆದುಕೊಳ್ಳುತ್ತದೆ. ಐದು ನಿಮಿಷ ಕ್ಷಣಿಕ ಸುಖಕ್ಕೋಸ್ಕರದುರುಳರು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.ಅವರುಬದಲಾಗಬೇಕನ್ನುವ ಸಂದೇಶಇರಲಿದೆ.ಪಟ್ಟಣದ ಹಿನ್ನಲೆಯಲ್ಲಿ ನಡೆಯಲಿರುವುದರಿಂದಕ್ಯಾಚಿಇರಲೆಂದುಇದೇ ಹೆಸರನ್ನು ....
ಸಂಯಮದ ಸಂಹಿತಾವಿನ್ಯಾ
ಮಾಡಲಿಂಗ್ ಕ್ಷೇತ್ರದಲ್ಲಿರುವ ನೀರೆಯರು ಚಿತ್ರರಂಗಕ್ಕೆ ಬರುವುದು ಸಾದಾರಣವಾಗದೆ. ಅದರಂತೆ ಸಕಲೇಶಪುರ ‘ಸಂಹಿತಾ ವಿನ್ಯಾ’ ಮಾಡೆಲ್, ನಟಿ ಆಗಬೇಕು ಅನ್ನುವ ಆಸೆಯಿಂದ ಪೋಷಕರ ವಿರೋಧದ ನಡೆವೆಯೂ ಕೊನೆಗೂ ತಮ್ಮ ಅಭಿಲಾಷೆಯನ್ನು ಪೂರೈಸಿಕೊಂಡಿದ್ದಾರೆ. ಬಿಬಿಎಂ, ಡಿಪ್ಲೋಮಾ ಇನ್ ಆಯುರ್ವೇದ ಮುಗಿಸಿ ಬೆಂಗಳೂರಿಗೆ ಬಂದು ಮಾಡಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಂದ ಹಿಮ್ಮುಖವಾಗಿ ನೋಡದೆ ೧೧ ರಾಜ್ಯಗಳು, ೨೭ ಫ್ಯಾಶನ್ ಷೋಗಳಲ್ಲಿ ಪಾಲ್ಗೋಂದು ಒಂದಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದರ ಮಧ್ಯದಲ್ಲೆ ನಟಿಯಾಗಲು ಅಡಿಷನ್ದಲ್ಲಿ ಭಾಗವಹಿಸಿದ್ದಾರೆ.
ಟರ್ನಿಂಗ್ ಪಾಯಿಂಟ್ ಹಾಡುಗಳ ಒಡ್ಡೋಲಗ ಬದುಕಿನಲ್ಲಿ ಎಲ್ಲರಿಗೂ ‘ಟರ್ನಿಂಗ್ ಪಾಯಿಂಟ್’ ಎನ್ನುವುದು ಇರುತ್ತದೆ. ಅದು ಸಕರಾತ್ಮಕ, ನಕರಾತ್ಮಕವಾಗಿರಲು ಬಹುದು. ಇಲ್ಲೊಂದು ಹೊಸ ತಂಡವು ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಮುಗಿಸಿದ್ದಾರೆ. ಪ್ರೀತಿ ಮತ್ತು ತಾಯಿ-ಮಗನ ಬಾಂದವ್ಯ ಕುರಿತಂತೆ ಎರಡು ಟ್ರ್ಯಾಕ್ಗಳಲ್ಲಿ ಕತೆ ಸಾಗುತ್ತದೆ. ಸಿಕ್ಕಿಂದಲ್ಲಿ ಶುರುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಕೊನೆಗೊಳ್ಳುತ್ತದಂತೆ. ತಂಗಿ ಜೊತೆಗೆ ಕಳೆದುಹೋಗಿದ್ದ ಅಣ್ಣ ದೂರದ ರಾಜ್ಯದಲ್ಲಿ ನೆಲೆಸಿರುತ್ತಾನೆ. ಒಂದು ಹಂತದಲ್ಲಿ ತಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಾಗ ಮನೆಯಲ್ಲಿ ಬೇರೆಯವರು ತಾನು ಮಗನೆಂದು ....
ಚಂದ್ರು ಗೆದ್ದರು ಉಪೇಂದ್ರ ಖುಷಿಪಟ್ಟರು ಕಾಮಿಡಿ, ಕುಟುಂಬದ ಕತೆ ಹೊಂದಿರುವ ‘ಐ ಲವ್ ಯು’ ಅನಾಯಾಸವಾಗಿ ಇಪ್ಪತ್ತೈದು ದಿನಗಳನ್ನು ಪೂರೈಸುತ್ತಿರುವುದರಿಂದ ನಿರ್ಮಾಪಕ,ನಿರ್ದೇಶಕ ಆರ್.ಚಂದ್ರು ಸಂಭ್ರಮದ ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದರು. ಬಾಕ್ಸ್ ಆಫೀಸ್ ಲೂಟಿ ಎಂಬ ಫ್ಲೆಕ್ಸ್ ವೇದಿಕೆ ಹಿಂದಗಡೆ ರಾರಾಜಿಸುತ್ತಿತ್ತು. ಚಂದ್ರು ಮಾತ್ರ ಆಸೀನರಾಗದೆ ಬರುತ್ತಿದ್ದ ಗಣ್ಯರನ್ನು ಆಹ್ವಾನಿಸುವುದರಲ್ಲೆ ಬ್ಯುಸಿ ಇದ್ದರು. ಕೊನೆಯಲ್ಲಿ ಅವರಿಗೆ ಮೈಕ್ ತಲುಪಿದಾಗ ಅವರಾಡಿದ ಮಾತಗಳು ಅಂದು ದಾಖಲಾದವು. ಎಲ್ಲರ ಬಾಯಲ್ಲಿ ಚಂದ್ರು ಎಂತಹ ಚಿತ್ರ ಮಾಡುತ್ತಾನೆ. ಕನಕ ಮಾಡಿದಾಗಲೂ ಅದೇ ಊರ ....
ಭಾನು ವೆಡ್ಸ್ ಭೂಮಿ ಗಾನಲಹರಿ ನಟ ರಂಗಾಯಣರಘು ಅಭಿನಯದಲ್ಲಿ ಸೂಪರ್. ಅವರು ಮತ್ತೋಂದು ಹೆಜ್ಜೆ ಮುಂದಕ್ಕೆ ಹೋಗಿ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಗೌಸ್ಪೀಸ್ ಸಾಹಿತ್ಯದ ‘ಕಲರ್ ಕಲರ್ ಕನಸುಗಳು’ ಗೀತೆಯನ್ನು ಹಾಡುವುದರೊಂದಿಗೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ಕಲಾವಿದರ ಸಂಘದಲ್ಲಿ ಆಡಿಯೋ ಸಿಡಿ ಬಿಡುಗಡೆ, ಮೂರು ಹಾಡುಗಳನ್ನು ತೋರಿಸಲಾಯಿತು. ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಜಿ.ಕೆ.ಆದಿ ಮಾತನಾಡಿ ಪಾತ್ರಗಳಿಗೆ ಯಾವುದೇ ಅಡಿಪಾಯವಿಲ್ಲ. ನಾವುಗಳು ಹೊರಗಡೆ ಬಂದಾಗ ಏನೇನು ಸಮಸ್ಯೆ ಎದುರಿಸುತ್ತೇವೆ. ಹುಡುಗ-ಹುಡುಗಿ, ಯುವ ಜನಾಂಗ, ವಿದ್ಯಾರ್ಥಿ, ಮದುವೆ ....
ಯಾನದಲ್ಲಿ ಯಶ್ ನೆನಪಿನ ಮೊಗ್ಗಿನ ಮನಸು ವಿಜಯಲಕ್ಷೀಸಿಂಗ್ ತಮ್ಮ ತ್ರಿವಳಿ ಮಕ್ಕಳಿಗಾಗಿ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ‘ಯಾನ’ ಚಿತ್ರದ ಟ್ರೈಲರ್ನ್ನು ಯಶ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಮೇಡಂ ಮೂವರು ಕುಡಿಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತುಣುಕುಗಳನ್ನು ನೋಡಿದಾಗ ಮೊಗ್ಗಿನ ಮನಸು ಚಿತ್ರವು ನೆನಪಿಗೆ ಬರುತ್ತದೆ. ಆಗ ತಾನೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗಿಯರ ಮನಸಿನ ಭಾವನೆಗಳನ್ನು ಆಧರಿಸಿದ ಕತೆಯಾಗಿತ್ತು. ನವಿರಾದ ಪ್ರೀತಿಕತೆ, ಹುಡುಗ-ಹುಡುಗಿಯರ ಕನಸುಗಳು, ಕಾಲೇಜು ದಿನಗಳು ಕುರಿತಂತೆ ಹೇಳಲಾಗಿತ್ತು. ಅಂತಹುದೇ ಸನ್ನಿವೇಶಗಳು ಇದರಲ್ಲೂ ....
ನಾಲ್ಕು ಕತೆ ಒಂದು ಅಂತ್ಯ ನಾಲ್ಕು ಕತೆಗಳು ಒಂದಕ್ಕೊಂದು ಸಂಬಂದವಿರುವುದಿಲ್ಲ. ಒಂದೊಂದು ಸನ್ನಿವೇಶಗಳು ಒಂದದಾಗ ಅವು ದಾರಿ ಮಾಡಿಕೊಡುವುದನ್ನು ‘ನನ್ನ ಪ್ರಕಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿರುವ ಕಾರಣ ಚಿತ್ರತಂಡವು ಮಾದ್ಯಮದ ಮುಂದೆ ಹಾಜರಾಗಿ ವಿಷಯಗಳನ್ನು ಹಂಚಿಕೊಂಡರು. ಮೂಲತ: ವಿಶುಯಲ್ ಎಫೆಕ್ಟ್ದಲ್ಲಿ ಪರಿಣಿತರಾಗಿರುವ ವಿನಯ್ಬಾಲಾಜಿ ಕಿರುಚಿತ್ರ ಮಾಡುವ ಸಂದರ್ಭದಲ್ಲಿ ಸದರಿ ಕತೆ ಹೊಳೆದಿದ್ದರಿಂದ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಇಂದು ನಾವುಗಳು ಏನೇ ಹೇಳಬೇಕಾದರೂ ಶೀರ್ಷಿಕೆಯಂತೆ ಶುರು ಮಾಡುತ್ತಾರಂತೆ. ಅದಕ್ಕಾಗಿ ಕ್ಯಾಚಿ ಇರಲೆಂದು ಇದೇ ....
ವಿನೂತನ ಹೆಸರು ಕಿರು ಮಿನ್ಕಣಜ ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ಸೆನ್ಸಾರ್ ಅಂಗಳದಲ್ಲಿದೆ. ಪ್ರಚಾದರ ಮೊದಲ ಹಂತವಾಗಿ ಒಂದು ಹಾಡು ಅನಾವರಣಗೊಂಡಿತು. ಇಲ್ಲಿ ಮಾತನಾಡಿದ ನಿರ್ದೇಶಕ ಎಂ.ಮಂಜು ಈ ಪದವು ಇಂಗ್ಲೀಷಿನಲ್ಲಿ ಇರಲಿದ್ದು, ಕನ್ನಡದಲ್ಲಿ ಯಾರು ಬಳಸಿಲ್ಲ. ಕ್ಯಾಚಿ ಇರಲೆಂದು ಇದನ್ನೇ ಉಪಯೋಗಿಸಲಾಗಿದೆ. ಇದರ ಬಗ್ಗೆ ಹೇಳಿದರೆ ಕತೆಯ ಸಾಲನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಸೆಸ್ಪನ್ಸ್, ಥ್ರಿಲ್ಲರ್ ಜೊತೆಗೊಂದು ಸುಂದರ ಪ್ರೇಮಕತೆ ಇರಲಿದೆ. ಒಂದು ವಸ್ತುವಿನ ಮೇಲೆ ....
ಶೀರ್ಷಿಕೆ ಹಳೇದು ಕತೆ ಹೊಸದು ಚಂದನವನದಲ್ಲಿ ಒಂದು ಹೆಸರಿನ ಚಿತ್ರವು ಹಿಟ್ ಆದಕೂಡಲೆ ಅದೇ ಶೀರ್ಷಿಕೆಯಲ್ಲಿ ಚಿತ್ರಗಳು ಬರುವುದು ವಾಡಿಕೆಯಾಗಿದೆ. ಆ ಸಾಲಿಗೆ ‘ತಾಜ್ಮಹಲ್-೨’ ಸೇರ್ಪಡೆಯಾಗಿದೆ. ಆರ್.ಚಂದ್ರು ನಿರ್ದೇಶನದ ‘ತಾಜಮಹಲ್’ದಲ್ಲಿ ಅಜಯ್ರಾವ್,ಪೂಜಾಗಾಂಧಿ ನಟಿಸಿದ್ದು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಹಾಗಂತ ಇದೇ ಕತೆಯಾಗಿರದೆ ಪೊಲ್ಲಾಚಿಯಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ಮರ್ಯಾದೆ ಹತ್ಯೆ ಪ್ರೀತಿ ಕತೆ ಇರುವ ಕಾರಣ ‘ಜೀವ ಬಿಡುವೆ ನಾ ನಿನಗಾಗಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ರಿಯಲ್ದಲ್ಲಿ ಅವನು ಜೈಲಿನಲ್ಲಿದ್ದರೆ, ಆಕೆ ಎಲ್ಲಿದ್ಧಾಳೆ ಎಂಬುದು ....
ಆದಿ ಲಕ್ಷೀ ಪುರಾಣ ಹಾಡುಗಳ ಸಮಯ ನಟಿ ರಾಧಿಕಾಪಂಡಿತ್ ಮದುವೆ ನಂತರ ಒಪ್ಪಿಕೊಂಡಿರುವ ‘ಆದಿ ಲಕ್ಷೀ ಪುರಾಣ’ದಲ್ಲಿ ಸದಾ ಕೆಳವರ್ಗದ ಜನರ ಪರ ಮಾತನಾಡುತ್ತಾ, ಅವರನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸಕ್ತ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಕಾಲೇಜು ಹುಡುಗರು ಮಾದಕ ವ್ಯಸನಕ್ಕೆ ದಾಸರಾಗುವುದು. ಇದರಿಂದ ಯುವ ಜನಾಂಗವು ಕೆಟ್ಟದಾರಿಗೆ ಹೋಗುತ್ತಿದೆ. ಇದೆಲ್ಲಾದಕ್ಕೆ ಕಡಿವಾಣ ಹಾಕಿ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದೇ ಚಿತ್ರದ ಸಾರಾಂಶವಾಗಿದೆ. ರಂಗಿತರಂಗ ಖ್ಯಾತಿಯ ನಿರೂಪ್ಭಂಡಾರಿ ನಾಯಕನಾಗಿ ಮೂರನೇ ಸಿನಿಮಾ. ಆದಿಯಾಗಿ ....
ಹಳೇ ಡವ್ಗಳನ್ನು ನೆನಪಿಸುವ ಚಿತ್ರ ಪ್ರತಿಯೊಬ್ಬರಿಗೂ ಹರೆಯದ ವಯಸ್ಸಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಯಾರಬ್ಬೋರ ಮೇಲಾದರೂ ಕ್ರಷ್ ಆಗಿರುತ್ತದೆ. ಅದು ಸಹಿ-ಕಹಿಯಾಗಿರಬಹುದು. ಅಂತಹ ನೆನಪುಗಳ ಕೊಂಡಿಗಳನ್ನು ‘ಹಳೆ ಡವ್ ನೆನಪಲ್ಲಿ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ರಚನೆ, ನಿರ್ದೇಶನ ಮಾಡುತ್ತಿರುವ ಮಾರುತಿ.ಟಿ ಅವರಿಗೆ ಹೊಸ ಅವಕಾಶ. ಪ್ರೀತಿಯ ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ನಕುಲ್ಗೌಡ ನಾಯಕನಾಗಿ ಎರಡನೆ ಅನುಭವ. ಮೂವರು ನಾಯಕಿಯರು ಇರುವುದು ವಿಶೇಷ. ಒಂದು ಕಂತಿನಲ್ಲಿ ಸೂಫಿಯಾ ಹುಡುಗಿಯ ಸೂಕ್ಷ ಪ್ರೇಮಕತೆ ಇರುವ ಕಾರಣ ಸೂಕ್ತ ಕಲಾವಿದೆಯನ್ನು ....
ಅಭಿಮಾನಿಯ ಅಭಿಮಾನದ ಹಾಡುಗಳು ಶಂಕರ್ನಾಗ್ ಅಭಿಮಾನಿ ಇಡೀ ಭಾರತದಲ್ಲಿ ಇದ್ದಾರೆಂದು ರಕ್ಷಿತ್ಶೆಟ್ಟಿ ‘ಫ್ಯಾನ್’ ಸಿನಿಮಾದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಹನ್ನೊಂದು ವರ್ಷದಲ್ಲಿ ೮೧ ಚಿತ್ರಗಳು, ೩೫ ಕಂತುಗಳ ಮಾಲ್ಗುಡಿ ಡೇಸ್ನ್ನು ಜನರಿಗೆ ನೀಡಿದ್ದ ಅವರ ಸಾಧನೆಯನ್ನು ಎಂದಿಗೂ ಮರೆಯಲಾಗದು. ಅವರಿಗೆ ನಮ್ಮಂತವನ್ನು ಹೋಲಿಸಬಾರದು. ಅವರಿಂದ ಪ್ರೇರಣೆ ಪಡೆದಿದ್ದೇವೆ ಎನ್ನಬಹುದೆಂದು ಹೇಳಿದರು. ಸಿನಿಮಾ ಕುರಿತು ಹೇಳುವುದಾದರೆ ಪ್ರತಿ ದಿನ ಕಡಿಮೆ ಎಂದರೂ ಎಲ್ಲಾ ಚಾನಲ್ಗಳಲ್ಲಿ ೫೦ಕ್ಕೂ ಹೆಚ್ಚು ಸೀರಿಯಲ್ಗಳು ಪ್ರಸಾರವಾಗುತ್ತಿದ್ದು, ಇದನ್ನು ನೋಡುವ ಒಂದು ಬಳಗವಿದೆ. ....
ಬಹದ್ದೂರ್ ಚೇತನ್ ಕತೆಗೆ ಧನ್ವೀರ್ ಅಭಿನಯ ಕಮರ್ಷಿಯಲ್ ಚಿತ್ರ ‘ಬಜಾರ್’ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಧನ್ವೀರ್ ಎರಡನೆ ಸಿನಿಮಾ ಯಾವುದೆಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಉತ್ತರ ಸಿಕ್ಕಿದೆ. ಭರ್ಜರಿ,ಬಹದ್ದೂರ್ ಚಿತ್ರಗಳ ನಿರ್ದೇಶಕ ಚೇತನ್ಕುಮಾರ್ ಇವರಿಗಾಗಿಯೇ ಫ್ಯಾಮಲಿ ಎಂಟರ್ಟೈನ್ ಕುರಿತಾದ ಕತೆಯನ್ನು ಬರೆದಿದ್ದಾರೆ. ಒನ್ ಲೈನ್ ಹೇಳಿದ್ದು, ಅದಕ್ಕೆ ಇವರಿಂದ ಹಸಿರು ನಿಶಾನೆ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಆಕ್ಷನ್, ಫೈಟ್, ಕುಟುಂಬ ನೋಡುವಂತಹ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ. ಪಾತ್ರಕ್ಕಾಗಿ ....
ಸ್ಯಾಂಡಲ್ವುಡ್ ಪದ್ಮಾವತಿ ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಚಿತ್ರವು ಯಶಸ್ಸು ಕಂಡಿತ್ತು. ಈಗ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ತಪ್ಪು ಮಾಡಬೇಡಿ, ಅಷ್ಟಕ್ಕೂ ತಪ್ಪು ಮಾಡಬೇಕೆಂದು ಅನಿಸಿದರೆ, ಮಾಡಿದ ತಪ್ಪನ್ನು ತಪ್ಪಾಯಿತು ಎಂದು ಒಪ್ಪಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ. ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಶಿವಳ್ಳಿಬೆಟ್ಟ, ....