ಬೆಲ್ ಬಾಟಂ ಖುಷಿಯ ಮಾತುಗಳು ರೆಟ್ರೋ ಸ್ಟೈಲ್‌ನಲ್ಲಿ ಸಿದ್ದಗೊಂಡಿದ್ದ ‘ಬೆಲ್ ಬಾಟಂ’ ಚಿತ್ರವನ್ನು ಜನರು ಸ್ವೀಕಾರ ಮಾಡುತ್ತಾರಾ ಎಂಬ ಭಯ ಕಾಡಿತ್ತು. ಅಂತೂ ಆಚಾರ ವಿಚಾರವಾಗಿ, ವಿಚಾರ ಪ್ರಚಾರವಾಗಿ ಸಾರ್ಥಕತೆ ಸಿಕ್ಕಿದೆ ಎಂದು ನಾಯಕ ರಿಶಬ್‌ಶೆಟ್ಟಿ ಸಂತೋಷಕೂಟದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ ಚಿತ್ರವು ರೆಕಾರ್ಡ್ ಮಾಡುವುದು ಬೇಡ. ಜನರಿಗೆ ತಲುಪಿದರೆ ಸಾಕು ಎಂದು ಕೊಂಡಿದ್ದೇವು. ಧರಣಿ ಕಲಾ ನಿರ್ದೇಶನ ಕಣ್ಣಿಗೆ ಹಬ್ಬ ನೀಡಿದರೆ, ರಘುನಿಡುವಳ್ಳಿ ಸಂಭಾಷಣೆಗೆ ಜನರು ಬಾಯಿ ತೆರೆಯುತ್ತಿದ್ದರು. ಹಿರಿಯರಾದ ಶಿವಮಣಿ, ಯೋಗರಾಜಭಟ್ ಅವರಿಂದ ಪ್ರತಿ ಸಿನಿಮಾದಲ್ಲಿ ಕಲಿಯುವುದು ಸಾಕಷ್ಟು ....
ಉದ್ಯಮಿ ಪ್ರಣವ ಜೊತೆ ನೇಹಾಪಾಟೀಲ್ ವಿವಾಹ
ವರ್ಷದ ಎರಡನೆ ತಿಂಗಳಲ್ಲಿ ಸಾಕಷ್ಟು ನಟಿಯರ ಮದುವೆ ಸುದ್ದಿ ಕೇಳಿಬರುತ್ತಿದೆ. ಈ ಸಾಲಿಗೆ ಯುವ ನಟಿ ನೇಹಾಪಾಟೀಲ್ ಮೊದಲನೆಯವರಾಗಿದ್ದಾರೆ.
ಯಜಮಾನ ಯಾರೆಂದು ತಿಳಿಯಲು ಸಿನಿಮಾ ನೋಡಿ - ದರ್ಶನ್ ಕಳೆದ ಫೆಬ್ರವರಿ೧೯ರಂದು ಚಿತ್ರೀಕರಣ ಶುರುಮಾಡಿದ ‘ಯಜಮಾನ’ ಚಿತ್ರವು ಬಿಡುಗಡೆ ಸಮೀಪ ಇರುವುದರಿಂದ ಅದೇ ದಿನದಂದು ಮೊದಲಬಾರಿ ಮಾದ್ಯಮದ ಎದುರು ತಂಡವು ಹಾಜರಾಗಿತ್ತು. ಸಿನಿಮಾದಲ್ಲಿ ದೇವರಾಜ್ ನಾಯಕ. ಪೋಷಕ ಕಲಾವಿದರೊಂದಿಗೆ ಸಣ್ಣದೊಂದು ಪಾತ್ರ ಮಾಡಿದ್ದೇನೆಂದು ದರ್ಶನ್ ಹೇಳಿ, ಯಜಮಾನ ಯಾರು ಎಂದು ತಿಳಿಯಲು ಸಿನಿಮಾ ನೋಡಬೇಕು. ಹರಿಕೃಷ್ಣ ನನ್ನ ಸಿನಿಮಾಕ್ಕೆ ಒಳ್ಳೆ ಹಾಡುಗಳನ್ನು ಕೊಡುತ್ತಾರೆಂಬ ಆರೋಪ ಇದೆ. ನಿರ್ದೇಶಕ, ನಿರ್ಮಾಪಕರಾದವರು ಕತೆ ಮಾಡುವಾಗ ಸಂಗೀತ ನಿರ್ದೇಶಕರನ್ನು ಕೂರಿಸಿಕೊಳ್ಳದೆ ಏಕಾಏಕಿ ....
ರೈತಾಪಿ ಜನಗಳ ರಣಹೇಡಿ ಯಾವುದೇ ಸರ್ಕಾರ ಬರಲಿ ರೈತರ ಬದುಕು ಅಸನಾಗಿಲ್ಲ. ಇಂತಹುದೆ ಕತೆಯುಳ್ಳ ‘ರಣಹೇಡಿ’ ಚಿತ್ರವೊಂದು ತೆರೆಗೆ ಬರಲು ಸಿದ್ದಗೊಂಡಿದೆ. ಹೊಟ್ಟೆಗೆ ಅನ್ನ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ಅಡಿಬರಹದಲ್ಲಿ ಬಲರಾಮನ ಕಡೆ ನೋಡಿ ಎಂದು ಹೇಳಿಕೊಂಡಿರುವ ಚಿತ್ರವು ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂ ಕಬ್ಬು ಬೆಳೆಗಾರರು ಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ. ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮ ಇರಲಿದೆ. ರೈತ ದೇವೋಭವ, ಗ್ರಾಮೀಣ ಭಾಗದ ಕಲೆಗಳನ್ನು ತೋರಿಸಲಾಗಿದೆ. ಮಂಡ್ಯಾ, ಮದ್ದೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡೇಸ್ ಆಫ್ ಬೋರಪುರ ....
ಸಿನಿಮಾ ನೋಡಲು ನಿರ್ದೇಶಕರು ನೀಡುವ ಕಾರಣಗಳು ವಿಭಿನ್ನ ಕತೆ ಹೊಂದಿರುವ ‘ಯಾರಿಗೆ ಯಾರುಂಟು’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಕೊನೆ ಬಾರಿ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ನಿರ್ದೇಶಕ ಕಿರಣ್‌ಗೋವಿ ಚಿತ್ರ ನೋಡಲು ಹಲವು ಕಾರಣಗಳನ್ನು ಹೇಳುತ್ತಾ ಹೋದರು. ಆಸ್ಪತ್ರೆ, ಗೆಳತನ ಮತ್ತು ಪ್ರೀತಿ ಇವುಗಳನ್ನು ನಿಜ ಜೀವನದಲ್ಲಿ ನೋಡಿದ್ದೇವೆ. ಇವೆಲ್ಲವುಗಳನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಚಿತ್ರಮಂದಿರಕ್ಕೆ ಬಂದಾಗ ಆರು ಹಾಡುಗಳ ದೃಶ್ಯ ಕಾವ್ಯಗಳು, ಕಲಾವಿದರು ಕಣ್ಣಿಗೆ ತಂಪು ಕೊಡುತ್ತದೆ. ದವಖಾನೆಗೆ ಬಂದರೆ ದುಗುಡ, ಸಂಕಟ, ನೋವು ಆಗುವುದುಂಟು. ಇದರಲ್ಲಿ ಸೂಕ್ಷ ....
ಅಂದು ಮೋಷನ್ ಇಂದು ಪ್ರಮೋಷನ್
‘ಕದ್ದು ಮುಚ್ಚಿ’ ಕೊನೆ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ವಸಂತರಾಜ್ ಮಾತನಾಡಿ ಅಗರ್ಭ ಶ್ರೀಮಂತನ ಮಗನಾಗಿ, ಎಲ್ಲವು ಇದ್ದರೂ ಹಿರಿಯರ ಪ್ರೀತಿಯಿಂದ ವಂಚಿತನಾದಾಗ ಒಳ್ಳೆದು, ಕೆಟ್ಟದು ಅಗಬಹುದು. ಅದನ್ನು ಪಡೆಯಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯನ್ನು ನೋಡಿ ಮನಸೋಲುತ್ತಾನೆ. ಮುಂದೆ ಆತನ ಬದುಕು ಎರಡರಲ್ಲಿ ಯಾವುದು ಆಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ಗುರುಗಳು ಆರು ಹಾಡಿಗೆ ಅರ್ಥಪೂರ್ಣ ಸಾಹಿತ್ಯ, ಒಳ್ಳೆಯ ರಾಗ ನೀಡಿದ್ದಾರೆ ಎಂದರು.
ಜನರ ಎದುರು ಸ್ಟ್ರೈಕರ್ ‘ಸ್ಟ್ರೈಕರ್’ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ಮೈಕ್ ತೆಗೆದುಕೊಂಡ ನಿರೂಪಕಿ ಅನುಪಮಾಭಟ್ ಮಾತನಾಡುತ್ತಾ ಏಕಾಏಕಿ ನಿಲ್ಲಿಸಿ, ನೀರು ಕೇಳಿದರು. ಹಾಗೆ ಸುಮ್ಮನೆ ಎಲ್ಲಾ ಕಡೆ ನೋಡುತ್ತಾ ಇದು ಕನಸಾ-ನನಸಾ ಅಂತ ಹೇಳಿದಾಗ ಎಲ್ಲರಿಗೂ ಒಂದು ಕ್ಷಣ ಗಾಬರಿಯಾಗಿತ್ತು. ನಂತರ ಯೆಸ್ ಇದೇ ರೀತಿ ಗೊಂದಲಗಳು, ದುಗಡ ಎಲ್ಲವು ಸಿನಿಮಾದ ಕತೆಯಾಗಿದೆ ಅಂತ ಮುಂದಿನ ಕೆಲಸ ಶುರು ಮಾಡಿದರು. ಬಿಡುಗಡೆ ಹಂತಕ್ಕೆ ಬಂದಿರುವ ಕಾರಣ ಖುಷಿ ಆಗಿದೆ. ಅನಾಥನಾಗಿ ಸೈಕಲಾಜಿಕಲ್ ಸಮಸ್ಯೆ ಇರುವ ಹುಡುಗನಿಗೆ ಪ್ರಾರಂಭದ ಒಂದು ಘಟನೆಯಿಂದ ರೋಚಕತೆ ಸನ್ನಿವೇಶಗಳು ....
ಜಿಮ್ ರಘು ಈಗ ನಾಯಕ ಮಂಡ್ಯಾದಲ್ಲಿ ಇಬ್ಬರು ಪ್ರೀತಿ ಮಾಡಿದ್ದರಿಂದ ಹುಡುಗಿ ಕಡೆಯವರು ಅವನನ್ನು ಕೂಡಿಹಾಕಿ ಎರಡು ಕಣ್ಣುಗಳನ್ನು ತೆಗೆದುಹಾಕಿದ ಘೋರ ಸುದ್ದಿಯು ಹತ್ತು ವರ್ಷಗಳ ಹಿಂದೆ ನಡೆದಿತ್ತು. ಕಳೆದ ವರ್ಷ ಬಿಡುಗಡೆಗೊಂಡ ‘ರಘುವೀರ’ ಚಿತ್ರದ ಕ್ಲೈಮಾಕ್ಸ್‌ದಲ್ಲಿ ಇದನ್ನೆ ಬಳಸಲಾಗಿತ್ತು. ಕುರುಡನ ಹೆಸರು ರಘು ಆಗಿದ್ದು ಈತ ಸದ್ಯ ಜಿಮ್ ನಡೆಸುತ್ತಾ ಜಿಮ್‌ರಘು ಆಗಿ ಸುಖದಿಂದ ಜೀವನ ನಡೆಸುತ್ತಿದ್ದಾರೆ. ಇದನ್ನು ಹೇಳಲು ಪೀಠಿಕೆ ಇದೆ. ಈಗ ‘ಕಡವ’ ಎನ್ನುವ ಸಿನಿಮಾದಲ್ಲಿ ಇವರು ನಾಯಕನಾಗಿ ನಟಿಸುತ್ತಿದ್ದು, ಬಹು ವರ್ಷಗಳಿಂದ ನಟನಾಗಬೇಕೆಂದು ಕನಸು ....
ಟ್ರೈಲರ್ ನೋಡಿ ಜರ್ಕ್ ಆದರು ಶನಿವಾರ ಕಲಾವಿದರ ಸಂಘದಲ್ಲಿ ಟ್ರೈಲರ್ ನೋಡಿದವರು ಒಂದು ಕ್ಷಣ ಜರ್ಕ್ ಆದರು. ಅದು ಆಗಿದ್ದು ‘ಜರ್ಕ್’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕ ಸಮಯದಲ್ಲಿ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿ ಸಿನಿಮಾವನ್ನು ಬಣ್ಣಿಸಿದ ರೀತಿ ಹೀಗಿತ್ತು: ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ೨೫೦೦ ಕವಿತೆಗಳನ್ನು ಬರೆದಿರುವ ನನಗೆ ನಾಲ್ಕು ಗೆಳಯರು ....
ಸುಭಾಷ್ ಶೀರ್ಷಿಕೆ ಚಂಬಲ್ ಆಯ್ತು ದಕ್ಷ ಅಧಿಕಾರಿ ಡಿ.ಕೆ.ರವಿ ಆಧಾರಿತ ಕತೆಯಾಗಿದೆ ಎಂದು ಸುದ್ದಿಯಾಗಿರುವ ‘ಚಂಬಲ್’ ಚಿತ್ರವು ಬಿಡುಗಡೆ ಸನಿಹಕ್ಕೆ ಬರುತ್ತಿರುವುದರಿಂದ ಕೊನೆ ಬಾರಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡಿತು. ಮೈಕ್ ತೆಗೆದುಕೊಂಡ ನೀನಾಸಂಸತೀಶ್ ಎಸ್‌ಎಸ್‌ಎಲ್‌ಸಿ ಓದಿರುವ ನನಗೆ ತೆರೆ ಮೇಲೆ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದು ಖುಷಿ ನೀಡಿದೆ. ನಿಜ ಜೀವನದ ಭಾಷೆ, ವೇಷ,ಗುಣ ಪಾತ್ರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ನಿಷ್ಟಾವಂತ ಅಧಿಕಾರಿ ಸಮಾಜಕ್ಕೆ ಹೇಗೆ ಉಪಕಾರಿಯಾಗುತ್ತಾರೆ ಎಂಬುದನ್ನು ಹೇಳಲಾಗಿದೆ. ಸಚಿವರ ನಂತರ ....
ಆಕ್ಷನ್ ಚಿತ್ರದಲ್ಲಿ ವಿಜಯ್‌ರಾಘವೇಂದ್ರ ಲವರ್‌ಬಾಯ್, ಕುರುಡ, ತ್ಯಾಗಿ, ಮೃಧು ಸ್ವಭಾವದವನಾಗಿ ಕಾಣಿಸಿಕೊಂಡಿದ್ದ ಸ್ಪುರದ್ರೂಪಿ ನಟ ವಿಜಯರಾಘವೇಂದ್ರ ಚೂಚ್ಚಲಬಾರಿ ‘ಯದಾ ಯದಾ ಹೀ ಧರ್ಮಸ್ಯ’ ಚಿತ್ರದಲ್ಲಿ ಆರು ಹೊಡೆದಾಟವನ್ನು ಮಾಡುವುದರೊಂದಿಗೆ ಆಕ್ಷನ್ ಹೀರೋ ಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ. ಮೊದಲ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ನಿರ್ದೇಶಕರು ಕತೆ ಹೇಳಿದಾಗ ಈ ಪಾತ್ರ ನನ್ನಿಂದ ಮಾಡಲು ಸಾದ್ಯನಾ ಅಂತ ಪ್ರಶ್ನೆ ಮಾಡಿದ್ದೆ. ಅವರು ನೀವು ಮಾಡಬಹುದೆಂದು ಧೈರ್ಯ ತುಂಬಿದರು. ಆ ನಂಬಿಕೆಯಿಂದಲೇ ಬೇಷರತ್‌ಆಗಿ ಕ್ಯಾಮಾರ ಮುಂದೆ ನಿಂತಿದ್ದೇನೆ. ದುಡ್ಡಿಗಾಗಿ ....
ಮೊದಲಬಾರಿ ವಿಕಲಚೇತನ ಮಕ್ಕಳ ನಟನೆ ಎಲ್ಲವು ಸರಿಯಾಗಿ ಇದ್ದು ನಟಿಸುವುದೇ ಕಷ್ಟ. ಆದರೆ ‘ಜಕಣಾಚಾರಿ ಅವನ ತಮ್ಮ ಶುಕ್ಲಚಾರಿ’ ಎನ್ನುವ ಚಿತ್ರದಲ್ಲಿ ಇಬ್ಬರು ವಿಕಲಚೇತನ ಮಕ್ಕಳು ಅಭಿನಯಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲು ಎನ್ನಬಹುದಾಗಿದೆ. ಚಾಮರಾಜನಗರದ ಮಹೇಶ್ ಕುರುಡನಾಗಿ ಶುಕ್ಲಚಾರಿ, ಬೆಂಗಳೂರಿನ ಜಯ್ಯದ್ ಎರಡು ಕಾಲುಗಳ ಇಲ್ಲದ ಜಕಣಾಚಾರಿ. ಸಿನಿಮಾ ಕುರಿತು ಹೇಳುವುದಾದರೆ ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನಶೈಲಿಯಲ್ಲಿ ಬದಲಾಗಬಹುದು. ಇವೆಲ್ಲವುಗಳನ್ನು ಬದಿಗಿಟ್ಟು ನೋಡಿದರೆ ವಿಕಲಚೇತನ ಮಕ್ಕಳ ದೇಹ ....
ಹೊಸ ಸಿಡಿದೆದ್ದಗಂಡು ೯೦ರ ದಶಕದಲ್ಲಿ ಟೈಗರ್ ಪ್ರಭಾಕರ್ ಅಭಿನಯದಲ್ಲಿ ‘ಸಿಡಿದೆದ್ದಗಂಡು’ ಚಿತ್ರವೊಂದು ತೆರೆಕಂಡಿತ್ತು. ಇಪ್ಪತ್ತೈದು ವರ್ಷಗಳ ನಂತರ ಇದೇ ಹೆಸರಿನ ಮೇಲೆ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಪ್ರಚಾರದ ಮೊದಲ ಹಂತದವಾಗಿ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾದ್ಯಮದ ಮುಂದೆ ಹಾಜರಾಗಿತ್ತು. ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿರುವ ಎಸ್.ವಿಠಲ್‌ಕುಮಾರ್ ಮಾತನಾಡಿ ಇದೊಂದು ಕಾಲೇಜು ಹುಡುಗರ ಕತೆಯಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಆಗಿದ್ದರಿಂದ ಒಂದು ಸುಳಿವನ್ನು ಹೇಳಿದರೂ ಸಾರಾಂಶ ....
ಡಾಲಿ ಪೋಸ್ಟರ್ ಬಿಡುಗಡೆ ಟಗರು ಚಿತ್ರದಲ್ಲಿ ಖಳನಟನಾಗಿ ಡಾಲಿ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಧನಂಜಯ್‌ಗೆ ಪಾತ್ರವು ಪ್ರಸಿದ್ದಿಯಾಗಿ ಅಂತಹುದೆ ರೋಲ್‌ಗಳು ಸಿಗುತ್ತಿವೆ. ಅದರಂತೆ ಮೊದಲಸಲ, ಎರಡನೆ ಸಲ ನಿರ್ಮಾಣ ಮಾಡಿರುವ ಯೋಗೇಶ್‌ನಾರಾಯಣ್ ೧೮ ತಿಂಗಳ ಕೆಳಗೆ ‘ಡಾಲಿ’ ಹೆಸರಿನ ಚಿತ್ರವನ್ನು ಲಾಂಚ್ ಮಾಡಲು ಸಿದ್ದರಿದ್ದರು. ಸಿನಿಮಾದ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿ ಹಿಂದಿನ ಎರಡು ಸಿನಿಮಾದಂತೆ ಪಂಚವಾರ್ಷಿಕ ಯೋಜನೆ ಆಗುವುದಿಲ್ಲ. ಎಂಟು ತಿಂಗಳ ಒಳಗೆ ಮುಗಿಸಲು ಬದ್ದರಾಗಿದ್ದೇವೆ. ಇಲ್ಲಿಯವರೆಗೂ ೨೫ ಕತೆಗಳನ್ನು ಕೇಳಲಾಗಿ, ೧೮ ನಿರ್ದೇಶಕರುಗಳನ್ನು ಭೇಟಿ ....
ರಿಲೀಸ್ ಆಯ್ತು ಓಂ ಪ್ರೇಮ ಪೋಸ್ಟರ್ ಚಿತ್ರವನ್ನು ಜನರಿಗೆ ತಲುಪಿಸುವ ಚಾಣಾಕ್ಷತೆ ಇರುವುದು ಪ್ರೇಮ್, ಆರ್.ಚಂದ್ರು, ನಾಗಶೇಖರ್ ಸೇರಿದಂತೆ ಕೆಲವರಿಂದ ಮಾತ್ರ ಸಾದ್ಯ. ಅದರಿಂದಲೇ ಇವರ ಸಿನಿಮಾಗಳು ಬಿಡುಗಡೆ ಹಂತಕ್ಕೆ ಬರುವ ಹೊತ್ತಿಗೆ ವೈರಲ್ ಆಗಿರುತ್ತದೆ. ಇವರ ನಡೆಯನ್ನೆ ಹಿಂಬಾಲಿಸುತ್ತಿರುವ ಕೊಪ್ಪಳದ ಅಡವಿಭಾವಿಶರಣ್ ‘ಒಂ ಪ್ರೇಮ’ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯಲಿದ್ದಾರೆ. ನಾಗತ್ತಿಹಳ್ಳಿ ಚಂದ್ರಶೇಖರ್ ಇನ್ನು ಅನೇಕ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಇದೆಯಂತೆ. ಪ್ರಚಾರದ ಹಂತವಾಗಿ ಚಿತ್ರದ ಪೋಸ್ಟರ್ ....
ಆಸ್ತಿಕನಾದರು ರವಿಶಂಕರ್ ರವಿಶಂಕರ್ ಹೆಸರನ್ನು ನೆನಪಿಸಿಕೊಂಡರೆ ತಟ್ಟನೆ ಆರ್ಮುಗಂ ಪಾತ್ರ ಕಣ್ಣಮುಂದೆ ಬರುತ್ತದೆ. ಕಂಪೆಗೌಡದಲ್ಲಿ ಖಳನಟನಾಗಿ ಇದೇ ಹೆಸರಿನಲ್ಲಿ ಗುರುತಿಸಿಕೊಂಡು ಇಂದು ಪ್ರಸಿದ್ದರಾಗಿ ವಿನೂತನ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಅವರು ದೇವರಲ್ಲಿ ಅನುರಕ್ತರಾಗುತ್ತಿದ್ದಾರೆ. ಎಲ್ಲವನ್ನು ಬಿಟ್ಟು ಹೀಗೇಕೆ ಆದರು ಅಂದುಕೊಳ್ಳಬಹುದು. ‘ಸದ್ಗುಣ ಸಂಪನ್ನ ಮಾದವ ೧೦೦%’ ಚಿತ್ರದಲ್ಲಿ ಈ ರೀತಿಯಾಗಿ ನೋಡಬಹುದು. ಅಂದರೆ ಇವರ ಹೆಸರು, ಪಾತ್ರ ಎಲ್ಲವು ಶೀರ್ಷಿಕೆಯಲ್ಲಿ ಹೇಳಲಿದೆ. ಸಾಮಾನ್ಯ ಮನುಷ್ಯನಾಗಿ ದೇವರನ್ನು ಅಪಾರವಾಗಿ ನಂಬುವ, ಇದರಲ್ಲಿ ಭಕ್ರಿ ಪರವಶನಾದರೆ ಏನು ಆಗೋಲ್ಲವೆಂದು ....
ಕನ್ನಡದ ಮೊದಲ ಆಪ್ ಫ್ಲೆಫ್ಲಿಕ್ಸ್ ತಂತ್ರಜ್ಘಾನ ಬೆಳೆದಂತೆ ಪ್ರಚಲಿತ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇಂದಿನ ಯುವ ಜನಾಂಗವು ಯಾವಾಗಲೂ ಫಾಸ್ಟ್ ಅಂತ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋದರೆ ಸಮಯ, ದುಡ್ಡು ವ್ಯರ್ಥವೆಂದು ಭಾವಿಸಿ ಎಲ್ಲವನ್ನು ತಮ್ಮಲ್ಲಿಯೇ ಸಿಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಸುಲಭವಾಗಿ ಸಿಗುವುದು ಟಿವಿ, ಕಂಪ್ಯೂಟರ್, ಮೊಬೈಲ್. ಇವುಗಳ ಮೂಲಕ ತಮಗೆ ಬೇಕಾದ್ದನ್ನು ವೀಕ್ಷಿಸಿ ಖುಷಿ ಪಡುತ್ತಾರೆ. ಈ ಸಾಲಿಗೆ ಸದ್ಯ ಕಣ್ಣ ಮುಂದೆ ಬರುವುದು ಅಮೆಜಾನ್, ನೆಟ್‌ಫ್ಲಿಕ್ಸ್. ಇವರಡು ಸಂಸ್ಥೆಗಳು ಎಲ್ಲಾ ಭಾಷೆಯಲ್ಲಿ ....
ಉತ್ತರ ಕರ್ನಾಟಕ ನೈಜ ಘಟನೆಯ ಜಟ್ಟಿ ಕುಸ್ತಿ ಕುರಿತಂತೆ ಸುದೀಪ್ ನಟನೆಯ ಪೈಲ್ವಾನ್, ದುನಿಯಾ ವಿಜಯ್ ಅಭಿನಯಿಸಲಿರುವ ಸುಲ್ತಾನ್ ಚಿತ್ರಗಳ ಮಧ್ಯೆ ಉತ್ತರ ಕರ್ನಾಟಕದಲ್ಲಿ ನಡೆದ ಘಟನಾವಳಿಯನ್ನು ತೆಗೆದುಕೊಂಡ ‘ಜಟ್ಟಿ’ ಚಿತ್ರವೊಂದು ಸೆಟ್ಟೇರುತ್ತಿದೆ. ಈ ಭಾಗದ ಪೈಲ್ವಾನರಿಗೆ ಸತತವಾಗಿ ಮೂರು ಬಾರಿ ಗೆದ್ದಲ್ಲಿ ಇದೇ ಶೀರ್ಷಿಕೆ ಬಿರುದನ್ನು ನೀಡುತ್ತಾರೆ. ಸದರಿ ಮಣ್ಣಿನ ಕುಸ್ತಿಯು ಹೆಚ್ಚು ಬಿಜಾಪುರದಲ್ಲಿ ಪ್ರಸಿದ್ದಿಯಾಗಿದೆ. ಅಲ್ಲಿರುವ ಲಾಲಿ ಎನ್ನುವ ಹುಡುಗ ಜಟ್ಟಿಯಾಗಿದ್ದು, ಈಗ ನಿಧನ ಹೊಂದಿದ್ದಾರೆ. ಇವರದೆ ಕತೆಯನ್ನು ತಗೆದುಕೊಂಡು ಅದೇ ಮೂಲದವರಾದ ....
ಐತಿಹಾಸಿಕ, ಚರಿತ್ರಾರ್ಹದ ಮಹಾಕಾವ್ಯ ಮಯೂರ, ಬಬ್ರುವಾಹನ ಚಿತ್ರಗಳನ್ನು ನೆನಪಿಸುವ ‘ಮಹಾಕಾವ್ಯ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಶೀರ್ಷಿಕೆಯ ಕುರಿತು ಹೇಳಿಕೊಂಡ ಪರಿ ಹೀಗಿತ್ತು: ಎಸ್‌ಆರ್‌ಕೆ ಪಿಕ್ಚರ‍್ಸ್ ೧೯೯೪ರಲ್ಲಿ ಎದ್ದಿದೆ ಗದ್ದಲ ಚಿತ್ರ ನಿರ್ಮಾಣದ ತರುವಾಯ ಇದೇ ಬ್ಯಾನಡಿನಡಿ ಎರಡನೆ ಪ್ರಯತ್ನ ಮಾಡಲಾಗಿದೆ. ೧೯೬೪ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಶಿವಲಿಂಗ ಮಹಾತ್ಮೆ ಚಿತ್ರಕ್ಕೆ ಕ್ಲಾಪ್ ಬಾಯ್ ಆಗಿ ಸೇರಿಕೊಂಡು ಮುಂದೆ ಗುಬ್ಬಿ ವೀರಣ್ಣ ರಂಗಭೂಮಿಯಲ್ಲಿ ....
ನಿನ್ನ ಗುಂಗಲಿ ವಿಡಿಯೋ ಆಲ್ಬಂ ಡಿನಿ ಸಿನಿ ಕ್ರಿಯೇಶನ್ಸ್ ಅವರ ನೂತನ ಸಂಸ್ಥೆ ‘ಡಿ ಸಿ ರಿಕಾರ್ಡ್ಸ್’ ಸಂಸ್ಥೆಯು ಪ್ರಾರಂಭವಾಗಿದೆ. ಇದರ ಮೂಲಕ ಹಲವು ನೂತನ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುತ್ತಿದ್ದಾರೆ. ಇದರ ಮಾಲೀಕರಾಗಿರುವ ದಿನೇಶ್ ಒಂದು ಕಾಲದಲ್ಲಿ ಚಂದನ್‌ಶೆಟ್ಟಿ ಏನೂ ಇಲ್ಲದ ಸಂದರ್ಭದಲ್ಲಿ ಕರೆದು ಸಹಾಯ ಮಾಡಿದ್ದಾರೆ. ‘ಹಾಳಗೋದೆ’ ಆಲ್ಬಂ ಚಿತ್ರೀಕರಣ ನಡೆಸಲು ಹಣದ ಕೊರತೆ ಉಂಟಾಗಿದೆ. ಇದನ್ನು ಅರಿತು ಲೈಟ್ ಹಾಗೂ ಇತೆರೆ ಉಪಕರಣಗಳನ್ನು ತೆಗೆದುಕೊಳ್ಳಲು ಐವತ್ತು ಸಾವಿರ ರೂಪಾಯಿ ನೀಡಿದ್ದಾರೆ. ಇದರಿಂದ ಹಾಡನ್ನು ಮುಗಿಸಿ, ಎಷ್ಟರ ಮಟ್ಟಿಗೆ ಪ್ರಸಿದ್ದಿಯಾಗಿದೆ ....