ಆಗ ದಾಸ ದರ್ಶನ್ ಈಗ ಮರಿದಾಸ ಭರತ್ ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ.. ನಟ ದರ್ಶನ್ ಗೆ ದಾಸ ಎಂಬ ಹೆಸರು ಬಂದಿದ್ದೇ ಮೆಜೆಸ್ಟಿಕ್ ಚಿತ್ರದಿಂದ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ ಗೆ ಒಳ್ಳೇ ಹೆಸರನ್ನೂ ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ ಮೆಜೆಸ್ಟಿಕ್ ೨ ಹೆಸರಲ್ಲಿ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಆ ಚಿತ್ರ ಸೆಟ್ಟೇರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ....
ಹೊಸ ಚಿತ್ರಕ್ಕೆ ಸಹಿ ಹಾಕಿದ ಕೋಮಲ್‌ಕುಮಾರ್ ‘ನಮೋ ಭೂತಾತ್ಮ’ ಚಿತ್ರದ ಯಶಸ್ಸಿನಿಂದ ಕೋಮಲ್‌ಕುಮಾರ್ ಸದ್ಯ ಬ್ಯುಸಿಯಾಗುತ್ತಿದ್ದಾರೆ. ಒಂದರ ನಂತರ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದು, ಇದರ ಸಾಲಿಗೆ ‘ಕುಟೀರ’ ಸೇರಿಕೊಂಡಿದೆ. ಶ್ರೀ ಬಂಡೆ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಅನೂಪ್ ಆಂಟೋನಿ ನಿರ್ದೇಶನದಲ್ಲಿ, ಕಂಸಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಧುಮರಿಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ನಂತರ ಮಾತನಾಡಿದ ಕೋಮಲ್, ಇದೊಂದು ಹಾರರ್ ಕಾಮಿಡಿ ಕಥೆಯನ್ನು ಹೊಂದಿದೆ. ಕುಟೀರ ಹೆಸರಿನ ಪಾಳು ಬಿದ್ದಿರುವ ಮನೆಯಲ್ಲಿ ....
ಹೊಸ ಕೃಷ್ಣಾ ನೀ ಬೇಗನೆ ಬಾರೋ 80ರ ದಶಕದಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ’ಕೃಷ್ಣಾ ನೀ ಬೇಗನೆ ಬಾರೋ’ ಚಿತ್ರವು ಬಿಡುಗಡೆಗೊಂಡು ಸೂಪರ್‌ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಪ್ರೇಮಿಗಳ ದಿನದಂದು ಬಲಮರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ನಟರಾದ ಅನೀಶ್‌ತೇಜಶ್ವರ್ ಮತ್ತು ಇಶಾನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ನಿರ್ಮಾಪಕರ ಸೋದರ ಹೈದರಬಾದ್ ಉದ್ಯಮಿ ಶ್ರೀನಿಬಾಬು ಪುಲ್ಲೆಟ್ ಕ್ಯಾಮಾರ ಆನ್ ಮಾಡಿದರು. ದುಬೈನ ಎಸ್.ನೀಲಕಂಠ ಮತ್ತು ಚಲಪತಿರಾಜು ಜಂಟಿಯಾಗಿ ನೀಲಕಂಠ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಟಾಲಿವುಡ್‌ನ ಜಿ.ಸೂರ್ಯತೇಜ ....
ಎವಿಡೆನ್ಸ್ ಲಿರಿಕಲ್ ಸಾಂಗ್ ಬಿಡುಗಡೆ ಇಂಟರಾಗೇಶನ್ ರೂಮ್ ನಲ್ಲಿ ನಡೆಯುವ ಕ್ರೈಂ ಕಂಟೆಂಟ್ ಜೊತೆಗೊಂದು ತ್ರಿಕೋನ ಪ್ರೇಮಕಥೆ ಇಟ್ಟುಕೊಂಡು ಪ್ರವೀಣ ಸಿಪಿ. ಆಕ್ಷನ್ ಕಟ್ ಹೇಳಿರುವ ಚಿತ್ರ ಎವಿಡೆನ್ಸ್. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ’ಅಯ್ಯಯ್ಯೋ ಅರೆಮನಕೆ’ ಎಂಬ ಲಿರಿಕಲ್ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ನಡೆಯಿತು. ಶ್ರೀಧೃತಿ ಪ್ರೊಡಕ್ಷನ್ಸ್ ಹಾಗೂ ರೋಷಿರಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್‌ಪ್ರಭು ಕೆ, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರವೀಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ....
*N1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ TPL-3 ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ..ಫೆ.28ರಿಂದ ಶುರು ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ..* *ಮತ್ತೆ ಬಂದೇ ಬಿಡ್ತು N1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ TPL.. ಫೆ.28ರಿಂದ ಮಾ.3ರವೆರೆಗೆ ನಡೆಯಲಿದೆ ಟೆಲಿವಿಷನ್ ಪ್ರೀಮಿಯರ್ ಲೀಗ್* ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕಿರುತೆರೆ ಕಲಾವಿದರ ಕ್ರಿಕೆಟ್ ....
ಕ್ರೀಂ ಟ್ರೇಲರ್ ಬಿಡುಗಡೆ
ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಕ್ರೀಂ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಅಭಿಷೇಕ್ ಬಸಂತ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಡಿ.ಕೆ.ದೇವೇಂದ್ರ ಬಂಡವಾಳ ಹೂಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಗ್ನಿಶ್ರೀಧರ್ ನನಗೆ ನಟನೆಗಿಂತ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಿರ್ಮಾಪಕರ ಒತ್ತಾಯದ ಮೇಲೆ ಬಣ್ಣ ಹಚ್ಚಬೇಕಾಯಿತು. ವಿಷಯವನ್ನು ಕೊನೆವರೆಗೂ ಗೌಪ್ಯವಾಗಿಡಬೇಕೆಂದು ಹೇಳಿದ್ದೆ. ಆದರೆ ತುಣುಕುಗಳಲ್ಲಿ ನನ್ನನ್ನು ತೋರಿಸಿಬಿಟ್ಟಿದ್ದಾರೆ ಎಂದರು.
ಎನ್ನ ಮನದರಸಿ ಅಂತಾರೆ ಜಗ್ಗೇಶ್
ಅನೂಪ್‌ಸೀಳನ್ ಸಂಗೀತ ಮತ್ತು ಧ್ವನಿಯಾಗಿರುವ ‘ಎನ್ನ ಮನದರಸಿ’ ಹಾಡು ‘ರಂಗನಾಯಕ’ ಚಿತ್ರದ್ದಾಗಿದೆ. ನಿರ್ದೇಶಕ ಗುರುಪ್ರಸಾದ್ ಸಾಹಿತ್ಯದಲ್ಲಿ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದಾರೆ. ಇದೇ ಗೀತೆಯ ಲೋಕಾರ್ಪಣೆ ಕಾರ್ಯಕ್ರಮ ಮೊನ್ನೆಯಷ್ಟೇ ನಡೆಯಿತು. ನಾಯಕ ಜಗ್ಗೇಶ್ ಮಾತನಾಡಿ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ. ಆತ ಜಗಮೊಂಡ. ಯಾರ ಮಾತನ್ನು ಕೇಳುವುದಿಲ್ಲ. ಮದವೇರಿದ ಒಂಟಿ ಸಲಗದಂತೆ. ನೋಡುಗರಿಗೆ ಬಾಯಿ ತುಂಬ ನಗು ತರಿಸಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.
ಹೊಸ ಪ್ರತಿಭೆಗಳ ಭಾವತೀರ ಯಾನ
‘ಶಾಖಹಾರಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಮಯೂರ್ ಅಂಬೆಕಲ್ಲು ಮತ್ತು ನಾಯಕನಾಗಿ ನಟಿಸಿರುವ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಭಾವತೀರ ಯಾನ’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಶೈಲೇಶ್‌ಅಂಬೆಕಲ್ಲು, ಲಕ್ಷಣ.ಬಿ.ಕೆ ನಿರ್ಮಾಣ ಮಾಡಿರುವುದು ಹೊಸ ಅನುಭವ.
ಹೊಸ ಪ್ರತಿಭೆಗಳ ಭಾವತೀರ ಯಾನ
‘ಶಾಖಹಾರಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಮಯೂರ್ ಅಂಬೆಕಲ್ಲು ಮತ್ತು ನಾಯಕನಾಗಿ ನಟಿಸಿರುವ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಭಾವತೀರ ಯಾನ’ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಶೈಲೇಶ್‌ಅಂಬೆಕಲ್ಲು, ಲಕ್ಷಣ.ಬಿ.ಕೆ ನಿರ್ಮಾಣ ಮಾಡಿರುವುದು ಹೊಸ ಅನುಭವ.
ತೆರೆಗೆ ಸಿದ್ದ ಮತ್ಸ್ಯಗಂಧ
‘ಮತ್ಸ್ಯಗಂಧ’ ಸಿನಿಮಾದ ಟ್ರೇಲರ್‌ನ್ನು ಸಚಿವ ಮಾಂಕಾಳ.ಎಸ್.ವೈದ್ಯ ಬಿಡುಗಡೆ ಮಾಡಿದ್ದು, ದುನಿಯಾ ವಿಜಯ್, ಸೂರಿ, ಯೋಗರಾಜಭಟ್, ತರುಣುಸುಧೀರ್, ಉದಯ್‌ಮೆಹ್ತಾ, ಶಶಾಂಕ್ ಮುಂತಾದವರು ನೋಡಿ ಶುಭ ಹಾರೈಸಿದಿರುವುದು ತಂಡಕ್ಕೆ ಸಂತಸ ತಂದಿದೆ.
ಫಾರ್ ರಿಜಿಸ್ಟ್ರೇಷನ್ದಲ್ಲಿ ಸಂಬಂಧಗಳನ್ನು ಹೇಳಲಿದೆ
ಇಂಜಿನಿಯರ್, ರಂಗಕರ್ಮಿ ನವೀನ್‌ದ್ವಾರಕನಾಥ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ಅನುಭವದಿಂದ ಈಗ ‘ಫಾರ್ ರಿಜಿಸ್ಟ್ರೇಷನ್’ (ಈoಡಿ ಖegಟಿ.) ಎನ್ನುವ ಸಿನಿಮಾಕ್ಕೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಸಾಂಸರಿಕ ಕಾಮಿಡಿ ಕಥೆಯಲ್ಲಿ ವಾಹನ ನಮ್ಮದಾಗಬೇಕು ಅಂದರೆ ಅದಕ್ಕೆ ರಿಜಿಸ್ಟ್ರೇಷನ್ ಮಾಡಿಸಬೇಕು. ಹಾಗೆಯೇ ಒಂದು ಸಂಬಂಧ ನಮ್ಮದಾಗಬೇಕು ಅಂದರೆ ಏನು ಮಾಡಬೇಕು ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.
ಕನ್ನಡದ ಮಿ.ನಟ್ವರ್‌ಲಾಲ್ ಅಮಿತಾಬ್‌ಬಚ್ಚನ್ ಅಭಿನಯದಲ್ಲಿ ‘ಮಿ.ನಟ್ವರ್‌ಲಾಲ್’ ಸಿನಿಮಾವೊಂದು ಆ ಕಾಲಕ್ಕೆ ತೆರೆಕಂಡು ಯಶಸ್ವಿಯಾಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಇದೇ ೨೩ರಂದು ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಂಡವು ಮಾಧ್ಯಮದವರನ್ನು ಭೇಟಿ ಮಾಡಿ ಅನುಭವಗಳನ್ನು ಹಂಚಿಕೊಂಡಿತು. ನಾಯಕ ಮತ್ತು ನಿರ್ಮಾಪಕ ತನುಷ್ ಮಾತನಾಡಿ ತುಂಬಾ ಹಣ ಸುರಿದು ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಇದನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ಅವರೇನು ಮಾಡುತ್ತಾರೋ ಮಾಡಲಿ. ಒಂದು ಹಂತದಲ್ಲಿ ....
*ಅಪ್ಪು ನಮನ ಕಾರ್ಯಕ್ರಮದಲ್ಲಿ "ರವಿಕೆ ಪ್ರಸಂಗ" ಚಿತ್ರತಂಡ* ಮಂಗಳೂರು: "ಅಖಿಲ ಕರ್ನಾಟಕ ವಾದ್ಯಗೋಷ್ಠಿ ಮಹಾ ಸಂಘ" ದ ವತಿಯಿಂದ ಆಯೋಜಿಸಿದ್ದ "ಅಪ್ಪು ನಮನ" ಕಾರ್ಯಕ್ರಮದಲ್ಲಿ "ರವಿಕೆ ಪ್ರಸಂಗ" ಚಿತ್ರ ತಂಡ ಪಾಲ್ಗೊಂಡಿತು. "ರವಿಕೆ ಪ್ರಸಂಗ" ಸಿನಿಮಾದ ಟೈಟಲನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿರುವುದನ್ನು ಗೀತಾಭಾರತಿ ಭಟ್ ನೆನಪಿಸಿಕೊಂಡರು. ಅಪ್ಪುವಿಗೆ ವಿಶೇಷವಾಗಿ ಸಾವಿರಕ್ಕೂ ಹೆಚ್ಚಿನ ವಾದ್ಯಗೋಷ್ಠಿ ಕಲಾವಿದರೊಂದಿಗೆ ರವಿಕೆಪ್ರಸಂಗ ಚಿತ್ರದ ನಾಯಕಿ ಗೀತಾಭಾರತಿ ಭಟ್, ಕಲಾರತಿ ಮಹಾದೇವ್, ರಕ್ಷಕ್, ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ, ಹಾಗೂ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದ ಪಾವನ ಸಂತೋಷ್ ಮತ್ತು ಚಿತ್ರದ ....
*ಸೆನ್ಸಾರ್ ಪಾಸಾದ ರವಿಕೆ ಪ್ರಸಂಗ* ಮಂಗಳೂರು: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. ರವಿಕೆ ಪ್ರಸಂಗ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ’ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ರವಿಕೆ ಅಂದರೆ ಬ್ಲೌಸನ್ನು ....
"ಫೋಟೋ ಕಳಿಸಿ ಟಿಕೆಟ್ ಗೆಲ್ಲಿ"
"ರವಿಕೆಪ್ರಸಂಗ " ಚಿತ್ರದ ಪ್ರಮೋಷನ್ ಆರಂಭವಾಗಿದ್ದು ಸಮಸ್ತ ಮಹಿಳೆಯರಿಗೆ ಇಲ್ಲಿದೆ ಒಂದು ಭರ್ಜರಿ ಬಂಪರ್ ಆಫರ್...
ನಿಮ್ಮ ಮೆಚ್ಚಿನ ಡಿಸೈನರ್ ಬ್ಲೌಸ್ಗಳೊಂದಿಗೆ 5 ಫೋಟೋಗಳನ್ನು ಈ ಕೂಡಲೇ "6366950230" ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಿ.
ಗೀತಾ ಭಾರತಿ ಭಟ್ ಹಾಗೂ ಚಿತ್ರತಂಡದೊಂದಿಗೆ ಫೆಬ್ರವರಿ 16ರಂದು ಬಿಡುಗಡೆಯಾಗಲಿರುವ "ರವಿಕೆ ಪ್ರಸಂಗ" ಚಿತ್ರದ Special Show ನ ಟಿಕೆಟ್ ಗೆದ್ದು,ಕುಟುಂಬ ಸಮೇತ ಸಿನಿಮಾ ನೋಡಿ, ಆನಂದಿಸಿ. ಜೊತೆಗೆ ಒಂದು ಆಕರ್ಷಕ ಉಡುಗೊರೆ ಪಡೆಯಿರಿ.
ರೊಮ್ಯಾಂಟಿಕ್ ಡ್ರಾಮಾ ಮೂಲಕ ಹೀರೋ ಆಗಿ ಜಾಯ್ ಜೊತೆಯಲೆ ಇರಲೇ ಸಾಂಗ್ ರಿಲೀಸ್ ಈ ಹಿಂದೆ ಜೆ.ಜೆ. ಮೂವೀಸ್ ಬ್ಯಾನರ್ ಮೂಲಕ ನಾನೊಂಥರಾ ಎಂಬ ಆಕ್ಷನ್ ಚಿತ್ರವನ್ನು ನಿರ್ಮಿಸಿದ್ದ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಅವರು ಇದೀಗ ತಮ್ಮ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ಸದ್ಯ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಜಾಯ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಯುವ ನಿರ್ದೇಶಕ ಆರ್ಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಯಲೇ ಇರಲೇ ಎಂಬ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್ ಮಾಡುವ ಮೂಲಕ ಜಾಯ್ ನಟನೆಯ ನೂತನ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ....
'ಕಮರೊಟ್ಟು 2' ಟ್ರೈಲರ್ ಬಿಡುಗಡೆ ಗೆಳೆಯನ ಸಿನಿಮಾಗೆ ಸಾತ್ ಕೊಟ್ಟ ಅಜಯ್ ರಾವ್. ಕಮರೊಟ್ಟು 2 ಹಾರರ್ ಥ್ರಿಲ್ಲರ್ ಟ್ರೈಲರ್ ಬಂತು 3 ಡೈಮೆನ್ಷನ್ ಕಥೆಯನ್ನು ಹಾರರ್ ಮತ್ತು ಥ್ರಿಲ್ಲರ್ ನಲ್ಲಿ ಹೇಳಲು ಪರಮೇಶ್ ನಿರ್ದೇಶಕ ಬಂದಿದ್ದಾರೆ. ಪ್ರಿಯಾಂಕ ಉಪೇಂದ್ರ, ಸ್ವಾಮಿನಾಥನ್, ರಜಿನಿ ಭರದ್ವಾಜ್, ರಾಘಣ್ಣ ನಟನೆಯ ಕಮರೊಟ್ಟು 2 ಟ್ರೈಲರ್ ಬಿಡುಗಡೆಯಾಗಿದೆ. 'ಕಮರೊಟ್ಟು ಚೆಕ್ ಪೋಸ್ಟ್ , ಕಥೆ ಹೇಳಿ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ನಿರ್ದೇಶಕ ಪರಮೇಶ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಕಥೆ ಹೇಳುವುದಕ್ಕೆ ನಿಮ್ಮ ಮುಂದೆ ಬರುತ್ತಿದ್ದಾರೆ. ’ಕಮರೊಟ್ಟು 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರನ್ನು ಸೀಟಿನ ತುದಿಗೆ ಕೂರಿಸಿದೆ. ....
ಆತ್ಮ ಟ್ರೇಲರ್ ಬಿಡುಗಡೆ ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ’ಆತ್ಮ’ ಚಿತ್ರದ ಟ್ರೇಲರನ್ನು ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ವಿರಾಜ್ ಫಿಲಿಂ ರೆರ್ಕಾಡಿಂಗ್ ಸ್ಟುಡಿಯೋ ಮಾಲೀಕ ಯುವ ಪ್ರತಿಭೆ ಅನಿಲ್.ಸಿ.ಆರ್ ಕಥೆ, ನಿರ್ಮಾಣ ಮಾಡುವುದರ ಜತೆಗೆ ನಾಯಕರಾಗಿ ಅಭಿನಯಿಸಿರುವುದು ಎರಡನೇ ಅನುಭವ. ಮುನೆಗೌಡಕಿತ್ತಗನೂರು ಸಹ ನಿರ್ಮಾಪಕರಾಗಿ ಗುರಿತಿಸಿಕೊಂಡಿದ್ದಾರೆ. ’ಅಚಲ’ ’ಓಂ ಶಾಂತಿ ಓಂ’ ಮತ್ತು ’ಅಸ್ಥಿರ’ ಚಿತ್ರಗಳಿಗೆ ಆಕ್ಷನ್ ಹೇಳಿರುವ ಎಸ್.ಆರ್.ಪ್ರಮೋದ್ ನಿರ್ದೇಶನ ಮಾಡಿದ್ದಾರೆ. ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ....
ಶಭ್ಬಾಷ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ! ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮುಹೂರ್ತ ಕಂಡಿದ್ದ `ಶಭ್ಬಾಷ್’ ಚಿತ್ರ ಅತ್ಯಂತ ವೇಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿರುವ ರುದ್ರಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಾಂಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದರ ಬಗೆಗಿನ ಒಂದಷ್ಟು ಕುತೂಹಲಕರ ವಿವರಗಳನ್ನು ಹಂಚಿಕೊಂಡಿದೆ. ರುದ್ರಶಿವ ಯೋಜನೆಯಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಚನ್ನಗಿರಿಯ ಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ....
ಕಿಕ್ಕೇರಿಸೋ ಶೈಲಿಯ `ಕೈಲಾಸ’ ಟ್ರಾನ್ಸ್ ಸಾಂಗ್! ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ. ಇದೀಗ ಅವರು ಕೈಲಾಸ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ಕುಗಳನ್ನು ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥಾ ಟ್ರಾನ್ಸ್ ಸಾಂಗ್ ವೊಪಂದನ್ನು ಬಿಡುಗಡೆಗೊಳಿಸಿದೆ. ದೃಷ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ....