ಉದಯ್ ಪ್ರಸನ್ನ ನಿರ್ದೇಶನದ "ಮಹಿಷಾಸುರ" ಚಿತ್ರವನ್ನು ವಿಕ್ಷೀಸಿದ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿ, ಚಿತ್ರವನ್ನು ತಮಿಳಿನ "ಅಸುರನ್" ಚಿತ್ರಕ್ಕೆ ಹೋಲಿಸಿರುವುದು ಚಿತ್ರತಂಡ ಮತ್ತು ನಿರ್ದೇಶಕರ ಶ್ರಮಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಾಗಿದೆ. ಕೊರೊನದಿಂದಾಗಿ ಸಾರ್ವಜನಿಕ ಪ್ರದರ್ಶನಕ್ಕೆ ವಿಳಂಬವಾಗಿದ್ದು ಇದೇ ತಿಂಗಳು "ಮೆಳೇಕೋಟೆ ಟೂರಿಂಗ್ ಟಾಕೀಸ್" ಹಾಗು "ಮೈತ್ರಿ ಪ್ರೊಡಕ್ಷನ್" ಸಹಯೋಗದಿಂದ ಇದೆ ತಿಂಗಳು ಆಗಸ್ಟ್ 15 ತಾರೀಖು ಡಿ ಬೀಟ್ಸ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿ,ಹಾಗೂ ಚಿತ್ರಮಂದಿರಗಳು ಚಿತ್ರಪ್ರದರ್ಶನ ಪ್ರಾರಂಭಿಸಿದ ನಂತರ ರಾಜ್ಯದ ಎಲ್ಲಾ ಚಿತ್ರಮಂದಿರದಲ್ಲಿ ಮಹಿಷಾಸುರ ಬಿಡುಗೊಂಡು ಬೆಳ್ಳಿ ಪರದೆ ಮೇಲೆ ....
ದ್ವಿಭಾಷೆಯಲ್ಲಿ `ಕಾರ್ಗಲ್ ನೈಟ್ಸ್’ ಕನ್ನಡದ ಮೊಟ್ಟ ಮೊದಲ ಒಟಿಟಿ ವೆಬ್ ಸೀರಿಸ್ ಎಲ್ಲಾ ಚಿತ್ರರಂಗದಲ್ಲೂ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋದು ಒಟಿಟಿ ರಿಲೀಸ್. ಚಿತ್ರಮಂದಿರಗಳು ಲಾಕ್ಡೌನ್ನಿಂದಾಗಿ ಬಾಗಿಲು ಹಾಕಿರುವುದರಿಂದ ಸಿನಿಮಾಸಕ್ತರಿಗೆ ಹಾಗೂ ಚಿತ್ರರಂಗಕ್ಕೆ ಒಟಿಟಿ ಪ್ಲಾಟ್ಫಾರ್ಮ್ವೊಂದೇ ಈಗ ದ್ವಾರ ಬಾಗಿಲು. ಇನ್ನು ಈ ವೇದಿಕೆಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಥಿಯೇಟರ್ನತ್ತ ಮುಖ ಮಾಡದೇ ನೇರವಾಗಿ ಬಿಡುಗಡೆಯಾಗಿವೆ. ಆದರೆ, ವೆಬ್ ಸೀರಿಸ್ ವಿಷಯದಲ್ಲಿ ಈ ಮಾತು ಕನ್ನಡ ಭಾಷೆಯ ಮಟ್ಟಿಗೆ ಕೊಂಚ ದೂರವಿತ್ತು. ಅದೂ ಈಗ ತಣ್ಣಗೆ ಬೇರೂರಲು ಶುರು ಮಾಡುತ್ತಿದೆ. ಹೌದು. ನಿರ್ದೇಶಕ ದೇವರಾಜ್ ಪೂಜಾರಿ ....
ಹಿನ್ನಲೆ ಕೆಲಸ ಮುಗಿಸಿದ ಟೆಡಿಬೇರ್ ಮತ್ತು ಅದೊಂದೂರಲಿ ಚಿತ್ರಗಳು ಕೊರೊನಾ ಸಂಕಷ್ಟದಲ್ಲಿ ಸಮಯ ವ್ಯರ್ಥ ಮಾಡದೆ ಎರಡು ಚಿತ್ರಗಳ ಹಿನ್ನಲೆ ಕೆಲಸ ಮುಗಿದಿದೆ. ಇವರೆಡೂ ಸಿನಿಮಾಗಳಿಗೆ ಭಾರ್ಗವ ನಾಯಕನಾಗಿ ಮೂರು ಮತ್ತು ನಾಲ್ಕನೇ ಅವಕಾಶ. ಲೋಕೇಶ್ವರರಾವ್ ನಿರ್ದೇಶನ, ಶ್ರೀಹರಿ-ಸತೀಶ್ರಾಜೇಂದ್ರನ್ ಛಾಯಾಗ್ರಹಣ, ಭಾರ್ಗವ ಸಂಕಲನ, ಸುವರ್ಣ ನಿರ್ಮಾಪಕಿ, ಕಾರ್ತಿಕ್ವೆಂಕಟೇಶ್ ಸಂಗೀತ ಮತ್ತು ಸಹ ನಿರ್ಮಾಪಕರಾಗಿದ್ದಾರೆ. ಒಳಾಂಗಣ ಚಿತ್ರೀಕರಣ ಘಟಕ, ಕ್ಯಾಮಾರ ಸಿಬ್ಬಂದಿ ಎಲ್ಲವು ಇರ ಸ್ಟುಡಿಯೋದೆ ಆಗಿರುತ್ತದೆ. ನಾಯಕಿ, ಸಹ ಕಲಾವಿದರ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಥ್ರಿಲ್ಲರ್ ಕತೆ ....
ಡಿಯರ್ ಸತ್ಯ ಟೀಸರ್ ಬಿಡುಗಡೆ ಮಾಡಿದರು ಶಿವರಾಜ್ ಕುಮಾರ್ * * * ಭಿನ್ನ ಸಿನಿಮಾ ತಂಡದ ಮತ್ತೊಂದು ಪ್ರಯತ್ನ * * * ರಗಡ್ ಲುಕ್ ನಲ್ಲಿ ಆರ್ಯನ್ ಸಂತೋಷ್ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ’ಡಿಯರ್ ಸತ್ಯ’. ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿರುವ ಈ ಚಿತ್ರದ ಟೀಸರ್ ಆಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಯಾಗಿದೆ. ಡಿಯರ್ ಸತ್ಯ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ಡಾ. ಶಿವರಾಜ್ ಕುಮಾರ್ ʻಟೀಸರ್ ಅದ್ಭುತವಾಗಿ ಬಂದಿದೆ. ಸಂತೋಷ್ ಈ ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣುತ್ತಿದ್ದಾರೆ. ಹೊಸಬರು ಚಿತ್ರರಂಗದಲ್ಲಿ ಗೆಲ್ಲಬೇಕು. ಈಡೀ ಚಿತ್ರತಂಡಕ್ಕೆ ....
ಮಂಜನಿಗೆ ಕಮಲಿ ಅಂದರೆ ಪ್ರಾಣ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಬವ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ‘ಇಂಗ್ಲೀಷ್ ಮಂಜ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದಾರೆ. ‘ಕೋಲಾರ’ ಚಿತ್ರ ನಿರ್ದೇಶನ ಮಾಡಿದ್ದ ಆರ್ಯ.ಎಂ.ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೌಡಿಸಂ ಹಿನ್ನಲೆ ಇರುವ ಕತೆಯಲ್ಲಿ ನವಿರಾದ ಪ್ರೀತಿ ಇರಲಿದೆ. ಆತ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣ ನಾಗುತ್ತಿರುವುದರಿಂದ ಶೀರ್ಷಿಕೆಯಲ್ಲಿ ಕರೆಯುತ್ತಿರುತ್ತಾರೆ. ಮಚ್ಚು, ಲಾಂಗ್ ಇದ್ದರೂ ಅದನ್ನು ವಿಭಿನ್ನವಾಗಿ ತೋರಿಸುವುದು ವಿಶೇಷ. ಕೋಲಾರದ ಕಠಾರಿಪಾಳ್ಯದಲ್ಲಿ ನಡೆಯುವ ಸನ್ನಿವೇಶಗಳು ಬೆಂಗಳೂರಿಗೂ ವಿಸ್ತಾರಗೊಳ್ಳಲಿದೆ. ....
ತ್ರಯಂಬಕೇಶ್ವರ ಸನ್ನಿಧಿಯಲ್ಲಿ ’ಮೃಗ’ ಚಿತ್ರ ಆರಂಭ.
ಶ್ರಾವಣ ಮಾಸದ ಕೊನೆಯ ಶುಕ್ರವಾರದ ಶುಭದಿನದಂದು ’ಮೃಗ’ ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ದೊರೆ ಭಗವಾನ್ ಆರಂಭ ಫಲಕ ತೋರಿದರು. ನಟ ಧರ್ಮ ಕ್ಯಾಮೆರಾ ಚಾಲನೆ ಮಾಡಿದರು.
ನಾನೊಬ್ನೆ ಒಳ್ಳೆವ್ನು ಖ್ಯಾತಿಯ ವಿಜಯ್ ಮಹೇಶ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಿಖಿತಸ್ವಾಮಿ ಈ ಚಿತ್ರದ ನಾಯಕಿ .
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಬೆಂಗಳೂರು ಹಾಗು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಮಹೇಂದ್ರ ಮನೂತ್ ನಿರ್ಮಾಣದಲ್ಲಿ ’ನಮಗಾಗಿ ಜೀವ ಕೊಟ್ಟವರು’ ಕೊರೋನ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಬಿಡುಗಡೆ. .... ಬೆಂಗಳೂರು ನಗರದ ಮಟ್ಟಿಗೆ ಸಾಮಾಜಿಕ ಮತ್ತುಸಿನಿಮಾ ರಂಗ ಎರಡರಲ್ಲೂ ಜನಪ್ರಿಯವಾದ ಹಸರು ಮಹೇಂದ್ರ ಮನೂತ್. ಹಾಗೆ ನೋಡಿದರೆ ಅವರು ಮಾರುತಿ ಮೆಡಿಕಲ್ಸ್ ಮನೂತ್ ಅಂತಲೇ ಹೆಚ್ಚು ಚಿರಪರಿಚಿತ. ಅವರೀಗ ಕೊರೋನಾ ಕುರಿತ ವಿಡಿಯೋ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಕೊರೋನಾ ಎಲ್ಲರೂ ಜೀವ ಭಯದಲ್ಲಿ ಶೂಟಿಂಗ್- ಗಿಟಿಂಗ್ ಅಂತ ಸಿನಿಮಾ ಸಂಬಂಧಿತ ಚಟುವಟಿಕೆಗಳಿಂದಲೇ ದೂರವಾಗಿರುವ ಸಂದರ್ಭದಲ್ಲಿ ಜನರಲ್ಲಿ ಕೊರೋನಾ ಭಯ ದೂರ ಮಾಡಲು ನಮಗಾಗಿ ಜೀವ ಕೊಟ್ಟವರು ಹೆಸರಲ್ಲೊಂದು ವಿಡಿಯೋ ಸಾಂಗ್ ನಿರ್ಮಿಸಿ, ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದ್ದಾರೆ. ....
ಪವನ್ವೆಂಕಟೇಶ್ ನಿರ್ದೇಶನದ ರಾಮ ಜನ್ಮಭೂಮಿ ಚಂದನವನದ ಹೆಸರಾಂತ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಯನ್ನು ಸ್ಥಾಪಿಸಿ ಬೆಳೆಸಿದ ಡಿ.ವಿ.ಸುಧೀಂದ್ರ ನಂತರ ಸುಧೀಂದ್ರವೆಂಕಟೇಶ್ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಪುತ್ರ ಪವನ್ವೆಂಕಟೇಶ್ ಈ ಹಿಂದೆ ‘ಸುಧೀಂದ್ರ ಸಿನಿಪಯಣ’, ‘ಕರೋನ-ಕರಾಳ ರೋಗನಾಶ’ ಕಿರುಚಿತ್ರಗಳನ್ನು ನಿರ್ದೇಶಿಸಿ ತಾನೊಬ್ಬ ಉತ್ತಮ ತಂತ್ರಜ್ಘನೆಂದು ನಿರೂಪಿಸಿಕೊಂಡಿದ್ದರು. ಇದೆಲ್ಲಾದರಿಂದ ಪ್ರೇರಿತರಾಗಿ ಈಗ ಅಯೋಧ್ಯೆ ಕುರಿತಾದ ‘ಶ್ರೀ ರಾಮಜನ್ಮ ಭೂಮಿ’ ಸಾಕ್ಷ್ಯ ಚಿತ್ರವನ್ನು ಸಿದ್ದಪಡಿಸಿದ್ದಾರೆ. ವಿಡಿಯೋದಲ್ಲಿ ....
ಸತ್ಯ ಘಟನೆಗಳ ಆಧಾರಿತ ಹೇ ರಾಮ್ ಚಿತ್ರಕ್ಕೆ ಚಾಲನೆ ಪೋಲೀಸ್ ಇಲಾಖೆಯಲ್ಲಿ ಅಪರಾಧಗಳನ್ನು ತನಿಖೆ ಮಾಡಿರುವ ಸಾಕಷ್ಟು ಘಟನೆಗಳು ಸಿನಿಮಾದಲ್ಲಿ ಮೂಡಿಬಂದಿದೆ. ಆ ಸಾಲಿಗೆ ‘ಹೇ ರಾಮ್’ ಚಿತ್ರವು ಸೇರ್ಪಡೆಯಾಗುತ್ತದೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಡಾಲಿ ಧನಂಜಯ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಆರಂಭಫಲಕ ತೋರಿ ಶುಭ ಕೋರಿದರು. ಡಯಲ್ ೧ ಕ್ರಿಯೇಟಿವ್ ಸ್ಟುಡಿಯೋ ಮಾಲೀಕರಾದ ಪ್ರವೀಣ್ ಬೇಲೂರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಕಾವೇರಿ ತೀರದ ಚರಿತ್ರೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಇವರಿಗೆ ....
ಸಾಂಸ್ಕ್ರತಿಕಕಾರ್ಯಕ್ರಮ ನಡೆಸಲುಅನುಮತಿಗಾಗಿ ಸರ್ಕಾರಕ್ಕೆ ಮನವಿ ಕೊರೊನಾ ಮಹಾಮಾರಿಯಿಂದ ವಿಶ್ವಕ್ಕೆತೊಂದರೆಯಾದಂತೆ, ಲಘು ಸಂಗೀತ ಮತ್ತು ಸಾಂಸ್ಕ್ರತಿಕ ಕಲಾವಿದರುಗಳು ಕಷ್ಟ ಅನುಭವಿಸುತ್ತಿದ್ದಾರೆಂದು ಸಂಘದ ಪದಾಧಿಕಾರಿಗುರುರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಅವರು ಮಾತನಾಡುತ್ತಾ ನಮ್ಮಂಥ ಲಘು ಸಂಗೀತ ಕಲಾವಿದರುಗಳಿಗೆ ಸಾಂಸ್ಕ್ರತಿಕಕಾರ್ಯಕ್ರಮ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹಬ್ಬ, ಮದುವೆ, ಕನ್ನಡರಾಜ್ಯೋತ್ಸವ ಮುಂತಾದ ಕಡೆಗಳಲ್ಲಿ ಕೆಲಸ ಸಿಗುತ್ತದೆ.ಆದರೆ ಈ ಬಾರಿಯಾವುದೇಚೌತಿ, ಸಮಾರಂಭಗಳನ್ನು ಮಾಡಬಾರದಾಗಿ ಸರ್ಕಾರವುಆದೇಶ ಹೊರಡಿಸಿರುವುದರಿಂದ ಇದನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿರುವ ....
ದಿ ಪೈಂಟರ್ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ
ಉಗ್ರಂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್
ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿ ತಯಾರಾದ ಥ್ರಿಲ್ಲರ್ ಚಿತ್ರ ದಿ ಪೈಂಟರ್ ಗೆ ರೋರಿಂಗ್ ಸ್ಟಾರ್
ಶ್ರೀ ಮುರಳಿ ಸಾತ್ ನೀಡುತ್ತಿದ್ದಾರೆ . ಇದೆ ತಿಂಗಳು ೧೪ ಆಗಸ್ಟ್ ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ALL ಟೈಮ್ ಥಿಯೇಟರ್) ಮೂಲಕ ದಿ ಪೈಂಟರ್ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಅದರ ಟ್ರೈಲರ್ ಅನ್ನು ಶ್ರೀಮುರಳಿ ಅವರು ಅವರ ಸೋಶಿಯಲ್ ಮೀಡಿಯಾ ಚಾನೆಲ್ ಮೂಲಕ ದಿ ಪೈಂಟರ್ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ .
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ’ತ್ರಿಕೋನ’ ಚಿತ್ರದ ಮೋಷನ್ ಪೋಸ್ಟರ್
ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ ’ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.
ವರಮಹಾಲಕ್ಷ್ಮೀ ಹಬ್ಬದಂದು ಈ ಚಿತ್ರದ ಮೋಷನ್ ಪೋಸ್ಟರ್ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು.
ಚಲ್ ಚಲ್ ಚುಲಾ.. ಮೊದಲ ಬಾರಿಗೆ ಈ ವಿಚಿತ್ರವಾದ ಒಂದು ಪದವನ್ನು ಕೇಳಲಾಯಿತು. ಅದು ಬೇರೆಲ್ಲೂ ಅಲ್ಲ, ತ್ರಿಕೋನ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ.
ಆಗಸ್ಟ್15 ಕ್ಕೆ ಬರಲಿದೆ ಡಿಯರ್ ಸತ್ಯ ಟೀಸರ್... ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ’ಡಿಯರ್ ಸತ್ಯ’. ಕನ್ನಡದ ಮೊಟ್ಟಮೊದಲ ಓಟಿಟಿ ಒರಿಜಿನಲ್ ಚಿತ್ರ ಭಿನ್ನ. ಈ ಸಿನಿಮಾದ ಅಭೂತಪೂರ್ವ ಗೆಲುವಿನ ನಂತರ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆಕ್ಷನ್ ರಿವೇಂಜ್, ಥ್ರಿಲ್ಲರ್ ಚಿತ್ರ ’ಡಿಯರ್ ಸತ್ಯ’. ಸದಾ ಗಿಜಿಗುಡುವ, ಗದ್ದಲದ ಊರು ಬೆಂಗಳೂರು. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ....
ರಮೇಶ್ ಅರವಿಂದ್ ರವರು ಅಭಿನಯಿಸಿರುವ ಶಿವಾಜಿ ಸುರತ್ಕಲ್ ಚಿತ್ರ ಇದೆ ವರ್ಷ ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅಧ್ಭುತವಾದ ಪ್ರತಿಕ್ರಿಯೆ ಬಂದಿತ್ತು . ರಾಜ್ಯವಿಡೀ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಷೋಸ್ ಕಂಡಿತ್ತು. ಬಿಡುಗಡೆಯಾಗಿ ಮೂರು ವಾರದ ವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು ಲಾಕ್ಡೌನ್ ಇಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು. ಈ ಚಿತ್ರಕ್ಕೆ ರಾಹುಲ್ ದ್ರಾವಿಡ್ ರವರು ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಮಾಧ್ಯಮಗದಿಂದ ಒಳ್ಳೆ ವಿಮರ್ಶೆ ಪಡೆದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಂದ ಕೂಡ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಗೂಗಲ್ ನಲ್ಲಿ 96% , ಐ.ಎಂ.ಡಿ.ಬಿ ಯಲ್ಲಿ 8.3 ರೇಟಿಂಗ್ಸ್ ಈ ....
ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ ’ತ್ರಿವಿಕ್ರಮ’ನಿಗೆ ಸಿಕ್ತು ಚಿನ್ನದಂತಾ ಬೆಲೆ..! ವಿಕ್ರಂ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಸರ.. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ.. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್.. ....
ಮಲಯಾಳಂನಲ್ಲಿ ಮಿನುಗುತ್ತಿರುವ ಬೆಂಗಳೂರಿನ ರಚೆಲ್! ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹಲವಾರು ಮಲಯಾಳಿ ಹೆಣ್ಣುಮಕ್ಕಳು ಕೇರಳಕ್ಕೆ ಹೋಗಿ, ಅಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ರಚೆಲ್ ಡೇವಿಡ್ ಕೂಡಾ ಬೆಂಗಳೂರಿನ ನಂಟು ಹೊಂದಿದ್ದಾರೆ. ತೀರಾ ಇತ್ತೀಚೆಗೆ ರಚೆಲ್ ಮಲಯಾಳಂನ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಎರಡು ಚಿತ್ರಗಳು ಅದಾಗಲೇ ತೆರೆಗೆ ಬಂದಿವೆ. ಈ ಸಿನಿಮಾಗಳನ್ನು ನೋಡಿದ ಜನ ಮತ್ತು ವಿಮರ್ಶಕರು ರಚೆಲ್ ಅಭಿನಯವನ್ನು ಅಪಾರವಾಗಿ ಮೆಚ್ಚಿದ್ದಾರೆ. ಈ ಕಾರಣದಿಂದ ಮಲಯಾಳಂ ಜೊತೆಗೆ ನೆರೆಯ ಭಾಷೆಗಳಿಂದಲೂ ಈಕೆಗೆ ಅವಕಾಶಗಳು ಅರಸಿ ಬರುತ್ತಿವೆ. ಮಲಯಾಳಂ ಸೂಪರ್ ಸ್ಟಾರ್ ....
ಚಿತ್ರೀಕರಣ ಪೂರ್ಣಗೊಳಿಸಿದ ನೈಟ್ಮೇರ್
ಸೌನವಿ ಕ್ರಿಯೇμನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನೈಟ್ಮೇರ್ ("ನೀನು ಮಾಯೆಯೊಳಗೊ ಮಾಯೆ ನಿನ್ನೊಳಗೋ ")ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರಕ್ಕೆ ನವೀನ್ ನಾಯಕ ಮತ್ತು ಕಿತ್ತಾನೆ ಗೋಪಿ ಜಂಟಿಯಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಜನವರಿಯಿಂದ ಬೆಂಗಳೂರು ಸುತ್ತಮುತ್ತಲೂ ನಡೆದಿದ್ದು ಇತ್ತೀಚೆಗೆ ಶೂಟಿಂಗ್ ಮುಗಿದಿದೆ. ಎಂ.ಟೆಕ್ ಪದವಿಧರ ಕೆ.ಆರ್.ಸೌಜನ್ಯ ಚಿತ್ರ ನಿರ್ಮಿಸಿದ್ದು ನವೀನ್ ನಾಯಕ ಚಿತ್ರಕ್ಕೆ ನಾಯಕ.
"ಮಿತ್ರರಕ್ಷಕ " ಒಟಿಟಿ ಬಿಡುಗಡೆ
ಮಾದೇಶ್ ಎಂಟರ್ ಪ್ರೆಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಮಿತ್ರರಕ್ಷಕ" ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೇ ೧೫ ರಂದು ಮೈ ಎಟಿಎಂ ಮೊಬೈಲ್ ಆಪ್ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ
ವರಮಹಾಲಕ್ಷ್ಮೀ ಹಬ್ಬದಂದು ’ಕಾಲಚಕ್ರ’ ದ ಅದ್ದೂರಿ ಹಾಡು ಬಿಡುಗಡೆ.
ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ ’ಕಾಲಚಕ್ರ’ ಚಿತ್ರದ ’ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ. ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಸಂಗೀತ ನೀಡಿದ್ದಾರೆ.
ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು
ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರರಂಗದ ಶ್ರಮಿಕ ವರ್ಗದವರಿಗೆ ಐಎಫ್ಎಂಎ ಚಂದನವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ, ನಿರ್ದೇಶಕ, ಕಲಾವಿದರು, ಕಾರ್ಮಿಕ ಒಕ್ಕೂಟ ಇವೆಲ್ಲವೂ ಚಲನಚಿತ್ರಕ್ಕೆ ಸಂಬಂದಿಸಿದಂತೆ ಹಲವು ವಿಭಾಗಗಳಲ್ಲಿ ಅದರದೇ ಆದ ಸಂಘಸಂಸ್ಥೆಗಳು ಸ್ಥಾಪಿತಗೊಂಡು, ತಮ್ಮ ಸದಸ್ಯರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿವೆ. ಪ್ರಸಕ್ತ ಚಲನಚಿತ್ರದ ಹಲವು ವಿಭಾಗಗಳಿಗೆ ಅನುಕೂಲ ಮಾಡಿಕೊಡುವಂತ ‘ಇಂಡಿಯನ್ ಫಿಲಿಂ ಮೇಕರ್ಸ್ ಅಸೋಸಿಯೇಶನ್’ (ಐಎಫ್ಎಂಎ) ಸಂಸ್ಥೆಯು ಹುಟ್ಟಿಕೊಂಡಿದೆ. ಇದು ಈಗಾಗಲೇ ಶ್ರೀನಗರ, ತೆಲಂಗಾಣ ಕಡೆಗಳಲ್ಲಿ ಶಾಖೆಯನ್ನು ತೆರೆದು, ಈಗ ಕರ್ನಾಟಕದಲ್ಲಿ ಕಛೇರಿಯು ....