'90 ಹೊಡಿ ಮನೀಗ್ ನಡಿ’ ಅಂತಿದ್ದಾರೆ ಬಿರಾದಾರ್. ತಮ್ಮ ಅಮೋಘ ಅಭಿನಯದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿ, ಕನಸೆಂಬ ಕುದುರೆಯನೇರಿ ಚಿತ್ರದ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಟ ವೈಜನಾಥ್ ಬಿರಾದಾರ್. ಬಿರಾದಾರ್ ಎಂದೆ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾಗಿರುವ ಇವರು, ಈಗ ’90 ಹೊಡಿ ಮನೀಗ್ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇವರ ಅಭಿನಯದ 500ನೇ ಚಿತ್ರ. ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಮನೋರಂಜನೆಯ ಮೂಲಕ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರದಲ್ಲಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಉಮೇಶ್ ಬಾದರದಿನ್ನಿ ....
ಮಂಜುನಾಥನ ಸನ್ನಿಧಿಯಲ್ಲಿ ’ಶಂಭೋ ಶಿವ ಶಂಕರ’ ಚಿತ್ರಕ್ಕೆ ಚಾಲನೆ. ಅಘನ್ಯ ಪಿಕ್ಚರ್ಸ್ ಅವರು ನಿರ್ಮಿಸುತ್ತಿರುವ ’ಶಂಭೋ ಶಿವ ಶಂಕರ’ ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಆರ್ ವಿ ಮಮತ ಆರಂಭ ಫಲಕ ತೋರಿದರೆ, ನಿರ್ಮಾಪಕ ವರ್ತೂರು ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಶೀರ್ಷಿಕೆ ಕೇಳಿದರೆ ಭಕ್ತಿ ಪ್ರಧಾನ ಚಿತ್ರ ಅನಿಸುತ್ತದೆ. ಆದರೆ ಇದೊಂದು ಸಸ್ಪೆನ್ಸ್ ಚಿತ್ರ. ಶಂಭೋ ಶಿವ ಶಂಕರ ಎನ್ನುವುದು ಮೂರು ಪಾತ್ರಗಳ ಹೆಸರು. ಶಂಭುವಿನ ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರ ರೋಹಿತ್ ನಿರ್ವಹಣೆ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಯಶಸ್ಸು ಕಂಡ ....
ಸದ್ಯದಲ್ಲೇ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಬಿಡುಗಡೆ. ನಾಲ್ಕು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ವಸಿಷ್ಠ ಸಿಂಹ. ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಮ್ಮ ಕಂಚಿನ ಕಂಠ ಹಾಗೂ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ವಸಿಷ್ಠ ಸಿಂಹ ಈ ಚಿತ್ರದಲ್ಲಿ 25 ರಿಂದ 60 ವಯೋಮಾನದಲ್ಲಿ ಬರುವ ನಾಲ್ಕು ಪಾತ್ರಗಳ ನಿರ್ವಹಣೆ ಮಾಡಿದ್ದಾರೆ. ಲಾಕ್ ಡೌನ್ ಗೂ ಮುನ್ನ ಕಿಚ್ಚ ಸುದೀಪ ಅವರು ಬಿಡುಗಡೆ ಮಾಡಿದ್ದ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ....
ಕಸ್ತೂರಿ ಮಹಲ್ ನಲ್ಲಿ ಶಾನ್ವಿ ಶ್ರೀವಾಸ್ತವ್.
ಕಸ್ತೂರಿ ನಿವಾಸ ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ ಡಾ||ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ ಕಸ್ತೂರಿ ಮಹಲ್ ಎಂದು ಹೆಸರು ಬದಲಿಸಿದ್ದು ಎಲ್ಲರಿಗೂ ತಿಳಿದ ವಿಷಯ.
ಈ ಚಿತ್ರದ ನಾಯಕಿಯಾಗಿ ಮೊದಲು ರಚಿತಾರಾಂ ಆಯ್ಕೆಯಾಗಿದ್ದರು. ಕಾರಣಾಂತರದಿಂದ ರಚಿತಾರಾಂ ಚಿತ್ರತಂಡದಿಂದ ಹೊರನಡೆದಿದ್ದು, ಈಗ ಕಸ್ತೂರಿ ಮಹಲ್ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.
ಲಾಸ್ಟ್ಸೀನ್ ವಿಡಿಯೋ ಹಾಡು ಬಿಡುಗಡೆ ಹೊಸಬರೇ ಸೇರಿಕೊಂಡು ‘ಲಾಸ್ಟ್ ಸೀನ್’ ಎನ್ನುವ ೪.೩೦ ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ. ಶನಿವಾರ ರೇಣುಕಾಂಬ ಪ್ರಿವ್ಯೂ ಚಿತ್ರಮಂದಿರದಲ್ಲಿ ಕನ್ನಡ ಭಾಷೆಯ ಗೀತೆ ಅನಾವರಣಗೊಂಡಿತು. ರಚನೆ ಮತ್ತು ನಿರ್ದೇಶನ ಮಾಡಿರುವ ಎನ್.ವಿನಾಯಕ ಮಾತನಾಡಿ ಮೊದಲ ಬಾರಿ ನಮ್ಮ ಭಾಷೆ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಹಾಡನ್ನು ಸಿದ್ದಪಡಿಸಲಾಗಿದೆ. ಮೂರು ದಿನಗಳ ಕಾಲ ಬೆಂಗಳೂರು, ಮಂಗಳೂರು, ದಾಬಸ್ಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಮಾಜದಲ್ಲಿ ಒಂದು ಹುಡುಗಿ ಅತ್ಯಾಚಾರವಾದಾಗ ಆಕೆ ಅನುಭವಿಸುವ ನೋವು. ಎಲ್ಲದಕ್ಕಿಂತ ....
ಹಿರಿಯ ಕಲಾವಿದರನ್ನು ಗೌರವಿಸಿದ ಇಂದ್ರಜಿತ್ ಲಂಕೇಶ್ ನಟ,ನಿರ್ದೇಶಕ,ಪತ್ರಕರ್ತ ಇಂದ್ರಜಿತ್ಲಂಕೇಶ್ ಪ್ರತಿ ಬಾರಿ ತಮ್ಮ ಹುಟ್ಟುಹಬ್ಬವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸರಳವಾಗಿ ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ಹಿರಿಯ ಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಸಾರ್ಥಕ ಬರ್ತ್ಡೇಯಿಂದ ಖುಷಿಗೊಂಡಿದ್ದಾರೆ. ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಶೈಲಶ್ರೀ, ಜಯಲಕ್ಷೀಪಾಟೀಲ್ ಮತ್ತು ಆರ್.ಟಿ.ರಮಾ ಗೌರವಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹಿರಿಯರೊಂದಿಗೆ ಜನ್ಮದಿನವನ್ನು ಸಂಭ್ರಮ ಮಾಡಿಕೊಳ್ಳುತ್ತಿರುವುದು ದೊಡ್ಡ ವಿಷಯವೇನಲ್ಲ. ಕೊರೋನಾ ಸಂಕಷ್ಟದಲ್ಲಿ ಇಂತಹ ....
ಚಿತ್ರೀಕರಣ ಮುಗಿಸಿದ ಚಡ್ಡಿ ದೋಸ್ತ್
ಕೊರೋನಾ ಲಾಕ್ಡೌನ್ ನಂತರ ಆರಂಭವಾದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ. ಕೋರೋನಾ ಸಮಯದಲ್ಲೇ ತನ್ನ ಮುಹೂರ್ತ ಆಚರಿಸಿಕೊಂಡು ಈಗ ಶೂಟಿಂಗ್ ಕೂಡ ಮುಗಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃμ ಅವರೇ ನಿರ್ದೇಶನ ಮಾಡಿದ್ದಾರೆ. ಆಸ್ಕರ್ ಕೃμ ಅವರೇ ಚಿತ್ರದ ನಾಯಕನಟರಾಗಿ ಸಹ ಅಭಿನಯಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಈಗಾಗಲೇ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.
ಆರ್ಜಿವಿ ಹಸ್ತದಿಂದ ಕಬ್ಜ ಥೀಮ್ ಪೋಸ್ಟರ್ಅನಾವರಣ ಮಹೂರ್ತಆದಾಗಿನಿಂದಲೂ ಸುದ್ದಿಯಿಂದ ಸದ್ದು ಮಾಡುತ್ತಿರುವ ಬಹು ಭಾಷೆಯ ‘ಕಬ್ಜ’ ಚಿತ್ರತಂಡದಿಂದ ಮತ್ತೋಂದು ಮಾಹಿತಿ ಲಭ್ಯವಾಗಿದೆ.ಸೆಪ್ಟಂಬರ್ ೧೮ರಂದು ರಿಯಲ್ ಸ್ಟಾರ್ಉಪೇಂದ್ರ ಹುಟ್ಟುಹಬ್ಬ. ಅದಕ್ಕಾಗಿ ನಿರ್ದೇಶಕ ಮತ್ತು ನಿರ್ಮಾಪಕಉಪ್ಪಿರವರಿಗೆಉಡುಗೊರೆಯಾಗಿ ನೀಡಲು ವಿಶೇಷ ವ್ಯಕ್ತಿಯಿಂದಥೀಮ್ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ.ಟಾಲಿವುಡ್, ಬಾಲಿವುಡ್ದಲ್ಲಿ ಹೆಸರು ಮಾಡಿರುವತಂತ್ರಜ್ಘರಾಮ್ಗೋಪಾಲ್ವರ್ಮಇವರಕೋರಿಕೆಗೆ ಸ್ಪಂದಿಸಿ ಗುರುವಾರದಂದುಎರಡನ್ನು ಬಿಡುಗಡೆ ಮಾಡಿ ....
ದೆವ್ವದ ಆಸೆ ಪೂರೈಸುವ ಟೆಕ್ಕಿ ಜನರು ಯಾವಾಗಲೂ ಹೊಸತನವನ್ನು ಕೇಳುತ್ತಾರೆ. ಅದಕ್ಕಾಗಿ ವಿಭಿನ್ನ ಅಂಶಗಳು ಇರುವ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ‘ಬೇತಾಳ’ ಸಿನಿಮಾವು ಸೇರ್ಪಡೆಯಾಗಿದೆ. ಕತೆಯ ಕುರಿತು ಹೇಳುವುದಾದರೆ ಮನೆಯಲ್ಲಿ ವಾಸವಿರುವ ಟೆಕ್ಕಿಗೆ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು, ಮನೆ ಬದಲಿಸಲು ನಿರ್ಣಯ ತೆಗೆದುಕೊಳ್ಳುತ್ತಾನೆ. ಆ ಹುಡುಕಾಟದಲ್ಲಿ ಅಂತಿಮವಾಗಿ ಮನೆ ಸಿಗುತ್ತದೆ. ಅಲ್ಲಿಗೆ ಬಂದ ಮೇಲೆ ದೆವ್ವ ಇರುವುದು ಗೊತ್ತಾಗುತ್ತದೆ. ಅಲ್ಲಿ ದೆವ್ವಕ್ಕೆ ಒಂದು ಆಸೆ ಇರುತ್ತದೆ. ಅದನ್ನು ಪೂರೈಸುವುದಾದರೆ ತಾನು ಇಲ್ಲಿಂದ ಹೋಗುವೆನೆಂದು ಷರತ್ತು ಹಾಕುತ್ತದೆ. ಆಗ ಆತನು ಅದರ ಆಸೆಯನ್ನು ....
ಟಿಪ್ಪುವರ್ಧನ್ ಟ್ರೈಲರ್ ಬಿಡುಗಡೆ ಜೀವನದ ಬದುಕಿನ ಘಟನೆಗಳ ಘರ್ಷಣೆ ಸಾರುವ ಚಿತ್ರ ‘ಟಿಪ್ಪುವರ್ಧನ್’ ‘ಗಿ೪ sಣಡಿeem’ ಔಖಿಖಿ ಮೂಲಕ ಡಾ.ವಿಷ್ಣುವರ್ಧನ್ ಹುಟ್ಟಹಬ್ಬದಂದು (೧೮.೯.೨೦) ವಿಶ್ವದಾದ್ಯಂತ ಪ್ರಸಾರವಾಗಲಿದೆ. ಸಿನಿಮಾಕ್ಕೆ ರಚನೆ,ಚಿತ್ರಕತೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ನಿರ್ಮಾಣ, ನಿರ್ದೇಶನ ಮತ್ತು ಪ್ರಾಮಾಣಿಕ ರಾಜಕಾರಣಿಯ ಮುಖ್ಯ ಪಾತ್ರಕ್ಕೆ ಎಂ.ಟಿಪ್ಪುವರ್ಧನ್ ಬಣ್ಣ ಹಚ್ಚಿರುವುದು ವಿಶೇಷ. ಮೂರು ಹಂತದಲ್ಲಿ ಬರುವ ಕತೆಯು ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಹಿಂದು-ಮುಸ್ಲಿಂ ವಿಭಿನ್ನ ....
Mahishasura ಬಿಡುಗಡೆ ಸಿದ್ದ
ಮಳೇಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆ ಲಾಂಛನದಡಿ ತಯಾರಾಗಿರುವ Mahishasura ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಸೆನ್ಸಾರ್ ಮಂಡಳಿ ಯು /ಎ ಪ್ರಮಾಣ ಪತ್ರ ನೀಡಿದೆ. ಇದೊಂದು ತ್ರಿಕೋನ ಪ್ರೇಮಕಥೆ ಯಾಗಿದೆ. ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಆದರಿಸಿ Mahishasura ಚಿತ್ರವನ್ನು ತೆರೆಗೆ ತರಲು ನಿರ್ದೇಶಕ ಉದಯ ಪ್ರಸನ್ನ ಮುಂದಾಗಿದ್ದಾರೆ.
ಮೆಡಿಕಲ್ ಮಾಫಿಯಾ ಸುತ್ತ ಭ್ರಮೆಯ ಹುತ್ತ.. ಕುಂದಾಪುರದಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ ಭ್ರಮೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಾರರ್ ಕಾಮಿಡಿ ಸಬ್ಜೆಕ್ಟ್ ಇರುವ ಈ ಚಿತ್ರಕ್ಕೆ ಚರಣರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂಜನಾಗೌಡ ಹಾಗೂ ಇಶಾನಾ ನಾಯಕಿಯರು. ಈ ಚಿತ್ರದ ಟ್ರೈಲರ್ ಬಿಡುಗಡೆ ಸೆ.5ರ ಶಿಕ್ಷಕರ ದಿನಾಚರಣೆಯಂದು ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದಭರ್Àದಲ್ಲಿ ಮಾತನಾಡಿದ ನಿರ್ದೇಶಕ ಚರಣರಾಜ್ ಕುಂದಾಪುರದಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಪ್ರೇರಣೆ. ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ....
ವೀರಪುತ್ರ ಚಿತ್ರದ ಪ್ರೊಮೋ ಬಿಡುಗಡೆ ಆಯುರ್ವೇದಿಕ್ ಮತ್ತು ಅಲೋಪಥಿಕ್ ಔಷಧಗಳ ನಡುವಿನ ಸಂಘರ್ಷದ ಕಥೆ ಹೊಂದಿರುವ ಚಿತ್ರವೊಂದು ಇದೀಗ ನಿರ್ಮಾಣವಾಗುತ್ತಿದೆ. ವೀರಪುತ್ರ ಎಂಬ ಶೀರ್ಷಿಕೆಯಿರುವ ಈ ಚಿತ್ರದಲ್ಲಿ ವಿಜಯ್ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಗುಲ್ಬರ್ಗದಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಈಮೊದಲು ಸಪ್ಲಿಮೆಂಟರಿ ಚಿತ್ರ ನಿರ್ದೇಶಿಸಿದ್ದ ಡಾ.ದೇವರಾಜ್ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ವಿಜಯ್ಸೂರ್ಯ ಅವರ ಜನ್ಮದಿನದ ಕೊಡುಗೆಯಾಗಿ ವೀರಪುತ್ರ ಚಿತ್ರದ ಕ್ಯಾರೆಕ್ಟರ್ ಪ್ರೊಮೋ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು. ಗುರು ಬಂಡಿ ಈ ಚಿತ್ರದ ನಿರ್ಮಾಪಕರು. ಮಾತನಾಡಿದ ನಿರ್ದೇಶಕ ಡಾ.ದೇವರಾಜ್ ಮಾತನಾಡುತ್ತ ಬಹಳ ಹಿಂದೆ ....
ಎಸ್ಪಿಬಿ ಚೇತರಿಕೆಗೆ ಚಂದನವನದ ಪ್ರಾರ್ಥನೆ
ಕೊರೋನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಶೀಘ್ರ ಗುಣಮುಖರಾಗಲೆಂದು ಕನ್ನಡ ಚಿತ್ರರಂಗವು ವಿಶೇಷ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ನಾದಬ್ರಹ್ಮ ಹಂಸಲೇಖಾ ಮಾತನಾಡಿ ಎಸ್ಪಿಬಿ ೪೦ ಸಾವಿರ ಗೀತೆ ಹಾಡಿದರೂ ಇಂದಿಗೂ ದಣಿಯದ ದನಿ. ಶತಮಾನದ ಅವತಾರ ಪುರುಷ ಎಂಬ ಮಾತು ಅವರ ಸಾಧನೆಗೆ ತುಂಬಾ ಚಿಕ್ಕದು. ಅವರೇನಿದ್ದರೂ ೫ ಶತಮಾನಗಳ ಅವತಾರ ಪುರುಷ ಎಂದು ಹೇಳಿದರು.
ತನಿಖಾಧಿಕಾರಿ ಪಾತ್ರದಲ್ಲಿ ರೂಪಿಕಾ ಭರತನಾಟ್ಯ ಪ್ರವೀಣೆ, ನಟಿ ರೂಪಿಕ ಸಂಪ್ರದಾಯಸ್ಥ ಹುಡುಗಿ, ಲವ್ಲಿ ಪಾತ್ರಗಳಲ್ಲಿ ಅಭಿನಯಿಸಿದ್ದು, ಈಗ ಮೊದಲಬಾರಿ ‘ಟೀ ಜಂಕ್ಷನ್’ ಎನ್ನುವ ಹೊಸ ಚಿತ್ರದಲ್ಲಿ ಖಾಕಿ ಖದರ್ ತೋರಿಸುತ್ತಿದ್ದಾರೆ. ಬದಲಾದ ಗೆಟಪ್ ಬಗ್ಗೆ ಮಾತನಾಡುವ ಇವರು ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಹೋಮ್ಲಿ ಮತ್ತು ಟ್ರಡಿಷನಲ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದೆ. ಅದರಿಂದ ಪ್ರೇಕ್ಷಕರು ನನ್ನನ್ನು ಅಂಥದೇ ಪಾತ್ರಗಳಲ್ಲಿ ಗುರುತಿಸಿದ್ದರು. ಆದರೆ ಈ ಸಿನಿಮಾದಲ್ಲಿ ಹೊಸದಾದ ಕ್ಯಾರೆಕ್ಟರ್ ಪ್ಲೇ ಮಾಡಿದ್ದು ಸಂತಸ ತಂದಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಗಂಭೀರವಾಗಿರುತ್ತೇನೆ. ಇಂತಹ ಪಾತ್ರ ....
ವಾಣಿಜ್ಯ ಮಂಡಳಿ ಪ್ರಶ್ನೆಗೆ ಪ್ರಶಾಂತ್ಸಾಂಬರಗಿ ಉತ್ತರ ಮಂಗಳವಾರದಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಡ್ರಗ್ಸ್ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಉದ್ಯಮಿ ಪ್ರಶಾಂತ್ಸಾಂಬರಗಿ ವಿಷಯವು ಪ್ರಸ್ತಾಪವಾಗಿತ್ತು. ಇದಕ್ಕೆ ಸಾರಾಗೋವಿಂದು ಮಾತನಾಡಿ ಇವರಿಂದ ಕನ್ನಡ ಚಿತ್ರರಂಗಕ್ಕೆ ಕಿಂಚಿತ್ತು ಕೊಡುಗೆ ಬಂದಿಲ್ಲ. ಇಂತಹವರು ಚಿತ್ರರಂಗದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದರನ್ವಯ ಪ್ರಶಾಂತ್ಸಾಂಬರಗಿ ಮಾದ್ಯಮದವರನ್ನು ಭೇಟಿ ಮಾಡಿ ಚಂದನನಕ್ಕೆ ನೀಡಿರುವ ಕೊಡೆಗೆಯನ್ನು ....
ಚಂದನವನದಲ್ಲಿಡ್ರಗ್ಸ್ ನಂಟು - ಫಿಲಿಂಚೇಂಬರ್ ಬೇಸರ ಚಿತ್ರರಂಗದಲ್ಲಿಕಲಾವಿದರು, ತಂತ್ರಜ್ಗರುಗಳಿಗೆ ಡ್ರಗ್ಸ್ ಮಾಫಿಯ ನಂಟುಇದೆಎಂಬುದಕ್ಕೆಯಾವುದೇರೀತಿಯ ಸಾಕ್ಷ್ಯಗಳು ಇಲ್ಲ. ಪ್ರಕರಣಇನ್ನುತನಿಖೆ ಹಂತದಲ್ಲಿರುವಾಗಲೇಎಲ್ಲರನ್ನುದೋಷಿಸುವುದು ಸರಿಯಲ್ಲ. ಆರೋಪ ಸಾಬೀತಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂಥಕಲಾವಿದರವಿರುದ್ದ ಮಂಡಳಿಯು ಕಠಿಣಕ್ರಮ ತೆಗೆದುಕೊಳ್ಳುತ್ತದೆ ಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್ಎಚ್ಚರಿಕೆ ನೀಡಿದರು.ಮಾತು ಮುಂದುವರೆಸುತ್ತ ಕಳೆದ ೬ ತಿಂಗಳಿಂದ ಚಿತ್ರರಂಗದಲ್ಲಿ ಉಸಿರುಗಟ್ಟಿದ ವಾತವರಣವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿಇದ್ದೇವೆ. ಇದರ ಮಧ್ಯೆಡ್ರಗ್ಸ್ ....
ಕೆಜಿಎಫ್-೨ಗೆ ಪ್ರಕಾಶ್ರೈ ಸೇರ್ಪಡೆ ಯಶ್ ಅಭಿನಯದ ‘ಕೆಜಿಎಫ್’ ಚಿತ್ರಕ್ಕೆ ಪ್ರಕಾಶ್ರೈ ಸೇರ್ಪಡೆಯಾಗಿದ್ದಾರೆ. ಈಗಾಗಲೇ ‘ಕೆಜಿಎಫ್೨’ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ನಾಲ್ಕು ದಿನಗಳ ಕಾಲ ಪ್ರಕಾಶ್ರೈ ಭಾಗದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇವರೊಂದಿಗೆ ನಾಗಾಭರಣ, ಮಾಳವಿಕಾಅವಿನಾಶ್ ಪಾಲ್ಗೋಂಡಿದ್ದಾರೆ. ಶೂಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದರ ಕುರಿತಂತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಅನಂತ್ನಾಗ್ ಅವರನ್ನು ಕೇಳಿದರೆ ನಾನು ಪಾರ್ಟ್೨ದಲ್ಲಿ ನಟಿಸುತ್ತಿಲ್ಲವೆಂದು ಹೇಳಿದ್ದಾರೆ. ಮತ್ತೋಂದು ಕಡೆ ಅನಂತ್ ....