*ಗಂಡ್ಸು ಗರ್ಭಧರಿಸಿದಾಗ..?* *ಮಹಾಶಿವರಾತ್ರಿಗೆ ನಿಮಗೊಂದು ಸಿಹಿಸುದ್ದಿ* ನಿಮಗೊಂದು ಸಿಹಿಸುದ್ದಿ ಮೋಷನ್ ಪೋಸ್ಟರ್ ಲಾಂಚ್ ನಿಮಗೊಂದು ಸಿಹಿ ಸುದ್ದಿ ಈ ವರ್ಷದ ಅಚ್ಚರಿ ಮತ್ತು ವಿಶೇಷ ಈ ಸಿನಿಮಾ. ಬಿಡುಗಡೆಗೆ ಸಿದ್ದವಿರೋ ಈ ಚಿತ್ರದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಯುವಕನೊಬ್ಬ ಗರ್ಭಧರಿಸಿ ಜಗತ್ತಿನಲ್ಲಿ ಅದ್ಭುತ ಅಚ್ಚರಿ ಹುಟ್ಟಿಸೋ ವಿಚಾರದ ಸುತ್ತಾ ಹೆಣೆದಿರೋ ಚಿತ್ರ ನಿಮಗೊಂದು ಸಿಹಿ ಸುದ್ದಿ. ಚಿತ್ರರಂಗದಲ್ಲಿ ಒಂದಷ್ಟು ಅನುಭವ ಹೊಂದಿ, ಈ ಮೂಲಕ ಸ್ವತಂತ್ರ ಸಿನಿಮಾ ಮಾಡಿದ್ದಾರೆ ನಟ ನಿರ್ದೇಶಕ ಬರಹಗಾರ ಬಹುಮುಖ ಪ್ರತಿಭೆ ರಘು ಭಟ್. ಅವ್ಯಕ್ತ ಸಿನಿಮಾಸ್ ಸಂಸ್ಥೆಯ ಹರೀಶ್ ಎನ್ ....
ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ಡಬ್ಬಿಂಗ್ ಇಂಜಿನಿಯರ್ ಮತ್ತು ನಿರ್ದೇಶಕ:—-
*ಆರನ್ ಕಾರ್ತಿಕ್*
DOP :- ಮೈಸೂರು ಸ್ವಾಮಿ
ಸಂಪಾದನೆ :-
ಭಾರ್ಗವ್.ಕೆ.ಎಂ., ವೆಂಕಿ ಯು.ಡಿ.ವಿ
VFX, Di :- ಭಾರ್ಗವ್.ಕೆ.ಎಂ
Dts :- ಮುನೀಬ್
ನೃತ್ಯ ಸಂಯೋಜನೆ :- ಕಂಬಿ ರಾಜು, ಮೈಸೂರು ರಾಜು ಮತ್ತು ಸ್ಟಾರ್ ನಾಗಿ
ಸಾಹಸ :- ಸುಪ್ರೀಂ ಸುಬ್ಬು ಮತ್ತು ಮಾಗಡಿ ಮಾರುತಿ
ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ. ಚಂದನವನದ ಕಲಾಕರ್ ನಟ , ನಿರ್ದೇಶಕ ಹರೀಶ್ ರಾಜ್ ಸಾರಥ್ಯದ "ವೆಂಕಟೇಶಾಯ ನಮಃ" ಚಿತ್ರದ ಪತ್ರಿಕಾಗೋಷ್ಠಿಯನ್ನು ರೇಣುಕಾಂಬ ಸ್ಟುಡಿಯೋದಲ್ಲಿ ಆಯೋಜನೆ ಮಾಡಿದ್ದು, ತಮ್ಮ ಚಿತ್ರದ ಕುರಿತು ಮಾಹಿತಿ ನೀಡಲು ಇಡೀ ಚಿತ್ರತಂಡ ಹಾಜರಿದ್ದು, ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಚಿತ್ರದ ಟೀಸರ್ ಪ್ರದರ್ಶಿಸಲಾಯಿತು. ಈ ಚಿತ್ರದ ಕುರಿತು ನಟ , ನಿರ್ದೇಶಕ ಹರೀಶ್ ರಾಜ್ ಮಾತನಾಡುತ್ತಾ , ನಮ್ಮ ವೆಂಕಟೇಶಾಯ ನಮಃ ಚಿತ್ರಕ್ಕೆ ಸ್ಪೂರ್ತಿಯೇ ನಾನು ಹಿಂದೆ ಅಭಿನಯಿಸಿದಂತ ಗೋವಿಂದಾಯ ನಮಃ ಚಿತ್ರ ಎನ್ನಬಹುದು. ಹಾಗಾಗಿಯೇ ಮತ್ತೆ ಪ್ಯಾರ್ ಗೆ ಆಗ್ಬಿಟ್ಟೈತೆ... ಅನ್ನೋ ಅಡಿಬರ ಕೂಡ ಬಳಸಿಕೊಂಡಿದ್ದೇವೆ. ....
*ನಮ್ಮೂರಿನ ಹುಚ್ಚ ಹೇಳುತ್ತಿದ್ದ ಪದವೇ "ತುರ್ರಾ" ಹಾಡಿಗೆ ಸ್ಪೂರ್ತಿ ಯೋಗರಾಜ್ ಭಟ್..* . *"ಮನದ ಕಡಲಿ" ನಿಂದ ಬಂತು ಮತ್ತೊಂದು ಹಾಡು** . E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ "ಮುಂಗಾರು ಮಳೆ" ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ "ಮನದ ಕಡಲು". ಇತ್ತೀಚೆಗಷ್ಟೇ ಈ ಚಿತ್ರದ "ಹೂ ದುಂಬಿಯ ಕಥೆಯ" ಹಾಡು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಚಿತ್ರದ ಮತ್ತೊಂದು ಗೀತೆ "ತುರ್ರಾ" ಬಿಡುಗಡೆಯಾಗಿದೆ. ನೆಲಮಂಗಲದ ಬಳಿಯಿರುವ ನಿರ್ಮಾಪಕ ಈ ಕೃಷ್ಣಪ್ಪ ರವರ ತೋಟದಲ್ಲಿ ಈ ಹಾಡು ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರೆ ....
*ಚಂದನವನದ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು "ಛೂಮಂತರ್" ಚಿತ್ರದ ಪ್ರೀ ರಿಲೀಸ್ ಇವೆಂಟ್* *ಶರಣ್ ಅಭಿನಯದ ಈ ಚಿತ್ರ ಜನವರಿ 10ರಂದು ಬಿಡುಗಡೆ.* ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, "ಕರ್ವ" ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಛೂ ಮಂತರ್" ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕನಸಿನ ರಾಣಿ ಮಾಲಾಶ್ರೀ, ಡಾಲಿ ಧನಂಜಯ, ಗುರುಕಿರಣ್, ರಿಷಿ, ಪ್ರಥಮ್, ಅಮೂಲ್ಯ, ಧೀರೇನ್ ರಾಮಕುಮಾರ್, ತಿಲಕ್, ಮಾಲಾಶ್ರೀ ಪುತ್ರಿ ಆರಾಧನಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ....
*ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು "ಕುಚುಕು" ಚಿತ್ರದ ಟೀಸರ್ ಹಾಗೂ ಹಾಡುಗಳು.* *ಸ್ನೇಹದ ಮಹತ್ವ ಸಾರುವ ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ* . ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ "ಕುಚುಕು" ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಎಂ.ಎನ್ ಕುಮಾರ್, ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸ್ನೇಹದ ಮಹತ್ವ ಸಾರುವ ಈ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಇದೇ ....
*ಡಿಜಿಟಲ್ ಮನರಂಜನೆ ಕ್ಷೇತ್ರಕ್ಕೆ ಹೊಸದಾದ Glopixs ಒಟಿಟಿ* *ಏಕಕಾಲಕ್ಕೆ ಮೂರು ರಾಜ್ಯಗಳಲ್ಲಿ ಗಣ್ಯರಿಂದ ಲೋಗೊ ಅನಾವರಣ* . ಡಿಜಿಟಲ್ ಒಟಿಟಿ ವೇದಿಕೆಗೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ಅದುದೇ Global Pix Incನ *ಗ್ಲೋಪಿಕ್ಸ್* (Glopixs). ಈ ಹೊಸ ಒಟಿಟಿ ವೇದಿಕೆ ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ. ಇತ್ತೀಚೆಗೆ "ಗ್ಲೋಪಿಕ್ಸ್"ನ ಲೋಗೋ ಅನಾವರಣವಾಗಿದೆ. ಕರ್ನಾಟಕ, ಕೇರಳ ಹಾಗೂ ಹೈದರಾಬಾದ್ ನಲ್ಲಿ ಏಕಕಾಲಕ್ಕೆ ಲೋಗೊ ಬಿಡುಗಡೆಯಾಗಿದ್ದು ವಿಶೇಷ. ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಹಿರಿಯ ಛಾಯಾಗ್ರಾಹಕ, ಸೆನ್ಸಾರ್ ಬೋರ್ಡ್ ....
ಕ್ಷುದ್ರ ರುದ್ರನಾಗಿ ಗಣೇಶ್
‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಖುಷಿಯಲ್ಲಿರುವ ಗಣೇಶ್ ಈಗ ‘ಪಿನಾಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು, ಕನ್ನಡ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ಟಿ.ಜಿ.ವಿಶ್ವಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿಯಿಂದ ೪೯ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಲವು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಧನಂಜಯ್ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ.
*ಡಿಸೆಂಬರ್ 31 ರಂದು ಬಿಡುಗಡೆಯಾಯಿತು ನಿರಂಜನ್ ಶೆಟ್ಟಿ ಅಭಿನಯದ "31 DAYS" ಚಿತ್ರದ ಒಪೇರ ಸಾಂಗ್* . *ಇದು ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜನೆಯ 150ನೇ ಚಿತ್ರ* "ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ "31 DAYS" ಚಿತ್ರಕ್ಕಾಗಿ ವಿ.ಮನೋಹರ್ ಬರೆದು, ಹಾಡಿ, ಸಂಗೀತ ಸಂಯೋಜಿಸಿ, ನಿರಂಜನ್ ಶೆಟ್ಟಿ ಅವರೊಂದಿಗೆ ನಟಿಸಿರುವ ಒಪೇರ ಶೈಲಿಯ ಗೀತೆ ಡಿಸೆಂಬರ್ 31 ನೇ ತಾರೀಖು ಬಿಡುಗಡೆಯಾಯಿತು. ಇದು ವಿ.ಮನೋಹರ್ ಅವರು ಸಂಗೀತ ಸಂಯೋಜಿಸಿರುವ 150ನೇ ಚಿತ್ರ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ಇಂದು ಬಿಡುಗಡೆಯಾಗಿರುವ ಒಪೇರ(ಕಥನಾ ಗೀತೆ) ಶೈಲಿಯ ....
*ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ* . *“ಮ್ಯಾಕ್ಸ್” ಚಿತ್ರತಂಡದಿಂದ ಆಯೋಜಿಸಲಾಗಿದ್ದ “ಥ್ಯಾಂಕ್ಸ್ ಗಿವಿಂಗ್” ಸಮಾರಂಭದಲ್ಲಿ ಕಿಚ್ಚ ಸುದೀಪ್ ಹೇಳಿಕೆ* . ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಾಯಕರಾಗಿ ನಟಿಸಿರುವ "ಮ್ಯಾಕ್ಸ್" ಚಿತ್ರ ಡಿಸೆಂಬರ್ 25ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷವನ್ನು ಸಂಭ್ರಮಿಸಲು ಥ್ಯಾಂಕ್ಸ್ ಗಿವಿಂಗ್ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಎರಡೂವರೆ ....
‘Rank Star’ ಗುರುನಂದನ್ಗೆ ಹುಟ್ಟಹಬ್ಬದ ಸಂಭ್ರಮ ಹುಟ್ಟುಹಬ್ಬಕ್ಕೆ ಚಿತ್ರತಂಡದಿಂದ ವಿಶೇಷ ಉಡುಗೊರೆ ಹೊಸ ಚಿತ್ರದ ಶೀರ್ಷಿಕೆ ಟೀಸರ್ ಅನಾವರಣ ಗುರುನಂದನ್ ಹೊಸ ಚಿತ್ರ ‘ಮಿಸ್ಟರ್ ಜಾಕ್’ ‘Rank Star’ ಗುರುನಂದನ್, ಮಂಡಿಮನೆ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಸ್ನೇಹಿತರೊಂದಿಗೆ ಜೊತೆಗೂಡಿ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕೆಲವು ತಿಂಗಳುಗಳ ಹಿಂದೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಸೋಮವಾರ, ಗುರುನಂದನ್ ತಮ್ಮ ಹುಟ್ಟುಹಬ್ಬವನ್ನು ....
ಗೋರ್ ಗಡ್ ಟೀಸರ್ ಬಿಡುಗಡೆ ಪ್ರಸ್ತುತ ಚಂದನವನದಲ್ಲಿ ಎಲ್ಲಾ ಕೆಲಸ ಮುಗಿಸಿದ ನಂತರ ಮಾಧ್ಯಮದ ಮುಂದೆ ಬರುವುದು. ಪ್ರಾರಂಭದಿಂದಲೂ ಸದಾ ಸುದ್ದಿಯಲ್ಲಿರುವುದು. ಅದೇ ರೀತಿಯಲ್ಲಿ ’ಗೋರ್ ಗಡ್’ ಎನ್ನುವ ಚಿತ್ರವು ಎರಡನೇ ಸಾಲಿಗೆ ಸೇರಿಕೊಳ್ಳುತ್ತದೆ. ಶೂಟಿಂಗ್ಗೆ ಹೋಗುತ್ತಿದ್ದೇವೆಂದು ಹೇಳಿಕೊಳ್ಳಲೆಂದು ಟೀಸರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿದ್ದರು. ದಾವಣಗೆರೆಯ ಶಶಿಕುಮಾರ್.ಜೆ.ಕೆ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಾಲ್ಕನೇ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಹೊಸೂರುನಲ್ಲಿ ಅಪ್ಪ ಕಾರು ಚಾಲಕರಾಗಿದ್ದರು. ಡಿಎಸ್ಕೆ ಗ್ರೂಪ್ ಶುರು ಮಾಡಿ ಉದ್ಯಮದಲ್ಲಿ ಯಶಸ್ಸು ಕಂಡಿದ್ದರಿಂದ ಸಮಾಜ ಸೇವೆಯಲ್ಲಿ ....
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ.. ಮಳೆಯಂತೇ ಬಾ... ಬೆಳಕಂತೇ ಬಾ... ಸುದೀಪ್ ಹರಸಿದ ಹಾಡು ಸಂಜು ವೆಡ್ಸ್ ಗೀತಾ ಕಥೆ ಸುದೀಪ್ ಕೊಟ್ಟಿದ್ದು ! ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ಅವರ ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಆನಂದ ಆಡಿಯೋ ಮೂಲಕ ರಿಲೀಸಾಗಿರುವ ಹಾಡುಗಳು ಕೇಳುಗರ ಮನ ಗೆದ್ದಿವೆ. ಇದೀಗ ಈ ಚಿತ್ರದ ಮತ್ತೊಂದು ....
*ಮುಂಗಾರು ಮಳೆ"ಗೆ ಹದಿನೆಂಟರ ಹರೆಯ* . *ಈ ಸವಿನೆನಪಿನಲ್ಲಿ "ಮನದ ಕಡಲಿ" ನಿಂದ ಬಂತು ಮನಮೋಹಕ ಗೀತೆ* . ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ "ಮುಂಗಾರು ಮಳೆ". ಈ ಯಶಸ್ವಿ ಚಿತ್ರ ಬಿಡುಗಡೆಯಾಗಿ ಇದೇ ಡಿಸೆಂಬರ್ ಗೆ ಹದಿನೆಂಟು ವರ್ಷ ತುಂಬಿದೆ. ಹದಿನೆಂಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ, ಯೋಗರಾಜ್ ಭಟ್ ನಿರ್ದೇಶನದಲ್ಲಿ "ಮನದ ಕಡಲು" ಮೂಡಿ ಬರುತ್ತಿದೆ. "ಮುಂಗಾರು ಮಳೆ" ಬಿಡುಗಡೆಯಾದ ದಿನವೇ "ಮನದ ಕಡಲು" ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ನೀಡಿರುವ ....
*ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಅವರಿಂದ ಪ್ರಸಿದ್ಧ್ ನಿರ್ದೇಶನದ "ಶೇರ್" ಚಿತ್ರದ ಟೀಸರ್ ಅನಾವರಣ* *ಕಿರಣ್ ರಾಜ್ ಅಭಿನಯದ ಈ ಚಿತ್ರದಲ್ಲಿ ಕ್ರಿಸ್ ಎಂಬ ನವನಟ ಖಡಕ್ ವಿಲನ್ ಆಗಿ ಚಿತ್ರರಂಗಕ್ಕೆ ಎಂಟ್ರಿ..* ಸುದರ್ಶನ್ ಸುಂದರರಾಜ್ ನಿರ್ಮಾಣದ, ಪ್ರಸಿದ್ಧ್ ನಿರ್ದೇಶನದ ಹಾಗೂ "ಕನ್ನಡತಿ" ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ "ಶೇರ್" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರದ ಮೂಲಕ ನಿರ್ಮಾಪಕ ....
ಡಾ.ವಿಷ್ಣುವರ್ಧನ್ ನೆನಪಿಸುವ ಸಿಂಹದಹಾದಿ ಟೆಲಿಚಿತ್ರ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನು ಅಗಲಿ ಹದಿನೈದು ವರ್ಷ ಆಗಿದೆ. ಆದರೂ ಅಭಿಮಾನಿಗಳು ಸೆಪ್ಟಂಬರ್ ೧೮ ಹುಟ್ಟುಹಬ್ಬ, ಡಿಸೆಂಬರ್ ೩೦ ಪುಣ್ಯದಿನದಂದು ಏನಾದರೂಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಜಿ.ಕೆ.ಶಶಿರಾಜ್ ದೊರೆ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸಿಂಹದ ಹಾದಿ’ ಟೆಲಿಚಿತ್ರವು ಮೂವತ್ತು ನಿಮಿಷ ಅವಧಿ ಇರುತ್ತದೆ. ‘ಹೆಜ್ಜೆಜ್ಜೆಲಿ ಅಚ್ಚೊತ್ತಿದೆ ಅಭಿಮಾನದ ಧರ್ಮ’ ಎಂಬ ಅಡಿಬರಹವಿದೆ.
ಜನವರಿ 24ಕ್ಕೆ ವಿರಾಟ್ ಅಭಿನಯದ ‘ರಾಯಲ್’ ಬಿಡುಗಡೆ ಇದು ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಚಿತ್ರ ಜನವರಿ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿರುವ, ದಿನಕರ್ ತೂಗುದೀಪ ನಿರ್ದೇಶನದಲ್ಲಿ ವಿರಾಟ್ ಅಭಿನಯಿಸಿರುವ ‘ರಾಯಲ್’ ಚಿತ್ರವು ಜನವರಿ 24ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಚಿತ್ರತಂಡದವರು ಮೊದಲ ಪತ್ರಿಕಾಗೋಷ್ಠಿ ....
*ಹೊಸವರ್ಷದ ಮೊದಲ ಚಿತ್ರವಾಗಿ ಜನವರಿ 3 ರಂದು ಬಿಡುಗಡೆಯಾಗಲಿದೆ "ಗನ್ಸ್ ಅಂಡ್ ರೋಸಸ್"* .. *ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶ* . ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್, " ಗನ್ಸ್ ಅಂಡ್ ರೋಸಸ್" ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇವರ ನಟನೆಯ ಮೊದಲ ಚಿತ್ರ ಇದ್ದಾಗಿದ್ದು, 2025 ರ ಜನವರಿ 3, ಹೊಸವರ್ಷದ ಮೊದಲ ಚಿತ್ರವಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೆಚ್ ಆರ್ ನಟರಾಜ್ ಅವರು ದ್ರೋಣ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀನಿವಾಸ್ ಕುಮಾರ್ ನಿರ್ದೇಶಿಸಿದ್ದಾರೆ. ....
ತಲ್ವಾರ್ ಮೇಕಿಂಗ್ ಜತೆ ಮೊದಲ ಹಾಡು ಈ ಹಿಂದೆ ಮಮ್ತಾಜ್ ಎಂಬ ಚಿತ್ರ ನಿರ್ದೇಶಿಸಿದ್ದ ಮುರಳಿ ಅವರ ಸಾರಥ್ಯದ ಮತ್ತೊಂದು ಚಿತ್ರ ತಲ್ವಾರ್. ಧರ್ಮ ಕೀರ್ತಿರಾಜ್ ನಾಯಕನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ ಕೊನೆಯ ವಾರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಮೊದಲ ಗೀತೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮಾಸ್ ಕಂಟೆಂಟ್ ಒಳಗೊಂಡಿರುವ ಈ ಚಿತ್ರದ ‘ಪಲ್ ಮರುಕಳಿಸಿತೇನೋ..’ ಎಂಬ ಮಧುರ ಗೀತೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸಾಗಿದೆ. ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್ ....
*"ಗ್ಯಾಪಲ್ಲೊಂದು ಸಿನಿಮಾ" ಮಾಡಿ "ಓಮಿನಿ"ಯಲ್ಲಿ "ಪಾಠಶಾಲಾ"ಗೆ ಬಂದ ಹೆದ್ದೂರ್ ಮಂಜುನಾಥ್ ಶೆಟ್ಟಿ* . *"ಪಾಕಶಾಲಾ" ಪ್ರವೀಣರಿಂದ "ಪಾಠಶಾಲಾ" ಟೀಸರ್ ಅನಾವರಣ* . ಕೆಲವು ವರ್ಷಗಳ ಹಿಂದೆ "ಗ್ಯಾಪಲ್ಲೊಂದು ಸಿನಿಮಾ" ಮಾಡಿ ನಂತರ "ಓಮಿನಿ" ಎಂಬ ಚಿತ್ರ ನಿರ್ದೇಶಿಸಿರುವ ಹೆದ್ದೂರ್ ಮಂಜುನಾಥ್ ಶೆಟ್ಟಿ ಈಗ "ಪಾಠಶಾಲಾ" ಎಂಬ ಚಿತ್ರ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿ ಟೀಸರ್ ಅನಾವರಣ ಮಾಡಿ "ಪಾಠಶಾಲಾ" ತಂಡಕ್ಕೆ ಶುಭ ಕೋರಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್ ಎಸ್ ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ, ....