*ಬೆಂಗಳೂರಿನಲ್ಲಿ "ಡವ್ ಮಾಸ್ಟರ್" ಗೆ ಬಿರುಸಿನ ಚಿತ್ರೀಕರಣ.* *ಮಾನವ ಹಾಗೂ ಸಾಕುಪ್ರಾಣಿಯ ಸಂಬಂಧದ ಸುತ್ತಲ್ಲಿನ ಕಥೆ.* ಕೆಲವರು ತಮ್ಮ ಮಕ್ಕಳಷ್ಟೇ ಪ್ರೀತಿ - ವಾತ್ಸಲ್ಯದಿಂದ ಸಾಕುಪ್ರಾಣಿಗಳನ್ನು ಸಾಕಿರುತ್ತಾರೆ. ಆ ಪ್ರಾಣಿಗೂ ತನ್ನ ಯಜಮಾನನೇ ಸರ್ವಸ್ವ. ಇದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಾಣವಾಗಿತ್ತಿರುವ ಚಿತ್ರ "ಡವ್ ಮಾಸ್ಟರ್". ತಬಲ ನಾಣಿ ಹಾಗೂ ರಾಕಿ(ನಾಯಿ) ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಉತ್ತರಹಳ್ಳಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದೆ. ನಾನು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ....
ಹನುಮ ಜಯಂತಿ ದಿನದಂದು ಜಿ ಸಿನಿಮಾಸ್ ನಿರ್ಮಾಣದ ‘ಲವ್ ಯುರಚ್ಚು’ ಚಿತ್ರದಟ್ರೇಲರ್ ಬಿಡುಗಡೆಗೆಆಕ್ಷನ್ ಪ್ರಿನ್ಸ್ಧ್ರುವಸರ್ಜಾ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಟಿಪ್ಸ್ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟುಹಾಕಿರುವುದುಖಂಡನೀಯ.ಮೊದಲು ನಾವುಗಳು ಕನ್ನಡ ಭಾಷೆಗೆಗೌರವಕೊಡಬೇಕು.ತುಣುಕುಗಳುಚೆನ್ನಾಗಿ ಬಂದಿದೆ.ತಂಡಕ್ಕೆ ಒಳ್ಳೆಯದಾಗಲಿ ಎಂದರು.
‘ಸಖತ್’ ಖುಷಿಯಲ್ಲಿ ಗಣಿ-ಸುನಿ… 25ನೇ ದಿನದತ್ತ ‘ಸಖತ್’ ಜರ್ನಿ! ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಗೆಲುವಿನ ನಾಗಲೋಟ ಮುಂದುವರೆಸಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿತ್ತು. ಇದೀಗ ಸಖತ್ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ. ಇದೇ ಖುಷಿಯಲ್ಲಿ ಸಖತ್ ಬಳಗ ಸಕ್ಸಸ್ ಮೀಟ್ ಆಯೋಜಿಸಿ, ಒಂದಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಖತ್ ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ಎಂಜಾಯ್ ....
*"ಎನ್ ಟಿ ಆರ್" ಅಗಲಿದ್ದಾರೆ ಹಾಸ್ಯನಟ ಕೆಂಪೇಗೌಡ.* *ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಪ್ರಜ್ವಲ್ ದೇವರಾಜ್.* ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಹಾಸ್ಯನಟರಾಗಿ ಜನಮನಸೂರೆಗೊಂಡಿರುವ ಕೆಂಪೇಗೌಡ ಅವರು ನಾಯಕನಾಗಿ ಅಭಿನಯಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೋಷನ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ .ಮಾಡಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಬಹಿಸಿದ್ದರು. ಚಿತ್ರಕ್ಕೆ "ಎನ್ ಟಿ ಆರ್" ಎಂದು ಹೆಸರಿಡಲಾಗಿದೆ. "ಎನ್ ಟಿ ಆರ್" ಅಂದರೆ "ನಮ್ಮ ತಾಲ್ಲೂಕಿನ ರೂಲರ್" ....
*"ಸ್ನೇಹಿತ" ನಿಗೆ ಇಪ್ಪತ್ತೈದರ ಸಂಭ್ರಮ.* ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಪ್ಪತ್ತೈದು ದಿನಗಳನ್ನು ಪೂರೈಸಿದೆ.ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ನಮ್ಮ ಚಿತ್ರ ಬಿಡುಗಡೆಗೂ ಮುನ್ನ ಏನಾಗುವುದು ಎಂಬ ಆತಂಕವಿತ್ತು. ಬಿಡುಗಡೆ ಆದ ಮೇಲೆ ಸಿಗುತ್ತಿರುವ ಪ್ರತಿಕ್ರಿಯೆ ನಿಜಕ್ಕೂ ಸಂತಸ ತಂದಿದೆ. ಬೆಂಗಳೂರು ಮಾತ್ರವಲ್ಲ. ಮೈಸೂರು ಹಾಗೂ ಉತ್ತರ ಕರ್ನಾಟಕದ ಸಾಕಷ್ಟು ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾನೇ ಪ್ರತಿಯೊಂದು ಕಡೆ ಹೋಗಿ ಬಂದಿದ್ದೀನಿ. ನೋಡುಗರು ತೋರುತ್ತಿರುವ ....
*"ಬಡವ ರಾಸ್ಕಲ್" ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ..* ಡಾಲಿ ಧನಂಜಯ ಅಭಿನಯದ "ಬಡವ ರಾಸ್ಕಲ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ಇದೊಂದು ಮಧ್ಯಮವರ್ಗದ ಕಥೆ. ಆಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ ಜೊತೆ ಮಗನ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ. ಕೆ.ಆರ್.ಜಿ ಸ್ಟುಡಿಯೋದವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಇದೇ 24ರಂದು ಚಿತ್ರ ತೆರೆಗೆ ಬರಲಿದೆ. ನಿಮ್ಮ ಬೆಂಬಲವಿರಲಿ ....
*ಸುಮುಹೂರ್ತದಲ್ಲಿ ನಡೆಯಿತು* *"ನಮ್ ನಾಣಿ ಮದ್ವೆ ಪ್ರಸಂಗ".* *ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಂದ ಹೇಮಂತ್ ಹೆಗಡೆ ನಿರ್ದೇಶನದ ಈ ಚಿತ್ರಕ್ಕೆ ಚಾಲನೆ.* *ಚಿತ್ರತಂಡಕ್ಕೆ ಶುಭಕೋರಿದ ಸನ್ಮಾನ್ಯ ಸಚಿವರಾದ ಎಸ್ ಟಿ. ಸೋಮಶೇಖರ್.* ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಹೇಮಂತ್ ಹೆಗಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ "ನಮ್ ನಾಣಿ ಮದ್ವೆ ಪ್ರಸಂಗ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಸನ್ಮಾನ್ಯ ಸಚಿವರಾದ ಎಸ್ ಟಿ ಸೋಮಶೇಖರ್ ಚಿತ್ರತಂಡಕ್ಕೆ ಶುಭ ಕೋರಿದರು. ಅನೇಕ ....
*ಅದ್ದೂರಿ ಸೆಟ್ ನಲ್ಲಿ "ಮಾಫಿಯಾ" ಚಿತ್ರೀಕರಣ.* ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಮಾಫಿಯಾ" ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಪೊಲೀಸ್ ಕಂಟ್ರೋಲ್ ರೂಂ ನ ಸೆಟ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್, ದೇವರಾಜ್ ಹಾಗೂ ಸಾಧುಕೋಕಿಲ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಾನು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅದಕ್ಕೂ ಖುಷಿಯ ವಿಚಾರವೆಂದರೆ ನಾನು, ಪ್ರಜ್ವಲ್ ಇಬ್ಬರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕ ಲೋಹಿತ್ ಇನ್ನು ಚಿಕ್ಕ ....
*ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು "ರಾಜಿ".* *ರಾಘವೇಂದ್ರ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರೀತಿ ಎಸ್ ಬಾಬು ನಿರ್ದೇಶನ.* ರಾಘವೇಂದ್ರ ರಾಜಕುಮಾರ್ ಅಭಿನಯದ " ರಾಜಿ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಾಯಕ ಶ್ರೀಮುರಳಿ ಆರಂಭ ಫಲಕ ತೋರಿದರು. ನಾಯಕಿ ಹರ್ಷಿಕಾ ಪೂಣ್ಣಚ್ಛ ಕ್ಯಾಮೆರಾ ಚಾಲನೆ ಮಾಡಿದರು. ಕನ್ನಡ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿರುವ ಪ್ರೀತಿ ಎಸ್ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವ ನಿರ್ದೇಶಕಿಯರ ಸಾಲಿಗೆ ಪ್ರೀತಿ ಎಸ್ ಬಾಬು ಸೇರ್ಪಡೆಯಾಗಿದ್ದಾರೆ. ....
*ಮುಹೂರ್ತ ಆಚರಿಸಿದ ʻಅಲಂಕಾರ್ ವಿದ್ಯಾರ್ಥಿʼ.* ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿ, ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಪ್ರಮೋದ್. ನಂತರ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ, ರತ್ನನ್ ಪ್ರಪಂಚ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ನಟನೆಯ ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಈಗ ʻಅಲಂಕಾರ್ ವಿದ್ಯಾರ್ಥಿʼ ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾದ ಮುಹೂರ್ತ ನೆರವೇರಿದೆ. ಅನ್ನಪೂರ್ಣೇಶ್ವರಿ ನಗರದ ವಿನಾಯಕ-ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ನಟ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ....
*ನೈಜ ಘಟನೆಯ "ಸೀತಮ್ಮನ ಮಗ"* ನಟ, ಪತ್ರಕರ್ತ, ನಿರ್ಮಾಪಕ ಮತ್ತು ನಿರ್ದೇಶಕ ಯತಿರಾಜ್ ಹರಿಶ್ಚಂದ್ರ ಘಾಟ್ ನಲ್ಲಿ ನೋಡಿದಂತ ಘಟನೆಯನ್ನು ಎರಡು ಪಾತ್ರದಲ್ಲಿ ತೆಗೆದುಕೊಂಡು ಒಂದು ಕಥೆಯನ್ನು ಬರೆದು, ಕಥಾ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಸಿಕ್ಕಿತ್ತು. ಈಗ ಅದೇ ಕಥೆಯು ಈಗ ’ಸೀತಮ್ಮನ ಮಗ’ ಹೆಸರಿನೊಂದಿಗೆ ಒಂದು ಪಾತ್ರವಾಗಿ ಸೃಷ್ಟಿಸಿ, ಅದನ್ನು ಚಿತ್ರವಾಗಿ ರೂಪಾಂತರಿಸುತ್ತಿದ್ದಾರೆ. ಸದರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜತೆಗೆ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪಂಡರಹಳ್ಳಿಯ ನಿವೃತ್ತ ಶಿಕ್ಷಕ ಕೆ.ಮಂಜುನಾಥ್ ನಾಯಕ್ ನಿರ್ಮಾಣ ಮತ್ತು ಶಿಕ್ಷಕ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಪುತ್ರ ಸಮೀತ್ ನಾಯಕ್ ಸಹ ....
*"ಭಾವಚಿತ್ರ"ದ ಹಾಡುಗಳ ಬಿಡುಗಡೆ** ಕಿರುತೆರೆಯ ಸೂಪರ್ ಸ್ಟಾರ್ ಟಿ.ಎನ್.ಸೀತಾರಾಂ ನಿರ್ದೇಶನದ ’ಮಗಳು ಜಾನಕಿ’ ಮೂಲಕ ಮನೆಮಾತಾಗಿರುವ ಚಿಕ್ಕಮಗಳೂರಿನ ಗಾನವಿ ಲಕ್ಷಣ್, ’ಭಾವಚಿತ್ರ’ದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಇದು ಅವರ ಅಭಿನಯದ ಮೊದಲ ಸಿನಿಮಾ. ಈಕೆಯ ಸುತ್ತ ಕಥೆ ಸಾಗುತ್ತದೆ. ಒಂದೂರಲ್ಲಿ ಹಳೆಯ ದೇವಸ್ಥಾನ, ಅಲ್ಲಿನ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಹುಡುಗಿಯಾಗಿ ಗಾನವಿ ಕಾಣಿಸಿಕೊಂಡಿದ್ದಾರೆ. ಕಾರ್ಪೋರೇಟ್ ಕಂಪೆನಿಯಲ್ಲಿ ಫೋಟೋಗ್ರಾಫರ್ ಆಗಿರುವ ಕಥಾ ನಾಯಕ ಚಕ್ರವರ್ತಿ ರೆಡ್ಡಿ . ಶಾಂತಿ ಬಯಸಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯೊಡನೆ ಪ್ರೀತಿ ಚಿಗುರುತ್ತದೆ. ಮುಂದೆ ....
ಸೆನ್ಸಾರ್ ಅಂಗಳದಲ್ಲಿ ಬೀರ ಕೌಟಂಬಿಕ, ಆಕ್ಷನ್ಹಿನ್ನಲೆಯ ‘ಬೀರ’ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡಿದೆ.ಪ್ರಚಾರದ ಸಲುವಾಗಿ ಮಾಹಿತಿ ನೀಡಲುತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.ಅತಿಥಿಯಾಗಿ ಆಗಮಿಸಿದ್ದ ಕರಿಸುಬ್ಬು ಮಾತನಾಡಿಕರೋನಅಲೆಯಿಂದಚಿತ್ರರಂಗ ನಲುಗಿದೆ.ಮಹಿಳೆಯಾಗಿ ನಿರ್ಮಾಣ ಮಾಡಿರುವುದು ಸಾಧನೆಎನ್ನಬಹುದು.ಪ್ರಚಾರಕ್ಕೆಅಂತ ಬಂದಾಗ ನಾಯಕಿಯರು ಏನೇ ಕೆಲಸ ಇದ್ದರೂ ಬಿಟ್ಟು ಬರಬೇಕೆಂದುಗೈರು ಹಾಜರಾದ ಶುಭಪೂಂಜ ಮತ್ತುರೂಪಿಕಾಅವರಿಗೆ ಕಿವಿಮಾತುಹೇಳಿದರು.ಒಬ್ಬ ಮಹಿಳೆಯಾಗಿ ಚಿತ್ರರಂಗಕ್ಕೆ ಬರುವುದು ಎಷ್ಟು ಕಷ್ಟ ಇದೆಅಂತ ತಿಳಿದಿದೆ.ನನ್ನಂತಹ ೧೦ ಮಹಿಳೆಯರು ಮುಂದೆ ಬರಬೇಕುಎಂಬುದು ಬಯಕೆಯಾಗಿದೆ.ಅದಕ್ಕಾಗಿ ....
*ನಿಖಿಲ್ ಕುಮಾರ್ ಅಭಿನಯದ "ರೈಡರ್" ಡಿಸೆಂಬರ್ 24ರಂದು ಅದ್ದೂರಿ ಬಿಡುಗಡೆ.* ನಿಖಿಲ್ ಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ "ರೈಡರ್" ಚಿತ್ರ ಇದೇ ಡಿಸೆಂಬರ್ 24 ರಂದು ಸುಮಾರು 250 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ "ರೈಡರ್" ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ....
ಶತಭಿಷ ಟೀಸರ್ ಬಿಡುಗಡೆ " ಶತಭಿಷ" ಇದು ನಕ್ಷತ್ರದ ಹೆಸರು. ಈಗ ಇದೇ ಹೆಸರಿನ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ವೆಂಕಟೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಚಿತ್ರೀಕರಣವು ಸದ್ದು ಗದ್ದಲವಿಲ್ಲದೆ ಮುಗಿದಿದ್ದು, ದೀಪು ಅರ್ಜುನ್ ಮತ್ತು ಶೋಬಿತಾ ಶಿವಣ್ಣ ಚಿತ್ರದ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಮೊನ್ನೆ ಈ ಚಿತ್ರದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ,ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ತಮಿಳುನಾಡನ ಕೆಲವೆಡೆ ಸೇರಿ ....
*ಡಿಸೆಂಬರ್ 10ರಂದು ಆರು ಭಾಷೆಗಳಲ್ಲಿ ತೆರೆಗೆ ಬರಲಿದೆ "ಮಡ್ಡಿ" ಚಿತ್ರ.* *ಡಾ||ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ.* ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ||ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನನ್ನದು ಇದು ಮೊದಲ ....
*ಆರ್.ಕೆ ನಿರ್ದೇಶನದಲ್ಲಿ "ಕಾಣಿಯಾಗಿದ್ದಾಳೆ"* *ಹುಡುಕಿ ಕೊಟ್ಟವರಿಗೆ ಬಹುಮಾನ..* *ಹಳ್ಳಿ ಸೊಗಡಿನ ಈ ಚಿತ್ರಕ್ಕೆ ಧರ್ಮಗಿರಿ ಶ್ರೀ ಮಂಜುನಾಥ ದೇಗುಲದಲ್ಲಿ ಮುಹೂರ್ತ.* ಶ್ರೀ ಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗತ್ತಿರುವ, ಆರ್ ಕೆ ನಿರ್ದೇಶನದ "ಕಾಣಿಯಾಗಿದ್ದಾಳೆ" ಹುಡುಕಿ ಕೊಟ್ಟವರಿಗೆ ಬಹುಮಾನ ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಚಿತ್ರದ ಶೀರ್ಷಿಕೆ ಇಷ್ಟವಾಯಿತು. ಮೊದಲ ದೃಶ್ಯದಲ್ಲಿ ನಾಯಕ ಉದ್ದನೆಯ ಸಂಭಾಷಣೆ ....
ಒಂದಾನೊಂದುಕಾಲದಲ್ಲಿಟ್ರೈಲರ್ ಬಿಡುಗಡೆ ೧೯೭೦ರಲ್ಲಿ ಶಂಕರ್ನಾಗ್ಅಭಿನಯದ ‘ಒಂದಾನೊಂದುಕಾಲದಲ್ಲಿ’ ಚಿತ್ರವೊಂದುತೆರೆಕಂಡುಯಶಸ್ಸು ಗಳಿಸಿತ್ತು.ಈಗ ಅದೇ ಹೆಸರಿನಲ್ಲಿಚಿತ್ರವೊಂದುಕೊನೆಯ ಹಂತದಲ್ಲಿ ಬಂದು ನಿಂತಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿರುವುದಿಲ್ಲ.ಭಾನುವಾರದಂದು ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಸಮಾಧಿ ಬಳಿ ಚಿತ್ರದಟ್ರೈಲರ್ನ್ನು ಪುನೀತ್ರಾಜ್ಕುಮಾರ್ಅಂಗರಕ್ಷಕರಾಗಿದ್ದ ಚಲಪತಿ ಮತ್ತು ಸಿರಿ ಮ್ಯೂಸಿಕ್ ಸಂಸ್ಥೆಯಚಿಕ್ಕಣ್ಣ ಬಿಡುಗಡೆ ಮಾಡಿದರು. ಹಿರಿಯ ನಿರ್ದೇಶಕ ಭಗವಾನ್ ಬಳಿ ತರಭೇತಿ ಪಡದುಕೊಂಡಿರುವಎನ್.ಮಂಜುನಾಥ್ ಸಿನಿಮಾಕ್ಕೆಕಥೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನದಜತೆಗೆ ನಾಯಕನಾಗಿ ....
*ಮಾರ್ಚ್ ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ 67 ನೇ ಫಿಲಂ ಫೇರ್ ಸೌತ್ ಪ್ರಶಸ್ತಿ ಸಮಾರಂಭ 2019 - 21.* *ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರದಾನ ಸಮಾರಂಭ.* 67ನೇ ಫಿಲಂ ಫೇರ್ ಸೌತ್ ಪ್ರಶಸ್ತಿ 2019-21 ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಕಮರ್ ಫಿಲಂ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದೆ. ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಬಹುಭಾಷಾ ನಟಿ ಪೂಜಾ ಹೆಗ್ಡೆ, ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಹಾಗೂ ನಟಿ ತಾರಾ ಅನುರಾಧ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೌತ್ ....
ಹೊಸಬರ ಆರ್ಆರ್ಸಿಕ್ಸ್ಆರ್ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಆರ್ಆರ್ಸಿಕ್ಸ್ಆರ್’ (ಖಖSixಖ) ಚಿತ್ರದ ಮಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ‘ಕೂಡ ಬೇಡ ಕಳಿಬೇಡ..ಕೂಡಿದರೆ ಟೈಂ ವೇಸ್ಟ್..ಕಳೆದರೆ ಲೈಫ್ ವೇಸ್ಟ್ಸುಮ್ನೆ ನೋಡು?’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷರಾದ ಉಮೇಶ್ಬಣಕಾರ್ ಕ್ಯಾಮಾರ ಆನ್ ಮಾಡಿದರೆ, ಶೈಲೇಂದ್ರಬಾಬು ಕ್ಲಾಪ್ ಮಾಡಿ ತಂಡಕ್ಕೆ ಶುಭ ....