"ವರದ" ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್.. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಚಿತ್ರದ ಮೋಷನ್ ಪೋಸ್ಟರ್. ರಾಬರ್ಟ್ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ "ವರದ" ನಾಗಿ ಬರುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿತ್ತು.. ಚಿತ್ರದ ಬಗ್ಗೆ ಮಾತನಾಡಿದ ನಾಯಕ ವಿನೋದ್ ಪ್ರಭಾಕರ್, "ವರದ" ತಂದೆ-ಮಗನ ಭಾಂದವ್ಯದ ಸಿನಿಮಾ. ಈ ಚಿತ್ರದಲ್ಲಿ ನನ್ನ ತಂದೆಯಾಗಿ ಖ್ಯಾತ ....
ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್. ಕೊರೋನ ಎರಡನೇ ಅಲೆ ಪೂರ್ತಿ ಮುಗಿದಿಲ್ಲ..ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಇನ್ನೂ ಅವಕಾಶ ಸಿಕ್ಕಿಲ್ಲ.. ಆದರೆ ಕೆಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈಗ ಕನ್ನಡ ಚಿತ್ರರಂಗದ ಕಾರ್ಯಚಟುವಟಿಕೆ ನಿಧಾನವಾಗಿ ಆರಂಭವಾಗಿದೆ. ತಾರಾಜೋಡಿ ದಿಗಂತ್ - ಐಂದ್ರಿತಾ ರೇ ಬಹಳವರ್ಷಗಳ ನಂತರ ನಾಯಕ - ನಾಯಕಿಯಾಗಿ ನಟಿಸಿರುವ "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ....
*ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ರಾಣ ಚಿತ್ರದ ಮುಹೂರ್ತ* * - ಶ್ರೇಯಸ್ ಮಂಜು- ನಂದಕಿಶೋರ್ ಕಾಂಬಿನೇಷನ್ ಸಿನಿಮಾ* * - ಚಿತ್ರದ ಮೊದಲ ದೃಶ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆ್ಯಕ್ಷನ್ ಕಟ್* ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿರುವ ಶ್ರೇಯಸ್ ಮಂಜು ನಾಯಕನಾಗಿ ನಟಿಸಲಿರುವ ನೂತನ ಸಿನಿಮಾ ರಾಣ ಸೆಟ್ಟೇರಿದೆ. ಇತ್ತೀಚೆಗಷ್ಟೇ ಶೀರ್ಷಿಕೆ ಅನಾವರಣ ಮಾಡಿಕೊಂಡಿದ್ದ ಸಿನಿಮಾ, ಇದೀಗ ಸರಳವಾಗಿ ಮುಹೂರ್ತ ಮುಗಿಸಿಕೊಂಡಿದ್ದು, ರಿಯಲ್ ಸ್ಟಾರ್ ಉಪೇಂದ್ರ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುಜ್ಜಲ್ ಅವರ ತಾಯಿ ಕ್ಲಾಪ್ ಮಾಡಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯ ನೆರವೇರಿದ್ದು, ಇನ್ನೇನು ....
ಟೆಡ್ಡಿ ಬೇರ್ ಹಾಡುಗಳ ಸಂಭ್ರಮ ಹಾರರ್, ರೋಮ್ಯಾಂಟಿಕ್ಕತೆ ಹೊಂದಿರುವ ‘ಟೆಡ್ಡಿ ಬೇರ್’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ಭರತ್ಕುಮಾರ್-ನವೀನ್ರೆಗಟ್ಟಿಜಂಟಿಯಾಗಿಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಸಿಡಿ ಬಿಡುಗಡೆ ಮಾಡಿದಡಾ.ನಾಗೇಂದ್ರಪ್ರಸಾದ್ ಮಾತನಾಡಿಚಿತ್ರರಂಗದ ಏಳಿಗೆಗೆ ಬಾ.ಮ.ಹರೀಶ್, ಉಮೇಶ್ಬಣಕಾರ್ ಸದಾ ಸಿದ್ದರಿರುತ್ತಾರೆ. ಗ್ಯಾಪ್ ನಂತರ ಚಟುವಟಿಕೆಗಳು ಶುರುವಾಗುತ್ತಿದೆ.ಬಿಡುಗಡೆಯಾಗ ಬೇಕಾದ ಸಿನಿಮಾಗಳು ಸಾಕಷ್ಟು ಇದೆ.ಯಾವ ಚಿತ್ರಗಳು ಬಲಿಯಾಗಬಾರದು.ನಿರ್ಮಾಪಕರು ತಾಳ್ಮೆಯಿಂದ ....
“ಅದೊಂದಿತ್ತು ಕಾಲ”ಮೂರನೇ ಹಂತ !
ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ“ಅಂದೊಂದಿತ್ತು ಕಾಲ”ಚಿತ್ರದ ಮೂರನೇ ಹಂತದಚಿತ್ರೀಕರಣವು ಈ ವಾರ ನಗರದಲ್ಲಿಆರಂಭವಾಗಲಿದೆ.
ಈಗಾಗಲೇ ೨ ಹಂತದಚಿತ್ರೀಕರಣವನ್ನು ಬೆಂಗಳೂರು, ತೀರ್ಥಹಳ್ಳಿಯಲ್ಲಿ ಚಿತ್ರಿಸಿರುವ ಚಿತ್ರತಂಡವು ಈಗ ಮೂರನೇ ಹಂತಕ್ಕೆ ಸಜ್ಜಾಗಿದೆ.
ಚಿತ್ರದಲ್ಲಿ ಹಿರಿಯ ನಿರ್ದೇಶಕರೊಬ್ಬರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
*ಸಿನಿಮಾ ಕಾರ್ಮಿಕರಿಗೆ ನೆರವಾದ ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಮತ್ತು ಮಲ್ಟಿ ಬಾಕ್ಸ್ ಎಂಟರ್ಟೈನ್ಮೆಂಟ್*
*-ಫಂಡ್ ರೈಸರ್ ಕಾರ್ಯಕ್ರಮದಿಂದ ಬಂದ ಮೊತ್ತದ ಬಳಕೆ*
ಬೆಂಗಳೂರು: ಕೋವಿಡ್ನಿಂದಾಗಿ ಸಾಕಷ್ಟು ಸಿನಿಮಾ ಮಂದಿಯ ಬದುಕು ಬೀದಿಗೆ ಬಂದಿದೆ. ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ಮತ್ತು ಮಲ್ಟಿ ಬಾಕ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಗಳ ವತಿಯಿಂದ ಸೋಮವಾರ ಸಿನಿಮಾ ಕಾರ್ಮಿಕರಿಗೆ ಉಚಿತ ಆಹಾರದ ಕಿಟ್ಗಳನ್ನು ನೀಡಲಾಯಿತು.
ಯೋಗಿ ಹುಟ್ಟುಹಬ್ಬಕ್ಕೆ "ಲಂಕೆ" ಮೋಷನ್ ಪೋಸ್ಟರ್ ಬಿಡುಗಡೆ. ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ "ಲಂಕೆ" ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ. ಜುಲೈ 6ರಂದು ಲೂಸ್ ಮಾದ ಯೋಗಿ ಅವರ ಹುಟ್ಟುಹಬ್ಬ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನಾಳೆ "ಲಂಕೆ" ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಅವರು ನಿರ್ಮಿಸಿರುವ ಈ ಚಿತ್ರ ಲಾಕ್ ಡೌನ್ ಮುಗಿದು, ....
ಚಿತ್ರೋದ್ಯಮದ ಸಂಕಷ್ಟಕ್ಕೆ ನೆರವಾದ ನಿರ್ಮಾಪಕ ರಮೇಶ್ ರೆಡ್ಡಿ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿ ಅವರು ಕೊರೋನಾ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ನೆರವಿಗೆ ನಿಲ್ಲುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ಯಾಂಡಲ್ ವುಡ್ನಲ್ಲಿ ಕೆಲಸ ಮಾಡುವ ಸಾಹಸ ಕಲಾವಿದರು, ಬರಹಗಾರರು, ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡುವವರು, ಆರ್.ಪಿ.ಗಳು ಸೇರಿದಂತೆ ಬಹುತೇಕ ವಿಭಾಗಗಳ ೮೦೦ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ. ಶ್ರೀಮತಿ ಸುಧಾಮೂರ್ತಿ ಅವರ ಇನ್ಫೋಸಿಸ್ ಪ್ರತಿಷ್ಠಾನದ ಮೂಲಕವೂ ನಿರ್ಮಾಪಕ ರಮೇಶ್ ರೆಡ್ಡಿ ಅವರು ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ....
*ರಾಮ-ಆಂಜನೇಯನ ಸನ್ನಿಧಿಯಲ್ಲಿ ಶಬರಿಗೆ ಮುಹೂರ್ತ* ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್ ಮೂಲಕ ಕಿರಣ್ ಕುಮಾರ್ ಸಿ.- ಅರವಿಂದ್ ಬಿ. ಅವರ ನಿರ್ಮಾಣ ಮಾಡುತ್ತಿರುವ ’ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರದ ಮುಹೂರ್ತ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿ ರಚಿತಾರಾಮ್ ಹಾಗೂ ರಘು ಮುಖರ್ಜಿ ದೇವರನ್ನು ಪ್ರಾರ್ಥಿಸುವ ದ್ರುಶ್ಯದೊಂದಿಗೆ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಮಹಿಳಾಪ್ರದಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ಡಿಂಪಲ್ಕ್ವೀನ್ ....
*ಇಂದು* *ವೀರಂ* *ಚಿತ್ರದ* *ಟೀಸರ್* *ಬಿಡುಗಡೆ*
ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ಶಶಿಧರ್ ಅವರ ನಿರ್ಮಾಣ ಹಾಗೂ ಖದರ್ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ವೀರಂ. ನಟ ಪ್ರಜ್ವಲ್ ದೇವರಾಜ್ ಹಿಂದೆಂದೂ ಕಾಣಿಸದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಸಂಜೆ ೫.೦೧ ಕ್ಕೆ ಆನಂದ್ ಆಡಿಯೋ ಮೂಲಕ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದೇ ಮೊದಲಬಾರಿಗೆ ಪ್ರಜ್ವಲ್ ದೇವರಾಜ್ ಜೋಡಿಯಾಗಿ ಡಿಂಪಲ್ಕ್ವೀನ್ ರಚಿತಾರಾಮ್ ಅವರು ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕ ಖದರ್ಕುಮಾರ್ ಅವರು ಹೊಸದೊಂದು ಕಂಟೆಂಟನ್ನು ಹೇಳಹೊರಟಿದ್ದಾರೆ.
ಸುಮಂತ್ ಕ್ರಾಂತಿ ನಿರ್ಮಾಣದ
ಚಿತ್ರದಲ್ಲಿ ಪ್ರಜ್ವಲ್ ಹೀರೋ
ಈ ಹಿಂದೆ ಹಾರರ್ ನಾನಿ, ಮಾಸ್ ಬರ್ಕ್ಲಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಾಲಚಕ್ರ ನಿರ್ದೇಶನ ಮಾಡಿದ್ದ ಸುಮಂತ್ ಕ್ರಾಂತಿ ಅವರೀಗ ಪಕ್ಕಾ ಆ್ಯಕ್ಷನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸುಮಂತ್ ಕ್ರಾಂತಿ ಅವರ ರಶ್ಮಿಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಪೊಗರು ಖ್ಯಾತಿಯ ನಂದಕಿಶೋರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
*ದರ್ಶನ್ ಅನುಸರಿಸಿದ ನಟ ಅಭಯ್ ವೀರ್*
ವನ್ಯಜೀವಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊರೋನಾ ಸಂದರ್ಭದಲ್ಲಿ ಆಹಾರ ಕೊರತೆ ಎದುರಿಸುತ್ತಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಸಂತತಿ ಉಳಿಸಿ ಎಂದು ಕರೆ ಕೊಟ್ಟಿದ್ದರು. ಈಗ ಉತ್ತರ ಕರ್ನಾಟಕದ ಯುವಪ್ರತಿಭೆ ಅಭಯ್ವೀರ್ ಅವರು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ನಿಸರ್ಗ ಧಾಮದಿಂದ ಅರ್ಜುನ ಎಂಬ ಚಿರತೆಯನ್ನು ಒಂದು
ವರ್ಷದ ಅವಧಿಗೆ ದತ್ತು ಪಡೆಯುವ ಮೂಲಕ ದರ್ಶನ್ ರನ್ನು ಅನುಸರಿಸಿದ್ದಾರೆ.
ಜುಲೈ 04, ಬೆಂಗಳೂರು.
ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ’ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ’ಅಖಿಲಾ’ ಅವರೊಂದಿಗೆ ನಿಶ್ಚಿತಾರ್ಥವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ಆಗಸ್ಟ್ 15ನೇ ತಾರೀಖು ದಿನಾಂಕ ನಿಗದಿ ಆಗಿದೆ. ಮಂಸೋರೆ ಅವರ ವೃತ್ತಿಜೀವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಹಲವಾರು ಸ್ನೇಹಿತರು ಭಾಗಿಯಾಗಿರುವುದರಿಂದ, ಮಾಧ್ಯಮಗಳ ಮೂಲಕವೇ ಅವರೆಲ್ಲರಿಗೂ ತಮ್ಮ ಮದುವೆ ನಿಶ್ಚಯವಾಗಿರುವ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಚಿತ್ರ "ಮಾಫಿಯಾ".
ಹುಟ್ಟುಹಬ್ಬದ ದಿನದಂದೇ ಬಿಡುಗಡೆಯಾಯಿತು ಚಿತ್ರದ ಫಸ್ಟ್ ಲುಕ್.
ಗುರುದತ್ ಗಾಣಿಗ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ "ಮಾಫಿಯಾ" ಎಂದು ಹೆಸರಿಡಲಾಗಿದೆ.
ಜುಲೈ 4 ಪ್ರಜ್ವಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಶೀರ್ಷಿಕೆ ಅನಾವರಣ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು.
ನ್ಯೂಯಾರ್ಕ್ - ಪ್ಯಾರಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆಲ್ಲುವತ್ತ "ಕಾಲಚಕ್ರ" ದಾಪುಗಾಲು. ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಜ್ಯೂರಿ ಪ್ರಶಸ್ತಿ. ವಸಿಷ್ಠ ಎನ್ ಸಿಂಹ ನಾಯಕರಾಗಿ ಅಭಿನಯಿಸಿರುವ ’ಕಾಲಚಕ್ರ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅದಕ್ಕೂ ಮುನ್ನ ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಯಾರ್ಕ್, ಪ್ಯಾರಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಈ ಚಿತ್ರ ಆಯ್ಕೆಯಾಗಿದ್ದು, ಸದ್ಯದಲ್ಲೇ ಪ್ರದರ್ಶನವಾಗಲಿದೆ. ನ್ಯೂಯಾರ್ಕ್ ಅಂತಾರಾಷ್ಟ್ರೀಯ ....
ಪ್ರತಿಭಾವಂತ ಮಕ್ಕಳಿಗೆ ಡಾ. ಕಾಮಿನಿ ರಾವ್ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ಮೂಲಕ ಶಿಷ್ಯವೇತನ. ಹುಟ್ಟುಹಬ್ಬದ ದಿನ ಉತ್ತಮ ಕಾರ್ಯಕ್ಕೆ ಚಾಲನೆ ನೀಡಿದ ಖ್ಯಾತ ವೈದ್ಯೆ. ಸದ್ಯದಲ್ಲೇ ಚಲನಚಿತ್ರಗಳ ನಿರ್ಮಾಣಕ್ಕೂ ಚಾಲನೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್ ಈಗಾಗಲೇ ಮನರಂಜನಾ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದಾರೆ. ಇದೀಗ ಇವೆರಡೂ ಕ್ಷೇತ್ರಗಳ ಜತೆಗೆ ಶಿಕ್ಷಣ ಕ್ಷೇತ್ರದ ಕಡೆಗೂ ಮುಖ ಮಾಡಿದ್ದಾರೆ. ಅಂದರೆ, ಕಾಮಿನಿ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಹೇಳಿಕೊಳ್ಳಬೇಕೆಂಬ ....
ಸ್ವಯಂಕಲ್ಪನೆಯಿಂದ ಆಗುವ ಘಟನೆಗಳು ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತ’ ಸದ್ಯದಲ್ಲೆ ಸನ್ಸಾರ್ ಅಂಗಳಕ್ಕೆ ಹೋಗಲಿದೆ.ಪ್ರಚಾರದ ಸಲುವಾಗಿಟ್ರೈಲರ್ ಬಿಡುಗಡೆಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾರಮೇಶ್ಗೌಡ ಸಿನಿಮಾದಕುರಿತಂತೆ ಮಾಹಿತಿ ಹಂಚಿಕೊಂಡರು.ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.ಸ್ವಯಂಕಲ್ಪನೆಎಂಬುದುಅರ್ಥಕೊಡುತ್ತದೆ.ಅಂದರೆಒಂದು ವಿಷಯವುಒಬ್ಬರಿಂದ ಮತ್ತೋಬ್ಬರಿಗೆತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ....
ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಲಹರಿ ಮಡಿಲಿಗೆ.
ರಾಕಿಂಗ್ ಸ್ಟರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ಕೆ.ಜಿ.ಎಫ್ 2 ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿದೆ.
ಶ್ರೇಯಸ್ಸ್ ಕೆ ಮಂಜು ಈಗ "ರಾಣ"
ಜುಲೈ 7 ರಂದು ಮುಹೂರ್ತ.
ಖ್ಯಾತ ನಿರ್ಮಾಪಕ ಕೆ.ಮಂಜು ಅರ್ಪಿಸುವ, ನಂದಕಿಶೋರ್ ನಿರ್ದೇಶನದ ಹಾಗೂ ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಇಂದು ಬೆಳಗ್ಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರಕ್ಕೆ "ರಾಣ" ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಕೆ.ಮಂಜು, ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ನಿರ್ದೇಶಕ ನಂದಕಿಶೋರ್, ನಾಯಕ ಶ್ರೇಯಸ್ಸ್ ಹಾಗೂ ನಾಯಕಿ ರೇಶ್ಮಾ ನಾಣಯ್ಯ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಭಾರಿ ಸದ್ದು ಮಾಡುತ್ತಿದೆ.."ವ್ಹೀಲ್ ಚೇರ್ ರೋಮಿಯೋ" ಚಿತ್ರದ ಲಿರಿಕಲ್ ಸಾಂಗ್.. ವಿಭಿನ್ನ ಕಥಾಹಂದರ ಹೊಂದಿರುವ "ವ್ಹೀಲ್ ಚೇರ್ ರೋಮಿಯೋ" ಚಿತ್ರದ ಲಿರಿಕಲ್ ಸಾಂಗ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿಡುಗಡಯಾದ ಮೂರೇ ದಿನಕ್ಕೆ ಆರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಗೊಂಡು ಜನಪ್ರಿಯವಾಗಿದೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಬರೆದಿರುವ "ಕನಸಿನಲ್ಲಿ ನಾ ನಡೆವೆ" ಎಂಬ ಸುಂದರಹಾಡನ್ನು ಸುಮಧುರ ಕಂಠದ ಗಾಯಕ ಸಂಚಿತ್ ಹೆಗ್ಡೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಬಿ.ಜೆ.ಭರತ್ ಈ ಚಿತ್ರದ ಸಂಗೀತ ನಿರ್ದೇಶಕರು. ಕಾಲು ಕಳೆದುಕೊಂಡಿರುವ ಹುಡುಗ ಹಾಗೂ ಕಣ್ಣಿಲ್ಲದಿರುವ ಹುಡುಗಿಯ ಪ್ರೇಮಕಥೆಯ "ವ್ಹೀಲ್ ಚೇರ್ ....