ಆರು ಹೆಸರಿನ ಚಿತ್ರದಲ್ಲಿ ವಿಶೇಷತೆಗಳು ವಿನೂತನ ಚಿತ್ರ ‘೬’ದಲ್ಲಿ ಹಲವು ವಿಶೇಷತೆಗಳು ಇರಲಿದೆ. ಶಿಶಿರಾ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಂಜುಸ್ವರಾಜ್‌ಗೆ ಆರನೇ ಚಿತ್ರವಾಗಿದೆ. ಕತೆಗೆ ಸೂಕ್ತವೆಂದು ಇದೇ ಸಂಖ್ಯೆಯನ್ನು ಬಳಸಲಾಗಿದೆ. ಆರು ಹುಡುಗರ ಸುತ್ತ ಕತೆ ನಡೆಯಲಿದೆ. ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕಂತೆ. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು ಒಬ್ಬಳೇ ....
ಮುಂದಿನ ಬದಲಾವಣೆ ಇದು ಸಿನಿಮಾದ ಹೆಸರು ‘ಮುಂದಿನ ಬದಲಾವಣೆ’ ಎಂದು ಸಿನಿಮಾದ ಜಾಹಿರಾತುಗಳು ಪತ್ರಿಕೆಯಲ್ಲಿ ಪ್ರಕಟವಾಗುವುದನ್ನು ನೋಡಿದ್ದೇವೆ. ಇದನ್ನೆ ಹೊಸ ತಂಡವೊಂದು ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಪ್ರವೀಣ್‌ಭೂಷಣ್.ಪಿ.ಎಸ್. ಕತೆ, ಐದು ಹಾಡಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜೊತಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್‌ಗೆ ಬಂಕ್ ಹೊಡೆದು ಟಾಕೀಸ್‌ಗೆ ಹೋಗುತ್ತಾನೆ. ಅಲ್ಲಿ ಬ್ರೇಕ್‌ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ. ಮುಂದೆ ....
ನಾಗರಭಾವಿಯಲ್ಲಿ ರೂಪ್‌ಸಂಗಮ್ ನೂತನ ಮಳಿಗೆ ಆರಂಭ ನವೀನ ವಿನ್ಯಾಸದ ಮಹಿಳೆಯರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಬಟ್ಟೆ ಅಂಗಡಿ ರೂಪ್ ಸಂಗಮ್ ಬೆಂಗಳೂರು ನಗರದಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದೆ. ಈಗಾಗಲೇ ಮಲ್ಲೇಶ್ವರಂನಲ್ಲೂ ತನ್ನ ಶಾಖೆಯನ್ನು ಹೊಂದಿರುವ ಈ ಸಿದ್ದ ಉಡುಪುಗಳ ಷೋ ರೂಂ ಈಗ ನಾಗರಭಾವಿಯಲ್ಲಿ ಮತ್ತೊಂದು ಶಾಖೆಗೆ ಚಾಲನೆ ನೀಡಿದೆ. ರೂಪ್ ಸಂಗಮ್ ಮಳಿಗೆಯ ಮಾಲೀಕರಾದ ಕೃಷ್ಣ ಆರ್. ಗೌಡ ಹಾಗೂ ಅವರ ಪುತ್ರರಾದ ರಾಜೇಶ್ ಕೆ.ಗೌಡ ರೂಪ್ ಸಂಗಮ್ ಹೊಸ ಮಳಿಗೆಯ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ರಾಕಿಂಗ್‌ಸ್ಟಾರ್ ಯಶ್ ಈ ನೂತನ ಮಳಿಗೆಯ ....
ಸಮ್ಮೋಹಕ ಪ್ರತಿಭೆ ನಿಖಿತಾರಮ್ಯಾಸತೀಶ್ ಬಣ್ಣದ ಲೋಕ ಎನ್ನುವುದು ಎಂತಹವರನ್ನು ಆಕರ್ಷಿಸುತ್ತದೆ. ಇದಕ್ಕೆ ಉದಾಹರಣೆ ೫.೮ ಅಡಿ ಎತ್ತರದ ನೀರೆ ‘ನಿಖಿತಾರಮ್ಯಾಸತೀಶ್’. ಹತ್ತಿರದ ಸಂಬಂದಿ ರೇಣುಕುಮಾರ್ ಚಿತ್ರ ನಿರ್ದೇಶಕ ಹಾಗೂ ಸ್ಟುಡಿಯೋ ಮಾಲೀಕರು. ಕೆಲವು ಸಿನಿಮಾದ ಕೆಲಸಕಾರ್ಯಗಳು ಇವರ ಸ್ಟುಡಿಯೋದಲ್ಲಿ ನಡೆಯುತ್ತಿರುವಾಗ ತಂತ್ರಜ್ಘರು, ಕಲಾವಿದರು ಬರುವುದು ಸಹಜ. ಶಾಲಾ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದಾಗ, ಬರುವವರನ್ನು ನೋಡುತ್ತಾ ತನಗೂ ಕಲಾವಿದೆ ಆಗಬೇಕೆಂಬ ಸಣ್ಣದೊಂದು ಆಸೆ ಅಂದೇ ಚಿಗುರಿದೆ. ಧೈರ್ಯ ಮಾಡಿ ಅಮ್ಮ ಲತಾಸತೀಶ್, ಅಪ್ಪ ಸತೀಶ್‌ಗೆ ಮನದ ಆಸೆಯನ್ನು ....
ಡಿಸೆಂಬರ್ ೭ಕ್ಕೆ ಮಟಾಶ್ ಬಿಡುಗಡೆ ಮಾಡ್ತಾ ಇರ‍್ತೇವೆ, ನೋಡ್ತಾ ಇರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಮಟಾಶ್’ ಚಿತ್ರವು ನೋಟು ಅಮಾನ್ಯಕರಣ ಸಂದರ್ಭದಲ್ಲಿ ನಡೆದ ಕತೆಯಾಗಿದೆ ಜೊತೆಗೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್‌ಸ್ಟರ‍್ಸ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್‌ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ಹುಡುಗಿಯರು ನಿರ್ಧಿಷ್ಟ ಕಾರಣಕ್ಕೆ ಬರುತ್ತಾರೆ. ಎಲ್ಲವು ಚೆನ್ನಾಗಿರುವಾಗ ಒಂದು ಘಟನೆಯಿಂದ ಎಲ್ಲವು ಉಲ್ಟಾಪಲ್ಟಾ ....
ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ ಮದುವೆ ನಂತರ ನಟಿ ಪ್ರಿಯಾಮಣಿ ಎರಡನೆ ಸಿನಿಮಾ ‘ಡಾ.೫೬’ದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ೩೬೦ ಡಿಗ್ರಿ ಎನ್ನುವಂತೆ ಮುಂದೆ ಸಂಭವಿಸುವ ಅಪರಾಧಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ತೂಕದ ಪಾತ್ರವಾಗಿದೆ. ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟರಿ ಕತೆಗೆ ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯಲಿರುವ ರಾಜಿಆನಂದ್‌ಲೀಲಾ ಹೇಳುವಂತೆ ೧೯೫೬ ರಿಂದ ೨೦೧೯ರ ವರೆಗೂ ಮನುಷ್ಯನಾದವನು ತನಗೆ ಅರಿವಿಲ್ಲದಂತೆ ಯಾವುದಾದರೂ ತಪ್ಪನ್ನು ಮಾಡುತ್ತಾನೆ. ಇದನ್ನು ಮಾಡಬೇಡಿ ಎಂದು ಅರಿವು ಮೂಡಿಸುವ ....
ತೆಲುಗು ರೆಬಲ್‌ನ್ನು ಕನ್ನಡದಲ್ಲಿ ಮಾಡಬೇಕಾಗಿತ್ತು - ಮುಖ್ಯಮಂತ್ರಿ ಇತ್ತೀಚೆಗೆ ನಿಧನರಾದ ಅಂಬರೀಷ್‌ಗೆ ಶ್ರದ್ದಾಂಜಲಿ ಅಂಬಿ ನಮನ ಕಾರ್ಯಕ್ರಮನ್ನು ಕರ್ನಾಟಕ ವಾಣಿಜ್ಯ ಮಂಡಯು ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿತ್ತು. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಮೈಸೂರಿನಲ್ಲಿ ಈಗಾಗಲೇ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನೂರು ಎಕರೆ ಜಾಗವನ್ನು ಇದಕ್ಕೆ ಅಂತಲೇ ಮೀಸಲಿಡಲಾಗಿದೆ. ಇದರಲ್ಲಿ ಫಿಲಿಂ ಸಿಟಿಯನ್ನು ತೆರೆಯಲಾಗುವುದು. ಅದರಂತೆ ಮುಂದಿನ ಪೀಳಿಗೆಗೆ ....
ಟೆಕ್ಕಿಗಳ ವೀಕೆಂಡ್ ಕಥನ ಟೆಕ್ಕಿಗಳು ಸೋಮವಾರದಿಂದ ಶುಕ್ರವಾರದವರೆಗೆ ಬ್ಯುಸಿಯಾಗಿದ್ದು, ಶುಕ್ರವಾರ ಸಾಯಂಕಾಲದಿಂದ ಭಾನುವಾರ ರಾತ್ರಿವರೆಗೆ ಏನು ಮಾಡುತ್ತಾರೆ ಎಂಬುದನ್ನು ‘ವೀಕೆಂಡ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಚಿತ್ರದ ಕ್ಲೈಮಾಕ್ಸ್ ಭಾಗವು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಮಾದ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ತಂಡವು ಸಿನಿಮಾದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿತು. ನಿರ್ದೇಶಕ ಸುರೇಶ್ ಮಾತನಾಡಿ ಪ್ರಸ್ತುತ ಸಾಫ್ಟ್‌ವೇರ್ ಜಗತ್ತಿನವರು ಯಾವ ರೀತಿಯಲ್ಲಿ ಇದ್ದಾರೆ. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಅನಂತ್‌ಸರ್ ....
ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ಗೆ ವಿದಾಯ
ಬೆಸ್ಟ್ ಫ್ರೆಂಡ್ಸ್ ಕಾರ್ಯಕ್ರಮದಲ್ಲಿ ಹೊಸ ಯೋಜನೆ ಮೂರನೇ ಜಾತಿಯ ಜನರ ಪರವಾಗಿ ಹಾಗೂ ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸರ್ವೊಚ್ಚ ನ್ಯಾಯಲವರು ತೀರ್ಪು ನೀಡಿದೆ. ಅದರಂತೆ ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ ೨೦೧೨, ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆ, ಉಳಿದಂತೆ ಕಾಲ್ಪನಿಕ ಕತೆಯನ್ನು ಸೃಷ್ಟಿಸಲಾಗಿದೆ. ತಾಯಿ-ತಂದೆಯರಿಂದ ಜನ್ಮ ಪಡೆದಿರುವ ಮೂರನೇ ಜಾತಿಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ....
ರಫ್ ಅಂಡ್ ಟಫ್ ಹೊಸಬರ ‘ರಫ್’ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಮಾಸ್ ಚಿತ್ರವೆಂದು ಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಿನಿಮಾದಲ್ಲಿ ಅಣ್ಣ-ತಂಗಿ ಬಾಂದವ್ಯ, ಭೂಗತ ಚಟುವಟಿಕೆಗಳು ಮತ್ತು ಮಾದ್ಯಮ ಮೂರು ಅಂಶಗಳು ಇರಲಿದೆ. ರಾಮ್‌ಸಂತೋಷ್ ಇಂಜಿನಿಯರಿಂಗ್ ಮುಗಿಸಿ, ಅಮೇರಿಕಾ, ಜರ್ಮನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಚಿತ್ರರಂಗ ಮೇಲಿನ ಪಸೆಯಿಂದ, ಕಂಪೆನಿಗೆ ಬೆನ್ನು ತೋರಿಸಿ ರಂಗಭೂಮಿಯಲ್ಲಿ ತೊಡಗಿಕೊಂಡು , ಶೌರ್ಯ ಚಿತ್ರದ ಮೂಲಕ ಸಾಧುಕೋಕಿಲ ಅವರಿಗೆ ಸಹಾಯಕ, ತಾರಕಾಸುರ ಚಿತ್ರಕ್ಕೆ ಸಹನಿರ್ದೇಶನದಲ್ಲಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಹೊಸತನದ ದೃಶ್ಯಗಳು, ತಾಂತ್ರಿಕತೆಯನ್ನು ....
ಮತ್ತೆ ಪರದೆ ಮೇಲೆ ಅಪ್ಪ-ಮಗ ಮಿ.ಡೂಪ್ಲಿಕೇಟ್ ಮತ್ತು ಅರ್ಜುನ್ ಚಿತ್ರದಲ್ಲಿ ದೇವರಾಜ್, ಪ್ರಜ್ವಲ್‌ದೇವರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗ್ಯಾಪ್ ನಂತರ ಹೊಸ ಚಿತ್ರ ‘ರುಧಿರ’ ದಲ್ಲಿ ಸೇರಿಕೊಂಡಿದ್ದಾರೆ. ಮಗ ನಾಯಕ, ಸಿಪಿಆರ್‌ಎಫ್ ಅಧಿಕಾರಿಯಾಗಿ ದೇವರಾಜ್ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಹೆಸರಿಡದ ಎರಡನೆ ಚಿತ್ರಕ್ಕೆ ವಸಿಷ್ಟಸಿಂಹ ನಾಯಕ. ಗಾಯಕ ವಿಜಯಪ್ರಕಾಶ್ ಚೂಚ್ಚಲಬಾರಿ ಸಂಗೀತ ನಿರ್ದಶನ ಮಾಡುತ್ತಿದ್ದು ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮವು ಸಣ್ಣದಾಗಿ ನಡೆದಿತ್ತು. ಆ ನಂತರ ಸಿನಿಮಾ ಏನಾಯಿತು ಎಂಬುದರ ....
ನಿಶ್ಯಬ್ದ, ಯುದ್ದದ ಥ್ರಿಲ್ಲರ್ ಕಥನ ಲವ್, ಥ್ರಿಲ್ಲರ್ ಇರುವ ‘’ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ’ ಚಿತ್ರವು ಟಾಲಿವುಡ್ ತಂಡದವರಿಮದ ಸಿದ್ದಗೊಂಡಿದೆ. ಆಹ್ಲಾದಕರ ಉತ್ತಮ ಸಂಗೀತಮಯ ಪ್ರೇಮಕತೆಯೊಂದಿರುವ ಕತೆಯಲ್ಲಿ ಯಾವುದಾದರೊಂದು ಸಂಭವಿಸಿದಾಗ ತಿರುವುಗಳು ಪಡೆದುಕೊಳ್ಳುತ್ತವೆ. ಅದರಿಂದ ಬದುಕಿ ಹೇಗೆ ಹೊರಗೆ ಬರುತ್ತಾರೆ. ನಾಯಕಿಯು ನಿಶ್ವಬ್ದವಾಗಿರುವುದನ್ನು ದುರುಪಯೋಗಿ ಪಡಿಸಿಕೊಳ್ಳುವ ದುರಳ ವ್ಯಕ್ತಿಯನ್ನು ಎದುರಿಸಲು ಅವಳು ಹೇಗೆ ಯುದ್ದ ಮಾಡುತ್ತಾಳೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು, ....
ತೆರೆ ಮೇಲೆ ಕರೆ ಮಾಡಿದ ಚಂದದಾರರು ‘ನೀವು ಕರೆ ಮಾಡಿದ ಚಂದದಾರರು’ ಸಿನಿಮಾದ ಕತೆಯು ಉತ್ತರ ಕರ್ನಾಟಕದ ಭಾಗದಲ್ಲಿ ನಡೆದ ಘಟನೆ ಮತ್ತು ಸಂಚಾರಿವಾಣಿ(ಮೊಬೈಲ್) ಬಳಕೆಯಿಂದ ಪಾಸಿಟೀವ್, ನೆಗಟೀವ್ ಅಂಶಗಳನ್ನು ಹೆಕ್ಕಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ. ಈಗಿನ ಯುವ ಜನಾಂಗವು ಫೋನ್ ವ್ಯಾಮೋಹಕ್ಕೆ ....
ದತ್ತಣ್ಣ ಅಭಿನಯಕ್ಕೆ ಪ್ರಶಸ್ತಿ? ‘ಅಜ್ಜ’ ಚಿತ್ರದಲ್ಲಿ ತಾತನಾಗಿ ಅಭಿನಯಿಸಿರುವ ಹಿರಿಯ ನಟ ದತ್ತಣ್ಣರಿಗೆ ೨೦೧೮ ಸಾಲಿನ ಪ್ರಶಸ್ತಿ ಬರುತ್ತದೆಂದು ತಂಡವು ಆಶಾಭಾವನೆಯಲ್ಲಿದೆ. ಹಾರರ್, ಥ್ರಿಲ್ಲರ್ ಚಿತ್ರದ ಕತೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕನಿಷ್ಟ ಒಂದು ಅವಧಿಗಾದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಬೇಕೆಂದು ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು ವೈದ್ಯರು ಮೂಲಭೂತ ಸೌಕರ್ಯವಿಲ್ಲದ ಸ್ಥಳಕ್ಕೆ ಶುಶ್ರೂಷೆ ಮಾಡಲು ಹೋದಾಗ ದುರಂತಕ್ಕೆ ಸಿಕ್ಕಿಹಾಕಿ ಕೊಳ್ತಾರೆ. ಅಲ್ಲಿ ಅಜ್ಜ, ಮೊಮ್ಮಗಳು ಸಿಗುತ್ತಾರೆ. ಮುಂದೇನು ಎನ್ನುವುದನ್ನು ....
ಅಬ್ಬರಿಸಲು ಬರುತ್ತಿದ್ದಾನೆ ತಾರಕಾಸುರ ‘ತಾರಕಾಸುರ’ ಚಿತ್ರದ ಖಳನಟ ಡ್ಯಾನಿಸಫಾನಿಗೆ ಇದೇ ಹೆಸರಿನಿಂದ ಗುರುತಿಸಲಾಗಿದೆಯಂತೆ. ಬುಡ್‌ಬುಡ್‌ಕೆ ಜಾನಪದ ಕಲೆಯು ಅಳಿವಿನ ಅಂಚಿನಲ್ಲಿದೆ. ಅವರು ರಾತ್ರಿ ಹೊತ್ತು ಆಲಕ್ಕಿ ಹೇಳುತೈತೆ ಎಂದು ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಆಲಕ್ಕಿ ಎಂದರೆ ಲಕ್ಷೀ ಎನ್ನುವುದುಂಟು. ಖಳನಟ ತನ್ನ ಒಳತಿಗಾಗಿ ಇವರುಗಳನ್ನು ಹೇಗೆ ಬಳಸಿಕೊಳ್ತಾನೆ ಎಂಬುದನ್ನು ಕಮರ್ಷಿಯಲ್ ಅಂಶಗಳಲ್ಲಿ ತೋರಿಸಲಾಗಿದೆ. ಭಾರತದಲ್ಲಿ ಸುಮಾರು ಒಂದೂವರೆ ಕೋಟಿ ಅಲೆಮಾರಿ ಜನಾಂಗದವರು ಇರುವುದು ತಿಳಿದುಬಂದಿದೆ. ಎಂ.ಕೆ.ಮಠ ಜನಾಂಗದ ನಾಯಕ, ಕರಿಸುಬ್ಬು, ನಾಯಕನೊಂದಿಗೆ ಇರುವ ಸಾಧುಕೋಕಿಲ ಅವರು ....
ಜನರ ಎದುರು ಫ್ರೆಂಡ್ಲಿ ಬೇಬಿ ‘ಫ್ರ್ರೆಂಡ್ಲಿ ಬೇಬಿ’ ಕತೆಯು ೨೦೧೬ರಲ್ಲಿ ನೋಟು ಅಮಾನ್ಯಕರಣ ಸಂದರ್ಭದಲ್ಲಿ ಉಂಟಾದ ಸಂಚಲನ, ಇದನ್ನು ರಾಜಕೀಯ ಧುರೀಣರು ಹೇಗೆ ಬಳಸಿಕೊಂಡರು. ಮತ್ತೋಂದು ಏಳೆಯಲ್ಲಿ ಪತ್ರಕರ್ತೆಯೊಬ್ಬರ ದಾರುಣ ಕೊಲೆ. ಇವೆರಡು ವಾಸ್ತವದ ಕತೆಯಲ್ಲಿ ಸಿಲುಕಿದ ನಾಯಕ, ನಾಯಕಿ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಅಕ್ಕಾ ಎಲ್ಲಿದ್ದೀಯಾ? ಎಂದು ಟೀಸರ್‌ನಲ್ಲಿ ಕಂಡು ಬಂದ ದೃಶ್ಯವು ಹೈಲೈಟ್ ಆಗಿದೆಯಂತೆ. ಮುಖ್ಯ ಪಾತ್ರದಲ್ಲಿ ಅರ್ಜುನ್‌ಸುಂದರಂ, ಜ್ಯೋತಿ ಇಬ್ಬರಿಗೂ ನಟನೆ ಹೊಸ ....
ಚಿಟ್ಟೆ ಆಲ್ಬಂ ಗೀತೆಗಳು ಸರೆಗಮಪ ‘ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋ ಜೀ ವಾಹಿನಿಯಲ್ಲಿ ಪ್ರಸಾರಗೊಂಡು ಹಲವು ಹೊಸ ಗಾಯಕರುಗಳು ಗುರುತಿಸಿಕೊಂಡಿದ್ದರು. ಇದರಲ್ಲಿ ೧೦ನೇ ತರಗತಿ ಓದುತ್ತಿರುವ ನಿಹಾರಿಕಾ ಹಿಂದಿ ಜೀ ವಾಹಿನಿಯಲ್ಲಿ ನಡೆಸಲಾದ ಸೀಸನ್-೫ರಲ್ಲಿ ಟಾಪ್ ೩೦ ಶ್ರೇಣಿಯಲ್ಲಿ ಆಯ್ಕೆಯಾಗಿದ್ದರು. ಕನ್ನಡದ ಸೀಸನ್-೧೦ರಲ್ಲಿ ಮೂರನೇ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ತಂದೆ ಸಿವಿಲ್ ಇಂಜಿನಿಯರ್ ರಾಜಶೇಖರಮೂರ್ತಿ ಗಾಯಕನಾಗಬೇಕೆಂಬ ಬಯಕೆ ಹೊಂದಿದ್ದರು. ಅದು ಈಡೇರದೆ ಮಗಳನ್ನು ಗಾಯಕಿ ಮಾಡುವಲ್ಲಿಗೆ ತನ್ನ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ....
ಅನುಕ್ತ ಹಾಡುಗಳ ಸಮಯ ವಿನೂತನ ಚಿತ್ರ ‘ಅನುಕ್ತ’ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ ದರ್ಶನ್ ಹೇಳಲಾಗದಕ್ಕೆ ಶೀರ್ಷಿಕೆ ಅರ್ಥಕೊಡುತ್ತದೆಂದು ತಿಳಿದಿದೆ. ಪ್ರೋಮೋ, ಹಾಡು ನೋಡಿದರೆ ಇದೊಂದು ವಿಭಿನ್ನ ಚಿತ್ರವೆಂದು ತಿಳಿಯುತ್ತದೆ. ಈಗ ನಮ್ಮಲ್ಲೂ ಹೊಸ ರೀತಿಯ ತಂತ್ರಜ್ಘರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಉತ್ತಮ ಕತೆ ಬಯಸುವವರು ತಮಿಳು, ಹಾಡು, ಫೈಟ್ ಇಷ್ಟಪಡುವವರು ತೆಲುಗು, ವಿದೇಶ ಸ್ಥಳಗಳನ್ನು ನೋಡುವವರು ಹಿಂದಿ ಸಿನಿಮಾಕ್ಕೆ ಹೋಗುತ್ತಾರೆ. ಈಗಿನ ಟ್ರೆಂಡ್‌ಗೆತಕ್ಕಂತೆ ಚಿತ್ರ ಇದೆ ನೋಡುವಾ ಅಂತ ಹೋಗುವುದು ಕನ್ನಡ ಸಿನಿಮಾಕ್ಕೆ. ಅಂತಹ ಪರಿಸ್ಥಿತಿ ನಮಗೆ ಬಂದಿದೆ. ಆ ತರಹದ ಚಿತ್ರಗಳು ....