ಸಿನಿಮಾ ನೋಡಿರಿದುಬಾರಿ ಬಹುಮಾನ ತಮ್ಮದಾಗಿಸಿಕೊಳ್ಳಿ ಜನರನ್ನುಚಿತ್ರಮಂದಿರದತ್ತ ಸೆಳೆಯಲು ನಾನಾ ರೀತಿಯ ವಿನೂತನ ಪ್ರಯತ್ನಗಳನ್ನು ಸಿನಿಮಾತಂಡವು ಮಾಡುತ್ತಾಬಂದಿದೆ. ಇದುಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ. ನಾವು ಹೇಳಹೂರಟಿರುವುದು ‘ಶ್ರೀ ಭರತ ಬಾಹುಬಲಿ’ ಚಿತ್ರದಕುರಿತಂತೆ.ಯಸ್, ಐಶ್ವರ್ಯಡೆವಲಪರ‍್ಸ್ ಮಾಲೀಕ ಶಿವಪ್ರಕಾಶ್ ಆರುಕೋಟಿಖರ್ಚು ಮಾಡುವುದರ ಮೂಲಕ ಪ್ರಥಮಅನುಭವಎನ್ನುವಂತೆನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್‌ಆಗಿದ್ದು, ಯಶ್ ತುಣುಕುಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.ಜನವರಿ ೧೭ರಂದು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರು ....
ಆತ್ಮಹತ್ಯೆ ಮಹಾಪಾಪ ಪ್ರಸಕ್ತ ಬದುಕಿನಲ್ಲಿ ಸಣ್ಣದಾದ ಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದು ಅದಕ್ಕೆ ಶರಣಾಗುತ್ತಾರೆ. ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರು ಇದೇ ದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಗ್ಯಾಪ್ ನಂತರ ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣ ಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರು ಕ್ಯಾಪ್ಟನ್ ಜಿ.ಜಿ.ರಾವ್ ಬರೆದಿರುವ ಇಂಗ್ಲೀಷ್, ತೆಲುಗು ಪುಸ್ತಕವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದ ಪ್ರತಿಗೆ ಅನುಗುಣವಾಗಿ ಅಲ್ಲಿನ ಸರ್ಕಾರವು ....
ಹೊಸ ವರುಷ ಹೊಸಬರ ಹಗ್ಗ ಹೊಸ ಸಂವತ್ಸರದ ಎರಡನೇ ದಿನದಂದು ‘ಹಗ್ಗ’ ಚಿತ್ರದ ಮಹೂರ್ತ ನಡೆಯಿತು. ನಿರ್ಮಾಪಕ ರಾಜ್‌ಭಾರದ್ವಾಜ್ ಅವರಿಗೆ ಕನಸಲ್ಲಿ ಒಂದು ಏಳೆ ಹೊಳೆದಿದೆ. ತಡಮಾಡದೆ ಅದನ್ನು ವಿಸ್ತಾರ ಮಾಡಿ ಚಿತ್ರಕತೆ ಸಿದ್ದಪಡಿಸಿ ಮೂರು ಹಾಡುಗಳಿಗೆ ರಾಗ ಒದಗಿಸಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಕಾಲ್ಪನಿಕ ಊರು ನಾಗೇಕೊಪ್ಪಲುದಲ್ಲಿ ಬಹಳ ವರ್ಷಗಳಿಂದ ನಿಗೂಡ ಸಮಸ್ಯೆಯಿಂದ ಜನರು ಸಾವಿಗೆ ಶರಣಾಗುತ್ತಿರುತ್ತಾರೆ. ಈ ಸಾವಿಗೂ ಹಗ್ಗಕ್ಕೂ ಸಂಬಂದವಿರುತ್ತದೆ. ಇದರ ಕಾರಣ ಯಾರಿಗೂ ತಿಳಿದಿರುವುದಿಲ್ಲ. ಕಥಾನಾಯಕ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಹುಡುಗಿಯ ಪರಿಚಯವಾಗಿ ಪ್ರೀತಿ ....
ಐಎಎಸ್ ಯುವ ರೈತ ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್‌ಕುಮಾರ್ ನಟಿಸಿದ್ದ ‘ರಾಜೀವ’ ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕಥನಾಯಕ ಐಎಎಸ್ ಮಾಡಿ ಪಟ್ಟಣದಿಂದ ಹಳ್ಳಿಗೆ ಬರುತ್ತಾನೆ. ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಕಂಡು ಖೇದಗೊಳ್ಳುತ್ತಾನೆ. ನಂತರ ಹಳ್ಳಿಗಳನ್ನು ತೊರೆದು ಸಿಟಿಗೆ ಬರುತ್ತಿರುವ ಯುವಕರ ಮನಸ್ಸನ್ನು ಬದಲಿಸಿ ....
ಬದುಕಿನಲ್ಲಿ ಎಲ್ಲರು ವೇಷಧಾರಿಗಳು ಖಾಕಿ,ಖಾದಿ,ಖಾವಿ ಧರಿಸುವವರನ್ನು ವೇಷಧಾರಿಗಳು ಅಂತ ಕರೆಯುತ್ತಾರೆ. ನಿಜ ಹೇಳಬೇಕೆಂದರೆ ಜೀವನದಲ್ಲಿ ನಾವೆಲ್ಲರೂ ಇದೇ ರೀತಿಯಲ್ಲಿ ಗುರುತಿಸಿಕೊಂಡಿದ್ದೇವೆ. ಇದನ್ನು ಹೇಳಲು ಪೀಠಿಕೆ ಇದೆ. ಇವನು ಅವ್ನನಲ್ಲ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಹೊಸಬರ ‘ವೇಷಧಾರಿ’ ಸಿನಿಮಾವೊಂದು ಸದ್ದಿಲ್ಲದೆ ಬೆಳಗಾಂ, ಬೆಂಗಳೂರು, ಮಂಡ್ಯಾ, ಕೊಡಗು, ಮಂಗಳೂರು, ಇಳಕಲ್ ಡ್ಯಾಂ, ಗೋಕಾಕ್ ಫಾಲ್ಸ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ವೇಷ ಧರಿಸಿಕೊಂಡು ಆಷಾಡಭೂತಿಯಂತೆ ನಾಟಕವಾಡುವ ಸ್ವಾಮೀಜಿಗಳು, ಮಠಾಧೀಕ್ಷರ ಕುರಿತಂತೆ ....
ಯಾರ್ ಮಗದಲ್ಲಿ ರಿಯಲ್ ರೌಡಿಗಳು ಓಂ,ಕರಿಯ ಚಿತ್ರದಲ್ಲಿ ರಿಯಲ್ ರೌಡಿಗಳು ನಟಿಸಿದ್ದು ಸುದ್ದಿಯಾಗಿತ್ತು. ಈಗ ‘ಯಾರ್ ಮಗ’ ಸಿನಿಮಾಕ್ಕೆ ಶಿವಾಜಿನಗರದ ರೌಡಿಗಳಾದ ತನ್ವೀರ್, ಇಸ್ತಾಕ್‌ಪೈಲ್ವಾನ್ ಮತ್ತು ಕುಟ್ಟಿರಾಜು ಅಭಿನಯಿಸುತ್ತಿರುವುದು ವಿಶೇಷ. ೯೫-೨೦೦೦ ಇಸವಿಯಲ್ಲಿ ನಡೆಯುವ ರೌಡಿಸಂ ಕತೆಯಾಗಿದ್ದರಿಂದ ಸನ್ನಿವೇಶಗಳು ನೈಜವಾಗಿರಲೆಂದು ಇವರನ್ನು ಒಪ್ಪಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಎಲ್ಲಾ ಇದ್ದವರು ಕೆಟ್ಟ ದಾರಿಗೆ ಹೋಗುತ್ತಾರೆ. ಯಾರ ಮನೆಯಲ್ಲಿ ಇಂತಹ ಘಟನೆ ನಡಿಬಾರದು. ಇವನು ನನ್ನ ಮಗ ಅಂತ ಹೇಳಿದರೆ ಪರಿಣಾಮ ಬೇರೆನೇ ಆಗುತ್ತದೆ. ನೋಡುಗರಿಗೆ ನಮ್ಮ ಏರಿಯಾದಲ್ಲಿ ನಡೆದಂತ ಘಟನೆಗಳು ಎಂಬಂತೆ ಭಾಸವಾಗುತ್ತದೆ. ಶೇಕಡ ....
ರಣ ರಣ ಹಾಡುಗಳು ‘ರಣಂ’ ಚಿತ್ರದಲ್ಲಿ ಅತಿರಥ ಮಹಾರಥರ ತಂಡವೇ ಸೇರಿಕೊಂಡಿದೆ. ಪ್ರಸಕ್ತ ಸ್ಟಾರ್ ನಟಿ ಅನುಷ್ಕಾಶೆಟ್ಟಿ ಅವರನ್ನು ಪರಿಚಯಿಸಿದ ತೆಲುಗು ನಿರ್ದೇಶಕ ವಿ.ಸಮುದ್ರ, ಯುವರಾಜ, ಬಹದ್ದೂರ್, ಭರ್ಜರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆರ್.ಶ್ರೀನಿವಾಸ್, ಆ ದಿನಗಳ ಖ್ಯಾತಿಯ ಚೇತನ್, ಚಿರಂಜೀವಿಸರ್ಜಾ, ವರಲಕ್ಷೀಶರತ್‌ಕುಮಾರ್, ಭರ್ಜರಿಚೇತನ್‌ಕುಮಾರ್-ಎ.ಪಿಅರ್ಜುನ್ ಸಾಹಿತ್ಯದ ಆರು ಹಾಡುಗಳಿಗೆ ಸಂಗೀತ ಒದಗಿಸಿರುವ ರವಿಶಂಕರ್, ಸಾಹಸ ಡಾ.ರವಿವರ್ಮ-ಥ್ರಿಲ್ಲರ್‌ಮಂಜು, ಛಾಯಾಗ್ರಹಣ ನಿರಂಜನ್‌ಬಾಬು, ಸಂಕಲನ ದೀಪು.ಎಸ್.ಕುಮಾರ್ ಇನ್ನು ಮುಂತಾದ ಪ್ರತಿಭೆಗಳು ಇರುವುದರಿಂದಲೇ ಸಿನಿಮಾಕ್ಕೆ ಹೈಪ್ ಕ್ರಿಯೆಟ್ ....
ಕೊನೆ ಹಂತದಲ್ಲಿ ಹಿಕೋರಾ ಒಂದು ಕಾಲದಲ್ಲಿ ಪ್ರಸಿದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ಹೆಚ್‌ಎಂಟಿ ಕಾರ್ಖಾನೆ ಇಂದು ನೆನಪಾಗಿ ಉಳಿದಿದೆ. ಆದರೆ ಪಾಳುಬಿದ್ದ ಕಟ್ಟಡವು ಚಿತ್ರರಂಗಕ್ಕೆ ಉಪಯೋಗವಾಗುತ್ತಿದೆ. ಸದ್ಯ ‘ಹಿಕೋರಾ’ ಸಿನಿಮಾದ ಕೊನೆ ಹಂತದ ಚಿತ್ರೀಕರಣವು ಇದೇ ಜಾಗದಲ್ಲಿ ನಡೆಯುತ್ತಿತ್ತು. ಮಾದ್ಯಮದವರು ಅಲ್ಲಿಗೆ ಭೇಟಿ ನೀಡಿದಾಗ ‘ಏಳೋ ಎದ್ದೇಳೋ ಗುರು ಮುಟ್ಟುವ ತನಕ ನಿಲ್ಲದಿರೋ’ ಗೀತೆಗೆ ಮನೋಜ್ ಮತ್ತು ಯಶವಂತ್‌ಶೆಟ್ಟಿ ಸಹಕಲಾವಿದರೊಂದಿಗೆ ಅರವಿಂದ್ ಹೇಳಿಕೊಟ್ಟಂತೆ ಹೆಜ್ಜೆ ಹಾಕುತ್ತಿದ್ದರು. ಇದನ್ನು ಕೆಳಗಿನಿಂದ ರಮೇಶ್‌ಬಾಬು ಸೆರೆಹಿಡಿಯತ್ತದ್ದರು. ಕೊನೆಗೆ ಶಾಟ್ ಓಕೆ ಯಾಗಿದ್ದರಿಂದ ತಂಡವು ಮಾದ್ಯಮದ ....
ಗಿನ್ನಿಸ್ ದಾಖಲೆಗೆ ಮುಖ್ಯ ಮಂತ್ರಿ ನಾಟಕ ಸತತ ನಲವತ್ತು ವರ್ಷಗಳ ಕಾಲ ‘ಮುಖ್ಯ ಮಂತ್ರಿ’ ನಾಟಕಕ್ಕೆ ನಿರ್ದೇಶನ ಮಾಡಿರುವ ಡಾ.ಬಿ.ವಿ.ರಾಜರಾಂ ಮತ್ತು ಅದೇ ಪದವಿಯಲ್ಲಿ ನಟಿಸಿರುವ ಮುಖ್ಯಮಂತ್ರಿ ಚಂದ್ರು ಇಬ್ಬರ ಸಾರಥ್ಯದಲ್ಲಿ ೭೦೦ನೇ ಯಶಸ್ವಿ ಪ್ರದರ್ಶನ ಜನವರಿ ನಾಲ್ಕರಂದು ನಡೆಯಲಿದೆ. ಇದಕ್ಕಿಂತ ಹೆಚ್ಚಾಗಿ ವಿಶ್ವದಲ್ಲೇ ನಾಲ್ಕು ದಶಕಗಳ ಅವಧಿಗೆ ಒಂದೇ ನಾಟಕದಲ್ಲಿ ಇವರಿಬ್ಬರೇ ಗುರುತಿಸಿಕೊಂಡಿದ್ದರಿಂದ ಗಿನ್ನಿಸ್ ದಾಖಲೆಗೆ ಅರ್ಹವಾಗುವ ಲಕ್ಷಣಗಳು ಕಂಡುಬಂದಿದೆ. ೧೯೭೧ರಲ್ಲಿ ಕಲಾಗಂಗೋತ್ರಿ ರಂಗ ತಂಡವು ಪ್ರಾರಂಭಗೊಂಡು ಇದರ ಮೂಲಕ ಸದರಿ ನಾಟಕವು ಶುರುವಾಗಿತ್ತು. ಅಲ್ಲದೆ ಹಲವಾರು ಪ್ರತಿಭೆಗಳು ಇಲ್ಲಿಂದ ತರಭೇತಿ ಪಡೆದು ....
ಎರಡು ಪೀಳಿಕೆಯ ನಡುವಿನ ಅಂತರದ ಜಿಲ್ಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಕಷ್ಟು ಪ್ರತಿಭೆಗಳು ಸ್ಯಾಂಡಲ್‌ವುಡ್‌ದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅದೇ ಹಾದಿಯಲ್ಲಿ ಮಂಗಳೂರು ಭಾಗದವರು ಸತತ ಎರಡು ವರ್ಷ ಶ್ರಮವಹಿಸಿ ‘ಜಿಲ್ಕ’ ಚಿತ್ರವನ್ನು ಮುಗಿಸಿದ್ದಾರೆ. ಶೀರ್ಷಿಕೆ ಪೀಳಿಗೆ ಎನ್ನುವ ಅರ್ಥ ಕೊಡುತ್ತದೆ. ಆಫ್ರಿಕನ್ ದೇಶದ ಸೋಮಾಲಿ ಭಾಷೆಯಾಗಿದ್ದು, ಕ್ಯಾಚಿ ಇರಲೆಂದು ಇದೇ ಹೆಸರಿಗೆ ಮಾರುಹೋಗಿದ್ದಾರೆ. ಪಯಣದ ತಲೆಮಾರುಗಳು ಎಂದು ಇಂಗ್ಲೀಷ್ ಅಡಿಬರಹವಿದೆ. ಪ್ರಸಕ್ತ ಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮ ಕತೆ ಮತ್ತು ಎರಡು ಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಬರುತ್ತದೆ. ....
ಮೌನಂ ಸಮ್ಮತಿ ಲಕ್ಷಣಂ ಸಂಸ್ಕ್ರತ ಪದ ‘ಮೌನಂ’ ಎಲ್ಲ ಭಾಷೆಗಳಿಗೂ ಹೊಂದಿಕೊಳ್ಳುತ್ತದೆ. ಅದಕ್ಕಾಗಿ ಚಂದನವನದಲ್ಲಿ ಇದೇ ಹೆಸರಿನೊಂದಿಗೆ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಅಡಿಬರಹ ಹಾಗೂ ಭಾರತೀಯ ಚಿತ್ರರಂಗದ ವಿನೂತನ ಸಿನಿಮಾವೆಂದು ಹೇಳಿಕೊಂಡಿದೆ. ಚಿತ್ರದ ಕುರಿತು ಹೇಳುವುದಾದರೆ ನಾವುಗಳು ಬೇರೆಯವರನ್ನು ಶತ್ರುಗಳು ಅಂತ ನೋಡುತ್ತೇವೆ. ಆದರೆ ನಮ್ಮೊಳಗೆ ಇದರ ಗುಣ ಇರುವುದು ತಿಳಿದಿರುವುದಿಲ್ಲ. ಒಳ್ಳೇದು ಮಾಡಿದರೂ ಕಷ್ಟದಲ್ಲಿ ಸಿಲುಕುತ್ತೇವೆ. ಬುದ್ದಿ, ಜೀವನ ಬೇರೆ ಬೇರೆಯಾಗಿರುತ್ತದೆ. ಅತಿ ಬುದ್ದಿವಂತಿಕೆ ತೋರಿಸಿದರೆ ಏನಾದರೂ ಅವಘಡಗಳು ಸಂಭವಿಸುತ್ತದೆ. ಎಲ್ಲರೂ ತಮ್ಮ ಮಕ್ಕಳು ಒಳ್ಳೆಯ ....
ಕನಸು ಮತ್ತು ವಾಸ್ತವಗಳ ನಡುವಿನ ಕಥನ ಕನಕದಾಸರ ‘ನೀ ಮಾಯೆಯೊಳಗೆ’ ಎನ್ನುವ ನುಡಿಯಂತೆ ಹೊಸಬರ ‘ಬ್ಲಾಂಕ್’ ಚಿತ್ರದ ಕತೆಯಾಗಿದೆ. ಮಾದಕ ದ್ರವ್ಯ ವ್ಯಸನಿಗಳು ಇದನ್ನು ತಗೆದುಕೊಂಡಾಗ ಏನಾಗುತ್ತಾರೆ. ಆ ಸಮಯದಲ್ಲಿ ಏನು ಮಾಡುತ್ತಾರೆ? ಅದರ ಪರಿಣಾಮ ಏನಾಗುತ್ತದೆ. ಇದರ ಮೇಲೆ ಕೇಂದ್ರಿಕರಿಸಲಾಗಿದೆ. ಹದಿಮೂರನೆ ಮಹಡಿಯಲ್ಲಿ ನಡೆಯುವಂತ ಕಟ್ಟುಕತೆಯು ಸೈಕಾಲಜಿಕಲ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಜೊತೆಗೆ ಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹಾಗಂತ ಇದರ ಸುತ್ತ ಸಾಗದೆ ಫ್ಯಾಮಿಲಿ ಡ್ರಾಮಾ, ಎಲ್ಲಾ ಜಾನರ್‌ಗಳಿಂದ ತುಂಬಿದ ಚಿತ್ರವಾಗಿದೆ. ಮೈಸೂರಿನ ಎಸ್.ಜಾಯ್ ಇಂಜನಿಯರಿಂಗ್ ಮುಗಿಸಿ ಬಣ್ಣದ ಮೋಹದಿಂದ ಚಿತ್ರರಂಗದಲ್ಲಿ ಒಂದಷ್ಟು ಅನುಭವಗಳನ್ನು ....
ಅಮೃತವಾಹಿನಿಗೆ ಹಿರಿಯ ಕವಿ ನಾಯಕ
ಹಿರಿಯ ಕವಿ,ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ೮೫ನೇ ಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರು ಮತ್ತು ಫಿಲಿಂ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರ ಮಧ್ಯೆ ೭೫ನೇ ವಯಸ್ಸಿನಲ್ಲಿ ‘ಹಸಿರು ರಿಬ್ಬನ್’ಗೆ ಆಕ್ಷನ್ ಹೇಳುವುದರ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡು, ೭೬ನೇ ವಯಸ್ಸಿಗೆ ‘ಅಮೃತವಾಹಿನಿ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕಲಾವಿದರಾಗಿದ್ದಾರೆ. ಇದು ಹೃದಯದ ಹಾದಿ ಎಂಬುದರ ಅಡಿಬರಹವಿದೆ. ಸೋಮವಾರ ರೇಣುಕಾಂಬ ಪ್ರಿವ್ಯೂ ಥಿಯೇಟರ್‌ದಲ್ಲಿ ಹಾಡುಗಳು ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಗಣ್ಯರು, ತಂಡವು ಕವಿಗಳ ಗುಣಗಳನ್ನು ತೆರೆದಿಟ್ಟರು.
ಭಾರತದ ಪ್ರಪ್ರಥಮ ಶೂನ್ಯ ಬಂಡವಾಳದ ಚಿತ್ರ ಇಂದು ಚಂದನವನದಲ್ಲಿ ನಿರ್ಮಾಪಕರು ನಮ್ಮ ಚಿತ್ರಕ್ಕೆ ಲಕ್ಷ, ಕೋಟಿ ಖರ್ಚಾಗಿದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಪ್ರೀತಿಯೂ ಕಮರ್ಷಿಯಲ್ ಆಗಿರುವ ಕಾಲವಾಗಿದೆ. ಸೋಜಿಗ ಎನ್ನುವಂತೆ ಯುವ ಸಮಾನ ಮನಸ್ಕರ ಸಿನಿಮಾಮೋಹಿಗಳು ಗಮಕದಿಂದ ಹಣ ಹೂಡದಯೇ ಶ್ರಮದಾನ ಮಾಡುವ ಮೂಲಕ ‘ಮದುವೆ ಊಟ’ ಚಿತ್ರವನ್ನು ಸೆನ್ಸಾರ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಬಸವಣ್ಣನವರ ವಚನ, ಸಿನಿಮಾ ತಯಾರಿಕೆಗೂ ಸಾಮ್ಯತೆ ಇದೆ. ಕಲಾವಿದರು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಇವೆಲ್ಲಾವನ್ನು ಉಚಿತವಾಗಿ ಮಾಡಿರುವುದರ ಬಗ್ಗೆ ಯು ಟ್ಯೂಬ್‌ದಲ್ಲಿ ....
ಪ್ರತಿಯೊಬ್ಬರಲ್ಲೂ ಜಂಟಲ್‌ಮನ್ ಇರುತ್ತಾರೆ ಪ್ರಜ್ವಲ್‌ದೇವರಾಜ್ ಅಭಿನಯದ ‘ಜಂಟಲ್‌ಮನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿದೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡ ಕತೆಯಾಗಿದೆ. ಸಾಮಾನ್ಯ ಮನುಷ್ಯನಾದವನು ದಿನವೊಂದಕ್ಕೆ ಏಳು ಗಂಟೆ ನಿದ್ದೆ ಮಾಡುತ್ತಾನೆ. ಈ ಖಾಯಿಲೆಯಿಂದ ಬಳಲುತ್ತಿರುವವರು ಆರು ಗಂಟೆ ಮಾತ್ರ ಎಚ್ಚರವಿದ್ದು, ಉಳಿದ ಹದಿನೆಂಟು ಘಂಟೆಗಳ ಸಮಯದಲ್ಲಿ ನಿದ್ರೆಗೆ ಜಾರುತ್ತಾರೆ. ಅದಕ್ಕಾಗಿ ಅಡಿಬರಹದಲ್ಲಿ ಕುಂಭಕರ್ಣನೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಆಹಾರ ಸೇವನೆ, ಪ್ರೀತಿ, ಹೊಡೆದಾಟ, ಅಳು ಸೇರಿದಂತೆ ಎಲ್ಲವನ್ನು ಮಾಡುವ ಒಂದು ರೀತಿಯ ಅಸಾಮಾನ್ಯ ಮನುಷ್ಯ. ಅವರು ....
ಟೈಮು ನಂದು ಕರ್ನಾಟಕ ನನ್ನದು - ಸಲ್ಮಾನ್ ಖಾನ್ ಅದ್ದೂರಿ ಚಿತ್ರ ‘ದಬಾಂಗ್-೩’ ವಿಶ್ವದಾದ್ಯಂತ ಶುಕ್ರವಾರದಂದು ತೆರೆಗೆ ಬರುತ್ತಿರುವುದರಿಂದ ನಾಯಕ ಸಲ್ಮಾನ್‌ಖಾನ್ ಪ್ರಚಾರದ ಕೊನೆ ಹಂತವಾಗಿ ಸಿಲಿಕಾನ್‌ಸಿಟಿಗೆ ಆಗಮಿಸಿದ್ದರು. ಇವರೊಂದಿಗೆ ಸುದೀಪ್, ನಾಯಕಿಯರಾದ ಸೋನಾಕ್ಷಿಸಿನ್ಹಾ, ಸಾಯಿಮಂಜ್ರೆಕರ್, ನಿರ್ದೇಶಕ ಪ್ರಭುದೇವ ಉಪಸ್ತಿತರಿದ್ದು, ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು. ಅದರಲ್ಲಿ ಮುಖ್ಯವಾಗಿ ಹೇಳಿದ್ದನ್ನು ಓದುಗರಿಗೆ ಸಾದರಪಡಿಸಲಾಗಿದೆ. ಸಲ್ಮಾನ್‌ಖಾನ್: ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರವನ್ನು ಜನರು ನೋಡುವುದರಿಂದ ಕನ್ನಡದಲ್ಲಿ ಡಬ್ ಮಾಡಲು ಹೇಳಲಾಯಿತು. ಇದು ನನ್ನ ....
ನಿರ್ದೇಶಕನಿಗೆ ನಿರ್ಮಾಪಕನಿಂದ ತೊಂದರೆಗಳು ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕ ಸಿನಿಮಾ ಬಿಡುಗಡೆಯಾಗುವರೆಗೂ ಒಟ್ಟಿಗೆ ಇರುತ್ತಾರೆ. ಅಕಸ್ಮಾತ್ ಫ್ಲಾಪ್ ಕಂಡರೆ ವೈಮನಸ್ಯ, ದೂರುಗಳು ಬರುವುದಲ್ಲದೆ, ನ್ಯಾಯಲಯದ ಹಂತಕ್ಕೂ ತಲುಪುತ್ತದೆ. ಇಂತಹ ಪ್ರಸಂಗಗಳು ಕೆಲವು ಚಿತ್ರಗಳಿಗೆ ಮಾತ್ರ ಗತಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಅದೇ ರೀತಿ ‘ಪತಿಬೇಕು ಡಾಟ್ ಕಾಮ್’ ಸಿನಿಮಾಕ್ಕೆ ಒದಗಿಬಂದಿದೆ. ಜೈ ಮಾರುತಿ ಪಿಕ್ಚರ‍್ಸ್ ಮುಖಾಂತರ ಮಂಜುನಾಥ್.ಬಿ, ಶ್ರೀನಿವಾಸ್.ಎಸ್. ಮತ್ತು ನಿರ್ದೇಶಕ ರಾಕೇಶ್ ಮೂವರು ಸೇರಿಕೊಂಡು ಹದಿನೈದು ಲಕ್ಷದಂತೆ ಬಂಡವಾಳ ಹೂಡಿದ್ದಾರೆ. ಒಂದು ವೇಳೆ ಸಿನಿಮಾ ಸೋಲು ಕಂಡರೆ ನಮ್ಮ ಬಂಡವಾಳಕ್ಕೆ ನಾವೇ ....
ಸುವರ್ಣಾವಕಾಶಕ್ಕೆ ಬಿಡುಗಡೆ ಮಹೂರ್ತ ಫಿಕ್ಸ್ ಸಂಪೂರ್ಣ ಹಾಸ್ಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರವನ್ನು ದಯಪಾಲಿಸಿದೆ. ಎರಡು ದಿನದಲ್ಲಿ ನಡೆಯುವ ಕಥನವಾಗಿದೆ. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಉಪಯೋಗಿಸಿಕೊಂಡು ಯಾವ ರೀತಿ ಬದುಕಿನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ. ಕತೆಯಲ್ಲಿ ನಾಯಕ, ನಾಯಕಿ ಒಂದು ದಿನ ಹೊರಗೆ ಹೋದಾಗ ಕಷ್ಟದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಆತ ಏನು ಉಪಾಯ ಮಾಡುತ್ತಾನೆ? ಮುಂದೆ ಹೇಗೆ ತೊಂದರೆಯಿಂದ ಆಚೆ ಬರುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ. ರಿಷಿ ....
ಹೊಸ ಮುಖವಾಡ ೮೦ರ ದಶಕದಲ್ಲಿ ರಾಮಕೃಷ್ಣ, ತಾರಾ ಅಭಿನಯದ ‘ಮುಖವಾಡ’ ಸಿನಿಮಾ ತೆರೆಕಂಡಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿಲ್ಲ. ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಕೊಂಚ ಮಟ್ಟಿಗೆ ಹಾರರ್ ಫೀಲ್ ಕೊಡುತ್ತದೆ. ಪ್ರೇಕ್ಷಕ ಕುತೂಹಲ ಅಂದುಕೊಂಡು ಹೋದರೆ, ಅಲ್ಲಿ ಬೇರೆಯದೆ ಅನುಭವ ಆಗುತ್ತಾ ಉದ್ರೇಕಗೊಳಿಸುತ್ತದೆ. ಒಂದು ರೀತಿಯಲ್ಲಿ ಹುಳ ಬಿಡುತ್ತಾರೆ. ಯಾರಿಗೆ ಮುಖವಾಡ ಹಾಕಬಹುದು, ಹಾಕಿಸಿಕೊಳ್ಳುವವರು ಯಾರು, ಏನು ಬೇಕಾದರೂ ಮಾಡಬಹುದು. ಇವೆಲ್ಲವು ಸನ್ನಿವೇಶಗಳ ಮೂಲಕ ಸಾಗುತ್ತದೆ. ಕತೆಗೆ ಪೂರಕವಾಗಿದ್ದರಿಂದ ಇದೇ ಶೀರ್ಷಿಕೆ ಇಡಲಾಗಿದೆ. ಒಟ್ಟಾರೆ ೮-೯ ಪಾತ್ರಗಳು ಇದ್ದರೂ, ....
ನೈಜ ಘಟನೆ ಅಭ್ಯಂಜನ ವಯಸ್ಸಾದವರು ಖಾಯಿಲೆಗೆ ತುತ್ತಾದಾಗ ನೋಡಿಕೊಳ್ಳುವವರ ಪರಿಸ್ಥಿತಿ ಅರಿತು, ಅವರ ಮನಸ್ಸು ನೋಯಿಸದಂತೆ ಗೌರವದಿಂದ ಪ್ರಾಣ ತೆಗೆಯುವುದನ್ನು ದಯಾಮರಣ ಎನ್ನುತ್ತಾರೆ. ಇದು ಕಾನೂನುಬಾಹಿರವಾಗಿರುವುದರಿಂದ ಹೆಚ್ಚು ಪ್ರಸಿದ್ದಿಯಾಗಿಲ್ಲ. ಆದರೆ ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಇಂತಹ ಪದ್ದತಿ ಈಗಲೂ ನಡೆಯುತ್ತಿದೆ ಎಂದು ‘ಅಭ್ಯಂಜನ’ ಚಿತ್ರ ನೋಡಿದಾಗ ತಿಳಿಯುತ್ತದೆ. ಅಲ್ಲಿನ ಸಂಪ್ರದಾಯ ತಲೈಕೂಟಲ್ ರೀತಿಯಲ್ಲಿ ಜೀವ ಹೋಗಿಸುತ್ತಾರೆ. ಅಂದರೆ ಅರಳಣ್ಣೆಯನ್ನು ತಲೆಗೆ ಸವರಿ, ತಣ್ಣೀರಿನಿಂದ ಸ್ನಾನ ಮಾಡಿಸಿದ ನಂತರ, ೫-೬ ಏಳೆನೀರು ಕುಡಿಸುತ್ತಾರೆ. ಇದರಿಂದ ಇಡೀ ದೇಹವು ತಣ್ಣಗಾಗುತ್ತಾ, ಕೊನೆಗೆ ಉಸಿರಾಟ ನಿಂತು ....