ಹಳ್ಳಿಯ ಉನ್ನತಿಗಾಗಿ ಹೋರಾಡುವ ಹುಡುಗ ರಣ+ಅಶ್ವ=ರಣಾಶ್ವ. ಯುದ್ದದ ಕುದುರೆ ಹೆಸರಾಗಿದೆ. ಈಗ ಹೊಸ ತಂಡವು ಕ್ಯಾಚಿ ಇರಲೆಂದು ‘ರಣಶ್ವ’ ಶೀರ್ಷಿಕೆಯೊಂದಿಗೆ ಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಪ್ರಚಲಿತ ಇಡೀ ದೇಶದಲ್ಲಿ ಹಳ್ಳಿಗಳು ಅಭ್ಯುದಯಗೊಳ್ಳುತ್ತಿದೆ. ಆದರೆ ಒಂದು ಹಳ್ಳಿ ಮಾತ್ರ ಯಥಾಸ್ಥಿತಿಯಲ್ಲಿ ಇರುತ್ತದೆ. ಒಮ್ಮೆ ಕಥಾನಾಯಕ ಅಲ್ಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಳ್ಳುವಷ್ಟರಲ್ಲಿ, ಇದು ತನ್ನದೆ ಊರು ಎಂದು ಗೊತ್ತಾಗುತ್ತದೆ. ನಂತರ ಇದನ್ನು ಯಾವ ರೀತಿ ಅಭಿವೃದ್ದಿ ಪಡಿಸುತ್ತಾನೆ, ಹೇಗೆ ಹೋರಾಡುತ್ತಾನೆ ಎಂಬುದು ಒಂದು ಏಳೆಯ ಕತೆಯಾಗಿದೆ. ಯುದ್ದದಲ್ಲಿ ಅಶ್ವ ಹೋರಾಟ ಮಾಡುವಂತೆ ಚಿತ್ರದಲ್ಲಿ ಆತನು ಇದೇ ....
ಚಂದನವನದ ಹಾಲಿವುಡ್ ಚಿತ್ರ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ ‘ಬಬ್ರೂ’ ಪ್ರಥಮ ಕನ್ನಡದ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದೆಂದು ರಚಿಸಿ ಪ್ರಥಮಬಾರಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಬಣ್ಣಿಸುತ್ತಾರೆ. ಕೆಲವು ಚಿತ್ರಗಳಲ್ಲಿ ಕತೆಯು ವಿದೇಶದಲ್ಲಿ ಹುಟ್ಟಿಕೊಂಡರೂ ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾವು ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ ಶೂಟ್ ಮಾಡಲಾಗಿದೆ. ಭಾರತದಲ್ಲಿ ವಾಹನಗಳನ್ನು ಸಂಖ್ಯೆ ಮೂಲಕ ನೊಂದಣಿ ಮಾಡಿಸಬಹುದು. ಅಮೇರಿಕಾದಲ್ಲಿ ಹೆಸರಿನಲ್ಲೂ ರಿಜಿಸ್ಟ್ರೇಷನ್ ಮಾಡಿಸಲು ಅವಕಾಶವಿದೆ. ಚಿತ್ರದ ಕುರಿತು ಹೇಳುವುದಾದರೆ ಭಾರತೀಯರಾದ ಅರ್ಜುನ್ ....
ತೆರೆಗೆ ಸಿದ್ದ ದಂಡುಪಾಳ್ಯಂ-೪ ದಂಡುಪಾಳ್ಯ ಚಿತ್ರವು ೨೦೧೨ರಲ್ಲಿ ಬಿಡುಗಡೆಯಾಗಿ ನಂತರ ವಿವಾದವಾದ ಹಿನ್ನಲೆಯಲ್ಲಿ ಭಾಗ-೨ ಮತ್ತು ೩ ಟೈಟಲ್ನೊಂದಿಗೆ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ-೪’ ಎನ್ನುವ ಚಿತ್ರವೊಂದು ಬೆಂಗಳೂರು, ಪಾವಗಡ ಸ್ಥಳಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ತೆರೆಗೆ ಬರಲು ಸಿದ್ದವಾಗಿದೆ. ಎಸಿಪಿಯಾಗಿ ಕಾಣಿಸಿಕೊಂಡಿರುವ ಮತ್ತು ನಿರ್ಮಾಪಕ ವೆಂಕಟ್ ಹೇಳುವಂತೆ ಹಿಂದಿನ ಎರಡು ಚಿತ್ರಗಳು ಬೇರೆ ಭಾಷೆಯಲ್ಲಿ ಹೆಸರು ಮಾಡಿತ್ತು. ನ್ಯಾಯಲಯದ ಆದೇಶದಂತೆ ದಂಡುಪಾಳ್ಯಂ ಹೆಸರನ್ನು ಇಡಲಾಗಿದೆ. ಶೀರ್ಷಿಕೆ ಇದೆಯಾದರೂ ....
ವಸಿಷ್ಟ ವರ್ಧಂತಿಗೆ ಟೀಸರ್ ಲೋಕಾರ್ಪಣೆ ಪ್ರವರ್ಧಮಾನಕ್ಕೆ ಬರುತ್ತಿರುವ ನಟ ವಸಿಷ್ಟಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದಂದು ಸುದೀಪ್ ಲೋಕಾರ್ಪಣೆ ಮಾಡಿದರು. ನೈಜ ಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ ಪ್ರತಿಯೊಂದು ಪಾತ್ರವು ತನಗೆ ಸಂಬಂದಿಸಿದೆ ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲಾವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲಾವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ....
ಅಂದವಾದ ಈ ವಾರ ಬಿಡುಗಡೆ
ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ. ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಐಎಎಸ್ ಯುವ ರೈತ ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್ಕುಮಾರ್ ನಟಿಸಿದ್ದ ‘ರಾಜೀವ’ ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಜನರನ್ನು ಸೆಳೆಯಲು ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಧ್ವನಿಸಾಂದ್ರಿಕೆ ಲೋರ್ಕಾಪಣೆಗೊಂಡಿತು. ಚಿತ್ರದ ವಿಶೇಷತೆ ಕುರಿತಂತೆ ನಿರ್ದೇಶಕ ಫ್ಲೈಯಿಂಗ್ಕಿಂಗ್ ಮಂಜು ಮಾತನಾಡಿದ್ದು ಹೀಗೆ: ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ....
ಕೋಟಿಗೊಬ್ಬ ೩ ಚಿತ್ರೀಕರಣದಲ್ಲಿ ನಡೆದ ಘಟನೆಗೆ ನಿರ್ಮಾಪಕರ ಸ್ಪಷ್ಟನೆ ಸುದೀಪ್ ಅಭಿನಯದ ‘ಕೋಟಿಗೊಬ್ಬ ೩’ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಘಟನೆ ಕುರಿತಂತೆ ವಾಹಿನಿ, ಪತ್ರಿಕೆಗಳಲ್ಲಿ ಗೊಂದಲದ ಸುದ್ದಿ ಬಂದ ಕಾರಣ, ನಿರ್ಮಾಪಕ ಸೂರಪ್ಪಬಾಬು ಇದೆಲ್ಲಾದಕ್ಕೂ ಸ್ಪಷ್ಟವಾದ ಮಾಹಿತಿಗಳನ್ನು ನೀಡುತ್ತಾ ಹೋದರು. ಒಂದಷ್ಟು ಭಾಗದ ಚೇಸಿಂಗ್ ದೃಶ್ಯವನ್ನು ಪೋಲೇಂಡ್ದಲ್ಲಿ ಚಿತ್ರೀಕರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಹ್ಯಾರಿಸ್ ಮೂಲಕ ಬಾಂಬೆ ಮೂಲದ ಅಜಯ್ಪಾಲ್ ಹಾಗೂ ಸಂಜಯ್ಪಾಲ್ ಅವರ ಕಂಪೆನಿ ಪರಿಚಯವಾಯಿತು. ಇವರನ್ನು ಸಂಪರ್ಕಿಸಿ ಚಿತ್ರದ ಕುರಿತಂತೆ ಪೂರ್ಣ ಮಾಹಿತಿ ನೀಡಲಾಯಿತು. ನಮ್ಮ ಯೋಜನೆಯಂತೆ ....
ನೈಜ ಘಟನೆಗಳ ಸಿದ್ದಿ ಸೀರೆ ಕನ್ನಡ ಚಿತ್ರಗಳು ಇತ್ತೀಚೆಗೆ ಬೇರೆ ರಾಜ್ಯಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವುದು ಚಂದನವನಕ್ಕೆ ಸಂತಸ ತಂದಿದೆ. ಆ ಸಾಲಿಗೆ ‘ಸಿದ್ದಿ ಸೀರೆ’ ಸೇರ್ಪಡೆಯಾಗುತ್ತದೆ. ಸಿನಿಮಾವು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಒಂಬತ್ತು ವಿಭಾಗದಲ್ಲಿ ಪ್ರಶಸ್ತಿಗೆ ಅರ್ಹವಾಗಿದೆ. ದಲಿತ ಮಹಿಳೆಯೊಬ್ಬಳು ತನಗೆ ಸದ್ಗತಿ ದೊರಕಿಸುವ ಒಂದು ಸೀರೆಗಾಗಿ ಹೋರಾಟ ಮಾಡುವುದು ಒಂದು ಏಳಯ ಕತೆಯಾಗಿದೆ. ೯೦ರ ದಶಕದಲ್ಲಿ ಚಾಮರಾಜನಗರ ಬಳಿ ಇರುವ ಮಿರ್ಲೆ ಎಂಬ ಗ್ರಾಮದಲ್ಲಿ ನಡೆದಂತ ಸತ್ಯ ಘಟನೆ ಚಿತ್ರರೂಪಕ್ಕೆ ಬಂದಿದೆ. ಆಗಿನ ಕಾಲದಲ್ಲಿ ಹಿರಿಯ ಮಹಿಳೆ ನಿಧನ ....
ಹದಿನೈದನೇ ದಿನದ ಖುಷಿಯಲ್ಲಿ ಅಧ್ಯಕ್ಷ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರತಂಡವು ಮತ್ತೋಮ್ಮೆ ಖುಷಿಯನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿತ್ತು. ಗ್ರ್ಯಾಂಡ್ ಹದಿನೈದನೇ ದಿನ ಎಂಬ ಪೋಸ್ಟರ್ ರಾರಾಜಿಸುತ್ತಿತ್ತು. ನಾಯಕ ಮತ್ತು ನಾಯಕಿ ವಾಹಿನಿಗೆ ಹೋಗಲು ಸಿದ್ದರಾಗಿದ್ದರಿಂದ ಎಲ್ಲರೂ ತುರಾತುರಿಯಲ್ಲಿ ಮಾತನಾಡಿದರು. ಮೈಕ್ ತೆಗೆದುಕೊಂಡ ಶರಣ್ ನಿಮ್ಮಿಂದ ನಾವುಗಳು ಇಲ್ಲಿಯ ತನಕ ಬಂದಿದ್ದೇವೆ. ಜನ ಇದ್ದರೆ ನಾವು. ನಿರ್ಮಾಪಕರು ಖರ್ಚು ಮಾಡಿ ಒಳ್ಳೆ ಚಿತ್ರ ನೀಡಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ವತಿಯಿಂದ ನಿರ್ಮಾಣವಾಗಿದ್ದ ಮೊದಲ ಸಿನಿಮಾಗೆ ಯಶಸ್ಸು ಸಿಕ್ಕಿದೆ ಎಂದರು. ಎಲ್ಲೆ ಹೋದರೂ ಪ್ರತಿಕ್ರಿಯೆ ಚೆನ್ನಾಗಿ ಸಿಕ್ಕಿದೆ. ....
ಬಿಲ್ಗೇಟ್ಸ್ ಹಾಡುಗಳ ಸಮಯ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್ಗೇಟ್ಸ್’ ಎಲ್ಲರಿಗೂ ತಿಳಿದಿದೆ. ಸ್ಯಾಂಡಲ್ವುಡ್ದಲ್ಲಿ ಇದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಇದು ಅವರ ಕುರಿತಾದ ಕತೆ ಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿ ಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗಲೇ ತರಲೆ, ತುಂಟಾಟ ಮಾಡುತ್ತಿರುತ್ತಾರೆ. ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆ ಕೊಡುತ್ತಾರೆ. ಆವಾಗ ಇವರ ವಿಷಯ ಕೇಳಿ ತಾವು ಅವರಂತೆ ಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ. ....
ಅಚ್ಚರಿಗಳ ಗುಚ್ಚ ಭರ ಭರ ಭರಾಟೆ ಶ್ರೀಮುರಳಿ ಇದ್ದ ಕಡೆ ಸಕರಾತ್ಮಕ ಕಂಪನ ಇರುತ್ತದೆ. ಇಡೀ ತಂಡವನ್ನು ನಾಯಕಂತೆ ನಡೆಸಿಕೊಂಡು ಹೋಗುತ್ತಾರೆ. ಹೀಗೆಲ್ಲಾ ಮಾತುಗಳಿಂದ ತಾರಾ ಅವರನ್ನು ಹೊಗಳುತ್ತಿರುವಾಗ ತಣ್ಣಗೆ ಕುಳಿತಿದ್ದ ಶ್ರೀಮುರಳಿ ಮಾತ್ರ ಅಂಜಿಕೆಯಿಂದ ಸಣ್ಣದೊಂದು ನಗು ಚೆಲ್ಲಿದರು. ಇದು ಆಗಿದ್ದು ‘ಭರಾಟೆ’ ಚಿತ್ರದ ಬಿಡುಗಡೆಪೂರ್ವ ಸುದ್ದಿಗೋಷ್ಟಿಯ ಸಂದರ್ಭದಲ್ಲಿ. ಇದೇ ೧೮ರಂದು ಸುಮಾರು ೩೦೦ ಕೇಂದ್ರಗಳಲ್ಲಿ ಸಿನಿಮಾವು ಅಬ್ಬರಿಸಲಿದೆ. ಅದಕ್ಕಾಗಿ ಚಿತ್ರತಂಡವು ಮಾದ್ಯಮದ ಮುಂದೆ ಬಂದು ಮಾತನಾಡಿತು. ಸರದಿಯಂತೆ ಮೈಕ್ ತೆಗೆದುಕೊಂಡ ಸಾಯಿಕುಮಾರ್ ಇಲ್ಲಿಯವರೆಗೂ ಆಕ್ಷನ್, ....
ಸ್ಟಾರ್ ಕನ್ನಡಿಗನಿಗೆ ಸಂಘಗಳಿಂದ ಪ್ರೋತ್ಸಾಹ ಹೊಸಬರೇ ಸೇರಿಕೊಂಡು ‘ಸ್ಟಾರ್ ಕನ್ನಡಿಗ’ ಅಡಿಬರಹದಲ್ಲಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗನ ಕಥೆ ಎಂದು ಹೇಳಿಕೊಂಡರುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಕತೆ ಇರುವುದು ವಿಶೇಷ. ಯುವಕರ ತಂಡವೊಂದು ಚಿತ್ರ ಮಾಡಲು ತಯಾರಿ ನಡೆಸುತ್ತಿರುವಾಗ, ದಾರಿಯಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಇದರಿಂದ ಅವರ ಆಕಾಂಕ್ಷೆಗಳು ಬೇರೆ ಕಡೆಗೆ ವಾಲುತ್ತದೆ. ಅಂತಿಮವಾಗಿ ಪ್ರೀತಿ, ಬದುಕು ಇದರಲ್ಲಿ ಯಾವುದು ಗೆಲ್ಲುತ್ತೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಪವರ್ಸ್ಟಾರ್, ಛಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್. ಎಲ್ಲಾ ಸ್ಟಾರ್ ....
ಸಾವಯವ ಕೃಷಿ ಮತ್ತು ಪ್ರೀತಿಯ ಕಥನ ಹಳ್ಳಿಯಲ್ಲಿ ನಡೆಯುವ ನವಿರಾದ ಪ್ರೇಮ ಕತೆ ಮತ್ತು ಸಾವಯವ ಕೃಷಿ ಕುರಿತಂತೆ ಅರಿವು ಮೂಡಿಸುವ ‘ಮುತ್ತುಕುಮಾರ’ ಚಿತ್ರವು ಬಿಡುಗಡೆಯ ಅಂಚಿನಲ್ಲಿದೆ. ನಮ್ಮೂರ ರಾಜಕುಮಾರನೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಸಿನಿಮಾ ಕುರಿತು ಹೇಳುವುದಾದರೆ ಪ್ರೌಡ ವಯಸ್ಸಿನಲ್ಲಿರುವಾಗಲೇ ಇಬ್ಬರಿಗೂ ಪ್ರೀತಿ ಚಿಗುರುತ್ತದೆ. ಆಕೆ ಹಳ್ಳಿಯನ್ನು ಹಚ್ಚಹಸಿರಾಗಿಸಬೇಕು. ಸಾವಯವ ಕೃಷಿಯನ್ನು ಮಾಡಬೇಕು. ಯಾವುದೇ ರಸಾಯನಿಕವನ್ನು ಬೆರಸದೆ ಬೆಳೆಯನ್ನು ತೆಗೆಯಬೇಕೆಂಬ ಬಯಕೆಯಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುತ್ತಾಳೆ. ಆಕೆಯು ಬರುವವರೆಗೂ ಈತನು ಕಾಯುತ್ತಾನೆ. ....
೧೯ರ ವಯಸ್ಸು ಹಿರಿಯರಿಗೆ ನಾನ್ಸೆನ್ಸ್? ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಸಿದ್ದಗೊಂಡಿದೆ. ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ. ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್ ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು. ಗಂಡು ಹೆಣ್ಣು ಎಂಬ ತಾರತಮ್ಯವಿತ್ತು. ಈಗ ಕಾಲ ಬದಲಾಗಿದೆ. ವಯಸ್ಸು ನೋಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಇಬ್ಬರು ಸರಿಸಮಾನರು. ಹುಡುಗ ವಿಧುರನಾದರೆ ಮತ್ತೋಂದು ತಾಳಿ ಕಟ್ಟುವಾಗ, ವಿಧುವೆಗೆ ಯಾಕೆ ಈ ನಿರ್ಭಂದ?. ತಂದೆ ತಾಯಿ ....
ಕನ್ನಡ ದಿನದಂದು ರಂಗನಾಯಕಿ ಬರ್ತಾರೆ ಇಂಡಿಯನ್ ಪನೋರಮಾ ಅಂತರಾಷ್ಟ್ರೀಯ ಫಿಲಿಂ ಸ್ಫರ್ಧೆ ೨೦೧೯ರಲ್ಲಿ ಮೊದಲಬಾರಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅರ್ಹವಾಗಿರುವುದು ‘ರಂಗನಾಯಕಿ’ ಸಿನಿಮಾ. ಇದರಿಂದ ಚಂದನವನಕ್ಕೆ ಗೌರವ ಸಿಕ್ಕಂತೆ ಆಗಿದೆ. ಅಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದರಿಂದ ನಿರ್ಮಾಪಕರಿಗೆ ಹೆಚ್ಚಿನ ಅನುಕೂಲವಾಗುತ್ತದೆಂದು ರಚನೆ,ನಿರ್ದೇಶಕ ದಯಾಳ್ಪದ್ಮನಾಬನ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯ ಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆ ಆಕೆಯು ಬದುಕಿದ್ದರೆ ಯಾವ ....
ಅಕ್ಟೋಬರ್ ೨೫ರಂದು ಅಂದವಾದ ‘ಯು’ ಪ್ರಮಾಣಪತ್ರ ಪಡೆದುಕೊಂಡಿರುವ ‘ಅಂದವಾದ’ ಚಿತ್ರದ ಅಡಿಬರಹದಲ್ಲಿ ಕೇವಲ ಪ್ರೀತಿ ಮತ್ತು ಪ್ರೀತಿ ಎಂದು ಇಂಗ್ಲೀಷ್ದಲ್ಲಿ ಹೇಳಿಕೊಂಡಿದೆ. ಮಳೆ ಹಾಗೂ ಮಂಜಿನಲ್ಲಿ ಶೇಕಡ ೯೦ರಷ್ಟು ಚಿತ್ರೀಕರಣಗೊಂಡಿದೆ. ಇದೂವರೆಗೂ ಯಾರು ಕ್ಯಾಮಾರ ಇಡದ ಜಾಗದಲ್ಲಿ ಸೆರೆಹಿಡಿದಿರುವುದು ವಿಶೇಷ. ಇಲ್ಲಿವರೆಗೂ ತಿಳಿಸದ ಅರ್ಥಪೂರ್ಣ ಸಂದೇಶವಿದೆ. ವಾಹಿನಿಗಳಲ್ಲಿ ಬಿತ್ತರಗೊಂಡ ಕೆಲವೊಂದು ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ಚಿತ್ರರೂಪಕ್ಕೆ ತರಲಾಗಿದೆ. ಹುಡುಗ-ಹುಡುಗಿ ಹುಟ್ಟುತ್ತಾರೆ,ಸಾಯುತ್ತಾರೆ. ಇದರ ಮಧ್ಯೆ ಮಳೆಯಲ್ಲೇ ನಡೆಯುವ ಸುಂದರ ಪ್ರೇಮ ಕತೆ ಇದಾಗಿದೆ. ಪಾತ್ರಗಳು ಹಾಗೂ ....
ನಮ್ಮ ಉದ್ದೇಶ ತಪ್ಪು ದಾರಿಗೆ ಹೋಗಬಾರದು - ಶ್ರೀಮುರಳಿ ಇಂದಿನ ಸಿನಿಮಾಸಕ್ತರಿಗೆ ತರಭೇತಿ ಎನ್ನುವುದು ಮುಖ್ಯವಾಗಿರುತ್ತದೆ. ಇದು ಯಾವಗಲೂ ಸಕರಾತ್ಮಕವಾಗಿ ಕಂಪನ ಹೊಂದಿರಬೇಕೆಂದು ಶ್ರೀಮುರಳಿ ಅಭಿಪ್ರಾಯಪಟ್ಟರು. ಅವರು ನಿರ್ದೇಶಕ ಮತ್ತು ನಿರ್ಮಾಪಕ ಗುರುದೇಶಪಾಂಡೆ ಸಾರಥ್ಯದ ‘ಜಿ ಅಕಾಡಮಿ’ ಶಾಲೆಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಯಾವುದು ಸರಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ಅನ್ನುವುದನ್ನು ಮಾಡಬಾರದು. ನಮ್ಮ ಉದ್ದೇಶ ಪೋಷಕರಿಗೆ ಗೌರವ ಕೊಡಬೇಕು. ಅವರ ಮಾರ್ಗದರ್ಶನವನ್ನು ಪೂರ್ಣಗೊಳಿಸಿ, ಯಾವುದೇ ಅಡತಡೆ ಬಂದರೂ ಅದನ್ನು ಎದುರಿಸಿ ನಮ್ಮನ್ನು ನಾವಾಗಿ ....
ಸಿನಿಮಾ ಶೈಲಿಯಲ್ಲಿ ‘ಕ್ರಾಂತಿಪುರ’ ಟ್ರೈಲರ್ ಬಿಡುಗಡೆ ಒಂದು ಸಿನಿಮಾ ನಿರ್ಮಾಣ/ನಿರ್ದೇಶನ ಮಾಡಬೇಕೆಂದರೆ ಅದಕ್ಕೆ ತಕ್ಕಂತೆ ಸಿದ್ದತೆಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಿರುಚಿತ್ರಗಳನ್ನು ಮಾಡುವುದು ವೆಬ್ ಸಿರೀಸ್ ಮಾಡುವುದು ಇದರಲ್ಲಿ ಯಶಸ್ವಿಯಾದ ಮೇಲೆ ಸಿನಿಮಾ ಮಾಡಲು ಕೈಹಾಕಿದರೆ ಆ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವಿಷ್ಯದಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಡಾ|| ಸಂಜಯಗೌಡ ಅದಕ್ಕೆ ಪೂರ್ವಭಾವಿಯಾಗಿ ಕ್ರಾಂತಿಪುರ ಎಂಬ ವೆಬ್ ಸಿರೀಸ್ ಒಂದನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ....
ಮನಸ್ಸನ್ನು ತಟ್ಟುವ ಜಿಪಿಎಸ್ ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರವು ವೇದಿಕೆಯಾಗುತ್ತಿದೆ. ಇದರಲ್ಲಿ ಗುರುತಿಸಿಕೊಂಡವರು ಸಿನಿಮಾ ಮಾಡಲು ಅವಕಾಶಗಳು ಸಿಗುತ್ತದೆ. ಅದರಂತೆ ಯುವಕರೇ ಸೇರಿಕೊಂಡು ‘ಜಿಪಿಎಸ್’ ಎನ್ನುವ ಹದಿನೆಂಟು ನಿಮಿಷದ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಹಗಲು ರಾತ್ರಿ ಎನ್ನದೆ ದುಡಿಯುವ ಕ್ಯಾಬ್ ಚಾಲಕ ಮೂರು ದಿನದಿಂದ ಮನೆಗೆ ಹೋಗಿರುವುದಿಲ್ಲ. ಜಿಪಿಎಸ್ (ಗ್ಲೋಬಲ್ ಪೊಸಿಷನಲ್ ಸಿಸ್ಟಮ್) ಬಳಸಿಕೊಂಡು ರಾತ್ರಿ ಹೊತ್ತಿನಲ್ಲಿ ಗ್ರಾಹಕರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪತ್ನಿ ಕರೆ ಮಾಡಿದಾಗ ಕೋಪದಿಂದ ಉತ್ತರ ನೀಡಿರುತ್ತಾನೆ. ಈ ಸಂದರ್ಭದಲ್ಲಿ ಮೊಬೈಲ್ ಬ್ಯಾಟರಿ ಕೊನೆ ಹಂತದಲ್ಲಿದ್ದು, ಆಫ್ ....
ಗಂಟುಮೂಟೆ ನಾಲ್ಕು ಭಾಷೆಗೆ ರಿಮೇಕ್ ಎಸ್ಎಸ್ಎಲ್ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿತಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’ ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸುದೀಪ್ ಟ್ವಿಟರ್ ಮೂಲಕ ಪ್ರೋತ್ಸಾಹ ಕೊಡುತ್ತಿದ್ದಾರೆ. ....