ಏಳರ ಅದ್ಬುತ ೧೯೭೬ರಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ನಿರ್ದೆಶನದ ‘ಕಥಾಸಂಗಮ’ ಚಿತ್ರದಲ್ಲಿ ಮೂರು ಕತೆಗಳು ಇದ್ದವು. ಬರೋಬ್ಬರಿ ೪೩ ವರ್ಷಗಳ ನಂತರ ಇದೇ ಹೆಸರಿನಲ್ಲಿ ಏಳು ಕಥನಗಳ ಚಿತ್ರವೊಂದು ಸದ್ದಿಲ್ಲದೆ ಮುಗಿದಿದೆ. ಕಿರಿಕ್ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿರ್ದೇಶಕ ರಿಶಬ್ಶೆಟ್ಟಿ ಇದಕ್ಕಿಂತ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅಂದರೆ ಏಳು ಕತೆಗಳು, ನಿರ್ದೇಶಕರುಗಳು, ಸಂಗೀತ ನಿರ್ದೇಶಕರುಗಳು, ಛಾಯಾಗ್ರಾಹಕರುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪೈಕಿ ಆಕ್ಷನ್ ಕಟ್ ಹೇಳಿದವರು, ಕ್ಯಾಮಾರ ಕೆಲಸ ಮಾಡಿದವರು ಸಂಪೂರ್ಣ ಹೊಸಬರು. ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ ಇರಲಿದ್ದು ....
ಆಯುಷ್ಮಾನ್ಭವ ಮುಂದೂಡಿಕೆಗೆ ಕಾರಣಗಳು ಅದ್ದೂರಿ ‘ಆಯುಷ್ಮಾನ್ಭವ’ ಚಿತ್ರವು ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗುವುದಾಗಿ ಸುದ್ದಿ ಹರಡಿತ್ತು. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಿರ್ಮಾಪಕರು ಹೇಳಿಕೆ ನೀಡಿದ್ದರು. ಸಿನಿಮಾವು ಅದೇ ದಿನದಂದು ತೆರೆ ಕಾಣದೆ ಇರುವುದರಿಂದ ವಾಹಿನಿ, ಅಭಿಮಾನಿಗಳು ಗೊಂದಲದ ವಾತಾವರಣವನ್ನು ಬಿಂಬಿಸುತ್ತಿದ್ದಾರೆ. ಇದೆಲ್ಲಾಕ್ಕೂ ಉತ್ತರ ನೀಡಲು ನಿರ್ಮಾಪಕ ಯೋಗೀಶ್ದ್ವಾರಕೀಶ್ ತಂಡದೊಂದಿಗೆ ಮಾದ್ಯಮದವರನ್ನು ಭೇಟಿ ಮಾಡಿ ಎಲ್ಲವನ್ನು ಕೂಲೂಂಕುಷವಾಗಿ ನಿರ್ದೇಶಕರು ಹೇಳುತ್ತಾರೆಂದು ಮೈಕ್ನ್ನು ಹಸ್ತಾಂತರಿಸಿದರು. ಚಿತ್ರವು ಯುಎ ಪ್ರಮಾಣ ಪಡೆದುಕೊಂಡಿದೆ. ಕೇರಳ, ....
ತಮಿಳಿಗೆ ಅಂದವಾದ
ಉತ್ತಮ ಚಿತ್ರಕ್ಕೆ ಯಾವಾಗಲೂ ಬೆಲೆ ಇರುತ್ತದೆ ಎಂಬುದಕ್ಕೆ ‘ಅಂದವಾದ’ ಚಿತ್ರ ಸಾಕ್ಷಿಯಾಗುತ್ತದೆ. ಸಿನಿಮಾವು ಕಳೆದವಾದ ಬಿಡುಗಡೆಯಾಗಿ, ಪತ್ರಿಕೆಗಳಿಂದ ಬಂದ ವಿಮರ್ಶೆ ನೋಡಿ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ನಾಯಕ ಜೈ, ನಿರ್ದೆಶಕ ಚಲ ಇಬ್ಬರಿಗೂ ಹೊಸ ಅನುಭವ. ಕಾಲಿವುಡ್ನಲ್ಲಿ ‘೯೬’ ಚಿತ್ರಕ್ಕೆ ನಿರ್ದೇಶನ ಮಾಡಿರುವ ನಂದಕುಮಾರ್ ಇದನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮುಂದೆ ಬಂದಿರುವುದು ತಂಡಕ್ಕೆ ಸಂತಸ ತಂದಿದೆ. ಇವೆರಡು ಅಂಡಮಾನ್ದಲ್ಲಿ ಚಿತ್ರೀಕರಣಗೊಂಡಿದ್ದು, ಇಬ್ಬರಿಗೂ ಮಧ್ಯವರ್ತಿಯಿಂದ ತೊಂದರೆ ಆಗಿತ್ತು.
ಜಾತ್ರೆಯಲ್ಲಿ ಜನುಮದ ಜಾತ್ರೆ ಹಾಡುಗಳು ಹಳ್ಳಿಗಳಲ್ಲಿ ಸಡಗರ, ಸಂಭ್ರಮ, ವ್ಯಾಪಾರ ನಡೆಯುವುದನ್ನು ಅಲ್ಲಿನ ಭಾಷೆಯಲ್ಲಿ ಜಾತ್ರೆ ಅಂತ ಕರೆಯುತ್ತಾರೆ. ಅಂತಹದೇ ಕಾರ್ಯಕ್ರಮವು ‘ಜನುಮದ ಜಾತ್ರೆ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣವು ಸಿಲಿಕಾನ್ ಸಿಟಿಯಲ್ಲಿ ನಡೆಯಿತು. ಹಾಗೆಂದ ಮಾತ್ರಕ್ಕೆ ಇದು ಯಾವುದೋ ಮೈದಾನದಲ್ಲಿ ನಡೆಯಲಿಲ್ಲ. ಅದು ಎಸ್ಆರ್ವಿ ಪ್ರಿವ್ಯೂ ಚಿತ್ರಮಂದರದಲ್ಲಿ ಜರುಗಿತು. ಅಲ್ಲಿನ ಸಾಮರ್ಥ್ಯ ೮೬ ಆಸನಗಳು. ಆದರೆ ಕಾರ್ಯಕ್ರಮಕ್ಕೆ ಬಂದವರ ಸಂಖ್ಯೆ ಇದರ ನಾಲ್ಕುಪಟ್ಟು ಇತ್ತು. ಇನ್ನು ಚಿತ್ರದ ಕುರಿತು ಹೇಳುವುದಾದರೆ ಹಳ್ಳಿ ಸೊಗಡಿನ ಕತೆಯಾಗಿದೆ. ಪ್ರತಿ ಮನುಷ್ಯನ ಬದುಕಿನಲ್ಲಿ ಕಷ್ಟಗಳು ಎದುರಾದಾಗ ಮನಸ್ಸು ....
ನಾನೇ ರಾಜನಿಗೆ ಅಧ್ಯಕ್ಷರುಗಳ ಶುಭಹಾರೈಕೆ ನಟ ಗಣೇಶ್ ಕಿರಿಯ ಸೋದರ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಸೂರಜ್ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು. ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು ತನ್ನ ಕಷ್ಟವನ್ನು ಹೇಳಿ ಸಹಾಯವನ್ನು ಮಾಡಲು ಕೋರಿಕೊಳ್ಳುತ್ತಾಳೆ. ಅವಳನ್ನು ರಕ್ಷಿಸಲು ಹೋಗಿ ತಾನೇ ಕಷ್ಟಕ್ಕೆ ಸಿಲುಕುತ್ತಾನೆ. ಅವೆಲ್ಲಾವನ್ನು ಎದುರಿಸಿ, ....
ಹಾಡುತೈತಿ ಹಾಲಕ್ಕಿ ಹಾಡುತೈತಿ ನುಡಿತೈತೆ ಹಸಿವು, ವಿದ್ಯೆ ನಡುವಿನ ಭವಿಷ್ಯ ಅಂತ ಹೇಳಿಕೊಂಡಿರುವ ‘ಹಾಲಕ್ಕಿ’ ಕತೆಯು ಭವಿಷ್ಯ ಹೇಳುವ ಚಿತ್ರವಾಗಿರುವುದಿಲ್ಲ. ಶಿಕ್ಷಣಕ್ಕೆ ಸಂಬಂದಿಸಿದಂತೆ ಸರ್ಕಾರವು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದವರಿಗೆ ತಲುಪುತ್ತಿಲ್ಲ. ಶಾಲೆಯ ಸ್ಥಿತಿ ಗತಿ ಏನಾಗಿದೆ. ಸತ್ಯ ಅನ್ನೋದು ಎಲ್ಲರಿಗೂ ಒಂದೇ. ಅದು ಪಟ್ಟಣ, ಹಳ್ಳಿ ಆಗಿರಬಹುದು. ಹಳ್ಳಿಯವರೇನು ತಪ್ಪು ಮಾಡುವುದಿಲ್ಲವಾ? ಒಳ್ಳೇದು ಯಾವಾಗಲೂ ತಾನಾಗೇ ಕರೆದುಕೊಂಡು ಹೋಗುತ್ತದೆ. ಇಂತಹ ಅಂಶಗಳು ಇರುವ ಹಳ್ಳಿಯ ಸೊಗಡಿನ ಕತೆ ಇದಾಗಿದೆ. ತಮ್ಮ ಗಿರೀಶ್ಮಾಧು ನಿರ್ಮಾಪಕ, ಅಣ್ಣ ....
ಸಾಧಕರ ಸಾಧನೆ ತೋರಿಸುವುದು ಶ್ರೇಯಸ್ಸು - ಪೋಲೀಸ್ ಆಯುಕ್ತ ಹೊಸಬರೇ ಸೇರಿಕೊಂಡು ಮಡಕೇರಿಯಲ್ಲಿ ೧೯೯೦ರಂದು ನಡೆದ ಸತ್ಯ ಘಟನೆಯನ್ನು ತೆಗೆದುಕೊಂದು ಅದಕ್ಕೆ ಕಾಲ್ಪನಿಕ ಕತೆಯ ಸ್ಪರ್ಶ ನೀಡಿರುವ ‘ಕುಥಸ್ಥ’ ಸೆಸ್ಪೆನ್ಸ್, ಥ್ರಿಲ್ಲರ್ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ಸಾಧಕರನ್ನು ಹೊಗಳುವ ಹಾಡಿನಲ್ಲಿ ಅಗಲಿದ ಕಲಾವಿದರು, ತಂತ್ರಜ್ಘರ, ಕವಿಗಳ ಭಾವಚಿತ್ರದ ಜೊತೆಗೆ ಕೆಲವೊಂದು ಚಿರನಿದ್ರೆಗೆ ಹೋಗುತ್ತಿರುವ ಸ್ಟಿಲ್ಸ್ಗಳನ್ನು ತೋರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೋಲೀಸ್ ಆಯುಕ್ತ ಭಾಸ್ಕರರಾವ್ ಇದರ ಬಗ್ಗೆ ಆರೋಗ್ಯಕರವಾದ ಆಕ್ಷೇಪ ವ್ಯಕ್ತಪಡಿಸಿದರು. ಜನರ ....
ಬಿಡುಗಡೆ ಸನಿಹದಲ್ಲಿ ಕನ್ನಡ್ ಗೊತ್ತಿಲ್ಲ ಕನ್ನಡ ಅಭಿಮಾನಿಯ ಎದುರು ಪರಭಾಷಿಗನು ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಅವನು ಏನಾಗ್ತಾನೆ. ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ ಹೆಚ್ಚಾಗಿ ಕನ್ನಡೇತರರು ಇದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಇಲ್ಲಿನವರಿಗೆ ಕೆಂಡದಂತ ಕೋಪ ಬರುತ್ತದೆ. ಇಂತಹ ಅಂಶಗಳನ್ನು ಹೆಕ್ಕಿಕೊಂಡು ‘ಕನ್ನಡ್ ಗೊತ್ತಿಲ್ಲ’ ಎನ್ನುವ ಚಿತ್ರವೊಂದು ಸಿದ್ದಗೊಂಡಿದೆ. ಮರ್ಡರ್ ಮಿಸ್ಟರ್ ಕತೆಯಲ್ಲಿ ಕನ್ನಡ ಯಾಕೆ ಸಂಬಂದವಿದೆ ಎಂದು ತಿಳಿಯಲು ಸಿನಿಮಾ ನೋಡಬೇಕು. ಐಟಿ, ಸ್ಥಳೀಯ ಘಟನೆಗಳು, ಕನ್ನಡಿಗರು, ಪರಭಾಷಿಗರು ಕುರಿತಂತೆ ಸನ್ನಿವೇಶಗಳು ಬರಲಿದೆ. ....
ಆರು ಭಾಷೆಗಳ ಟ್ರೈಲರ್ ಬಿಡುಗಡೆ ಸಂಪೂರ್ಣ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್’ ಕನ್ನಡ ಸೇರಿದಂತೆ ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಕೊನೆ ಹಂತದ ಪ್ರಚಾರ ಕಾರ್ಯಕ್ರಮದಲ್ಲಿ ಹೆಸರಾಂತ ವಾಹಿನಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಎಲ್ಲಾ ಭಾಷೆಯ ಟ್ರೈಲರ್ಗೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಂಬಲಾಗದ ಪ್ರಯತ್ನವನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ತುಣುಕುಗಳನ್ನು ನೋಡಿದಾಗ ಎರಡು ವಿಷಯಕ್ಕೆ ಗಾಬರಿ ಆಯಿತು. ಒಂದು ಚಿಣ್ಣರ ಪರಿಪೂರ್ಣ ಅಭಿನಯ. ಎರಡನೆಯದು ಎಂಥ ಅಪಾಯದಲ್ಲಿದೆ ನಮ್ಮ ಯುಗ. ಹಿಂದೆ ಖ್ಯಾತ ಗಾಯಕರು ಮಕ್ಕಳಂತೆ ಹಾಡುತ್ತಿದ್ದರು. ....
ಹಿರಿಯ ಹಾಸ್ಯ ಕಲಾವಿದರನ್ನು ಸನ್ಮಾನಿಸಿದ ರಾಂಧವ ಚಂದನವನದಲ್ಲಿ ಚಿತ್ರಗಳು ೨೩,೫೦,೧೦೦ ಹಾಗೂ ೧೨೫ನೇ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿವೆ. ಈ ಸರಪಣಿಗೆ ಹೊಸಕೊಂಡಿ ‘ರಾಂಧವ’ ಚಿತ್ರ. ಯಸ್ ಭರ್ಜರಿ ಐವತ್ತು ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಸಣ್ಣದೊಂದು ಕಾರ್ಯಕ್ರಮವನ್ನು ನಾಯಕ ಭುವನ್ಪೊನ್ನಣ್ಣ ಏರ್ಪಾಟು ಮಾಡಿದ್ದರು. ಕಲಾವಿದರು ಮತ್ತು ತಂತ್ರಜ್ಘರಿಗೆ ಫಲಕಗಳನ್ನು ಕಂದಾಯ ಸಚಿವ ಆರ್.ಅಶೋಕ್ ವಿತರಿಸಿದರು. ನಂತರ ಮಾತನಾಡುತ್ತಾ ನಾನು ಸಹ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ಆಪರೇಶನ್ ಡೈಮೆಂಡ್ ರಾಕೇಟ್ ಸಿನಿಮಾದ ಟಿಕೆಟ್ ಸಿಗಲಿಲ್ಲ. ಆದರೆ ರಾಜಕೀಯದಲ್ಲಿ ಟಿಕೆಟ್ ದಕ್ಕಿ ಇಲ್ಲಿಯವರೆಗೂ ಬಂದಿದ್ದೇನೆ. ನಮ್ಮ ....
ವಿಡಿಯೋ ಸಂವಾದದಲ್ಲಿ ಎಸ್ಕೆ ಮಾತುಕತೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಕಾರ್ಯಸಾಧನೆಯನ್ನು ತಿಳಿದುಕೊಳ್ಳಲು ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದರು. ಅಂತಹುದೇ ರೀತಿಯಲ್ಲಿ ‘ದಬಾಂಗ್-೩’ ಚಿತ್ರದ ಸುದ್ದಿಗೋಷ್ಟಿಯು ಪಿವಿಆರ್ದಲ್ಲಿ ನಡೆಯಿತು. ಏಕಕಾಲದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ನ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಭಿಮಾನಿಗಳೊಂದಿಗೆ ಬಾಂಬೆದಲ್ಲಿ ಚಿತ್ರತಂಡವು ಮುಖಾಮುಖಿಯಾಗಿ ಮಾತಾಡಿ ಸಾಕಷ್ಟು ವಿವರಗಳನ್ನು ಹಂಚಿಕೊಂಡಿತು. ಇದೇ ಸಂದರ್ಭದಲ್ಲಿ ೩ ನಿಮಿಷದ ೨೨ ಸೆಕೆಂಡ್ ಅವಧಿಯ ಕನ್ನಡ ಟ್ರೇಲರ್ ಕೂಡಾ ಅನಾವರಣಗೊಂಡಿತು. ನಾಯಕ ಸಲ್ಮಾನ್ಖಾನ್, ನಾಯಕಿಯರಾದ ....
ಭರಾಟೆಗೆ ಜೈ ಹೋ ಅಂದರು ಶೀರ್ಷಿಕೆ ಹಾಡಿನೊಂದಿಗೆ ಸದ್ದು ಮಾಡಿದ್ದ ‘ಭರಾಟೆ’ ಚಿತ್ರವು ಅಂದುಕೊಂಡಂತೆ ಎಲ್ಲಾ ಕಡೆಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ ಎಂದು ಸಾಹಿತಿ,ನಿರ್ದೇಶಕ ಚೇತನ್ಕುಮಾರ್ ಸಂತೋಷಕೂಟದಲ್ಲಿ ಖುಷಿಯನ್ನು ಹಂಚಿಕೊಂಡರು. ಅವರು ಹೇಳುವಂತೆ ಮೈಸೂರು, ಮಂಡ್ಯಾ ಕಡೆಗಳಲ್ಲಿ ತಂಡವು ಭೇಟಿ ನೀಡಿದಾಗ ಜನರು ಉತ್ತಮ ಸಿನಿಮಾ ಮಾಡಿದರೆಂದು ಹೇಳುತ್ತಿದ್ದರು. ಎಲ್ಲಾ ಕಲಾವಿದರು ಸಂತಸದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಆದರೆ ಮಧ್ಯಾಹ್ಮ ಏರ್ಪಡಿಸಿದ್ದರಿಂದ ಗೈರು ಹಾಜರಾಗಿದ್ದಾರೆ. ೨೫ ನೇ ದಿನದ ಸಂಭ್ರಮದಲ್ಲಿ ಬರುವುದಾಗಿ ತಿಳಿಸಿದ್ದರಿಂದ ಸಾಯಂಕಾಲ ಕಾರ್ಯಕ್ರಮ ಇಡುವುದಾಗಿ ಯೋಜನೆ ಹಾಕಲಾಗಿದೆ ಎಂದರು. ....
ಭಾವನೆಗಳ ಆಗರ ನೀರೇ ಹಿರಿಯ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಬಳಿ ಕೆಲಸ ಕಲಿತಿರುವ ಶ್ರೀಚರಣ್ ‘ನೀರೇ’ ಚಿತ್ರಕ್ಕೆ ಕತೆ ಬರೆದು ನಿರ್ದೇಶಕನ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಹೆಣ್ಣು ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಸಮಾಜದಲ್ಲಿ ಆಕೆಯು ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಹೇಳಲಿದೆ. ಹಾಗೆಯೇ ತಂದೆ ತಾಯಿ ಮಕ್ಕಳ ಕುರಿತಂತೆ ಯಾವ ರೀತಿ ಪಾತ್ರವಹಿಸಿಬೇಕು. ಸ್ನೇಹ ಮತ್ತು ತಾಯಿ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇವರೆಡು ಕಣ್ಣುಗಳು ಇದ್ದಂತೆ. ಅದು ಇಲ್ಲದೆ ಹೋದಾಗ ಆತನ ಜೀವನ ಏನಾಗುತ್ತೆ. ಬಹುಪಾಲು ಸನ್ನಿವೇಶಗಳು ಕಾರ್ಗಾಲದಲ್ಲಿ ನಡೆಯುತ್ತದೆ. ಅವನಿಗೆ ಒಳ್ಳೆಯದಾದರೂ ....
ಭಾವನೆಗಳ ಆಗರ ನೀರೇ ಹಿರಿಯ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಬಳಿ ಕೆಲಸ ಕಲಿತಿರುವ ಶ್ರೀಚರಣ್ ‘ನೀರೇ’ ಚಿತ್ರಕ್ಕೆ ಕತೆ ಬರೆದು ನಿರ್ದೇಶಕನ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಹೆಣ್ಣು ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಸಮಾಜದಲ್ಲಿ ಆಕೆಯು ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಹೇಳಲಿದೆ. ಹಾಗೆಯೇ ತಂದೆ ತಾಯಿ ಮಕ್ಕಳ ಕುರಿತಂತೆ ಯಾವ ರೀತಿ ಪಾತ್ರವಹಿಸಿಬೇಕು. ಸ್ನೇಹ ಮತ್ತು ತಾಯಿ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇವರೆಡು ಕಣ್ಣುಗಳು ಇದ್ದಂತೆ. ಅದು ಇಲ್ಲದೆ ಹೋದಾಗ ಆತನ ಜೀವನ ಏನಾಗುತ್ತೆ. ಬಹುಪಾಲು ಸನ್ನಿವೇಶಗಳು ಕಾರ್ಗಾಲದಲ್ಲಿ ನಡೆಯುತ್ತದೆ. ಅವನಿಗೆ ಒಳ್ಳೆಯದಾದರೂ ....
ಜಗ್ಗೇಶ್ ಚಿತ್ರದಲ್ಲಿ ಇಪ್ಪತ್ತೋಂದು ನಾಯಕಿಯರು ಚಿತ್ರರಂಗದಲ್ಲಿ ದಾಖಲೆ ಎನ್ನುವಂತೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತ್ತೋಂದು ನಾಯಕಿಯರು ಇದ್ದಾರೆಂದು ಸಾಹಿತಿ, ನಿರ್ದೇಶಕ ಕವಿರಾಜ್ ಮಾಹಿತಿ ನೀಡಿದ್ದಾರೆ. ಇದು ಹೇಗೆ ಅಂತ ಊಹಿಸಿಕೊಳ್ಳುವ ಮುಂಚೆ, ಇವರೆಲ್ಲರು ಸಿನಿಮಾದ ಪ್ರಮೋಷನ್ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಕಾರುಣ್ಯರಾಮ್, ರೂಪಿಕಾ, ಮಾನ್ವಿತಾಹರೀಶ್, ಅದಿತಿಪ್ರಭುದೇವ.ಅದಿತಿರಾವ್,ಸಂಯುಕ್ತಹೂರನಾಡು,ಸೋನುಗೌಡ ಮುಂತಾದವರು ಇರುವುದು ವಿಶೇಷ. ಶೀರ್ಷಿಕೆ ಹೇಳುವಂತೆ ಜಗ್ಗೇಶ್ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಚಲಿತ ಸ್ಥಿತಿಯಲ್ಲಿ ....
ಭಾಷೆ ಸಂಬಂದಗಳ ಕುರಿತಾದ ಗಡಿನಾಡು ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆ ಉದ್ಬವವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡರೂ ಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದು ಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಡಿಟಿಎಸ್ ಹಂತದಲ್ಲಿ ಬ್ಯುಸಿ ಇದೆ. ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಕಥಾನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು ಗಡಿನಾಡ ಸೇನೆಯನ್ನು ಕಟ್ಟುತ್ತಾನೆ. ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದ ದುಷ್ಟರು ಗಲಾಟೆ ಮಾಡುತ್ತಾ ....
ಸತ್ಯ ಘಟನೆಯ ಮೂರ್ಕಲ್ ಎಸ್ಟೆಟ್
೨೦೦೦ ಇಸವಿ ಮೈಸೂರು ಹಾಸ್ಟಲ್ದಲ್ಲಿ ನಡೆದ ಘಟನೆಯ ಒಂದು ಏಳೆ ತೆಗೆದುಕೊಂಡಿದ್ದು ‘ಮೂರ್ಕಲ್ ಎಸ್ಟೇಟ್’ ಚಿತ್ರವಾಗಿ ಮೂಡಿಬಂದಿದೆ. ಸೆನ್ಸಾರ್ ಮಂಡಳಿಯು ಕೆಲವೊಂದು ದೃಶ್ಯಗಳನ್ನು ನೋಡಿ ಬೆಚ್ಚಿಬಿದ್ದು, ಪ್ರಶಂಸೆ ವ್ಯಕ್ತಪಡಿಸಿದೆ. ನಂತರ ಎ ಪ್ರಮಾಣ ಪತ್ರ ನೀಡಿ, ಪೋಸ್ಟರ್ದಲ್ಲಿ ಸೆನ್ಸಾರ್ನವರು ಬೆಚ್ಚಿ ಬಿದ್ದರೆಂದು ಹಾಕಲು ಅನುಮತಿ ನೀಡಿದ್ದಾರೆಂದು ನಿರ್ದೇಶಕ ಪ್ರಮೋದ್ಕುಮಾರ್ ಮಾದ್ಯಮಕ್ಕೆ ತಿಳಿಸಿದ್ದಾರೆ. ನೆವರ್ ಡಿಸ್ಟರ್ಬ್ ಎನರ್ಜಿ ಎಂದು ಅಡಿಬರಹವಿದೆ. ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿ ಮೇಲೆ ಕತೆ ಏಣೆಯಲಾಗಿದೆ.
ಆಮದು ತಂತ್ರಜ್ಘರ ಕನ್ನಡ ಚಿತ್ರ ಚಂದನವನವು ನೆರೆ ಭಾಷಿಗರನ್ನು ಆವಜ್ಘೆ ಮಾಡದೆ, ನಿರ್ವ್ಯಾಜದಿಂದ ಅವಕಾಶಗಳನ್ನು ನೀಡುತ್ತಿರುವುದರಿಂದ ಟಾಲಿವುಡ್, ಕಾಲಿವುಡ್ ಹೆಚ್ಚಾಗಿ ಮಾಲಿವುಡ್ ಕಡೆಗಳಿಂದ ತಂತ್ರಜೃರು ಬರುತ್ತಿದ್ದಾರೆ. ಆ ಸಾಲಿಗೆ ‘ರೈಮ್ಸ್’ ಚಿತ್ರವು ಸೇರ್ಪಡೆಯಾಗಿದೆ. ಬರವಣಿಗೆ ಮತ್ತು ನಿರ್ದೇಶಕ ಅಜಿತ್ಕುಮಾರ್.ಜೆ, ಸಂಗೀತ ಶಕ್ತಿ ಇವರಿಬ್ಬರು ಚೈನ್ನೈ ಮೂಲದವರು, ಕೇರಳದ ಅರ್ಜುನ್ಅಕ್ಕೋಟ್ ಛಾಯಾಗ್ರಾಹಕ. ಇವರೆಲ್ಲರೂ ಕಂಠಪಾಠ ಮಾಡಿ ಸುದ್ದಿಗೋಷ್ಟಿಯಲ್ಲಿ ಕನ್ನಡದಲ್ಲಿ ಪರಿಚಯಿಸಿಗೊಂಡಿದ್ದು ಸಮಾಧಾನಕರವಾಗಿತ್ತು. ಕ್ರೈಂ ಥ್ರಿಲ್ಲರ್ ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನು ತನಿಖೆ ಮಾಡಲು ....
ಹೊಸ ಪ್ರತಿಭೆಗಳಿಗೊಂದು ಸೂಕ್ತ ವೇದಿಕೆ ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ ಎಂಬುದಕ್ಕೆ ವಿವಿಧ ಕ್ಷೇತ್ರಗಳಿಂದ ಹಲವು ಹೊಸ ಪ್ರತಿಭೆಗಳು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಕೆಲವರಿಗೆ ಅನುಭೂತಿ ಇದ್ದರೂ ಯಾವ ರೀತಿ ಹೋಗಬೇಕೆಂದು ತಿಳಿಯದೆ ಚಡಪಡಿಸುತ್ತಿರುತ್ತಾರೆ. ಇಂತಹವರಿಗಂತಲೇ ‘ಐರಾ ಫಿಲ್ಮ್ಸ್’ ಸಂಸ್ಥೆಯೊಂದು ಪ್ರಾರಂಭಗೊಂಡಿದೆ. ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಮೊಮ್ಮಗಳು, ‘ಟ್ರಂಕ್’ ಚಿತ್ರದ ನಿರ್ದೇಶಕಿ ರಿಶಿಕಾಶರ್ಮಾ ಮತ್ತು ನಾಯಕ ನಿಹಾಲ್ ಸಂಘಟಿತವಾಗಿ ಸತತ ಒಂದು ವರ್ಷಗಳ ಕಾಲ ವಿತರಣೆ, ನಿರ್ಮಾಣ ಮತ್ತು ಪ್ರದರ್ಶನ ಕುರಿತಂತೆ ಸಂಶೋಧನೆ ನಡೆಸಿ ಅಂತಿಮವಾಗಿ ಸಂಸ್ಥೆಯನ್ನು ತರೆಯುವಲ್ಲಿ ....